ಕಾದಂಬರಿ
ಶಾಮಣ್ಣ - ಅಂತರ್ಜಾಲ ಆವೃತ್ತಿ ಭಾಗ 5
ಕುಂ ವೀರಭದ್ರಪ್ಪ
೩೬೦
ನನಗೆ ಕಳೇಬರಗಳ ಅಂತಿಮ ಯಾತ್ರೆ ನೋದುವುದೆಂದರೆಭಯ! ‘ಸಾವು ಎಂಬ ಶಬ್ದ
ಕಿವಿಗೆ ಸೊಂಕಿದೊಡನೆ ಕಂಪಿಸಿ ಬಿಡುತ್ತಿದ್ದೆನು. ಸತ್ತವರು ನನ್ನ ಕಣ್ಣಿನಲ್ಲಿ ಬಂದು
ಕಾಡುತ್ತಿದ್ದುದೂ ಉಂಟು. ಇಂಥ ಕನಸುಗಳಿಂದ ಮೈ ಬಿಸಿಯಾದಾಗ ತಾತನವರು ಮೃತ್ಯುಂಜಯ
ಮಂತ್ರ ಲಿಖಿತ ಅಂತ್ರವನ್ನು ನನ್ನ ಸೊಂಟಕ್ಕೆ ಕಟ್ಟುತ್ತ ಯಮನ ಬಗೆಗೂ; ಅವನ ಹತ್ತಿರದ
ಸಂಬಂಧಿಯಿಂದ ಅಗ್ನಿಯ ಬಗೆಗೂ ತಿಳಿ ಹೇಳುತ್ತಿದ್ದರು. ಯಜ್ಞದಲ್ಲೂ ಸ್ಥಾನಮಾನ ಪಡೆದಿರುವ
ಯಮ ವಾಸಿಸುವ ಆಕಾಶ ಅಂತರಾಳವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೆಲ್ಲ ನೆನಪಾಗುತ್ತದೆ...
ವೇಣುಗಾನ ಮನೋಹರವಾದ ಆ ಲೋಕ ತಲುಪಲು ನಾನು ಮೊದಲಾಗಿ ಎಲ್ಲರೂ ಏಕೆ ಹೆದರುತ್ತಾರೆ
ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಇಂಥ ಸಂದರ್ಭಗಳಲ್ಲಿಯೇ. ಅವರು ಹೇಳುತ್ತಿದ್ದ
ಮಾತುಗಳನ್ನು ಆಧರಿಸಿ ಹಿಂದೊಮ್ಮೆ ನಾನು ಬರೆದಿದ್ದ ಕವಿತೆ ನೆನಪಾಗುವುದು - ಸಂದರ್ಭದಲ್ಲಿಯೇ.
ಗೂಬೆ ಸಾಯೋ ವ್ಯಕ್ತಿ ವಾಸಿಸುವ ಪ್ರದೇಶದ ಆಯಕಟ್ಟಾದ ಜಾಗದಲ್ಲಿ ಕೂತು ಸಾವಿನ
ಆಗಮನದ ಮುನ್ಸೂಚನೆಯನ್ನು ಸಾರುತ್ತದೆ. ಅದನ್ನು ಕೇಳಿಸಿಕೊಂಡ ಮೃತ್ಯುಮುಖಿಯು
ತನ್ನ ಎದೆಯೊಳಗೆ ನಿಧಾನವಾಗಿ ಪಾರಿವಾಳವನ್ನು ಕಲ್ಪಿಸಿಕೊಳ್ಳುತ್ತಾನೆ.
ತನ್ನೆದೆಯ ಬಿಗಿ ಪಂಜರದಲ್ಲಿ ಆ ಧವಳ ವರ್ಣದ ಪಾರಿವಾಳವನ್ನು ಬಂಧಿಸಿಡುವ ಪ್ರಯತ್ನ ಮಾಡುತ್ತಾನೆ.
ಅವನು ಅಂಥ ಪ್ರಯತ್ನ ಮಾಡಿದಷ್ಟೂ ಪಾರಿವಾಳದ ರೆಕ್ಕೆಗಳು ಬಲಿಷ್ಟವಾಗುತ್ತ ಹೋಗುತ್ತವೆ.
ಅವನ ಅಂತಃಶಕ್ತಿ ಮತ್ತು ಇಚ್ಚಾ ಶಕ್ತಿಯನ್ನು ಮೀರಿ ಬೆಳೆದ ಅವು ಮುಗಿಲಿಗೂ ಮಿಗಿಲಾದ
ರೆಕ್ಕೆಗಳನ್ನು ಹೃದಯ ವಿದ್ರಾವಕವಾಗಿ ಬಡಿಯುತ್ತ ಹಾರುತ್ತ... ಹ್ಹಾ... ಹಾರುತ್ತ ಶೂನ್ಯ
ಪ್ರವೇಶಿಸಿ ಅಂತರ್ಧಾನವಾಗುತ್ತವೆ. ಸತ್ತ ಮನುಷ್ಯನ ಆತ್ಮ ಅವಸ್ತಾ (ಪಿತೃಲೋಕದ ರಾಜ್ಯ)
ದಲ್ಲಿ ಗತಿಸಿದ ಹಿರಿಯರೊಂದಿಗೆ ಶಾಶ್ವತವಾದ ಸಖ್ಯ ಬೆಳೆಸುತ್ತದೆ. ‘ಗೂಬೆ ಮತ್ತು
ಪಾರಿವಾಳಗಳು’ ಎಂಬ ಸುಧೀರ್ಘ ಕವಿತೆ ಬರೆಯುವ ಮುನ್ನ ನಾನು ಸಾಯಲು
ಪ್ರಯತ್ನಿಸಿದಂತೆ ನೆನಪು. ಹಾಗೆ ನಾನು ಪ್ರತ್ನಿಸಿದ್ದಲ್ಲಿ ನಾನು ಬದುಕುತ್ತಿರಲೇ ಇಲ್ಲ. ಸಮಾಜದ
ಅಮ್ತಃಕರಣಗಳಿಮ್ದ ಹೊರಟ ಹೊಂಬನ್ನದ ಎಳೆಯೊಂದು ನನ್ನನ್ನು ಬಂಧಿಸಿ ಮೃತ್ಯುಮುಖದಿಂದ
ನನ್ನನ್ನೀಚೆಗೆ ಎಳೆಯುತ್ತಿತ್ತು. ಸಮಾಜದ ಹೊರಗೆ ಮತ್ತು ಓಳಗೆ ಅತಂತ್ರ ಸ್ಥಿತಿಯಲ್ಲಿ
ಬೆಳೆಸಿ ಜೋಪಾನ ಮಾಡಿದ ತಾತನವರಿಂದ ಕಳಚಿಕೊಳ್ಳಲು; ಬಿಡುಗಡೆಯಾಗಲು ಹಲವು ಸಾರಿ
ನಾನು ಇಂಥ ಪ್ರಯತ್ನ ಮಾಡಿದ್ದುಂಟು. ನನ್ನ ಬದುಕಿಗೆ ಸರ್ಪಗಾವಲಿದ್ದ ತಾತ ಸತ್ತಿರಬಹುದೆಂದು
ಅನ್ನಿಸಲಿಲ್ಲ. ಸತ್ತ ಸ್ಥಿತಿಯಲ್ಲಿ ಮಲಗಿ ವರ್ತಮಾನವನ್ನು; ವರ್ತಮಾನಕ್ಕೆ ಸಂಬಂಧಿಸಿದವರ
ವಿದ್ಯಮಾನವನ್ನು ಗಮನಿಸುತ್ತಿರಬಹುದೆಂಬ ಅನುಮಾನ ಬಂತು. ಆಗಲೆ ಯಾರೋ ಸೂತಕ
ಸೂಚಕವಾಗಿ ಹೆಗಲಿಗಿಳಿಬಿಟ್ಟಿದ್ದ ಉತ್ತರೀಯದಿಂದ ಇಡೀ ಮುಖ ಮುಡಿದುಕೊಂಡಿದ್ದ ಕಣ್ಣೀರನ್ನು
ಒರೆಸಿಕೊಳ್ಳುತ್ತ ಕಂಣುಗಲನ್ನು ಕಿರಿದುಗೊಳಿಸಿ ಪ್ರಣೀತಾ ಹಾಸಿಗೆಯ ಮೇಲೆ ಮಲಗಿದ್ದ ಜೀರ್ಣಾತಿ
ಜೀರ್ಣವಾದ ದೇಹದ ಕಡೆ ನೋಡಿದ. ಒಂದು ಕ್ಷಣದಲ್ಲಿ ಅನೇಕ ಪ್ರಾಣಿ ಪಕ್ಷಿಗಳಂತೆ ಕಂಡಿತು.
ಇನ್ನೊಂದು ಕ್ಷಣದಲ್ಲಿ ಮಿಸುಕುತ್ತಿರುವ ಒಂದೊಂದು ಬಿಳೀರೋಮವೂ ಹಾವಿನ ರೂಪ ಪಡೆದಂತೆ
ಭಾಸವಾಯಿತು. ಆ ಎಲ್ಲರ ಅವರ ಕಲ್ಪನೆಗಳ ನಡುವೆ ಕಳೇಬರದೊಳಗೆ ಶಾಸ್ತ್ರಿಗಳು ಕಂಣು
ಪಿಳಿಕಿಸುತ್ತ ಎದ್ದು ತನ್ನ ಕಡೆ ಎರಡೂ ಕೈ ಚಾಚಿ ಬಂದು ಬಿಡೋ ಶಾಮ ಎಂದು ಕೂಗಿದಂತಾಗಲು
ಕಿಟಾರನೆ ಕಿರಚಲಿಕ್ಕೆಂದು ಪರಾವರ್ತಿತವಾಗಿ ಪ್ರಯತ್ನಿಸಿದೆ. ಹೊರಟು
೩೬೧
ಕೀರಲು ಸ್ವರವನ್ನೇ ‘ಅಗ್ನಯ ಇದಂ ನ ಮಮ’ ಎಂಬಂತೆ ಅರ್ಥ ಮಾಡಿಕೋ ಚಿಂಚಿಣಿಯ
ಶಾಸ್ತ್ರಿಗಳು ಬಾಚಿ ತಬ್ಬಿಕೊಂಡು ಬೆನ್ನಿಗಂಟಿದ್ದ ಉದರ ನೇವರಿಸಿದರು.‘ಕಾಲೇನಿ ಉದೇತಿ ಸೂರ್ಯಃ
ಕಾಲೇನಿ ವಿಶತಿ ಪುನಃ (ಕಾಲದಿಂದ ಸೂರ್ಯ ಹುಟ್ಟುತ್ತಾನೆ ಕಾಲದಲ್ಲಿ ಅವನು ಅಸ್ತಮಿಸುವನು)
ಕಣಪ್ಪಾ... ಕಾಲ ಭೈರವ ಸೂರ್ಯನನ್ನೇ ಬಿಡುವುದಿಲ್ಲ. ಇನ್ನು ನಶ್ವರರಾದ ನಾನ್ಯಾವ
ಲೆಕ್ಕ... ಸಂತೈಸಿಕೋ..." ಎಮ್ದು ನನ್ನ ತಲೆಯನ್ನು ಎದೆಯ ವಕ್ಷಸ್ಥಳದಲ್ಲಿ ಬಚ್ಚಿಟ್ಟುಕೊಂಡರು.
ಅವರೆದೆಯೊಳಗೆ ಯಾವುದೋ ಹುನ್ನಾರು ಅರ್ಥವಾದಂತಾಗಿ ಅಲ್ಲಿಂದ ಬೇರ್ಪಟ್ಟೆ.
ಕಳೇಬರ ಪಂಚಭೂತಗಳಲ್ಲಿ ಲೀನವಾಗಲು ಹಾತೊರೆಯುತ್ತಿದೆ ಎಂದು ಅರ್ಥ ಬರುವ
ರೀತಿಯಲ್ಲಿ ಒಂದೆರಡು ನೊಣಗಳು ತೆರೆದಿದ್ದ ಬಾಯಿಯೊಳಗೆ ಪ್ರವೇಶಿಸಿ ಹೊರಬರುತ್ತಿದ್ದವು.
ಸನಾತನಿಗಳ ಬೆವರೊಳಗೆ ಉಪ್ಪೆದ್ದು ಹೋಗುವೆನೆಂಬುದಾಗಿ ಭಾವಿಸಿದ ಕಮಲಾಕರ ನನ್ನನ್ನಲ್ಲಿಂದ
ಕರೆದೊಯ್ದ. ಏನೋ ಒಂದು ತಿನ್ನಿಸಿದ. ಏನೋ ಒಂದು ಕುಡಿಸಿದ. ಆ ಕ್ಷಣ ಡೇಗಿನ ಮೂಲಕ ಹೊಟ್ಟೆ
ವಾಸನೆ ಹೊರಬರಬಹುದೆಂದು ನಾನು ಅಂದುಕೊಂಡಿರಲಿಲ್ಲ. ಮಧುಚಂದ್ರದ
ಯಾತನೆಯೊಂದಿಗೆ ವಾರ್ತಮಾನದ ಬೇಗೆಯನ್ನು ಬೆರೆಸಿ... ಆ ಮಿಶ್ರಣಕ್ಕೆ ಧ್ವನಿ ರೂಪ
ಕೊಡಲುಒದ್ದಾಡುತ್ತಿದ್ದ ನನಗೆ ಕಳೇಬರವನ್ನು ಆದಷ್ಟು ಬೇಗ ಕರ್ಮಾಚರಣೆಗೆ ಗುರಿ ಪಡಿಸುವ
ಕುರಿತು ಒತ್ತಿ ಹೇಳಿದರು. ಯಾವ ಶವಸೊಂಸ್ಕಾರದಲ್ಲಾಗಲೀ, ಅವರ ಕರ್ಮ ನಿಭಾಯಿಸುವುದರ
ಬಗೆಗಾಗಲೀ, ಅಸ್ಥಿ ನಿಮಜ್ಜನವೆಂಬಿವೇ ವಿಷಯಗಳ ಬಗೆಗಾಗಲೀ ಒಂಚೂರೂ ಜ್ಞಾನವಿರದ ನಾನು
ಅದರಲ್ಲೆಲ್ಲ ವಿದ್ಯುಕ್ತವಾಗಿ ಭಾಗವಹಿಸಲೇಬೇಕಾಗಿತ್ತು. ಶ್ರೀಕರಾಚಾರ್ಯರ ನೇತೃತ್ವದ
ಅಗ್ರಹಾರ ನಮ್ಮ ತಾತನವರ ಶವಸಂಸ್ಕಾರದ ವಿಷಯದಲ್ಲಿ ತಜ್ಜನ ಮಜ್ಜನ
ನಡೆಸಿರುವುದರ ಬಗ್ಗೆ ಜಲಜಾಕ್ಷಿ ಹೇಳಿದಳು. ಹಳೆಯದೆಲ್ಲ ನೆನಪಾಗಿ ಆಕೆ ಹೇಳಿದ್ದು ಸರಿಯಾಗಿ
ಕೇಳಿಸಿಕೊಳ್ಳಲಾಗಲಿಲ್ಲ. ನನಗೆ, ಆಕೆ ಎಂದರೆ ಏನೋ ಒಂದು ರೀತಿಯ ಅಳುಕು. ಆಕೆಯ
ಮಾತುಗಳನ್ನು ಅಪಾರ್ಥ ಮಾಡಿಕೊಳ್ಳುವ ಮುದುಡಿಹೋಗುವ ಸ್ಥಳಾಂತರವೇ ಇನ್ನು ಮುಂದುವರಿಯುತ್ತಿದೆ.
ಯಾಕೆ ಹೀಗೆ? ಈ ಓಳಗೆ ಗೌಳೇರ ಕ್ರಿಷ್ಟಿಪ್ಪನಿಗೂ ಕಟುಕರ ವಿಠೋಬನಿಗೂ ಒಳಗೊಳಗೆ ವೈಮನಸ್ಸಾಗಿರುವುದುಂಟು.
ಶವ ಸಂಸ್ಕಾರದ ವಿಷಯದಲ್ಲಿ ನೀವು ಹೀಗೆ ವರ್ತಿಸಬೇಕೆಂದು ಮೂಗು ತೂರಿಸಿದರೆಲ್ಲಿ
ಅಗ್ರಹಾರದ ನೂರಾರು ಓಟುಗಳು ನಮ್ಮ ಕೈ ತಪ್ಪಿ ಹೋಗುವುವೋ ಎಂಬ ಭಯ
ಅವರನ್ನು ಕಾಡುತಿರಲು ಸಾಕು. ಅಗ್ರಹಾರದ ಸ್ಮಶಾನದಲ್ಲಿಯೇ ಸಂಸ್ಕಾರ ಮಾಡಿದರೆ
ಆತ್ಮಕ್ಕೆ ಶಾಂತಿ ಸಿಗುವುದು ಇಲ್ಲದಿದ್ದರೆ ಇಲ್ಲವೆಂಬ ವಾದವನ್ನು ಒಪ್ಪಿಕೊಳ್ಳುವುದಾದರೂ ಹೇಗೆ?
"ಈವಿಷಯದಲ್ಲಿ ಯಾರನ್ನು ಯಾಕೆ ಕಾಲುಕಟ್ಟುವುದು? ಎಲ್ಲೋ ಒಂದು
ಕಡೆ ಶವಸ್ಂಸ್ಕಾರ ಮಾಡಿದರಾಯ್ತು" ಎಂಬುದಕ್ಕೆ ಕಮಲಾಕರ ಮತ್ತು ಜಲಜಾಕ್ಷಿ
ಸಮ್ಮತಿಸಿದರು. ಅವರಿಬ್ಬರೇ ಜೋಡಿಸಿಕೊಟ್ಟ ಐದು ಸಾವಿರ ರೂಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡು
ಅಲ್ಲಿಂದ ಹೊರಬಿದ್ದು ಸೀದ ಸೂತಕ ಕವಿದಿದ್ದ ಮನೆಕಡೆ ಬಂದೆ. ನನ್ನ ಹೆಂಡತಿಯ
ಕಡೆಯವರು ಯಾವಾಗಲೋ ಹೊಸಪೇಟೆಯಿಂದಿಳಿದಿದ್ದರು. ನನ್ನ ತಾತನವರನ್ನು ನಾನೇ
ಕೊಲೆ ಮಾಡಿರುವುದು ಅನ್ನೊ ಥರ ನನ್ನ ಕಡೆ ಹುಳಿ ಹುಳಿ ನೋಡಿದರು. ಮಾತಾಡಿಸೋ ಶಾಸ್ತ್ರ
ಮಾಡಿದರು. ವವರೊಂದೇ ಅಲ್ಲ. ಬಂದವರೆಲ್ಲರೂ ಸಹ... ಅಪರಾಧಿ ಸ್ಥಾನದಲ್ಲಿದ್ದು
ಓಡಾಡುತ್ತಿರುವೆನೋ ಎಂಬಂತೆ ಅವರೆಲ್ಲ ನೋಡುತ್ತಿದ್ದುದು, ಮಾತಾಡುತ್ತಿದ್ದುದು ಸಾಕುಸಾಕಾಗಿ
ಹೋಯಿತು. ನೋವಿನ ಸೂತಕದ ಘಳಿಗೆಗಳಲ್ಲೂ ನಾನು ಗೊಂದಲಕ್ಕೀಡಾಗಿದ್ದಾದಕ್ಕೆ ನನ್ನ ಮಧುಚಂದ್ರದ
ಕಹಿ ನೆನೌಗಳಿದ್ದಿರಬಹು
೩೬೨
ದೆಂದುಕೊಂಡೆ. ನನ್ನನ್ನು ಕಠಿಣ ರೀತಿಯಲ್ಲಿ ಗೋಳು ಹೊಯ್ದುಕೊಂಡ ಹೆಂಡತಿ ವರಲಕ್ಷ್ಮಿ
ತಾಯಿಯ ಮುಂದೆ ಕೂತು ಇನ್ನು ತನಗಾರು ದಿಕ್ಕು ಎಂಬ ರೀತಿಯಲ್ಲಿ ಅಳುತ್ತಿದ್ದಳು.
ಯಾರದೋ ರಾಜಿ ಸೂತ್ರಕ್ಕೆ ಕಟ್ಟುಬಿದ್ದು ಅಗ್ರ್ಹಾರದ ಭಾಷ್ಯಂ ಶ್ರೀಕರಾಚಾರ್ಯರಿಗೂ
ಚಿಂಚಿಣಿಯ ಪಾಂಡುರಂಗ ಶಾಸ್ತ್ರಿಗಳಿಗೂ ಅಂತ್ಯಾಕ್ಷರಿ ಸ್ಪರ್ಧೆ ನಡೆದಿತ್ತು. ಒಬ್ಬೊಬ್ಬರು
ಒಂದೊಂದು ವೇದಾಗ್ರಹಣದ ವಠಾರದಿಂದ ಒಂದೊಂದು ಕಂತೆ ಒಗೆಯುತ್ತಿದ್ದರು. ಅವರ ನಡುವೆ
ಅಲ್ಪ ಮಾನವರಾದ ನಾನ್ಯಾಕೆ ತಲೆ ತೂರಿಸುವುದೆಂದು ದೂರ ಇರುವಷ್ಟರಲ್ಲಿ ಶೂದ್ರಾತಿ ಶೂದ್ರ
ಮಂದಿ ಕೆಲವರು ಸಲಿಕೆ ಗುದ್ದಲಿಗಳೊಂದಿಗೆ ಪ್ರತ್ಯಕ್ಷ ಆದರು. ಅವರ ಮುಖಂಡತ್ವ
ವಹಿಸಿದ್ದ ದುರುಗಪ್ಪ ಎಂಬುವನು "ಯಜಮಾನ್ರು ಅಪ್ರೂಪ್ಕೆ ಹೊಟೋಗ್ಯಾರ್ರೀ... ಅವರ್ನ
ದ್ಯಾವ್ರು ಕರ್ಕೊಂಡು ನಮ್ಗೆಲ್ಲ ದುಕ್ಕ ಮಾಡ್ಯಾನ್ರಿ... ಅದ್ಕೆಲ್ಲ ಯಾರೇನು ಮಾಡಾಕಾಗತೈತ್ರೀ?...
ಇರೋರಾರ ಸತ್ತೋರ ಹೆಸ್ರು ಹೇಲ್ಕೊಂಡು ನಾಕ್ಕಾಲ ಸುಖವಾಗಿರೋದು ಬ್ಯಾಡೇನ್ರಿ?... ನಮ್ದಂತೂ
ದಿನಾಲು ಸಾಯೋದಾಗೈತ್ತಿ ಬದುಕು... ಊರಾಗ ಯಾರ್ಯಾರ ಸಾಯ್ಬೆಕು ಒಲೆ ಹತ್ತಿಸ್ಬೇಕ್ರೀ..."
ಎಂದು ಮುಂದೇನು ಹೇಳಲಾಗದೆ ತಲೆ ಕೆರೆದುಕೊಡ. ನನಗೆ ಬೇಸರ ಬಂದು "ಸುತ್ತಿ
ಬಳಸಿ ಯಾಕ ಮಾತಾಡ್ತೀಯೋ ದುರಗಪ್ಪ... ಹೆಳೊದೇನಿದ್ರು ಒಂದು ಮಾತಿನಲ್ಲಿ ಹೇಳಿ ಬಿಡಪ್ಪ
ಎಂದೆ.ಅವರ ಗುಂಪಿನಲ್ಲಿದ್ದ ಚವುಡಪ್ಪ ಎಂಬುವನು, "ನೋದ್ರಿ ಶಾಮಂಣ್ಣೋರ...
ಯಜಮಾನ್ರು ಮತ್ತೆ ಸಾಯಿ ಅಂದ್ರ ಸಾಯ್ತಾರೇನ್ರಿ? ಯಾವುದಕ್ಕೂ ಪಡ್ಕೊಂದು ಬಂದಿರ್ಬೇಕು
ಒಂದೇ ಸಾರಿಗೆ ಸಾಯಲಕ" ಎಂದು ಏನೋ ಹೆಳಲಿದ್ದಾಗ ವೆಂಕಟದೀಕ್ಷಿತರು "ಏನ್ರೋ ಶೂದ್ರ ಮುಂಡೇವ...
ಉಸಿರು ತಾಕೋ ಹಂಗ ನಿಂತ್ಕೊಂಡು ಮಾತಾಡ್ತೀರಲ್ರೋ... ದೂರ ನಿಂತ್ಕೊಂಡು ಮಾತಾಡ್ಬಾರ್ದೇನ್ರೋ"
ಎಂದು ಗದರುತ್ತಲೆ ಅವರೆಲ್ಲ ಒಂದು ಮಾರು ಹಿಂದಕ್ಕೆ ಸರಿದು ತಂತಮ್ಮರ್ಧ ಮುಖಕ್ಕೆ
ಅರಿವೆ ಇಟ್ಟುಕೊಂಡರು. ದೀಕ್ಷಿತರು ನನ್ನ ಕಡೆ ತಿರುಗಿ "ಶಾಮೂ ನಿನಗಾದ್ರು ಅರ್ಥ
ಆಗಬಾರ್ದೇನೊ ಈ ಶೂದ್ರರ ಕಿತಾಪತಿ ಏನೆಂಬುದು... ಇವರೆಲ್ಲ ಸದರ ಕೊಟ್ರೆ ತಲೆಮ್ಲೆ ಬಂದು
ಕೂಡ್ರುತಾರಪ್ಪ... ಮನು ಹೇಳಿದ್ನೇ ನಾನು ಹೇಳ್ತಿರೋದು... ನಮ್ಮೂರಲ್ಲಿ ಹೊಲೆಯ
ಮಂದಿ ಏನು ಮಾಡಿದ್ರು ಗೊತ್ತೆ?" ಎಂದಾತ ಹೇಳುತ್ತಿದ್ದುದು ತುಂಬ ಕಿರಿಕಿರಿ ಉಂಟುಮಾಡಿತು...
"ವೆಂಕಟೇಶಣ್ಣ ನೀವು ದಯವಿಟ್ಟು ಹೋಗ್ರಿ." ಎಂದು ಅಸಹನೆಯಿಂದ ನುಡಿದೆ. ಗೊಣಗುತ್ತ ಹೋದ.
ಚವುಡ ಸ್ವಲ್ಪ ಹತ್ತಿರ ಜರುಗಿ "ನಿಮ್ಮಂಥೋರು ಸಾವಿರಕ್ಕೊಬ್ರು ಶಾಮಣ್ಣೋರ... ಮಾಮೂಲ್ಗಿಂತ
ಒನ್ನ್ದಿನ್ನೂರು ಒಗ್ದುಬುಡ್ರಿ ತಂದೆ... ಯಜಮಾನ್ರ ಹೆಸ್ರು ಹೇಳ್ಕೊಂಡು ಹೊಟ್ತುಂಬ ಉಂಬ್ತೀವಿ"
ಎಂದು ಬೊಗಸೆಯೊಡ್ಡಿದ. ಅದನ್ನು ಕೇಳಿಸಿಕೊಂಡು ಶ್ರೀಧರ "ಓಹೋ... ಶಾಮೂ... ಅವರು
ಕೇಳ್ದಂತೆ ಕೊಟ್ಟೀಯಾ ಜೋಕೆ..." ಅಸ್ಥಿಮಜ್ಜನ ಆಗೋ ವರ್‍ಗೂ ಖರ್ಚು ಮಾಡೊದದೆ"
ಎಂದು ಕೂಗಿ ಹೇಳಿದ. ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನೂರರ ಐದು ನೋಟುಗಳನ್ನು
ದುರಗಪ್ಪನ ಬೊಗಸೆಗೆ ಹಾಕಿದೆ.
ಅವರೆಲ್ಲ ಕಂಣಿಗೆ ಒತ್ತಿಕೊಂಡು ಹೋಗುವಷ್ಟರಲ್ಲಿ ತಿಂಬರ್ ಡಿಪೋದ ಅಲ್ಲಾ ಭಕ್ಷಿ ತನ್ನದು
ಐವತ್ತು ಮಣದ್ದೂ ಅಂತ ಬಂದ. ಅವನನ್ನೂ ತೃಪ್ತಿಪಡಿಸಿ ಕಳಿಸುವಷ್ಟರಲ್ಲಿ ರಾಯಸಂ
ರಾಘವಾಚಾರ್ಯರು ನನ್ನ ತಾಯಿಯೊಡನೆ ತಾಳೆಗರಿಯ ಎರಡು ತುಂಡುಗಳನ್ನು ಹಿಡಿದುಕೊಂಡು
ಬಂದರು... ಅವರ ಹಿಮ್ದೆ ಪಾಂಡುರಂಗ ಶಾಸ್ತ್ರಿಗಳು; ಸ್ರೀಕರಾಚಾರ್ಯರೂ ಇತ್ಯಾದಿ ಹತ್ತಾರು
ಮಂದಿ... ಇದೇ ಒದಗಿ ಬಂದಿರುವ ಸುವರ್ಣಾವಕಾಶವೆಂದು ಭಾವಿಸಿದ ರಾಯಸಂರವರು ಕಂಠ್
೩೬೩
ಎತ್ತರಿಸಿ "ನಿಮ್ಮ ತಾಯಿ ಇದ್ನ ಕೊಡದೆ ಇದ್ದಿದ್ರೆ ಪರಮಘಾತಕ ಮಾಡಿದ ಪಾಪ ಬರ್‍ತಿತ್ತಲ್ಲಪ್ಪಾ...
ಮರಣಪೂರ್ವದಲ್ಲಿ ಶಾಸ್ತ್ರಿಗಳು ಬರೆದಿಟ್ಟಿರುವ ಶಾಸನ ಸಿಗದಿದ್ರೆ ನಮಗ್ಗೆಲ್ಲ ರೌರವ ನರಕ
ಪ್ರಾಪ್ತಿಯಾಗ್ತಿತ್ತೋ!..." ಎಂದರು. ಚಿಂಚಿಣಿ ಶಾಸ್ತ್ರಿಗಳು, "ರಾಘವಾ... ಅದೇನನ್ನು ಬರೆದಿಟ್ಟಿದ್ದಾರೆಂದು
ಘಟ್ಟಿಯಾಗಿ ಹೇಳೋ " ಎಂದು ಕುಮ್ಮಕ್ಕು ನೀದಿದರು. ಅದರಿಂದ ಉತ್ತೇಜಿತರಾದ ರಾಘವರು
"ಮರಣಾನಂತರ ತಮ್ಮ ಶವಸಂಸ್ಕಾರವನ್ನು ಕಾಶೀ ಕ್ಷೇತ್ರದ ಮಣಿಕರ್ಣಿಕಾಘಾಟ್‌ನಲ್ಲಿ ನಡೆಸತಕ್ಕದ್ದೆಂದು
ಬರೆದಿಟ್ಟಿದೆದರಲ್ಲಪ್ಪಾ... ಈಗೇನು ಮಾಡೋದು..." ಎಮ್ದು ಮೂಗಿಗೆ ನಶ್ಯೆ ಏರಿಸಿ ಎರಡು ಸಾರಿ
ಸೀನಿದರು ತುಪಾಕಿ ಸ್ಪೋಟಿಸಿದಂತೆ. ನನ್ನ ಎದೆ ದಡಲ್ ಎಂದಿತು. "ಪುಣ್ಯವಂತರು ಮಾತ್ರ
ಹಾಗೆ ಬರೀಲಿಕ್ಕೆ ಸಾಧ್ಯ?" ಎಂದು ಶ್ರೀಕಂಠಶಾಸ್ತ್ರಿಗಳೂ; "ಈ ಸಂಸ್ಕಾರ ಯಾತ್ರೆಯಲ್ಲಿ ನಾವೆಲ್ಲ
ಭಾಗವಹಿಸಿ ಪುಣ್ಯ ಭಾಜನಕ್ಕೆ ಪ್ರಾಪ್ತರಾಗೋಣ"ವೆಂದು ನರಹರಿಗಳೂ ಸಮರ್ಥಿಸಲು ನನ್ನ
ಜಂಘಾಬಲವೇ ಉಡುಗಿತು. ನನ್ನ ತಾಯಿ ಮುಂದೆ ಬಂದು "ರಾಘಣ್ಣ ಹೇಳಿದ್ದು ನಿಜ ಕಣೋ ಶಾಮಾ...
ಮಾವನವರು ನನ್ನ ಬಳಿ ಕೂಡ ಈ ಆಸೆ ವ್ಯಕ್ತಪಡಿಸಿದ್ರು... ಅವರ ಚಿಕ್ಕ ಆಸೆ ಈಡೇರಿಸದಿದ್ರೆ
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗ್ತದೇನೋ? ಹೂ ಅಂದು ಬಿಡಪ್ಪಾ... ಹಿರಿಯರ ಮಾತಿಗೆ
ಎದುರಾಡುವ ಪ್ರಯತ್ನವನ್ನು ಮಾತ್ರ ಮಾಡಬೇಡ" ಎಂದು ಹೇಳುತ್ತಲೆ, ನನ್ನ ಪ್ರಾಣ
ಅಂಗೈಯಳಿದಲ್ಲಿ ಪತರಗುಡತೊಡಗಿತು .
ಈ ರೌರವ ಸಮಸ್ಯೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಹೊಳೆಯದೆ ವಹಿಸಿದ ಆ ಒಂದು
ಕ್ಷಣದ ಮೌನವನ್ನೇ ಅಂಗೀಕಾರವೆಂದು ಅಪಾರ್ಥ ಮಾಡಿಕೊಂಡ ಗೌಳೀಯರ ಕ್ರಿಷ್ಟಪ್ಪ "ಇದ್ರಾಗ
ಯೋಚ್ನೆ ಮಾಡೋದೇನೈತಪ್ಪಾ ಶಾಮಂಣಾ... ಇಂಥ ಆಸೇನೆ ಎಲ್ರೂ ಹೇಳ್ಯಾರೇನು? ನೀನೇನು
ಯೋಚ್ನೆ ಮಾಡಬ್ಯಾಡ... ಕಾಶಿಯಾತ್ರೆಗೆ ಐವತ್ಸಾವ್ರ ಹೋಗ್ರಿ ನಾನು ಕೊಡ್ತೀನಿ...
ಈಗಿಂದೀಗ್ಲೇ ಕಾರೋ, ವ್ಯಾನೋ ಗೊತ್ತುಮಾಡಿಬಿಟ್ರಾಯ್ತು... ಹೆಣನ ಭಾಳ ಹೊತ್ತು
ಇಟ್ಕಳ್ಳಂಗಿಲ್ಲ... ಆಗ್ಲೆ ವಾಸ್ನೆ ಬರಲಿಕ್ಕತ್ತೈತಿ" ಎಂದು ಮುಖಕ್ಕೆ ಗಾಳಿ ಹಾಕಿಕೊಂಡ ಧೋತರದ
ಚುಂಗಿನಿಂದ. ಅದೇ ಹೊತ್ತಿಗೆ ಪರದೆ ಮರೆಯಲ್ಲಿ ನಿಂತುಕೊಂಡಿದ್ದ ಹೆಂದತಿ ವರಲಕ್ಷ್ಮಿ,
"ಒಪ್ಪಿಕೊಂಡು ಬಿಡ್ರೀ... ಮದುವೆಯಾದ್ರೆ ವಿಶ್ವನಾಥನ ದರ್ಶನ ಮಾಡ್ತೀನಂತ ಹರಕೆ ಹೊತ್ಕೊಂದಿದ್ದೆ...
ಹಿರಿಯರ ಆಸೇನೂ ಪೂರೈಸಿದಂತಾಯ್ತು. ನಾವೂ ಎರಡು ದಿನ ಇದ್ದು ಹರಕೆ
ತೀರಿಸಿಕೊಂದಂತೆಯೂ ಆಗ್ತದೆ..." ಎಂದು ಸ್ಪಷ್ಟವಾಗಿ ಹೇಳಿದಳು. ಎಲ್ಲರೂ ಅದಕ್ಕೆ "ಹೋ
ಹೋ ಹ್ಹಾ ಹ್ಹಾ" ಅಂದರು. ಇವರೆಲ್ಲರು ಜಮಾಯಿಸಿರುವುದು ತಾತನವರ ಶವಸಂಸ್ಕಾರ ಮಾಡಲಿಕ್ಕಲ್ಲ...
ನನ್ನ ಸಂಸ್ಕಾರ ಮಾಡಿಕೊಂಡು ಹೋಗಲಿಕ್ಕೆ ಬಂದಿರುವರೆಂದುಕೊಂಡೆ. ದುರದಲ್ಲಿ
ಕಮಲಾಕರನೂ, ಜಲಜಾಕ್ಷಿಯೂ ನನ್ನ ಫಜೀತಿಯನ್ನೇ ಆನಂದದ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು.
ಎಲ್ಲರಿಗೂ ಕೇಳಿಸುವಂತೆ "ಏನ್ರಿ ಇದು ನೀವೆಲ್ರು ಸೇರಿ ಆಡ್ತಿರೋ ಮಾತು? ವಿಲ್ ಬರೆದಿಟ್ಟಿರೋರ
ಗಂಟೆನು ಹೋಗ್ತದ್ರೀ... ಹಾಳಾಗೋನು ನಾನು ತಾನೆ? ಕಾಶಿ ಅಮ್ದ್ರೇನು ಬೋರ್ನಳ್ಳಿ,
ಕೋಡಿಹಳ್ಳಿ ನಡುವೆ ಅದೆ ಅಂತ ತಿಳ್ಕೊಂಡಿರೇನು? ತಾತನ ಆತ್ಮ ಸ್ವರ್ಗಕ್ಕೆ ಹೋಗದಿದ್ರೂ ಚಿಂತೆ
ಇಲ್ಲ... ನಾನು ಮಾತ್ರ ಅವರ ಶವ ಸಂಸ್ಕಾರವನ್ನು ಇಲ್ಲೆ ಮಾಡೋದು... ಇಷ್ಟ
ಇದ್ದೋರು ಇರಬೌದು. ಇಷ್ಟ ಇಲ್ದೋರು ಹೊರಟುಹೋಗಬೌದು. ಇದ್ಕೆ ನನ್ನ
ಅಭ್ಯಂತರವೇನೂ ಇಲ್ಲ" ಎಂದು ಕಡ್ಡಿ ಮುರಿದಂತೆ ನುಡಿದುಬಿಟ್ಟೆ. ನಾನಾಡಿದ ಮಾತು
ಅವರೆಲ್ಲರ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಎಂಥೋರ ವಂಶದಲ್ಲಿ ಹುಟ್ತಿದ್ದಾನಲ್ಲಪ್ಪಾ...
ಎಂದು ಚಿಂಚಿಣಿ ಶಾಸ್ತ್ರಿಗಳು ಉತ್ತರೀಯ ಕೊಡವಿದರೆ, ಶ್ರೀಕರಾಚಾರ್ಯರು ಶಾಮಂಣ... ಪರಮೇಶ್ವರ
ಶಾಸ್ತ್ರಿಗಳು ಮಹಾ ಪವಾಡ ಪುರುಷರು. ಅವರ ಆತ್ಮ ಅತಂತ್ರ ಸ್ಥಿತಿಯಲ್ಲಿ ಉಳಿದರೆ
ಲೋಕಕ್ಕೆ ಒಳ್ಳೆಯದಾಗೊಲ್ಲ... ನೀನೇ ಅನುಭವಿಸ್ತೀಯ ನೋಡ್ತಿರು ಎಂದು ಧೋತರದ
ಕಚ್ಚೆ ಸರಿಪಡಿಸಿ ಬಿಗಿದರು. "ನು ಶಾಮಂಣ... ಐವತ್ಸಾವ್ರ ಕೊಡ್ತೀನಂದ್ರೂ ಕೇಳ್ತಿಲ್ಲಲ್ಲ
ನೀನು... ಆಗ್ಲಿ ನಾನು ಮಾತ್ರ ಚಾವತ್ತು ಇಲ್ಲಿರೋಲ್ಲ..." ಎಂದು ಮೀಸೆ ತಿರುವುತ್ತ ಗೌಳೇರ
ಧಣಿ ಅಲ್ಲಿಂದ ಕಾಲ್ತೆಗೆದನು. ನೋಡು ನೋಡುವಷ್ಟರಲ್ಲಿ ಬಂದಿದ್ದವರ ಪೈಕಿ ಅನೇಕರು
ನನಗೆ ಹಿಡಿ ಹಿಡಿ ಶಾಪ ಹಾಕುತ್ತ ಅಲ್ಲಿಂದ ಹೊರಟು ಹೋದರು. ನನ್ನ ತಾಯಿ ಬಾಯಿಗೆ ಸೆರಗಿಟ್ಟು
ಎಂಥ ನಾಸ್ತಿಕ ಮಗನನ್ನು ಹೆತ್ತೆನಲ್ಲಾ... ಶ್ರೀರಾಮ! ಮಾಮನವರ ಬದಲು ನನ್ನಾದರೂ ವೈಕುಂಟಕ್ಕೆ
ಕೊಂಡೊಯ್ಯ ಬಾರದಿತ್ತೇ?" ಎಂದು ಪರಿಪರಿಯಾಗಿ ರೋದಿಸುತ್ತ ಒಳಗೆ ಹೋದಳು.
ನಿಧಾನವಾಗಿ ಹತ್ತಿರ ಬಂದ ಕಮಲಾಕರ, ಜಲಜಾಕ್ಷಿಯವರಿಗೆ ಹೇಳಿದೆ, ಈ ಸಂದರ್ಭದಲ್ಲಿ ನೀವೇ
ನಮ್ಮ ಬಂಧುಬಳಗ ಎಲ್ಲ, ನಮ್ಮೂರೇ ನಮ್ಗೆ ಕಾಶಿ. ಊರ ಹೊರಗೆ ಹರಿಯುತ್ತೀರೋ
ಹುಲುಲಿ ಹಳ್ಳವೇ ಗಂಗೆ, ಯಮುನೆ ಎಲ್ಲ. ಚಂಡ್ರಜ್ಜನ ತಗ್ಗೆ, ಮಣಿಕರ್ಣಿಕಾ ಘಾಟ್..."
ಎಂದೆ. ಹೇಳಲಾಗದೆ ಗದ್ಗಿತನಾಗಿ ಬಾಯಿಗೆ ವಲ್ಲಿ ಅಡ್ಡ ಇಟ್ತುಕೊಂಡು ಬಿಕ್ಕಿದೆ. ಅವರು
ಸಮಾಧಾನಪಡಿಸಿದರು.
ಸ್ವಲ್ಪ ಹೊತ್ತಿನಲ್ಲಿ ಶವ ಸಂಸ್ಕಾರದ ಕಳೆ ಇಇದುಹೋದಂತೆ ನನ್ನ ದುಃಖ ಮತ್ತಷ್ಟು ಹೆಚ್ಚಿತು.
ವೈದಿಕದ ಮೇಲೆ ಬದುಕುತ್ತಿದ್ದ ನಮ್ಮ ತಾತನವರು ಈ ದೇಶದ ಮಹಾರಾಜರಿಗೆ,
ಕೋಟ್ಯಧೀಶರಿಗೆ ಇರುವ ಆಸೆ ಇಟ್ಟುಕೊಡಿದ್ದರಲ್ಲ? ಇದನ್ನೇ ನೆಪ ಮಾಡಿಕೊಂಡು ನೆರೆದಿದ್ದ
ಹಲವಾರು ವೈದಿಕರು ನನ್ನನ್ನು ಸಾಲಗಾರನನ್ನಾಗಿ ಮಾಡಲು ಯೋಚಿಸಿದ್ದರಲ್ಲಾ? ಹೆತ್ತ
ಮಗನ ಸಂಕಟವನ್ನು ತಾಯಿಯಾದವಳು ಅರ್ಥಮಾಡಿಕೊಳ್ಳದೆ ಹೋದಳಲ್ಲ? ತಾಳಿ ಕಟ್ಟಿದ
ಗಂಡನ ಆರ್ಥಿಕ ಪರಿಸ್ಥಿತಿಯನ್ನು ಹೆಂಡತಿ ಅರ್ಥಮಾಡಿಕೊಳ್ಳಲಿಲ್ಲವಲ್ಲಾ?...
"ಹೆದರ್‍ಕೋಬೇಡ ಶಾಮಣ್ಣಾ... ನಾವಿದ್ದೀವಿ" ಕಮಲಾಕರ ನನ್ನನ್ನು ಅಪ್ಪಿಕೊಂಡು ಸಂತೈಸಿದ.
ಅವನ ಕಂಣಲ್ಲೂ ನೀರು ಬಾರದೆ ಇರಲಿಲ್ಲ.
ಕಟುಕರ ವಿಠೋಬ ಅದೇ ಹೊತ್ತಿಗೆ ಹತ್ತಾರು ಜನರೊಡನೆ ಬಂದ. "ಎಲಾ ಗೌಳೇರ ಕಿಷ್ಟಾ, ಸಾಲ
ಕೊಟ್ಟಂತೆ ಮಾಡಿ ಶಾಸ್ತ್ರಿಗಳ ಇನ್ನೊಂದು ಮನೆಯನ್ನು ಲಪಟಾಯಿಸಲು ನೋಡ್ದೆಲ್ಲೋ...
ನಿನ್ಗೆ ದೇವರು ಒಳ್ಳೇದು ಮಾಡಲ್ಲ ಕಣೋ ಮಾಡೋದ್ದಿಲ್ಲ... ಕಣೋ ಮಾಡೊದಿಲ್ಲ... ನೋಡ್ತಾ
ಇರು... ಮುಂದೆ ನೀನೇನಾಗ್ತೀ ಅಂತ" ಎಂದು ಮುಂತಾಗಿ ಗೊಣಗಿದ.
ಆತ ಕರೆ ತಂದ ಗುಂಪಿನಲ್ಲಿದ್ದ ವರದಾಚಾರ್ಯರು, ನ್ಯಾಸತ್ರಯಗಳಾದ ಸೃಷ್ಟಿ ಸ್ಥಿತಿ ಸಂಹಾರ
ಸ್ಥಿತಿಗಳ ಆಳ ಅಗಲಗಳನ್ನು ಅರ್ಥಮಾಡಿಕೊಂಡಂಥವರು, ಭೋಕ್ತೃತ್ವ ಸಾಧನವಾದ ಪುರೀಂದ್ರಿಯವನ್ನು
ಹದ್ದು ಬಸ್ತಿನಲ್ಲಿಟ್ಟುಕೊಂಡು ಬಡತನದಲ್ಲಿ ಬೆಂದು ಅರಳಿದಂಥವರು. ಸದಾ ‘ಜ್ಞಾತು ಮಿಚ್ಛ
ಜಿಜ್ಞಾಸಃ’ ಎಂಬಂತಿರುವರು. ಋಗ್ವೇದ, ಯಜುರ್ವೇದಗಳನ್ನು ಆಳವಾಗಿ ಅಭ್ಯಾಸ ಮಾಡಿದಂಥವರು.
ಹಾಗೆಯೇ ಶವ ಸಂಸ್ಕಾರದ ವಿಷಯದಲ್ಲಿ ಪಾರಂಗತರೂ ಆಗಿರುವವರು. ಜ್ಯೋತಿಷ್ಯ ಮತ್ತು
ವೈದಿಕದಲ್ಲಿ ನಮ್ಮ ತಾತನವರು ಮಿಗಿಲಾಗಿದ್ದರೆ ವರದಾಚಾರ್ಯರು ಅವರ ಉತ್ಸರ್ಜನ
ಉಪಾಕರ್ಮಗಳಲ್ಲಿ ಎತ್ತಿದ ಕೈ ಎನಿಸಿಕೊಂಡವರು. ಉಪನಯನ ಮತ್ತು
೩೬೫
ಶವಸಂಸ್ಕಾರಗಳೆರಡೂ ಒಟ್ಟಿಗೆ ಎದುರಾಗಿದ್ದ ಅಚ್ಯುತಗೊಂಡಿಯವರ ಮನೆಯಲ್ಲಿ ಹಿಂದೊಮ್ಮೆ
ಇವರು ಮತ್ತು ಕೀರ್ತಿಶೇಷರು ಒಟ್ಟಿಗೆ ಸೇರಿದ್ದರು. ಮನುಷ್ಯನಾದವನಿಗೆ ಹುಟ್ಟು ಮುಖ್ಯವೋ?
ಸಾವು ಮುಖ್ಯವೋ? ಎಂಬ ಪ್ರಶ್ನೆ ಎತ್ತಿಕೊಟ್ಟಿದ್ದು ಶ್ರೀಯುತ ಗೊಂಡಿಯವರೆ. ಕೀರ್ತಿಶೇಷರು
‘ಹುಟ್ಟು’ ಎಂಬ ಶಾಖೆಪರವಾಗಿ ನಿಂತುಕೊಂಡರೆ ವರದಾಚಾರ್ಯರು ಸಾವಿನ ಪರವಾಗಿ ನಿಂತುಕೊಂಡರು.
ಹುಟ್ಟುವವನು ಸಾಯುತ್ತಾನೆ ಎಂದೋ; ಸತ್ತವನು ಹುಟ್ಟುತ್ತಾನೆ ಎಂದೋ, ಸಾಯಲಿಕ್ಕಾಗಿ ಹುಟ್ಟುತ್ತಾನೆ
ಎಂದೋ, ಹುಟ್ಟುವುದಕ್ಕಾಗಿ ಸಾಯುತ್ತಾನೆ ಎಂದೋ ಇತ್ಯಾದಿ ಇತ್ಯಾದಿ ವಾದ ಮಾಡುತ್ತಾ ಮಾಡುತ್ತಾ
ಅರ್ಥವಾಗದ ತಾತ್ವಿಕವಾದ ಜೇಡರ ಬಲೆಯನ್ನೇ ಸೃಷ್ಟಿಸಿಬಿಟ್ಟರು.
ಅವರ ವಾದವನ್ನು ಅದುವರೆಗೆ ಕೇಳುತ್ತಿದ್ದ ಬೆಸ್ತರ ಬಸಪ್ಪನು ತಡೆಯಲಾರದೆ "ಹುಟ್ಟೋದು
ಸಾಯೋದು ಇವೆಲ್ಡು ಬ್ಯಾಳೆ ಕಾಳಿದ್ದಂಗ್ರೀ ಅಪ್ಪೋರಾ... ಅವೆಲ್ಡು ಬ್ಯಾಳಿ ಒಂದಕ್ಕೊಂದು
ಅಂಟಿಕಂಡಿದ್ರೆರೀಯಪ್ಪಾ ಮೊಳಕೆ ಒಡೆಯೋದು, ಬೆಳೆಯೋದು... ಹಂಗೇರಿ ಇದೂ...ಹುಟ್ಟು
ಸಾವು ಎಲ್ಡು ಇದ್ರೇನೆ ಬದುಕು ಸಂಸಾರ, ಒಳ್ಳೇದು ಕೆಟ್ಟದ್ದು ಎಲ್ಲಾನೂ... ಏನೋ ತಿಳೀದ
ಹಳ್ಳಿ ಮುಕ್ಕ... ತಡೀಲಾರ್‍ದೆ ಅಂದು ಬುಟ್ಟೆ... ಇದ್ರಾಗೇನಾ ತಪ್ಪಿದ್ರೆ ಎಕ್ಕಡ ತಗೊಂಡು ಹೊಡ್ದು
ಬುದ್ದಿಹೇಳ್ರಿ ತಂದ್ಯೋರಾ" ಎಂದು ಹರಳು ಉರಿದಂತೆ ನುಡಿದು ಕೂತುಬಿಟ್ಟನು.
ಬೆಸ್ತರವನ ಮಾತು ಕೇಳಿ ಆ ಅದ್ವೈತಿಗಳೀರ್ವರೂ ಅವಕ್ಕಾದರು. ಬಸಪ್ಪನನ್ನು ಮುತ್ತಿನಂಥ
ಮಾತುಗಳನ್ನು ಒಪ್ಪಿಕೊಳ್ಳುವುದೋ? ತಿರಸ್ಕರಿಸುವುದೋ? ಎಂಬ ಗೊಂದಲ ಅವರಿಬ್ಬರನ್ನು
ಕಾಡಿತು. ಮೆಚ್ಚಿದರಂತೂ ಶೂದ್ರರಿಗೆ ಸಲಿಗೆ ಕೊಟ್ಟಂತೆಯೇ ಲೆಕ್ಕ ಎಂದುಕೊಂಡರೋ ಏನೋ?
ಅವರಿಬ್ಬರ ಪರವಾಗಿ ಶ್ರೀಯುತಗೊಂಡಿಯವರು ಸಿಟ್ಟಿನಿಂದಲೂ ಒಳಗೊಳಗೆ (ಮರ್ಯಾದೆ
ಉಳಿಸಿದೆ ಎಲೆ ಬೆಸ್ತಮುಂಡೇ ಮಗ್ನೇ) ಹೆಮ್ಮೆಯಿಂದಲೋ ಬಸಪ್ಪನ ಕಡೆ ನೋಡಿ "ಲೇ ಬಸ್ಯಾ...
ಹೊಳಿ ಹಳ್ಳದಾಗ ನೀರಿಲ್ಲ ನಿಡಿ ಇಲ್ಲ ಇಷ್ಟು ಮಾತಾಡ್ತಿ... ಸಕಾಲಕ್ಕೆ ಮಳಿ ಬಿದ್ದಿದ್ರೆ ತತ್ವಾನೇ
ಅರಗಿಸ್ಕೊಂಡು ಕುಡ್ದುಬಿಟ್ಟಿರ್‍ತಿದ್ಯೋ ಏನೋ? ಸುಮ್ಮನಿರಾಕ ಗಂಟೇನ್ತಗಂತೀ... ದೊಡ್ಡೋರ
ಮಾತಿನಾಗ ಬಾಯಿ ಹಾಕ್ಬಾರ್ದಪ್ಪಾ... ಒಳ್ಳೇದಾಗಕಿಲ್ಲ... ತಿಳೀತಾ" ಎಂದು ಹೇಳಿದರು. ಅದಕ್ಕೆ ಹೌದೆಂಬಂತೆ
ತಲೆ ಅಲ್ಲಾಡಿಸಿದನು.
ಅನಂತರ ವೈದಿಕರೀರ್ವರು ತಂತಮ್ಮ ವೃತ್ತಿಗಳನ್ನು ಚರ್ಚೆಯ ನಿಕಷಕ್ಕೆ
ಒಳಪಡಿಸಿಬಿಟ್ಟರು. ಉಪಸಂಹಾರಕ್ಕೆ ಬಂದು ಕೀರ್ತಿಶೇಷರು ಆಚಾರಿ ನಿನ್ಗೆ ಶಾಸ್ತ್ರೋಕ್ತವಾಗಿ
ಉಪನಯನ ಇತ್ಯಾದಿ ಕರ್ಮಕಾಂಡ ಆದಂತಿಲ್ವೋ? ಅಂದರು. ಅದರಿಂದ ಕೆರಳಿದ ವರದಾಚಾರ್ಯರು
"ಶಾಸ್ತ್ರಿಗಳೇ ಮಾತಾಡೀ ಮಾತಾಡಿ ಏಕ ಏವ ಪರೋ ಹ್ಯಾತ್ಮಾ ಸರ್ವೇಷಾಯಪಿ ದೇಹಿನಾಮ್ (ಎಲ್ಲಾ
ಪ್ರಾಣಿಗಳಿಗೂ ಒಂದೇ ಒಂದು ಶ್ರೇಷ್ಟವಾದ ಆತ್ಮ ಇರುವುದು) ಅಂತ ಭಾಗವತದಲ್ಲಿ
ಹೇಳಿರೋದು ನಿಮ್ಗೂ ನೆನಪಿರಬೌದು. ಆ ಅತ್ಮಕ್ಕೆ ಸಂಸ್ಕಾರ ಕೊಡೋದ್ರಲ್ಲೇ ಪುರುಷಾರ್ಥ
ಇರೋದು ಸ್ವಾಮೀ... ಆ ದೇವರ ಆಶೀರ್ವಾದವಿದ್ರ್ ನಾನೇ ನಿಮ್ಮ ಆತ್ಮಕ್ಕೆ ಸದ್ಗತಿ ಸಿಗೋ
ಏರ್ಪಾಡು ಮಾಡ್ತೀನಿ... ನೋಡ್ತಿರಿ" ಎಂದರು ಅಸಹನೆಯಿಂದ.
"ಹೋಗೋ ಹೋಗು ವರದಽಽ... ನಿನ್ನ ಕೈಲಿ ಆತ್ಮ ಸಂಸ್ಕಾರ ಹೊಂದಲಿಕ್ಕೆ ನಾನೇನು ಪಾಪ ಮಾಡಿನ್ವೋ...
ನನ್ನ ಶವ ಸಂಸ್ಕಾರವಾಗಲೀ; ಅಸ್ಥಿ ನಿಮಜ್ಜನವಾಗಲೀ ನಡೆಯೋದು ಕಾಶೀಕ್ಷೇತ್ರದ ಮಣಿಕರ್ಣಿಕಾ
ಘಾಟ್‌ನಲ್ಲಿ ನೋಡ್ತಿರು" ಎಂದಂದೇ ಶಪಥ ಮಾಡಿದರು ನಮ್ಮ ತಾತನವರು. ಆ
೩೬೬
ಕ್ಷಣ ಮಾಡಿದ ನಿರ್ಧಾರವನ್ನು ದೈನಂದಿಕ ಗೋಜಿನ ನಡುವೆ ನೆನಪಿನಲ್ಲಿಟ್ಟುಕೊಂಡು ಬರೆದಿರುವುದೇ
ದೊಡ್ಡ ಸಂಗತಿ.
"ಅಂತೂ ಪೂಜ್ಯ ಶಾಸ್ತ್ರಿಗಳ ಶವ ಸಂಸ್ಕಾರ ನಡೆಸಿಕೊಡಬೇಕಾಗಿ ಬಂತಲ್ಲ... ಇದೇ ನನ್ನ ಸೌಭಾಗ್ಯ...
ನೀನೆನು ಯೋಚಿಸಬೇಡ ಶಾಮಣ್ಣ... ಎಲ್ಲ ಮುಗಿಸಿಕೊಟ್ಟೇ ನಾನು ಇಲ್ಲಿಂದ ಹೊರಡುವುದು...
ಆಯ್ತಾ" ಎಂದು ಆಚಾರ್ಯರು ನನ್ನ ಮೈದಡವಿ ಧೈರ್ಯ ತುಂಬಿದರು...
ನಾನು ನೆಮ್ಮದಿಯಿಂದ ಉಸಿರುಬಿಟ್ಟೆ.
ಆಗಲೇ ವಿಷೇಶ ಸ್ನಾನ ಮಾಡಿಕೊಂಡು ಬಂದಿದ್ದ ವರದರು ಶವದ ಪಕ್ಕ ಕೂತುಕೊಂಡು
ತಮ್ಮ ಧದ ಹದಿನೈದು ಸ್ಥಾನಗಳಿಗೆ ಭಸ್ಮೋದ್ದೂಲನ ಮಾಡಿಕೊಂಡು ವಿಷೇಶ ಶೋಭೆಯಿಂದ
ಕಂಗೊಳಿಸುತ್ತ ಘಂಟಾನಾದದಿಂದಲೂ : ನೆರದಿದ್ದ ಜನರ "ಉಘೇ ಉಘೇ ಚಾಂಗು ಭಲರೇ" ಎಂದು
ಕೂಗಿದ ಧ್ವನಿಯಿಂದಲೂ ಎಚ್ಚೆತ್ತ ನನ್ನ ತಾಯಿಯು ತನ್ನ ಸೊಸೆಯ ಸಹಾಯದಿಂದ ಹೊರಗಡೆ
ಬಂದು "ಏನೋ ಆಚಾರಿ... ನನ್ನ ಮಾವನವರ ಸಂಸ್ಕಾರ ಮಾಡ್ಲಿಕ್ಕೆ ಬಂದಿದ್ದೀಯಲ್ಲ?...
ನಿನಗೆಷ್ಟೋ ಧೈರ್ಯ... ಅವರು ಸಾಯೋ ಮುಂದುಗಡೆ ಬರೆದಿರೋ ಮರಣ ಶಾಸನದಲ್ಲಿ
ಉಲ್ಲೇಖಗೊಂಡಿರೋ ಸಂಗತಿಯನ್ನು ನಿನ್ಗೂ ಹೇಳ್ಬೇಕೇನು? ನಿನ್ನಿಂದ ಸಂಸ್ಕಾರಗೊಂಡ್ರೆ ಆ
ಅತ್ಮ ಯಾವ ಲೋಕಕ್ಕೂ ಹೋಗದೆ ಅತಂತ್ರವಾಗಿ ಉಳಿದುಬಿಡುತ್ತೆ... ಹೊರಡು... ಮೊದ್ಲು
ಹೊರಡು ಇಲ್ಲಿಂದ... " ಎಂದು ರಂಪಾಟ ಆರಂಭಿಸಿದಳು. ಇದರಿಂದ ವಾತಾವರಣದ ನೋವಿಗೆ ಮತ್ತೆರಡು
ಕೋಡು ಬಂದವು.
ವರದಾಚಾರ್ಯರು ಮಾತ ಶತರುದ್ರೀಯ, ಸ್ವೇತಾಶ್ವತರ, ಅರ್ಥವಶಿರ ಅರ್ಥವಶಿಖಾ
ಕೈವಲ್ಯಗಳನ್ನು ಜಪಿಸುತ್ತ ಧ್ಯಾನ ಮುದ್ರೆಯಿಂದ ಒಂಚೂರು ವಿಚಲಿತರಾಗಲಿಲ್ಲ.
ಟೆಂಗಿನ ಕಾಯಿನ ಮೇಲೆ ಹಚ್ಚಿದ್ದ ಉಂಡೆ ಕರ್ಪೂರ ಮಾತ್ರ ಜಾಜ್ವಲ್ಯಮಾನವಾಗಿ ಉರಿಯುತ್ತಿತ್ತು.
"ಅಯ್ಯೋ ಭಂಡ!... ಮಾನ ಇಲ್ಲದವನೇ... ಕೊಳದಲ್ಲಿ ಬಕ ಕೂತ್ಕೊಂಡಂತೆ
ಕೂತಿರುವೆಯಲ್ಲೋ... ಎದ್ದು ಹೊರಡೋ ಮೊದ್ಲು" ಎಂದು ನನ್ನ ತಾಯಿ ಹುಚ್ಚಿಯಂತೆ
ಅಬ್ಬರಿಸತೊಡಗಿದ್ದು ಸ್ರಿದ್ದ್ದ ಹಲವರಿಗೆ ಸರಿ ಕಾಣಲಿಲ್ಲ.
"ನಮ್ಮಾ ತಾಯಿ... ನೀವು ಮಾಡ್ತಿರೋದು? ಎಲ್ಲಾ ವೈಮನಸ್ಸು ಮರ್‍ತು ಅವರು ಬಂದು ವಿಧಿಗೆ
ಕೂತಿರೋದೆ ದೊಡ್ಡ ವಿಷಯ... ನೆಮ್ಮದಿ ತಾಳೋದು ಬಿಟ್ಟು ಹೀಗೆ ತೊಂದರೆ ಕೊಡ್ತಿದ್ದೀಯಲ್ಲ
ಇದು ನ್ಯಾಯವೇನಮ್ಮಾ" ವರದರ ಷಡ್ಡಕರಾದ ರಾಮಾಚಾರ್ಯರು ಬುದ್ಧಿವಾದ
ಹೇಳಿದರು.
ಅದರಿಂದ ಕೆರಳಿದ ನಮ್ಮ ತಾಯಿ "ಏನೋ ರಾಮಾ ನಿಮ್ಮ ಕರಾಮತ್ತು ಹೆಂಣಾದ ನನಗೆ ಅರ್ಥ
ಆಗಲ್ಲ ಅಂಥ ತಿಳ್ಕೊಂಡಿರೇನ್ರೋ" ಎಂದು ತಾನುವಿಧವೆ ಎಂಬ ಪರಿವೇ ಇಲ್ಲದೆ ಮುಂದಕ್ಕೆ
ಧಾವಿಸಿದಳು.
ನನ್ನ ತಾಯಿಯೊಳಗೆ ಅರ್ಥವಾಗದ ಮತ್ತು ಕುಲಗೋತ್ರಗಳಿಲ್ಲದ ದೆವ್ವಗಳು ಹೊಕ್ಕಿಕೊಂದಿವೆ
ಎಂದು ಭಾವಿಸಿದನಾನು ಚಂಗನೆ ಮುಂದಕ್ಕೆ ಜಿಗಿದೆ.
"ನಾನೇನು ಪಾಪ ಮಾಡಿದ್ದೀನಂತ ಹೀಗೆ ತೊಂದ್ರೆ ಕೊದ್ತಿದ್ದೀಯ ಅಮ್ಮಾ... ದಯವಿಟ್ಟು
ಒಳಗಡೆ ಹೋಗಿ ನನ್ನ ಮತ್ತು ನನ್ನ ತಾತನವರ ಮರ್ಯಾದ ಕಾಪಾಡಮ್ಮ" ಎಂದು
ಕೈಮುಗಿದು
೩೬೭
ಪರಿಪರಿಯಾಗಿ ಬೇಡಿಕೊಳ್ಳತೊಡಗಿದೆನು.
ಮತ್ತೊಮ್ಮೆ ಜನರು "ಉಘೇ ಉಘೇ ಚಾಂಗು ಭಲರೇ" ಎಂದು ಕೂಗಿದರು.
"ಇಲ್ವೋ ವಂಶಘಾತಕನೇ... ನಿನ್ನ ತಾತನವರ ಒಂದು ಚಿಕ್ಕ ಆಸೆಯನ್ನು ಪೂರೈಸಲಾಗದ
ನೀನು ಅವರ ಮೊಮ್ಮಗನೋ... ನೀನು ಪ್ರತಿ ತಿಂಗಳು ತಗೊಳ್ತಿರೋ ಸಾರ್ಕಾಅರಿ ಸಂಬಳ ನಿನ್ನಿಂದ
ಮಾಡಬಾರದ್ದನ್ನೆಲ್ಲಾ ಮಾಡಿಸ್ತಿದೆ... ನನ್ನ ಮಾವನವರ ಕಳೇಬರ ಇಲ್ಲೇ ಕೊಳೆತು ಹೋದರೂ
ಚಿಂತೆ ಇಲ್ಲ... ನಾನು ಮಾತ್ರ ಆ ಭಂಡ ವರದನನ್ನು ಸಂಸ್ಕಾರ ಮಾಡ್ಲಿಕ್ಕೆ ಬಿಡೋದಿಲ್ಲ"
ಎಂದು ಚೀರಿಕೊಂಡಳು.
ತನಗೂ ಈ ರಂಪಾಟಕ್ಕೂ ಯಾವ ಸಂಬಂಧವಿಲ್ಲವೆಂಬಂತೆಯೂ: ನಿರ್ವಿಕಲ್ಪ ಚಿತ್ತದಿಂದಲೂ ನಿಂತು ನೋಡುತ್ತಿದ್ದ
ಹೆಂಡತಿ ಕಡೆ ದುರುಗುಟ್ಟಿ ನೋಡಿದೆ.
ಮಾತೇ ರುದ್ರ ಶಿವಾತನೋ...
ಉಘೇ ಉಘೇ ಚಾಂಗು ಭಲರೇ
ನನಗೆ ಸಿಟ್ಟು ತಡೆಯಲಾಗಲಿಲ್ಲ. ಒಂದು ಕ್ಷಣ ಕವಿದ ಮಂಕಿನಲ್ಲಿ ತಾಯಿಯ ಕೆನ್ನೆಗೆ ಒಂದು
ಏಟು ಕೊಟ್ಟೆ. ಹೆಂಡತಿಗೂ ಸಹ. "ಹೋ ಅಯ್ಯಯ್ಯೋ... ಕೊಂದು ಹಾಕಿಬಿಡೋ ನಮ್ಮಿಬ್ಬರನ್ನೂ..."
ಎಂದು ಬಾಯಿಬಾಯಿ ಬಡಿದುಕೊಂಡ ಅವರೀರ್ವರನ್ನೂ ಅ
ಡುಗೆಮನೆಗೆ ತಳ್ಳಿ ಬಂದೆ.
ಶತ್ರುತ್ವ ಕ್ರೋಧ ಯಾರಲ್ಲಿ ಹೇಗೆ ಅರಳುವವೋ? ಯಾವ ರೀತಿ ಸ್ಪೋಟಿಸುವುವವೋ?
ಯಾರಿಗೂ ತಿಳಿಯದು. ಮುಖ್ಯವಾಗಿ ನೂರ್ಮಡಿಯಾಗಿ ನನಾಗೇ ನೋವಾಯಿತು.
"ವಿವಾದಲ್ಲಿ ಸಿಲುಕಿ ಈ ಹೆಣ ಶಾಶ್ವತವಾಗಿ ಓಣಿಯಾಲೇ ಉಳಿದುಬಿಟ್ಟರೆ ನಾವು ಮನೆ ಬಾಡಿಗೆ ಹಿಡಿದು
ವಾಸಿಸುವುದಾದರೂ ಹೇಗೆ?" ಬಾಡಿಗೆಗೆಂದು ರುದ್ರನಾಯಕನ ಖಾಲಿ ಮನೆ ನೋಡಲೆಮ್ದು ಬಂದಿದ್ದ
ಹೆಡ್‌ಕಾನ್‌ಸ್ಟೇಬಲ್ ನಾಗೇಂದ್ರಪ್ಪ ಬ್ರೋಕರ್ ಲಚುಮಯ್ಯನಿಗೆ ಹೇಳುತ್ತಿದ್ದ.
ಲಚುಮಯ್ಯಾ... ನನ್ ಹೆಂಡ್ತಿಗೆ ದೆವ್ವ ಪಿಶಾಚಿ ಅಂದ್ರೆ ಆಗದು... ಆಗ್ಲೆ ಒಂದೆರಡು ದೆವ್ವ
ಆಕೆಯನ್ನು ಹಿಡ್ಕೊಂಡು ಬಿಟ್ಟಿರುವುದು
ಟು ಮಾರಾಯಾ... ಯಾಕಂತೀಯಾ ಆಕೆಯ ಕಂಣುಗಳಿಗೆ ಮಾತ್ರ್ ದೆವ್ವಗಳನ್ನು
ಕಾಣೋ ಶಕ್ತಿ ಇರೋದು. ಆಕೆಯ ಮೈಯೊಳ್ಗೆ ಯಾವ್ದೇ ದೆವ್ವ ಸುಲಭವಾಗಿ ಹೊಕ್ಕೊಂಡು
ಬಿಡ್ತದೆ ನೋಡು" ಎಂದೆಂದೇನೋ ಮಾತಾಡುತ್ತಿದ್ದ ನಾಗೇಂದ್ರಪ್ಪ...
"ಹಳೇ ಮಂದಿ... ಅವ್ರ ಪಾಡಿಗೆ ಅವರ್‍ನ ಬಿಟ್ಟು ಮುಂದಿನ ಕಾರ್ಯಕ್ಕೆ ಗಮನ ಕೊಡಪ್ಪಾ"
ಕತುಗರ ವಿಠೋಬ ತಲೆಗೆ ವಲ್ಲಿ ಸುತ್ತುತ್ತ ಧೈರ್ಯ ತುಂಬಿದ.
ಉಘೇ ಉಘೇ ಚಾಂಗು ಭಲರೇಽಽ
ಹತ್ತಾರು ಜನರು ಹತ್ತಾರು ರೀತಿಯಲ್ಲಿ ಕೆಲಸಕ್ಕೆ ತೊಡಗಿದ್ದರು. ಅವರಲ್ಲಿ ನಾವಿದುವರೆಗೆ
ತುಚ್ಛವಾಗಿ ನೋಡ್ಶಿದ ಶೂದ್ರರೇ ಹೆಚ್ಚು ಇದ್ದರು.
ದಾಮೋದರ, ಶ್ರೀಕಂಠ, ಸುಧೀಂದ್ರ, ಸೂರಿ, ವಾಸುಕೀ ಮೊದಲಾದ ಕಾಲೇಜು ಹಂತದ
ವಿದ್ಯಾರ್ಥಿಗಳು ಅಗ್ರಹಾರದ ತಂತಮ್ಮ ತಂದೆ ತಾತಂದಿರ ಮಾತನ್ನು ಧಿಕ್ಕರಿಸಿ ಬಂದು ನಾನಾ
ಕೆಲಸದಲ್ಲಿ ಭಾಗಿಯಾಗಿರುವುದು ನೋಡಿ ನಾನು ಕರಗಿ ಹೋದೆ. ಅವರಲ್ಲಿ ಪರಿಚಿತರೆಷ್ಟೋ
೩೬೮
ಅಪರಿಚಿತರೆಷ್ಟೋ...
ವೈದಿಕದ ಕೂಪದೊಳಗೆ ಮಂಡೂಕ ಪ್ರಾಯ ರೀತಿಯಲ್ಲಿ ಉಳಿದು ವಾರಿಗೆಯ ಪ್ರಪಂಚವನ್ನು
ದೂರವಿಟ್ಟಿದ್ದ ನನ್ನ ಬಗ್ಗೆ ನನಗೇ ಅಪಾರ ಬೇಸರವಾಯಿತು. ಅದೇ ಹೊತ್ತಿಗೆ ಸರಿಯಾಗಿ
ಚಿಂಚಿಣಿಯ ಪಾಂಡುರಂಗ ಶಾಸ್ರಿಗಳು "ಮಹಾಪರಾಧವಾಯ್ತಪ್ಪಾ ಶಾಸ್ತ್ರೀ ಮಹಾಪರಾಧವಾಯ್ತಪ್ಪಾ
ನನ್ನಿಂದ" ಎಂದು ಕೆನ್ನೆಕೆನ್ನೆ ಬಡಿದುಕೊಳ್ಳುತ್ತ ಬಂದು ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಓಂ ಸಹಸ್ರ ಶೀರ್ಷ್ಯಾಃ... ವೃಣೀಮಹೇ... ಮುಗಿಲಿಗೆ ಮುಟ್ಟಿತ್ತು ಮಂತ್ರೊಚ್ಚಾರ...
ಆಗಲೆ ತಾತನವರ ನಶ್ವರ ದೇಹಕ್ಕೆ ಸ್ನಾನ ಮಾಡಿಸಿ ಶುಭ್ರ ಬಿಳಿ ವಸ್ತ್ರಗಳನ್ನು
ಉಡಿಸಿಜಲಮಿಶ್ರಿತ ಭಸ್ಮದಿಂದ ಆಯಾಯ ಸ್ಥಾನಗಳಲ್ಲಿ ತ್ರಿಪುಂಡ್ರ ಧಾರಣ ಮಾಡಿದ್ದರು,ಗಾಯತ್ರಿ
ಮಂತ್ರೊಚ್ಚಾರಣದಿಂದ ಶುದ್ದೋದಕ ಸಿಂಪಡಿಸಿದ್ದ ಜಾಗದ ಮೇಲೆ ಮಂಚವನ್ನು ಇಟ್ಟು ಅದರ
ಮೇಲೆ ಭಸ್ಮದ ಪುಡಿ ಹರಡಿ ಕಳ್ಬರವನ್ನು ಉದ್ದಕ್ಕೆ ಮಲಗಿಸಿದ್ದರು. ಅದರ ಮೇಲೆ
ಗಂಧ ಹರಡಿದವರೊಬ್ಬರು, ಅಕ್ಷತೆ ಧೂಪ ದೀಪ ಪುಷ್ಪಗಳಿಂದ ಅಲಂಕರಿಸಿದ್ದು ಹಲವು
ಮಂದಿ.
ಅಸ್ಯಾಂ ಗುಣವಿಶೇಶೇಣ ವಿಶಿಷ್ಟಾಯೂಂ... ಎಂದು ಮುಂತಾಗಿ ವರದರುಶುರು ಮಾಡಿದರೆ ಚಿಂಚಿಣಿ
ಶಾಸ್ತ್ರಿಗಳು ಮಂತ್ರೈಸ್ಸಹಯುಷ್ಟೇ ಎಂದು ಮುಕ್ತಾಯಮಾಡಿದರು.
ಅಂಗಳದಲ್ಲಿ ನಿಂತಿದ್ದ ಕಟುಗರ ವಿಠೋಬನಂತೂ ಜಯಮಂಗಳ ಎಂದು ಹಾಡುತ್ತ
ಭವಬಳ್ಳಿಯನ್ನು ಕಿತ್ತಾಡುತ್ತೆ ಎನ್ನುವಷ್ಟರಲ್ಲಿ ಗದ್ಗಿತನಾಗಿ ಶರಣಗಣ ಸಾಕ್ಷಿಯಾಗಿ
ಎನ್ನುತ್ತಲೇ ಗೊಳೋ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದನು. "ಅಳಬ್ಯಾಅಣ್ಣಾ... ನೀನೇ
ಮಕ್ಕಳಂಗೆ ಅತ್ರೆ ನಮ್ ಗತಿ ಹೆಂಗಣ್ಣ" ಎಂದು ಗರಡಿಮನೆ ಹುಡುಗರೆಲ್ಲ ಸಮಾಧಾನ
ಹೇಳತೊಡಗಿದರು.
ಕಟುಗರ ವಿಠ್ಬನ ಕಣ್ಣಲ್ಲಿ ನೀರು ಬಂದದ್ದು ಒಂದು ಐತಿಹಾಸಿಕ ಘಟನೆ ಎಂಬುದಾಗಿ ಭಾವಿಸಿ
ಕಮಲಾಕರ ಆ ದೃಹ್ಯವನ್ನು ಫೋಟೋದಲ್ಲಿ ಸೆರೆ ಹಿಡಿದನು.
ಕಂಣನ್ನು ನೀರಿನ ಕೊಳ ಮಾದಿಕೊಂಡಿದ್ದ ನನ್ನನ್ನು ಸುರೇಶ, ಮಾಧವ ಗಿಡಗಳ ನಡುವೆ
ಕರೆದುಕೊಂಡು ಹೋಗಿ ಮೂರು ಬಿ
ದಿಗೆ ನೀರು ಸುರಿದರು. ಸೊಂತಕ್ಕೊಂದು ಹೆಗಲಿಗೊಂದು ಸೆಲ್ಲೆ ಹಾಕಿದರು. ವರದರು ನನ್ನ
ಮೈಗೆ ಭಸ್ಮಧಾರಣೆ ಮಾಡಿಸಿ ಮಂತ್ರೋದಕ ಸಿಂಪಡಿಸಿದರೆ ಚಿಂಚಿಣಿಯವರು ಭಕ್ತಿಪೂರ್ವಕವಾಗಿ
ಸಾಷ್ಟಾಂಗ ಪ್ರಣಾಮ ಸಲ್ಲಿಸುವಂತೆ ಸೂಚಿಸಿದರು. ಅದರಂತೆ ಮಾಡಿದೆ. ಅವರ ನಿರ್ದೇಶನದಂತೆ
ಕೈಯಲ್ಲಿ ಕೆಂಡವಿದ್ದ ಅಗ್ಗಿಷ್ಟಿಕೆ ಹಿಡಿದುಕೊಂಡೆ. ಆಗಲೆ ಶಾಸ್ತ್ರ ರೀತ್ಯಾ ಸಿದ್ಧಪಡಿಸಿದ್ದ ವಿಮಾನದಲ್ಲಿ
ತಾತನವರ ಕಳೇಬರವನ್ನು ಎತ್ತೊಯ್ದು ಮಲಗಿಸಿದೊಡನೆ ಒಳಗಿನಿಂದ ನನ್ನ ತಾಯಿ ಅಯ್ಯೋ
ಮಾವನವರೆ... ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿ ಹೋಗ್ತಿದ್ದೀರಾ... ನಿಮ್ಮ ಕೊನೆ
ಆಸೆಯನ್ನಾದರೂ ಪೂರೈಸಲಿಲ್ಲಾಲ್ಲಾ ನಿಮ್ಮ ಮೊಮ್ಮಗನಿಗೆ... ಅವನು ಮಾಡ್ತಿರೋ
ಅಪರಾಧವನ್ನು ಹೊಟ್ಟೇಲಿ ಹಾಕಿಕೊಂಡು ಆಶೀರ್ವಾದ ಮಾರಿ... ಎಂದು ಮುಂತಾಗಿ ಅಬ್ಬರಿಸುತ್ತ ಶವದ
ತನ್ನನೆಯ ಕಾಲುಗಳನು ಗೈಯಾಗಿ ಹಿಡಿದುಕೊಂಡಳು. ಆಕೆಯಿಂದ ಅದನ್ನು ಬಿಡಿಸುವಷ್ಟರಲ್ಲಿ
ಹುಡುಗರಿಗೆ ಸಾಕು ಸಾಕಾಯಿ ಹೋಯಿತು.
"ವರದಾಚಾರಿ... ಜೋಪಾನವಾಗಿ ಸಂಸ್ಕಾರ ಮಾಡಿ ಮುಗಿಸಪ್ಪಾ... ನಿನ್ನ ತಂದೆಯವರದೇ
ಶವ ಅಂತ ತಿಳ್ಕೊಂಡು ಅಸ್ಖಲಿತವಾಗಿ ಮಾಡಪ್ಪಾ" ಎಂದು ಆಕೆ ಕೈಎತ್ತಿಮುಗಿಯಲು ಹುಟ್ಟಿದೊಡನೆ
ತಂದೆಯನ್ನು ನುಂಗಿದವರಾದ ವರದರು ಕಂಣುಮುಚ್ಚಿ ತಮ್ಮ ತಂದೆಯವರನ್ನು ಒಂದು
ಹಳೆಯ
೩೬೯
ಫೋಟೋದ ಮೂಲಕ ಕಲ್ಪಿಸಿಕೊಂಡು ತಾವೂ ಗದ್ಗದಿತರಾದರು.
"ಅಯ್ಯೋ ತಾಯಿ... ಎಂಥ ಮಾತಾಡ್ತಿದ್ದೀಯಮ್ಮಾ?... ಇಹಲೋಕ ತ್ಯಜಿಸೋ ಎಲ್ರೂ ನನ್ಗೆ
ತಮಾನ ತಾಯಿ... ದ್ರೋಹ ಬಗೆದು ಣಾನ್ಯಾವ ನರಕಕ್ಕೆ ಹೋಗಲಮ್ಮಾ" ಎಂದು ಸಮಾಧಾನ
ಮಾಡಿದರು. ವರಲಕ್ಷ್ಮಿ ತನ್ನ ಅತ್ತೆಯನ್ನು ಹಿಂದಕ್ಕೆ ಎಳೆದುಕೊಂಡಳು.
ದೇಹದೊಳಗಡಗಿದ್ದ ಜೀವಾತ್ಮನೇ ಪಂಚಭೂತದೊಳಗೊಯ್ಯುತ್ತಿರುವೆಯಾ...
ಗೋಪಿ ಚಿದಾನಂದ ತ
ಬೂರಿ ಮೀಟಲು...
"ದೇಹದೊಳಗನುದಿನವಿದ್ದು ಯಾರಿಗೂ ಹೆಳದೆ ಕೇಳದೆ ಹೋದೆಯಾ ಹಂಸಾಽಽಽ...
ಎಲ್ಲವ್ವನ ಭಕ್ತಾಗ್ರೇಸರನಾದ ಚವುಡನು ಚೌಡಿಕೆಯನ್ನು ಮೀಟಲು...
ಉಘೇ ಉಘೇ ಚಾಂಗು ಭಲರೇಽಽ
ಅಷ್ಟರಲ್ಲಿ ಕಮಲಾಕರ ಕೆಮರಾವನ್ನು ಕಂಣಿಗೆ ಅಡ್ಡ ಇಟ್ಟುಕೊಂಡು ಗಿರಿ ಇಟ್ಟನು.
"ಶಾಸ್ತ್ರಿಗಳ ಶವದೊಡನೆ ಒಂದು ಫೋಟೊ ತೆಗಿತ್ತಿದ್ದೀನಿ ಶಾಮಂಣಾಽಽ... ಈ ಅವಕಾಶ ಮತ್ತೊಮ್ಮೆ
ಹುಡುಕಿದ್ರೂ ಸಿಕ್ತದಾ... ಪ್ಲೀಜ್" ಕಮಲಾಕರ ಎಂದೊಡನೆ ಹೊರಟಿದ್ದ ಎಲ್ಲರಲ್ಲಿ ವಿದ್ಯುತ್ಸಂಚಾರವಾಯಿತು.
ವರಲಕ್ಷ್ಮಿ ತನ್ನತ್ತೆಯೊಡನೆ ಬಂದು ವಿಮಾನದ ಎರಡು ಪಕ್ಕ ನಿಂತರೆ, ಗೋಪಣ್ಣ ಮತ್ತು
ಚಿ
ಚಿಣಿ ಶಾಸ್ತ್ರಿಗಳು ಹೆಗಲ ಮೇಲಿದ್ದ ಉತ್ತರೀಯವನ್ನು ಸರಿಪಡಿಸಿಕೊಂಡು ಮುಖ ಎತ್ತಿದರು.
ಅಗ್ರಹಾರದ ಹುಡುಗರು ಮುಂದಿದ್ದವರು ಶವದ ಸಮೀಪಕ್ಕೆ ಬಂದರು. ಓಣಿಯ ಹುಡುಗರುಪ್ಪಡಿ
ಸಿಕ್ಕ ಸಿಕ್ಕ ಎತ್ತರ ಸ್ಥಳವನ್ನೇರಿ ನಿಂತು ಹಲ್ಲು ಪ್ರದರ್ಶಿದರು. ಹೆಂಗಸರೂ ಹಿಂದೆ ಬೀಳಲಿಲ್ಲ.
ವಾತಾವರಣ ಇದ್ದಕ್ಕಿದ್ದಂತೆ ಬದಲಾದ್ದು ಕಂಡು ಕಮಲಾಕರನಿಗೆ ಬೇಸರವಾಯಿತು.
"ಇದೇನು ಹಿಂಗ್ ನಿಂತ್ಕೊಂಡ್ರಿ... ಮದುವೆ ದಿಬ್ಬಣದ ಫೋಟೋ ಅಲ್ರಿ ನಾನು ತೆಗೀತಿರೋದು
ಶಾಸ್ತ್ರಿಗಳ ಶವ ಸಂಸ್ಕಾರದ ಫೋಟೊವನ್ನು... ಎಲ್ರು ಮುಖದಲ್ಲಿ ಸ್ವಲ್ಪಾದ್ರು ದುಃಖ
ಪ್ರಕಟಿಸಿದ್ರೆ ಮಾತ್ರ ಫೋ ತೆಗೆದದ್ದ್ ಸಾರ್ಥಕ ಆಗ್ತದೆ" ಎಂದು ಸಲಹೆ ನೀಡಿದ.
ಅವನ ಸಲಹೆಯನ್ನು ಗೌರವಿಸಿ ಕೆಲವರು ಬಲವಂತದಿಂದ ಮುಖದಲ್ಲಿ ದುಃಖವನ್ನು ಪ್ರಕಟಿಸಲು
ಪ್ರಯತ್ನಿಸಿದರು. ಕಟುಕರ ವಿಠೋಬಗೆ ಮಾತ್ರ ಎಷ್ಟು ಪ್ರಯ್ತ್ನಿಸಿದರೂ ದುಃಖವನ್ನು ಪ್ರಕಟಿಸಲು
ಸಾಧ್ಯವಾಗಲೇ ಇಲ್ಲ. ಗತಿಸಿದ ಯಾವುದೋ ಒಂದು ದುಃಖ ಸನ್ನಿವೇಶವನ್ನು
ನೆನಪಿಸಿಕೊಂಡನಾದರೂ ಅರ್ಥಪೂರ್ಣವಾಗಿ ಅದು ಮುಖದಲ್ಲಿ ಪ್ರಕಟವಾಗಲೇ ಇಲ್ಲ... ತಮ್ಮ
ಉಸ್ತಾದನ ಕಷ್ಟ ಅರ್ಥ ಮಾಅಡಿಕೊಂಡ ಗರುಡಿಮನಿ ಹುಡುಗರ ಪೈಕಿ ಶರಭ ಎಂಬ
ಉದಯೋನ್ಮುಖಿ ಪೈಲ್ವಾನನೊರ್ವನು ಅತುಲ ಬೇಸರದಿಂದ
"ಫೋಟೋ ತೆಗಿದ್ರೆ ತೆಗಿ, ಬುಟ್ರೆ ಬುಡು... ನಮ್ಮ ಗುರು ಹಿಂಗೇ ನಿಂದ್ರೋದು" ಎಂದು
ಟಾಕುಟೀಕಾಗಿ ಹೇಳಿದನು.
ಉಘೇ ಉಘೇ ಚಾಂಗು ಭಲರೇ...
ನನಗಂತ್ ಕಮಲಾಕರನ ಸೃಜನಶೀಲ ವರ್ತನೆಯಿಂದ ತುಂಬ ಬೇಸರವಾಯಿತು. ಅದನ್ನು ಆ
ಸ್ಥಿತಿಯಲ್ಲಿ ಪ್ರಕಟಿಸುವುದು ಸಾಧ್ಯವಾಗಲಿಲ್ಲ.
ನಾಳಿನ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರಿ ನಾಯಕನಾಗಲಿರುವ ಗರುಡಿಮನೆಯ ಹುಡುಗರನ್ನು
ಎದುರುಹಾಕಿಕೊಳ್ಳಲು ಇಚ್ಛಿಸದೆ ಕಮಲಾಕರನು ಎರಡು ಮೂರು ಫೋಟೋ
೩೭೦
ತೆಗೆದ ನಂತರ ಶವದ ಮೆರವಣಿಗೆ ಸ್ವಾಭಾವಿಕವಾಗಿ ಮುಂದುವರೆಯಿತು.
*
*
*
ಕಥೆಯ ಮುಂದುವರಿದ ಭಾಗವನ್ನು ಓದಲು ನನಗೆ ಸಾಕುಸಾಕಾಗಿ ಹೋಯಿತು. ಒಂದು ಚಿಕ್ಕ
ವಸ್ತುವನ್ನು ಶಾಮಂಣ ಹಿಂಜಿಕೊಂಡು ಹೋಗಿರುವನೆಂದುಕೊಂಡೆ. ಅವನು ಬರೆದಿರುವ ಕಥೆ ನನ್ನೀ
ಸದರಿ ಕಾದಂಬರಿಗೆ ಒಗ್ಗುವುದೋ ಇಲ್ಲವೋ ಎಂಬ ಆತಂಕದಿಂದ ಅರ್ಥಪೂರ್ಣ ಪಾಠವನ್ನು
ಹಾಕಿಕೊಳ್ಳಲು ಹಿಂದೇಟು ಹಾಕಿದೆ. ಶಾಸ್ತ್ರಿಗಳ ಶವ ಬಜಾರದ ಮೂಲಕ ಹೊರತಾಗ ವಾಣಿಜ್ಯ ಮಂದಿಯು
ಪ್ರತಿಕ್ರಿಯಿಸಿದ ರೀತಿಯನ್ನೇ ಐದು ಪುಟಗಳವರೆಗೆ ಬರೆದಿರುವನು. ಒಂದು ಶವ
ಶಾಸ್ತ್ರಿಗಳದ್ದೇ ಆಗಿರಲಿ, ಸಾಮಾನ್ಯ ಪ್ರಜೆಯದ್ದೇ ಆಗಿರಲಿ... ಅದರ ಬಗ್ಗೆ ಜನರು ಹೀಗೆಯೇ
ಪ್ರತಿಕ್ರಿಯಿಸಬೇಕೆಂದು ನಿರ್ದೇಶಿಸಲಿಕ್ಕೆ ಅವನು ಯಾರು ಹೆಗಲ ಮೇಲೆರಿಣದ ಬಿಂದಿಗೆಯನ್ನು
ಕೈಯಲ್ಲಿ ಬೆಂಕಿಯ ಮಡಿಕೆಯನ್ನು ಹಿಡಿದು ಮೆರವಣಿಗೆಯ ಮುಖ್ಯಪಾತ್ರವಾಗಿರುವ
ಅವನು ಇಕ್ಕೆಲದ ವಿದ್ಯಮಾನ ಗಮನಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಅನುಮಾನ
ಎಂಥವರಿಗೂ ಬಾರದಿರದು.. ಇದು ಅಸ್ವಾಭಿಕವೂ ಕೂಅ. ಬೇರೊಂದು ಪಾತ್ರದ ಮೂಲಕ
ಕಥೆಯನ್ನು ನಿರೂಪಿಸಬಹುದಿತ್ತು. ನಿಚ್ಚಳವಾಗಿ ತನ್ನ ಖಾಸಗಿ ಬದುಕನ್ನೇ ತುಂಬಿರುವುದರ
ಜೊತೆಗೆ ಉಪದ್ರವಿಯಾದ ನನ್ನನ್ನೂ ಕಥೆಯೊಳಗೆ ನೇರವಾಗಿ ಎಳೆದುಬಿಟ್ಟಿದ್ದಾನೆ.
ಆದ್ದರಿಂದಾಗಿಯೇ ಅವನು ಪ್ರಕಟಣೆಗಾಗಿ ಯಾವುದಾದರೂ ನಿಯತಕಾಲಿಕಕ್ಕೆ ಕಳಿಸುವ
ಗೋಜಿಗೆ ಹೋಗಿಲ್ಲ. ಕಮಲಾಕರನ ಮೇಲಿನ ಸಿಟ್ಟನಿಂದಾಗಿ ಶಿವಪೂಜೆ ಸುರೇಶ್ ಗೌಡ ಹೇಣ
ದಫನ್ ಮಾಡಲಿಕ್ಕೆ ಹುಲುಳಿ ಹಳ್ಳದ ಮಗ್ಗುಲಲ್ಲಿ ತನ್ನ ಹೊಲದಲ್ಲಿ ಅವಕಾಶ
ಕೊಡದಿದ್ದುದು ಶಾಮಂಣನ ದುಹ್ತಿಯಲ್ಲಿ ಒಂದು ಅಪರಾಧವಾಗಿ ಕಂಡಿರುವುದು. ಕಥೆಯ
ಅಂತಿಮ ಭಾಗವಂತೂ ಸಂಸ್ಕೃತ ಶ್ಲೋಕಗಲಿಂದ ತುಂಬಿ ಜೀಕಿ ಉಸಿರುಕಟ್ಟುವಂತಿರುವುದು.
ಓದಿದ ಮತ್ತು ಕೇಳಿದ ಅನ್ನಪೂರ್ಣೆಗಂತೂ ಬೆಟ್ಟದಷ್ಟು ಸಿಟ್ಟು ಬಂತು. "ಎಂಥ ನೀಚ ಕಣ್ರೀ ಆ
ನಿಮ್ಮ ಸ್ನೇಹ್ತ... ನಿಮ್ಮ ಹೆಸರ್ನಲ್ಲಿ ರೂಂ ಕಾತಗೊಂಡಿದೂ ಅಲ್ದೆ ವ್ಯ್ಭಿಚಾರ ಮಾಡ್ಲಿಕ್ಕೆ ಪ್ರಯತ್ನ
ಪಟ್ಟನಲ್ರೀ... ಥೂ! ಭೂಮಿ ಮೇಲೆ ಇಂಥೋರು ಇರ್ತಾರೆ... ಇದ್ರೂ ನಿಮ್ಮಂಥವರೂ ಇಂಥವರ
ಗ್ರ್ಳ್ರ್ತನ ಮಾಡ್ತಾರೆಯೇ... ಅಂದಹಾಗೆ ನೀವು ಎಂದಾದ್ರು ಹೋಟ್ನಲ್ಲಿ ಇಂಥ ಕೆಲಸ ಮಾಡಿರೋದುಂಟಾ
ಇಲ್ವಾ! ಅಷ್ಟು ಹೇಳಿ" ಎಂದು ಪಟ್ಟು ಹಿಡಿದಳು.
"ಏನೆ ನೀನೂ ಅವ್ನು ಬರೆದಿರೋದ್ನ ನಂಬ್ತೀಯಾ!"
"ಬೆಂಕಿ ಇಲ್ದೆ ಹೊಗೆ ಬರ್ತದೇನ್ರಿ!"
ಯಾವ ಬೆಂಕಿ? ಯಾವ ಹೊಗೆ? ಯಾವುದ್ಯಾವುದ್ಕೋ ಜೋಡಿಸ್ತಿದ್ದೀಯಲ್ಲೇ ಮಾರಾಯ್ತಿ...
ನಿನ್ನಾಣೆಯಾಗೂ ನಾನಿಂಥ ಕೆಲಸ ಮಾಡೋನಲ್ಲ... ನಂಬು!
ಮತ್ತೆ ಇನ್ನಾದರೂ ಸಾಯಏಕು ಎಂಬ ಕಥೆಯಲ್ಲಿ ಸೂಳೆಗಾರಿಕೆ ಮಾಅಲಿಕ್ಕೆ ಹೋಟ್ನಲ್ಲಿ ರೂಂ
ತಗೊಂಡಿದ್ದಾಗಿ ಕೊಚ್ಕೊಂಡಿದೀರಲ್ಲ! ಅದೂ ಸುಳ್ಳೇನು?"
ಅಯ್ಯೋ ಹುಚ್ಚಿ... ಅದೆಲ್ಲ ನಂತೀಯಲ್ಲ... ನಿನ್ನ ತಿಳುವಳಿಕೆಗೆ ಏನನ್ನೋದು! ನಾವು ಮೊದಲೇ
ಲೇಖಕರು... ನಮ್ಮ ಸ್ವಭಾವ ವಿಚಿತ್ರವಾಗಿರ್‍ತದೆ... ಸಂಭೋಗದ ಬಗ್ಗೆ ಒಂಚೂರು
ಅನುಭವ ಇಲ್ದೋನು ತಾನು ಮಹಾ ರತಿಕ್ರೀಡಾ ನಿಪುಣ ಎಂದು ಪೋಜು ಕೊಡ್ತಿರ್‍ತಾನೆ. ತಾನು
-
೩೭೦
ಮಹಾಪತಿವ್ರತೆ ಅಂತ ಪೋಜ್ ಕೊಡ್ತಿರೋಳು ಗುಟ್ಟಾಗಿ ಹಾದರಗಿತ್ತಿ ಆಗಿರ್‍ತಾಳೆ... ಸದಾ ಅಹಿಂಸೆ
ಬಗ್ಗೆ ಮಾತಾಡೋನು ಒಳಗೊಳಗೆ ಹಿಂಸಾರಾಧಕನಾಗಿರುತ್ತಾನೆ... ಮನುಷ್ಯ ಸ್ವಭಾವವೇ
ತುಂಬ ವಿಚಿತ್ರವಾದುದು. ಲೆಖಕನಾದ ನಾನೂ ಒಬ್ಬ ಮನುಷ್ಯ ಎಂಬುದನ್ನು ಮರೆಯಬೇಡ,,,
ಸುಪ್ತ ಕಾಮನೆಗಳಿಗೆ ಅಕ್ಷರ ರೂಪ ಕೊಟ್ಟು ಚಪಲ ತೀರಿಸಿಕೊಳ್ತೀನಿ..."
"ಹೀಗೆ ಪೋಜ್ ಕೊಡೋದ್ರಲ್ಲಿ ನೀವು ಎಕ್‌ಸ್ಟ್ರಾರ್ಡಿನರಿ ಆಗಿ ಬಿಟ್ಟಿದ್ದೀರಿ...ಇದು ನಿಮ್ಮ ಗೌರವ ಪ್ರಶ್ನೆ...
ಕಥೆಯೊಳಗಿರೋ ಆ ಭಾಗ್ಫಾನ ಎಡಿತ್ ಮಾಡಿ ಹಾಕ್ರಿ... ಈ ಸಮಾಜ ಮೊದ್ಲೆ ಗುಮಾನಿಯದು.
ಈಚಲ ಮರದ ಕೆಳಗೆ ಕೂತ್ಕೊಂಡು ಮಜ್ಜಿಗೆ ಕುಡಿದ್ರೂ ಹೆಂಡ ಅಂತ ತಿಳ್ಕೋಂತದೆ... ಹುಷಾರಾಗಿರ್ರಿ...
ಬರೆಯೋಕೆ ಬರ್‍ತದೆ ಅಂತ ಏನೋನೋ ಬರೆಯೋಕೆ ಹೋಗಬೇಡ್ರಿ"
"ಹಾಗೇ ಆಗ್ಲಿ ಮಾರಾಯ್ತಿ... ಎಡಿಟ್ ಮಾಡೇ ಹಾಕ್ತೀನಂತ ಇಟ್ಕೋ... ಬರೆಯೊರ್‍ಗಿಂತ ಹೆಚ್ಚು
ಸೃಜನಶೀಲವಾದ ಓದುಗ, ಬೆರಳು ತೋರಿಸಿದ್ರೆ ಹಸ್ತ ನುಂಗೋ ಜಾಯಮಾನ್ದೋನು...
ನಾವು ಬರೆಯದೇ ಇದ್ದ ಭಾಗಕ್ಕೆ ಬಣ್ಣ ಕೊಟ್ಟು ಊಹಿಸಿಕೊಳ್ಳೋದ್ರಲ್ಲಿ ಅವನು ನಿಸ್ಸೀಮ
ಕಣಮ್ಮ... ಅದ್ಕೆ ಅವಕಾಶ ಕೊಡೋದದ್ರು ಯಾಕೆ? ಇದ್ದದ್ದು ಇಲ್ಲದ್ದು ಎಲ್ಲ ಬರ್ದು ಅವನ
ಮುಂದಿಡೋದಷ್ಟೆ. ವಾಂತಿ ಮಾಡ್ಕೋತಾರಲ್ಲ ಹಾಗೆ! ಮಗೂ ಹೆರ್‍ತಾರಲ್ಲ ಹಾಗೆ ಅಷ್ಟೆ"
ಏನೋ... ನೀವು ಮಾತಾಡೋ ತಳಬುಡ ಒಂದೂ ಅರ್ಥ ಆಗ್ತಾ ಇಲ್ಲ. ನೀವು ಹೀಗೆಲ್ಲ
ಎಕ್ಸ್‌ಪೋಜಾಗೋದಾದ್ರೆ ಬರೆಯದೆ ನಾಲ್ಕು ಜನರಂಗೆ ಹೆಂಡ್ತಿ ಮಕ್ಕಲೋಂದಿಗೆ ಆಡೊಕೊಂಡು
ಕಾಲ ಕಳೆಯೋದೆ ವಾಸಿ ಅನ್ಸುತ್ತೆ... ಬರೆದ್ರೆ ನಿಮ್ಗೆ ಕಿರೀಟ ಬರೋದಷ್ಟರಲ್ಲೆ ಇದೆ... ಈ ಸಾಹಿತ್ಯ
ಪಾಹಿತ್ಯನೆಲ್ಲ ತಲೆಗೆ ಹಚ್ಕೊಂಡು ಎಂಥೆಂಥೋರೆ ನಿರ್ನಾಮ ಆಗ್ಯಾರ... ಇನ್ನು ನೀವ್ಯಾವ ಲೆಕ್ಕ?
ಸಮಯ ಸಂದರ್ಭ ಒಂದೇ ರೀತಿ ಇರೋದಿಲ್ಲ... ಒಂದು ಹೋಗಿ ಇನ್ನೊಂದಾಗಿ ಬಿಟ್ರೆ ಏನ್ಮಾಡೋದು?"
ಎಂದು ಗೊಣಗುತ್ತ ಲಗುಬಗೆಯಿಂದ ಅಡುಗೆಮನೆ ಪ್ರವ್ಶಿಸಲುನಾನು ನೆಮ್ಮದಿಯ
ಉಸಿರುಬಿಟ್ಟೆನು.
ಯೋಚಿಸುತ್ತ ಹೋದಂತೆ ಹೆಂಡತಿಯಾದ ಅನ್ನಪೂರ್ಣ ಒಬ್ಬ ಲೇಖಕನಿಗಿಂಥ ಸಮರ್ಥವಾಗಿ ಸಮಾಜವನ್ನು
ಅರ್ಥಮಾಡಿಕೊಂಡಿದ್ದಾಳೆ ಎಂಬ ಸತ್ಯದ ಮಾತು ಅರಿವಾಯಿತು. ಬರೆಯುವ ಕ್ರಿಯೆ ನನಗೂ ಹಿಂಸದಾಯಕ
ಕ್ರಿಯೆಯೆ. ಆದರೆ ಮುಂದಿಟ್ಟ ಹೆಜ್ಜೆ ಹಿಂದಿಡುವಂತಿಲ್ಲ. ಶಾಮನು ಬರೆದಿರುವ ಅಪ್ರಕಟಿತ
ಕಥೆಯಲ್ಲಿ ತನ್ನನ್ನು ತಾನು ಪ್ರಮಾಣಿಕವಾಗಿ ಅನಾವರಣಗೊಳಿಸಿಕೊಂಡಿರುವನಲ್ಲದೆ
ಕಮಲಾಕರನನ್ನೂ; ಸಂತಾಪಿ ಉಪದ್ಯಾಪಿ ಜನರನ್ನೂ ಬತ್ತಲೆಯಾಗಿ ನಿಲ್ಲಿಸಿದ್ದಾನೆ ಎಂದುಕೊಂಡೆ.
ಕಥೆ ತೀರಾ ವೈಯಕ್ತಿಕವಾಗಿರುವುದರಿಂದ ಅವನದನ್ನು ಪತ್ರಿಕೆಗಳಿಗೆ ಕಳಿಸುವ ಗೋಜಿಗೆ ಹೋಗಿಲ್ಲ.
ಎಷ್ಟು ವೈಯಕ್ತಿಕವೆಂದರೆ ಕಮಲಾಕರ ಜಲಜಾಕ್ಷಿಯರಿಂದ ಶವಸಂಸ್ಕಾರಕ್ಕೆ ಪಡೆದ ಸಾಲವನ್ನು
ತೀರಿಸಲು ತಾನು ಕ್ರಮಿಸಿದ ವಾಮಮಾರ್ಗಗಳನ್ನೂ ನಿಸ್ಸಂಕೋಚವಾಗಿ ಪ್ರಸ್ತಾಪಿಸಿದ್ದಾನೆ.
ಆತ್ಮಕಥನ ವೇಗದಲ್ಲಿ ಓಡಿದ ಕಥೆ ಹೀಗೇ ಮುಂದುವರಿದಿದ್ದಲ್ಲಿ ಬೃಹದಾಕಾರ ತಾಳುತ್ತಿತ್ತೋ
ಏನೋ ಯಾರು ಬಲ್ಲರು!
ಅವನು ಅರ್ಥವಾಗದ ಮತ್ತು ಬಗೆಹರಿಸಲಾಗದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡಿದ
ಕಾರಣದಿಂದಾಗಿಯೋ ಏನೋ ಲೇಖಕನಾಗಿ ಮುಂದುವರಿಯಲಾಗದೆ ಮತ್ತು ಸ್ಪಷ್ಟವಾಗಿ ಬದುಕಲಾಗದೇ
ಹೋದ ಎಂಬುದರ ಬಗ್ಗೆ ನಾನು ಓದಿದ ಕಥೆ ಬೆಳಕು ಚಲ್ಲುತ್ತದೆ. ತನ್ನ ತಾತನರ
೩೭೨
ಪರಮೇಚ್ಛೆಯಂತೆ ಅವರ ಶವ ಸಂಸ್ಕಾರವನ್ನು ಕಾಶೀಕ್ಷೇತ್ರದ ಪವಿತ್ರ ಮಣಿಕರ್ಣಿಕಾ
ಘಾಟ್‌ನಲ್ಲಿ ನಡೆಸಲಾರದ ಅಸಹಾತಕತೆ, ಮತ್ತು ಅವರ ಅಸ್ಥಿ ನಿಮಜ್ಜನಾ ಕಾರ್ಯವನ್ನು
ಅಲಹಾಬಾದಿನ ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಮಾಡಲಾಗದ ಅಸಹಾಯಕತೆ ಅವನನ್ನು
ಬದುಕಿರುವ ಪರ್ಯಂತ ಕಾಡಿರಲಿಕ್ಕೂ ಸಾಕು. ಇಲ್ಲವಾದರೆ ಶಾಸ್ತ್ರಿಗಳ ಅಸ್ಥಿ ಮತ್ತು ಚಿತಾ
ಭಸ್ಮವನ್ನುಹೊಳೆ ಹಳ್ಳ ಕೊಳ್ಳಗಳಲ್ಲಿ ವಿಸರ್ಜಿಸದೆ ಯಾಕೆ ಭದ್ರಪಡಿಸಿಕೊಂಡಿರುತ್ತಿದ್ದ?
ಶಾಸ್ತ್ರಿಗಳು ತಾವು ಬರೆದೆನ್ನಲಾದ ಉಯಿಲಿನಲ್ಲಿ ತಮ್ಮ ಮೊಮ್ಮಗನಾದ ಅವನನ್ನು ತರಾಟೆಗೆ
ತೆಗೆದುಕೊಂಡಿರುವುದೂ ಅವನ ಈ ಅಳುಕಿಗೆ ಕಾರಣವಾಗಿರಬೇಕು. ಪರಮಪೂಜ್ಯರಾದ ಪರಮೇಶ್ವರ
ಶಾಸ್ತ್ರಿಗಳ ಉಯಿಲನ್ನು ಶಾಮನು ಬಿಡುವಿನ ಸಮಯದಲ್ಲಿಓದುತ್ತ ತನ್ನ ಸಂಕಟಕ್ಕೆ ಒಳ ಮತ್ತು
ಹೊರ ಅಲಂಕರಣ ಮಾಡಿರಬೇಕು. ಮುಖ್ಯವಾಗಿ ಅವನಿಗೆ ಹಳತಾದ ವಸ್ತುಗಳ ಬಗ್ಗೆ ಖಯಾಲಿ
ಹೆಚ್ಚು ಎಂಬುದನ್ನು ಬಲ್ಲೆ. ಯಾವುದೋ ಒಂದು ಕಪ್ಪು ಕಲ್ಲಿನ ತುಂಡನ್ನು ಜಕ್ಕಣಾಚಾರಿ
ಕೆತ್ತಿರುವುದೆಂದು ತೋರಿಸುತ್ತಿದ್ದ. ತ್ರಿಕೋನಾಕೃತಿಯ ಬೆಣಚು ಕಲ್ಲಿನ ತುಂಡನ್ನು
ತೋರಿಸುತ್ತ ಇದು ಹಳೇಶಿಲಾಯುಗ ಕಾಲದ್ದು ಎಂದಿದ್ದ. ಯವುದೋ ಇಟ್ಟಿಗೆ ತುಂಡನ್ನು
ತೋರಿಸಿ "ಇದು ಮೆಹಂಜೋದಾರದ್ದು" ಎಂದಿದ್ದ. ನಖಶಿಖಾಂತ ಆಧುನಿಕ ಉಡುಪು
ತೊಟ್ಟಿರುತ್ತಿದ್ದ ಅವನುಮುಂಗೈಗೆ ಗುಜರಿ ವಾಚು ಕತ್ತಿಕೊಂಡಿರುತ್ತಿದ್ದ. ಅಂಥ ಜಾಅಯಿಮಾನದ
ಅವನು ತನ್ನ ತಾತನವರು ಬಳಸುತ್ತಿದ್ದ ವ್ಯಾಸ ಪೀಠ , ಉತ್ತರೀಯ, ಚಾಳೀಸು, ತಾಮ್ರದ
ತಂಬಿಗೆ, ಕೋಲು ಇವೆಲ್ಲವುಗಳನ್ನು ಜೋಪಾನದಿಂದಕಾಯ್ದಿರಿಸಿದ್ದ. ಹಾಗೆಯೇ ಅವನು ಉಯಿಲಿನ
ತಾಳೆಗರಿ ಕಟ್ಟನ್ನು ಜೋಪಾನವಾಗಿರಿಸಿಕೊಂಡು ಸಂಕಟದ ಹೊರಭಾಗಕ್ಕೆ ಆನಂದದ ಲೇಪ ಹಚ್ಚಿ
ಇಟ್ಟುಕೊಂಡಿರಬೇಕು. ಆ ತಾಳೆಗರಿಯ ಕಟ್ಟು ನೋಡಿದ ಮೊದಲಿಗೆ ನಾನೂ ವಿಸ್ಮಯಾನಂದ
ಪ್ರಕಟಿಸಿದ್ದುಂಟು. ಗುಬ್ಬಿ ವೀರಣ್ಣೊಡೆಯರ ಶೂನ್ಯ ಸಂಪಾದನೆ ಮತ್ತು
ಚಿದಾನಂದಾವಧೂತರ ವೇದಾಂತ ಜ್ಞಾನ ಸಿಂಧುಗಳ ಕಟ್ಟುಗಳ ನಡುವೆ ಇಟ್ಟು ಹೆಮ್ಮೆಯಿಂದ
ಬೀಗುತ್ತಿದ್ದೆ. ಸದರೀ ಕಾದಂಬರಿ ಮುಂದುವರಿಸುವ ಸಂದರ್ಭದಲ್ಲಿ ಶಾಸ್ತ್ರಿಗಳ ಉಯಿಲನ್ನು
ಹಾಕಿಕೊಳ್ಳಬೇಕಾಗಿ ಬಂದಾಗಲೇ ನನ್ನ ದೌರ್ಬಲ್ಯದ ಅರಿವು ಕೆಲವು ಗೆಳೆಯರಿಗಾದದ್ದು. ಕೆಲವು
ಬಂಡಾಯ ಸಾಹಿತ್ಯದ ಸಂಘಟನೆಯ ಗೆಳೆಯರು ನನ್ನ ಕಂಕುಳಲ್ಲಿ ಪ್ರದರ್ಶಿತ ಅದನ್ನು ನೋಡಿ
ಪಕಪಕ ನಗಾಡಿದ್ದು. ಸಮಾನತೆಯ ಭೂತದ ಕೈಗೊಂಬೆಯಾಗಿರುವ ಈ ಕುಂವೀ
ಎಂಬುವನು ವಿಶವಿದ್ಯಾಲಯದ ಪ್ರಾಚ್ಯ ವಸ್ತು ಸಂಗ್ರಹಾಲಯ ಸೇರಲಿಕ್ಕೆ
ಅರ್ಹನಾಗಿರುವನೆಂದು ಲೇವಡಿ ಮಾಡಿದ್ದುಂಟು.
ಇನ್ನೇನು ನಾನು ನಿರ್ನಾಮವಾಗಿಬಿಟ್ಟೆನೆಂದು ಅವರು ಊಹಿಸಿಕೊಂಡಿರುವ ಹೊತ್ತಿನಲ್ಲಿ ಶಾಸ್ತ್ರಿಗಳ
ಉಯಿಲುಅನ್ನು ಹೊತ್ತುಕೊಂಡು ಹತ್ತಿರದ ಹಂಪಿಯಲ್ಲಿ ನೀರೊಳಗೆ ತೆಲಾಡುವ ಘೃತದ ಬಿಂದುವಿನಂತೆ
ಇರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದೆ. ಭೂತಕಾಲವನ್ನು ಮತ್ತು ವರ್ತಮಾನವನ್ನು
ಏಕಕಾಲಕ್ಕೆ ಬದುಕುತ್ತ ಆಧುನಿಕತೆಯ ಪರಿವೇಷದೊಳಗೆ ಸನಾತನತೆಯನ್ನು ಬಚ್ಚಿಟ್ಟುಕೊಂಡು
ಕನ್ನಡದೊಳಗೆ ಸಂಸ್ಕೃತವನ್ನು ಬಿತ್ತಿ ಬೆಳೆಯುತ್ತ ಕ್ಲಿಷ್ಟವಾಗಿರುವ ಮಲ್ಲೇಪುರಂ ವೆಂಕಟೇಶರೆಂಬ
ಗೆಳೆಯನ ಬಳಿಗೆ ಹೋಗಿ ‘ನೋಡಿ ಸ್ವಾಮಿ ನಾನಿರೋದೆ ಹೀಗೆ!’ ಅಂತ ಹೇಳಿದೆ. ಆತ ಅದಕ್ಕಿದ್ದು "ತುಂಬಾ
ಫೆಂಟಾಸ್ಟಿಕ್ಕಾಗಿದೆ ನಿಮ್ಮ ಐಡಿಯಾ... ಆಧುನಿಕತೆಯ ಎರಡು ಧೃವಗಳ ನಡುವೆ
ಅರ್ಥಪೂರ್ಣವಾದ ಡಿಸ್‌ಕೋರ್ಸ್ ಏರ್ಪಡುವಂತಿದೆ. ಎಲ್ಲಿ ಆ ಓಲ್ಡ್ ಈಜ್
೩೭೩
ಗೋಲ್ಡ್" ಎಂದವರೆ ನನ್ನ ಕಂಕುಳಿಗೆ ತಮ್ಮ ಅಮೃತ ಹಸ್ತ ಹಾಕಿ ತಾಳೆಗರಿ ಕಟ್ಟನ್ನು
ಕಿತ್ತು ಮುಂದೆ ಹರಡಿಕೊಂಡೇ ಬಿಟ್ತರು... ಮಂತ್ರ ಪಟಿಸುತ್ತಿರುವಂತೆ ಓದಿದಂತೆ ಮಾಡಿ ಇದು
ರಿಯಲಿ ಓಲ್ಡೆಸ್ಟ್ ಗೋಲ್ಡು ಕುಂವೀ... ಇದ್ರಲ್ಲಿರೋ ಲ್ಯಾಂವೇಜಿಗೆ ಏನಿಲ್ಲಾಂದ್ರೂ ಳೆಂಟು ನೂರು
ವರ್ಹಗಳಾಷ್ಟಾದ್ರು ವಯಸ್ಸಾಗಿದೆ. ಭಾಷಾ ಬಳಕೆ, ವಸ್ತು ವಿನ್ಯಾಸ ಮಾರ್ವಲೆಸ್..." ಎಂದು
ಅಂಗವಸ್ತ್ರದಿಂದ ಹಣೆಯ ಬೆವರೊರೆಸಿಕೊಂಡರು. "ರಾಘವಾಂಕ ವಾರ್ಧಕ ಷಟ್ಪದಿಯಲ್ಲಿ
ಕ್ರಾಂತಿ ಮಾಡ್ತಿರುವಾಗ ಈ ಕೃತಿಕಾರ ಅಪೂರ್ವವಾದ ಗದ್ಯದಲ್ಲಿ ಕಸರತ್ತು ಮಾಡಿದ್ದಾನಲ್ಲ...
ವಂಡರ್‌ಫುಲ್... ಶಿವಕೋಟ್ಯಾಚಾರ್ಯರ ನಂತರ ಇವನೇ ಗದ್ಯವನ್ನು ಅದ್ಭುತವಾಗಿ
ಬಳಸಿರೋದೆಂದು ಕಾಣ್ತದೆ... ಇದ್ದ್ನ ನಮ್ಮೂನಿವರ್ಸಿಟಿಗೆ ಕೊಬಿಡಿ... ಇದು ವ್ಯಾಲ್ಯುಬಲ್ ಆಂಟಿಕ್
ಥಿಂಗ್" ಎಂದರು. ಸಖೇದಾಶ್ಚರ್ಯದಿಂದ. ಏನೀ ನನ್ನ ಗೆಳೆಯನ ನಾಲಿಗೆ ಮೇಲೆ ಸಂಸ್ಕೃತ
ಗುಳೇ ಹೊಂಟು ಆ ಜಾಗದಲ್ಲಿ ಇಂಗ್ಲೀಷು ಬಂದು ತೆಂಟು ಹಾಕಿಬಿಟ್ತಿಡೆಯಲ್ಲಾ ಎಂದುಕೊಂಡೆ.
ಅವರು ಆ ಕಟ್ಟನ್ನು ಮೂಸಿನೋಡಿ ಅದರ ಕಾಲವನ್ನು ನಿರ್ಧರಿಸುವ ಪ್ರಯತ್ನ ಮಾಡಿದರು.
ನಾನು ಸುಮ್ಮನಿದ್ದರೆಲ್ಲಿ ಆ ತಾಳೆಕಟ್ಟು ಪ್ರಾಚ್ಯ ವಸ್ತುಗಳ ಸಂಗ್ರ ಸೇರಿಬಿಡುವುದೋ ಎಂದು
ಹೆದರಿ "ಹಾಗಲ್ಲ ಪಂಡಿತರೇ... ಎಂದೆ. ಅವರಿಗೆ ‘ಪ್ರಿಯ ಅಂತ ನಾವು ಹಾಗೆ
ಕರೆಯುತ್ತಿದ್ದೆವು ಸಿದ್ದಗಂಗ ಮಠದ ಕಾಲದಿಂದಲೂ. ಶೂದ್ರಾತಿ ಶೂದ್ರ ಕಮ್ಯುನಿಟಿಯಲ್ಲಿ ಹುಟ್ಟಿದ್ದರೂ
ಆತ ಎಂಟೆಳೆಯ ಜನಿವಾರ ಹಾಕಿಕೊಂಡು ಸ್ಮಾರ್ತ ಬ್ರಾಹ್ಮಣರ ನಡುವೆ ಸನಾತನ ಬ್ರಾಹ್ಮಣನಂತೆಯೂ;
ಪಂಡಿತೋತ್ತಮರ ನಡುವೆ ಅಪ್ರತಿಮ ಪಂಡಿತನಂತೆಯೂ ಹೊಳೆಯುತ್ತಿದ್ದುದನ್ನು ಮರೆಯುವಂತಿಲ್ಲ.
ಮಾತು, ವೇಷಭೂಷಣ ಹಲ್ಲಿಗೊಂದರಂತೆ ಒಂದೊಂದು ಬಲಿಷ್ಟ ಕ್ಲಿಷ್ಟ ಶ್ಲೋಕಗಳನ್ನು
ಅಲಂಕಾರಮಾಡಿಕೊಂಡು ಸನಾತನತೆಯೇ ಮೈವೆತ್ತಂತೆ ಗೋಚರಿಸುತ್ತಿದ್ದುದು ಕಣ್ಣಿಗೆ
ಕಟ್ಟಿದಂತಿರುವುದು. ಭಾಸ, ಭವಭೂತಿ, ಕಾಳಿದಾಸದ್ಯರಣ್ಣೂ; ಪಂಪ. ಪೊನ್ನ, ರನ್ನ,
ಕುಮಾರವ್ಯಾಸಾದಿಗಳನ್ನು ನಾಲಿಗೆ ತುದಿಯಲ್ಲಿ ಕಣ್ಣಂಚಿನಲ್ಲಿ ಇಟ್ಟುಕೊಂಡಿರುತ್ತಿದ್ದುದು ಕಿವಿಗೆ
ಕಟ್ಟಿದಂತಿರುವುದು. ಅವರಿಗೆ ಪಂಚಾಂಗ, ಜ್ಯೋತಿಷ್ಯ ವಾಮಾಚಾರಗಳಲ್ಲಿ ಸಾಕಷ್ಟು ಪರಿಶ್ರಮವಿರುವುದೆಂದು
ನನಗೆ ಅರ್ಥವಾದದ್ದು ಅವ್ಚರು ಹಿಂದೊಮ್ಮೆ ವಗಿಲಿ ಎಂಬ ಗೆಆಮಕ್ಕೆ ದಯಮಾಡಿಸಿದಾಗ.
ರನ್ನನನ್ನು ಹೇಳುವುದರ ಮೂಲಕ ವಾಗಿಲಿಯ ಅಭಿನವ ಕುಮಾರ ವ್ಯಾಸನೆಂದು
ಪ್ರಸಿದ್ಧರಾಗಿದ್ದ ಹುಚ್ಚರೆದ್ದಿಯನ್ನು ಚಿತ್ ಮಾಡಿದರೆ, ತಿಥಿ ವಾರ ನಕ್ಷತ್ರ
ಕರಣಗಳಿತ್ಯಾದಿಗಳನ್ನು ಚಟಪಟ ಹೇಳಿ ವಾಗಿಲಿಯ ಜ್ಯೋತಿಷ್ಯ ಮಾರ್ತಾಂಡರೆಂದೇ ಹೆಸರಾಗಿದ್ದ
ದ್ವಾದಶ ದೇವಣ್ಣನವರನ್ನು ಚಿತ್ ಮಾಡಿದರು. ನೋಡು ನೋಡುವಷ್ಟರಲ್ಲಿ ಗ್ರಾಮದ ಪಂಚವಿಂಶತಿ
ರೆಡ್ಡೋರ ಮನೆಗಳಿಂದ ಬುಲಾವ್ ಬರತೊಡಗಿದವು. ಅಂತಹ ಕಡೇಲೆಲ್ಲ ಹೋಗಿ ಬಂದೊಡನೆ
ಏನು ಕುಂವೀ?... ಎಷ್ಟೊಂದು ದಷ್ಟಪುಷ್ಟವಾಗಿ ಆರೋಗ್ಯ ಕಾಂತಿಯಿಂದ ಹೊಳೆಯುತ್ತಿರುವಿರೀ
ಗ್ರಾಮದ ಮಹಿಳೆಯರು... ಇವರನ್ನು ನೋಡಿದರೆ ನಮಗೆ ಕಾಳಿದಾಸರ ಅಭಿಜ್ಞ ಶಾಕುಂತಲಂನಲ್ಲಿ
ಬರುವ ಕಣ್ವಋಷಿಗಳ ಆಶ್ರಮವು ನೆನಪಾಗುವುದು. ಎಷ್ಟೊಂದು ಪುಣ್ಯ ಮಾಡಿರುವಿರಿ
ಕುಂವೀ? ಇಂಥ ಸುಂದರರೂ ಸದೃಡರೂ ಆದ ಮಹಿಳೆಯರ ನಡುವೆ ವಾಸಿಸಲಿಕ್ಕೆ ಎಂದು ಪ್ರಶಂಸೆಯ
ಮಾತುಗಳನ್ನಾಡಿದರು, ಆ ಸಂದರ್ಭದಲ್ಲಿ ಅವರಿಗೆ ಗಚ್ಚಿನ ಮನೆಯ ಜಗನ್ನಥ
ರೆಡ್ಡಿಯವರಿಗೆ ಬುಲಾವ್ ಬಂದಿತು. ಹೋದೊಡನೆ ಪಟಪಟಾಂತ ಮನೆಯ ವಾಸ್ತು ಬಗ್ಗೆ ವಿವರಿಸುತ್ತ
"ಏನಿದು ಗೌಡ್ರೇ?... ಮುಖ್ಯ ಬಾಗಿಲು ಪೂರ್ವಾಭಿಮುಖವಾಗಿದೆಯಲ್ಲ...
೩೭೪
ದಕ್ಷಿಣಾಭಿಮುಖವಾಗಿದ್ದರೆ ನಿಮ್ಮೀ ಮನೆಯಲ್ಲಿ ಚಿನ್ನದ ಹೋಳೆ ಹಾಯ್ತಿತ್ತು" ಎಂದು ತರಾಟ್ರ್
ತೆಗೆದುಕೊಂಡು ಬಿಟ್ಟರು. ಹತ್ತಾರು ಕೊಲೆ ಮಾಡಿ ದಕ್ಕಿಸಿಕೊಂಡಿದ್ದ ದಿ.ರೆಡ್ಡಿ ಅವರ ನುಡಿಮುತ್ತಿಗೆ
ಹಡಲ್ಲಾಗಿ ಹೋದನಲ್ಲದೆ ಮುಂದಿನ ವಾರವೇ ದಕ್ಷಿಣದ ಗೋಡೆ ಹೋಡೆದು ಹಾಕಿ ಬಾಗಿಲನ್ನು
ಇಡಿಸಿಬಿಟ್ಟನು. ಇದ್ದ ಮೂರು ದಿನಗಳಲ್ಲಿ ತಮ್ಮ ವಾಗ್ ವೈಖರಿಯಿಂದ ವಾಗಿಲಿ ಗ್ರಾಮದ ಸಮಸ್ತರ
ಹೃದಯ ಸೂರೆಗೊಂಡಪಂಡಿತರು ಕನ್ನಡ ವಿಶ್ವವಿದ್ಯಾಲಯ ಸೇರಿದ ಮೇಲೆ ಒಳಗಿಂದು ಹೊರಗೆ,
ಹೊರಗಿಂದು ಒಳಗೆ ಮಾಡಿಕೊಂಡಿರುವುದು ಕಂಡು ನನಗೆ ಅತ್ಯಾಶ್ಚರ್ಯವಾಯಿತು.
ಕಾಳಿದಾಸನ ಜಾಗದಲ್ಲಿ ಎಲಿಯತ್ ಬಂದಿದ್ದರೆ ಭಾಸನ ಜಾಗದಲ್ಲಿ ಏಟ್ಸ್ ಬಂದುಬಿಟ್ಟಿದ್ದನು. ಭಾಸನ
ಜಾಗದಲ್ಲಿ ಕೀಟ್ಸೋ, ಫಾರ್ಸಸ್ವರ್ರೋ, ಮತ್ತಾರೋ? ನಾನು ತಾಳೆಗರಿ ಕಟ್ಟು ತಂದು
ತೋರಿಸಿದೊಡನೆಯೇ ಇದೇನು ಶೇಕ್ಸಪಿಯರಲ್ಲ ಅರಿಸ್ಟಾಟಲ್ ಪ್ಲೇಟೋ ಅಲ್ಲ... ಇನ್ನೂ ನನ್ನನ್ನು
ಈ ಕುಂವೀ ಹಳೆ ಕಾಲದಂಥ ತಿಳ್ಕೋಂಡಿದಾನಲ್ಲ. ಎಂದು ಮುಖ ಮಾಡಿಕೊಂಡಿದ್ದನ್ನ ಗುರುತಿಸಿದ್ದೆ.
ಅದಕ್ಕೆ ತೇಪೆ ಹಚ್ಚುವ ನಿಮಿತ್ತವೇ ಅವರು ಹಾಗೆ ಮಾತಾಡಿದ್ದು ಎಂದು ಅರ್ಥವಾಯಿತು.
ಕೇಳೋದನ್ನೆಲ್ಲ ಕೇಳಿಯಾದ ಮೇಲೆ ನಾನು ತಡೆಯಲಾರದೆ ತಾಳೆಗರಿ ಕೈನ ಪುರಾಣ
ವಿವರಿಸಿದೆ. ಜಾಯಮಾನಕ್ಕೆ ತಕ್ಕಂತೆ ನನ್ನ ಮಾತನ್ನು ಅವಮಾನವೆಂದು ಅವರು ಭಾವಿಸಲಿಲ್ಲ.
ಪೆನ್ನು ಮತ್ತು ಪೇಪರ್ ಬಗ್ಗೆ ಅತ್ಯಾಧುನಿಕ ಸಂಶೋದನೆ ನಡೆದಿರುವ ಕಾಲದಲ್ಲಿದ್ದೂ
ಕಂಠದಿಂದ ತಾಳೇಗರಿ ಮೇಲೆ ಅಕ್ಷರ ಕೆತ್ತಿರುವ ಸಹನಾ ಮೂರ್ತಿ ಶಾಸ್ತ್ರಿಗಳನ್ನು ತಮಗೆ ಪರಿಚಯಿಸಲಿಲ್ಲವಲ್ಲವೆಂಬ
ಖೇದ ಮಾತ್ರ ವ್ಯಕ್ತಪಡಿಸಿದರು. ರಾಗಿ ಮುದ್ದೆ ಅವರೆಕಾಳು ಸಾರಿನ ಜೊತೆಗೆ ಒಂದು
ಬೇಯಿಸಿದ ಮೊಟ್ಟೆಯನ್ನುತಿನ್ನಲು ಕೊಟ್ಟು "ಶಾಸ್ತ್ರಿಗಳಂಥೋರ್ನ ನಮ್ಮ ಕುಲಪತಿಗಾಅದ
ಕಂಬಾರರವರಿಗೆ ಪರಿಚಯಿಸಿ ನಾಡೋಜ ಪ್ರಶಸ್ತಿ ಕೊಡಿಸಬಹುದಿತ್ತಲ್ಲ ವೈಕುಂಟ
ವಾಸಿಗಳಾಗಿದೆದ್ದರೇನಾಅಯ್ತು ಮರಣೋತ್ತರವಾಗಿ ಪ್ರಶಸ್ತಿ ಕೊಡಿಸಬಹುದಲ್ವೆ?" ಎಂದು
ಹೇಳಿದರು. ಅದಕ್ಕೆ ನಾನಿದ್ದು "ಈಗದೆಲ್ಲ ಆಗೊಳ್ಳ ಪಂಡಿತರೆ... ಈ ಉಯಿಲಿಗೆ ಸಂಬಂಧಪಟ್ಟ ಭಾಷೆ
ಮತ್ತು ಲಿಪಿ ಸಮಸ್ಯೆ ಬಗೆ ಹರಿಸಿ ಪುಣ್ಯ ಕಟ್ಕೊಳ್ರಿ ಅಷ್ಟೆ" ಎಂದೆ ಹಂಚಿ ಕಡ್ಡಿ ಮುರಿದಂತೆ. "ಆಯ್ತು
ಕುಂವೀ ಆಯ್ತು" ಅಂದರು. ಆ ಇಡೀ ರಾತ್ರಿ ಅವರು ಅದನ್ನು ನಕಲಿಳಿಸಿ ಕೊಟ್ಟರು. ಮರುದಿನ
ಅವರಿಗೆ ‘ಧನ್ಯವಾದಗಳನ್ನರ್ಪಿಸಿ ಅವರ ಮನೆಯಾದ ಅಮೃತಂಗ ಮಯ’ ದಿಂದ ಹೊರಬಿದ್ದ್ನು.
ತಾಳೆಗರಿ ಕಟ್ಟಿನೊಂದಿಗೆ ಸರಳ ಕನ್ನಡ ಪಾಠವನ್ನು ಕಂಕುಳಲ್ಲಿಟ್ಟುಕೊಂಡು ನಾನು
ಅಶ್ಟೊಂದು ಹಗುರಾಗಿ ಹಿಂದೆಂದೂ ಹೆಜ್ಜೆ ಹಾಕಿರಲಿಲ್ಲ. "ನಾನು ನಿಜವಾದ ಅರ್ಥದಲ್ಲಿ ಸಾಯ್ತಾ
ಇರೊದೆ ನಿನ್ನ ಕಂಕುಳಲ್ಲಿ ಮಾರಾಯಾ" ಎಮ್ದು ತಾಳೆಗರಿ ಕಟ್ಟಿನೊಳಗೆ ಬದುಕಿದ್ದ
ಶಾಸ್ತ್ರಿಗಳು ಚೀರುತ್ತಿರುವುದು ನನಗೆ ಕೇಳಿಸದೆ ಇರಲಿಲ್ಲ. ನಾನದಕ್ಕೆ ಏನು ಹೇಳುವುದು?
ಸತ್ತವರನ್ನು ಬರಹದ ಮೂಲಕ ಬದುಕಿಸುವುದು, ಬದುಕಿದ್ದವರನ್ನು ಬರಹದ ಮೂಲಕ ಸಾಯಿಸುವುದು
ಬರಹಗಾರನ ನಿತ್ಯಕರ್ಮ. ಅದರಲ್ಲೂ ನನ್ನಂಥವರು ಸದಾ ಪರಾವಲಂಬಿ ಜೀವಿ. ಬರಹಕ್ಕೆ ಬದುಕಿಗೆ
ಜಿಗಣೆ ಥರ ಅಂಟಿಕೊಂಡು ಹಿಂಸಿಸುವುದನ್ನು ಸತ್ತವರು ಮತ್ತು ಬದುಕಿದವರು, ಸಾವು ಬದುಕಿನ
ನಡುವೆ ಕಣ್ಣಕಪ್ಪಡಿ ಥರ ಕುರುಡು ನೋಟ ಬೀರುತ್ತ ಅಲೆದಾಡುತ್ತಿರುವವರೆಲ್ಲರೂ
ಉದಾರವಾಗಿ ಕ್ಷಮಿಸಬೇಕಾದುದು ಅನಿವಾರ್ಯ. ಹಾಗೆ ವಿಶಿಷ್ಟ ರೀತಿಯಲ್ಲಿ ಬದುಕಿರದಿದ್ದಲ್ಲಿ ನಾನ್ಯಾಕೆ
ಶಾಸ್ತ್ರಿಗಳ ಗೊಡವೆಗೆ ಹೋಗುತ್ತಿದ್ದೆನು ಶಾಮಂಣನ ಬದುಕನ್ನು ಸರಳರೇಖೆಯಂತೆ
ಗ್ರಹಿಸಿ ಒತ್ತಕ್ಷರಗಳ ಉಪದ್ವಾಪಿಗೆ ಹೋಗದೆ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತೆ
೩೭೫
ಸರಳವಾಗಿ ಬರೆದು ಮುಗಿಸುತ್ತಿದ್ದೆನು? ಈರುಳ್ಳಿಯಂತೆ ಒಬ್ಬರ ಬದುಕಿನೊಳಗೆ ಇನ್ನೊಬ್ಬರು ಹೆಚ್ಚುಗಾಅರಿಕೆಯಿಂದ
ಮೂಡುತ್ತಿರುವರಲ್ಲ! ಎಲ್ಲರು ಎಲ್ಲರೊಳಗೂ ಅವಿತುಕೊಂಡಿರುವರಲ್ಲ! ಪ್ರತಿಯೋರ್ವರ
ಉತ್ಕರ್ಷ ಮತ್ತು ಪತನಗಳಲ್ಲಿ ಪ್ರತಿಯೋರ್ವರ ಪಾತ್ರ ಇರುವುದಲ್ಲ! ಇವೆಲ್ಲವನ್ನು ಹೇಗೆ
ನಿರಾಕರಿಸಿ ಸರಳರೇಖೆಗೆ ಮೊರೆ ಹೋಗುವುದು! ಕನ್ನಡಿಯಿಂದಲೇ ನಿರ್ಮಿತವಾಗಿರುವ ‘ಜಿಂದಗೀ
ಮಹಲಿ’ನೊಳಗೆ ಅವರಲ್ಲಿ ಇವರು ಕಾಣಿಸುತ್ತಾರೆ... ಇವರಲ್ಲಿ ಅವರು ಕಾಣಿಸುತ್ತಾರೆ...
ಕಲಬೆರಕೆ ಪ್ರತಿಬಿಂಬಗಳಲ್ಲಿ ಛಿದ್ರಛಿದ್ರವಾಗಿರುವ ಪ್ರತಿಯೊಬ್ಬರು ಅಕ್ಷರದ ನೆಲೆ
ಕಂಡುಕೊಳ್ಳಲು ಓದುಗರಿಗೆ ಮುಖಾಮುಖಿಯಾಗಿ ನಿಲ್ಲಲು ಹಾತೊರೆಯುತ್ತ ಒಂದು ಪುಟ್ಟ
ಶಾಬ್ದಿಕ ವಸ್ತುವನ್ನು ಹಿಂಜಿಸುತ್ತಿರುವರು. ಶಾಬ್ದಿಕ ವಸ್ತುವಿನ ಒಂದು ಹಂತದವರೆಗೆ ಬಂದುಹೋಗಿರುವ
ಪರಮಪೂಜ್ಯ ಶಾಸ್ತ್ರಿಗಳೆಂಬ ವರ್ಣರಂಜಿತ ಅಥವಾ ವರ್ಣಗಳನ್ನೆಲ್ಲ ಅರಗಿಸಿಕೊಂಡಿರುವ ಹಾರಿ
ಧರೆಗಿಳಿದ ಗಾಳಿಪಟವನ್ನು ಮತ್ತೆ ನಭೋಮಂಡಲಕ್ಕೆ ಉಡ್ಡಯನ ಮಾಡಿಸುವಂಥ ಸನ್ನಿವೇಶ
ಎದುರಾಗಬಹುದೆಂದು ನಾನು ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಅವರು ದೈಹಿಕವಾಗಿ
ನಗಣ್ಯಗೊಳ್ಳುತ್ತಿದ್ದ ಕ್ಷಣದಲ್ಲಿಯೇ ತಾಳೆಗರಿ ಕಟ್ಟಿನ ಗೋಚರ ಸ್ಥಿತಿ ಮೂಲಕ ಮತ್ತೆ ಬದುಕುಬಿಟ್ಟಿದ್ದರು.
ಲೌಕಿಕದೊಳಗಡಗಿರುವ ಅತಾಕಿಕತೆಯನ್ನೂ; ಅಲೌಕಿಕತೆಯೊಳಡಗಿರುವ ಲೌಕಿಕತೆಯನ್ನು
ಒರೆಗಚ್ಚಲೆಂದೇ ಬರೆದಿರುವ ರೀತಿಯಲ್ಲಿ ಅವರ ಉಯಿಲಿತ್ತು. ಪರಿಗ್ರಹಣಕ್ಕೆ ಸವಾಲು ಹಾಕುವ
ರೀತಿಯಲ್ಲಿ ಅವರ ಶಬ್ದಖಂಡವಿತ್ತು. ಸಮಸ್ತ ಶಬ್ದ ಶಾಸ್ತ್ರಿ ಪಾರಿಗರ್ನಯಸೇನ ಪಂಡಿತರೆಂಬ
ಶಾಸನ ಕವಿಯೇ ಶಾಸ್ತ್ರಿಗಳ ರೂಪದಲ್ಲಿ ಬರೆದಿರುವನೋ ಎಂಬಂತಿತ್ತು ಅದರ
ಶಬ್ದಕೋಶವು... ಕಂದ, ಸೀಸ... ಖ್ಯಾತ ಕರ್ನಾಟಂಗಳೆಲ್ಲವನ್ನೂ ಭಟ್ಟಿ ಇಳಿಸಿದಂತಿತ್ತುಅದರ
ಒಕ್ಕಣೆಯು... ಅದನ್ನು ಯಥಾ ರೀತಿ ಕಾದಂಬರಿಯೊಳಗಳವಡಿಸಿದರೆಲ್ಲಿ ಓದುಗರ
ಕೋಪಾರುಣ ನೇತ್ರಗೈಗೆ ತುತ್ತಾಗುವನೆಂದು ಹೆದರಿದ ಪಾಮರನಾದ ನಾನು ಅದನ್ನು
ಕಲಿಯುಗ ಅಧರ್ವಣ ಪಂಡಿತರೆಂದೇ ಹೆಸರಾದ ಮಲ್ಲೇಪುರಂ ವೆಂಕಟೆಶ್ವರರ
ಬಳಿಗೊಯ್ದು ಸಾಮಾಅನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕನ್ನಡಿಸುವ ಕೆಲಸವನ್ನು ಮಾಡಿಸ್ದೆನು.
ಮೂಲ ಪಾಠದೊಂದಿಗೆ ನವೀನ ಪಾಠಾಂಶವನ್ನು ತುಲನೆ ಮಾಅಲು ಅಸಮರ್ಥನಾಗಿರುವ ನಾನು
ಅದನ್ನು ಹಾಗೆಯ್ ಕಾದಂಬರಿಯೊಳಗೆ ಅಳವಡಿಸುವ ಕೆಲಸ ಮಾಡುತ್ತಿರುವೆನು. (...ತಾವು
ಹಂಸಕ್ಷೀರ ನ್ಯಾಯದಂತೆ ಪರಿಗ್ರಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿರುವೆನು)
*
*
*
‘ಪರಮ ಪೂಜ್ಯ ಪರಮೇಶ್ವರ ಶಾಸ್ತ್ರಿಗಳ ಉಯಿಲು’
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಕೂಡಲಿಗಿ ತಾಲ್ಲೂಕಿನ ಕಸಬಾ ಹೋಬಳಿ ಕೊಟ್ಟೂರು
ಗ್ರಾಮವಾಸಿಯಾದ, ಸದರಿ ಗ್ರಾಮದಲ್ಲಿ ಜ್ಯೊತಿಷ್ಯ, ವೈದಿಕ ಮಾಡಿಕೊಂಡವನಾಗಿದ್ದು,
ಅಗ್ರಹಾರದವರ ಹಗೆತನದಿಂದಾಗಿಯೋ ಕಾಲಕರ್ಮಗಳ ಪಿರ್ಯಾದುಗಳಿಂದಲೋ; ಪುತ್ರ
ಪೌತ್ರಾದಿಗಳ ಅಸಂತುಷ್ಟಿಯಿಂದಾಗಿಯೋ, ಬದಲಾದ ಸಾಮಾಜಿಕ ರಾಜಕೀಯ ಕಾಲಮಾನ ವಿದ್ಯಮಾನಗಲಿಂದಾಗಿಯೋ,
ಇಹಲೋಕ ತ್ಯಜಿಸಲೋಸುಗ ಅನೇಕ ಸಿದ್ಧತೆಗಳನ್ನು ಗುಟ್ಟಾಗಿ ಮಾಡಿಕೊಂಡಿರುವಂಥವನೂ,
ದತ್ತಕ ಮೀಮಾಂಸಾ, ಚಿತ್ರಸೂತ್ರ; ಚಿಕಿತ್ಸಾಸಾರ ಸಂಗ್ರಹಗೋಲದೀಪಿಕಾ, ಚಾತುವರ್ಗ
ಚಿಂತಾಮಣಿ ಜ್ಯೋತಿಷ ವೇದಾಂಗಗಳನ್ನೆಲ್ಲ ಅರಗಿಸಿಕೊಂಡಂಥವರೂ ಜ್ಯೋತಿಷ್ಯ ಸಾರೋದ್ಧಾರ,
ಸಂಗೀತೋಪನಿಷತ್ಸಾರೋದ್ಧಾರ ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ಸಂಸ್ಕೃತ
ಭಾಷಾ ವಾರಿಧಿಯ್ ಮೊದಲಾದ ಬಿರುದಾವಳಿಗಳನ್ನುಪಡೆದ ವಂಶಜನೂ; ವೀರಮಿತ್ರೋದಯ
ಬಿರುದಾಂಕಿತರಾದ ಘಂಟಾ ಶಾಮಾ ಶಾಸ್ತ್ರಿಗಳ ಏಕಮಾತ್ರ ಪುತ್ರನೂ ಆದಂಥಹ ಪರಮೇಶ್ವರ
ಶಾಸ್ತ್ರೀ ಎಂಬ ಹೆಸರಿನನಾನುನನ್ನ ಪೂರ್ಣ ಇಷ್ಟಾನುಸಾರವಾಗಿ ಬರೆದು ಬರೆಯಿಸಿಕೊಂಡಿರುವ ಉಯಿಲು.
ಸದರೀ ಉಯಿಲನ್ನು ಉದ್ಧೇಶಿತವಾಗಿಯೂ, ನಿರುದ್ಧೇಶಿತವಾಗಿಯೂ ಬರೆಯಲು, ಬರೆಸಲು ಹಗಲು
ಹುಟ್ಟಿದವರಾಗಲೀ; ರಾತ್ರಿಹುಟ್ಟಿದವರಾಗಲೀ; ಹೊರಗೆ ಹುಟ್ಟಿದವರಾಗಲೀ; ಒಳಗೆ ಹುಟ್ಟಿದವರಾಗಲೀ;ಮಂಚದ
ಮೇಲೆ ಹುಟ್ಟಿದವರಾಗಲೀ; ನೆಲದ ಮೇಲೆ ಹುಟ್ಟಿದವರಾಗಲೀ ಪಟ್ಟಣ್ದಲ್ಲಿ ಹುಟ್ಟಿದವರಾಗಲೀ
ಹಳ್ಳಿ ಹೋಬಳಿಗಳ್ಳಿ ಹುಟ್ಟಿದವರಾಗಲೀ; ಗಂಡಾಗಲೀ ಹೆಣ್ಣಾಗಲೀ ನಪುಂಸಕರಾಗಲೀ; ಹಿರಿಯರಾಗಲೀ,
ಕಿರಿಯಲಾಗಲೀ; ವಿದ್ಯಾವಂತರಾಗಲೀ ಅವಿದ್ಯಾವಂತರಾಗಲೀ; ಮೇಲ್ಜಾತಿಯವರಾಗಲೀ
ಕೀಳುಜಾತಿಯವರಾಗಲೀ ಹೀಗೆ ಯಾರೊಬ್ಬರ ಮಾನಸಿಕವಾದ ದೈಹಿಕವಾದ ಬಲವಂತವೆಂಬುದು
ಸ್ಪೂರ್ತಿ ಎಂಬುದು ತಿಲ ಮಾತ್ರ ಇಲ್ಲವೆಂದೂ, ನಾನು ಬರೆದ ತ್ರಿಸಂಧ್ಯಾಸಮಯದಲ್ಲಿ ನನ್ನ
ಮಸ್ತಿಷ್ಯದೊಳಗಿನ ಸಣ್ಣ ಮಿದುಳು ದೊಡ್ಡ ಮಿದುಳು ನರ ನಾಡಿಯೂ ಸೇರಿದಂತೆ ನನ್ನ ಇಡೀ
ದೇಹವು, ಮನಸ್ಸೂ ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯಲ್ಲೇ ಇದ್ದಿತೆಂದುಊ; ನಾನು ಭೂತಕಾಲದಲ್ಲಾಗಲೀ,
ವರ್ತಮಾನ ಕಾಲದಲ್ಲಾಗಲೀ ಜಾಗೃತ ಸ್ಥಿತಿಯಲ್ಲಾಗಲೀ, ಸುಪ್ತಾವಸ್ಥೆಯಲ್ಲಾಗಲೀ; ಮಲ, ಮೂತ್ರ,
ಬೆವರು ಮೊದಲಾದ ವಿಸರ್ಜನಾ ಕಾರ್ಯ ಸ್ಥಿತಿ ಸಂದರ್ಭಗಲಾಗಲಿಈ; ಮಾತು, ಮನಸ್ಸು, ನೋಟ,
ಸ್ಪರ್ಶಗಳೇ ಮೊದಲಾದ ಪಂಏಂದ್ರಿಯಗಳಲ್ಲಾಗಲೀ, ನಾನೆಂದೂ ಅಶಜ, ಅಸ್ವಾಭಾವಿಕವಾಗಿಯೂ
ವರ್ತಿಸಿದುದಿಲ್ಲವೆಂದೂ, ಬುದ್ಧಿಮಾಂದ್ಯ; ಹುಚ್ಚು; ಅರೆಹುಚ್ಚು, ಮೂರ್ಛ್; ಚಿತ್ತೋದ್ರೇಕ ಇತ್ಯಾದಿ
ಮಾನಸಿಕ ರೋಗಗಳಾಗಲೀ ದೈಹಿಕ ರೋಗಗಳಾಗಲೀ ಒಳಗಾಗಿರಲಿಲ್ಲವೆಂದೂ ಈ ಮೂಲಕ ಅರಿಕೆ
ಮಾಡಿಕೊಳ್ಳುತ್ತಿರುವೆನು.
ನಾನೀ ಸದರಿ ಉಯಿಲನ್ನು ಇಂಥವರನ್ನು ಕುರಿತು ಇಂಥವರಿಗೇ ಬರೆಯಬೇಕೆಂದು ಆರಂಭದಲ್ಲಿ
ಯೋಚಿಸಿಲ್ಲ. ನಾನು ನನ್ನ ಕುಟುಂಬ ವರ್ಗದ ಪರವಾಗಲೀ, ಬೇರೆಯವರ ಪರವಾಗಲೀ, ವಿರುದ್ಧವಾಗಲೀ
ಬರೆಯಬೇಕೆಂದು ಯೋಚಿಸಿಲ್ಲ. ‘ನಾನು’ ಎಂಬ ಪದವನ್ನು ದೈತಾದ್ವೈತಗಳ ಮೂಲಕ ವಿವರಿಸುವ
ಹಾಗೂ ಸಮರ್ಥಿಸುವ ಕೆಲಸವನ್ನು ಮಾಡುತ್ತಿಲ್ಲ. ಯಜ್ಞದಲ್ಲಿ ಭಗವದರ್‍ಪಣ ಮಾಡಿದ ನಂತರ
ಉಳಿಯುವ ವಸ್ತುಗಳಂತೆಯೇ ‘ನಾನು’ ಎಂಬ ಪದ ಕೂಡ. ಈ ಪದದ ಮೂಲಕ ಅಪ್ರವೃತ್ತ
ಪ್ರವರ್ತನೆಯನ್ನಾಗಲೀ, ಅಜ್ಞಾತ ಜ್ಞಾಪನವನ್ನಾಗಲೀ, ಮಾಡುವ ಕ್ರಿಯಾಕರ್ಮಕ್ಕೆ
ಹೋಗುವುದಿಲ್ಲ. ವಂಶಪಾರಂಪರ್ಯವಾಗಿಬಂದ ವೈದಿಕ ಶಾಸ್ತ್ರಾಧ್ಯಯನ
ಪುಣ್ಯಶ್ರವಣಗಳಿತ್ಯಾದಿ ನನ್ನ ತಲೆಮಾರಿಗೇ ನಿಂತುಬಿಡುವುದೆಂದು ಮೊದಲೇ ಗೊತ್ತಾಗಿದ್ದಲ್ಲಿ?
ನನ್ನ ತೀರ್ಥರೂಪರು ನನ್ನ ಶೈಶವಾಸ್ಥೆಯಿಂದ ನನ್ನನ್ನು ಬಾಲ್ಯಾವಸ್ಥೆಗೆ ಮುಂಬಡ್ತಿ ನೀಡುತ್ತಿರಲಿಲ್ಲವೇನೋ?
ನನ್ನ ಹುಟ್ಟು ಬೆಳವಣಿಗೆ ಪಾತ್ರ ಪೋಷಣೆ ನಿರ್ವಹಣೆ ಎಲ್ಲವೂ ಅಕಸ್ಮಿಕವೆಂದೇ
ಹೇಳಬೇಕು. ನಾನು ನಿವೇದಿಸಿದ ಪಾತ್ರಗಳ ಕಡೆ ಅವಲೋಕನ ಮಾಡಿದರೆ ನನಗೇ
೩೭೭
ಆಶ್ಚರ್ಯವಾಗುತ್ತದೆ. ಯಾರಿಗೋ ಮಗನಾಗಿದ್ದೆ. ಯಾಇಗೋ ತಂದೆಯಾಅಗಿದ್ದೆ;
ಯಾರಿಗೋ ಮಾವನಾಗಿದ್ದೆ; ಯಾರಿಗೋ ಗಂಡನಾಗಿದ್ದೆ; ಯಾರಿಗೋ ಅಜ್ಜನಾಗಿದ್ದೆ. ಆದರೆ ಮುತ್ತಜ್ಜನ
ಪಾತ್ರ ನಿರ್ವಹಿಸುವ ಮೊದಲೇ ನಿರ್ಗಮಿಸಬೇಕೆಂದು ಕಳೆದ ಕೆಲವು ದಿನಗಳಿಂದ
ಅನ್ನಿಸುತ್ತಿರುವುದು. ಇದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆದವು... ನಡೆಯುತ್ತಿರುವುವು...
ಮುಂದೆ ಕೂಡ ನಡೆಯದೆ ಇರಲಿಕ್ಕಿಲ್ಲ... ಇವುಗಳನ್ನು ತಡೆಯುವ ಶಕ್ತಿ ನನ್ನಲ್ಲಿ
ಯಾವತ್ತೂ ಇರಲಿಲ್ಲ... ಅಗೋಚರವಾಗಿ ಉಳಿದು ಕದ್ದು ಮುಚ್ಚಿ ಪ್ರಕಟವಾಗುತ್ತಿದ್ದ ದೌರ್ಬಲ್ಯ
ಇತ್ತೀಚೆಗಂತೂ ರಾಜಾರೋಷವಾಗಿ ಪ್ರಕಟಗೊಂಡು ನನ್ನ ಇಚ್ಛಾಶಕ್ತಿಯನ್ನು ಅಲ್ಲಾಡಿಸುತ್ತಿದೆ.
ಇದನ್ನು ನನ್ನ ಕುಟುಂಬವರ್ಗದವರೂ; ಸಾಮಾಜಿಕರೂ ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನಾನು ದಿನೇ ದಿನೇ ಸವಕಲುಗೊಳ್ಳುತ್ತಿರುವೆ - ಎಂಬುದಕ್ಕೆ ಸಾಕ್ಷಿಯಾಗಿ ಪಂಚೇಂದ್ರಿಯಗಳು
ನನ್ನ ವಿರುದ್ಧ ಪಿತೂರಿ ಮಾಡುತ್ತಿವೆ. ಯಾವುದನ್ನು ಹೇಗೆ ಕೇಳಿಸಿಕೊಳ್ಳಬೇಕೋ ಹಾಗೆ
ಕೇಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ... ಯಾವುದನ್ನು ಹೇಗೆ ಮಾತಾಡಬೇಕೋ
ಹಾಗೆ ಮಾತಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ... ಎಷ್ಟೋ ಘಟನೆಗಳಿಗೆ ವಿದ್ಯಮಾನಗಳಿಗೆ
ಅಪಾರ್ಥಮಾಡಿಕೊಂಡೋ ಏನೋ, ಅಸಮರ್ಪಕವಾಗಿ; ಅಸಹಜವಾಗಿ ಪ್ರತಿಕ್ರಿಯಿಸುತ್ತಿರುವೆ... ಹಾಗೆಯೇ
ನನ್ನ ಪ್ರತಿಕ್ರಿಯೆಗಳನ್ನು ಎಷ್ಟೋ ಸಂದರ್ಭಗಳಲ್ಲಿ ಸಮರ್ಥಿಸುವ ಪ್ರಯತ್ನ ಮಾಡಿ ನಗೆಪಾಟಲಾಗಿರುವೆ.
ಇಂಥ ಪ್ರಯತ್ನ ಪುನರಪಿ ಆಗಬಾರದೆಂದು ನಿರ್ಧರಿಸಿ ಮೌನದ ಬಾಂಡಲೆಯೊಳಗೆ ಉಳಿದು ಬೇಯುತ್ತ
ಇದ್ದುಬಿಡುವುದನ್ನು ಅಭ್ಯಾಸ ಮಾಡಿಕೊಂಡೆನು. ನನ್ನ ಮೌನ ಸೀಳುವ, ಭಂಗಪಡಿಸುವ
ಪ್ರಯತ್ನಗಳು ನಡೆದಿದ್ದುಂಟು. ಆ ಅಂಥ ಮೌನದ ಬೇಗೆಯೊಳಗೆ ಬೆಂದು ಮಾಗುವ
ಅನುಭವದ ಸ್ವರೂಪ, ಭಗವಂತನ ಸ್ವರೂಪಕ್ಕಿಂತ ಭಿನ್ನವೇನಲ್ಲ ಎಂದು ನನಗೆ
ಕ್ರಮೇಣ ಗೊತ್ತಾಯಿತು. ನಾನ್ನಷ್ಟೇ ತೂಕದ ಹಸುವಿನಂತೆಯೇ ಬದುಕಿನವನಾದ ನಾನು ನನ್ನ
ಬದುಕಿನ ಆಂತರಿಕ ಹಾಗೂ ಬಾಹ್ಯ ಶ್ತೃಗಳ ಬಗ್ಗೆ ಹೇಳಿಕೊಳ್ಳುವ ಪ್ರಯತ್ನವನ್ನು ಅನೇಕ
ಸಂದರ್ಭಗಳಲ್ಲಿ ಮಾಡಿದ್ದುಂಟು. ವಿಧವೆಯರಿಗೆ ಬಹುಮಾನ ನೀಡುವುದು ಒಂದೇ,
ಅಪಾತ್ರರಿಗೆ, ಅವಿಧೇಯರಿಗೆ ವಿಷಯ ನಿವೇದಿಸಿಕೊಳ್ಳುವುದೂ ಒಂದೇ ಎಂದು ಹಲವಾರು ಸಾರಿ
ಭಾವಿಸಿದೆನು. ದಿನಗಳೆದಂತೆ ನಾಲಿಗೆ ಮೇಲೆ ಜೇನುತುಪ್ಪವನ್ನಾಗಲೀ ವಿಷವನ್ನಾಗಲಿ ಇಟ್ಟರೆ
ರುಚಿನೋಡದೆ ಇರುವುದು ಎಷ್ಟು ಅಶಕ್ಯವೋ , ಅಷ್ಟೇ ಅಶಕ್ಯ ಹೇಳದೆ ಇರುವುದು ಎಂದು
ನನಗೆ ಕ್ರಮೇಣ ಅರ್ಥವಾಯಿತು. ಸಂಸಾರವೆಂಬ ಸಾಗರದಲ್ಲಿ ಮೀನೋಪಾದಿಯಲ್ಲಿ ಈಜುತ್ತ ಬಂದಿರುವ
ನಾನು ಕುಡಿದಿರಬಹುದಾದ ನೀರಿನ ಪ್ರಮಾಣ ಎಷ್ಟು ಎಂಬ ಬಗ್ಗೆ ನಿಖಿರವಾಗಿ ಹೇಳಲು ಬೇರೆಯವರಿಗೆಷ್ಟು
ಅಸಾಧ್ಯವೋ , ಅಷ್ಟೇ ಅಸಾಧ್ಯವು ನನಗೆ ಕೂಡ. ಮೃತ್ಯುವೆಂಬ ತಿಮಿಂಗಿಲ ನನ್ನನ್ನು ನುಂಗಿ
ಹಾಕಲು ತೀರಾ ಹೊಂಚಿ ಹತ್ತಿರದಲ್ಲೆ ಇದೆ ಎಂಬ ದಿವ್ಯ ಅರಿವು ಮೂಡಿದ್ದೇ ನನ್ನ ಮೊಮ್ಮಗನಾದ ಶಾಮಾ
ಶಾಸ್ತ್ರಿಯು ಬದುಕಿನ ಆಸರೆಯನ್ನು ಸರ್ಕಾರದ ಪಗಾರಕ್ಕೆ ಒಪ್ಪಿಸಿದಾಗಲೇ. ನಮ್ಮ ವಂಶದಸಮಸ್ತ
ಪೀಡೆಯೇ ಮೊಮ್ಮಗನ ರೂಪದಲ್ಲಿ ಕಾಣಿಸಿಕೊಂಡಿದೆ ಎಂದು ನನಗೆ ಅರ್ಥವಾದ ಕ್ಷಣ ಬದುಕಿನ
ಮುಖ್ಯ ಅಧಿಕರರಣದ ಕೊನೆಯ ಅಧ್ಯಾದಲ್ಲಿ ನಿಂತಿರುವೆ ಎಂದುಕೊಂಡೆ. ಧರ್ಮಸ್ಥೀಯ ಮತ್ತು
ಕಂಟಕ ಶೋದನೆ ಮಾಡಿಕೊಳ್ಳಲಿಕ್ಕೆ ಇದು ಪಕ್ವ ಕಾಲ ಎಂದುಕೊಂಡೆ. ಅದೇ ಹೊತ್ತಿಗೆ ನ್ಯಾಸ
ತ್ರಯಗಳ ಸಾಕಾರಮೂರ್ತಿಯೇ ತಾನೆಂದು ಬೀಗುವ ವರದಾಚಾರ್ಯನಿಗೂ ನನಗೂ ಸಂಸಾರಕ್ಕೆ
ಸಂಬಂಧಿಸಿದಂತೆ ವಾದೋಪವಾದವಾಗಿ ನನ್ನ ಬದುಕಿನ ಮಗುಚಿದ ಪುಟಗಳ ಕಡೆ ತಿರುಗಿ
೩೭೮
ನೋಡುವ ಬಯಕೆ ಉಂಟಾಯಿತು.ವ್ಯಸನಧಿಕಾರಿ ಕರಣಗಳ ಪಟ್ಟಿಮಾಡಿ ವಿಗ್ರಹ, ಆಸನ,
ಯಾನ, ಸಂಶ್ರಯ ಮತ್ತು ದ್ವೈಧೀ ಭಾವಗಳ ಮೇಲೆ ಹತೋಟಿ ಸಾಧಿಸಿ ಸಾವೆಂಬದೈವಿಕ
ಆಕಸ್ಮಿಕಕ್ಕೆ ತುತ್ತಾಗಬೇಕೆಮ್ಭ ಬಯ್ಕೆ ಉಂಟಾಯಿತು. ನನ್ನೀ ಬಯಕೆಯ ಬೇಟೆಗಾರನ ಬಾಣಕ್ಕಿಂತಲೂ
ಬಲಶಾಲಿ ಎಂಬುದು ಉಯಿಲು ಬರೆಯುವ ಸಂದರ್ಭದಲ್ಲಿ ನನಗೆ ಅರ್ಥವಾಯಿತು. ತಾಯಿಯೋರ್ವಲ
ಗರ್ಭದಲ್ಲಿರುವ ಭ್ರೂಣವನ್ನು ಹೊಸಕಿ ಹಾಕುವಷ್ಟು ಶಕ್ತಿಶಾಲಿಯಾದುದುನನ್ನ ಬುದ್ಧಿಯುಎಂಬುದು
ನನಗೆ ಅರ್ಥವಾಗಿ ನನ್ನ ಬಗ್ಗೆ ನನಗ್‌ಏ ಬಲವಾಯಿತು. ಯಾವ ಪ್ರಕಾರವಾಗಿ ಕಾಳ್ಗಿಚ್ಚಿಗೆ ಸ್ನೇಹಿತನಾಗಿರುವ
ಗ್ಗ್ಳಿಯೇ ಮುಂದೊಂದು ದಿನ ನನ್ನ ಹೃದಯದಲ್ಲಿ ದಶಕಗಳ ದಿನಮಾನದಿಂದ
ಬೆಳಗುತ್ತಿರುವ ಪರಂಜ್ಯೋತಿಯನ್ನು ನಂದಿಸುವ ಪ್ರಯತ್ನ ಮಾಡದೆ ಇರದು ಎಂದು
ಅರ್ಥವಾಯಿತು. ಇಂಥ ಅನೇಕ ಪ್ರೇರಣೆಗಳಿಂದ ವಾಗ್ವಾದ ತೀರ್ಥ, ನವರಸ ನಿಷ್ಣಾತ ಇವೇ ಮ್,ಒದಲಾದ
ಬಿರುದಾಂಕಿತರೂ, ಶ್ರೀಮನ್ ಮಹಾರಾಜರುಗಳಿಂದ ಕಿರು ಘಂಟಾಯುಕ್ತ ಮುಂಗೈ ಕಡಗ ಪಡೆದಿದ್ದಂಥವರೂ
ಆದ ಘಂಟಾ ಶಾಮಶಾಸ್ತ್ರಿಗಳ ಗರ್ಭ ಸಂಜಾತನೂ ಆದ ಪರಮೇಶ್ವರ ಶಾಸ್ತ್ರಿ ಎಂಬ ಹೆಸರಿನವನಾದ
ನಾನು ಒಳಗೊಂದು, ಹೊರಗೊಂದು ಎಂಬ ಭೇಧ ಮಾಡದೆ ಈ ಉಯಿಲನ್ನು ಅಂತರಂಗದ
ಗಂಗೆಯ ಪ್ರವಾಹ ಶಮನಾರ್ಥವಾಗಿ ಬರೆಯಲು ನಿರ್ಧರಿಸಿದೆನು.
ತಂದೆಗೆ ತಕ್ಕ ಮಗನಾಗಿರದಿದ್ದ; ಹೆಂಡತಿಗೆ ತಕ್ಕ ಗಂಡನಾಗಿರದಿದ್ದ; ಪ್ರೇಯಸಿಗೆ ತಕ್ಕ ಪ್ರಿಯತಮನಾಗಿರದಿದ್ದ;
ಮಗನಿಗೆ ತಕ್ಕ ತಂದೆಯಾಗಿರದಿದ್ದ; ಸೊಸೆಗೆ ತಕ್ಕ ಮಾವನಾಗಿರದಿದ್ದ ಮೊಮ್ಮಗನಿಗೆ
ತಕ್ಕ ಅಜ್ಜನಾಗಿರದಿದ್ದ, ಬದಲಾಗುತ್ತಿರುವ ಸಮಾಜಕ್ಕೆ ತಕ್ಕ ಪ್ರಜೆಯಾಗಿರದಿದ್ದ ನಾನು ಬರೆಯುತ್ತ್ರುವ
ಉಯಿಲಿನಿಂದ ಯಾರಿಗೂ ಲವಲೇಶ ಲಾಭಾಂಶವಾಗುವುದಿಲ್ಲವೆಂಬ ಅರಿವು ನನಗೆ ನಿಚ್ಚಳವಾಗಿ ಉಂಟು.
ಬದುಕಿನ ಉತ್ತರಾರ್ಧ ಭಾಗದಲ್ಲಿ ಅನುಕೂಲರಾದವರಿಗಾಗಲೀ; ಪ್ರತಿಕೂಲವಿದ್ದವರಾಗಲೀ ನಾನು ಪ್ರಿಯನಾಗಿರಲಿಲ್ಲ
ಎಂಬ ಅರಿವು ಉಂಟು. ಮಧ್ಯ ವಯಸ್ಸು ಸಮೀಪಿಸುತ್ತಿದ್ದಂತೆ ನನ್ನೊಳಗೆ ಬೇರು ಬಿಡತೊಡಗಿದ್ದ
ಸಚ್ಛೂದ್ರ ಕಲ್ಪನೆಯನ್ನು ಆಮೂಲಾಗ್ರ ಅಳಿಸುವ ಸೃಡ ನಿಶ್ಚಯವನ್ನು ಪ್ರಾಮಾಣಿಕವಾಗಿ
ಮಾಡಲಿಲ್ಲವೆಂಬ ಅರಿವು ಉಂಟು. ಯಾವ ಪ್ರಕಾರವಾಗಿ ಸ್ವಾಮಿಯ ಸಾನ್ನಿಢ್ಯ್ದಲ್ಲಿರುವ ಟಗರು
ಸಿಂಹದಂತೆ ವರ್ತಿಸುವುದೋ ಹಾಗೆಯೇ ನಾನು ಕೂಡನನ್ನ ತಂದೆಯವರಾದ ಕೀ.ಶೇ.ಶಾಮಾ
ಶಾಸ್ತ್ರಿಗಳ ಸಾನ್ನಿಧ್ಯದಲ್ಲಿ ಬದುಕಿನ ಮೂಲ ರಹಸ್ಯವನ್ನು ಭೇದಿಸುವ ಕೆಲಸಕ್ಕೆ ಮುಂದಾಗಲಿಲ್ಲ
ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಿರುವೆನು. ಅಂಧ ಕೂಪದಲ್ಲಿ ಬಿದ್ದಂಥ ಕೋತಿ, ಹಾವು, ಸಿಂಹ
ಮತ್ತು ಅಕ್ಷಶಾಲಿಕರನ್ನು ಬದುಕಿಸಿದ ಕಾಂಕೇಯನೆಂಬ ಪಥಿಕನಿಗೂ, ಇದಕ್ಕೆ ವಿರುದ್ಧವಾಗಿ
ಅಂತರಂಗದ ಅಂಧಕೂಪದಲ್ಲಿ ಪಂಚೇಂದ್ರಿಯಗಳನ್ನುಊ; ಅರಿಷಡ್ವರ್ಗಗಳನ್ನೂ
ಕೊಳೆಯಲು ಬಿಟ್ಟ ನನಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಅರಿವು ಉಂಟು. ಸಂಶಯಾಸ್ಪದ
ರೀತಿಯಲ್ಲೇ ಬದುಕು ಮುಂದುವರಿಸು ಎಂದು ವಿಧಿನಿಯಮ ನನ್ನ ಹಣೆಯಲ್ಲಿ ಬರೆದಿರಲು
ಏನು ಮಾಡಲು ಸಾಧ್ಯ? ಕಿರಾತನ, ಚರ್ಮಕಾರನ ಮನೆಯಲ್ಲಿ ಊಟದ ವೇಳೆ ಕಳೆದವರಿಗೆ
ಪ್ರಾಯಶ್ಚಿತ್ತ ವಿಧಿಸಿರುವ ಹೇಮಚಂದ್ರ ಚಂಚಲ ಸ್ವಭಾವದ ಕುದುರೆಗಳ ಲಾಯವನ್ನು
ಅಂತರಂಗದಲ್ಲಿ ಪೋಷಿಸಿಕೊಂಡು ಬಂದವನಾದ ನನ್ನಂಥವಿಗೇಕೆ ಪ್ರಾಯಶ್ಚಿತ್ತವನ್ನು ತನ್ನ
ಸ್ಥಿತಿಯಲ್ಲಿ ಯಾಕೆ ಹೇಳಿಲ್ಲ? ನ್ಯಗ್ರೋಧದಂಥೆ ಬಿಳಲು ಬಿಡುತ್ತ ಬದುಕುವುದಾಯಿತಲ್ಲ...
ಹಲ್ಲೊಳಗಿನ ವಿಶದ ಪ್ರಾಮಾಣ್ಯ ಪರೀಕ್ಷಸಲೋಸುಗ ಅನೇಕ ತಕ್ಷಕರುಗಳಿಂದ
ಕಚ್ಚಿಸಿಕೊಳ್ಳುವುದೇ ಆಯಿತಲ್ಲ ನನ್ನ ಬದುಕು. ಇದೆಲ್ಲ ವಿವರಾಡಂಬರ ಕೊಚ್ಚುತ್ತಓದುಗರ
ತಲೆ
೩೭೯
ತಿನ್ನುವ ಗೋಜಿಗೆ ಹೋಗಬಾರದೆಂದೇ ನಾನು ವಿವಿಧಕಳಾಪಂಡಿತರಿಗಷ್ಟೇ
ಅರ್ಥವಾಗಲೆಂದುಚಿತ್ತೋನ್ಮೀಲನಕಾರಿಯಾದ ವೈದಿಕ ಛಂದಸ್ಸು ಮತ್ತು ಚಂಪೂ ಮಿಶ್ರಿತ ಶೈಲಿಯಲ್ಲಿ
ಬರೆಯಲೆತ್ನಿಸಿಹೆನು. ವೈಯಕ್ತಿಕ ಬದುಕಿನ ಮೂಲ ದ್ರವ್ಯವಾದ ಗಾಯತ್ರಿಯನ್ನೇ
ಅನುಷ್ಟುಪ್ ಆಗಿ ಪರಿವರ್ತಿಸಿರುವೆನು. ಮಧ್ಯೆ, ಮಧ್ಯೆ ಮಧ್ಯಾಕ್ಷರಲುಪ್ತ ಪದಗಳಿದ್ದು
ಎಂಥ ಪಂಡಿತರನ್ನೂ ಒಂದು ಕ್ಷಣ ದಿಙ್ಮೂಢಗೊಳಿಸದೆ ಇರಲಾರವು. ಸ್ವರ ಸಂಗೀತದ
ಗಾಂಭೀರ್ಯದ ಮೂಲಕವೇ ಅಲೌಕಿಕವಾದ ಮಂಪರು ಕವಿಯುವಂತೆ ಮಾಡಿ ತನ್ಮೂಲಕ ನನ್ನನ್ನು
ನಾನು ಮರೆಯುವ ಪ್ರಯತ್ನ ಮಾಡುತ್ತಿರುವೆನೆಂದು ಪ್ರಾಮಾಣಿಕವಾಗಿ
ಹೇಳಬಯಸುತ್ತಿರುವೆನು. ಒಂದು ರೀತಿ ಸದರೀ ಉಯಿಲಿನ ಮೂಲಕ ಪುನರುಜ್ಜೀವಿಸುವ ಪ್ರಯತ್ನ
ನನ್ನದಾಗಿರುತ್ತದೆ. ಉದಾತ್ತ ಅನುದಾತ್ತ ಮತ್ತು ಸ್ವರಿತಗಳೆಂಬ ಮೂರು ಪ್ರಕಾರದ
ಸ್ವರಗಳನ್ನು ಕರತಲಾಮಲಕ ಮಾಡಿಕೊಂಡವರಿಗೆ ಮಾತ್ರ ನನ್ನೀ ಉಯಿಲು ಮಾತ್ರ
ಅರ್ಥವಾಗಲು ಸಾಧ್ಯ. ಉದಾತ್ತಾದಿಯಾದ ಸ್ವರ ಸಂಗೀತ ಬದುಕಿನ ಛಂದಸ್ಸಿನ ಸೌಂದರ್ಯದ ಸಾಕ್ಷಾತ್ಕಾರ
ಮಾಡಿದರೆ ನಾನು ಬರೆಯುತ್ತಿರುವ ಉಯಿಲು ಸಾರ್ಥಕವಾಗುತ್ತದೆ. ಬದುಕಿನ ಏಕತಾನತೆಯ ಪರಿಹಾರಕ್ಕೋ
ಎನ್ನುವಂತೆ ದೀರ್ಘ-ಹ್ರಸ್ವಲಯದ ವಿನ್ಯಾಸಗಳು ಆಗಾಗ ತೋರಲಿರುವುದರಿಂದ ಪ್ರಾಜ್ಞ
ಓದುಗರಾದವರು ಆಗಾಗ್ಗೆ ಪ್ರಾಚೀನ ಕನ್ನಡ ಸಂಸ್ಕೃತ ನಿಘಂಟುಗಳ ಮೊರೆಹೋಗುವುದು
ತೀರ ಅಗತ್ಯ.
ಶ್ಲೇಶ್ಮವೇ ಮೊದಲಾದ ಬಗೆ-ಬಗೆಯ ಕೊಳೆಗಳಿಂದ ತುಂಬಿದ ಶರೀರದೊಳಗೆ ವಾಸಿಸುತ್ತಿರುವ
ಮನಸ್ಸು ಅರಮನೆಗಳಲ್ಲಿ, ಧನಿಕರ ಸೌಧಗಳಲ್ಲಿ, ಪರ್ವತ ಶ್ರೇಣಿಗಳಲ್ಲಿ,
ಜಿತೇಂದ್ರಿಯರಾದ ಮುನಿಶ್ರೇಷ್ಟರ ಪರ್ಣ ಕುಟಿಗಳಲ್ಲಿ ಏಕಕಾಲಕ್ಕೆ ಅಲೆದಾಡಿತೊಡಗಿದಾಗ ನಾನು
ಅಲೆಗಳಂತೆ ಚಮ್ಚಲವಾದ ಬುದ್ಧಿ ಸ್ವಭಾವದವನಾಗಿದ್ದೆನು. ಹಗ್ಗವು ತುಂಡಾದಾಗ ಬಾವಿಯಲ್ಲಿ
ಮೇಲಕ್ಕೆ ಸೆಳೆಯಲ್ಪಟ್ಟ ಬಿಂದಿಗೆಯಂತೆ ನಾನು ಇದ್ದೆನು. ವಿಷ್ಣುವಿನ ತಾವರೆಯಂತಹ
ಪಾದಗಳನ್ನೇ ಗಾಳದ ರೀತಿಯಲ್ಲಿ ಬಳಸುತ್ತ ದ್ವೈತವೆಂಬ ಕತ್ತಲೆಯನ್ನು ಹಿಡಿದು ಸಂಸಾರವೆಂಬ
ಬಂಧನದಲ್ಲಿ ಸಿಲುಕಿ ಆತ್ಮಾನಂದ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆನು. ಯಾವ ಪ್ರಕಾರವಾಗಿ
ಪರ್ವತ ಶಿಖಿರದ
ತೆ ಆಕಾರವುಳ್ಳ, ವಿನೋದದಲ್ಲಿ ಹೆಮ್ಮರವನ್ನು ಬುಡಸಹಿತ ಕಿತ್ತುಹಾಕುವ ಮದ್ದಾನೆಯು
ಹೆಣ್ಣಾನೆಯ ಸ್ಪರ್ಶಕ್ಕೆ ಮನಸೋತು ಕಂಭದಲ್ಲಿ ಬಂಧನಕ್ಕೊಳಗಾಗುವುದೋ ಹಾಗೆಯೇ
ನಾನು ಅವಯವಗಳು ಸುಕ್ಕು ಗಟ್ಟುವ ಮೊದಲೆ, ತಲೆಗೂದಲು ಬೆಳ್ಳಗಾಗುವ ಮೊದಲೆ,
ಮುಪ್ಪಿನಿಂದ ದೇಹವೆಂಬುದು ಜೀರ್ಣವಾಗುವ ಮೊದಲೆ ವಿಷಯ ಸುಖವೆಂಬ ಕಾಡಿನೊಳಗೆ ಮನಸ್ವೇಚ್ಛೆಯಾಗಿ
ಅಲೆದಾಡಬೇಕೆಂದು ಬಗೆಬಗೆಯಾದ ತಂತ್ರೋಪಾಯಗಳನ್ನು ಪ್ರಯೋಗಿಸುತ್ತಿದ್ದೆನು. ಹಾಗೆ
ನಾನು ಮಾಡುತ್ತಿದ್ದ ಪ್ರಯತ್ನ ಉಪಾಯಗಳೆಲ್ಲವು ಹುಲ್ಲು ಇಲ್ಲದ ಸ್ಥಳಗಳಲ್ಲಿ ನಂದಿ
ಹ್ಗುವ ಬೆಂಕಿಯಂತೆಯೂ; ಮರಳು ಬೆಟ್ಟದ ಮೇಲೆ ಬಿದ್ದು ಇಂಗಿಹೋಗುವ
ಉದಕದಂತೆಯೂ ನಿಷ್ಪಲವಾಗುತ್ತಿದ್ದುವು. ಇಂದ್ರಿಯಗಳ ಸೆಳವಿಗೆ ಸಿಲುಕಿ ಪಾಪಮಾಡಕೂಡದೆಂದೂ
ಹಗಲಿರುಳು ಭಗವನ್ನಾಮ ಸ್ಮರಣ ಮಾಡಿ ಸಾರಥಿಯ ಕುದುರೆಗಳನ್ನು
ಹತೋಟಿಯಲ್ಲಿಟ್ಟುಕೊಳ್ಳುವ ರೀತಿಯಲ್ಲೇ ಇಂದ್ರಿಯಗಳನ್ನು
ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದೂ ತಂದೆಯವರಾದ ಶಾಮಾಶಾಸ್ತ್ರಿಗಳು ಹೇಳಿ ನನ್ನ ಮನುಷ್ಯ
ಸಹಜ ಚಟುವಟಿಕೆಗಳಿಗೆ ಅಧಾತ್ಮದ ಕಡಿವಾಣ ಹಾಕುತ್ತಿದ್ದುದುಂಟು. ಆದರೆ, ನಾನಾದರೋ
ಮಳೆಗಾಲದ ಮಿಂಚಿನಂತೆ ಅತಿ ಚಂಚಲವಾದ ಭೋಗಗಳನ್ನೂ; ಪ್ರಿಯೆಯರಿಂದ ಕೊಡಲ್ಪಟ್ಟ
ಆಲಿಂಗನಾದಿಗಳನ್ನೂ; ಸೊಬಗು ಸೂಸುವ
೩೮೦
ಯೌವನವನ್ನೂ ಅನುಭವಿಸಲುಒಳಗೊಳಗೇ ತುಂಬ ಉತ್ಸುಕನಾಗಿದ್ದೆನು. ಮಕ್ಕಳು
ಅಂಗುಷ್ಟದಲ್ಲಿ ಜೊಲ್ಲನ್ನು ಹೀರುತ್ತ ಸ್ತನ್ಯಪಾನವೆಂದು ಭ್ರಮಿಸುವಮ್ತೆ ನಾನು ನನ್ನ
ಯೌವನದ ಪ್ರತಿಯೊಂದು ಕ್ಷಣವನ್ನು ಬದುಕಿನ ಅಖಾಡದಲ್ಲಿ ವೈದಿಕ ಮುಖವಾಡ ಧರಿಸಿ
ಅನಂದಾತಿರೇಕದಿಂದ ಆನಂದಿಸುವ ಪ್ರಯತ್ನ ಮಾಡುತ್ತಿದ್ದೆನು. ಏ ಎಲ್ಲ ಮಧುರ
ಸ್ಮೃತಿಗಳು ಮತ್ತೆ ಜೀವ ಧರಿಸಿದ ಕ್ಷಣವನ್ನು ಮಾತ್ರ ನಾನು ಮರೆಯಲು ಸಾಧ್ಯವಿಲ್ಲ!
ಆ ಕ್ಷಣ ಯಾವುದೆಂದರೆ ನನ್ನ ಲೌಕಿಕ ಬದುಕಿನ ಚಕ್ಷುವನ್ನು ಮತ್ತೆ ತೆರೆಯುವಂತೆ ಮಾಡಿದ
ಮೊಮ್ಮಗನೆಂಬ ಮಹಾಶಯನಿಗೆ ನಾನು ಸದಾ ಕೃತಜ್ಞನಾಗಿರಬೇಕು. ಯೌವನವೆಂಬ
ಗಾಂಧರ್ವ ಲೋಕವನ್ನು ಅಂಜುತ್ತ ಅಳುಕುತ್ತ ಪ್ರವೇಶಿಸಿದ್ದ ಅವನು ತನಗರಿವಿಲ್ಲದಂತೆ ಬಾಹ್ಯ
ವಸ್ತುವನ್ನು ವಿವೇಚಿಸುವ ಪ್ರಯತ್ನ ಮಾಡುತ್ತಿದ್ದ. ಹಾವಿನಲ್ಲಿ, ಹಾರದಲ್ಲಿ, ಬಲಿಷ್ಟವಾದ ಶತ್ರುವಿನಲ್ಲಿ,
ಆತ್ಮೀಯನಾದ ಗೆಳೆಯನಲ್ಲಿ. ಫಳಫಳ ಕೋರೈಸುವ ರತ್ನದಲ್ಲಿ, ಫಲವಂತಿಕೆಯ ಮಣ್ಣಿನಲ್ಲಿ;
ಹೂವಿನಲ್ಲಿ, ಹಾಸಿಗೆಯಲ್ಲಿ; ಶಿಲ್ಪಿಗಾಗಿ ಕಾಯುವ ನೋಂಪಿನಲ್ಲಿರುವ ಯೋಗ್ಯ ಶಿಲೆಯಲ್ಲಿ, ಪುಟ್ಟನತ್ತಿನಂಥ
ಹುಲ್ಲಿನಲ್ಲಿ; ಪಂಚೇಂದ್ರಿಯಗಳಿಗೆ ಸವಾಲೆಸೆಯುವ ಯೌವನಭರಿತ ಸ್ತ್ರೀಯರಲ್ಲಿ
ಆಧ್ಯಾತ್ಮಿಕ ಉನ್ನತಿಯನ್ನು ಅರಸೀ ಅರಸೀ ಬಸವಳಿದು ವೃದ್ಧಾಪ್ಯದಲ್ಲಿದ್ದ ನಾನು ಸೌಂದರ್ಯದ
ನಿರ್ವಿಕಲ್ಪ ಸಮಾಧಿಯಲ್ಲಿದ್ದುದು ಅವನಾದರೂ ಹೆಂಗಸರ ಸುಂದರ ಬಳೆಗಳ ಶಬ್ದ
ತರಂಗಗಳನ್ನು ಕೇಳಲಿ ಮತ್ತು ಬದುಕುವ ಉತ್ಸಾಹವನ್ನು ಪ್ಡೆದುಕೊಳ್ಳಲಿ ಎಂದೇ ಕೆಲವು
ಸೌಕರ್ಯಗಳನ್ನು ಅವನಿಗೆ ಮಾಡಿಕೊಟ್ತಿದ್ದೆನು. ಬದುಕಿನ ರಸಾಸ್ವಾದನದ ಪಟುವಾಗಿದ್ದಾಗ ಮಾತ್ರ
ಮನುಷ್ಯ ಸುಸ್ಥಿರವಾದ ಉಸಿರಾಟದ ರಿಇತಗಳನ್ನು ರೂಢಿಸಿಕೊಳ್ಳಬಲ್ಲ ಎಂಬುದು ನನ್ನ ಅನಿಸಿಕೆ.
ಆ ದೃಷ್ಯ ನೋಡಿದೊಡನೆ ತಂದೆಯವರು ಹೇಳುತ್ತಿದ್ದಂಥ ಮಾತಾದಂಥ ಕಳ್ಳರು
ಕದಿಯಲಾಗದ; ರಾಜರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಹಂಚಿಕೊಳ್ಳಲಾಗದ
ಸುಸ್ಥಿರ ಐಶ್ವರ್ಯವೆಂಬುದು ನಗೆಪಾಟಲಾಯಿತು. ಯಾವ ರೀತಿಯಲ್ಲಿ ಚಿಕ್ಕದಾದ ಅಂಕುಶಕ್ಕೆ
ದೊಡ್ಡದಾದ ಆನೆಯು ವಶವಾಗುವುದೋ ಹಾಗೆಯೇ ಸುಂದರಕಾಯಳೂ ಸುಶೀಲೆಯೂ
ಆದಂಥ ರುದ್ರನಾಯಕನ ಪುತ್ರಿ ಅನಸೂಯಾಳಿಗೆ ಶಾಮನ ವಶವಾಗುವುದರಲ್ಲಿ ನನ್ನ ಪಾತ್ರವೂ
ಇರುವುದು. ಕನ್ನೈದಿಲೆಗಳನ್ನು ಚಂದಿರನು ಅರಳಿಸುವ ರೀತಿಯಲ್ಲಿಯೇ ಆಕೆಯು ಅವನ
ಮನಸ್ಸನ್ನು ಅರಳಿಸುವಲ್ಲಿ ನಾನು ಗೊತ್ತಿದ್ದೋ ಗೊತ್ತಿಲ್ಲದೆಯೋ ನೀಡಿದ ಸಹಕಾರ,
ತೋರಿಸಿದ ಅನುಭೂತಿ ಇವ್ಯಾವುದನ್ನು ನಾನು ಅಲ್ಲಗಳೇಯಲಾರೆನು. ಅವನ ಹುಬ್ಬುಗಳಲ್ಲಿ
ಕುಣಿಯುತ್ತಿದ್ದ ಚಂಚಲತೆಯನ್ನು ನಾನು ಗುಟ್ಟಾಗಿ ಆಸ್ವಾದಿಸುತ್ತಿದ್ದೆನು. ವಿಷಯ ಭೋಗದ
ಬಯಕೆಯಿಂದ ಅವನುಒದ್ದಾಡುತ್ತಿದ್ದುದನ್ನು ನೋಡಿ ನಾನು ಒಳಗೊಳಗೇ ಸಂತೋಷ ಪಡುತ್ತಿದ್ದೆನು.
ಇಂದ್ರಿಯಗಳ ವೇಗವನ್ನು ನಿಯಂತ್ರಿಸುವ ಶಕ್ತಿ ನಿಶ್ಚಿತವಾದ ಯಾವ ಬ್ರಹ್ಮವಸ್ತುವಿಗೂ
ಇಲ್ಲವೆಂಬುದನ್ನು ನಾನು ಅನುಭವ ವೇದ್ಯವಾಗಿ ಬಲ್ಲವನಾಗಿದ್ದೆನು.
ಕಲ್ಪವೃಕ್ಷವಿರುವೆಡೆಯಲ್ಲಿ ಕೇವಲ ಪ್ರಾಣಾಯಾಮ ಮಾಡುತ್ತ ಕೂಡ್ರುವವರನ್ನು
ಕಂಡರೆ, ಚಿನ್ನದ ಬಣ್ಣದ ಕಮಲ ಪರಾಗಗಳಿರುವೆದೆಯಲ್ಲಿ ಮಂತ್ರ ಹೇಳುತ್ತ ಮೌನವಾಗಿರುವವರನ್ನು
ಕಂಡರೆ, ಅದ್ಭುತವಾದ ರೂಪವತಿಯರಿವೆಡೆಯಲ್ಲಿ ಜಿತೇಂದ್ರಿಯರಂತೆ ವರ್ತಿಸುವರನ್ನು
ಕಂಡರೆ ನನಗೆ ಅಪರಿಮಿತವಾದ ಸಿಟ್ಟು ಬರುವುದೆಂಬ ಸಂಗತಿ ಪ್ರಾಯಶಃ ಈ ಪ್ರಪಂಚದಲ್ಲಿ ನನಗಲ್ಲದೆ
ಇನ್ನೊಬ್ಬರಿಗೆ ತಿಳಿಯದು. ಎಷ್ಟಾದರೂ ನಾನುಶತ್ರುಗಳ ನೆಲೆಯಲ್ಲಿ ಕಾಲುಗಳನ್ನಿಟ್ಟು ಬದುಕಿದೆನೆಂಬ
ಸಂಗತಿ ಕೂಡಾ ಅಷ್ಟೇ ನಿಜವು. ಒಂದು ರೀತಿ ಹೇಳಬೇಕೆಂದರೆ ಆ ಕ್ಷಣದವರೆಗೆ
೩೮೧
ನಾನು ಇಂಥವನೆಂದು ನನಗೇ ಗೊಟ್ಟಿರಲಿಲ್ಲವೆಂದು ಹೇಳಿದರೆ ವಿವಿಧ ಕಳಾ ಪಂಡಿತರಾದ
ನಿಮಗೆ ಆಶ್ಚರ್ಯವಾಗಬಹುದು. ಧ್ಯಾನವೆಂಬ ಹಗ್ಗದಿಂದ ಮನಸ್ಸೆಂಬ ಆನೆಯನ್ನು ಎಷ್ಟು
ದಿನ ಕಟ್ಟಿಹಾಕಿರಲು ಸಾಧ್ಯ ಎಂಬ ಸತ್ಯದ ಸಾಕ್ಷಾತ್ಕಾರವಾದದ್ದು ಆ ಕ್ಷಣವೆ. ಮಾಯಾ ಮೋಹಿತನಾದ
ದುರ್ದೈವಿ ಮಾನವನೋರ್ವನು ನನ್ನೊಳಗೆ ಅಡಗಿಕೊಂಡಿರುವನೆಂದು ಅರ್ಥವಾದದ್ದು ಆ
ಕ್ಷಣವೆ! ಆ ಸತ್ಯವನ್ನು ನಿಸ್ಸಂಕೋಚವಾಗಿ ಹೇಳಲಿಕ್ಕೆ ತಕ್ಕುದಾದ ವಯಸ್ಸು-ತಲುಪಿರುವ
ನಾನು ಹಿಂಜರಿಯುವುದಾದರೂ ಯಾಕೆ? ಅಲ್ಲವೆ? ಎಷ್ಟಿದ್ದರೂ ನಾನು ಮೋಡಗಳ
ಸಮೂಹದೊಳಗಡಗಿರುವ ನೀರಿನಂಥವನು. ರೋಗಗಳ ಭಯದಿಂದಾಗಿ ಸುಖವನ್ನು,
ಕೆಟ್ಟಹೆಸರಿಂದಾಗಿ ಕುಲವನ್ನೂ; ಪ್ರತಿವಾದಿಗಳ ಭಯದಿಂದಾಗಿ ಶಾಸ್ತ್ರಗಳನ್ನೂ; ಶತ್ರುಗಳ ಭಯದಿಂದಾಗಿ
ಪರಾಕ್ರಮವನ್ನೂ; ಯಮನ ಭಯದಿಂದಾಗಿ ದೇಹವನ್ನೂ; ದೈನ್ಯತೆಯ ಭಯದಿಂದಾಗಿ
ಮಾನವನ್ನೂ; ದುಷ್ಟರ ಭಯದಿಂದಾಗಿ ಗುಣವನ್ನೂ; ಮುಪ್ಪಿನ ಭಯದಿಂದಾಗಿ
ರೂಪವನ್ನೂ; ಸಮಸ್ತ ವಸ್ತುಗಳ ಭಯದಿಂದಾಗಿ ಭೂಮಿಯನ್ನೂ; ವೈರಾಗ್ಯದ ಭಯದಿಂದಾಗಿ
ಬದುಕನ್ನೂ ದೂರವಿಟ್ಟು ಮುನಿಯ ಶಾಂತತೆಯ ಸೋಗು ಹಾಕಿ ಬದುಕುತ್ತಿದ್ದ ನಾನು ನನ್ನಿಂದ
ಅನಾವರಣಗೊಂಡಿದ್ದು ಆ ಕ್ಷಣದಿಂದಾಗಿಯೇ. ಆ ಕ್ಷಣವಾದರೂ ಎಂಥಾದ್ದು? ನಿರ್ಮಲ ಮೋಹದೊಡಲಿನಿಂದ
ಹುಟ್ಟಿದಂಥ ಪರಬ್ರಹ್ಮ ಸ್ವರೂಪವಾದ ಜ್ಞಾನವನ್ನು ಆ ಕ್ಷಣ ತೆರೆದು ತೋರಿಸಿಬಿಟ್ಟಿತು.
ರಾವಣಾಂತಃಪುರದ ಸ್ತ್ರೀಯರನ್ನು ನೋಡಿದೊಡನೆ ವಾಯುಪುತ್ರನಾದ ಹನುಮಂತನ
ದೇಹದೊಳಗಡಗಿದ್ದ ಕಪಿಬುದ್ಧಿಯು ಬಲಿಷ್ಟಗೊಂಡು ಲಂಕಾದಹನವೇ ಇತ್ಯಾದಿ ಉಪದ್ವ್ಯಾಪಗಳಿಗೆ
ಕಾರಣವಾಯಿತೋ, ಹಗೆಯೇ ನಾನು ನನ್ನ ಬದುಕಿನಲ್ಲಿ ಆ ಕ್ಷಣ ಎದುರಗದಿದ್ದಲ್ಲಿ ಅಸ್ವಾಭಿಕವೂ,
ಕ್ರುತ್ರಿಮವೂ ಆದ ಶುಷ್ಕ ಬದುಕನ್ನೇ ಮುಂದುವರಿಸಿಕೊಂಡು ಹೋಗಿ ಎಂದೋ ಸತ್ತು ಬಿಟ್ಟಿರುತ್ತಿದ್ದೆನು.
ಅಲ್ಲೂ ಸಲ್ಲದೆ, ಇಲ್ಲೂ ಸಲ್ಲದೆ, ಯತಿಯ ಮನಸ್ಸನ್ನೂ ಅಪಹರಿಸಿಬಿಡಬಹುದಾದಂಥ ಕ್ಷಣ
ಅದಾಗಿತ್ತು. ಸೊಗಸಾಗಿ ಬಾಗಿದ ಶರೀರ ಪ್ರಶ್ನಿಸಿದಂಥ ಕ್ಷಣವದು. ಕೋಲನ್ನಾಶ್ರಯಿಸಿದ ನಡಿಗೆಯನ್ನು
ಪ್ರಶ್ನಿಸಿದಂಥ ಕ್ಷಣವದು. ಶಬ್ದಗಳನ್ನು ಕೇಳಲಸಹಾಯಕವಾದ ಕಿವಿಗಳನ್ನು ಪ್ರಶ್ನಿಸಿದಂಥ
ಕ್ಷಣವದು. ನರೆಯತೊಡಗಿದ ತಲೆಯನ್ನು ಪ್ರಶ್ನಿಸಿದಂಥ ಕ್ಷಣವದು. ಪೊರೆ ಮುಚ್ಚಿದ
ಕಣ್ಣುಗಳನ್ನು ಪ್ರಶ್ನಿಸಿದಂಥ ಕ್ಷಣವದು. ಶಬ್ದಕ್ಕೆವಶವಾದ ಜಿಂಕೆಯನ್ನೂ ಸ್ಪರ್ಶಕ್ಕೆ ವಶವಾದ
ಆನೆಯನ್ನೂ ರೂಪಕ್ಕೆ ವಶವಾದ ಪತಂಗವನ್ನೂ, ರಸಕ್ಕೆ ವಶವಾದ ಮೀನನ್ನೂ;
ಗಂಧಕ್ಕೆ ವಶವಾದ ದುಂಬಿಯನ್ನೂ; ಇವೆಲ್ಲಗಳನ್ನು ಜೀವಚ್ಛವದ ರೀತಿಯಲ್ಲಿ ಎದೆಯಲ್ಲಿ
ಬಚ್ಚಿಟ್ಟುಕೊಂಡಿದ್ದ ನನ್ನನ್ನು ನನ್ನಂಥವರಿಗೆ ಯಕ್ಷ ಪ್ರಶ್ನೆ ಹಾಕಿದ ಕ್ಶಣ ಅದಾಗಿತ್ತು.
ಆಯುರಾರೋಗ್ಯ, ಸಮೃದ್ಧಿ, ಸಂತಾನ, ಸದ್ಗತಿಗಳನ್ನು ದಯಪಾಲಿಸಲಿಕ್ಕೆಂದೇ ನಿಯಮಿತರಾಗಿದ್ದಂಥ
ಕಾಂತಿಯುಳ್ಳವರೂ, ಪ್ರಕಾಶಮಾನರೂ ಆದಂಥ ದೇವತೆಗಳನ್ನು ಕುರಿತಂಥ
ಮಂತ್ರಗಳನ್ನು ಕಾಂತಿಯುಕ್ತ ಸಂಜೆಯ ಬೆಳಕಿನಲ್ಲಿ ಹೇಳಿ ಮುಗಿಸಿ ಸ್ನೇಹ, ದಯೆ,
ದಾಕ್ಷಿಣ್ಯ, ಅನುಕಂಪ, ಪ್ರೀತಿ, ಔದಾರ್ಯಗಳಿಗೆ ಸದೃಶವಾದ ಹೆಜ್ಜೆ ಇಕ್ಕುತ್ತ ಹೊರಟಿದ್ದ ಆದಿನ
ಇಂಥದೇ ಎಂದು ಹೇಳಲು ನಾನು ಈ ಕ್ಷಣ ಅಶಕ್ಯನಾಗಿರುವೆನು. ಪುಣ್ಯ ಕಾಲವೋ, ವಿಷವತ್ ಪುಣ್ಯ
ಕಾಲವೋ ಅದು ಎಂದು ನಿರ್ದಿಷ್ಟವಾಗಿ ಹೇಳಲಾರೆನು. ವ್ಯತಿಪಾತ ಶ್ರಾದ್ಧಕ್ಕೂ ಒಂದು ದಿನ ಮೊದಲು
ಎಂದು ಮಾತ್ರ ಹೇಳಬಲ್ಲೆನು. ಗ್ರಾಮದಲ್ಲಿ ತಿಲೋದಕಗಳಿಗೆ ಅಭಾವವೇರ್ಪಟ್ಟಿದ್ದ ಹಿಂದಿನ
೩೮೨
ದಿನವೆಂದು ಮಾತ್ರ ಖಚಿತವಾಗಿ ಹೇಳಬಲ್ಲೆನು. ಆ ದಿನದ ಬಗ್ಗೆ ಇನ್ನೂ ಖಚಿತವಾಗಿ
ಹೇಳುವುದಾದರೆ ಹಲಕುಂದಿ ವೆಂಕೋಬರಾಯರ ಮನೆಯಲ್ಲಿ ಬ್ರಾಹ್ಮಣ ವಿಸರ್ಜನೆಯ
ಅಪಥ್ಯದಿಂದಾಗಿ ಅವರು ಮಾಡಿದ್ದ ಊಟದ ಎಂಜಲೆಲೆಗಳು ಹಾಗೆ ಬಿಕೋ ಎನ್ನುತ್ತ ಬಿದ್ದಿದ್ದವು.
ಎಂಜಲೆಗಳನ್ನು ಕಾದೂ, ಕಾದೂ ಮೊಣಕಾಲುಚಿಪ್ಪು ಹಿಡಿದುಕೊಂಡು ಬಿಟ್ಟಿರುವುದೆಂದೂ ವೈಶ್ವ
ದೇವಾದಿ ನಿತ್ಯಕರ್ಮ ಪೂರೈಸಿ ಮನೆಯ ಚಟುವಟಿಕೆಗಳಿಗೆಸಹಜ ರೂಪಕೊಡಬೇಕೆಂದೂ,
ರಾಯರು ಕುಂಟುತ್ತ, ಎಡವುತ್ತ ಬಂದು ಮಧ್ಯಾನ್ಹ ಹೇಳಿಹೋಗಿದ್ದರು. ಕಲೆಕ್ಟರಿಗೆ ಸರಿಸಮಾನ
ಹುದ್ದೆ ಹೊಂದಿದವರಾದ ಅವರು ಉದಯದಿಂದ ಅಪರಾಹ್ನದವರೆಗೆ ಎಂಜಲೆಲೆ ಕಾಯುತ್ತ
ಕೂತಿದ್ದಿದು ನನಗೆ ಸರಿ ಕಾರಾದಿರಲಾಗಿ ಆದಷ್ಟು ಲಗುಬಗೆಯಿಂದ ಹೋಗಿ ವೈಶ್ವ ದೇವಾದಿ
ನಿತ್ಯಕರ್ಮಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಿ ಅವರನ್ನು ಕರ್ಮದಿಂದ
ಮುಕ್ತಗೊಳಿಸಬೇಕೆಂದು ನಿಸ್ಚಯಿಸಿಯೇ ವಿಶೇಷ ಸಂಧ್ಯಾವಂದನೆ ಪೂರೈಸಿದ್ದೆನು. ಬಲಿಯನ್ನು
ಶ್ರಾದ್ಧದ ಕೊನೆಯಲ್ಲಿ ಕೊಡುವುದೋ ಅಥವಾ ವಿಕಿರಿದ ಅನಂತರ ಕೊಡುವುದೋ? ಇದರ
ಬಗ್ಗೆ ಮನುವಾಗಲೀ ಮೇಧಾತಿಥಿಗಳಾಗಲೀ ಏನು ಹೇಳಿರುವರೆಂಬುದನ್ನು ಅವರ ಸ್ಮೃತಿಗಳ ಸಹಾಯದಿಂದ
ಶೋದಿಸಿ ಕಾರ್ಯಪ್ರವೃತ್ತನಾಗಬೇಕೆಂದು ಯೋಚಿಸುತ್ತ ನಡೆಯುತ್ತಿದ್ದ ನಾನು ಖಚಿತವಾದ
ಹೆಜ್ಜೆ ಇಕ್ಕುತ್ತಿರಲಿಲ್ಲವು. ಶ್ರಾದ್ಧಾಲೋಚನೆಯಿಂದ ಮುಕ್ತವಾಗುವ ನಿಮಿತ್ತ ಸೂರ್ಯಗತವಾದ
ಬ್ರಹ್ಮಸ್ವರೂಪಿಣಿಯಾದ ಸಂಧ್ಯಾರೂಪಿಣಿಯನ್ನು ಪ್ರತಿ ಹೆಜ್ಜೆಗೊಮ್ಮೊಮ್ಮೆ ಸ್ಮರಣ ಮಾಡುತ್ತಿದ್ದೆನು.
ತತ್ವಗಳೇ ಆಸನವಾಗಿ ಉಳ್ಳವಳಾದ ತತ್ವಾಸನೆಯು ಇನ್ನೇನು ನನ್ನ ಮನಸ್ಸಿಗೆ ಶಾಂತಿ
ದಯಪಾಲಿಸಿದಳು., ಮೂವತ್ತಾರು ತತ್ವಗಳಿಗೆ ಅಧಿದೇವತೆಯಾದ ಪರಮೇಶ್ವರನ ಲಿಂಗಮೂರ್ತಿಯನ್ನು
ದರ್ಶಿಸಿ ಕೃತಾರ್ಥನಾಗಬೇಕೆಂದು ನಿಸ್ಚಯಿಸಿ ಅನತಿ ದೂರದಲ್ಲಿಯೇ ಕಲಿ ದೇವನಾಥ ನೆಲೆಗೊಂಡಿರುವ
ಶಿವ ದೇಗುಲವಿರುವುದು ಆ ಕೂಡಲೆ ಸ್ಮರಣೆಗೆ ಬಂತು. ಸಾಮಾನ್ಯ ಶಿವ ಲಿಂಗವಲ್ಲವದು;
ಕದಂಬ, ಚಾಲುಕ್ಯ ಹೊಯ್ಸಳರೇ ಮೊದಲಾದ ಶಕ್ತಿ ಸಂಪನ್ನರಿಮ್ದ ಪೂಜಿಸಿ ಕೊಂಡ
ಊರ್ಧ್ವಲಿಂಗ ಮೂರ್ತಿಯದು. ಹಿರಣ್ಯಗರ್ಭಾಃ ಸಮವರ್ತಾಗ್ರೇ ಭೂತ ಸ್ವಜಾತಃ ಪತಿರೇಕ
ಆಸೀತ್ ಎಂದು ಧ್ಯಾನಿಸುತ್ತ ಹೋಗಿ ಸೃಷ್ಟಿಯನ್ನು ಉದ್ಭವಿಸಿದಂತವನೂ, ಸ್ಥಾಪಿಸಿದಂತವನೂ
ಆದಂಥ ದೇವತಾಮೂರ್ತಿ ನೆಲೆಗೊಂಡಿರುವ ದೇವಳದ ಪ್ರಾಣ್ಗಣ ಪ್ರವೇಶಿಸಿದೆನು. ನನ್ನ ಮತ್ತು
ಆ ದೇವಳದ ಸಂಬಂಧಸೂತ್ರ ಆ ಕ್ಷಣ ಮತ್ತಷ್ಟು ಹಿಗ್ಗಿದಂತೆ ಭಾಸವಾಯಿತು. ವಿಶ್ವ
ದೇವೈಕ್ಯ ತತ್ವವೇ ಸಾಕಾರಗೊಂಡಿದ್ದ ಆ ದೇವಳದ ಗರ್ಭಗುಡಿ ಸಮೀಪಿಸಬೇಕೆನ್ನುವಷ್ಟರಲ್ಲಿ
ಸರಸ, ಪರಿಮಳ, ಗಂಧ, ಕರ್ಪೂರ ಇಲ್ಲೆಲ್ಲೋ ಹರಡಿದೆ! ಅದರ ಮೂಲ ಯಾವುದು!
ಎಂಬ ಪ್ರಶ್ನೆ ತೇಲಿ ಬಂದು ಸುತ್ತಲೂ ಒಮ್ಮೆ ನೋಡಿದೆ. ಚಿನ್ನವನ್ನು ಸಂಪಾದಿಸುವಲ್ಲಿ ನಿಪುಣನಾದ
ಅಕ್ಕಸಾಲಿಗನು ಕಲ್ಲಿನ ನೆಲದಲ್ಲಿ ತನ್ನ ಅರಿವಿನಿಂದ ಹೇಗೆ ಚಿನ್ನವನ್ನು ಗುರಿತಿಸುವನೋಫ್ ಹಾಗೆಯೆ
ನಾನೂ ಪರಿಮಳ ಸದೃಶವಾದ ಧ್ವನಿ ತರಂಗಗಳು ತೇಲಿ ಬರುತ್ತಿದ್ದ ದಿಕ್ಕಿನ ಕಡೆ ಕಿವಿ
ಚಾಚಿದೆನು. ನನಗೆ ಆಗ ಹೇಗೆ ಅರಿವಗಬೇಕು! ಶುದ್ಧವಾದುದೂ; ಎಳೆಯ ಹುಲ್ಲನ್ನು
ತಿನುವುದೂ; ಬಹಳ ದೂರ ಓಡಲು ಶಕ್ಯವಾದುದೂ ಆದ ಜಿಂಕೆಯು ಬೇಟೆಗಾರನ ಹಾಡಿನ ಹಾದಿ
ಹಿಡಿದು ಹೇಗೆ ಬಲೆಗೆ ಬೀಳುವುದೋ ಹಾಗೆಯೇ ನಾನು ಇಂಪಾದ ಧ್ವನಿ ಬರುತ್ತಿದ್ದ ಆನಂದ ನಿಧಿಯಂತಿದ್ದ
ದಿಕಿನ ಕಡೆ ಒಂದೊಂದೆ ಹೆಜ್ಜೆ ಇಕ್ಕುತ್ತ ವ್ಡೆದೆನು. ಚಾಲುಕ್ಯರ ಮತ್ತು ವಿಜಯನಗರದಸರ
ಎರಡು ಶಿಲಾಶಾಸನಗಳ ನಡುವೆ ಇದ್ದ ಪುಟ್ಟ ಕಿಂಡಿಯ ಮೂಲಕ