ಕನ್ನಡಸಾಹಿತ್ಯ.ಕಾಂ ಪುನರ್‌ವಿನ್ಯಾಸದೊಂದಿಗೆ, ಹೊಸ ಹೊಸ ಸಂಚಿಕೆಗಳೊಂದಿಗೆ

ಕೀಲೀಕರಣ ಎಷ್ಟು ಕಠಿಣ ಅಥವ ಸುಲಭ ಎಂದು ಕಂಡುಕೊಳ್ಳಲು ಒಂದು ಸರಳವಾದ ಉಪಾಯ ಮಾಡಿದೆ. ಯು ಆರ್ ಅನಂತಮೂರ್ತಿಯವರ ಪೂರ್ವಾಪರ (೧/೮ ಕ್ರೌನ್?)ದಲ್ಲಿ, ಪೂರ್ತಿ ಅಚ್ಚುಪುಟವನ್ನು ಆಯ್ಕೆ ಮಾಡಿಕೊಂಡೆ (ಬಿಚ್ಚುಕಟ್ಟು: ಪುತಿನರ ರಸಪ್ರಜ್ಞೆ, ಪುಟ ೬೩):
ಹೊಸ ಬಗೆಯಲ್ಲಿ ಸಾಧಿಸಬೇಕಾಗಿದೆ ಎಂದು ಅನ್ನಿಸುತ್ತದೆ. ಇದಾಗದಿದ್ದಲ್ಲಿ ಕಾವ್ಯ ಅದೇ ಹಳೆಯ ಎರಕದಲ್ಲಿ ಹೊಯ್ದು ಸಾಲಭಂಜಿಕೆಗಳಂತಿರುತ್ತದೆ; ಅಥವಾ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತದೆ.
ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ‘ಕ್ರಾಂತಿ’ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು. ಅವನಿಗೆ ನಿಜವಾಗಿ ಕ್ರಾಂತಿ ಬೇಕಾಗಿಲ್ಲ; ಆದರೆ ತನ್ನ ರೋಷಾವೇಶಗಳನ್ನು ವ್ಯಕ್ತಪಡಿಸಲೊಂದು ನೆವಬೇಕು. ವ್ಯವಸ್ಥೆಯ ಅಗತ್ಯವನ್ನೂ ಬದಲಾವಣೆಯ ಅನಿವಾರ್‍ಯತೆಯನ್ನೂ ಏಕಕಾಲದಲ್ಲಿ ಅನುಭವಿಸುವಾತ ಮಾತ್ರ ಕ್ರಾಂತಿಕಾರಿಯಾಗಬಲ್ಲ. ಕ್ರಾಂತಿಯನ್ನು ಕುರಿತು ಚಿಂತಿಸಬಲ್ಲವರೆಲ್ಲರೂ ಕಾನ್ರಾಡ್‌ನ ‘ದಿ ಸೀಕ್ರೆಟ್ ಏಜೆಂಟ್’ ಓದಬೇಕು. ಅಲ್ಲೊಬ್ಬ ತನ್ನ ಮೈಯ ಮೇಲೆಲ್ಲ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ತನ್ನನ್ನೂ ತನ್ನ ಸುತ್ತಲಿನವರನ್ನೂ ಏಕಕಾಲದಲ್ಲಿ ಕೊಲ್ಲಬಲ್ಲ ಅರಾಜಕತಾನಾದದ ಉಗ್ರ, ತಪಸ್ವಿಯಿದ್ದಾನೆ. ಅರಾಜಕತಾವಾದಿಗಳ ಸಂಘಲಾಭದ ಮುಖೇನ ಜರ್ಮನರಿಗೆ ಗುಪ್ತಚಾರನಾದವನೊಬ್ಬನೂ ಬರುತ್ತಾನೆ. ಅವನ ಹೆಂಡತಿ ತನ್ನ ಮೂರ್ಖ ತಮ್ಮನೊಬ್ಬನನ್ನು ಅಕ್ಕರೆಯಿಂದ ಸಾಕುತ್ತಿರುವ ಸಂಸಾರಿ ಹೆಣ್ಣು. ದುರ್ಬಲ ಮನಸ್ಸಿನ ಈ ತಮ್ಮನನ್ನು ಅವನ ಕರುಣೆ ಮೀಟಿ, ಉನ್ಮಾದಕ್ಕೆ ಒಳಪಡಿಸಿ, ಅವಳ ಖದೀಮ ಗಂಡ ಬಾಂಬ್‌ಸ್ಪೋಟ್ ಒಂದರಲ್ಲಿ ಅವನನ್ನು ಬಳಸಿಕೊಂಡು ಸಾಯಿಸುತ್ತಾನೆ. ಹೆಂಡತಿ ಪೆದ್ದಳಾದರೂ ಇದನ್ನು ತಿಳಿದೊಡನೆಯೇ ಮಾಂಸ ಕೊಯ್ಯುವ ಅಡಿಗೆ ಮನೆ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಅಸ್ವಸ್ಥ ಪೋಲಂಡಿನ ಕಾನ್ರಾಡ್ ಅರಾಜಕ ಕ್ರಾಂತಿಕಾರತೆಯ ರುಚಿತಿಳಿದಿದ್ದ ಸಂಪ್ರದಾಯವಾದಿ. ಸುಖಜೀವಿಗಳಾದ ಉದಾರವಾದಿಗಳು ತಮ್ಮ ಪಾಪಪ್ರಜ್ಞೆಯಿಂದಾಗಿ ಕ್ರಾಂತಿಯ ಮಾತಾಡುವವರನ್ನು ಬೆಂಬಲಿಸುವುದು; ಮೊಡ್ಡು ಜನರ ಜೀವನಪ್ರೀತಿ ಸತ್ಯನಿಷ್ಠೆಗಳು; ಬಿರುಕುಗಳನ್ನು ಉಪೇಕ್ಷಿಸುವ ವ್ಯವಸ್ಥೆಯ ದಡ್ಡತನ; ವಿನಾಶವನ್ನು ಪ್ರೀತಿಸುವ ಮನೋವ್ಯಾಧಿ ಗ್ರಸ್ತರು ಸಾಮಾಜಿಕ ಅನ್ಯಾಯಗಳನ್ನು ದುರುಪಯೋಗಪಡಿಸಿಕೊಂಡು ಹೇಗೆ ಕಿಚ್ಚೆಬ್ಬಿಸುವುದರಲ್ಲೇ ಆಸಕ್ತರಾಗಿರುತ್ತಾರೆಂಬ ದಿಗಿಲು - ಇವೆಲ್ಲವನ್ನೂ ರಕ್ತಕ್ರಾಂತಿ, ಕೊಲೆ, ಉತ್ಪಾತಗಳ ನಮ್ಮ ಕಾಲಕ್ಕೆ ಅನನ್ಯವೆಂಬಂತೆ ಕಾನ್ರಾಡ್ ಕಾಣಿಸಿದವನು. ವ್ಯವಸ್ಥೆಯ ಪ್ರೀತಿಯನ್ನೂ, ವಿನಾಶದ ಆಕರ್ಷಣೆಯನ್ನೂ ತನ್ನೊಳಗೇ ಕಂಡುಕೊಂಡವನು ಕಾನ್ರಾಡ್. ಆದ್ದರಿಂದಲೇ ಅವನು ಕೊಡುವ ‘ಸ್ವಕೇಂದ್ರ ಮುಕ್ತಿ’ಯ ರಸಪ್ರಜ್ಞೆ ನಮಗೆ ಗಾಢವಾದ ಅನುಭವವಾಗುತ್ತಾದೆ.
ಕ್ಲಾಸಿಕಲ್ ಕವಿಗಳು ಮಾತ್ರ ವ್ಯವಸ್ಥೆಯನ್ನೂ ಹೊಗಳಬಲ್ಲವರು. ಉದಾಹರಣೆಗೆ ಪಂಪ ಮತ್ತು ಕಾಳಿದಾಸ. ನಮ್ಮ ಕಾಲದ, ಪ್ರಾಯಶಃ ಅನಿವಾರ್‍ಯದ, ದುರಂತವೆಂದರೆ ಈ ಬದಲಾವಣೆಯ ಯುಗದಲ್ಲಿ ಹುಟ್ಟಿದ ಅತ್ಯುತ್ತಮ ಲೇಖಕರು ಬಿಚ್ಚುವುದರಲ್ಲಿ, ಕೊಳಕನ್ನು ನಾಶಮಾಡುವುದರಲ್ಲಿ, ಹರಿಯುವುದರಲ್ಲಿ ಎಷ್ಟು ಆಸಕ್ತರಾಗಿರುತ್ತಾರೋ, ಅಷ್ಟೇ ಹೊಸ ವ್ಯವಸ್ಥೆಯ ನಿರ್ಮಾಣದಲ್ಲಿ ಆಸಕ್ತರಾಗಿರುವುದಿಲ್ಲ. ತಮ್ಮ ಬರವಣಿಗೆಯ ತೀವ್ರತೆಗಾಗಿ ಅವರು ಈ ಬೆಲೆ ತೆತ್ತಿರುತ್ತಾರೆ. ರಷ್ಯನ್ ಕವಿ ಮಯಾಕೊವೆಸ್ಕಿ ಕ್ರಾಂತಿಪೂರ್ವ ಮತ್ತು ಕ್ರಾಂತಿ ಸಮಯದಲ್ಲಿ ಎಷ್ಟು ಲವಲವಿಕೆಯಿಂದ ದೇಶವನ್ನು ಬಿಗಿದಿದ್ದ ಸರಪಳಿಗಳನ್ನು ಕಡಿದು ಹಾಕಿದನೋ, ಅಷ್ಟೇ ತೀವ್ರವಾಗಿ ಹೊಸ ಉಕ್ಕಿನ ಕಾರ್ಖಾನೆಗಳನ್ನು ತೆರೆಯುವುದರ
- ಈ ಮೇಲಿನ ಕನ್ನಡ ಪಠ್ಯವನ್ನು http://www.webworldindex.com/countcharacters.htmರಲ್ಲಿ ಅಂಟಿಸಿದಾಗ ಪದಗಳ ಮಧ್ಯದ ಜಾಗವನ್ನೂ ಸೇರಿಸಿದಂತೆ ಒಟ್ಟು ೨೫೦೭ ಕ್ಯಾರೆಕ್ಟಾರ್‌ಗಳಿವೆ ಎಂದು ತೋರಿಸಿತು. ಅಂದರೆ, ಭರ್ತಿ ಪುಟವೊಂದನ್ನು ಕೀಲೀಕರಣ ಮಾಡಲು, ೨೫೦೭ ಬಾರಿ ಕೀ ಬೋರ್ಡ್ ಮೇಲೆ ಕೈಬೆರಳುಗಳು ಅಡ್ಡಾಡಬೇಕಾಗುತ್ತದೆ. ಅಂದರೆ ಸುಮಾರು ೬೦೦ ಪುಟ ಕೀಲೀಕರಣ ಮಾಡಲು ೨೫೦೭*೬೦೦=೧೫೦೪೨೦೦ (ಅಂದರೆ ಹದಿನೈದು ಲಕ್ಷ ನಾಲ್ಕು ಸಾವಿರದ ಇನ್ನೂರು ಬಾರಿ ಕೈಬೆರಳುಗಳು ಆಡಬೇಕು), ಸಂಖ್ಯೆಯನ್ನು ನೋಡಿದರೆ ಎಂಥವರನ್ನಾದರೂ ಭಯಭೀತಗೊಳಿಸುತ್ತದೆ. ಯುವಕರಾದರೋ ಅವರವರ ಧ್ಯಾನ-ಆಅಸಕ್ತಿಗಳಿ ಅವರವರಿಗೆ, ಯುವ ವಿವಾಹಿತರಾದರೋ ನೂರಾರು ಗೋಜಲುಗಳು. ವೃದ್ದರಾದರೂ ವ್ಯಾಧಿಗಳು .
ನನ್ನ ವಯಸ್ಸು ೫೪. ನನಗೂ ನೂರಾರು ವ್ಯಾಧಿಗಳು. ಕೀ ಬೋರ್ಡ್ ಮೇಲೆ ಕೈಬೆರಳುಗಳು ವಿಶ್ರಾಂತಿ ರಹಿತವಾಗಿ ಆಡಲಾರದು.
*
*
*
ಎಂ ಎನ್ ಸತ್ಯನಾರಾಯಣರಾವ್‌ರನ್ನು ಎಂಎನ್‌ಎಸ್ ಎಂದೇ ಕರೆಯುತ್ತೇವೆ. ಅವರ ವಯಸ್ಸು ೭೪.
ಶಾಮಣ್ಣ ಕುಂಇಯವರ ಕಾದಂಬರಿ- ಸುಮಾರು ೬೦೦ ಪುಟಗಳು. (ಪುಸ್ತಕ ಕಣ್ಮರೆಯಲ್ಲಿರುವುದರಿಂದ ಪುಟಗಳ ನಿಖರತೆಯನ್ನು ಖಚಿತಪಡಿಸಿ ಹೇಳುತ್ತಿಲ್ಲ, ಒಟ್ಟಾರೆ ೫೭೦ ರ ಮೇಲೆ). ಇಡಿ ಕೃತಿಯನ್ನು ಕೀಲೀಕರಣಗೊಳಿಸಿದ್ದಾರೆ. ಕಡಿಮೆ ಕಲಸವಲ್ಲ. ಇವರ ಮುಂದೆ ನಾನಂತೂ ಕುಬ್ಜನಾದೆ. ಕೆಎಸ್‌ಸಿಯ ಮುಂದುವರಿಕೆ ನನ್ನಿಂದ ಅಸಾಧ್ಯ ಎಂದಿರುವಾಗ ಇಂತಹವರ ಇಂತಹ ಕೆಲಸ ನನ್ನನ್ನು ಹುರಿದುಂಬಿಸಿತು. ಉಳಿದವರನ್ನೂ ಹುರಿದುಂಬಿಸುತ್ತದೆ ಎಂದೆನ್ನುವುದು ನನ್ನ ನಿರೀಕ್ಷೆ. ಸಂವಾದ.ಕಾಂ, ಕಬಡ್ಡಿ ಚಿತ್ರದ ಬಗೆಗೆ ಸಂವಾದ ಕಾರ್ಯಕ್ರಮ ಇಟ್ಟುಕೊಂಡಿದ್ದಾಗ ಎಂಎನ್‌ಎಸ್‌ರವರಿಗೆ ಶಾಲು ಹೊದಿಸಿ ಒಂದು ಸಣ್ಣ ಸನ್ಮಾನವನ್ನು ಮಾಡಿದ್ದೆವು.
‘ರಾವ್‌ಜಿ, ಇದಕ್ಕಿಂತಲೂ ಹೆಚ್ಚಿನ ಗೌರವ ನಿಮಗೆ ಸಿಗಬೇಕಾಗಿತ್ತು. ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಂದಿರುವ ನಿಮ್ಮ ಹೃದಯ ದೊಡ್ಡದು.’
*
*
*
ಕಿಶೋರ್ ಚಂದ್ರ
-ನನಗಿಂತಲೂ ೨೦ ವರ್ಷಕ್ಕೆ ಕಿರಿಯ. ಈತನ ಶ್ರದ್ಧೆ, ಶಿಸ್ತು ನನ್ನನ್ನು ಸದಾ ಬೆರಗುಗೊಳಿಸಿದೆ. ಕೆಎಸ್‌ಸಿ ಅಪ್‌ಡೇಟ್ ಆಗಲಿ ಬಿಡಲಿ, ತಾವು ವಹಿಸಿಕೊಂಡಿರುವ ಕೀರ್ಲೀಕರಣದ ಕಾರ್ಯವನ್ನು ಮುಗಿಸಿ ಫೈಲುಗಳನ್ನು ರವಾನಿಸಿಬಿಡುತ್ತಿದ್ದರು. ಈ ಬಾರಿಯ ಅಪ್‌ಡೇಟ್ ಮತ್ತು ಡಾಟಾವನ್ನು ಕ್ರಮಬದ್ಧಗೊಳಿಸಲು ಅಪಾರವಾಗಿ ಶ್ರಮ್ಸಿದ್ದಾರೆ. ಬಹುಶಹ್ ಇಂತವರಿಲ್ಲದಿದ್ದರೆ, ನಾನೊಬ್ಬನೆ ಎಂದೆನ್ನುವ ಭಾವವೇ ನಲುಗಿಸಿಬ್ಡುತ್ತಿತ್ತೇನೆ.
ಧನ್ಯವಾದಗಳು,ಕಿಶೋರ್ ಚಂದ್ರ .
ಶೇಖರ್‌ಪೂರ್ಣ

ಎಂ ಎನ್ ಸತ್ಯನಾರಾಯಣ ರಾವ್
ಮಾಗಡಿ ನಂಜಪ್ಪ ಸತ್ಯನಾರಾಯಣ ರಾವ್‍ರವರು ಹುಟ್ಟಿದ್ದು ೧೩-೫-೧೯೩೫. ೧೯೫೫
ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ., ಪದವಿ ಪಡೆದು ಭಾರತ
ಸರ್ಕಾರದ ಅಂದಿನ ಅಂಚೆ ತಂತಿ ಇಲಾಖೆಯ ತಂತಿ ವಿಭಾಗದಲ್ಲಿ ಇಂಜಿನೀರಿಂಗ್ ಸೂಪರ್‌ವೈಸರ್
ಹುದ್ದೆಗೆ ಒಂದು ವರ್ಷ ಜಬ್ಬಲ್‍ಪುರದಲ್ಲಿ ತರಬೇತಿಪಡೆದು ೧೯೫೮ರಲ್ಲಿ
ಗುಜರಾತಿನ ಜುನಗಡ್‍ನಲ್ಲಿ ನೌಕರಿ ಸೇರಿದರು. ಕ್ರಮೇಣ ವಿವಿಧ ಮೇಲಿನ
ಹುದ್ದೆಗಳಿಗೆ ಬಡ್ತಿ ಹೊಂದಿ ಡೆಪುಟಿ ಜೆನೆರಲ್ ಮ್ಯಾನೇಜರ್ ಆಗಿ ೧೯೯೩ರಲ್ಲಿ
ನಿವೃತ್ತಿಯಾದರು. ಗುಜರಾತ್, ಕರ್ನಟಕ, ಆಂಧ್ರ, ಕೇರಳಗಳಲ್ಲಿ ಕೆಲಸ ಮಾಡಿ
ಅಲ್ಲಿನ ಜನಜೀವನವನ್ನು ಸಂಸ್ಕೃತಿಯನ್ನು ಅಸ್ವಾದಿಸಿದ್ದಾರೆ. ನಿವೃತ್ತಿ
ಜೀವನದಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳ
ಮುನ್ನಡೆಯನ್ನು ನೋಡುತ್ತಾ ಸಂತೃಪ್ತಿಯ ಜೀವನವನ್ನು ಧರ್ಮಪತ್ನಿಯೊಂದಿಗೆ
ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ.
ನಿವೃತ್ತಿ ಜೀವನದಲ್ಲಿ ಸ್ವಇಚ್ಚೆಯಿಂದ ಕನ್ನಡ ಸಾಹಿತ್ಯ ಡಾಟ್ ಕಾಂ ನ
ಕೀಯಿಂಗ್-ಇನ್ ಗುಂಪಿಗೆ ಸೇರಿ ಕುಂ.ವೀ ಅವರ ಶಾಮಣ್ಣ ಕಾದಂಬರಿಯನ್ನು
ಬರಹಕ್ಕಿಳಿಸಿದರು. ಇದಕ್ಕೆ ಸುಮಾರು ೨ ವರ್ಷ ನಿರಂತರವಾಗಿ ತೊಡಗಿಸಿಕೊಂಡರು.
ಇವರಿಗೆ ಹವ್ಯಾಸಗಳು ಅಂದರೆ ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯ ಓದುವುದು,
ಜ್ಯೋತಿಷ್ಯ, ಅಂತರ್ಜಾಲದಲ್ಲಿ ಪರ್ಯಟನೆ.

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ತಂಡನಾಯಕನಾಗಿ ಸೇವೆ. ಕನ್ನಡದ ಬಗ್ಗೆ ಅಭಿಮಾನ. ಈ ಅಭಿಮಾನದಿಂದಾಗಿ ಅಂತರ್ಜಾಲದಲ್ಲಿ ಕನ್ನಡದ ಬಗ್ಗೆ ಹುಡುಕಾಟ ನಡೆಸುತ್ತಿರುವಾಗ ಕನ್ನಡ ಸಾಹಿತ್ಯ.ಕಾಂನ ಆಯಸ್ಕಾಂತಕ್ಕೆ ಅಂಟಿಕೊಂಡು ಬರಹ ತಂಡದಲ್ಲಿ ಸೇವೆ. ಈ ವರೆವಿಗೂ ಯಶವಂತ ಚಿತ್ತಾಲ, ವೈದೇಹಿ, ಕುಂ.ವೀರಭದ್ರಪ್ಪ ಮತ್ತು ಎ.ಎಸ್. ಮೂರ್ತಿ ರವರ ಸಣ್ಣಕಥೆಗಳು/ಲೇಖನಗಳ ಕೀಲಿಕರಣ ಹಾಗು ಪರಿಶೀಲನೆ ಗೊಂಡಿವೆ. ಕನ್ನಡ ಸಾಹಿತ್ಯ.ಕಾಂ ನಲ್ಲಿ ೨೦೦೩ ರಿಂದ ಸದಸ್ಯರಾಗಿದ್ದಾರೆ.
ಈವರೆಗೂ...
ಕಳೆದ ಸಂಚಿಕೆ ಪ್ರಕಟಿಸಿದಾಗ, ನಮ್ಮಲ್ಲಿ ಹಳೆಯ ಸಂಚಿಕೆಗಳ ಪಠ್ಯವೆಲ್ಲ, ಒಂದಾದಮೇಲೆ ಒಂದರಂತೆ,
ತಟಕ್ಕನೆ ಬಂದೊದಗಿದ, ಅವಘಡಗಳಿಗೆ ಸಿಲುಕಿ ನಾಶವಾಗಿತ್ತು. ಹಿಂದಿನ ಸಂಚಿಕೆಗಳ ಪಠ್ಯವನ್ನು ಬಹುತೇಕ
ಸಂಗ್ರಹಿಸಿದ ಮೇಲೆಯೇ ‘ಮುಂದಿನ ಸಂಚಿಕೆ’ ಎಂದು ಮನಸ್ಸಿನಲ್ಲಿದ್ದರಿಂದ, ಯಾವುದೇ ಸಮಯವನ್ನು
ನಿಗದಿಗೊಳಿಸಿಕೊಂಡಿರಲಿಲ್ಲ. ನಾಶವಾಗಿದ್ದ ಪಠ್ಯವನ್ನು ಸಂಗ್ರಹಿಸಿ, ಪುಟಗಳನ್ನು ಪುನರ್‌ನಿರ್ಮಾಣ
ಮಾಡುವುದು - ದುಸ್ತರ ಹಾಗು ಕಷ್ಟವಿತ್ತು. ಹಾಗಾಗಿ ಕನ್ನಡಸಾಹಿತ್ಯ.ಕಾಂ ಸ್ಥಗಿತಗೊಂಡಿತ್ತು.
ಸ್ಥಗಿತ ಹಾಗು ಪುನರಾರಂಭ ಈ ಎರಡೂ ಕೆಎಸ್‌ಸಿಗೆ ಹೊಸದೇನಲ್ಲ. ನೆಪ ಸಿಕ್ಕಿದರೆ ಸಾಕು,
ತಟಸ್ಥಗೊಂಡು ಮುದುಡಿಕೊಂಡುಬಿಡುತ್ತದೆ. ‘ನನ್ನ ಕೆಲಸವಲ್ಲ, ಬಿಡುವಿಲ್ಲ, ನಾನು ಯಾಕೆ ಮಾಡಬೇಕು,
ಇದರಿಂದ ಲಾಭವೇನು? ಇತ್ಯಾದಿ ಪ್ರಶ್ನೆಗಳು ಬಂದೊಡನೆಯೆ, ತಾವು ವಹಿಸಿಕೊಂಡಿರಬಹುದಾದ, ಕೆಲಸಗಳನ್ನು
ಅರ್ಧದಲ್ಲೇ ಬಿಟ್ಟು, ನಿರುತ್ಸಾಹವನ್ನು ವ್ಯಾಪಿಸಿಕೊಳ್ಳುವಂತೆಯೂ ಮಾಡುವಲ್ಲಿ ಸಾಕಷ್ಟು ಜನ
ಹೆಚ್ಚು ಶ್ರಮವಹಿಸುತ್ತಾರೆ. ನನಗೂ ನಿರುತ್ಸಾಹವೆ. ಈ ನಿರುತ್ಸಾಹದ ನಡುವೆಯೂ ಕೆಎಸ್‌ಸಿ ಒಂದು
ಅದ್ಭುತವೆನ್ನುದರಲ್ಲಿ, ಎರಡು ಮಾತಿಲ್ಲ. ಹೇಗಾದರೂ ಸರಿ, ಯಾರಿರಲಿ ಬಿಡಲಿ, ಕೆಎಸ್‌ಸಿ
ಮುಂದುವರೆಯುತ್ತದೆ. ನಾನು, ನೀವು ಸೇರ್‍ಇದಂತೆ ವ್ಯಕ್ತಿಗಳಿಗಿಂತಲೂ ಚಟುವಟಿಕೆಗಳೇ ಮುಖ್ಯ.
ಇದನ್ನು ಎಲ್ಲರೂ ಒಪ್ಪುತ್ತಾರೆ
ಎಂದಂದುಕೊಳ್ಳುತ್ತೇನೆ. ಇಷ್ಟು ಹೇಳಿದನಂತರ, ಮುಂದಿನ ದಿನಗಳತ್ತ ಒಂದು ನೋಟ....
ಕನ್ನಡಸಾಹಿತ್ಯ.ಕಾಂ ಸಿದ್ಧಪಡಿಸಿದ ಸ್ಪೆಲ್ ಚೆಕರ್ ಹಾಗು ಜಾವಾ ಸ್ಕ್ರಿಪ್ಟ್ ಬಹಳ
ಉಪಯೋಗಕಾರಿಯಾದವು ಎನ್ನುವ ಅಭಿಪ್ರಾಯ ಅನೇಕ ಕಡೆಯಿಂದ ವ್ಯಕ್ತವಾಗಿದೆ.
ಅವುಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು:
೧. ಸ್ಪೆಲ್ ಚೆಕ್ಕರ್
೨. ಜಾವಾ ಸ್ಕ್ರಿಪ್ಟ್
‘ನನ್ನ ಜೀವನದಲ್ಲಿ ನಾನು ಒಂದು ತಪ್ಪು ಮಾಡಿದ್ದೇನೆ. ಅದೇನೆಂದರೆ, ಸಾಹಿತ್ಯವನ್ನೆಲ್ಲ ಬೆಲೆಯೇ
ಇಲ್ಲವೇನೋ ಎಂಬಂತೆ, ಇಂಟರ್‌ನೆಟ್‌ನಲ್ಲಿ ಬೇಕಾ ಬಿಟ್ಟಿ ಚೆಲ್ಲಾಡಿರುವುದು.’- ಅನಂತಮೂರ್ತಿ,
ಸಿದ್ಧಲಿಂಗಯ್ಯ ಅಲ್ಲದೇ ಅನೇಕ ಗಣ್ಯರಿದ್ದ, ಕೆಎಸ್‌ಸಿಯ ಸಭೆಯೊಂದರಲ್ಲಿ ಹೇಳಿದ್ದೆ. ಚೆಲ್ಲಾಡಿದೆ
ಎಂಡೊಡನೆ ಅದರ ಹಿಂದೆ ಅಸಡ್ಡೆ ಇದೆ ಎಂದೇನೂ ಅಲ್ಲ: ತಾಂತ್ರಿಕತೆಯ ಮಿತಿ. ಅಪಾರವಾದ ಶ್ರದ್ಧೆ,
ಆಸಕ್ತಿ ಇಟ್ಟು ರೂಪಿಸಲಾಗಿರುವ ಕೆಎಸ್‌ಸಿಯ ಪುಟಗಳನ್ನು ತೆರೆದು ನೋಡಿ, ತಾತ್ಸಾರದ
ಮಾತುಗಳಾನ್ನಾಡುವ ಓದುಗರಿಗೂ ಕೊರತೆಯಿಲ್ಲ. ನನ್ನ ಪ್ರಕಾರ, ಇಲ್ಲಿ ಪ್ರಕಟವಾಗಿರುವುದೆಲ್ಲ
ಅತ್ಯುತ್ತಮ ಸಾಹಿತ್ಯ, ಇದಕ್ಕೆ ಇದರದೇ ಆದ ಸ್ಥಾನವಿದೆ. ಇವುಗಳ ಬಗೆಗೆ
ಭಿನ್ನಾಭಿಪ್ರಾಯಗಳಿರಬಹುದು, ತಾತ್ಸಾರ ಖಂಡಿತವಾಗಿಯೂ ಕೂಡದು. ಆದುದರಿಂದ, ಓದುಗರೂ ಸಹ ಕನಿಷ್ಠ
ಕಾಳಜಿಯನ್ನು ತೋರಬೇಕಾಗುತ್ತದೆ. ಕನಿಷ್ಠ ಗೌರವವನ್ನು ತೋರಬೇಕಾಗುತ್ತದೆ. ಏನೋ
ಬಂದೆವು-ನೋಡಿದೆವು-ಮಾತನ್ನಾಡುತ್ತಿದ್ದೇವೆ ಎಂದೆನ್ನುವ ಧೋರಣೆಯನ್ನು ಸಹಿಸಿಕೊಳ್ಳಲೂ ಬಾರದು,
ಪ್ರೋತ್ಸಾಹಿಸಲೂ ಬಾರದು. ಆದುದರಿಂದ ಒಳಗೆ ಬರುವ ಮುನ್ನ, ‘ಬಾಗಿಲನ್ನಾದರೂ ತಟ್ಟಿ ಬನ್ನಿ’
ಎಂದೆನ್ನುವ ಮನವಿ ನಮ್ಮದು. ಅಂದರೆ, ನೋಂದಾವಣೆ ಮಾಡಿಕೊಂಡು, ‘ಲಾಗಿನ್’ ಆಗಲಿ ಎನ್ನುವ ನಿರೀಕ್ಷೆ.
ಇದಕ್ಕೆ ಯಾರದೂ ವಿರೋಧವಿರಲಾರದೆಂದು ಭಾವಿಸಿದ್ದೇನೆ. ‘ಬಾಗಿಲು ತಟ್ಟುವುದು’, ಅಂದರೆ ಲಾಗಿನ್
ಆಗುವುದು ಕನಿಷ್ಠ ಸಜ್ಜನಿಕೆಯೂ ಸಹ. ಹೀಗಾಗಿ ಕೆಎಸ್‌ಸಿಯ ಪುಟಗಳನ್ನು ನೋಡಬಯಸುವವರು
ನೋಂದಾವಣೆಯನ್ನು ಮಾಡಿಸಿಕೊಂಡಿರಲೇ ಬೇಕು. ಆದರೆ, ಕೆಎಸ್‌ಸಿ ತನ್ನ ಅಸ್ಥಿತ್ವವನ್ನು
ಉಳಿಸಿಕೊಂಡಿರುವವರೆಗೆ ಉಚಿತವಾಗೇ ಇರುತ್ತದೆ ಎಂದು ಇಲ್ಲಿ ಭರವಸೆ ನೀಡಬಲ್ಲೆ.
-ಶೇಖರ್‌ಪೂರ
ನೋಂದಾವಣೆ ಅಗತ್ಯ ವಿವರಗಳು ಖಂಡಿತವಾಗಿಯೂ ಯಾವುದೇ ಸಂದರ್ಭದಲ್ಲೂ ಯಾರಿಗೂ ಯಾವುದೇ ವಿವರಗಳನ್ನು ನೀಡುವುದಿಲ್ಲ. ಕೆಎಸ್‌ಸಿಯ ಚಟುವಟಿಕೆಗಳ ಬಗೆಗೆ ತಿಳಿಸಲು ಮಾತ್ರ ಸಂಪರ್ಕವನ್ನು ಬಳಸಿಕೊಳ್ಳಲಾಗುವುದು. ಸಂದರ್ಭಾನುಸಾರ, ಈ ಮೈಲ್, ಎಸ್‌ಎಂಎಸ್, ದೂರವಾಣಿ ಮೂಲಕ ಚಟುವಟಿಕೆಗಳ ಕುರಿತಂತೆ ತಿಳಿಸಬಹುದು. ನೋಂದಾವಣೆ ಮಾಡಿಸಿಕೊಳ್ಳುವಾಗ ಸಾದ್ಯವಿದ್ದಷ್ಟೂ ವಿವರಗಳನ್ನು ನೀಡಿ. ಈ ವಿವರಗಳು ನಮಗೆ, ಓದುಗರನ್ನು ವಿಂಗಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಉದಾಹರಣೆಗೆ: ಬೆಂಗಳೂರಿನಲ್ಲಿ ಕೆಎಸ್‌ಸಿಯ ಕಾರ್ಯಕ್ರಮವೇನಾದರೂ ಆದರೆ, ಬೆಂಗಳೂರಿನವರಿಗೆ ಮಾತ್ರ ತಿಳಿಸಲು ಅನುಕೂಲವಾಗುತ್ತದೆ. ಉಳಿದವರಿಗೆ ಕಿರಿಕಿರಿಯಾಗುವುದಿಲ್ಲ. ಶಾಲಾ, ಕಾಲೇಜು ಶಿಕ್ಷಕರ ಹೆಸರು ನೀಡಿದರೆ, ದೂರವಾಗಿರುವ ನಿಮ್ಮ ಸಹಪಾಠಿಗಳ ವಿವರ ನಿಮಗೆ ದಕ್ಕಿದರೂ ದಕ್ಕಬಹುದು....ಆದುದರಿಂದ ಕೇಳಿರುವ ಪ್ರಶ್ನೆಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ, ಮುಖ್ಯವೆ. ನೋಂದಾವಣೆ ಇಷ್ಟರಲ್ಲೇ ಆರಂಭವಾಗಲಿದೆ. ಅಲ್ಲಿಯವರೆಗೂ, ಕೆಳಗೆ ನೀಡಲಾಗಿರುವ ಫಾರಂ ಬಳಸಿ. ಬರುವ ಮೈಲ್‌ಗಳನ್ನೆಲ್ಲ ಖಂಡಿತವಾಗಿಯೂ ಓದುತ್ತೇನೆ, ಎಲ್ಲ ಮೈಲ್‌ಗಳಿಗೂ ಉತ್ತರಿಸಲಾರೆನಾದರು-ಖಂಡಿತವಾಗಿಯೂ ಎಲ್ಲವನ್ನೂ ಓದುತ್ತೇನೆ.
೧. ನಿಯಮಾವಳಿಯನ್ನು ವಿವರಿಸಿರುವುದನ್ನು ಪೂರ್ತಿ ಓದಿಕೊಳ್ಳಿ. ನಂತರ,
ಅಂಗೀಕಾರವೆನ್ನಿಸಿದರೆ, ನೋಂದಾವಣೆಗೆ ಬೇಕಾಗಿರುವ ಮಾಹಿತಿ ಭರ್ತಿ ಮಾಡಿ.
೨. ಭರ್ತಿ ಮಾಡಿದನಂತರ ನಿಮಗೊಂದು ಮೈಲ್ ಬರುತ್ತದೆ.
೩. ಆ ಮೈಲ್‌ನಲ್ಲಿರುವ ಸಂಪರ್ಕವನ್ನು ಕ್ಲಿಕ್ಕಿಸಿ ಭರ್ತಿ ಮಾಡಿದ್ದು ನೀವೆ ಎಂದು ಖಾತ್ರಿಗೊಳಿಸಿ.
೪. ನಂತರ ನಿಮ್ಮ ಖಾತೆ ಆರಂಭವಾಗುತ್ತದೆ. ಮಾರ್ಚ್ ೧೭ರಂದು, ಕನ್ನಡಸಾಹಿತ್ಯ.ಕಾಂ ಮರುಚಾಲನೆಯ
ಕಾರ್ಯಕ್ರಮದ ಮೂಲಕ ಹೊಸ ವಿನ್ಯಾಸಗಳೊಂದಿಗೆ, ಹೊಸ ಸಂಚಿಕೆಯೂ ಪ್ರಕಟವಾಗಲಿದೆ.
೫. ಈಗಿರುವುದರಲ್ಲಿ ದೋಷಗಳೇನಾದರೂ ಕಂಡುಬಂದಲ್ಲಿ ತಿಳಿಸಿರಿ.
ಇಲ್ಲ. ಪುಟವಿನ್ಯಾಸವನ್ನು ಹೆಚ್ಚು ಅಂದಗೊಳಿಸಲು ಹಾಗು ಸದ್ಯಕ್ಕೆ ಯುನಿಕೋಡ್ ವಿಭಾಗವನ್ನು ಮಾತ್ರ ಮುಂದುವರೆಸಲು ತೀರ್ಮಾನಿಸಲಾಗಿದೆ. ಜಿಲ್ಲೆ, ತಾಲ್ಲೂಕುವಾರುಕಡೆಯಿಂದ ’ಆನ್ಸಿ’ ವಿಭಾಗಕ್ಕೆ ಬೇಡಿಕೆ ಬಂದರೆ ಅದನ್ನೂ ಪೂರೈಸಲಾಗುವುದು. ಲಭ್ಯವಾದ ಎಲ್ಲ ಹಿಂದಿನ ಸಂಚಿಕೆಗಳನ್ನು ಅದೇ ಕಾಲಾನುಕ್ರಮದಲ್ಲಿ ಜೋಡಿಸಲು ಪ್ರಯತ್ನ್ಸಿಅಲಾಗುತ್ತಿದೆ. ಕೆಲವು ಪ್ರಕಟಾಣೆಯ ಕಾಲಮಾನವನ್ನು ತೀರ್ಮಾನಿಸಲು ಯಾವುದೇ ಮಾಹಿತಿ ಲಭ್ಯವಿಲ್ಲ. ಅಂತಹವನ್ನು ಅಂದಾಜು ಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಮಾಹಿತಿಯೆಲ್ಲವೂ ಈಗಲೂ http://www.archive.org/ ರಲ್ಲಿ ಸಿಗುತ್ತದೆ.
ಜನವರಿ ೨೬ರಂದು ತರಲು ಎಲ್ಲ ಪ್ರಯತ್ನಗಳು ಸಾಗಿವೆ. ಆ ಕಾಲಮಿತಿಯೊಳಗೆ ಸಾಧ್ಯವಾಗದಿದ್ದ ಪಕ್ಷದಲ್ಲಿ ಯುಗಾದಿಯ ಮಾರನೆ ದಿವಸ (ವರ್ಷತೊಡಕಿನಂದು)ಖಚಿತವಾಗಿ ಹೊಸ ಸಂಚಿಕೆಯನ್ನು ನೋಂದಾಯಿತ ಸದಸ್ಯರು ನೋಡಬಹುದು. ವರ್ಷದ ತಡಕಿನಂಡೇ ಏಕೆ? ಕೆಎಸ್‌ಸಿ ಒಂದು ಕೆಲಸವನ್ನು ಬಹಳ ವ್ಯಾಪಕವಾಗಿ ಮಾಡಿತ್ತು. ಅದೆಂದರೆ, ಎಲ್ಲ ಮಟ್ಟದಲ್ಲೂ ಕಂಪ್ಯೂಟರ್‍ಗಳಾಲ್ಲಿ ಪೂರ್ವಭಾವಿಯಾಗಿ ಕನ್ನಡದ ಉಚಿತ ತಂತ್ರಾಷಗಳು ಸ್ಥಾಪಿತಗೊಂಡಿರಲೇ ಬೇಕು ಎಂದೆನ್ನುವ ಪರಿಸರಕ್ಕಎ ಅಗತ್ಯವಾದ ಕಾನೂನು ತರಬೇಕೆಂದು ರಾಜ್ಯದ, ಬೇರೆ ಬೇರೆ ದೇಶಗಳಿಂದ ಗಣ್ಯಾತಿಗಣ್ಯರ ಸಹಿಯನ್ನು ಪಡೆಯಲಾಗಿತ್ತು. ಅವುಗಳನ್ನು ಒಂದು ಸಮಾರಂಭವೇರ್‍ಪಡಿಸಿ, ಸರ್ಕಾರಕ್ಕೆ ಮನವಿಯನ್ನು ಅರ್ಪಿಸುವುದು, ಅದೇ ಸಮಾರಂಬದಲ್ಲಿ ಹೊಸ ಕೆಎಸ್‌ಸಿಯನ್ನು ಬಿಡುಗಡೆ ಮಾಡಿದರೆ ಚೆಂದ ಎಂದು ನನ್ನ ಅನ್ನಿಸಿಕೆ. ಉಳಿದೆಲ್ಲರನ್ನೂ ಸಂಪರ್ಕಿಸಿ ಜನವರಿ ಇಪ್ಪತ್ತಾರೊ ಅಥವ ವರ್ಷದ ತೊಡಕಿಅನ ದಿನವೋ ಎಂದು ತೀರ್ಮಾನಿಸಲಾಗುವುದು. ಶೇಖರ್‌ಪೂರ್ಣ