ಕೆ‌ಏಸ್‌ಸಿ ಬೆಂಬಲಿಗರ ಶಿಬಿರ

ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ ಹಾಗೂ ಭವಿಷ್ಯದ ಬಗ್ಗೆ ಚರ್ಚಿಸಲು ಮೀಸಲಾಗಿದ್ದುದು ಒಂದು ವಿಶೇಷ. ಅದಕ್ಕೆ ಪೂರಕವಾಗಿ ಬೆಂಗಳೂರಿನಿಂದ ದೂರವಾಗಿ, ಚೇತೋಹಾರಿಯಾದ ಪ್ರಕೃತಿಯ ಮಡಿಲಲ್ಲಿ ಸೇರಿದ್ದು ಮತ್ತೊಂದು ವಿಶೇಷ. ಈ ವಿಶೇಷಗಳ ಫಲಶ್ರುತಿ ಈ
ಸುಧೀರ್ಘ ವರದಿಯ ರೂಪದಲ್ಲಿ ನಿಮ್ಮ ಮುಂದಿದೆ.

ಬೆಂಗಳೂರಿನ ಗೌಜು ಗದ್ದಲದಲ್ಲಿ, ಸದಾ ಕೆಲಸದ ಒತ್ತಡದಲ್ಲಿ ಮುಳುಗಿರುವ ಎಲ್ಲರಿಗೂ ಓದೇಕಾರ್ ಫಾರಂ ಮುದ ನೀಡಿತು ಎಂದರೆ ಸುಳ್ಳಾಗುವುದಿಲ್ಲ. ಶ್ರೀ ಮೂರ್ತಿ ದಂಪತಿಗಳ ಉಪಚಾರದೊಂದಿಗೆ ಪುಷ್ಕಳ ಭೋಜನದ ನಂತರ ಪೂರ್ವನಿರ್ಧಾರಿತವಾದಂತೆ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು.

ಮೊದಲಿಗೆ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಅಂಗವಾಗಿ ಸಂವಾದ.ಕಾಂನ ಪ್ರಾರಂಭದ ಬಗ್ಗೆ ಮಾತನಾಡಿದರು. ದೃಶ್ಯ ಮಾಧ್ಯಮದ ಬಗ್ಗೆ ಎಲ್ಲೂ ಮೌಲ್ಯಯುತವಾದ ಚರ್ಚೆ ನಡೆಯದಿರುವ ಬಗ್ಗೆ ಪ್ರಸ್ತಾಪಿಸುತ್ತಾ ಸಂವಾದ.ಕಾಂ ಈ ಕೊರತೆಯನ್ನು ನೀಗಿಸುವ ವೇದಿಕೆಯಾಗಲಿದೆ ಎಂದು ಹೇಳಿದರು.

ನಾಟಕ, ಸಿನಿಮಾ ಅಥವಾ ಚಿತ್ರಕಲೆಯನ್ನು ನೋಡುವುದಷ್ಟೇ ಅಲ್ಲದೆ, ಅರ್ಥೈಸಿಕೊಳ್ಳುವ, ಆಸ್ವಾದಿಸುವ ಕಲೆಯನ್ನು, ಆಸಕ್ತಿಯನ್ನು ಹುಟ್ಟುಹಾಕಲು ಸಂವಾದ.ಕಾಂ ರೂವಾರಿಯಾಗಬೇಕು, ಮಾರ್ಗದರ್ಶಿಯಾಗಬೇಕು ಎಂಬ ತಮ್ಮ ಆಶಯವನ್ನೂ, ಅಂತಹ ಒಂದು ಕೆಲಸದ ಪ್ರಸ್ತುತತೆ, ಅಗತ್ಯತೆಯನ್ನೂ ವಿವರಿಸಿದರು. ಇತ್ತೀಚಿಗೆ ನಡೆದ ಮಠ ಚಿತ್ರದ ಸಂವಾದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರಸ್ತಾಪಿಸುತ್ತ ಈಗಾಗಲೇ ಕೆಲವು ನಿರ್ಮಾಪಕರು, ನಿರ್ದೇಶಕರು ಇಂತಹ ಕಾರ್ಯಕ್ರಮದ ಬಗ್ಗೆ ಉತ್ಸಾಹಿತರಾಗಿದ್ದಾರೆಂದು ಸೂಚಿಸಿದರು.

ಕೆ‌ಏಸ್‌ಸಿ ಸಾಲದೆ? ಸಂವಾದ.ಕಾಂ ಬೇಕೆ? ಬೇಕಿದ್ದರೆ ಅದು ಬೇರೆಯಾಗಿರಬೇಕೆ? ಇದರಿಂದ ಕೆ‌ಏಸ್‌ಸಿಯ ಬಗ್ಗೆ ಆಸಕ್ತಿ ಕಡಿಮೆಯಾಗುವುದಿಲ್ಲವೇ? ನಮ್ಮ ಮೂಲ ಆಶಯದಿಂದ ದೂರ ಹೋಗುತ್ತಿದ್ದೇವೆಯೇ? ಕೆ‌ಏಸ್‌ಸಿಯ ಕೆಲಸಗಳೇ ಇನ್ನೂ ಉಳಿದಿರುವಾಗ, ಇನ್ನೊಂದನ್ನು ಹುಟ್ಟುಹಾಕಿ ನಿರ್ವಹಿಸುವುದು ಕಷ್ಟವಾಗುವುದಿಲ್ಲವೆ? ಎಂಬ ಅನೇಕ ಪ್ರಶ್ನೆಗಳು ಸಭೆಯಲ್ಲಿ ಭಾಗವಿಹಿಸಿದ್ದವರಿಂದ ವ್ಯಕ್ತವಾದವು. ಇದಕ್ಕೆ ಉತ್ತರಿಸಿದ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಪ್ರಧಾನ ಆಶಯ ಜನಸಾಮಾನ್ಯರಿಗೆ ಬೇಕಾದ ದೇಸಿ ಸಂಸ್ಕೃತಿಗೆ ಒಗ್ಗುವಂತೆ ತಾಂತ್ರಿಕತೆಯನ್ನು ರೂಪಿಸುವುದೇ ಆಗಿದೆ. ಪ್ರಧಾನ ಸಂಸ್ಕೃತಿ ಮುಖ್ಯವಾಗಿ ಬಿಂಬಿತವಾಗುವುದು ಪಠ್ಯ ಹಾಗೂ ದೃಶ್ಯ ಮಾಧ್ಯಮಗಳಲ್ಲಿ, ಪಠ್ಯಕ್ಕೆ ಕನ್ನಡಸಾಹಿತ್ಯ.ಕಾಂ ಇರುವಂತೆ ದೃಶ್ಯಕ್ಕೆ ಸಂವಾದ.ಕಾಂ ಇರುತ್ತದೆ ಎಂದು ತಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟಪಡಿಸಿದರು.
ನಂತರ ಸಂವಾದ.ಕಾಂಗೆ ತನ್ನದೇ ಆದ ಟ್ರಸ್ಟ್ ಇರುವ ಅಗತ್ಯತೆಯನ್ನು ಸೂಚಿಸಿ, ಸಭೆಯಲ್ಲಿ ನೆರೆದಿದ್ದವರನ್ನು ಸ್ವಪ್ರೇರಣೆಯಿಂದ ಸದಸ್ಯರಾಗಲು ಆಹ್ವಾನಿಸಿದರು. ಅಜಿತ್ ಮುಂದೆ ಬಂದವರಲ್ಲಿ ಮೊದಲಿಗರಾದರು. ನಂತರ ಕಿರಣ್, ಶೇಖರ್, ರವಿ ಅರೇಹಳ್ಳಿ, ರುದ್ರಮೂರ್ತಿ, ರಾಘವ ಕೋಟೆಕರ್, ಲಾವಣ್ಯ, ಸೌಮ್ಯ, ಕಿಶೋರ್, ಶೇಖರ್‌ಪೂರ್ಣ, ರಮೇಶ್ ಜೊತೆಗೂಡಿದರು. ಅಜೀವ ಸದಸ್ಯರಾಗಲು ಅಜಿತ್ ಒಪ್ಪಿಕೊಂಡರು. ಟ್ರಸ್ಟ್‌ನ ಸದಸ್ಯರೆಲ್ಲರೂ ಕನಿಷ್ಠ ರೂ.೧೦೦೧/- ನ್ನು ದೇಣಿಗೆಯಾಗಿ ನೀಡಬೇಕೆಂದು ತೀರ್ಮಾನಿಸಲಾಯಿತು.

ಟ್ರಸ್ಟನ ವಿವಿಧ ಹುದ್ದೆಗಳಿಗೆ ಸದಸ್ಯರ ಹೆಸರುಗಳನ್ನು ಸೂಚಿಸಲು ಆಹ್ವಾನಿಸಲಾಯಿತು.

೧) ಅಧ್ಯಕ್ಷರ ಸ್ಥಾನಕ್ಕೆ ಶೇಖರ್‌ಪೂರ್ಣರವರು ಶ್ರೀ ಶೇಖರ್ ಅವರನ್ನು ಸೂಚಿಸಿದರು, ಕಿಶೋರ್ ಚಂದ್ರ ಅನುಮೋದಿಸಿದರು.
೨) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೂತನ ಅಧ್ಯಕ್ಷರಾದ ಶೇಖರ್ ರವರು ಶ್ರೀ ರವಿ ಅರೇಹಳ್ಳಿಯವರನ್ನು ಸೂಚಿಸಿದರು, ಲಾವಣ್ಯ ಅನುಮೋದಿಸಿದರು.
೩) ಖಚಾಂಚಿ ಸ್ಥಾನಕ್ಕೆ ಅಜಿತ್ ರವರು ಶ್ರೀ ಕಿರಣ್‌ರವರನ್ನು ಸೂಚಿಸಿದರು, ರಾಘವ ಕೋಟೆಕರ್ ರವರು ಅನುಮೋದಿಸಿದರು.
೪) ಕಾರ್ಯದರ್ಶಿ ಸ್ಥಾನಕ್ಕೆ ರುದ್ರಮೂರ್ತಿಯವರು ಶ್ರೀಮತಿ ಲಾವಣ್ಯರವರನ್ನು ಸೂಚಿಸಿದರು, ಸೌಮ್ಯ ಅನುಮೋದಿಸಿದರು.
ಈ ಎಲ್ಲ ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಭೆ ಒಮ್ಮತದಿಂದ ಅಂಗೀಕರಿಸಿತು.

ಸಭೆಯಲ್ಲಿ ತೆಗೆದುಕೊಂಡ ಕೆಲವು ಪ್ರಮುಖ ನಿರ್ಣಯಗಳು:

೧) ಟ್ರಸ್ಟ್ ರಿಜಿಸ್ಟರ್ ಮಾಡಲು ಬೇಕಾದ ಎಲ್ಲ ಕಾಗದ ಪತ್ರಗಳನ್ನು ಶೇಖರ್‌ಪೂರ್ಣರವರು ತಯಾರು ಮಾಡತಕ್ಕದ್ದು. ರಿಜಿಸ್ಟರ್ ಮಾಡುವ ದಿನದಂದು ಎಲ್ಲರೂ ಹಾಜರಿರಬೇಕಾದ ಕಾರಣ ಆ ದಿನಾಂಕವನ್ನು ಒಂದು ವಾರ ಮುಂಚೆ ಎಲ್ಲರಿಗೂ ತಿಳಿಸುವುದು.
೨) ಇನ್ನು ಮುಂದೆ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಬಳಸುವ ಬ್ಯಾನರ್‌ಗಳು ಹಾಗೂ ಲೆಟರ್ ಹೆಡ್‌ಗಳಲ್ಲಿ “ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ಬಳಗ” ಹಾಗೂ “ಸಂವಾದ.ಕಾಂ” ಎರಡೂ ಹೆಸರುಗಳು ಇರಬೇಕು.
೩) ಕೆ‌ಏಸ್‌ಸಿ ಹಾಗೂ ಸಂವಾದ.ಕಾಂನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಲು ಕೆಲವು ಸಮಿತಿಗಳನ್ನು ರಚಿಸಲಾಯಿತು ಹಾಗೂ ಅದಕ್ಕೆ ಕೆಲವು ಸದಸ್ಯರನ್ನು ನಿಯೋಜಿಸಲಾಯಿತು. ಅವು ಹೀಗಿವೆ:
ಅ) ಸಂಪಾದಕ ಸಮಿತಿ

ಸಂಪಾದಕರು – ಶ್ರೀ ಶೇಖರ್‌ಪೂರ್ಣ
ಉಪ ಸಂಪಾದಕರು – ಶ್ರೀ ವಿಕ್ರಮ್ ಹತ್ವಾರ್
ಶ್ರೀ ಕಿರಣ್ ಎಂ
ಶ್ರೀ ಜಯಕುಮಾರ್
ಕಲಾ ನಿರ್ದೇಶಕರು – ಶ್ರೀ ಪಿ.ಟಿ.ಪ್ರಮೋದ್
ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು
ಸಂಗ್ರಹದಲ್ಲಿರುವ ಎಲ್ಲ ಪಠ್ಯವನ್ನು ಮುಖ್ಯ ತಾಣಕ್ಕೆ ವರ್ಗಾಯಿಸುವುದು.
ತಾಣವನ್ನು ವಿಶಿಷ್ಟವಾಗಿರುವಂತೆ ನೋಡಿಕೊಳ್ಳುವುದು (Focus on Presentation to  keep the site unique)

ಬ) ಕಾರ್ಯ ನಿರ್ವಾಹಕ ಸಮಿತಿ

Brand Promotion and PR Operations –

ಶ್ರೀ ಕಿಶೋರ್ ಚಂದ್ರ
ಶ್ರೀ ರವಿ ಅರೇಹಳ್ಳಿ
ಶ್ರೀ ರಾಜ್‌ಕುಮಾರ್

Fund raising

ಶ್ರೀ ಅಜಿತ್
ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು
ಕೆ‌ಏಸ್‌ಸಿಯ ಬಗ್ಗೆ ಒಂದು ಮಾಹಿತಿ ಕೈಪಿಡಿ(Brochure)
ಎಲ್ಲ ಸಕ್ರಿಯ ಸದಸ್ಯರಿಗೆ ಕೆ‌ಏಸ್‌ಸಿ mail id
ಎಲ್ಲ ಸದಸ್ಯರ ಮೈಲುಗಳಲ್ಲಿ ಸಹಿ ಇರುವ ಕಡೆ ಕೆ‌ಏಸ್‌ಸಿಯನ್ನು ಪ್ರತಿನಿಧಿಸುವ ಒಕ್ಕಣೆ
ಪ್ರತಿ ತಿಂಗಳು ಒಂದು ಚಟುವಟಿಕೆ
ಪ್ರಚಾರಕ್ಕಾಗಿ ಬಳಸುವ ಎಲ್ಲ ಸಾಮಗ್ರಿಗಳು ಕೆ‌ಏಸ್‌ಸಿ ಹೆಸರಿನಲ್ಲಿರಬೇಕು
ಸಕ್ರಿಯ ಸದಸ್ಯರಿಗೆ ಗುರುತಿನ ಚೀಟಿ
ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಚಾಂಚಿಗೆ ಪ್ರತ್ಯೇಕ ವಿಸಿಟಿಂಗ್ ಕಾರ್ಡ್ ಹಾಗೂ ಇತರರಿಗೆ ಕೆ‌ಏಸ್‌ಸಿ

ಗುರುತಿನ ಚೀಟಿ
ಸದಸ್ಯರಿಗೆ ಕೆ‌ಏಸ್‌ಸಿಯ ಲೋಗೋ ಇರುವ ಟೀ-ಶರ್ಟ್

ಕ) ತಾಂತ್ರಿಕ ಸಮಿತಿ

ಶ್ರೀ ರುದ್ರಮೂರ್ತಿ
ಶ್ರೀ ರಾಘವ ಕೋಟೆಕರ್
ಶ್ರೀ ವಿವೇಕ್
ಶ್ರೀಮತಿ ಲಾವಣ್ಯ
ಕುಮಾರಿ ಸೌಮ್ಯ
ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು
ಪ್ರತಿ ತಿಂಗಳೂ ಪ್ರಕಟವಾಗುವ ಪಠ್ಯವನ್ನು ಬ್ಯಾಕಪ್ ಮಾಡುವುದು.(ವಿವೇಕ್ ಈ ಹೊಣೆಯನ್ನು ಹೊತ್ತಿದ್ದಾರೆ)
“ಸಂಪೂರ್ಣ” CMS ಅನ್ನು ಸಂಪೂರ್ಣಗೊಳಿಸುವುದು

೪) ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದಲ್ಲಿ ಸಂವಾದ.ಕಾಂಗೆ ಮಾತ್ರ ಲಿಂಕ್ ಇರಬೇಕು. ಬೇರೆ ಯಾವುದೇ ತಾಣದ ಲಿಂಕ್ ಸಂವಾದ.ಕಾಂ ತಾಣದಲ್ಲಿ ಕೊಡಬಹುದು.
೫) ಯಾವುದೇ ಚಟುವಟಿಕೆಯ ಪ್ರಕಟಣೆಯನ್ನು ಸಂಪಾದಕ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ(ರವಿ ಅರೇಹಳ್ಳಿ)ಯ ಮುಖಾಂತರ ಕೊಡತಕ್ಕದ್ದು.
೬) ಕೆ‌ಏಸ್‌ಸಿಯ ಜಿಲ್ಲಾವಾರು ಬೆಂಬಲಿಗರ ಬಳಗಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆಗಳು ಹಾಗೂ ಸಹಾಚಿi ಮೂಲ ಗುಂಪಿನಿಂದ ಸಿಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಹಣ ಸಂಗ್ರಹಣೆ ಆಯಾ ಜಿಲ್ಲೆಗಳ ಸಂಚಾಲಕ ಹಾಗೂ ಸದಸ್ಯರಿಗೆ ಬಿಟ್ಟಿದ್ದು. ಕಾರ್ಯಕ್ರಮದ ನಂತರ ಖರ್ಚು ವೆಚ್ಚದ ವರದಿಯನ್ನು ಮೂಲ ಗುಂಪು ಹಾಗೂ ಟ್ರಸ್ಟ್‌ಗಳಿಗೆ ಸಲ್ಲಿಸತಕ್ಕದ್ದು.

ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಸಬೇಕೆಂದು ಯೋಚಿಸಿರುವ “ಪರ್ಯಾಯ ಸಿನಿಮಾ ನನ್ನ ದೃಷ್ಟಿಯಲ್ಲಿ?” ಎರಡು ದಿನಗಳ ಕಾರ್ಯಶಿಬಿರದ ಬಗ್ಗೆ ಶೇಖರ್‌ಪೂರ್ಣರವರು ಪ್ರಸ್ತಾಪಿಸಲು, ಎರಡು ದಿನವಿರಬೇಕೆ? ಒಂದು ದಿನ ಸಾಲದೆ ಎಂಬ ಸ್ವರಗಳು ಜೋರಾಗಿಯೇ ಎದ್ದರೂ ಕೊನೆಗೆ ಅಡಗಬೇಕಾಯಿತು. ಶಿಬಿರ ಎರಡು ದಿನಗಳು ನಡೆಯುವುದೆಂದು ತೀರ್ಮಾನಿಸಲಾಯಿತು. ಸಂಭವನೀಯ ಕಾರ್ಯಕ್ರಮದ ಪಟ್ಟಿ ಹೀಗಿದೆ:
ಮೊದಲ ದಿನ – ಉದ್ಘಾಟನೆ
“ಘಟಶ್ರಾದ್ಧ” ಸಿನಿಮಾ ಪ್ರದರ್ಶನ
ಚಲನಚಿತ್ರದ ಬಗ್ಗೆ ತಜ್ಞರಿಂದ ಮೂರು ಉಪನ್ಯಾಸಗಳು
ಏರಡನೆಯ ದಿನ – ಶ್ರೀ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಸಿನಿಮಾ ಪ್ರದರ್ಶನ
ಪರ್ಯಾಯ ಚಲನಚಿತ್ರಗಳ ಬಗ್ಗೆ ಎರಡು ಉಪನ್ಯಾಸ
ಶ್ರೀ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ

ಈ ನಿಟ್ಟಿನಲ್ಲಿ ಸದಸ್ಯರ ಜವಾಬ್ದಾರಿಗಳು
ಸತತ ಎರಡು ತಿಂಗಳ ಆನ್‌ಲೈನ್ ಪ್ರಚಾರ – ರಾಘವ ಕೋಟೇಕರ್, ಲಾವಣ್ಯ
ಅತಿಥಿಗಳ ಜವಾಬ್ದಾರಿ – ಶ್ರೀ ಶೇಖರ್‌ಪೂರ್ಣ
ಸಾರ್ವಜನಿಕ ಸಂಪರ್ಕ – ರವಿ ಅರೇಹಳ್ಳಿ
ಊಟೋಪಚಾರ – ಶ್ರೀ ಶೇಖರ್, ರಮೇಶ್
ನೆನಪಿನ ಕಾಣಿಕೆ – ರಮೇಶ್, ಸೌಮ್ಯ
ನೆನಪಿನ ಕಾಣಿಕೆಯ ರೂಪುರೇಷೆ – ಕಿಶೋರ್ ಚಂದ್ರ
ಶಿಬಿರಾರ್ಥಿಗಳಿಗೆ ಕೊಡುವ ಪೇಪರ್ ಚೀಲ ಇತ್ಯಾದಿ – ರಮೇಶ್

ಇಷ್ಟಾದ ನಂತರ, ಸಮಯ ರಾತ್ರಿ ೨.೩೦ ಆದ್ದರಿಂದ ಬಲವಂತವಾಗಿ ಚರ್ಚೆಯನ್ನು ನಿಲ್ಲಿಸಿ ಸಭೆಯನ್ನು ಮುಗಿಸಲಾಯಿತು. ಮರುದಿನ ತಿಂಡಿ ತಿಂದು, ಮತ್ತೊಂದು ಸುತ್ತು ತೋಟ ನೋಡಿ, ವರ್ಷಕ್ಕೊಮ್ಮೆಯಾದರೂ ಇಂತಹ ಶಿಬಿರ ಇರಬೇಕು ಎಂದುಕೊಳ್ಳುತ್ತ, ನಮ್ಮ ನಮ್ಮ ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲರೂ ಹೊರಟಿದ್ದಾಯಿತು.

Add Comment

Required fields are marked *. Your email address will not be published.