ಶಿಕಾರಿ ಅಂತರ್ಜಾಲ ಆವೃತ್ತಿ ಭಾಗ – ೨

ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ ರುಚಿಯೇ ಕೆಟ್ಟುಹೋಗಿತ್ತು. ರಿಕ್ಷಾವಾಲಾನನ್ನು, ಅವನು ಕೇಳಿದಷ್ಟು ಹಣ ಕೊಟ್ಟು, ಕಳಿಸಿಕೊಟ್ಟ. ಮಧ್ಯಾಹ್ನ ದರ್ಬಾರ್ ಹೊಟೆಲ್ಲಿನಲ್ಲಿ ಊಟ ಸರಿಯಾಗಿರದ್ದಕ್ಕೋ ಏನೋ ಹೊಟ್ಟೆ ಹಸಿದಿತ್ತು. ಕೃಷ್ಣನಿಗೆ_ಊಟಕ್ಕೆ ಆಮ್ಲೆಟ್ ಆದರೂ ಸಿಗಬಹುದೇ ? ಎಂದು ಕೇಳಿದ. “ಸಿಗಬಹುದು ಸರ್. ಬ್ರೆಡ್ ಮಾತ್ರ ತೀರಿಹೋಗಿದೆ. ಚಿಂತೆ ಮಾಡಬೇಡಿ. ಇದೀಗ ಸಾಯ್ಕಲ್ ಮೇಲೆ ಹೋಗಿ ತರುತ್ತೇನೆ. ಅದಕ್ಕೇನಂತೆ. ಬಿಯರ್-ಗಿಯರ್ ?” ಕೃಷ್ಣನ ಮಾತುಗಳಲ್ಲಿ ಹುರುಪು ಇತ್ತು. ಬಿಯರಿನ ಹೆಸರು ತೆಗೆಯುತ್ತಲೇ, ಹೌದು ಇಂದು ಕುಡಿಯದೇ ಮಲಗುವದುಶಕ್ಯವೇ ಇಲ್ಲ ಅನ್ನಿಸಿತು. ಕುಡಿತದ ಅಮಲಿನಲ್ಲೇ ತನ್ನೆಲ್ಲ ಯಾತನೆಯನ್ನು ಮುಳುಗಿಸಿಬಿಡಬೇಕು ಎಂದುಕೊಂಡು ಕೃಷ್ಣನಿಗೆ ಎರಡು ಬಾಟಲಿ ಬಿಯರ್ ತರಲು ಹೇಳಿ ಹಣ ಕೊಡುವಾಗ ಐದು ರೂಪಾಯಿ ನೋಟೊಂದನ್ನು ಹೆಚ್ಚಿಗೆ ಕೊಡುತ್ತ_ ‘ಇದು ನಿನಗೆ,’ ಎಂದಾಗ ಕೃಷ್ಣನ ಬಿಯರ್ ತರುವ, ಆಮ್ಲೆಟ್ ಮಾಡುವ ಉಮೇದಿಗೆ ಮೇರೆಯೇ ಉಳಿಯಲಿಲ್ಲ. ಹಿಂದೊಮ್ಮೆ ಸಾಹೇಬರು ತೋರಿಸಿದ ಸಿಟ್ಟು ನೆನಪಿಗೆ ಬಂದಿರದಿದ್ದರೆ ಮತ್ತೇನನ್ನೋ ತರುವ ಹುರುಪೂ ಇತ್ತು : ಗೆಸ್ಟ್‌ಹೌಸಿನಲ್ಲಿ ತಮ್ಮಿಬ್ಬರನ್ನು ಬಿಟ್ಟರೆ ಮತ್ತಿನಾರೂ ಇದ್ದಿರಲಿಲ್ಲ. ಮೇಲಾಗಿ !

undefined
ಕೃಷ್ಣ ಸಾಯ್ಕಲ್ ಹತ್ತಿ ಹೊರಟುಹೋದ ಮೇಲೆ ನಾಗಪ್ಪ ಕೃಷ್ಣ ತನಗಾಗಿ ಯಾವಾಗಲೂ ಕಾದಿರುತ್ತಿದ್ದ ರೂಮಿಗೇ ಹೋದ. ಬೂಟು ಕಳಚಿ ಹಾಸಿಗೆಯ ಮೇಲೆ ಆಡ್ಡವಾದ. ತಲೆ ಸುನ್ನವಾಗಿತ್ತು : ಇದು ಸಾದಾ ತನಿಖೆಯಲ್ಲ. ಬರಿಯೆ ನನ್ನ ಮೇಲಿನ ಸೇಡು ತೀರಿಸುವ ಜಾತಿಯದೂ ಅಲ್ಲ. ಈ ರಾಜಕಾರಣ ನಾನು ತಿಳಿದದ್ದಕ್ಕಿಂತ ಹೆಚ್ಚು ದೂರದವರೆಗೆ ಹಸ್ತಕ್ಷೇಪ ಮಾಡಿದ್ದು, ಫಿರೋಜ್ ತಾನು ಸಿಕ್ಕಿಬಿದ್ದ ಯಾವುದಾದರೂ ಪೇಚಿನಿಂದ ತಪ್ಪಿಸಿಕೊಳ್ಳುವುದಕ್ಕೆ ನನ್ನನ್ನು ಬಲಿ ಕೊಡುತ್ತಿಲ್ಲವಷ್ಟೇ….ನನ್ನನ್ನು ಇಲ್ಲ ಕರೆಯಿಸಿದ ದಿನ, ಅದೇ ಪ್ಲೇನಿನಿಂದ ತಾನೇ ಮುಂಬಯಿಗೆ ಹೊರಟುಹೋಗುವುದೆಂದರೆ, ಮೊದಲೇ ಯೋಚಿಸಿಕೊಂಡ ಫ್ಯಾಸಿಸ್ಟ್ ಉಪಾಯವಿದು; ನನ್ನನ್ನು ಮಾನಸಿಕ ಗೊಂದಲಕ್ಕೀಡುಮಾಡಿ, ದಣಿಸಿ, ಹೋರಾಡುವ ನನ್ನ ಸಂಕಲ್ಪವನ್ನು ಮುರಿಯುವ ಹಂಚಿಕೆ. ದಣಿವಿನ ವಿಚಾರದಿಂದಲೇ ನಾಗಪ್ಪನಿಗೆ ಬಿದ್ದಲ್ಲೇ ನಿದ್ದೆ ಬರುತ್ತಿದ್ದಂತೆ ತೋರಿತು.ಅದನ್ನು ದೂರ ಮಾಡುವವನ ಹಾಗೆ ಭಡಕ್ಕನೆ ಎದ್ದು ಕುಳಿತ_ಬೇಡ, ಹೇಗಾದರೂ ನೌಕರಿಯನ್ನು ಕಳಕೊಳ್ಳುವ ಅಂತಿಮ ಸಾಧ್ಯತೆಗೆ ಕೂಡ ಮನಸ್ಸನ್ನು ಗಟ್ಟಿಮಾಡಿರುವಾಗ ಇಂತಹ ನೀರಿಲ್ಲದ ವಿಚಾರ ಸಲ್ಲದು ಎಂದುಕೊಂಡ್ದು ಕಿಡಕಿಗೆ ಬಂದು ನಿಂತ.

ನಾಗಪ್ಪನನ್ನು ಸದ್ಯ ದಣಿಸುತ್ತಿದ್ದದ್ದು ನೌಕರಿಯನ್ನು ಕಳಕೊಳ್ಳುವ ಭಯವಲ್ಲ. ಮನುಷ್ಯನನ್ನು ಮಾನಸಿಕವಾಗಿ ಮುರಿಯುವದು ಹೀಗೆ ಸ್ಪಷ್ಟವಾದ ಮಾತಿನಲ್ಲಿ ಹಿಡಿಯಬಹುದಾದ ಭಯವಲ್ಲ ಎಂಬ ಅರಿವು ನಾಗಪ್ಪನಿಗಿದೆ. ಸುಳ್ಳು ಆಪಾದನೆಗೆ ತನ್ನನ್ನು ಗುರಿಪಡಿಸಿದಾಗ ತನ್ನ ನಿಷ್ಪಾಪವನ್ನು, ನಿರಪರಾಧವನ್ನು ಉಳಿದವರಿಗೆ ಸಿದ್ಧಪಡಿಸಿ ತೋರಿಸುವುದರಲ್ಲಿ ತಾನು ಸೋಲಬಹುದೆಂಬ ಭಯ. ತನಗೆ ಸಲ್ಲಬೇಕಾದ ನ್ಯಾಯವನ್ನು ಯಾರೋ ಬರಿಯ ಹುಂಬಸತ್ತೆಯ ಬಲದ ಮೇಲೆ ಕುಸಿದುಕೊಂಡಿದ್ದಾರೆ ಎಂಬುದಕ್ಕೆ ಪುರಾವೆ ಒದಗಿಸುವುದರಲ್ಲಿ ತಾನು ಸೋತೇನು ಎನ್ನುವ ಆತಂಕ. ಸತ್ಯವೇ ಕೊನೆಗೆ ಗೆಲ್ಲುತ್ತದೆ ಎಂಬ ಮಾತು ಫಿರೋಜನಂತಹ ಧೂರ್ತ ರಾಜಕಾರಣಿಯ ಮುಂದೆ ನಡೆಯುವಂತಹದಲ್ಲ. ಇದೇ ! ಇದೇ ! ತಾನು ಸಂಪೂರ್ಣವಾಗಿ ನಿರಪರಾಧಿಯಾಗಿರುವಾಗಲೂ ತನ್ನನ್ನು ಅಪರಾಧಿಯನ್ನಾಗಿ ತೋರಿಸುವ ಈ ಕಪ್ಪು ಬಲಕ್ಕೆ ಹಾಗೂ ಮಾತಿನ ತೆಕ್ಕೆಗೆ ಸಿಗದೆ ಅದು ಹುಟ್ಟಿಸುವ_ಭಯಕ್ಕೆ ತಾನಿಂದು ದಣಿಯುತ್ತಿದ್ದೇನೆ…. ಸತ್ಯವೇ ಕೊನೆಯಲ್ಲಿ ಗೆಲ್ಲುತ್ತದೆ ಎಂಬ ಭರವಸೆ ಇಲ್ಲದ್ದಕ್ಕೇ ತಾನಿಂದು ಹೀಗೆ ನಡುಗುತ್ತಿದ್ದೇನೆ. ಯಾಕೆಂದರೆ ಸತ್ಯದ ವ್ಯಾಖ್ಯೆಯನ್ನೇ ಫಿರೋಜನಂತಹ ರಾಜಕಾರಣಿ ಬದಲಾಯಿಸಿಬಿಟ್ಟಿದ್ದಾನೆ…..

ನಿಂತಲ್ಲೇ ಬಂದ ಒಂದು ವಿಚಾರಕ್ಕೆ ನಾಗಪ್ಪ ಕೂಡಲೇ ಕಿಡಕಿ ಬಿಟ್ಟು ತಿರುಗಿ ಟೆಲಿಫೋನಿಗೆ ಬಂದ. ಭರಭರನೆ ಟೆಲಿಫೋನ್ ಡಿರೆಕ್ಟರಿಯ ಪುಟಗಳನ್ನು ತಿರುವಿ ತನಗೆ ಬೇಕಾದ ನಂಬರನ್ನು ಹುಡುಕಿ ತೆಗೆದ. ರಿಸೀವರನ್ನು ಕೈಗೆತ್ತಿ ನಂಬರನ್ನು ತಿರುವಿದ. ಆ ತುದಿಯಿಂದ ತನಗೆ ಪರಿಚಿತವಿದ್ದ ದನಿಯು ‘ಹಲ್ಲೋ’ ಕೇಳಿಸಿದ್ದೇ, ತನಗೇ ಅರ್ಥವಾಗಿರದ ಆತುರತೆಯಿಂದ, “ಹೈದರ‍್ಸಾಬ್, ನಾನು ನಾಗನಾಥ,” ಎಂದ. “ಹಲ್ಲೋ ಹಲ್ಲೋ ಪ್ರೊಫೆಸರ್,” ಎಂದು ಎಂದಿನ ಹುರುಪಿನಿಂದಲೇ ಮಾತಿಗೆ ಆರಂಭಿಸಿದ ಹೈದರ್. ಒಮ್ಮೆಲೇ ದನಿಯನ್ನು ತೀರ ತಗ್ಗಿಸಿ, “ಯಾವಾಗ ಬಂದಿರಿ ? ಕಾರಖಾನೆಯಲ್ಲಿ ಯಾರಿಗೂ ಗೊತ್ತಿಲ್ಲವೇ ನೀವು ಬರುವುದರ ಬಗ್ಗೆ ? ರಾಮಕೃಷ್ಣ ಕೂಡ ಏನೂ ಹೇಳಲಿಲ್ಲ ?” ಎಂದಾಗ ನಾಗಪ್ಪನಿಂದ ಕೆಲಹೊತ್ತು ಮಾತೇ ಹೊರಡದಾಯಿತು : ಯಾರು ಬಲ್ಲರು. ಯಾರ ಮುಂದೆಯೂ ಹೆಚ್ಚಿನ ಟಮ್ ಟಮ್ ಮಾಡದೇನೇ ತನ್ನೊಬ್ಬನೊಂದಿಗಷ್ಟೇ ಫಿರೋಜನಿಗೆ ಮಾತನಾಡುವುದಿದೆಯೇನೋ. ಆದ್ದರಿಂದಲೇ ತನ್ನನ್ನು ಇಲ್ಲಿ ಕರೆಯಿಸಿದ ಉದ್ದೇಶವನ್ನು ಗುಟ್ಟಾಗಿಡುವುದಿದೆಯೇನೋ. ತನ್ನನ್ನಿಲ್ಲಿಗೆ ಕರೆಯಿಸಿದ ನಂತರವೇ ಅನಿರೀಕ್ಷಿತ ಕಾರಣಕ್ಕಾಗಿ ಮುಂಬಯಿಗೆ ಹೋಗಬೇಕಾಗಿ ಬಂತೇನೋ. ಫಿರೋಜನನ್ನು ತಾನು ಸುಳ್ಳೇ ತಪ್ಪು ತಿಳಿದೆನೇನೋ….ನಾಗಪ್ಪನ ಈ ಆಶಾವಾದ ಬಹಳ ಕಾಲ ಬಾಳಲಿಲ್ಲ. ನಾಗಪ್ಪ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದ್ದು ಲಕ್ಷ್ಯಕ್ಕೆ ಬಂದ ಹೈದರನೇ ಕೇಳಿದ : “ಈಗ ಎಲ್ಲಿಂದ ಮಾತನಾಡುತ್ತಿದ್ದೀರಿ ? ಗೆಸ್ಟ್‌ಹೌಸಿನಿಂದಲೇ ? ಹತ್ತಿರ ಇನ್ನಾರೂ ಇಲ್ಲವಲ್ಲ ? “ಇಲ್ಲ, ಇದ್ದ ಕೃಷ್ಣನೂ ಕೂಡ ಬ್ರೆಡ್ ತರಲು ಹೊರಗೆ ಹೋಗಿದ್ದಾನೆ.” ಎಂದಾಗ, “ನೀವು ಈಗ ಇಲ್ಲಿಗೆ ಬರಬಾರದಾಗಿತ್ತು, ಇಲ್ಲಿ ಏನೇನು ನಡೆದಿದೆ ಎನ್ನುವುದನ್ನು ಯಾರೂ ನಿಮಗೆ ತಿಳಿಸಿಲ್ಲವೇ ? ನಾನು ಇದೆಲ್ಲದರಿಂದ ದೂರ ಉಳಿಯಲೆಂದೇ ಎಂಟು ದಿನದ ರಜೆ ಪಡೆದು ಮನೆಯಲ್ಲಿದ್ದೇನೆ. ಕಾರಖಾನೆಯಲ್ಲಿ ನಡೆದ ಲಫಡಾದಲ್ಲಿ ದೊಡ್ಡ ದೊಡ್ಡ ಕುಳಗಳ ಹೆಸರುಗಳೇ ಸಿಕ್ಕಿಕೊಂಡಿವೆಯಂತೆ. ಲಕ್ಷಗಟ್ಟಲೆ ರೂಪಾಯಿಯ ಮಾಲಿನ ಲೆಕ್ಕವೇ ಸಿಗುವದಿಲ್ಲವಂತೆ. ಇದಕ್ಕೂ ಈ ಹಿಂದೆ ನಡೆದ ಬೆಂಕಿಯ ಅನಾಹುತಕ್ಕೂ ಏನೋ ಸಂಬಂಧ ಹಚ್ಚುವ ಪ್ರಯತ್ನ ನಡೆದಿದೆಯಂತೆ. ನೀವು ಸ್ವಲ್ಪ ಈಗ ಜಾಗರೂಕರಾಗಿರುವುದು ಒಳ್ಳೆಯದು,” ಎಂದ ಹೈದರನ ಮಾತುಗಳಿಂದ ನಾಗಪ್ಪ ಪೂರ್ವಾಪರ ವಿಚಾರಮಾಡುವ ಸಾಮರ್ಥ್ಯವನ್ನೇ ಕಳಕೊಳ್ಳುವಷ್ಟು ಹೆದರಿಕೊಂಡ. ““ಹೈದರ‍್ಸಾಬ್, ನಾನಾಗಿಯೇ ಇಲ್ಲಿಗೆ ಬಂದಿಲ್ಲ. ಆಒಆ ಯವರೇ ನನ್ನನ್ನು ಕರೆಯಿಸಿದ್ದಾರೆ. ಆದರೆ ಈಗ ಅವರೇ ಊರಲ್ಲಿಲ್ಲವಂತೆ.” ಎಂದು ಹೇಳುವಾಗ ನಾಗಪ್ಪನ ದನಿಯಲ್ಲಿ ಅವನಿಗೆ ಅರಿವಿಲ್ಲದೇನೆಯೆ ಒಂದು ಬಗೆಯ ಹತಾಶತೆ ಸೇರಿಕೊಂಡಿತ್ತು. ಅವನು ಇದೀಗ ಹೇಳಿದ ಮಾತಿನಿಂದ, ಮಾತಿನ ಧಾಟಿಯಿಂದ ಮೊದಲೇ ಹೆದರಿಕೊಂಡ ಹೈದರ್ ಇನ್ನಷ್ಟು ಹೆದರಿದ. ಈ ಎಲ್ಲ ಜಂಜಾಟದಲ್ಲಿ ತನ್ನನ್ನು ಸಿಕ್ಕಿಸಿಕೊಳ್ಳುವ ಮನಸ್ಸಾಗದೇ, ಅತ್ಯಂತ ಜಾಗರೂಕತೆಯಿಂದ, “ಏನೋಪ್ಪಾ, ನನಗಿದರ ಅರ್ಥವಾಗುವದಿಲ್ಲ. ನೀವು ನನ್ನೊಡನೆ ಮಾತನಾಡಿದ್ದು ಮಾತ್ರ ದಯಮಾಡಿ ಯಾರಿಗೂ ಹೇಳಬೇಡಿ. ಇದಾವುದರಲ್ಲೂ ಸಿಕ್ಕಿಬೀಳುವ ಮನಸ್ಸಿಲ್ಲದ್ದರಿಂದಲೇ ಇಂದಿನಿಂದಲೇ ರಜೆ ಪಡೆದಿದ್ದೇನೆ. ನನ್ನನ್ನು ತಪ್ಪು ತಿಳಿಯಬೇಡಿ. ದೊಡ್ಡ ದೊಡ್ಡ ಜಾಗದಲ್ಲಿದ್ದವರೇ ತಮ್ಮ ತಮ್ಮ ಚಮಡಾ ಕಾಪಾಡಿಕೊಳ್ಳುವ ಉದ್ಯೋಗದಲ್ಲಿ ತೊಡಗಿರುವಾಗ ನಮ್ಮಂಥ ಬಡಪಾಯಿಗಳಿಗೇಕಪ್ಪಾ ಈ ಇಲ್ಲದ ಉಪದ್ವ್ಯಾಪ….ಆಒಆ ಇಂದೇ ಮುಂಬಯಿಗೆ ಹೋಗುವವರಿದ್ದರು. ಅವರು ಹೋಗುವ ಕಾರ್ಯಕ್ರಮವಂತೂ ನಾಲ್ಕು ದಿನಗಳ ಮೊದಲೇ ನಿಶ್ಚಿತವಾಗಿತ್ತು. ನಿಮಗೆ ಯಾಕೆ ಮೊದಲೇ ತಿಳಿಸಲಿಲ್ಲವೋ ಪಾಪ. ಈಗ ಅವರು ಬರುವವರೆಗೂ ಕಾಯಬೇಕಾಯಿತಲ್ಲ…. ಖಂಬಾಟಾಗೆ ಏಕೆ ಫೋನ್ ಮಾಡಿ ನೋಡುವುದಿಲ್ಲ…. ಆ ಅರ್ಮುಳ್ಳು ನಿಮಗೆ ಹೇಳಲು ಮರೆತಿರಬೇಕು. ನಿಮಗೀಗ ಪ್ರವಾಸದ ದಣಿವಿರಬೇಕು….ಈಗ ತುಸು ವಿಶ್ರಮಿಸಿರಿ. ಸುಳ್ಳೇ ಚಿಂತೆ ಮಾಡಬೇಡಿ. ಯಾರೋ ಎಲ್ಲೋ ತಪ್ಪಿದ್ದಾರೆ. ಅಷ್ಟೇ. ಗುಡ್‌ನೈಟ್ ,” ಎಂದು ಟೆಲಿಫೋನ್ ಕೆಳಗಿಟ್ಟುಬಿಟ್ಟ ಹೈದರ್ ಎಂದಿನವನಾಗಿ ತೋರಲಿಲ್ಲ. ಸ್ವತಃ ಅತ್ಯಂತ ನಿರುಪದ್ರವಿಯಾದ ಈ ವ್ಯಕ್ತಿ ತನ್ನ ಹತ್ತಿರ ಮಾತನಾಡುತ್ತಿರುವಾಗಲೇ ಯಾಕೋ ಹೆದರಿಕೊಂಡಿದ್ದ. ತನ್ನೊಡನೆ ಮಾತನಾಡುವುದಕ್ಕೂ ಹೆದರಬೇಕೆಂದರೆ ! ಆದರೂ ಒಂದರಲ್ಲಿ ಸಮಾಧಾನ : ತನ್ನನ್ನು ಸಸ್ಪೆಂಡ್ ಮಾಡಿದ ಸುದ್ದಿ ಇನ್ನೂ ಇಲ್ಲಿ ಯಾರಿಗೂ ತಲುಪಿದಂತೆ ತೋರಲಿಲ್ಲ. ಅಥವಾ…ಹೈದರ್ ಗೊತ್ತಿದ್ದೂ ಗೊತ್ತಿಲ್ಲದವನಂತೆ ನಟಿಸುತ್ತಿರಬಹುದೆ ?….ದೇವರೇ, ಈ ಸಂಶಯಕ್ಕೆ ಕೊನೆಯೆಲ್ಲಿ ?…

ಖಂಬಾಟಾಗೆ ಫೋನ್ ಮಾಡಲೇ ಬಿಡಲೇ ಎಂಬಂಥ ಸಂದಿಗ್ಧ ಮನಃಸ್ಥಿತಿಯಲ್ಲಿರುವಾಗಲೇ ಕೃಷ್ಣ ಬ್ರೆಡ್ ಹಾಗೂ ಬಿಯರ್ ಬಾಟಲಿಗಳೊಂದಿಗೆ ಬಂದ. ತನ್ನೆಲ್ಲ ನೋವನ್ನೂ, ಆತಂಕವನ್ನೂ ಬಿಯರಿನಲ್ಲಿ ಮುಳುಗಿಸಿಬಿಡಬೇಕು ಎಂಬ ಆತುರದಲ್ಲಿ, “ಥೆಂಕ್ಸ್ ಕೃಷ್ಣ, ಒಂದು ಬಾಟಲಿ ತೆರೆ ಹಾಗೂ ಒಂದು ಗ್ಲಾಸು ತಗೊಂಡು ಬಾ.” ಎಂದ. ಈ ಫಿರೋಜ್, ಖಂಬಾಟಾ, ರಾಮಕೃಷ್ಣ, ಈ ನಿರುಪದ್ರವಿ ಅಂಜುಬುರುಕ ಹೈದರ್_ಎಲ್ಲ ಎಲ್ಲ ಹೋಗಲಿ ಹಳ್ಳ ಹಿಡಿದು….

ಬಿಯರಿನ ಅಮಲು ಮೆಲ್ಲಕ್ಕೆ ತಲೆಗೇರುತ್ತಿದ್ದಾಗ ಕಣ್ಣಮುಂದೆ ನಿಂತದ್ದು ಮೇರಿಯ ಮಾದಕವಾದ ಮೈಕಟ್ಟು. ಡಾಯನಾಳ ಸುಂದರ ಮೋರೆ. ಏಕೋ, ಬೇಡಬೇಡವೆಂದರೂ ಮೇರಿಗೆ ತಾನು ಹತ್ತಿರವಾಗುತ್ತಿದ್ದೇನೆ ಎಂದನ್ನಿಸಿದಾಗ ಅಸಾಧ್ಯವಾದ ಸುಖ ! ಆ ಸುಖದ ಮತ್ತಿನಲ್ಲಿರುವಾಗಲೇ ಇನ್ನೊಂದು ಬಾಟಲಿಯನ್ನು ತೆರೆಯಲು ಹೇಳಿದ. ಒಂದೇ ಪಟ್ಟಿಗೆ ಎರಡು ಬಾಟಲಿ ಬಿಯರನ್ನು ನಾಗಪ್ಪ ಹಿಂದೆಂದೂ ಹೀಗೆ ಒಬ್ಬನೇ ಕೂತು ಕುಡಿದಿರಲಿಲ್ಲ. ವಿಮಾನ-ನಿಲ್ದಾಣದಲ್ಲಿ ರಿಕ್ಷಾ ಹತ್ತುವಾಗ ಇಂದು ಮತ್ತೆ ಬಾರ್ಬಿಚ್ಯುರೇಟ್ ಗುಳಿಗೆಗೆಳನ್ನು ನುಂಗಬೇಕಾಗುತ್ತದೆಯೇನೋ ಎಂದು ಅನ್ನಿಸಿದ್ದರ ನೆನಪು ಬಂದಿತು. ನಿದ್ದೆ ಗುಳಿಗೆಗಳಿಗಿಂತ ಇದು ಲೇಸು ಎಂದುಕೊಳ್ಳುತ್ತ ಎರಡನೇ ಬಾಟಲಿಯಿಂದ ಬಿಯರನ್ನು ಗ್ಲಾಸಿನಲ್ಲಿ ಸುರಿಯಹತ್ತಿದ : ಕಣ್ಣಮುಂದೆ ನಗುತ್ತ ನಿಂತವರು ವೋಮು ಹಾಗೂ ಸರಸ್ವತಿ. ಅವರು ಹಾಗೆ ನಕ್ಕದ್ದು ಇದೇ ಮೊದಲು ಅನ್ನಿಸಿ ತಾನೂ ಮುಗುಳುನಕ್ಕ.
undefined
– ಅಧ್ಯಾಯ ಇಪ್ಪತ್ತೊಂದು –

ಬೆಳಿಗ್ಗೆ ಎಚ್ಚರವಾದಾಗ ನಾಗಪ್ಪನಿಗೆ ವಿಚಿತ್ರ ಭಾವನೆ. ಎಷ್ಟು ಗಂಟೆಯಾಗಿದೆ ಎಂಬುದು ಕೂಡ ಕೂಡಲೇ ತಿಳಿಯಲಿಲ್ಲ. ಕೋಣೆಯ ದಪ್ಪವಾದ ಕರ್ಟನ್ಸ್‌ಗಳೊಳಗಿಂದ ಹೊರಗಿನ ಬೆಳಕು ಬರುವುದು ಕಷ್ಟವಾಗಿತ್ತು. ಆದರೂ ಹೊರಗೆ ಆಗಲೇ ಬಿಸಿಲೇರಿದೆ : ತಾನೀಗ ಏಳಬೇಕು ಎಂದುಕೊಂಡರೂ ಏಳುವುದಕ್ಕೆ ಮನಸ್ಸೇ ಆಗುತ್ತಿರಲಿಲ್ಲ. ನಿನ್ನೆ ರಾತ್ರಿ ಬಿಯರ್ ಕುಡಿದದ್ದಕ್ಕೋ ಅಥವಾ ಏನು ಮಾಡಲಿ ಎಂಬುದರ ಬಗ್ಗೆ ಯಾವ ನಿರ್ಧಾರವನ್ನೂ ಮಾಡಲಾಗದ್ದಕ್ಕೋ ಮನಸ್ಸು ಗೊಂದಲಕ್ಕೊಳಗಾದ ಅನಿಸಿಕೆ : ಯಾರ ದೆಸೆಯಿಂದ ತಾನು ಈ ಎಲ್ಲ ಯಾತನೆಯನ್ನು ಅನುಭವಿಸುತ್ತಿದ್ದೇನೆಯೋ ಆ ಫಿರೋಜನನ್ನೇ ತಾನು ಈವರೆಗೂ ಕಂಡಿರಲಿಲ್ಲ_ಈ ಹೊಸ ಘಟನೆಗಳು ನಡೆಯಹತ್ತಿದಮೇಲೆ, ಶ್ರೀನಿವಾಸನೂ ಈ ಪಿತೂರಿಯಲ್ಲಿ ಸೇರಿಕೊಂಡಿದ್ದಾನೆ ಎಂಬುದರ ಬಗ್ಗೆಯೂ ಸ್ಪಷ್ಟವಾದ ಪುರಾವೆಗಳಿಲ್ಲ. ಹಾಗಾದರೆ… ತನ್ನನ್ನು ಶಿಕಾರಿಯಾಡುತ್ತಿದ್ದದ್ದು ತನ್ನ ಮನಸ್ಸೇ ಅಲ್ಲ ತಾನೇ ? ಅಪ್ಪ ತನ್ನನ್ನು, ತಂಗಿಯನ್ನು ಕೊಂದು ಕೊನೆಗೆ ತನ್ನನ್ನೇ ಕೊನೆಗಾಣಿಸಿಕೊಳ್ಳಬೇಕೆಂದು ಮಾಡಿದ ಸಂಚಿನ ಅಂಗವಾಗಿದ್ದ ಮಗು ತಾನು ಎಂಬ ಗುಮಾನಿಯ ಮೇಲೆ ಬೆಳೆದ ತನ್ನ ಮನೋಗಂಡ ಈಗ ಒಂದು ದುರ್ಬಲ ಕ್ಷಣದಲ್ಲಿ ತನ್ನ ನಿಜಸ್ವರೂಪವನ್ನು ಪ್ರಕಟಿಸಹತ್ತಿದೆಯೇ ?….ಕಂಪನಿಯ ‘ಆರ್ ಎಂಡ್ ಡೀ’ (ರಿಸರ್ಚ್ ಎಂಡ್ ಡೆವಲಪ್‌ಮೆಂಟ್) ಖಾತೆಯನ್ನು ಇಂದಿನ ಊರ್ಜಿರಾವಸ್ಥೆಗೆ ತರುವದರಲ್ಲಿ ತಾನು ಬಹು ದೊಡ್ಡ ಭಾಗವಹಿಸಿದ್ದೇನೆ ಎಂಬ ಅನ್ನಿಸಿಕೆ ಬರಿಯ ಅಹಂಕಾರದಲ್ಲಿ ಹುಟ್ಟಿದ್ದೇ ?

ದುರ್ದೈವದ ಸಂಗತಿಯೆಂದರೆ : ಕಂಪನಿಯ ಬಗ್ಗೆ ತಾನು ಮಾಡಿದ್ದರ ಸಂಪೂರ್ಣ ಲಾಭವನ್ನು ಪಡೆದವರು ಬೇರೆಯವರೇ ಆಗಿದ್ದಾರೆ ಎಂಬುದರ ಅರಿವು ನಾಗಪ್ಪನ ತೀರ ಸರಳ ಮನಸ್ಸಿಗೆ ತಟ್ಟುವಂತಹದಲ್ಲ. ದುಡಿಮೆಯ ಕ್ಷೇತ್ರದಲ್ಲಿಯ ಅವನ ಆಸೆ ಅಪೇಕ್ಷೆಗಳೇ ಬೇರೆಯಾಗಿದೆ. ತಾನು ಮೆಚ್ಚಿಕೊಂಡ, ತನ್ನ ಆಯ್ಕೆಯ ಕ್ಷೇತ್ರವಾದ ‘ಆರ್ ಎಂಡ್ ಡೀ’ಯಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸುವದು: ಸಾಧನೆಗೆ ತಕ್ಕ ಮನ್ನಣೆಯನ್ನು ಪಡೆಯುವದು. ಕಂಪನಿಯ ಸ್ಥಾನಮಾನಗಳ ಪಾವಟಿಗೆಗಳನ್ನು ಮೇಲೇರಿ ಹೋಗಬೇಕು ಎನ್ನುವಂತಹ ಮಹತ್ವಾಕಾಂಕ್ಷೆ ಅವನಿಗಿಲ್ಲ. ಹಾಗೆ ನೋಡಿದಲ್ಲಿ ಮಹತ್ವಾಕಾಂಕ್ಷೆ ಅವನ ಸ್ವಭಾವ-ಶಿಲ್ಪದಲ್ಲೇ ಇಲ್ಲವಾಗಿತ್ತು. ಈ ಮಹತ್ವಾಕಾಂಕ್ಷೆಯ ಅಭಾವವೇ ಒಂದು ಅರ್ಥದಲ್ಲಿ ಅವನು ಸದ್ಯ ಸಿಲುಕಿಕೊಂಡ ಸನ್ನಿವೇಶಕ್ಕೆ ಕಾರಣವಾಗಿತ್ತೆನ್ನಬಹುದು. ಆರ್ ಎಂಡ್ ಡೀ ಬಿಟ್ಟರೆ ನಾಗಪ್ಪ ತುಂಬ ತನ್ಮಯತೆಯಿಂದ ತೊಡಗುತ್ತಿದ್ದದ್ದು ಸಾಹಿತ್ಯದಲ್ಲಿ. ಸಾಲೆಯ ದಿನಗಳಿಂದಲೇ ಕವಿತೆ ಗೀಚುವ, ಕತೆ ಬರೆಯುವ ಹುಚ್ಚು ಹವ್ಯಾಸ. ಸಣ್ಣ ಕತೆಯ ಕ್ಷೇತ್ರದಲ್ಲಿ ಹೆಸರನ್ನು ಗಳಿಸುವ ಪ್ರತಿಭೆಯಿದ್ದೂ ಹೆಸರು ಗಳಿಸುವುದರ ಬಗೆಗೇ ನಿರಾಸಕ್ತ. ತನ್ನ ಸೃಷ್ಟಿ ಶೀಲತೆಯ ಸರ್ವಸ್ವವನ್ನೂ ಧಾರೆಯೆರೆದು ಬರೆದಿದ್ದೇನೆ ಎಂದನ್ನಿಸಿದ ಕತೆಗಳ ಸಂಗ್ರಹಕ್ಕೆ, ಸಾಹಿತ್ಯದಲ್ಲಿ ಈಗಾಗಲೇ ದೊಡ್ಡ ಕೀರ್ತಿಯ ಸ್ಥಾನವನ್ನು ಗಳಿಸಿದ್ದ ಗೆಳೆಯನೊಬ್ಬನಿಗೆ ಮುನ್ನುಡಿಯನ್ನು ಬರೆದುಕೊಡುವಂತೆ ಕೇಳಿಕೊಂಡಿದ್ದ. ‘ನಾವಿಬ್ಬರೂ ಬ್ರಾಹ್ಮಣರಾದ್ದರಿಂದ ನಾನು ಮುನ್ನುಡಿ ಬರೆಯುವುದರಿಂದ ನಿನಗೆ ಹಾನಿಯೇ ಆದೀತೇ ಹೊರತು ಯಾವುದೇ ರೀತಿಯ ಸಹಾಯ ಆಗಲಾರದು. ಮೇಲಾಗಿ, ಸಣ್ಣ ಕತೆಯ ಕ್ಷೇತ್ರದಲ್ಲಿ ಈಗಾಗಲೇ ಮಾನದ ಸ್ಥಾನ ಗಳಿಸಿದ ನಿನ್ನ ಕತೆಗಳಿಗೆ ಮುನ್ನುಡಿಯಾದರೂ ಯಾಕೆ ?’ ಎಂಬಂತಹ ಪತ್ರ ಬಂದಾಗ ಅದಕ್ಕೆ ಯಾವ ರೀತಿಯಿಂದ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೇ ಸುಮ್ಮನಾಗಿದ್ದ. ಮುಂದೆ ಕಥಾಸಂಗ್ರಹ ಪ್ರಕಟವಾದ ಮೇಲೆ ಬಂದ ಪ್ರತಿಕ್ರಿಯೆಯಿಂದಂತೂ ದಂಗುಬಡೆದ. ಕತೆಗಳಿಗಿಂತ ಅವುಗಳ ಹಿಂದೆ ಇವರು ಕಂಡುಹಿಡಿದ ಬ್ರಾಹ್ಮಣ-ಪ್ರಜ್ಞೆಯೇ ಚರ್ಚೆಯ ವಿಷಯವಾಯಿತು. ಇಷ್ಟು ದಿನ, ತಾನು ತನ್ನ ಗೆಳೆಯರೆಂದು ತಿಳಿದವರೇ ಈಗ ಈ ವಿಮರ್ಶೆಯ ನೆಪದಲ್ಲಿ ಪ್ರಕಟಿಸಿದ ಕ್ರೌರ್ಯದಿಂದ ನಾಗಪ್ಪ ದಿಗ್ಭ್ರಮೆಗೊಂಡ. ಇಂಥವರ ಸಾಹಿತ್ಯವನ್ನು ಸುಟ್ಟುಹಾಕಬೇಕು ಎನ್ನುವಷ್ಟರ ಮಟ್ಟಿಗೆ ಈ ಕ್ರೌರ್ಯ ವಿಕೋಪಕ್ಕೆ ಹೋದಾಗ ಕತೆ ಬರೆಯುವ ಹುರುಪನ್ನೇ ಕಳಕೊಂಡನೇ ಹೊರತು ಈ ಕ್ರೌರ್ಯವನ್ನು ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ. ಸದ್ಯ ಆಗೀಗ ಬರೆಯದೇ ಇರುವುದು ಅಸಾಧ್ಯವಾದಾಗ ಕವಿತೆ ಗೀಚುತ್ತಾನೆ : ಕತೆ ಬರೆಯುತ್ತಾನೆ. ಆದರೆ ಪ್ರಕಟಣೆಗೆ ಕಳಿಸುವುದನ್ನು ಬಿಟ್ಟುಕೊಟ್ಟಿದ್ದಾನೆ. ಯಾಕಾದರೂ ಪ್ರಕಟಿಸಬೇಕು ಎಂಬ ಪ್ರಶ್ನೆಗೆ ವಿವೇಕಪೂರ್ಣವಾದ ಉತ್ತರ ಕಂಡುಕೊಂಡಿಲ್ಲವಾದರೂ ಬರೆಯುವಾಗ, ಬರೆಯುವ ಅನುಭವ, ಸೃಷ್ಟಿಸುವ ಅನುಭವ ಕೊಡುವ ಆನಂದವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು. ಅವರು ಮೆಚ್ಚಿಕೆ ವ್ಯಕ್ತಪಡಿಸಿದಾಗ ಸುಖಪಡುವುದು ಮಾನವ ಸಹಜವಾದದ್ದೇನೋ ಎಂದೆನ್ನಿಸಿದೆ. ಒಮ್ಮೊಮ್ಮೆ ತಾನು ಅನುಭವಿಸುತ್ತಿದ್ದ ಈ ಯಾತನೆಯನ್ನು ಸಾಹಿತ್ಯದಲ್ಲಿ ರೂಪಾಂತಗೊಳಿಸುವ ಶಕ್ಯತೆಯಿದ್ದರೆ, ಅಂದರೆ ಸಾಹಿತ್ಯವಾಗಿ ಇನ್ನೊಬ್ಬರಿಗೆ ಮುಟ್ಟುವ ಶಕ್ಯತೆ ಇದ್ದರೆ, ಇದನ್ನೆಲ್ಲ ಇದಿರಿಸುವ ತನ್ನ ಧೈರ್ಯ ಹೆಚ್ಚಾಗುತ್ತಿತ್ತೇನೋ ಎಂದೆನ್ನಿಸಿದಾಗ ನಾಗಪ್ಪ ತನ್ನಷ್ಟಕ್ಕೇ ನಗುತ್ತಾನೆ : ಬರಿಯೆ ನನ್ನ ಅಪ್ಪ-ಅಮ್ಮರ ಜಾತಿಯೇ ನನ್ನ ಸೃಷ್ಟಿಶೀಲತೆಗೆ ಮಾರಕವಾಗುತ್ತಿದ್ದರೆ ಬೇರೆಯೇ ಒಂದು ಕಾವ್ಯನಾಮದಿಂದ ಬರೆದರೆ ಹೇಗೆ ? ಆದರೆ ಬಿಟ್ಟಾರೆಯೇ ? ಜಗತ್ತಿನಲ್ಲಿಯ ಎಲ್ಲ ಕಾಳಜಿಗಳಿಗೆ, ಜವಾಬ್ದಾರಿಗಳಿಗೆ, ಕಂತ್ರಾಟು ಹಿಡಿದ ನಮ್ಮ ವಿಮರ್ಶಕರು ಈ ಕಾವ್ಯನಾಮದ ಹಿಂದಿನ ಗುಟ್ಟನ್ನು ಶೋಧಿಸದೇ ಸುಮ್ಮಗುಳಿದಾರೆಯೇ ? ಇವರಲ್ಲನೇಕರು ಸ್ವತಃ ಕವಿತೆ, ಕತೆ ಬರೆಯುವವರೇ, ಇಷ್ಟೇ, ಊರಿಗೆ ಬೆಂಕಿ ಬಿದ್ದಾಗ ಗುಲಾಬಿ ಗಿಡದ ಮೇಲೆ, ಚಂದ್ರೋದಯದ ಮೇಲೆ ಇವರು ಕವಿತೆ ಬರೆಯುವದಿಲ್ಲ. ದೇವರ ಆಣೆಗೂ, ಬೆಂಕಿಗೇ ನೇರವಾಗಿ ಪ್ರತಿಕ್ರಿಯಿಸುತ್ತಾರೆ_ಶಬ್ಧಗಳಲ್ಲಿ ! ಬೆಂಕಿಯ ಮೇಲೆ ಕವಿತೆ ಬರೆಯುತ್ತಾರೆ, ಅಂತೂ ಊರಿಗೇ ಬೆಂಕಿ ಬಿದ್ದಾಗ ಕವಿತೆ ಬರೆಯುತ್ತಾರೆ. ಈ ನನ್ನ ಶೂರ ಮಕ್ಕಳು. ನನ್ನ ಹೊಟ್ಟೆಕಿಚ್ಚಿಗೆ ಕಾರಣವಾಗುತ್ತಾರೆ…. ಈ ಎಲ್ಲ ಶೂರ ಶಿಕಾರಿಯವರಿಂದ ನನಗೆ ಸಲ್ಲಬೇಕಾದ ನ್ಯಾಯ ದೊರಕೀತೇ ? ಇದು ‘ಅನ್ಯಾಯ’ ಎಂಬ ಪ್ರಜ್ಞೆಯೇ ಈ ಎಲ್ಲ ನೋವಿಗೆ ಮೂಲ. ಪ್ರಜ್ಞೆಯೇ ಇಲ್ಲದಲ್ಲಿ ನೋವೆಲ್ಲಿ ? ಅದ್ಭುತ ಸಂಗತಿಯೆಂದರೆ, ಪ್ರಜ್ಞೆ ಒಮ್ಮೆ ಹುಟ್ಟಿದ ಮೇಲೆ ಅದನ್ನು ಕಳೆದುಕೊಳ್ಳುವದು, ಇಲ್ಲವಾಗಿಸುವದು ಕಷ್ಟ. ಆದರೂ ಬರೆಯಬೇಕು. ಈ ಶ್ರೀನಿವಾಸರಿಂದ, ಈ ಫಿರೋಜರಿಂದ, ನಾನು ಅನುಭವಿಸುತ್ತಿದ್ದ ಎಲ್ಲ ನೋವಿಗೆ ಆಕಾರ ಕೊಡಬೇಕು ; ಮಾನವೀಯ ಯಾತನೆಗೆ ಮಿಡುಕಾಡಬಲ್ಲ ಯಾವ ಅಂತಃಕರಣಕ್ಕೂ ಅರ್ಥಪೂರ್ಣವಾಗುವಂತೆ ಬರೆಯಬೇಕು. ನನ್ನ ಹೆಸರಿನಲ್ಲೇ ಪ್ರಕಟಿಸಬೇಕು : ಒಂದು ವಿಶಿಷ್ಟ ಮೂಡಿನಲ್ಲಿ ಹುಟ್ಟಿದ ಈ ಧೈರ್ಯವನ್ನು ಸ್ಥಾಯಿಯಾಗಿಸುವಂತೆ ಧಡಪಡಿಸುತ್ತಾನೆ. ಇದೀಗ ಗೆಲ್ಲುತ್ತಾನೆ. ಮರುಗಳಿಗೆ ಸೋಲುತ್ತಾನೆ. ಇದೀಗ ಖುಷಿಯಿಂದ ಉಬ್ಬುತ್ತಾನೆ. ಮರುಗಳಿಗೆ ಕುಗ್ಗುತ್ತಾನೆ. ತನ್ನ ವ್ಯಕ್ತಿತ್ವದಲೇ ಮೂಲಭೂತವಾದ ಬದಲು ಒದಗಿಬರದೇ ಈ ಹೊಯ್ದಾಟ ನಿಲ್ಲದು ಎಂಬುದರ ಅರಿವು ನಾಗಪ್ಪನಿಗಿದೆ. ಯಾರಿಗೆ ಗೊತ್ತು : ಸದ್ಯ ತಾನು ಅನುಭವಿಸುತ್ತಿದ್ದುದರಲ್ಲೇ ಇಂತಹ ಬದಲಿಗೆ ಪ್ರಚಂಡ ಬದಲಾವಣೆಯಾಗಬಲ್ಲಂತಹದೇನಾದರೂ ಅಡಗಿರಬಹುದೆಂಬ ಅಸ್ಪಷ್ಟವಾದ ಭರವಸೆಯಿಂದಲೇ ಆಗೀಗ ಪುಲಕಿತನಾಗುತ್ತಾನೆ. ಇಂತಹ ಬದಲು ಒಮ್ಮೊಮ್ಮೆ ಉದ್ದವಾಗಿ ಬಿಟ್ಟ ಗಡ್ಡಮೀಸೆಗಳಿಗಾಗಿ, ಇಲ್ಲ ಯೂಲ್ ಬ್ರಾಯ್ನರ್ ತರಹ ತಕತಕನೆ ಹೊಳೆಯುವಂತೆ ಬೋಳಿಸಿಕೊಂಡ ತಲೆಗಾಗಿ ಕಲ್ಪನೆಯಲ್ಲಿ ದೇಹಧಾರಣೆ ಮಾಡಿದಾಗ ತನ್ನಷ್ಟಕ್ಕೇ ನಗುತ್ತಾನೆ….

ಈಗಲೂ ಹಾಸಿಗೆಯಲ್ಲಿ ಬಿದ್ದಲ್ಲೇ ಬಂದ ಇಂತಹ ಒಂದು ವಿಚಾರಕ್ಕೆ ತನ್ನಷ್ಟಕ್ಕೇ ನಗುತ್ತ ಇನ್ನೂ ನಿದ್ದೆಯೋ ಬಿಯರಿನ ಅಮಲೋ ಸಂಪೂರ್ಣವಾಗಿ ಬಿಟ್ಟಿರದ ಕಣ್ಣುಗಳನ್ನು ಉಜ್ಜುತ್ತ, ತಲೆಬದಿಯ ಗೋಡೆಯ ಮೇಲಿನ ಸ್ವಿಚ್‌ಬೋರ್ಡ್ ಮೇಲಿನ ಸ್ವಿಚ್ ಒಂದನ್ನೊತ್ತಿ ಕರೆ-ಗಂಟೆ ಬಾರಿಸಿದ. ಕೆಲಹೊತ್ತಿನಲ್ಲಿ ಕೃಷ್ಣ ಕದ ದೂಡಿ ಒಳಗೆ ಬಂದಾಗ, “ಗಂಟೆಯೆಷ್ಟಾಯಿತು ? ಒಂದು ಕಪ್ ಚಹ ತರುತ್ತೀಯಾ ?” ಎಂದು ಕೇಳಿದ. “ಗಂಟೆ ಒಂಬತ್ತರಮೇಲಾಗಿರಬೇಕು ಸರ್ ! ಗಾಢ ನಿದ್ದೆ ಹತ್ತಿರಬೇಕು. ಬೆಳಿಗ್ಗೇ ಮುಂಬಯಿಯಿಂದ ಫೋನ್ ಬಂದಿತ್ತು. ಕದವನ್ನು ಎಷ್ಟು ಸರತಿ ಬಡಿದರೂ ನಿಮಗೆ ಎಚ್ಚರವಾಗಲಿಲ್ಲ. ಕರೆದವರು ತಮ್ಮ ಹೆಸರನ್ನೂ ಹೇಳಲಿಲ್ಲ. ಇನ್ನೊಮ್ಮೆ ಫೋನ್ ಮಾಡುತ್ತೀರಾ ಎಂದು ಕೇಳಿದಾಗ, ‘ನಿನಗೇಕೆ ಇಲ್ಲದ ಉಪದ್ವ್ಯಾಪ. ಈಗ ಅನುವು ದೊರೆತಾಗಲೇ ಗಡದ್ಧಾಗಿ ನಿದ್ದೆ ಮಾಡಲು ಹೇಳು,’ ಎಂದು ನನ್ನನ್ನೇ ಗದರಿಸಿದರು ಸರ್ ! ಅವರಿಗೆ ಹಿಂದಿ ಸರಿಯಾಗಿ ಬರುವದಿಲ್ಲವೇನೋ. ಆದರೆ ಸಿಟ್ಟು ಮಾತ್ರ….“ತನ್ನ ವರದಿ ಬೇಕಾದದ್ದಕ್ಕಿಂತ ಉದ್ದವಾಯಿತೇನೋ ಎಂಬ ಅಳುಕಿನಿಂದೆಂಬಂತೆ, “ಕ್ಷಮಿಸಿ ಸರ್. ಚಹವನ್ನು ಕೂಡಲೇ ತರುತ್ತೇನೆ,”ಎಂದು ಅಲ್ಲಿಂದ ಹೊರಟ. ನಾಗಪ್ಪ ಈ ವರದಿಯಿಂದ ವಿಚಲನಾಗಲಿಲ್ಲ. ಬದಲು, ತಾನು ಇಷ್ಟು ದಿನ ತುಂಬ ಆತಂಕದಿಂದ ದಾರಿ ಕಾಯುತ್ತಿದ್ದ ಬದಲು ಈಗಾಗಲೇ ತನ್ನೊಳಗೆ ಆಗಹತ್ತಿದೆ ಎಂಬ ಅನ್ನಿಸಿಕೆಯಿಂದ ಬಹಳ ಖುಷಿಪಟ್ಟವನ ಹಾಗೆ_“ಭೆಂಛೋದ್ ! ಫಿರೋಜ್ ಅಥವಾ ಅವನ ಅರೆಮುಳ್ಳು ಚೇಲಾ ಖಂಬಾಟಾ ಫೋನ್ ಮಾಡಿರಬೇಕು ಎಂದುಕೊಂಡ. ಮಾಡಲಿ, ತನಗೇನಂತೆ. ತನಗೀಗ ಇವರಾರ ಸಾತೂ ಇಲ್ಲ ! ಇಲ್ಲ ! ಇಲ್ಲ ! ಇಲ್ಲ ! ಪದೇ ಪದೇ ಹಾಗೆ ಹೇಳಿಕೊಳ್ಳುವುದರಿಂದಲೇ ಒಳಗೆ ಕುದುರಹತ್ತಿದ ಧೈರ್ಯ ಗಟ್ಟಿಯಾದೀತು ಎಂಬ ಭರವಸೆಯಿಂದೆಂಬಂತೆ ಅದನ್ನು ಮಂತ್ರದಂತೆ ಜಪಿಸಹತ್ತಿದ. ನಿಜವಾಗಿ ನೋಡಿದಲ್ಲಿ ಈ ಶಾಬ್ಧಿಕ ಮಂತ್ರದ ಗರಜು ನಾಗಪ್ಪನಿಗಿರಲೇ ಇಲ್ಲ : ನಿಜಕ್ಕೂ, ಮನಸ್ಸಿನ ಆಳದಲ್ಲಿ. ಅವರಿಗೆ ನಿಲುಕದ ಒಂದು ಕೇಂದ್ರ ಇಷ್ಟು ದಿನ ಗಟ್ಟಿಯಾಗಿ ಬಿಗಿಹಿಡಿದ ಬಾಯನ್ನು ಈಗ ಅತಿ ಸಹಜವಾದ, ಸುಲಭವಾದ ರೀತಿಯಲ್ಲಿ ತೆರೆದಿತ್ತು ; ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯ ತಾನೇ ತಾನಾಗಿ ತಲೆಯೆತ್ತಿ ನಿಲ್ಲುವ ಹವಣಿಕೆಯಲ್ಲಿತ್ತು : ಹೌದು, ನನಗೂ ಈ ಕಂಪನಿಗೂ ಇರುವ ಸಂಬಂಧ ಕೂಡ ಇಲ್ಲಿಗೆ ಕಡಿಯಿತು. ಈ ಎಲ್ಲ ಸುಳ್ಳು ಸಂಬಂಧಗಳನ್ನು, ಮನುಷ್ಯನನ್ನೇ ಸುಳ್ಳುಮಾಡುವ ಈ ಸಂಬಂಧಗಳನ್ನು ಕಡಿಯುತ್ತ ಹೋಗಬೇಕು ಅಂದರೇನೇ ನಿಜವಾದ, ನಿಃಸ್ಪೃಹವಾದ ಸಂಬಂಧಗಳು ಹುಟ್ಟಬಹುದೇನೋ. ಯಾವುದೇ ರೀತಿಯ ಸ್ವಾರ್ಥಕ್ಕೆ, ಹಿತಾಸಕ್ತಿಗಳ ರಕ್ಷಣೆಗೆ ಕಟ್ಟಿಬಿದ್ದಿರದ ಸಂಬಂಧಗಳು ಇದ್ದಲ್ಲಿ ಮಾತ್ರ ಮನುಷ್ಯನೇ ಮನುಷ್ಯನ ಹಿಂಸೆಗೆ ಕಾರಣವಾಗುವುದು ತಪ್ಪಬಹುದೇನೋ….ತಿರಿಗಿ, ಬೇರಿನವರೆಗೆ ಅಲ್ಲಾಡಿಸಿದ್ದನ್ನು ಕೂಡ ನಿರ್ಜೀವ ಶಬ್ದಗಳಲ್ಲಿ ಹಿಡಿಯಹೊರಟ ತನ್ನ ಹುಚ್ಚು ಹವ್ಯಾಸಕ್ಕೆ ತಾನೇ ಬೇಜಾರುಪಟ್ಟು ಹಾಸಿಗೆಯಿಂದ ಧಡಕ್ಕನೆ ಎದ್ದ.

ಎದ್ದವನೇ ಕಿಡಕಿಗೆ ಬಂದು, ಪರದೆಗಳನ್ನು ಬದಿಗೆ ಎಳೆದ. ಆಗಲೇ ಕಾದ ಬಿಸಿಲಲ್ಲಿ ಮುಂದಿನ ಕಣಿವೆಯಲ್ಲ ಬೆಚ್ಚಗೆ ಬೆಳಗಿ ನಿಂತಿತ್ತು. ಎಷ್ಟು ಲಕ್ಷ ವರ್ಷಗಳ ಹಿಂದೆ ನೆಲದ ಹೊಟ್ಟೆಯೊಳಗಿಂದ ಸಿಡಿದೆದ್ದು ಬಂದ ಲಾವಾ ತಣ್ಣಗಾಗಿ ಹುಟ್ಟಿದ ಬಂಡೆಗಳೋ ಇವು ! ಎಷ್ಟು ಸಾವಿರ ವರುಷಗಳಿಂದ ಹೀಗೆ ಗಾಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ ನಿಂತಿವೆಯೋ ! ಪ್ರಥಮ ಬಾರಿಯೇ ಈ ಬಂಡೆಗಳನ್ನು ತಾನು ನೋಡುತ್ತಿದ್ದೇನೆ ಎನ್ನುವ ಕುತೂಹಲದಿಂದ ಅವುಗಳನ್ನು ನೋಡುತ್ತ ನಿಂತ : ಮನುಷ್ಯ ತನ್ನ ಯಾತನೆಗಳ ವಿಚಾರದಲ್ಲೇ ತೊಡಗಿದರೆ ಹೊರಗೆ ಬಂದಾಗ ಈ ಹೊರಗಿನ ಸೃಷ್ಟಿ ಎಷ್ಟೊಂದು ಸುಂದರ ! ನಾಗಪ್ಪ, ಆ ನಿರ್ಜೀವ ಮೂಕ ಬಂಡೆಗಳನ್ನೇ ನೋಡುತ್ತ ಎಷ್ಟು ಹೊತ್ತು ನಿಂತಿದ್ದನೋ ತಿರುಗಿ ಕೋಣೆಯತ್ತ ಕಣ್ಣು ಹಾಯಿಸಿದಾಗ ಯಾವಾಗಲೋ ಕೃಷ್ಣ, ಚಹದ ಟ್ರೇಯನ್ನು ಇಡುತ್ತ ತನ್ನ ಲಕ್ಷ್ಯ ಸೆಳೆದದ್ದು ಈಗ ನೆನಪಿಗೆ ಬಂದು ಕಿಟ್ಲಿಯನ್ನು ಮುಟ್ಟಿ ನೋಡಿದ. ಕೋಸಿಯ ಹೊದಿಕೆಯೊಳಗೂ ಅದು ತಣ್ಣಗಾಗಿತ್ತು. ಕೃಷ್ಣನಿಗೆ ಇನ್ನೊಂದು ಕಪ್ ಬಿಸಿಬಿಸಿ ಚಹ ತರಲಿಕ್ಕೆ ಹೇಳಿ ಹಾಸಿಗೆಯಲ್ಲಿ ಒರಗಿದ. ಗಂಟೆ ಹತ್ತನ್ನು ಸಮೀಪಿಸುತ್ತಿತ್ತು. ಆದರೂ ಏಳಬೇಕೆಂಬ ಕಾತರವಿರಲಿಲ್ಲ. ತನ್ನ ಇಂದಿನ ನಿರ್ಧಾರ ಎಂದಿನಂತಹದಲ್ಲ ಎಂಬ ಸ್ಪಷ್ಟವಾದ ಅರಿವು ಮನಸ್ಸಿಗೆ ಸಂತೋಷ ಕೊಡುತ್ತಿತ್ತು. ಕಿಡಕಿಯೊಳಗಿಂದ ನೋಡಿದ ಗೋಲುಗೋಲಾದ, ಬೋಳುಬೋಳಾದ ಬೃಹದ್ ಆಕಾರದ ಬಂಡೆಗಳಿಗೂ ತನ್ನ ಇದೀಗಿನ ಸಮಾಧಾನ ತುಂಬಿದ ಮನೋಭಾವಕ್ಕೂ ಏನೋ ಸಂಬಂಧವಿದೆಯೆಂಬಂತೆ….ಬೇಡ, ಇಂತಹ ಯಾವ ಭಾವುಕತೆಯೂ ಬೇಡ. ಫಿರೋಜ್ ಮತ್ತೆ ಫೋನ್ ಮಾಡಿದರೆ, ಹಾಳಾಗಿ ಹೋಗು ಬೋಳೀಮಗನೇ. ನಿನ್ನ ಈ ತನಿಖೆಗೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿಬಿಡಬೇಕು ಎಂದುಕೊಂಡ. ಹಾಗೆ ಹೇಳಿಕೊಳ್ಳುವಾಗ ಎಂದಿನ ಹಾಗೆ ಅವುಡುಗಚ್ಚಲಿಲ್ಲ. ಶ್ವಾಸ ಬಿಗಿಹಿಡಿಯಲಿಲ್ಲ. ಕೃಷ್ಣ ಹೊಸದಾಗಿ ತಂದ ಚಹದ ಬಿಸಿ ಗುಟುಕನ್ನು ಸವಿಯುತ್ತಿರುವಾಗ ನಿನ್ನೆ ಪ್ಲೇನಿನಲ್ಲಿ ಡಾಯನಾಳ ಹತ್ತಿರ ಕೂತಾಗಿನ ಸಿಹಿಕ್ಷಣಗಳ ನೆನಪು, ಅವಳು ತನ್ನನ್ನು ಗುರುತಿಸಿದ ಬಗೆ ನೆನಪು; ತಾನು ಎದೆಗವುಚಿ ಹಿಡಿದ ಗುಟ್ಟು ಗಟ್ಟಿಯಾದ ವಾಸ್ತವ ಜಗತ್ತಿನದೊ ಅಥವಾ ಬರಿಯೆ ತನ್ನ ಭ್ರಮೆಯಲ್ಲಿ ಹುಟ್ಟಿದ್ದೋ ಎನ್ನುವುದನ್ನು ತಾನು ತಿರುತಿರುಗಿ ಎದೆಮುಟ್ಟಿ ಖಾತ್ರಿಮಾಡಿಕೊಳ್ಳುತ್ತಿರಬೇಕು. ಆದರೆ ಅದು ಈಗ ಒಂದು ಚಟವಾಗಿಬಿಟ್ಟಿದೆ ಎನ್ನುವುದು ಲಕ್ಷ್ಯಕ್ಕೆ ಬಂದದ್ದು ಮಾತ್ರ ನೆನ್ನೆ ಡಾಯನಾ ಹೇಳಿದಮೇಲೆಯೇ. ಡಾಯನಾ ತಾನು ರಿಕ್ಷಾ ಹತ್ತುವಾಗ ನೋಡಿದ್ದರ ನೆನಪು ; ಅವಳೂ ಪಾರಸೀ. ಈ ಡ್ರೈವರ್ ಹಾಗೂ ಬಂದೂಕವಾಲರಿಗೆ ಸಂಬಂಧ ಇಲ್ಲ ತಾನೇ ಎಂದು ಅದೇ ಮೂಡಿದ ಶಂಕೆ_ಯಾವವೋ ಕಾಡುವ ಜಾತಿಯವಾಗಿರಲಿಲ್ಲ ; ಡಾಯನಾಳನ್ನು ತಾನು ಯಾವುದೇ ರೀತಿಯಿಂದ ಉಪಯೋಗಿಸಿಕೊಳ್ಳುವುದಿರಲಿಲ್ಲ. ಮೇಲು ಮೇಲಿನ ಮೆದುಳು ಭಾಗ ಪ್ರಸ್ತುತದ ವಿಚಾರದಲ್ಲಿ ತೊಡಗಿದಂತೆ ತೋರಿಯೂ ಆಳದಲ್ಲೆಲ್ಲೋ ಇನ್ನಾವುದನ್ನೋ ಕುರಿತು ಚಿಂತನೆ ನಡೆದಂತಿತ್ತು ; ಹೊಟ್ಟೆಯ ಮಕ್ಕಳನ್ನೇ ಕೊನೆಗಾಣಿಸುವ ಭೀಕರ ಕೃತ್ಯಕ್ಕೆ ಅಪ್ಪನನ್ನು ದೂಡಿದ ಸನ್ನಿವೇಶವಾದರೂ ತಿಳಿದಿದ್ದರೆ….ಒಂದು ದಿನ ಹುಡುಕಿ ತೆಗೆಯಬೇಕು. ಇನ್ನು ಮುಂದೆ ಬೇರುಗಳನ್ನು ಹುಡುಕುವಂತಹ, ತನ್ನ ಮಟ್ಟಿಗೆ ಮಹತ್ವದ್ದೆಂದು ಅನ್ನಿಸುವ ಇಂತಹ ನಿಷ್ಪಾಪ ಚಟುವಟಿಕೆಗಳಲ್ಲೇ ತನ್ನನ್ನು ತೊಡಗಿಸಿಕೊಳ್ಳಬೇಕು. ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಅರಿಯಬೇಕು. ಸ್ಪಷ್ಟವಾಗಿ ಅವುಗಳನ್ನು ಒಪ್ಪಿಕೊಳ್ಳಬೇಕು….

ಅದಾಗ, ಟೆಲಿಫೋನ್ ಗಂಟೆ : ಮುಂಬಯಿಯಿಂದಿರಬಹುದೇ ಎಂಬ ಅನುಮಾನದಿಂದ ಎದೆ ಡವಗುಟ್ಟಲಿಲ್ಲ. ಫಿರೋಜನೇ ಆದರೆ ಏನೇನು ಹೇಳಲಿ ಎಂಬುದರ ಬಗ್ಗೆ ರಿಸೀವರನ್ನು ಎತ್ತುವ ಮೊದಲೇ ವಿಚಾರಮಾಡಬೇಕು ಎನ್ನುವ ಆತಂಕ ಹುಟ್ಟಲಿಲ್ಲ. ಸನ್ನಿವೇಶ ಬೇಡುವ ಉತ್ತರವನ್ನು ಕೊಟ್ಟರಾಯಿತು ಎನ್ನುವ ನಿರಂಬಳತೆಯಿಂದ ಕೃಷ್ಣ ಫೋನ್ ಯಾರದೆಂಬುದನ್ನು ಹೇಳುವ ಕ್ಷಣವನ್ನು ಕಾಯಹತ್ತಿದ. ನಾಗಪ್ಪನ ಅನುಮಾನ ನಿಜವಾಗಿತ್ತು. ಮುಂಬಯಿಯಿಂದ ಟ್ರಂಕ್‌ಕಾಲ್ ನಾಗಪ್ಪನಿಗೆ : ರಿಸೀವರ್ ಕೈಗೆತ್ತಿಕೊಳ್ಳುವಾಗಿನ ತನ್ನ ಚಿತ್ತ-ಸ್ವಾಸ್ಥ್ಯಕ್ಕೆ ತಾನೇ ಆಶ್ಚರ್ಯಪಟ್ಟ. ಆ ಬದಿಯ ಗಂಡುದನಿ ನೋಶೀರ್ ಖಂಬಾಟಾನದಾಗಿತ್ತು. ಆದರೂ ಅದರ ಪರಿಚಯ ಸಿಗದವನ ಹಾಗೆ, “ಹಲ್ಲೋ ಫಿರೋಜ್, ನಿನ್ನ ದನಿ ಕೇಳಿ ಬಹಳ ಸುಖವಾಯಿತು,” ಎಂದ. ಆ ಬದಿಯಿಂದ. ಇದು ಟ್ರಕ್‌ಕಾಲ್, ಆದಷ್ಟು ಬೇಗ ತನಗೆ ಕೊಡಬೇಕಾಗಿದ್ದ ಸಂದೇಶವನ್ನು ಕೊಟ್ಟು ಮುಗಿಸಬೇಕು ಎಂಬ ಆತುರ ವ್ಯಕ್ತಪಡಿಸಿದ ದನಿ, “ಹಲ್ಲೋ ಹಲ್ಲೋ, ನಾನು ನಾನೂ, ಫಿರೋಜ ಅಲ್ಲ್_ನೋಶೀರ್ ಖಂಬಾಟಾ,” ಎಂದಿತು. ನಾಗಪ್ಪ, ಅಷ್ಟೇ ಶಾಂತಚಿತ್ತನಾಗಿ, ಗಂಟೆಗಟ್ಟಲೆ ಮಾತನಾಡೋಣವಲ್ಲ. ಯಾರೂ ಮಾತನಾಡಲು ಸಿಗದೇ ಬೇಸರ ಬಂದುಬಿಟ್ಟಿತ್ತು ನೋಡು. ಯಾಕೆ ಇಷ್ಟೊಂದು ಅವಸರ ಎನ್ನುವ ಸಾವಧಾನದಿಂದ, “ಹೆಲ್ಲೋ ನೋಶೀರ್. ಎಷ್ಟೊಂದು ಬೋರ್ ಆಗಿದ್ದೆನೆಂದು ಹೇಳಲೀ. ನಿನ್ನ ಸುಮಧುರ ಕಂಠನಾದ ಕೇಳಿದ್ದೇ ಬಹಳ ಸುಖವಾಯಿತು ನೋಡು. ಅಂದಹಾಗೆ, ಮರೆಯುವ ಮೊದಲೇ ನಿನಗೆ ಥೆಂಕ್ಸ್ ಕೊಟ್ಟುಬಿಡುತ್ತೇನೆ : ವಿಮಾನ-ನಿಲ್ದಾಣದಲ್ಲಿನನ್ನನ್ನು ಇದಿರುಗೊಳ್ಳಲು ಮಾಡಿದ ಏರ್ಪಾಡು; ಗೆಸ್ಟ್ ಹೌಸಿನಲ್ಲಿ ಉಳಿಯುವ ವ್ಯವಸ್ಥೆ; ಅಹಹ ! ಏನೆಂದು ಹೊಗಳಲಿ, Only you could do it….”
“ Hello, hello Nag, the matter is serious.”
“Who is serious ? What is wrong ? Which hospital ?”
“ಹೆಲ್ಲೋ ಹೆಲ್ಲೋ ನಾಗ್, ಫಿರೋಜ್…”
ಒಥಿ ಉoಜ ! My God ! What is wrong with him ? ಅದೇ ಅನ್ನುತ್ತೇನೆ. ಇಲ್ಲವಾದರೆ ನನ್ನನ್ನು ಇಲ್ಲಿ ಕರೆಯಿಸಿ ಫಿರೋಜ್ ಒಮ್ಮೆಲೇ ಹೀಗೆ ಮುಂಬಯಿಗೆ ಹೋಗುವವನಲ್ಲ.
What is the complaint ? What can I do for him ?”
Listen Nag, listan please….” ಸರಿಯಾಗಿ ಕೇಳಿಸುತ್ತಿಲ್ಲವೇ ? ಅದೇ….ಇಂದಿನ ದಿನಗಳಲ್ಲಿ ಟೆಲಿಫೋನ್ ಲೈನ್‌ಸೇ….ಕೇಳಿದೆಯಾ ಮೂರು ಮಿನಿಟುಗಳು ಮುಗಿದುವಂತೆ…Operator, extend please….” ನಾಗಪ್ಪನ ಈ ಮಾತಿಗೆ ಆ ತುದಿಯಿಂದ ಕೇಳುತ್ತಿದ್ದ ಖಂಬಾಟಾ ಹತಾಶನಾಗಿ : “ಓ ನೋನೋನೋ. ಇದು ಅರ್ಜೆಂಟ್ ಪೀಪೀ ಕಾಲ್.” ಎನ್ನುತ್ತಿರುವಾಗಲೇ, ಆಪರೇಟರ್ ನಡುವೆಯೇ ಬಾಯಿ ಹಾಕಿ.
“Ok….continue please,” ಎಂದಾಗಿಬಿಟ್ಟಿತ್ತು.
“Listen Nag, I will send you a talex to the factory.”
“ಏನಂದಿ ? ನಾನು ಫ್ಯಾಕ್ಟರಿಗೆ ಹೋಗಬೇಕೆ ? ಹೋಗಿ ಯಾರನ್ನು ಕಾಣಲಿ ? ಇಲ್ಲಿ ಬಂದಾಗ ಗೊತ್ತಾಯಿತು. ಏನೋ ದೊಡ್ಡ ಘೋಟಾಳೆಯಾಗಿದೆಯಂತೆ….”
ಟೆಲಿಫೋನ್ ಲೈನ್ಸ್ ಒಮ್ಮೆಲೇ ಕಡಿದುಹೋಗಿತ್ತು. ಟೆಲಿಫೋನ್ ಕೆಳಗಿಡುತ್ತಲೇ ನಾಗಪ್ಪನಿಗೆ ತನಗೆ ಬಂದ ನಗುವನ್ನು ತಡೆದುಕೊಳ್ಳಲಾಗಲಿಲ್ಲ. ಇದ್ದಕ್ಕಿಂದಂತೆ ಖಂಬಾಟಾನ ಫಜೀತಿ ಮಾಡುವ ಈ ಹುಕ್ಕಿ ತನಗೆ ಹೇಗೆ ಬಂದಿತೋ ಎಂದು ಆಶ್ಚರ್ಯಪಟ್ಟ. ಫೋನಿನ ಮೇಲೆ ಏನು ನಾಟಕ ನಡೆಯಿತು ಎಂಬುದನ್ನು ಫಿರೋಜನಿಗೆ ಹೇಳುವ ಧೈರ್ಯ ಕೂಡ ಆಗಲಿಕ್ಕಿಲ್ಲ, ಒಂದೂ ಮಗನಿಗೆ. ಲೈನೇ ಸಿಗಲಿಲ್ಲವೆಂದೋ, ಸಿಕ್ಕರೂ ಸರಿಯಾಗಿ ಕೇಳಿಸುತ್ತಿರಲಿಲ್ಲವೆಂದೋ, ಸುಳ್ಳು ಹೇಳುವಾಗಿನ ಖಂಬಾಟಾನ ದೀನ ಮೋರೆ ಕಣ್ಣ ಮುಂದೆ ನಿಂತಾಗಂತೂ ಇನ್ನೊಮ್ಮೆ ನಗಬೇಕು ಅನ್ನಿಸಿತು. ಈ ಒಂದೂಮಕ್ಕಳೆಲ್ಲ ಯಾವ Qualifications ಇಲ್ಲದೇನೆ ಇಷ್ಟೆಲ್ಲ ಸಂಖ್ಯೆಯಲ್ಲಿ ಈ ಕಂಪನಿಯಲ್ಲಿ ತುಂಬಿದ್ದು ಬರೇ ಫಿರೋಜನ ವಶೀಲೀಬಾಜಿಯಿಂದ. ಈಗ ಅವನ ಬೂಟು ನೆಕ್ಕುತ್ತವೆ. ಸ್ವಾಭಿಮಾನವಿಲ್ಲದ ಧಡ್ಡ ಎರಡೂ ಮಕ್ಕಳು…. ಫ್ಯಾಕ್ಟರಿಯ ಘೋಟಾಳೆಯ ಮಾತು ತೆಗೆದ ಕೂಡಲೇ ಖಂಬಾಟಾ ಒಮ್ಮೆಲೇ ಫೋನ್ ಕೆಳಗಿಟ್ಟ ರೀತಿ ಅರಿವಿಗೆ ಬಂದಾಗ ತುಸು ಗಂಭೀರನಾದ : ಅಂದೆನಲ್ಲ. ಫಿರೋಜನಲ್ಲಿ ತುಂಬಿದ್ದು ತನ್ನ ಸ್ಥಾನಮಾನಗಳ ಬಗೆಗಿನ ಅವಾಸ್ತವಾದ ದುರಭಿಮಾನವೇ ಹೊರತು ಕೆಲಸದ ಬಗ್ಗೆ ಇರಬೇಕಾದ ದಕ್ಷತೆಯಲ್ಲ. ಕಾರಖಾನೆಯ ಮುವ್ಹ್ಯಸ್ಥಾನಗಳಲ್ಲೆಲ್ಲ ಅವನಂತಹರೇ ತುಂಬಿದ್ದಾರೆ. ಬೋಳೀಮಗನಿಗೆ ತನ್ನ ಜಾತಿಯವರೆಂದರೆ ಮುಗಿದೇಹೋಯಿತು. ಈ ಎಲ್ಲ ದಡ್ಡರಿಂದಾಗಿ ಎಂತಹ ಪೇಚಿಗೆ ಸಿಕ್ಕಿಬಿದ್ದಿದ್ದಾನೋ, ತನಿಖೆಗಿನಿಖೆಯ ನೆಪ ಮಾಡಿ ನನ್ನನ್ನು ಬೆದರಿಸುತ್ತಿದ್ದುದರ ಹಿಂದಿನ ಕಾರಣ ಬಹುಶಃ ಈ ಪೇಚಿನಿಂದ ನನ್ನಿಂದೇನಾದರೂ ಸಹಾಯ ಬೇಕಾದ್ದದ್ದಿರಬೇಕು…. ಅರೇ ! ಸನ್ನಿವೇಶದ ಈ ಮಗ್ಗಲು ನನಗೆ ಹೊಳೆದಿರಲೇ ಇಲ್ಲವಲ್ಲ….ನಾಗಪ್ಪನಿಗೆ ಈ ನಿಗೂಢ ಸಂಗತಿಗಳೆಲ್ಲ ಬೆದರಿಸುವ ಬದಲು ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯುವ ಕುತೂಹಲ ಉಂಟಾಗುತ್ತಿದೆ ಎಂಬ ಅನ್ನಿಸಿಕೆಯಿಂದಲೇ ಸುಖವೆನಿಸಿತು.

ಕೃಷ್ಣನನ್ನು ಕರೆದು ಮುತ್ತೂಸ್ವಾಮಿ ಬಂದಿದ್ದಾನೆಯೇ ಎಂದು ಕೇಳಿದ. ಮುತ್ತೂಸ್ವಾಮಿ ಕೆಲಹೊತ್ತಿನ ಮೊದಲಷ್ಟೇ ಬಂದವನು, ತನ್ನ ಹೆಸರನ್ನು ಹಿಡಿದು ಮಾತನಾಡಿದ್ದು ಕೇಳಿಸಿ ಒಳಗೆ ಬಂದು ಕೈ ಮುಗಿದು ನಿಂತು, ನೆನ್ನೆಯ ತನ್ನ ಗೈರುಹಾಜರಿಯ ಬಗ್ಗೆ ಕ್ಷಮೆ ಯಾಚಿಸಿದ ! “ನಿನ್ನೆಯ ಗೈರುಹಾಜರಿಗೆ ಒಂದೇ ಕ್ಷಮೆ : ಈವತ್ತಿನ ಲಂಚ್ ಏಕ್‌ದಮ್ ಪಸಂದಾಗಿರಬೇಕು….”ನಾಗಪ್ಪ ತನ್ನ ವಾಕ್ಯವನ್ನು ಪೂರ್ತಿಗೊಳಿಸುವ ಮೊದಲೇ ಮುತ್ತೂಸ್ವಾಮಿ ಹೇಳಿದ….“ಅದರ ಬಗ್ಗೆ ಕಾಳಜಿ ಬೇಡ, ಸರ್….ಚಿಕನ್ ಬಿರ್ಯಾಣಿ, ಮಟನ್ ಕಟ್ಲೆಟ್ ಮತ್ತು…” ಕೃಷ್ಣ ನಡುವೆಯೆ ಬಾಯಿಹಾಕಿ, “ಇಂದು ಫ್ಯಾಕ್ಟರಿಗೆ ಹೋಗುವದಿಲ್ಲವಾದರೆ, ಬಿಯರ್ ತರಲೇ, ಸಾರ್ ? ನಿನ್ನೆ, ಮುಂಬಯಿಯಿಂದ ಸಾಹೇಬರು ಬಂದಿದ್ದಾರೆ. ಬಿಯರ್ ಏಕದಮ್ ತಂಪಾದದ್ದಿರಬೇಕು ಎಂದರೂ ಆ ಕಳ್ಳ ಬೆಚ್ಚನೆಯ ಬಿಯರನ್ನೇ ಕೊಟ್ಟ. ಈವತ್ತು ಅವನನ್ನು ಚೆನ್ನಾಗಿ ಥಳಿಸಿ….”ನಿನ್ನೆಯ ಬಿಯರಿಗಿಂತ ಹೆಚ್ಚು ತಣ್ಣಗಿನ ಬಿಯರ್ ಕುಡಿದ ನೆನಪು ನಾಗಪ್ಪನಿಗಿರಲಿಲ್ಲ. ಇಂದೂ ಕೂಡ ಬಿಯರ್ ಜತೆಗೆ ಬಕ್ಷೀಸು ಸಿಗಬಹುದೆಂಬ ಆಸೆಯೇನೋ….ಮತ್ತೆ ಬಿಯರ್ ಕುಡಿಯುವ ಇಚ್ಛೆ ನಾಗಪ್ಪನಿಗಿರಲಿಲ್ಲ. ಆದರೂ ಈ ದಿನ ತಾನು ಫಿರೋಜ್ ಹಾಗೂ ಖಂಬಾಟಾರ ಮೇಲೆ ಸಾಧಿಸಿದ ಪ್ರಥಮ ವಿಜಯವನ್ನು ಆಚರಿಸುವ ಉಮೇದಿನಿಂದಲೋ ಮುತ್ತೂಸ್ವಾಮಿಯ ಅಡಿಗೆಯ ನೆನಪಿನಿಂದಲೋ ಕೃಷ್ಣ ತಾನಾಗಿಯೇ ಬಿಯರಿನ ಮಾತು ತೆಗೆದಾಗ ಬೇಡವೆನ್ನುವ ಗಟ್ಟಿತನ ಮನಸ್ಸಿಗೆ ಉಳಿಯಲಿಲ್ಲ : ಹೌದು ಕೃಷ್ಣ, ಎರಡು ಬಾಟಲಿ ಬಿಯರ್ ತರುವಿಯಂತೆ. ಅದಕ್ಕೆ ಮೊದಲು ನಾಸ್ತಾ ಆಗಬೇಕು. ಸ್ನಾನಗೀನ ಮುಗಿಸಿ ಬರುತ್ತೇನೆ. ನಾಸ್ತಾಗೆ ಸಿಂಗಲ್ ಫ್ರಾಯ್ಡ್ ಎಗ್, ಎರಡು ಟೋಸ್ಟ್ ಮತ್ತು ಚಹ. ನಾನು ನಾಸ್ತಾ ಮುಗಿಸಿದಮೇಲೇ ನೀನು ಬಿಯರ್ ತರಲು ಹೋಗುವಿಯಂತೆ. ಅಡಿಗೆಗೆ ಬೇಕಾದ ಎಲ್ಲ ಸಾಮಾನು ಇದೆಯೊ ನೋಡು. ಇಲ್ಲವಾದರೆ ಬಿಯರ್ ತರಲು ಹೋದಾಗ ನೀನೇ ತರುವಿಯಂತೆ….ಎಂದು ಹೇಳಿ ಬಹಳ ಖುಶಿಯಲ್ಲಿ ತನ್ನ ಪ್ರಾತರ್ವಿಧಿಗಳನ್ನು ಮುಗಿಸಲು ಹೊರಟ.

ತನ್ನ ಈ ಖುಶಿಗೆ ಕಾರಣವಾದದ್ದನ್ನು ಮನಸ್ಸಿನಲ್ಲೇ ಟಿಪ್ಪಣಿ ಮಾಡುವ ಹುಚ್ಚು ಹಂಬಲನ್ನು ಬಿಟ್ಟುಕೊಟ್ಟರೂ, ತಾನು ಎಂದೂ ಓದಿರದ ಡೇಲ್ ಕಾರ್ನೇಗಿಯ ಒಂದೆರಡು ವಾಕ್ಯಗಳು ಎಲ್ಲೋ ಉದ್ಧೃತವಾದದ್ದನ್ನು ಓದಿದ್ದರ ನೆನಪು ಬರದಿರಲಿಲ್ಲ : ಮನುಷ್ಯ ಯಾವುದೇ ಸಂಕಟದಲ್ಲಿ ಸಿಕ್ಕಿಕೊಂಡಾಗ ಅದರಿಂದಾಗಬಹುದಾದ ದುಷ್ಟತಮ ಪರಿಣಾಮವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡಿಸಿಕೊಂಡು ಅದನ್ನು ಇದಿರಿಸುವ ಧೈರ್ಯ ತಂದುಕೊಳ್ಳಬೇಕು : ಆಗ ಕಣ್ಣೆದುರಿನ ಆಪತ್ತು ನಮ್ಮ ಆತಂಕಕ್ಕೆ ಕಾರಣವಾಗುವ ತಾಕತ್ತನ್ನು ತಂತಾನೆ ಕಳೆದುಕೊಳ್ಳುತ್ತದೆ….

ಹೆಚ್ಚೆಂದರೇನಾದೀತು ? ನೌಕರಿಯನ್ನು ಕಳಕೊಂಡೇನು ತಾನೆ ! ಹೆದರುವ ಗರಜಿಲ್ಲ. ಖೇತವಾಡಿಯ ಗಲ್ಲಿಯೊಂದರಲ್ಲಿ ನ್ಯೂಸ್‌ಪೇಪರ್ ಮಾರುವ ಅಂಗಡಿ ತೆರೆದೇನು….

ಒಂದು ತೀರ ಅನಿರೀಕ್ಷಿತ ಮುಹೂರ್ತದಲ್ಲಿ ಹುಟ್ಟಿದ ಈ ನಿಶ್ಚಯಕ್ಕೀಗ, ಸಾವಿರಾರು ವರುಷಗಳಿಂದ ಗಾಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ ನಿಂತ ಬಂಜಾರಾ ಹಿಲ್ಲಿನ ಪಾಷಾಣದ ಬಂಡೆಗಳ ಗಟ್ಟಿತನ ಬಂದಿದೆ ಎಂಬುದರ ಸಂಪೂರ್ಣ ಅರಿವು ಮಾತ್ರ ನಾಗಪ್ಪನಿಗಿರಲಿಲ್ಲ. uಟಿಜeಜಿiಟಿeಜ
– ಅಧ್ಯಾಯ ಇಪ್ಪತ್ತೆರಡು –

ನಾಸ್ತಾ ಮುಗಿಸಿ, ಡ್ರಾಯಿಂಗ್ ರೂಮಿನ ಸೋಫಾ ಒಂದರಲ್ಲಿ ಮೈ ಚೆಲ್ಲಿ ಬೆಳಗ್ಗಿನ ನ್ಯೂಸ್‌ಪೇಪರ್ ಓದುತ್ತಿರುವಾಗ ಟೆಲಿಫೋನ್ ಗಂಟೆ ಬಾರಿಸಿತು. ಮುತ್ತೂಸ್ವಾಮಿ ಹೋಗಿ ಕರೆಯನ್ನು ಸ್ವೀಕರಿಸಿದ. ಟೆಲಿಫೋನ್ ಕರೆ ನಾಗಪ್ಪನಿಗೇ ಬಂದದ್ದಾಗಿತ್ತು. ಯಾವುದೇ ರಿತಿಯಿಂದ ಕ್ಷೋಬೆಗೊಳಗಾಗದೇ ಶಾಂತಚಿತ್ತನಾಗಿ ರಿಸೀವರ್ ಕೈಗೆತ್ತಿಕೊಂಡು ಹೆಲ್ಲೋ ಎಂದ. ಆ ಬದಿಯಿಂದ ಬಂದ ದನಿ ರಾಮಕೃಷ್ಣನ ಅಸಿಸ್ಟೆಂಟ್ ಮೂರ್ತಿಯದಾಗಿತ್ತು. ಯಾವಾಗಲೂ ನಮ್ರತೆಯಿಂದ, ಆದರದಿಂದ ‘ಸರ್’ ಎಂದು ಸಂಬೋಧಿಸುತ್ತಿದ್ದ ಮೂರ್ತಿ, “Is that Mr. Nag ? ಎಂದು ಕೇಳಿದ್ದು ಊಟದ ಮೊದಲಿನ appetizer ಆಗಬಹುದಾದ ಸನ್ನಿವೇಶಕ್ಕೆ ಆಹ್ವಾನವಾಯಿತು :“Who is that ?” ಎಂದು ಕೇಳಿದಾಗ, “I am Murthy here” ಎಂದು ಒಂದು ಬಗೆಯ ಗರ್ವದಿಂದ ಸಾರಿದಾಗ, ಹೆಲ್ಲೋ ಮಿಸ್ಟರ್ ಮೂರ್ತಿ ಎಂದು ಮಿಸ್ಟರ್ ಈ ಶಬ್ದದ ಮೇಲೆ ವ್ಯಂಗ್ಯ ತುಂಬಿದ ಒತ್ತು ಹಾಕಿ,“Whಚಿಣ is ತಿಡಿoಟಿg ತಿiಣh ಥಿouಡಿ voiಛಿe_iಣ souಟಿಜeಜ so ಠಿeಛಿuಟiಚಿಡಿಟಥಿ ಜeviಟish,” ಎಂದಾಗ ಆ ತುದಿಯಲ್ಲಿ ರಿಸೀವರ್ ಹಿಡಿದ ಕೈ ದಡಬಡಿಸಿ, ಗೊಗ್ಗರು ದನಿಯಲ್ಲಿ ನಡುಗಿದ ಮಾತುಗಳು ನಾಗಪ್ಪನಿಗೆ ಸರಿಯಾಗಿ ಕೇಳಿಸಲಿಲ್ಲ. “Did you say something, ಮಿಸ್ಟರ್ ಮೂರ್ತಿ ?”ಎಂದು ಕೇಳುವಾಗ ಮಿಸ್ಟರ್ ಶಬ್ದದ ಮೇಲಿನ ಒತ್ತು ಇನ್ನೂ ಹಚ್ಚಿತ್ತು. ಮೂರ್ತಿ ಮೆತ್ತಗಾಗಿ ತನ್ನ ನಿತ್ಯದ ಆಕಾರಕ್ಕೆ ಇಳಿದು, “ಕ್ಷಮಿಸಿ ಸರ್, ಮುಂಬಯಿಯಿಂದ ನಿಮಗೊಂದು ಟೆಲೆಕ್ಸ್ ಇದೆ,”ಎಂದ. “What is wrong with your voice_it sounded so peculiarly devilish,” ನಾಗಪ್ಪ ಮಿಸ್ಟರ್ ಮೇಲಿನ ಒತ್ತನ್ನು ಸಡಿಲಗೊಳಿಸಲಿಲ್ಲ. ಮೂರ್ತಿ ಇನ್ನಷ್ಟು ಕುಗ್ಗಿದ ದನಿಯಲ್ಲಿ, “May I read it to you on the phone, Sir ?”  ಎಂದು ಕೇಳಿದ.

“ನೀವು ಈಗ ಫೋನ್ ಮೇಲೆ ಓದಬಹುದು. ಆದರೆ ಆಮೇಲೆ ಅದನ್ನು ಗೆಸ್ಟ್‌ಹೌಸಿಗೆ ಕಳಿಸುವುದು ಅತ್ಯವಶ್ಯ. ಯಾಕೆಂದರೆ : ಮೊದಲನೆಯದಾಗಿ, ನನ್ನ ಹೆಸರಿಗೆ ಬಂದ ಟೆಲೆಕ್ಸ್ ನನ್ನ ಕೈ ಸೇರಬೇಕು. ಎರಡನೆಯದಾಗಿ, ಬರೇ ಟೆಲಿಫೋನ್ ಮೇಲೆ ಬಂದ ಸಂದೇಶವನ್ನು ನಂಬಿ ನಾನು ಯಾವ ಆಕ್ಷನ್ನೂ ತೆಗೆದುಕೊಳ್ಳಲಾರೆ. ಮೂರನೆಯದಾಗಿ, ಟೆಲಿಫೋನ್ ಮೇಲೆ ಇಂಥವರೇ ಮಾತನಾಡುತ್ತಿದ್ದಾರೆ ಎಂಬುವುದರ ಬಗ್ಗೆ ನನಗಿನ್ನೂ ಖಾತ್ರಿಯಿಲ್ಲ. ಸದ್ಯ, ಟೆಲೆಕ್ಸ್ ಓದಿಹೇಳಿ.” ಇವನು ಎಂದಿನ ನಾಗನಾಥನಲ್ಲ ಎಂದು ಮನಗಂಡ ಮೂರ್ತಿ ಹೆಚ್ಚು ವಿಳಂಬ ಮಾಡದೇನೇ ಟೆಲೆಕ್ಸ್ ಓದಿದ : “DMD needs youe presence in Bombay immediately. Return by today evening flight or latest by tomorrow morning flight_Khambata.”

“ಥೆಂಕ್ಸ್, ಮಿಸ್ಟರ್ ಮೂರ್ತಿ, ನಿಮ್ಮಿಂದೀಗ ಮೂರು ಕೆಲಸಗಳಾಗಬೇಕು : ಒಂದು, ಟೆಲೆಕ್ಸನ್ನು ಕೂಡಲೇ ಗೆಸ್ಟ್‌ಹೌಸಿಗೆ ಕಳಿಸಿಕೊಡಬೇಕು. ಎರಡು, ಮುಂಬಯಿಗೆ ಹೋಗುವ ವಿಮಾನದ ಟಿಕೆಟ್ಟಿನ ವ್ಯವಸ್ಥೆ ಮಾಡಬೇಕು. ಮೂರು, ಯಾವ ಫ್ಲೈಟ್‌ಗೆ ರಿಝರ್ವೇಶನ್ ಆಗಿದೆಯೋ ಆ ಫ್ಲೈಟಿನ ಸಮಯಕ್ಕೆ ಸರಿಯಾಗುವಂತೆ ಕಾರಿನ ವ್ಯವಸ್ಥೆಯಾಗಬೇಕು.”

ನಾಗಪ್ಪನ ದನಿಯಲ್ಲಿ ಅವನೇ ನಿರೀಕ್ಷಿಸಿರದ ಆತ್ಮವಿಶ್ವಾಸ, ದೃಢತೆ ಪ್ರಕಟವಾಗಿದ್ದವು. ತುಂಬ ಖುಷಿಪಟ್ಟು, Did you hear me. Mr.Murthy ?” ಎಂದು ಕೇಳಿದಾಗ ಹೇಗೆ ಉತ್ತರಿಸಬೇಕೋ ಎಂದು ತಿಳಿಯದೇ ಮೂರ್ತಿ ಗೊಂದಲಿಸಿದ. ಯಾಕೆಂದರೆ, ಟೆಲೆಕ್ಸಿನ ಹಿಂದೆಯೇ ಬಂದ ರಾಮಕೃಷ್ಣನ ಟೆಲಿಫೋನ್ ಕರೆಯಲ್ಲಿ ಮೂರ್ತಿ ಏನೇನು ಮಾಡಬಾರದು ಎಂಬುದರ ಬಗ್ಗೆ ಸ್ಪಷ್ಟ ಮಾತಿನಲ್ಲಿ ಅಪ್ಪಣೆಕೊಟ್ಟಿದ್ದ. ಮುಖ್ಯವಾಗಿ, ಟಿಕೆಟ್ಟಿನ ವ್ಯವಸ್ಥೆ ಬೇಕಾದರೆ ಮಾಡಬಹುದು. ಆದರೆ ಕಾರನ್ನು ಮಾತ್ರ ಸರ್ವಥಾ ಕಾಳಿಸಬಾರದು. ಟ್ಯಾಕ್ಸಿಯಿಂದಲೇ ಹೋಗಲಿ. ಕೊಡಬಹುದಾದ ಕಾರಣ : ಕಾರುಗಳೆರಡು ಸರ್ವೀಸಿಂಗ್ ಸಲುವಾಗಿ ಗರಾಜಿಗೆ ಹೋಗಿವೆ. ಅವನು ಹೇಳಿದ ಇನ್ನೊಂದು ಮಾತನ್ನು ನಾಗಪ್ಪನಿಗೆ ತಿಳಿಸುವ ಧೈರ್ಯ ಮಾತ್ರ ಮೂರ್ತಿಗೆ ಆಗುತ್ತಿರಲೇ ಇಲ್ಲ : ಪ್ಲೇನ್ ಸೀಟು ಸಿಗದಿದ್ದರೆ ಟ್ರೇನಿನಲ್ಲಿ ಬರಲು ಹೇಳು….

ಮೂರ್ತಿ ಸುಮ್ಮನಾದದ್ದನ್ನು ಗಮನಿಸಿ ನಾಗಪ್ಪನೇ, “ನೋಡಿ ಮಿಸ್ಟರ್ ಮೂರ್ತಿ,” ಎನ್ನುವಷ್ಟರಲ್ಲಿ, ಮೂರ್ತಿ ಅಳುಬುರಕ ದನಿಯಲ್ಲಿ, “ಸರ್, ಹಾಗೆ ನನ್ನನ್ನು ಮಿಸ್ಟರ್ ಮಿಸ್ಟರ್ ಎಂದು ಕರೆಯಬೇಡಿ. ನಾನು ನಿಮ್ಮ ಎಂದಿನ ಸಾದಾ ಮೂರ್ತಿಯೇ….ಇಷ್ಟೇ, ರಾಮಕೃಷ್ಣನಿಗೆ ಇದಿರು ನಿಂತು ನೌಕರಿ ಕಳಕೊಳ್ಳುವ ಧೈರ್ಯವಿಲ್ಲ, ಸರ್…. ಕಾರು ಟಿಕೆಟ್ಟು ಕಳಿಸಿಕೊಡುತ್ತೇನೆ…. ದಯಮಾಡಿ ರಾಮಕೃಷ್ಣನಿಗೆ ಮಾತ್ರ ತಿಳಿಸಬೇಡಿ. ಅವನೀಗ ಮೊದಲಿನ ರಾಮಕೃಷ್ಣನಲ್ಲ, ಸರ್…..ಪ್ರತಿಯೊಂದು ಮಾತಿಗೂ ಆಒಆ ಅವನ ಸಲಹೆ ಪಡೆಯುತ್ತಾರೆ. ಆದ್ದರಿಂದ ಅವರ ನಂತರ ತಾನೇ ಆಒಆ ಆಗುತ್ತೇನೆ ಎಂಬಂತೆ ಜಂಭ ಕೊಚ್ಚುತ್ತಾನೆ, ಸರ್….”

“ಹೆದರಬೇಡಿ ಮೂರ್ತಿ….ಇದರ ಜವಾಬ್ದಾರಿ ನಿಮ್ಮ ಮೇಲೆ ಹಾಕಲಾರೆ. ಒಂದು ಕೆಲಸ ಮಾಡಿ. ಕೂಡಲೆ ರಾಮಕೃಷ್ಣನಿಗೆ ಫೋನ್ ಮಾಡಿ ನಾನು ಹೀಗೆ ಹೀಗೆ ಹೇಳಿದೆ ಎಂದು ತಿಳಿಸಿ. ಕಾರಿನ ವ್ಯವಸ್ಥೆಯಾಗದ ಹೊರತು ಏರ‍್ಪೋರ್ಟಿಗೆ ನಾನು ಹೊರಡುವುದಿಲ್ಲವೆಂದೂ, ಅದರಿಂದಾಗಿ ಟಿಕೆಟ್ ಕೆನ್ಸಲ್ ಆಗಿ ಹಣ ನಷ್ಟವಾದದ್ದಕ್ಕೆ, ಮುಂಬಯಿಗೆ ಬರುವುದರಲ್ಲಿ ವಿಲಂಬವಾದದ್ದಕ್ಕೆ ನಾನು ಜವಾಬ್ದಾರನಲ್ಲವೆಂದೂ ತಿಳಿಸಿದ್ದೇನೆಂದೂ ಹೇಳಿರಿ. ಇಷ್ಟೇ ಅಲ್ಲ, ನಾಳೆಯ ತನಕ ಹೈದರಾಬಾದನ್ನು ಬಿಡುವದು ಶಕ್ಯವಾಗದೇ ಇದ್ದಲ್ಲಿ ನಾಡಿದ್ದಿನಿಂದ ನಾನು ಫ್ಯಾಕ್ಟರಿಗೆ ಹೋಗಲು ಸುರುಮಾಡುತ್ತೇನೆಂದೂ ತಿಳಿಸಿರಿ….ಇದೆಲ್ಲ ನಿಮಗೆ ಅಸಾಧ್ಯವೆನಿಸಿದರೆ ರಾಮಕೃಷ್ಣನಿಗೆ ನೇರವಾಗಿ ನನಗೇ ಫೋನ್ ಮಾಡಲು ಹೇಳಿ….”

ಫೋನ್ ಕೆಳಗಿಡುವ ಹೊತ್ತಿಗೆ ಕೃಷ್ಣ ಬಿಯರಿನೊಂದಿಗೆ ಹಾಜರಾದ. ಒಳಗೆ ಅಡಿಗೆ ಮನೆಯಿಂದ ಹೊರಟ ಬಿರ್ಯಾಣಿಯ ಸಲುವಾಗಿ ಸಿದ್ಧವಾಗುತ್ತಿದ್ದ ಮಸಾಲೆಯ ಖಮಂಗ ವಾಸನೆ ತನಗೆ ಕಾದಿರುವ ಊಟದ ಪೂರ್ವ ಇಷಾರೆ ಕೊಡುತ್ತ ಬಾಯಲ್ಲಿ ನೀರು ತರಿಸುತ್ತಿತ್ತು. ಬಿಯರಿನ ಬಾಟಲಿಗಳೆರಡನ್ನೂ ನಾಗಪ್ಪನ ಇದಿರಿನ ಟೀಪಾಯಿಯ ಮೇಲೆ ಇಡುತ್ತ “ಮುಟ್ಟಿ ನೋಡಿ ಸರ್…. ಎಷ್ಟು ತಂಪಾಗಿದೆ ನೋಡಿ….ನಿನ್ನೆ ಆ ಲಫಂಗ ಟೊಪ್ಪಿಗೆ ಹಾಕಿದ,” ಎಂದ. ನಾಗಪ್ಪ ಅವನ ಖುಶಿಗಾಗಿ ಮುಟ್ಟಿ ನೋಡಿ, ಅವು ನಿನ್ನೆ ತಂದವುಗಳಿಗಿಂತ ಹೆಚ್ಚು ತಂಪಾಗಿರದಿದ್ದರೂ ಗಿeಡಿಥಿ gooಜ, very good ಎಂದು ಪ್ರಶಂಸಿಸಿ “ಒಂದನ್ನು ಈಗ ತೆರೆ ; ಇನ್ನೊಂದನ್ನು ಫ್ರಿಜ್ಜಿನಲ್ಲಿಡು.”ಎನ್ನುತ್ತಿರುವಾಗ ಬಾಕಿ ಉಳಿದ ನಾಲ್ಕು ರೂಪಾಯಿಗಳನ್ನು ಜಾಗ್ರತೆಯಿಂದ ಕಿಸೆಯಿಂದ ತೆಗೆಯುತ್ತಿರುವುದನ್ನು ನೋಡಿ, ಕೃಷ್ಣನ ಈ ನಾಟಕದ ಅರ್ಥಮಾಡಿಕೊಂಡು, “ಅದನ್ನು ನೀನೇ ಇಟ್ಟುಕೋ,” ಎಂದಾಗ, “ಥೆಂಕ್ಸ್ ಸರ್, ಇದೀಗ ಒಂದು ಬಾಟಲಿಯನ್ನು ತೆರೆದು ತರುತ್ತೇನೆ,” ಎಂದು ಒಳಗೆ ಹೋದ. ಸಾಹೇಬರನ್ನು ಇಷ್ಟೊಂದು ಖುಶಿಯಲ್ಲಿ ಹಿಂದೆಂದೂ ನೋಡಿರಲಿಲ್ಲ ಎಂಬುದು ಲಕ್ಷ್ಯಕ್ಕೆ ಬಂದ ಕೃಷ್ಣನಿಗೆ ಹಿಂದೊಮ್ಮೆ ಮಾಡಿ ಗದರಿಸಿಕೊಂಡ ಸೂಚನೆ ಈಗ ಮತ್ತೆ ಮಾಡಿ ನೋಡಲೇ ಎನ್ನುವ ಆಸೆ ಹುಟ್ಟಿತು. ಇನ್ನೂ ಹತ್ತು ರೂಪಾಯಿ ಕಮಿಶನ್ ಗಳಿಸಬಹುದಾಗಿತ್ತು. ಮುಂಬಯಿಗೋ, ಕಲಕತ್ತೆಗೋ ಹೋಗಿದ್ದ ಫರಿದಾ ಬಾನೂ ಈಗ ತಿರುಗಿ ಹೈದರಾಬಾದಿಗೆ ಬಂದಿದ್ದ ಸುದ್ದಿ ಎಂಟು ದಿನಗಳ ಹಿಂದಷ್ಟೇ ಸಿಕ್ಕಿತ್ತು. ಆದರೆ ಈ ಸಾಹೇಬರ ಮೋರೆಯ ಮೇಲೆ ವ್ಯಕ್ತವಾದ ಖುಶಿಯಲ್ಲಿ ರಂಗೇಲತನದ ಲವಲೇಶವೂ ಇಲ್ಲದ್ದನ್ನೋ, ತುಂಬ ಸರಳನಂತೆ ಕಂಡರೂ ಕಣ್ಣುಗಳಿಂದ ಹೊರಸೂಸುವ ಹೊಳಪಿನಲ್ಲಿ ತನ್ನನ್ನು ಹೆದರಿಸುವಂತಹದೇನನ್ನೋ ಕಂಡ ಕೃಷ್ಣನಿಗೆ ಕೇಳುವ ಧೈರ್ಯವಾಗಲಿಲ್ಲ….

ಇಂದು, ಬಿಯರ್ ಕುಡಿಯುವುದರ ಹಿಂದೆ ಯಾವುದೇ ಬಗೆಯ ನೋವನ್ನು ಮುಳುಗಿಸುವಂತಹ ಉದ್ದೇಶವಿರಲಿಲ್ಲವಾದ್ದರಿಂದ ಅದರ ಮತ್ತು ಏರುವಾಗಿನ ಗೆಲುವಿನ ಜಾತಿಯೇ ಬೇರೆಯಾಗಿತ್ತು : ಹಿಂದಿನ ಗಚ್ಚಿಯಲ್ಲಿ ಹರಡಿದ ಮಧಾಹ್ನದ ಬಿಸಿಲು ; ಈಗ ಬೆಳಕಿನಂತೆಯೇ ಅದರ ಜಳವನ್ನೂ ಪ್ರತಿಫಲಿಸುತ್ತಿದ್ದ ಗುಡ್ಡದ ಬಂಡೆಗಳು ; ದೂರ, ಆಕಾಶದಲ್ಲಿ ಆಗೊಮ್ಮೆ ಈಗೊಮ್ಮೆ ಮೈಯನ್ನು ಬಿಸಿಲಲ್ಲಿ ಮಿಂಚಿಸುತ್ತ ಏರ‍್ಪೋರ್ಟನ್ನು ಸಮೀಪಿಸುತ್ತಿದ್ದಂತೆ ಕಣ್ಣಿಗೆ ಕಾಣಿಸಿಕೊಂಡದ್ದೇ ಸದ್ದನ್ನೂ ಕೇಳಿಸುತ್ತ ಕೆಳಗಿಳಿಯುವ ವಿಮಾನ : ಗಚ್ಚಿಯ ಒಂದು ಮೂಲೆಯಲ್ಲಿ, ಗಾಳಿಯಲ್ಲಿ ಎಲೆಗಳನ್ನು ಗಿಲಿಗಿಲಿಸುತ್ತ ನಿಂತ ಬೇವಿನ ಗಿಡ; ಗಚ್ಚಿಯನ್ನು ಡ್ರಾಯಿಂಗ್ ರೂಮಿನಿಂದ ಬೇರ್ಪಡಿಸುವ ಕಾಚಿನ ಪಾರ್ಟಿಶನ್ : ಬಿಸಿಲು ಕಣ್ಣನ್ನು ನೋಯಿಸಹತ್ತಿದ್ದರಿಂದ ಕೃಷ್ಣನನ್ನು ಕರೆದು ಪರದೆಗಳನ್ನು ಪಸರಿಸಲು ಹೇಳಿದ. ಅವನು ಹಾಗೇ ಮಾಡಿದಾಗ, ಪರದೆಗಳ ಹಸಿರುಬಣ್ಣದೊಳಗಿಂದ ತೂರಿಬಂದು ಕೋಣೆಯಲ್ಲಿ ಹರಡಿದ ಬೆಳಕು ಅಮಲೇರುತ್ತಿದ್ದ ಕಣ್ಣುಗಳಿಗೆ ಇನ್ನಷ್ಟು ಸುಖ ಕೊಡಹತ್ತಿತು….

ಮ್ಯಾನೇಜಿಂಗ್ ಡೈರೆಕ್ಟರ್ ಒಮ್ಮೆಲೇ ಅಮೇರಿಕಾಕ್ಕೇ ಹೋಗಬೇಕಾಗಿ ಬಂದದ್ದು….ಬೇಡ, ಯಾವುದರ ಬಗೆಗೂ ಈಗ ಊಹಾಪೋಹ…. ಪ್ರಸ್ತುತ ಕ್ಷಣಕ್ಕಷ್ಟೇ ಪ್ರತಿಕ್ರಿಯಿಸುತ್ತ ನಡೆಯುವುದು, ಎಲ್ಲದರ ಮೋಹವನ್ನು ಕಳಚಿಕೊಳ್ಳಲು ನಿಶ್ಚಯಿಸಿದಮೇಲೆ ಇನ್ನು ದುಡಿಮೆಯ ಕ್ಷೇತ್ರದ ಬಗ್ಗೆ ವಿಚಾರ ಮಾಡುವುದು ಬೇಡ. ಹೌದು, ಇದೀಗಿನ ಕ್ಷಣದಿಂದ ದೂರ ಹೋಗಕೂಡದು. ಜೀವಂತವಾಗಿ ಅನುಭವಿಸಿದ ಈ ಕ್ಷಣದಿಂದ ಇನ್ನೊಂದು ಕ್ಷಣಕ್ಕೆ…. ಹೊರಗೆ ಕಾರು ಬಂದು ನಿಂತ ಸದ್ದು ; ಬಾಗಿಲು ತೆರೆದು ಕೆಳಗಿಳಿದ ಸದ್ದು. ಅವುಗಳ ಹಿಂದೆಯೇ ಸರ್ದಾರ್ ಡೈವರ್ ಡ್ರಾಯಿಂಗ್ ರೂಮಿಗೆ ಬಂದು ಸಲಾಮ್ ಮಾಡಿದ. ಎಂದಿನ ಆತ್ಮೀಯತೆಯಿಂದ, “ಹ್ಯಾಗಿದ್ದೀ ಸರ್ದಾರ್,” ಎಂದು ಕೇಳಿದಾಗ ಆ ಪ್ರಶ್ನೆಯಲ್ಲಿ ಇನ್ನೇನೋ ಕೇಳಿಸಿದಂತಾಗಿ, “ನಿನ್ನೆ ಬಂದಿರಂತೆ ಸಾಹೇಬರು. ನನಗೆ ಯಾರೂ ಹೇಳಲೇ ಇಲ್ಲ ಸರ್…. ಈಗ ಮೂರ್ತಿ ಹೇಳಿದ ಮೇಲೆ ಗೊತ್ತು. ಈವತ್ತಿನ ಸಂಜೆಯ ಫೈಟಿನ ಟಿಕೆಟ್ ಹಾಗೂ ಈ ಕವರನ್ನು ಕೊಟ್ಟಿದ್ದಾರೆ.” ಎಂದು ಎರಡನ್ನೂ ನಾಗಪ್ಪನ ಕೈಗೆ ಒಪ್ಪಿಸಿದ. ಕವರಿನಲ್ಲಿ ಇದ್ದದ್ದು ಮುಂಜಾನೆಯ ಟೆಲೆಕ್ಸ್ ಇರಬೇಕು ಎಂದು ತೆರೆಯುವ ಮೊದಲೇ ಊಹಿಸಿಕೊಂಡ. ಮೂರ್ತಿ ಮತ್ತೇನನ್ನಾದರೂ ಹೇಳಿದರೇ ಎಂದು ಕೇಳಿದಾಗ, “ಇಲ್ಲಾ ಸರ್. ಸಂಜೆ ವಿಮಾನ-ನಿಲ್ದಾಣಕ್ಕೆ ನಿಮ್ಮನ್ನು ಕರೆದೊಯ್ಯಲು ನನಗೆ ಹೇಳಿದ್ದಾರೆ. ಅವರಿಗೆ ಪಾಪ, ಮೈಯಲ್ಲಿ ಹುಷಾರಿಲ್ಲವಂತೆ. ಅರ್ಧ ದಿನದ ರಜೆ ಪಡೆದು ಮನೆಗೆ ಹೋದರು. ಬರುವಾಗ ಅವರನ್ನು ಮನೆಯಲ್ಲಿ ಬಿಟ್ಟೇ ಇಲ್ಲಿಗೆ ಬಂದೆ” ಎಂದ. “ಸಂಜೆ ಆರೂವರೆಯ ಸುಮಾರಿಗೆ ಬರುತ್ತೇನೆ, ಸರ್. ೭-೩೦ರ ಫ್ಲೈಟ್. ಆ ಮೊದಲು ನಿಮಗೆ ಕಾರು ಬೇಕಾದರೆ ಹೇಳಿ. ಬರುತ್ತೇನೆ,” ಎಂದ. ಇವನು ಬೇಡವೆಂದಾಗ, ಇನ್ನೊಮ್ಮೆ ಸಲಾಮು ಮಾಡಿ ಅಲ್ಲಿಂದ ಹೊರಟುಹೋದ.
ಅವನು ಹೊರಟುಹೋದ ಮೇಲೆ, ಲಕೋಟೆಯನ್ನು ತೆರೆದು ನೋಡಿದರೆ ಊಹಿಸಿಕೊಂಡಂತೆ ಮುಂಬಯಿಯಿಂದ ಬಂದ ಟೆಲಕ್ಸ್ ಏ ಆಗಿತ್ತು. ಇಷ್ಟೇ, ಮೂರ್ತಿಯ ಹೆಸರಿಗೇ ಬಂದಿತ್ತು ; ನಾಗಪ್ಪನ ಹೆಸರಿಗಲ್ಲ.“Please read the following message to Nag on phone,” ಎಂದು ಆರಂಭವಾಗಿತ್ತು. ಮೂರ್ತಿಯ ದೇಹಾಲಸ್ಯಕ್ಕೆ ಬಹುಶಃ ರಾಮಕೃಷ್ಣನಿಂದ ಫೋನಿನ ಮೇಲೆ ಬೈಸಿಕೊಂಡದ್ದು ಕಾರಣವಾಗಿರಬೇಕು. ತನ್ನ ಮೇಲೆ ಬಂದ ಸಿಟ್ಟನ್ನು ಆ ಹುಡುಗನ ಮೇಲೆ ತೆಗೆದಿರಬೇಕು ಎಂದು ಬಗೆದಾಗ ಕೆಡಕೆನಿಸಿತು.

ಪಸಂದಾಗಿ ಊಟ ಮುಗಿಸಿದ್ದೇ ಮುತ್ತೂಸ್ವಾಮಿಯ ಅಡಿಗೆಯನ್ನೂ, ಕೃಷ್ಣ ತಂದ ಬಿಯರನ್ನೂ ಬಾಯಿತುಂಬ ಹೊಗಳಿ, ನಾಲ್ಕು ಗಂಟೆಯವರೆಗೆ ಎಬ್ಬಿಸುವುದು ಬೇಡವೆಂದು ಹೇಳಿ ಮಲಗುವ ಕೋಣೆಗೆ ನಡೆದ. ಹಾಸಿಗೆಗೆ ಮೈ ತಾಕಿಸಿದ್ದಷ್ಟೇ ಗೊತ್ತು. ಯಾವಾಗ ನಿದ್ದೆ ಹತ್ತಿತೋ ಪತ್ತೆಹತ್ತಲಿಲ್ಲ. ನಿದ್ದೆಯಿಂದ ಎಚ್ಚರವಾಗಿ ಹಾಸಿಗೆಯಿಂದ ಏಳಬೇಕೋ ಬಾರದೋ ಎಂಬುದನ್ನು ಇನ್ನೂ ನಿಶ್ಚಯಿಸುವ ಸ್ಥಿತಿಯಲ್ಲಿದ್ದಾಗ_ಸಂಜೆಯ ಫ್ಲೈಟ್ ಮೇಲೆ ಡಾಯನಾ ಇದ್ದರೆ….ಎಂಬ ಆಸೆ ತುಂಬಿದ ಪ್ರಚಾರದಿಂದ ಪುಲಕಿತನಾಗಿ ಎದ್ದವನೇ ಹೊರಡುವ ತಯಾರಿಗೆ ತೊಡಗಿದ. undefined
– ಅಧ್ಯಾಯ ಇಪ್ಪತ್ಮೂರು –

ವಿಮಾನ-ನಿಲ್ದಾಣ ಗೆಸ್ಟ್‌ಹೌಸಿನಿಂದ ಹದಿನೈದೇ ಮಿನಿಟುಗಳ ಹಾದಿ. ಆದರೆ ನಡುವೆ ರೈಲ್ವೆ ಕ್ರಾಸಿಂಗ್ ಒಂದು ಇದ್ದುದರಿಂದ ಕಾರು ಬಂದದ್ದೇ ಹೊರಡುವುದನ್ನು ನಿರ್ಧರಿಸಿ ಹಾಗೇ ಸಿದ್ಧವಾಗಿ ಕುಳಿತಿದ್ದ. ಸರ್ದಾರ್ ಡ್ರೈವರ್ ಸರಿಯಾಗಿ ೬-೩೦ ಕ್ಕೆ ಬಂದದ್ದೇ ಹೊರಟೇಬಿಟ್ಟ. ಏಕೋ, ಹೈದರಾಬಾದಿಗೆ, ಬಹುಶಃ ಇದೇ ತನ್ನ ಕೊನೆಯ ಭೇಟಿಯೇನೋ, ಎಂಬ ಭಾವನೆಯಿಂದೆಂಬಂತೆ ಮುತ್ತೂಸ್ವಾಮಿಗೆ ಹತ್ತು ರೂಪಾಯಿ, ಕೃಷ್ಣನಿಗೆ ಐದು ರೂಪಾಯಿ ಬಕ್ಷೀಸು ಕೊಟ್ಟ. ಅವರು ಕೃತಜ್ಞತೆಯನ್ನು ಪ್ರಕಟಿಸಿ ಬೀಳ್ಕೊಟ್ಟಮೇಲೆ ಕಾರಿನಲ್ಲಿ ಬಂದು ಕೂತಾಗ ಮನಸ್ಸು ಅರ್ಥವಾಗದ ರೀತಿಯಲ್ಲಿಭಾರವಾಗಿತ್ತು. ಹದಿನೆಂಟು ವರ್ಷಗಳ ದೀರ್ಘ ಅವಧಿಯಲ್ಲಿ ಬೆಳೆದ ಸಂಬಂಧಗಳನ್ನು ಒಮ್ಮೆಲೇ ಕಡಿದುಕೊಳ್ಳುವುದು ಅಷ್ಟೊಂದು ಸುಲಭವಲ್ಲವೇನೋ : ಸರ್ದಾರ್ ಕಾರನ್ನು ಸ್ಟಾರ್ಟ್ ಮಾಡಿದ್ದೇ ತಿರುಗಿ ಅಂತರ್ಮುಖವಾಗಲು ಹವಣಿಸುತ್ತಿದ್ದ ಮನಸ್ಸನ್ನು ಹಾಗೇ ಆಗಲು ಬಿಡದ ದೃಢನಿರ್ಧಾರದಿಂದ, ದೃಷ್ಟಿಯನ್ನು ಸಂಜೆಯ ಎಳೆಬಿಸಿಲಲ್ಲಿ ಅವರ್ಣನೀಯವಾದ ಸೌಂದರ್ಯದಿಂದ ಬೆಳಗಿ ನಿಂತ ಸುತ್ತಲಿನ ಬಂಡೆಗಳ ಮೇಲೆ ; ಇಕ್ಕೆಲದ ಗುಲ್‌ಮೊಹರ್, ದೇವದಾರು ಗಿಡಗಳ ಮೇಲೆ; ಆಳೆತ್ತರದ ಬೇಲಿಗಳಿಂದ ಸುತ್ತುವರಿದ ಕಂಪೌಂಡುಗಳೊಳಗಿನ ಮನೆಗಳ ಮೇಲೆ ; ನಡುವೆಯೇ ರಸ್ತೆಯೊಳಗಿನ ಸಂಕಕ್ಕೆ ರಿಪೇರಿ ನಡೆದದ್ದರಿಂದ ಕಚ್ಚ ರಸ್ತೆಯಿಂದ ಹೋಗುವಾಗ ಹತ್ತುವ ನೀರಿನ ಹೊಂಡದ ಮೇಲೆ ಊರಿದ್ದ. ಇವುಗಳನ್ನು ಕೂಡ ತಾನು ನೋಡುವದುಇದೇ ಕೊನೆಯ ಬಾರಿಯೇನೋ ಎಂಬ ಅನ್ನಿಸಿಕೆ ಕಾಡತೊಡಗಿತು…. ರೇಲ್ವೆ ಕ್ರಾಸಿಂಗಿಗೆ ಬಂದಾಗ ಅದು ತೆರೆದೇ ಇತ್ತು. ವಿಮಾನ-ನಿಲ್ದಾಣಕ್ಕೆ ಬಂದಾಗ ಬರೇ ೬-೪೫. ಸರ್ದಾರನಿಗೂ ಐದು ರೂಪಾಯಿ ಬಕ್ಷೀಸು ಕೊಡುತ್ತ, ಥೆಂಕ್ಸ್ ಸರ್ದಾರ್ ಎಂದು ಹಸ್ತಾಂದೋಲನ ಮಾಡುವಾಗ ಹಿಂದೆಂದೂ ಸಾಹೇಬರು ಹೀಗೆ ಮಾಡಿರಲಿಲ್ಲ ಎಂಬುದು ಲಕ್ಷ್ಯಕ್ಕೆ ಬಂದ ಡ್ರೈವರ್ ಇವನನ್ನು ಬೀಳ್ಕೊಡುವಾಗ ತುಂಬ ಭಾವುಕನಾಗಿದ್ದ.

ನಿಲ್ದಾಣದ ಒಳಗೆ ಬಂದಾಗ ಕೌಂಟರ್ ಇನ್ನೂ ತೆರೆದಿರಲಿಲ್ಲ. ಕೌಂಟರಿನ ಇದಿರು ತನ್ನ ಸೂಟ್‌ಕೇಸ್ ಇಟ್ಟ. ಸಮಯ ಕಳೆಯುವ ಉದ್ದೇಶದಿಂದ ಬದಿಯ ಕೈಗಾರಿಕೆಯ ವಸ್ತುಗಳನ್ನು ಮಾರುವ ಅಂಗಡಿಗೆ ಹೋಗಬೇಕು ಎನ್ನುವಷ್ಟರಲ್ಲಿ, ಆಗಿನಿಂದಲೂ ಇವನ ಬರವಿನ ಹಾದಿಯನ್ನೇ ಕಾಯುತ್ತಿದ್ದ. ಕಪ್ಪು ಕನ್ನಡಕವನ್ನು ಧರಿಸಿದ ವ್ಯಕ್ತಿ ಇವನನ್ನು ನೇರವಾಗಿ ಸಂಧಿಸಿ, “ ಉooಜ eveಟಿiಟಿg, ಒಡಿ. ಓಚಿgಟಿಚಿಣh, ನಿಮ್ಮ ಹತ್ತಿರ ಗುಟ್ಟಿನಲ್ಲಿ ಒಂದು ವಿಷಯ ಮಾತನಾಡುವದಿತ್ತು.” ಎಂದ. ಇವನ ಪರಿಚಯ ಸಿಕ್ಕಿರದ ನಾಗಪ್ಪ ಈ ಅಚಾನಕ ಮುಖಾಮುಖಿಯಿಂದ ಗಲಿಬಿಲಿಗೊಂಡು, “ನೀವು ಯಾರೆನ್ನುವುದು ತಿಳಿಯಲಿಲ್ಲ ? ಎಂದಾಗ “ಇಲ್ಲಿ ಬೇಡ. ಅದಾಗಲೇ ಜನ ಸೇರುತ್ತಿದ್ದಾರೆ. ‘ಚೆಕ್ ಇನ್’ ಮಾಡಿದ ಕೂಡಲೇ ಮೇಲಿನ ರೆಸ್ಟೋರೆಂಟಿಗೆ ಬನ್ನಿ. ಮೂಲೆಯಲ್ಲಿಯ ಟೇಬಲ್ ಕಡೆನಿಮ್ಮ ದಾರಿ ಕಾಯುತ್ತೇನೆ.” ಎಂದು ಹೇಳಿದವನೇ ಅವನು ಬಂದೇ ಬರುತ್ತಾನೆ ಎಂಬಂಥ ಪ್ರಚಂಡ ಆತ್ಮವಿಶ್ವಾಸ ಪ್ರಕಟಿಸುತ್ತ ರೆಸ್ಟೋರೆಂಟಿನತ್ತ ನಡೆಯಹತ್ತಿದ : ಸ್ವಚ್ಛವಾಗಿ ತೊಳೆದು ಖಡಕ್ ಇಸ್ತ್ರಿ ಮಾಡಿದ ಬೆಳ್ಳಗಿನ ಪೈಜಾಮಾ ; ಕಪ್ಪು ಕೂದಲಿನಿಂದ ಅಚ್ಚಾದಿತವಾದ ಎದೆಯ ಬಹುಭಾಗವನ್ನು ಪ್ರದರ್ಶಿಸುವಂತೆ ತೊಟ್ಟ ಖಾಸಾ ಹೈದರಾಬಾದೀ ಶೈಲಿಯ ಸ್ವಚ್ಚ ಬಿಳಿಯ ಕುರ್ತಾ ; ಗಂಡುದರ್ಪವನ್ನು ಸೂಸುವ ಅಚ್ಚ ಕಪ್ಪು ಬಣ್ಣದ ಮೋರೆಯಲ್ಲಿ ಆ ದರ್ಪಕ್ಕೆ ಕಳೆ ತಂದಂತಹ ದಪ್ಪ ಮೀಸೆಯ ಸಾಲು. ಈಗಿನ ಫ್ಯಾಶನ್ನಿಗೆ ತಕ್ಕಂತೆ ಉದ್ದವಾಗಿ ಬಿಟ್ಟ ದಟ್ಟ ಕೂದಲ ರಾಶಿ. ಇಡುವ ಪ್ರತಿ ಹೆಜ್ಜೆಯಲ್ಲಿ ವ್ಯಕ್ತವಾಗುತ್ತಿದ್ದ ಈ ಅಪರಿಚಿತನ ದರ್ಪ ‘ಬಾ; ಎಂದು ಇತ್ತ ಆಹ್ವಾನವನ್ನು ಸ್ವೀಕರಿಸಬೇಕೇ ಎನ್ನುವ ಸಂದಿಗ್ಧಕ್ಕೊಳಗಾಗಿರುವಾಗಲೇ ಮುಂಬಯಿಯ ಕೌಂಟರ್ ತೆರೆದಿತ್ತು. ಕ್ಯೂದಲ್ಲಿ ಅವನದೇ ಮೊದಲ ಸ್ಥಾನ. ‘ಚೆಕ್ ಇನ್’ ಮಾಡುವಾಗ ಏಳು ಗಂಟೆ. ‘ಸೆಕ್ಯುರಿಟೀ ಚೆಕ್’ ಆಗಲು ಇನ್ನೂ ಅರ್ಧ ಗಂಟೆಯಾದರೂ ಇದೆ. ಈ ಹೊಸ ಆಗಂತಕನು ತನ್ನ ಹತ್ತಿರ ಮಾತನಾಡಲು ಬಂದದ್ದು ಫ್ಯಾಕ್ಟರಿಗೆ ಸಂಬಂಧಪಟ್ಟ ವಿಷಯ ಎಂಬುದರ ಬಗ್ಗೆ ನಾಗಪ್ಪನಿಗೆ ಅನುಮಾನವಿರಲಿಲ್ಲ ; ಇಷ್ಟೊಂದು ಯಾಕೆ ಹೆದರಬೇಕು_ಹೇಗೂ ಈ ಕಂಪನಿಯೊಡನೆಯ ಸಂಬಂಧದ ವಿಷಯದಲ್ಲಿ ಒಂದು ನಿಲುಗಡೆಗೆ ಬಂದು ಮುಟ್ಟಿದ ಮೇಲೆ !

ನಾಗಪ್ಪ ರೆಸ್ಟೋರೆಂಟಿಗೆ ಹೋಗಿ ಅಪರಿಚಿತನು ಸೂಚಿಸಿದ ಮೂಲೆಯ ಕಡೆಗೆ ಹುಡುಕುವ ದೃಷ್ಟಿ ಚೆಲ್ಲಿದಾಗ ಕಣ್ಣಿಗೆ ಬಿದ್ದ : ಇವನನ್ನು ಕಂಡಕೂಡಲೇ ಅವನೂ ಎದ್ದು ನಿಂತು ತಾನು ಎಲ್ಲಿದ್ದೇನೆ ಎನ್ನುವುದನ್ನು ತೋರಿಸಿಕೊಟ್ಟ. ರೆಸ್ಟೋರೆಂಟಿನಲ್ಲಿ ಕೂತಾಗಲೂ ಕಪ್ಪು ಕನ್ನಡಕವನ್ನು ತೆಗೆಯದೇ ಇದ್ದುದಕ್ಕೆ ತನ್ನ ಮುಖ ಪರಿಚಯ ಸಿಗದಿರಲಿ ಎಂಬ ಇಚ್ಛೆಯೇ ಕಾರಣವಾಗಿರಬೇಕು. ಆದರೆ, ಅವನು ತನ್ನ ಹೆಸರನ್ನು ಹೇಳುವುದಕ್ಕೂ ಹಿಂಜರಿದರೆ ಅವನೊಡನೆ ಮಾತನಾಡಲು ಒಪ್ಪಕೂಡದು ಎಂದು ನಿಶ್ಚಯಿಸಿದ., ನಾಗಪ್ಪ. ಅವನು ಟೇಬಲ್ ಸಮೀಪಿಸಿದ್ದೇ ಅವನಿಗಾಗಿ ಕುರ್ಚಿಯೊಂದನ್ನು ಸರಿಪಡಿಸಿದ.ಅಪರಿಚಿತನು ಕೂಡ್ರುವಂತೆ ನಮ್ರತೆಯಿಂದ ಕೇಳಿಕೊಂಡ : “ಕುಡಿಯಲಿಕ್ಕೇನಾದರೂ ?” ಇವನು ಬೇಡವೆಂದಾಗ, “ಹೌದು, ಸಮಯವೂ ಹೆಚ್ಚಿಲ್ಲ. ಸರ್. ನನಗೆ ತಿಳಿಯುತ್ತದೆ. ನನ್ನ ಪರಿಚಯ ಮಾಡಿಕೊಡದೇನೇ ಮಾತನಾಡುವದು ನಮ್ರತೆಯ ಲಕ್ಷಣವಲ್ಲ ಎನ್ನುವದು. ಆದರೆ, ಹಾಗೆ ಮಾಡಲು ನಾನೇಕೆ ನಿರುಪಾಯನಾಗಿದ್ದೇನೆ ಎನ್ನುವುದು ನಿಮಗೇ ಕೊನೆಗೆ ಗೊತ್ತಾದೀತು. ಸದ್ಯ. ನಾನು ನಿಮ್ಮ ಬಗ್ಗೆ ಬಹಳ ಆದರವಿದ್ದ, ಅಭಿಮಾನವಿದ್ದ ಫ್ಯಾಕ್ಟರಿಯ ಒಬ್ಬ ಕೆಲಸಗಾರನೆಂದಿಷ್ಟೇ ತಿಳಿದುಕೊಳ್ಳಿ,”. ಎಂದ. ಉರ್ದೂ ಪ್ರಭಾವ ದಟ್ಟವಾದ ಅವನ ಹೈದರಾಬಾದೀ ಹಿಂದಿ ಅವನ ಗಂಡುದನಿಯಲ್ಲಿ ಮೂಡಿದಾಗ ನಾಗಪ್ಪನಿಗೆ ಮೈಮೇಲೆ ಮುಳ್ಳು ನಿಲ್ಲುತ್ತಿದ್ದ ಅನುಭವ. ಅವನ ಹೆಸರನ್ನು ಕೇಳದೇನೇ ಅವನು ಹೇಳಲು ಬಂದದನ್ನು ಕೇಳಲು ಆತುರಪಟ್ಟ : “ಸ್ಟೋರ್ಸ್‌ನಲ್ಲಿ ಕಲಸ ಮಾಡುತ್ತಿದ್ದೇನೆ. ಅಲ್ಲಿ ಕೆಲವು ತಿಂಗಳಿಂದ ನಡೆಯುತ್ತಿದ್ದ ವಿಧ್ಯಮಾನಗಳಿಗೆ ದಂಗುಬಡುದುಹೋಗಿದ್ದೇನೆ, ಸರ್… ಅವು ನಡೆಯುತ್ತಿದ್ದ ರೀತಿ ನೋಡಿದರೆ ಈ ಸಂಗತಿಗಳು ಇತ್ತೀಚಿನವು ಎಂದು ಅನ್ನಿಸುವದಿಲ್ಲ. ನಾನೋ ಸ್ಟೋರ್ಸಿಗೆ ಹೊಸಬ. ಈ ಮೊದಲು ಪ್ಯಾಕಿಂಗ್ ಡಿಪಾರ್ಟ್‌ಮೆಂಟಿನಲ್ಲಿದ್ದೆ. ಈಗ ಹತ್ತು ತಿಂಗಳಿಂದಷ್ಟೇ ಸ್ಟೋರ್ಸಿನಲ್ಲಿ ಒಬ್ಬ ಕ್ಲಾರ್ಕನಾಗಿ ಕೆಲಸ ಮಾಡತ್ತಾ ಇದ್ದೇನೆ ಸರ್…. ಬರೇ ಬಾಯ ಹೊಗಳಿಕೆಗಾಗಿ ಹೇಳುವದಿಲ್ಲ : ನಿಮ್ಮ ಬಗ್ಗೆ ಇಡೀ ಕಾರಖಾನೆಯಲ್ಲಿ ಬಹಳ ಒಲ್ಲೇ ಅಭಿಪ್ರಾಯ ಇದೆ ಸರ್…ಇಲ್ಲಿ ಕೆಲವು ತಿಂಗಳಿಂದ ನಡೆಯುತ್ತಿದ್ದ ಅಂಧಾದುಂದಿಗೆ ಎಲ್ಲರೂ ರೋಸಿಹೋಗಿದ್ದಾರೆ. ಸರ್… ಆದರೆ ಡೀ ಎಮ್ ಡೀ ಹಾಗೂ ಅವರ ಬಲಗೈ ಚೇಲಾ ರಾಮಕೃಷ್ಣರ ಕ್ರೂರಸತ್ತೆಗೆ ಎಲ್ಲರೂ ಥತ್ ಹೆದರುತ್ತಾರೆ. ಹಾಗೆಂದೇ ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ಲದವರ ಹಾಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಆದರೆ ಪರಿಸ್ಥಿತಿ ಎಷ್ಟೊಂದು ವಿಕೋಪಕ್ಕೆ ಹೋಗಿದೆಯೆಂದರೆ ಗೇಟಮನ್ನನನ್ನು ಹಿಡಿದು ಫ್ಯಾಕ್ಟರಿ ಮ್ಯಾನೇಜರನವರೆಗೆ ಎಲ್ಲರೂ_ಇಲ್ಲಿಯ ಪ್ರಕರಣಗಳಿಗೆ ಕಾರಣರಾದ ದೊಡ್ಡ ದೊಡ್ಡ ಕುಳಗಳೇ ಇದೆಲ್ಲದರಿಂದ ಜಾರಿಕೊಂಡು ತಾವು ಮಾತ್ರ ಎಲ್ಲಿ ಸಿಕ್ಕಿಬೀಳುತ್ತೇವೋ ಎಂದು ಭಯಭೀತರಾಗಿದ್ದಾರೆ. ಕೊನೆಗೆ ನಾವೇ ಹತ್ತು ಮಂದಿ ಒಂದೆಡೆ ಕೂಡಿ ವಿಚಾರ ಮಾಡಿ ಒಂದು ಟ್ಯಾಪ್ ಮಾಡಿ ಸಹಿ ಮಾಡಿರದ ಪತ್ರವನ್ನು ಎಮ್ ಡೀ ಅವರಿಗೆ ಕಳಿಸಿದೆವು. ಆ ಮಾತಿಗೆ ಈಗ ಮೂರು ತಿಂಗಳ ಮೇಲೇ ಆಯಿತು. ನಮ್ಮ ಲಕ್ಷ್ಯಕ್ಕೆ ಬಂದ ಸಂಗತಿಗಳ ವಿವರಗಳನ್ನು ಕೊಟ್ಟು, ಕೂಡಲೇ ಬಂದು ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದೆವು. ಇಷ್ಟೇ ಅಲ್ಲ. ನಿಮ್ಮನ್ನು ಮತ್ತೆ ಮೊದಲಿನ ಜಾಗಕ್ಕೇ ನಿಯಮಿಸಬೇಕೆಂದೂ ಸೂಚಿಸಿದ್ದೆವು. ನೀವು ಬರೇ ಆರ್ ಎಂಡ್ ಡೀ ಮ್ಯಾನೇಜರರಾಗಿರುವಾಗಲೂ ನಿಮ್ಮ ವರ್ಚಸ್ಸು ನಮಗೇ ಗೊತ್ತಾಗದಂತೆ ನಮ್ಮೆಲ್ಲರ ಮೇಲಿತ್ತೆಂದು ತೋರುತ್ತದೆ, ಸರ್….” ಎನ್ನುವಾಗ ಸೆಕ್ಯುರಿಟೀ ಚೆಕ್ ಸಲುವಾಗಿ ಮುಂಬಯಿಗೆ ಹೋಗುವ ಪ್ರಯಾಣಿಕರಿಗೆ ಮ್ಯಾಕ್ ಮೇಲೆ ಮೊದಲನೇ ಕರೆ ಬಂದಿತ್ತು. ತದೇಕಚಿತ್ತದಿಂದ, ಕೆಲವೊಮ್ಮೆ ಶ್ವಾಸವನ್ನು ತಡೆಹಿಡಿದು ಕೂಡ, ಕೇಳುತ್ತಿದ್ದ ನಾಗಪ್ಪ ಕುರ್ಚಿಯಲ್ಲಿ ಅರೆನಿಮಿಷ ದಡಬಡಿಸಿದ. “ಹೆಚ್ಚು ಹೊತ್ತು ನಿಮ್ಮನ್ನು ತಡೆಯುವುದಿಲ್ಲ, ಸರ್…. ಎಮ್ ಡೀ ಅವರು ನಾವು ಕಳಿಸಿದ ಪತ್ರವನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲಂತೆ….ಯಾಕೆಂದರೆ ತನಿಖೆ ನಡೆಸುವದಿರಲಿ, ಅವರು ಆಮೇಲೆ ಹೈದರಾಬಾದಿಗೆ ಬರಲಿಲ್ಲ. ಅಥವಾ….ಅವರಿಗೆ ನಮ್ಮ ಪತ್ರವೇ ಮುಟ್ಟಿರಲಿಕ್ಕಿಲ್ಲ. ನಮಗಾದ ನಿರಾಶೆ ಅಷ್ಟಿಷ್ಟಲ್ಲ. ಇಲ್ಲೆಲ್ಲ ಹಬ್ಬಿದ ಸುದ್ದಿಯೆಂದರೆ ಬೋರ್ಡ್ ಮೇಲಿನ ಡೈರೆಕ್ಟರರಲ್ಲೆಲ್ಲ ಡಿ ಎಮ್ ಡಿಯವರ ವರ್ಚಸ್ಸೇ ಒಆ ಯವರ ವರ್ಚಸ್ಸಿಗಿಂತ ದೊಡ್ಡದಾದದ್ದು. ಅವರಲ್ಲಿ ಹೆಚ್ಚಿನ ಮಂದಿ ಹೈದರಾಬಾದ್ ಇಲ್ಲವೇ ದಕ್ಷಿಣಪ್ರಾಂತದವರಾಗಿದ್ದರಿಂದ ಆಒಆ ಯವರಿಗೆ ಅವರೊಡನೆ ನಿಕಟವಾದ ಸಂಬಂಧ ಇಟ್ಟುಕೊಳ್ಳುವುದು ಸುಲಭವಾಯಿತು. ಪಾರ್ಟೀ ಕೊಡುವುದರಲ್ಲಿ ಒಳ್ಳೇ ಪಳಗಿದ ಕೈಯಾದ ಅವರು ಎಲ್ಲರನ್ನೂ, ಸರಬರಾಯಿ ಮಾಡಿ, ಖುಶಿಯಲ್ಲಿಟ್ಟಿದ್ದಾರೆ. ಇವರ ಬಲಾಢ್ಯ ಮಹತ್ವಾಕಾಂಕ್ಷೆಯ ಮುಂದೆ ಒಆ ಯವರು ಏನೂ ಮಾಡದವರಾಗಿದ್ದಾರೆಂಬ ಗಾಳಿಸುದ್ದಿ ಇಲ್ಲೆಲ್ಲ. ಇಷ್ಟೇ ಅಲ್ಲ, ಈ ಮೊದಲಿನ ಬೋರ್ಡ್ ಮೀಟಿಂಗಿನಲ್ಲಿ ಆಒಆ ಯವರು ಫ್ಯಾಕ್ಟರಿಯ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳುತ್ತೇವೆಂದೂ ಒಆ ಯವರು ಬರೇ ಉಳಿದೆಲ್ಲ ವ್ಯವಹಾರಗಳನ್ನು_ಬಹುಮುಖ್ಯವಾಗಿ ಮಾರ್ಕೆಟಿಂಗ್_ನೋಡಿಕೊಳ್ಳಬೇಕೆಂದೂ ಸೂಚನೆ ಮಾಡಿದರಂತೆ. ಒಆ ಯವರು ಈ ಉದ್ಧಟತನದ ಸೂಚನೆಯಿಂದ ಕೆಣಕಲ್ಪಟ್ಟು ಸಿಟ್ಟಿನಿಂದ ಮೇಜು ಗುದ್ದಿದರೇ ಹೊರತು…ಅವರ ಬಾಯಿಂದ ಮಾತೇ ಹೊರಡದಾಯಿತಂತೆ. ಹೌದೇ ಸರ್ ಇದೆಲ್ಲ ?…ಇವರು ತಮ್ಮ ಮನಸ್ಸಿನ ತೋಲವನ್ನು ಬಿಟ್ಟುಕೊಟ್ಟು ಮೇಜು ಗುದ್ದಿದ್ದೇ ದೊಡ್ಡ ಅಪರಾಧವಾಗಿ ತೋರಿತಂತೆ, ಬೋರ್ಡ್ ಸದಸ್ಯರಿಗೆ, ಆಒಆ ಯವರು ಮಾತ್ರ ಬಹಳ ಶಾಂತಚಿತ್ತರಾಗಿ ಕಾರಣ ಸಮೇತ ಮಂಡಿಸಿದ ವಿಚಾರಗಳು ಎಲ್ಲರ ಮೇಲೆ ತುಂಬ ಪರಿಣಾಮ ಮಾಡಿದುವು ಅಷ್ಟೇ ಅಲ್ಲ, ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಪ್ರಶಂಸಿಸುತ್ತ_ ಆಒಆ ಕಳೆದ ೨೦ ವರ್ಷಗಳಲ್ಲಿ ಕಾರಖಾನೆಯನ್ನು ಇಂದಿನ ಊರ್ಜಿತ ಸ್ಥಿತಿಗೆ ತರುವಲ್ಲಿ ತೋರಿಸಿದ ಕುಶಲತೆ, ಪರಿಶ್ರಮ ನಿರ್ವಿವಾದ; ಅದರ ಪ್ರಚಂಡವಾದ ಅನುಭವ ಹಾಗೂ ಕಂಪನಿಯ ಉತ್ಪಾದನೆಯ ಟೆಕ್ನಾಲೊಜಿಯ ಬಗ್ಗೆ ಅವರಿಗೆ ಇರುವ ಅಗಾಧವಾದ ಜ್ಞಾನ ಇವುಗಳ ಸಂಪೂರ್ಣ ಲಾಭ ಕಂಪನಿಗೆ ಸಿಗಬೇಕಾದರೆ ಅವರು ಬೇಡುವ ಈ ಸಣ್ಣ ಸವಲತ್ತನ್ನು ಅನೌಪಚಾರಿಕವಾಗಿಯಾದರೂ ಬೋರ್ಡು ಇವರಿಗೆ ಕೊಡಬೇಕು ಎಂದು ಶಿಫಾರಸ್ಸೂ ಮಾಡಿದರಂತೆ. ಒಆ ಯವರು ಮತ್ತೆ ಕ್ಷೋಭೆಗೊಂಡು , ‘ ಖಿhis ತಿoಟಿ’ಣ ತಿoಡಿಞ’ ಎಂಬ ಮೂರೇ ಮೂರು ಶಬ್ದಗಳನ್ನು ಉಚ್ಛರಿಸುವದು ಕಷ್ಟವಾಯಿತಂತೆ. ಒಂದನ್ನು ನಾವು ಒಪ್ಪಿಕೊಳ್ಳಲೇಬೇಕು ಸರ್….ಚಂದವಾಗಿ ಸಮಯಕ್ಕೆ ತಕ್ಕಂತೆ ಮಾತನಾಡಿ ಮರುಳುಗೊಳಿಸುವ ಕಲೆಯಲ್ಲಿ ನಮ್ಮ ಆಒಆ ಯವರನ್ನು ಹಿಂದೆ ಹಾಕುವ ಯಾರೂ ಇನ್ನೂ ಹುಟ್ಟೇ ಇರಲಿಕ್ಕಿಲ್ಲ_ಅಲ್ಲವೇ ಸರ್….?” ಮ್ಯಾಕ್ ಮೇಲೆ ತಿರುಗೊಮ್ಮೆ ಸೆಕ್ಯುರಿಟೀ ಚೆಕ್ ಸಲುವಾಗಿ ಕರೆ ಬಂದಿತು. ಕೈ ಗಡಿಯಾರ ನೋಡಿಕೊಂಡಾಗ ೭-೨೪. “ಚಿಂತೆ ಮಾಡಬೇಡಿ. ಸರ್….ಇನ್ನೂ ಹತ್ತು ಮಿನಿಟು ಆರಾಮವಾಗಿ ಕೂಡ್ರಬಹುದು…. ಒಆ ಯವರಿಂದ ಯಾವ ಪ್ರತಿಕ್ರಿಯೆಯೂ ಆಗಲಾರದೆಂದು ಮನಗಂಡ ನಾವು ಕೆಲವು ದಿನಗಳ ಹಿಂದೆ ಒಆ ಯವರಿಗೆ ಕಳಿಸಿದ ಪತ್ರದ ಪ್ರತಿಗಳನ್ನು ಮಾಡಿ ಎಲ್ಲ ಡೈರೆಕ್ಟರರಿಗೂ ಕಳಿಸಿದ್ದೇವೆ_ಅಮೆರಿಕೆಗೂ ಕೂಡ. ಇದರ ಪರಿಣಾಮ ತತ್‌ಕ್ಷಣವಾದಂತೆ ತೋರುತ್ತದೆ : ನಿನ್ನೆಯೇ ಆಒಆ ಯವರು ರಾಮಕೃಷ್ಣನೊಂದಿಗೆ ಮುಂಬಯಿಗೆ ಹೋಗಿದ್ದಾರೆ. ನೀವು ಇಲ್ಲಿ ಬಂದಿದ್ದೀರಿ. ಈ ಫ್ಲೈಟಿನಿಂದ ಮುಂಬಯಿಗೆ ಹೊರಟಿದ್ದೀರಿ ಎನ್ನುವುದು ಗೊತ್ತಾದೊಡನೆ ಓಡಿಬಂದೆ, ಸರ್….ಇದು ನೋಡಿ, ಆ ಪತ್ರದ ಒಂದು ಪ್ರತಿಯನ್ನು ತಂದಿದ್ದೇನೆ.” ಎನ್ನುತ್ತ ಆಗಿನಿಂದಲೂ ಕೆಸೆಯಲ್ಲೇ ಇಟ್ಟುಕೊಂಡ ನೀಲಿ ಬಣ್ಣದ ಲಕ್ಕೋಟೆಯನ್ನು ಹೊರತೆಗೆದು ಜಾಗ್ರತೆಯಿಂದ ನಾಗಪ್ಪನ ಕೈಗೆ ಕೊಟ್ಟ. ನಾಗಪ್ಪ ಕೂಡಲೇ ಅದನ್ನು ತನ್ನ ಬ್ರೀಫ್‌ಕೇಸಿಗೆ ಸೇರಿಸಿದ. “ನಿಮ್ಮ ಮನೆಯ ವಿಳಾಸ ಗೊತ್ತಿದ್ದರೆ ಪೋಸ್ಟಿನಿಂದಲೇ ಕಳಿಸುವವರಿದ್ದೆವು. ಆಫೀಸಿನ ಪತ್ತೆಗೆ ಕಳಿಸಿದರೆ….ಅಲ್ಲಿಯೂ ಇದ್ದಾನಲ್ಲ ಬಾವಾಜೀ….ಇಡೀ ಕಾರಖಾನೆಯ ಕೆಲಸಗಾರರೆಲ್ಲ ನಿಮ್ಮ ಕಡೆ ನೋಡುತ್ತಿದ್ದಾರೆ, ಸರ್….ಗರಜು ಬಿದ್ದರೆ ಸ್ಟ್ರೈಕ್ ಮಾಡಲೂ ನಾವು ಸಿದ್ಧರಿದ್ದೇವೆ. ಬರೀ ಕಾರ್ಮಿಕರಷ್ಟೇ ಅಲ್ಲ ; ಮ್ಯಾನೇಜರರವರೆಗೆ, ಎಲ್ಲರೂ, ” ಸೆಕ್ಯುರಿಟೀಯ ಕೊನೆಯ ಕರೆ ಮ್ಯಾಕ್ ಮೇಲೆ ಕೇಳಿಸಿದ್ದೇ, “ಕಾಳಜಿ ಮಾಡಬೇಡಿ. ನನ್ನ ಕೈಯಿಂದ ಸಾಧ್ಯವಾದದ್ದನ್ನು ಮಾಡುತ್ತೇನೆ. ನೀವು, ನಿಮ್ಮ ಗೆಳೆಯರು ನನ್ನ ಬಗ್ಗೆ ವ್ಯಕ್ತಪಡಿಸಿದ ವಿಶ್ವಾಸಕ್ಕಾಗಿ ತುಂಬ ಅಭಾರಿಯಾಗಿದ್ದೇನೆ….” ಅಪರಿಚಿತನ ಕೈಕುಲುಕುತ್ತ ಅವನಿಂದ ಬೀಳ್ಕೊಂಡು ಸೆಕ್ಯುರಿಟೀ ಗೇಟಿನತ್ತ ನಡೆಯಹತ್ತಿದ, ನಾಗಪ್ಪ.
uಟಿಜeಜಿiಟಿeಜ
– ಅಧ್ಯಾಯ ಇಪ್ಪತ್ನಾಲ್ಕು –

ವಿಮಾನವನ್ನು ಸಮೀಪಿಸುವಾಗ, ನಿನ್ನೆ ಡಾಯನಾ ಮಾಡಿದ ತನ್ನ ಒಂದು ವೈಶಿಷ್ಟ್ಯದ ವರ್ಣನೆ ನೆನಪಿಗೆ ಬಂದು ಬಲಗೈಯಲ್ಲಿಯ ಬ್ರೀಫ್‌ಕೇಸನ್ನು ಎಡಗೈಗೆ ರವಾನಿಸಿದ. ಹಾಗೆ ಮಾಡುವಾಗ ತನ್ನಷ್ಟಕ್ಕೆ ಮುಗುಳುನಕ್ಕ. ವಿಮಾನವನ್ನು ಪ್ರವೇಶಿಸುವ ನಿಚ್ಚಣಿಕೆ ಹತ್ತಿರವಾದಾಗ ಬಾಗಿಲಲ್ಲಿ ಸ್ವಾಗತಕ್ಕೆ ನಿಂತವಳು ಡಾಯನಾ ಇರಬಹುದೇ ಎಂದು ಆಸೆಯಿಂದ ಕಣ್ಣೆತ್ತಿ ನೋಡಿದ. ಇಲ್ಲ. ನಿಂತವಳು ಹೊಸಬಳಾಗಿದ್ದಳು. ಅವಳನ್ನು ನಮಸ್ಕರಿಸಿ ಒಳಗೆ ಕಾಲಿರಿಸುವಾಗ, “Is ಆiಚಿಟಿಚಿ ಆಡಿiviಡಿ oಟಿ ಜuಣಥಿ ಣoಜಚಿಥಿ ?” ಎಂದು ಮೆಲ್ಲಗೆ ಕೇಳಿದ. “ಓo, Siಡಿ,” ಎಂದು ಚಿಕ್ಕದಾಗಿ ಉತ್ತರ ಕೊಟ್ಟ ಹುಡುಗಿ ನಗಲಿಲ್ಲ. ಂiಡಿ hosಣiಟe ಎಂದು ತೋರುತ್ತದೆ ಎಂದುಕೊಂಡು ತನ್ನಷ್ಟಕ್ಕೇ ನಗುತ್ತ ತನ್ನ ಸೀಟಿನ ಕಡೆ ನಡೆಯುತ್ತಿರುವಾಗ ಇನ್ನೊಬ್ಬ ಪರಿಚಾರಿಕೆ ಒಚಿಥಿ I heಟಠಿ ಥಿou Siಡಿ, ಎನ್ನುತ್ತ ಇವನ ಬೋರ್ಡಿಂಗ್ ಕಾರ್ಡನ್ನು ತೆಗೆದುಕೊಂಡು ಖಿhis is ೧೩-ಛಿ, Siಡಿ, ಎಂದು ಸೀಟು ತೋರಿಸಿದಳು. ಆ ಇಡೀ ಸಾಲು ಖಾಲಿ ಇತ್ತೋ ಅಥವಾ ಇನ್ನೂ ಯಾರೂ ಬಂದಿರಲಿಲ್ಲವೋ : ಹದಿಮೂರು ತನ್ನ ಪಾಲಿಗಂತೂ ಶುಭವಾಗಿರಲಿಲ್ಲ_ಅಪ್ಪ ಸತ್ತದ್ದು ವಯಸ್ಸಿನ ಹದಿಮೂರನೇ ವರ್ಷಕ್ಕೆ ! ಸೀಟಿನಲ್ಲಿ ಕೂಡ್ರುವಾಗಲೇ ಮನಸ್ಸನ್ನು ಭೂತಕಾಲದತ್ತ ಜಗ್ಗಲು ಹವಣಿಸುತ್ತಿದ್ದ ನೆನಪನ್ನು ಪ್ರಯತ್ನ ಪೂರ್ವಕವಾಗಿ ಹತ್ತಿಕ್ಕಿ ಮಗ್ಗಲಿನ ಸೀಟು ಖಾಲಿಯೇ ಉಳಿದರೆ ಸೀಟು ತೋರಿಸಿದ ಪರಿಚಾರಿಕೆಯ ಹತ್ತಿರ ಹರಟೆಹೊಡೆಯುವದಾದರೂ ಸಾಧ್ಯವಾದೀತು ಎಂದುಕೊಂಡ. ಅವಳು ಬಾಗಿಲಲ್ಲಿ ಸ್ವಾಗತಕ್ಕೆ ನಿಂತವಳಷ್ಟು ಗಂಭೀರಳಲ್ಲ. ನಗಿಸಿದರೆ ನಗಬಹುದೇನೋ ! ಸೀಟ್‌ಬೆಲ್ಟ್ ಧರಿಸುವಾಗ ಹಿಂದಕ್ಕೆ ಮುಂದಕ್ಕೆ ದೃಷ್ಟಿ ಹಾಯಿಸಿ ನೋಡಿದ : ಪ್ಲೇನಿನಲ್ಲಿಯ ಅನೇಕ ಸೀಟುಗಳು ಖಾಲಿಯಿದ್ದವು. ಪರಿಚಾರಿಕೆಯ ಹತ್ತಿರ ಹರಟುವ ಉತ್ಕಂಠೆಯಲ್ಲಿ ಇನ್ನೇನನ್ನೋ ಮರೆಯುವ ಪ್ರಯತ್ನ ಅಡಗಿದೆಯೇ ಎಂಬ ಅನುಮಾನ ಅರಿವಿಗೆ ಬರುತ್ತಿರುವಾಗ ಬೇಚೈನುಗೊಂಡ….

ನಾಗಪ್ಪನ ಅಸ್ವಸ್ಥತೆಗೆ ಕಾರಣವಾದದ್ದು ಬ್ರೀಫ್‌ಕೇಸಿನಲ್ಲಿಟ್ಟ_ಆಗ ಏರ‍್ಪೋರ್ಟಿನಲ್ಲಿ ಅಚಾನಕವಾಗಿ ಭೆಟ್ಟಿಯಾಗಿ, ಗುಟ್ಟಿನಲ್ಲಿ ಮಾತನಾಡಿಸಿಕೊಟ್ಟ_ಪತ್ರ : ಲಕ್ಕೋಟೆಯಲ್ಲಿ ಭದ್ರವಾಗಿ ಮುಚ್ಚಿಕೊಂಡಿತ್ತು. ತೆರೆದು ಓದಲೇ ? ಕಳೆದ ಏಳು ದಿನಗಳ ಯಾತನೆಗೆ ಕಾರಣವಾದ ಹೊಯ್ದಾಟದ ನಂತರ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದ ಮನಸ್ಸನ್ನು ಮತ್ತೆ ವಿಚಲಗೊಳಿಸುವ ಧೈರ್ಯ ನಾಗಪ್ಪನಿಗಿರಲಿಲ್ಲ. ಮುಟ್ಟಿದ ನಿಶ್ಚಯವನ್ನು ಬದಲಿಸುವಾಗಿನ, ಹೊಸ ನಿಶ್ಚಯಕ್ಕೆ ಬರುವಾಗಿನ ಆತಂಕದ ನೋವಿನಂತಹ ನೋವು ಇನ್ನೊಂದಿಲ್ಲ ಎಂದು ಅನುಭವದಿಂದ ಬಲ್ಲ ನಾಗಪ್ಪನಿಗೆ ಈವರೆಗೂ ತನ್ನ ದೃಷ್ಟಿಗೆ ಬಿದ್ದಿರದ ಹೊಸ ಕ್ಷೇತ್ರದಲ್ಲಿ ಕಾಲಿಡುವ ಮನಸ್ಸಾಗಲಿಲ್ಲ. ಒಬ್ಬನು ಇನ್ನೊಬ್ಬನನ್ನು ಉಪಯೋಗಿಸಿಕೊಳ್ಳುವುದರಿಂದ ಸುಳ್ಳಾದ ಸಂಬಂಧಗಳನ್ನೆಲ್ಲ ಒಂದೊಂದಾಗಿ ತೊಡೆದು, ಉಳಿದ ಆಯುಷ್ಯವನ್ನಾದರೂ_ಅಪ್ಪಟವಾದ, ನಿಜವಾದ ಸಂಬಂಧಗಳನ್ನು (ಹಾಗೆಂದರೇನು ಎನ್ನುವದೇ ಇನ್ನೂ ಸ್ಪಷ್ಟವಾಗಿರದಿದ್ದರೂ ಕೂಡ) ಹುಟ್ಟಿಸಿಕೊಳ್ಳುವುದರಲ್ಲಿ ಕಳೆಯುವುದಿತ್ತು. ಅವನಿಗೆ, ಸಾಹಿತ್ಯ ಇಂತಹ ಒಂದು ಗುರಿಗೆ ನೆರವು ನೀಡಬಹುದಾಗಿತ್ತಾದರೂ ತನ್ನ ಅಳವಿನ ಆಚೆಯ ಒಂದು ಕಾರಣದಿಂದ ತಾನಿಂದು ಅದಕ್ಕೆ ವಂಚಿತನಾಗುತ್ತಿದ್ದೇನೆಯೇ ? ಎಂಬ ಭಯದಿಂದ ಮ್ಲಾನಗೊಳ್ಳುತ್ತಿದ್ದ ಮನಸ್ಸು ಮೇರಿ ನೆನಪಿಗೆ ಬರತೊಡಗಿದ್ದೇ ಮತ್ತೆ ಗೆಲುವಾಯಿತು : ತನ್ನ ಮನಸ್ಸಿನಲ್ಲಿದ್ದೂ ಮಾತಿನ ತೆಕ್ಕೆಗೆ ಒಳಪಡಲು ಒಪ್ಪದ ಸಂಬಂಧ ಇಲ್ಲಿ ಹುಟ್ಟಬಹುದೇನೋ_ಈ ಹೊಸ ಸಾಧ್ಯತೆಯ ಕಲ್ಪನೆಯಿಂದಲೇ ಒಳಗೆ ಹುಟ್ಟಿದ ಸುಖ, ಮೋರೆಯನ್ನು ಬೆಳಗಿದ ಮಂದಸ್ಮಿತವಾಗಿ sತಿeeಣs ಕೊಡಲು ಬಂದ ಪರಿಚಾರಿಕೆಯ ಮೋರೆಯ ಮೇಲೂ ಪ್ರತಿಫಲಿಸಿತು. ಟೋಪಿಯೊಂದನ್ನು ಕೈಗೆ ತೆಗೆದುಕೊಳ್ಳುತ್ತ, ಪರಿಚಾರಿಕೆಯ ಕಣ್ಣುಗಳಲ್ಲಿ ಕಣ್ಣು ನೆಟ್ಟು_ಥೆಂಕ್ಸ್, ಎಂದಾಗ ಅವಳೂ ತುಂಬ ಖುಶಿಯಲ್ಲಿ_ಙou ಚಿಡಿe ತಿeಟಛಿome ಎಂದಳು. I ಞಟಿoತಿ iಣ ಎಂದು ಒಂದು ಬಗೆಯ ತುಂಟತನದಿಂದ ತನ್ನಷ್ಟಕ್ಕೇ ಅಂದುಕೊಂಡ ನಾಗಪ್ಪ ಮುಂಬಯಿಗೆ ಹೋದಮೇಲೆ ಮೊಟ್ಟಮೊದಲು ಮಾಡಬೇಕಾದ ಕೆಲಸವೆಂದರೆ ಮೇರಿಯನ್ನು ಅವಳ ಬಾಂದ್ರಾದ ಮನೆಯಲ್ಲೇ ಕಾಣುವದು_ಎಂಬ ನಿರ್ಧಾರಕ್ಕೆ ಬಂದಿದ್ದ.

ವಿಮಾನ ಹೊರಡುವ ಸಮಯವಾಯಿತು ಎನ್ನುವುದನ್ನು ಮ್ಯಾಕ್ ಮೇಲೆ ಸಾರುತ್ತ, ಪ್ರಯಾಣಿಕರಿಗೆ ಹಾರ್ಧಿಕ ಸ್ವಾಗತ ಬಯಸುವ, ಸುಖಕರವಾದ ಪ್ರಯಾಣ ಬಯಸುವ ಪರಿಚಾರಿಕೆಯ ಕಂಠ ಹಾಗೂ ಹಿಂದೀ ಭಾಷೆಯ ಮೇಲೆನ ಪ್ರಭುತ್ವ ತುಂಬ ಇಷ್ಟವಾದವು. ಆಗ ಬಾಗಿಲಲ್ಲಿ ಸ್ವಾಗತಕ್ಕೆ ನಿಂತ ಹುಡುಗಿ ಇವಳು ಅಡ್ಡಿಯಿಲ್ಲ. ಅವಕಾಶ ಸಿಕ್ಕರೆ ಅವಳನ್ನು ಮಾತನಾಡಿಸಬೇಕು ಎಂದುಕೊಂಡವನು ಮಾತನಾಡಿಸಿಯೇಬಿಟ್ಟ. ಅವಳು ಚಹ ಕೊಡಲು ಬಂದಾಗ, “ಙou hಚಿve ಚಿ mಚಿಡಿveಟಟous voiಛಿe ಚಿಟಿಜ bಥಿ ಜಿಚಿಡಿ ಣhe besಣ ಚಿಟಿಟಿouಟಿಛಿiಟಿg sಣಥಿಟe I hಚಿve eveಡಿ hಚಿಜ ಣhe ಠಿಟeಚಿsuಡಿe oಜಿ ಟisಣeಟಿiಟಿg ಣo.” ಎಂದ. ಅವಳು ತನ್ನ ಮೊದಲಿನ ಗಾಂಭೀರ್ಯವನ್ನು ಬಿಟ್ಟುಕೊಟ್ಟು ಬಹಳ ಸುಂದರವಾಗಿ ಖುಕ್ ಎಂದು ನಕ್ಕು, “ಖಿhಚಿಟಿಞ ಥಿou so muಛಿh” ಎಂದಾಗ, ನಾಗಪ್ಪನೇ ಆಶ್ಚರ್ಯಪಟ್ಟ_ಅವಳು ಅಷ್ಟೊಂದು ಸುಂದರಳಾಗಿ ನಗಬಲ್ಲಳು ಎಂಬ ಕಲ್ಪನೆಯೇ ತನಗೆ ಇರಲಿಲ್ಲ. ಎಂಬಂತೆ.

ಹೊತ್ತು ಹೋದ ಹಾಗೆ ಏರ‍್ಪೋರ್ಟ್ ರೆಸ್ಟೋರೆಂಟಿನಲ್ಲಿಮಾತನಾಡಿಸಿದ ಆ ಅಪರಿಚಿತನು(ಕಲ್ಪನೆಯಲ್ಲೇ ಆತನಿಗೆ ರೆಡ್ಡಿ ಎಂದು ಹೆಸರಿಟ್ಟು)ಮನಸ್ಸನ್ನು ತುಂಬಹತ್ತಿದ. ಅವನ ಒಂದೊಂದೇ ಮಾತು ನೆನಪಿಗೆ ಬಂದಂತೆ ಅವನೂ ಫಿರೋಜನ ಪಿತೂರಿಯದೇ ಭಾಗೀದಾರನಲ್ಲ ತಾನೇ ಎಂದು ಅನ್ನಿಸಹತ್ತಿತು….ಅಥವಾ ಫಿರೋಜನ ಅಂಧಾದುಂದಿಯ ಕಾರುಭಾರದ ದುಷ್ಟ ಫಾಯದೆಯನ್ನು ಪಡೆದ ಇವರೆಲ್ಲ ಈಗ ಅನಿರೀಕ್ಷಿತವಾಗಿ ಉದ್ಭವಿಸಿದ ಪೇಚು-ಪ್ರಸಂಗದಿಂದ ತಪ್ಪಿಸಿಕೊಳ್ಳಲು ನನ್ನನ್ನು ಉಪಯೋಗಿಸುವ ಹಂಚಿಕೆ ಮಾಡುತ್ತಿರಬಹುದೇ ? ಇಷ್ಟೊಂದು ನಿಜ : ಖಿಥಿಠಿiಛಿಚಿಟ ರಾಜಕಾರಣಿಯ ಜಾತಿಯ ವ್ಯಕ್ತಿ. ಮಾತನಾಡುವ ಶೈಲಿ : ಮಾತನಾಡುವಾಗ ಮೋರೆಯ ಮೇಲೆ ವ್ಯಕ್ತವಾಗುವ_ ತನ್ನ ಮಾತಿನ ಬಗೆಗೆ ತನಗೇ ಇದ್ದ ಮೋಹ ; ಅತ್ಯಂತ ನಮ್ರವಾದ ನಯನಾಜೂಕಿನ ಮಾತುಗಳನ್ನು ಆಡುವಾಗಲೂ ಎಂತಹ ಕಪಟವನ್ನೂ ಅಡಗಿಸುವ ತಾಕತ್ತು ಮೀಸೆಯ ಮೂಲೆಯಲ್ಲಿ ನೆಲೆಸಿದೆಯೇನೋ ಎನ್ನುವಂತೆ ಮೀಸೆಯ ಕುಡಿಗಳನ್ನು ಆಗೀಗ ನೇವರಿಸಿಕೊಳ್ಳುವ ಠೀವಿ : ಎದೆಯ ಕೂದಲ ರಾಶಿ ಸಾರುವ ದರ್ಪದ ಪ್ರದರ್ಶನ ಸಾಲದೆಂಬಂತೆ ಕುರ್ತಾದ ಕೈಗಳನ್ನು ಮೊಣಕೈಯವರೆಗೆ ಜಗ್ಗಿ ಕಪ್ಪು ರೊಣೆ ತುಂಬಿದ ದಪ್ಪ ಕೈಗಳನ್ನು ತೋರಿಸಿ ತಿರುಗಿ ಮುಚ್ಚಿಕೊಳ್ಳುವ ಫಾಜೀಲ ಹವ್ಯಾಸ_ಎಲ್ಲ ಆ ಜಾತಿಗೇ ಶೋಭಿಸುವಂತಹವು. ನನ್ನ ಬಗ್ಗೆ ಕಾರಖಾನೆಯ ತುಂಬ ಒಳ್ಳೇ ಮತವಿದೆಯಂತೆ. ಬರೇ ಆರ್ ಎಂಡ್ ಡೀ ಮ್ಯಾನೇಜರನಾಗಿ ಕೆಲಸ ಮಾಡಿದರೂ ನನ್ನ ವರ್ಚಸ್ಸು….ಒಂದೂ ಮಕ್ಕಳಿರಾ ! ಎರಡೂ ಮಕ್ಕಳಿರಾ !….ಹೋದ ಏಳು ದಿನದಿಂದ ಅನುಭವಿಸಿದ ನೋವು. ಹದಿನೆಂಟು ವರುಷ ಫಿರೋಜನ ಕೈಯಲ್ಲಿ ಮೂಕವಾಗಿ ಪಡುತ್ತ ಬಂದ ಯಾತನೆ ಎರಡೂ_ಅವುಗಳನ್ನು ಅದುಮಿ ಹಿಡಿದ ಸಂಯಮದ ಕವಚವನ್ನು ಒಡೆದು ಹೊರಗೆ ಆಸ್ಪೋಟಿಸಿದಾಗಿನ ರೋಷವನ್ನು ಹಿಡಿದಿಡುವುದು, ಕೋಳೀಗಿಯಣ್ಣನಿಂದ ಕಲಿತ ಎಲ್ಲ ಮಂತ್ರಗಳ ಘೋಷಣೆಯನ್ನು ಒಂದೇ ಕಾಲಕ್ಕೆ ಮಾಡುವದರಿಂದ ಕೂಡ, ಶಕ್ಯವಾಗಿ ತೋರಲಿಲ್ಲ. ಫಿರೋಜ್, ಶ್ರೀನಿವಾಸ, ಜಲಾಲ, ಖಂಬಾಟಾ, ರಾಮಕೃಷ್ಣ, ಫಿರೋಜನ ತಂತ್ರಜ್ಞಾನವನ್ನು ಹೊಗಳಿದ ಡೈರೆಕ್ಟರರು, ಹಾಗೇ ಕಪ್ಪು ಕನ್ನಡಕದ ಹಿಂದೆ ತನ್ನ ಗುರುತು ಮರೆಸಿ ಮಾತನಾಡಿದ ಧೂರ್ತ ರಾಜಕಾರಣಿ ರೆಡ್ಡೀ….ಒಬ್ಬೊಬ್ಬರದೇ ಹೆಸರನ್ನು ಒದರಿ ಲಬೋ ಲಬೋ ಎಂದು ಬೊಬ್ಬೆಯಿಡಬೇಕು ಎನ್ನುವ ವಿವೇಕಶೂನ್ಯವಾದ ರೋಷವನ್ನು_ತಾನಿನ್ನೂ ವಿಮಾನದಲ್ಲಿದ್ದೇನೆ ಎಂಬ ಅರಿವು ಬಂದದ್ದೇ_ಅವುಡುಗಚ್ಚಿ ಅದುಮಿ ಹಿಡಿದ ರೀತಿಗೆ ತುಟಿಯಲ್ಲಿ ಹಲ್ಲು ಕಚ್ಚಿ ರಕ್ತ ಚಿಮ್ಮಿತು. ತನ್ನ ಈ ಸ್ಥಿತಿ ಹೀಗೇ ಮುಂದುವರಿದರೆ ತನಗೇ ಹುಚ್ಚು ಹಿಡಿದೀತೇನೋ ಎಂದು ಭಯವಾಗುತ್ತಿರುವಾಗ ರಕ್ತದ ಬಿಂದುಗಳೆರಡು ಅಂಗಿಯ ಮೇಲೆ ಬಿದ್ದು ಕಲೆ ಮೂಡಿಸಿದವು : ಖಿಚಿಞe ಣhis iಛಿe. ಙou musಣ hಚಿve ಛಿuಣ ಥಿouಡಿ ಟiಠಿs….” ಎನ್ನುತ್ತ ಆಗ, ಚಹ ಕೊಡುವಾಗ ಮಾತನಾಡಿದ ವಿಮಾನ-ಪರಿಚಾರಿಕೆ ಒಂದು ಟವಲ್ಲಿನಲ್ಲಿ ಬರ್ಫವನ್ನು ತಂದುಕೊಟ್ಟಳು.

ತುಟಿ ಒಡೆದ ಜಾಗದಲ್ಲಿ ಕೆಲ ಹೊತ್ತು ಬರ್ಫ್ ಹಿಡಿದು ಕೂತವನು ಬದಿಯಲ್ಲಿ ಮುಗುಳುನಗುತ್ತ, ತನ್ನನ್ನು ಮಾತನಾಡಿಸುವ ದಾರಿ ಕಾಯುತ್ತಿದ್ದ ಪರಿಚಾರಿಕೆ ಕಣ್ಣಿನಿಂದಲೇ ಆದರ ವ್ಯಕ್ತಪಡಿಸಿದ. ರಕ್ತ ಬಸಿಯುವದು ನಿಂತ ಮೇಲೆ ‘ಒಚಿಟಿಥಿ ಣhಚಿಟಿಞs’ ಎನ್ನುವಾಗ ಕಣ್ಣು ತುಂಬಿಬರುತ್ತಿದ್ದ ಅನ್ನಿಸಿಕೆ. ಙou sಠಿoiಟಣ ಥಿouಡಿ shiಡಿಣ. ಊoತಿ ಜiಜ ಥಿou mಚಿಟಿಚಿge ಣo ಜo ಣhಚಿಣ ?” ಎಂದು ಒಡೆದ ತುಟಿಯ ಕೆಳಗೆ ಬೆರಳು ತೋರಿಸಿದಳು. ‘ಇಲ್ಲವಾದರೆ ನೀನೇಕೆ ನಾನು ಕೂತಲ್ಲಿಗೆ ಬರುತ್ತಿದ್ದಿ,’ ಎಂದು ಹೇಳಬೇಕೆನ್ನಿಸದ್ದನ್ನು ಯಾವುದೋ ಸಿನೇಮಾದಲ್ಲಿ ಇಂತಹದೇ ಸನ್ನುವೇಶವಿದ್ದದ್ದು ನೆನಪಿಗೆ ಬಂದದ್ದರಿಂದ ತಡೆದು ಸರಳವಾಗಿ, “ನನಗೆ ಯಾರ ಮೇಲೋ ಸಿಟ್ಟು ಬಂದಿರಬೇಕು,” ಎಂದಾಗ ಬದಿಗೆ ಕೂತವಳು ನಗುವುದನ್ನು ನಿಲ್ಲಿಸಿ ತುಸು ಗಂಭೀರವಾದಳು. “ಹಾಗೇಕೆ ನೋಡುತ್ತೀ, ನಂಬಿಕೆಯಾಗುತ್ತಿಲ್ಲವೆ ?ನಿನ್ನೆ ರಾತ್ರಿಯ ಪ್ಲೇನಿಗೆ ಹೈದರಾಬಾದಿಗೆ ಬಾ ಎಂದರು_ಬಂದೆ. ಇಂದಿನ ರಾತ್ರಿಯ ಪ್ಲೇನಿಗೇ ಮುಂಬಯಿಗೆ ಬಾ ಎಂದರು_ ಹೋಗುತ್ತಿದ್ದೇನೆ.ಂsಞ ಥಿouಡಿ ಛಿoಟಟeಚಿgue ಒiss ಆiಚಿಟಿಚಿ ಆಡಿiveಡಿ, ಅವಳಿದ್ದಳು ನಿನ್ನೆಯ ಪ್ಲೈಟ್ ಮೇಲೆ,” ಎಂದ. “ಂಡಿe ಥಿou….?” ಎಂದು ಆರಂಭವಾದ ಅವಳ ಪ್ರಶ್ನೆ ಪೂರ್ತಿಯಾಗುವ ಮೊದಲೇ ತಾನೇ ಉತ್ತರ ಪೂರೈಸಿದ : “ಮಿಸ್ಟರ್ ನಾಗನಾಥ.” ನನಗೆ ಆಗಲೇ ಅನ್ನಿಸಿತ್ತು ಎನ್ನುವಂತಹ ಕೌತುಕ ತುಂಬಿದ ದೃಷ್ಟಿಯಿಂದ ಅವಳು ತನ್ನನ್ನು ನೋಡುತ್ತಿದ್ದಾಗ ಡಾಯನಾ ಇವಳಿಗೆ ತನ್ನ ಬಗ್ಗೆ ಏನೋ ಹೇಳಿರಬೇಕು ಎಂಬ ಗುಮಾನಿಯಿಂದ ‘ಆo I hಚಿve ಚಿ sತಿeeಣ sಚಿಜ ಜಿಚಿಛಿe ?” ಎಂದು ಕೇಳಿದ. ಈ ಪ್ರಶ್ನೆಯ ಅರ್ಥ ಹೊಳೆದ ಪರಿಚಾರಿಕೆ ಸಿಹಿಯಾಗಿ ನಗುತ್ತ, “….ಚಿಟಿಜ bಡಿiಟಟiಚಿಟಿಣ eಥಿes” ಎಂದು ಡಾಯನಾ ಮಾಡಿದ ವರ್ಣನೆಯನ್ನು ಪೂರ್ತಿಗೊಳಿಸಿದಳು. ಹಾಗೂ, “ಕ್ಷಮಿಸಿ, ಮತ್ತೆ ಬಂದು ನಿಮ್ಮನ್ನು ಕಾಣುತ್ತೇನೆ” ಎಂದು ಕೂತಲ್ಲಿಂದ ಎದ್ದು ನಿಂತಳು. “ನಿನ್ನ ಹೆಸರನ್ನು ಹೇಳಲಿಲ್ಲ ?” ಎಂದಾಗ, “ಮಿಸ್ ಇರಾನೀ_ಥ್ರೀಟೀ ಇರಾನೀ.” ಎಂದು ಅಲ್ಲಿಂದ ಹೊರಟು ಹೋದಳು : ಇನ್ನೊಬ್ಬ ಫಿರೋಜನ ಜಾತಿಯವಳು !….

ರೆಡ್ಡಿ ಹೇಳಿದ ಒಂದು ಮಾತು ನೆನಪಿಗೆ ಬಂತು : ಬೋರ್ಡ್ ಮೀಟಿಂಗಿನಲ್ಲಿ ಫಿರೋಜ್ ಎಲ್ಲರ ಮೇಲೆ ಛಾಪು ಹೊಡೆದದ್ದನ್ನು ವರ್ಣಿಸುವಾಗ ಶಾಂತಚಿತ್ತನಾಗಿ ಮಾತನಾಡಿದ ಎಂದದ್ದು. ಹೀಗೆ, ಉಳಿದವರ ಮೇಲೆ ಛಾಪು ಹಾಕುವಂತೆ ಮಾತನಾಡುವ ಕಲೆಯಿದ್ದರೇನೇ ಬದುಕಬಹುದೇನೋ…. ಒಆ ಯವರು ಮನಸ್ಸಿನ ತೋಲವನ್ನು ಕಾಪಾಡಿಕೊಳ್ಳದೇ ಮೇಜು ಗುದ್ದಿದ್ದೇ ದೊಡ್ಡ ಅಪರಾಧವಾಗಿ ತೋರಿತಂತೆ…ಇದು ಫಿರೋಜನ ಖಾಸಾ ವೈಶಿಷ್ಟ್ಯ : ತಾನು ಏನನ್ನೂ ಮಾತನಾಡದಿರುವಾಗಲೂ ಇದಿರಾಳಿಯನ್ನು ತಪ್ಪು ಹೆಜ್ಜೆ ಹಿಡಿಯುವಷ್ಟರ ಮಟ್ಟಿಗೆ ಕ್ಷೋಭೆಗೊಳ್ಳುವಂತೆ ಮಾಡುವ ಕಲೆ !….ಕಂಪನಿಯ ಟೆಕ್ನಾಲೊಜಿ : ಈ ವಿಷಯದಲ್ಲಿ ರೆಡ್ಡಿ ಹೇಳಿದ ಮಾತಿನ ನೆನಪಿನಿಂದಲೇ ತಿರುಗೆಲ್ಲಿ ತುಟಿ ಕಚ್ಚಿಕೊಂಡೇನೋ ಎಂಬ ಭಯವಾದಾಗ ಅದನ್ನೆಲ್ಲ ಮರೆತುಬಿಡುವ ಪ್ರಯತ್ನದಲ್ಲಿ ಮೈ ಬಿಸಿಯಾಗುತ್ತಿದ್ದ ಅನುಭವವಾಗಿ ತಲೆಯ ಮೇಲಿನ ‘ಏರ‍್ಜೆಟ್’ನ್ನು ಸರಿಪಡಿಸಿ ತಂಪು ಗಾಳಿ ತನ್ನ ಮೇಲೆಯೇ ಬರುವಂತೆ ಮಾಡಿದ : ನಾಗಪ್ಪ ತನ್ನ ಕಂಪನಿಯಲ್ಲಿ ಇಂದಿನದಕ್ಕಿಂತ ಮೇಲಿನ ಸ್ಥಾನವನ್ನು ಪಡೆಯದೇ ಇರಲು ಬೇರೆ ಏನೇ ಕಾರಣವಿದ್ದರೂ ಕಂಪನಿಯ ಇಂದಿನ ಉತ್ತಮ ಸ್ಥಿತಿಗೆ ಕಾರಣವಾದ ಟೆಕ್ನಾಲೊಜಿ ಮಾತ್ರ ನಾಗಪ್ಪನ ಸೃಷ್ಟಿಶೀಲ ಮನಸ್ಸಿನ ಫಲವಾಗಿತ್ತು ಎನ್ನುವುದನ್ನು ಗೊತ್ತಿದ್ದ ಯಾರೂ ಅಲ್ಲಗಳೆಯರು. ಅಸಾಧಾರಣ ಪ್ರತಿಭೆ ಇದ್ದರಷ್ಟೇ ಸಾಲದು : ಪ್ರತಿಭೆಗೆ ಅಧಿಕಾರಿಯಾದವನಿಗೆ, ತನಗೆ ಸಲ್ಲಬೇಕಾದ ನ್ಯಾಯವನ್ನು ದೊರಕಿಸಿಕೊಳ್ಳುವ ಹಿಮ್ಮತ್ತೂ ಇರಬೇಕು : ಸತ್ಯವೇ ಗೆಲ್ಲಬೇಕಾದರೆ ಸತ್ಯದ ಪ್ರಜ್ಞೆ ಇದ್ದವನು ಸತ್ಯದ ಗೆಲುವಿಗಾಗಿ ಹೋರಾಡಬೇಕಾಗುತ್ತದೆ….ನಾಗಪ್ಪ ಹಲವು ಸರತಿ ತಾನೇ ಟಿಪ್ಪಣಿ ಮಾಡಿಕೊಂಡ ಈ ಅರಿವನ್ನು ಆಚರಣೆ ತರುವಾಗ, ಪ್ರತ್ಯಕ್ಷ ಹೋರಾಟಕ್ಕೆ ಇಳಿಯುವಾಗ ತನ್ನ ವ್ಯಕ್ತಿತ್ವದ ಮೂಲಭೂತ ಅಂಗವಾದದ್ದೇನೋ ಅಡ್ಡ ಬಂದಂತಾಗಿ ನಿಷ್ಕ್ರಿಯನಾಗಿದ್ದಾನೆ ; ತನ್ನ ಪ್ರತಿಭೆಯ ಫಲಕ್ಕೆ ತಾನೇ ನಿರಾಸಕ್ತನಾಗಿದ್ದೇನೆ ಎಂಬಂತಹ ಭಾವನೆ ಹುಟ್ಟಿಸಿಕೊಂಡು ತನ್ನ ನಿಷ್ಕ್ರಿಯತೆಯನ್ನು ಸಮರ್ಥಿಸಿಕೊಂಡಿದ್ದಾನೆ. ಹಾಗೇ, ಅನಿರೀಕ್ಷಿತ ಕ್ಷಣಗಳಲ್ಲಿ ತನ್ನ ಪ್ರತಿಭೆಯ ಲಾಭವನ್ನು ಬೇರೆ ಯಾರೋ ಪಡೆಯುತ್ತಿದ್ದಾರೆ ಎಂಬುದು ಲಕ್ಷ್ಯಕ್ಕೆ ಬಂದಾಗ ಮಾತ್ರ ಷಂಢ ಸಿಟ್ಟಿನಿಂದ ಸಿಡಿಮಿಡಿಗೊಂಡಿದ್ದಾನೆ. ರೆಡ್ಡಿಯಿಂದ ಕಂಪನಿಯ ಟೆಕ್ನಾಲೊಜಿಯನ್ನು ಇಂದಿನ ಸ್ಥಿತಿಗೆ ತಂದದ್ದರ ಮಾನವನ್ನು ಕಂಪನಿಯ ಡೈರೆಕ್ಟರರು ಎಲ್ಲರನ್ನು ಬಿಟ್ಟು ಫಿರೋಜನ ತಲೆಗೆ ಒಪ್ಪಿಸಿದ್ದು ತಿಳಿದಾಗ, ಸಂಯಮದ ಕಟ್ಟೆಯೊಡೆದು ಹೊರಗೆ ಬಂದು, ಹೆಡೆ ಬಿಚ್ಚಿದ ಸಿಟ್ಟಿನಿಂದಾಗಿ ತಾನು ಕೆಲಹೊತ್ತಿನ ಮೊದಲಷ್ಟೇ ಅವಡುಗಚ್ಚಿದ ರಭಸಕ್ಕೆ ತಾನೇ ಮೊದಲೊಮ್ಮೆ ಅಪ್ರತಿಭನಾಗಿ, ಈಗ ಅತ್ಯಂತ ವ್ಯಾಕುಲನಾಗಿದ್ದಾನೆ : ಕಳೆದ ಹದಿನೆಂಟು ವರ್ಷಗಳಲ್ಲಿ….ಬೇಡ ಮತ್ತೆ ಈ ಹಿನ್ನೋಟದ ಪ್ರಲೋಭನೆ. ನೌಕರಿಯನ್ನು ಬಿಟ್ಟುಕೊಟ್ಟು ಖೇತವಾಡಿಯ ಮೂಲೆಯೊಂದರಲ್ಲಿ ನ್ಯೂಸ್‌ಪೇಪರ್ ಇಲ್ಲವೇ ರದ್ದೀ ಮಾರುವ ಅಂಗಡಿಯನ್ನೋ ಇಲ್ಲ, ಸ್ಟ್ರೆಂಡ್-ಬುಕ್-ಸ್ಟಾಲಿನಂತಹ ಪುಸ್ತಕ ಅಂಗಡಿಯನ್ನೋ ತೆರೆದು, ಬಿಡುವಿನ ವೇಳೆಯನ್ನು ತನಗೆ ಅತ್ಯಂತ ಪ್ರಿಯವಾದ ಸಾಹಿತ್ಯರಚನೆಯಲ್ಲಿ ಕಳೆಯಬಹುದಿತ್ತು. ಅಲ್ಲಿಯೂ ಸದ್ಯ ತನ್ನ ಬಾಯ ಕಟ್ಟಿದ್ದಾರೆ. ಬರಿಯ ಬೇರೆಯವರು ಸೂಚಿಸಿದ ಉದ್ದೇಶಗಳಿಗಾಗಿ ಸಾಹಿತ್ಯ ಸೃಷ್ಟಿ ತನ್ನಿಂದ ಸಾಧ್ಯವಿಲ್ಲ. ತನ್ನ ಅನುಭವದಲ್ಲಿ ಹುಟ್ಟದ್ದೇ ಇದ್ದುದನ್ನು ಬರೆಯದೇ ಇರುವುದು ಸಾಧ್ಯವೇ ಇಲ್ಲ ಎನ್ನುವಂತಹ ಉತ್ಕಟ ಕ್ಷಣಕ್ಕಾಗಿ ಕಾಯದೇ ಇರುವಂಥದ್ದನ್ನು ಶಬ್ದಗಳಲ್ಲಿ ಮೂಡಿಸುವದು ತನಗೆ ಶಕ್ಯವಿಲ್ಲ : ತನ್ನ ಸೃಜನಶೀಲತೆ ಅಭಿವ್ಯಕ್ತಿಯ ಹೊರದಾರಿಯನ್ನು ಕಾಣದೇ ಒಳಗೊಳಗೇ ಉಸಿರುಕಟ್ಟಿ ಸಾಯುತ್ತಿದೆ ಎಂಬ ಅನ್ನಿಸಿಕೆಯಿಂದ ತನ್ನ ಬಗ್ಗೆ ತನಗೇ ಕೆಡುಕೆನಿಸಿದೆ.

ಇವನು ಉದಾಸೀನಗೊಂಡು ಕೂತ ರೀತಿಯನ್ನು ನೋಡಿ, ಹತ್ತಿರ ಬಂದು ಕುಳಿತು_ “What are you brooding about ?” _ಎಂದು ಕೇಳಿದ ಪರಿಚಾರಿಕೆಯ ದನಿಗೆ ಬೆಚ್ಚಿಬಿದ್ದ. ಮರುಗಳಿಗೆ, ಸೀಟಿನ ಕೈಯ ಮೇಲೆ ಮುಗ್ಧವಾಗಿ ಊರಿದ ಬೆಳ್ಳಗಿನ ಹೆಣ್ಣು ಅಂಗೈಯನ್ನು ಮೃದುವಾಗಿ ಒತ್ತಿ_ “Thank you my friend” ಎಂದ. ದನಿಯಲ್ಲಿಯ ಆರ್ದ್ರತೆಯಿಂದ ತಟ್ಟಿದವಳಾಗಿ ಥ್ರೀಟೀ ಕೇಳಿದಳು : “Thanks for what ?” ನಾಗಪ್ಪನಿಂದ ಕೆಲಹೊತ್ತು ಮಾತೇ ಹೊರಡಲಿಲ್ಲ. ಆಮೇಲೆ ಮೆಲ್ಲಕ್ಕೆ “For everything, especially this tender kindness which restores one’s faith in living.” ಎಂದ. “Nonsense ! Why should you loss faith in living ? You are young, talented… well placed in life….” ಕೊನೆಯ ಮಾತಿಗೆ ನಾಗಪ್ಪ ಚಕಿತನಾದ : ವೇಳೆ ಕಳೆಯುವುದಕ್ಕೆ ಬೇರೆ ಕೆಲಸವಿಲ್ಲದ್ದರಿಂದ ಹತ್ತಿರ ಕೂತು ಹೀಗೆ ಸಿಹಿಸಿಹಿ ಮಾತನಾಡುತ್ತಿದ್ದಾಳೋ ಅನ್ನಿಸಿ ಥ್ರೀಟಿಯತ್ತ ನೋಡಿದಾಗ, ನಾಗಪ್ಪನು ತನ್ನತ್ತ ನೋಡುವ ಕ್ಷಣವನ್ನೇ ಕಾಯುತ್ತಿದ್ದವಳು, ಅವನು ಚಕಿತನಾದ ಕಾರಣ ಅರಿತವಳ ಹಾಗೆ, “ನನಗೆಲ್ಲ ಗೊತ್ತಿದೆ ; ಡಾಯನಾ ಹೇಳಿದ್ದಾಳೆ.”ಎಂದಾಗ ಮಾತ್ರ ನಾಗಪ್ಪ ಸಂಪೂರ್ಣವಾಗಿ ಗೊಂದಲಿಸಿದ : ಯಾವಾಗಲಾದರೂ ಒಮ್ಮೆ, ಇಂತಹ ಪ್ರವಾಸದಲ್ಲಿ ಆಕಸ್ಮಿಕವಾಗಿ ಭೆಟ್ಟಿಯಾದ ಇವರಿಗೇಕೆ ತನ್ನ ಬಗ್ಗೆ ಇಷ್ಟೊಂದು ಆಸ್ಥೆ ? ತಿರುಗಿ ಭೆಟ್ಟಿಯಾಗುವ ಶಕ್ಯತೆ ಕಡಿಮೆಯಾದದ್ದೇ ಆಗಿರಬಹುದೇ ? ಸ್ವತಃ ತಾನೇ ಸಿಕ್ಕಿಬೀಳುವ ಸಂಭವವಿಲ್ಲದ ಸನ್ನಿವೇಶದ ಬಗೆಗೇ ಇವರ ಸಹಾನುಭೂತಿ ಇರಬಹುದೇ ? ಹೇಗಾದರೂ ಯಾತನೆ ಪಡುವ ದುರ್ಭಾಗ್ಯ ಸದ್ಯಕ್ಕಂತೂ ತನ್ನದಲ್ಲವಲ್ಲ ಎಂಬ ಭಾವನೆಯಲ್ಲಿ ಬೇರುಬಿಟ್ಟ ಸಹಾನುಭೂತಿಯೇ ಇದು ? ಉಳಿದವರ ನೋವಿನಲ್ಲಿ ತೊಡಗಿಸಿಕೊಳ್ಳದೇ ಇರುವುದರಿಂದಲೇ ನಾವು ನಮ್ಮ ಭಾವನೆಗಳ ಸಹಜ ಉತ್ಸಾಹವನ್ನು ಕಳಕೊಳ್ಳುತ್ತಿರಬಹುದೇ ? ಈ ವಿಮಾನ-ಪರಿಚಾರಿಕೆಯರಿಗೆ ತಮ್ಮ ವ್ಯವಸಾಯದ ಆತ್ಮೀಯ ಅಂಗವಾದ ಈ ಕಲೆ_ನಗುನಗುತ್ತ ಇನ್ನೊಬ್ಬನ ಹತ್ತಿರ ಮಾತ್ರ ತಾನು ಹೀಗೆ ಮಾತನಾಡುತ್ತೇನೆ, ಎಂಬಂತಹ ಭಾವನೆಯನ್ನು ಪ್ರತಿಯೊಬ್ಬನಲ್ಲೂ ಮೂಡಿಸುವಂತೆ ಸಿಹಿಸಿಹಿಯಾಗಿ ಮಾತನಾಡುವ ಈ ಕಲೆ_ಬರಿಯ ಅಭ್ಯಾಸಬಲದಿಂದಲೇ ಬಂದಿರಬಹುದೆ ? ಥಟ್ಟನೆ, ಯಾವ ಸ್ಪಷ್ಟ ಕಾರಣವೂ ಇಲ್ಲದೆ ಆ ದಿನ ಆಕಸ್ಮಿಕವಾಗಿ ಭೆಟ್ಟಿಯಾದ ಸಂದರ್ಭದಲ್ಲೇ ಅಷ್ಟೊಂದು ಪ್ರೀತಿಯಿಂದ ಮಾತನಾಡಿಸಿದ ದೋಶಿ ನೆನಪಾದ. ತಿರುಗಿ ಅವನು ಭೆಟ್ಟಿಯಾಗಿರದಿದ್ದಕ್ಕೆ ಏನು ಕಾರಣ ? ನನ್ನ ಬಗ್ಗೆ ಪ್ರಕಟಿಸಿದ ಕಳಕಳಿ ಬರಿಯ ಆ ಕ್ಷಣದ ಮಟ್ಟಿಗಿನದಷ್ಟೇ ಆಗಿತ್ತೇ ?_ “ನಾನು ನಿಮ್ಮ ಬದಿಯಲ್ಲಿ ಕೂತಿದ್ದೇನೆ ಎಂಬುದನ್ನು ಕೂಡ ಮರೆತಿರಾ ? This is an insult to me””_ ಎಂದ ಥ್ರೀಟೀ, ಅವನ ಕೈಬೆರಳನ್ನು ಚಿವುಟಿದಾಗ, “Sorry ಥ್ರೀಟೀ, ನೀವೆಲ್ಲ ನನ್ನ ಬಗ್ಗೆ ಯೋಚಿಸುತ್ತಿರುವ ಸಹಾನುಭೂತಿಯಿಂದ ಭಾವುಕನಾಗಿದ್ದೇನಷ್ಟೇ. ಇಂತಹ ಈ ಕ್ಷಣಿಕ ಸಹವಾಸದಲ್ಲಷ್ಟೇ ನಾವು ನಮ್ಮ ನಿಜವಾದ ಅನ್ನಿಸಿಕೆಗಳನ್ನು ಸಹಜವಾಗಿ ವ್ಯಕ್ತಪಡಿಸಬಲ್ಲೆವೇನೋ ಎಂದನ್ನಿಸುತ್ತದೆ ನೋಡು. ದೀರ್ಘಕಾಲದ ಸಂಬಂಧವೆಂದರೆ ಯಾವುದಾದರೂ ವ್ಯಾವಹಾರಿಕ ಸನ್ನಿವೇಶದಲ್ಲಿ ಬೇರುಬಿಟ್ಟದ್ದೇನೋ. ಸ್ವಾರ್ಥದ ಸಂರಕ್ಷಣೆಯ ಗರಜಿನಲ್ಲಿ ಸುಳ್ಳಾದದ್ದೇನೋ….”ಎಂದ. ತನ್ನಷ್ಟಕ್ಕೇ ಎಂಬಂತೆ, ಥ್ರೀಟೀ : “ಮೇಲಾಗಿ ಪ್ರತಿಯೊಂದನ್ನೂ ನೀವು ಮನಸ್ಸಿಗೆ ಹಚ್ಚಿಕೊಳ್ಳುತ್ತೀರಿ ; ಮನಸ್ಸಿಗೆ ಹಚ್ಚಿಕೊಂಡ ಪ್ರತಿಯೊಂದರ ಬಗ್ಗೆಯೂ ಚಿಂತೆಮಾಡುತ್ತ ಕೂಡುತ್ತೀರೆಂದು ತೋರುತ್ತದೆ. ನಾನು ನಗುನಗುತ್ತ ಓಡಾಡುತಿದ್ದೇನೆ ಎನ್ನುವುದರ ಅರ್ಥ ನನಗೆ ದುಃಖವೇ ಇಲ್ಲವೆಂದೇ ? ಎಲ್ಲರನ್ನು ಬಿಟ್ಟು ನಿಮ್ಮ ಹತ್ತಿರವೇ ಮಾತನಾಡಲು ಬಯಸಿದ್ದಾಕ್ಕೆ ಮಹತ್ವ ಇಲ್ಲವೆನ್ನುತ್ತೀರಾ ? ಡಾಯನಾ ನಿಮ್ಮ ಬೆಗ್ಗೆ ಹೇಳಿರದೇ ಇದ್ದರೆ ನಿಮ್ಮ ಕಡೆ ಲಕ್ಷ್ಯ ಹೋಗುತ್ತಿತ್ತೋ ಇಲ್ಲವೋ ಆ ಮಾತು ಬೇರೆ. ಆದರೆ ಬಂದು ಮಾತನಾಡಿಸಿದಮೇಲೆ ವ್ಯಕ್ತವಾದ ಭಾವನೆಯನ್ನು_ಕ್ಷಣಿಕವಾಗಿರಲೊಲ್ಲದೇಕೆ_ ನಾವೇಕೆ ಒಪ್ಪಿಕೊಳ್ಳಬಾರದು ? ನೀವು ದೊಡ್ಡ ಲೇಖಕರಂತೆ : ವಿಚಾರಗಳನ್ನು ತಕ್ಕ ಭಾಷೆಯಲ್ಲಿ ಹಿಡಿಯುವ ಕಲೆ ನಿಮಗಿದೆ_ನನಗಿಲ್ಲ. ಆದರೆ ನಾನೂ ಇಂಗ್ಲಿಷ್ ಸಾಹಿತ್ಯದ ಗ್ರಾಜುಯೇಟ್ ವಿದ್ಯಾರ್ಥಿನಿ. ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಕಲಿತದ್ದು. ಹೆಮಿಂಗ್‌ವೇ ನನ್ನ ಪ್ರೀತಿಯ ಲೇಖಕ. ನಾನು ಅವರನ್ನು ಅರ್ಥಮಾಡಿಕೊಂಡ ರೀತಿ ಹೇಳಲೇ ? ಬುಲ್ ಫೈಟ್ ಗಳ ಬಗ್ಗೆ, ಯುದ್ಧದ ಬಗ್ಗೆ, ಸಾವಿನ ಬಗ್ಗೇ ಬರೆಯುವ ಅವನ ಮನಸ್ಸು ನನಗೆ ತಟ್ಟಿದ್ದರ ಕಾರಣ ? ಎಲ್ಲದರ ಕ್ಷಣಿಕತೆಯನ್ನು ಅನುಭವಿಸುವ ಅವನ ಅನನ್ಯ ರೀತಿ !ನನಗನ್ನಿಸುತ್ತದೆ : ಮನುಷ್ಯನ ಅನೇಕ ಮೂಲಭೂತವಾದ ಭಾವನೆಗಳ ಭ್ರಷ್ಟಾಚಾರಕ್ಕೆ ಕಾರಣ ಕೂಡ ಇದೇ : ಎಲ್ಲದರಲ್ಲೂ ಶಾಸ್ವತತೆಯನ್ನು ಬಯಸುವ ಅವನ ದುಷ್ಟ ಚಟ. ಸಾವಿನ ಭಯ ಇಂದಿನ ಮಾನವನ ದೊಡ್ಡ ರೋಗವಾಗಿದೆ. ವಿಮಾನ-ಅಪಘಾತದಲ್ಲಿ ಸಾಯುವ ಶಕ್ಯತೆ ನನ್ನ ಮುದಿ ಅಮ್ಮನ ದುಗುಡಕ್ಕೆ ಕಾರಣವಾದರೆ , ಅದೇ ನಾನು ಈ ವ್ಯವಸಾಯವನ್ನು ಸ್ವೀಕರಿಸುವುದರಲ್ಲಿ ಪಟ್ಟ ಖುಷಿಗೆ ಕಾರಣವಾಯಿತು. ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕಾದ ಸತ್ಯಸಂಗತಿ : ಬಹುಶಃ ನಾವಿಬ್ಬರೂ ಇನ್ನೆಂದಿಗೂ ಭೆಟ್ಟಿಯಾಗುತ್ತೇವೋ ಇಲ್ಲವೋ ಎಂಬ ಭಾವನೆಯೇ ಇದೀಗಿನ ಈ ಕ್ಷಣಿಕ ಸಹವಾಸ ಕೊಡುತ್ತಿರುವ ಉತ್ಕಟವಾದ ಆನಂದಕ್ಕೆ ಕಾರಣ ಎನ್ನುವದು. ಈ ಉತ್ಕಟತೆಯನ್ನೂ ಸಂಶಯದಿಂದ ನೋಡುವ ಹವ್ಯಾಸಕ್ಕೆ ಹೋಗಬೇಡಿ_I call that vulgar. ಮಾತನಾಡಿದ್ದು ಬಹಳವಾಯಿತೇನೋ,” ಎಂದವಳೇ ಒಮ್ಮೆಲೇ ಮೌನ ಧರಿಸಿ ಕುಳಿತುಬಿಟ್ಟಳು. ನಾಗಪ್ಪನಿಂದಲೂ ಕೂಡಲೇ ಮಾತು ಹೊಡದಾಯಿತು. ವಿಮಾನದಲ್ಲಿಯ ಮುಖ್ಯ ದೀಪಗಳನ್ನೆಲ್ಲ ಆರಿಸಿದ್ದರಿಂದ ಮೂಲೆಯ ಸಣ್ಣ ದೀಪಗಳ ಧೂಸರವಾದ ಬೆಳಕಷ್ಟೇ ವಿಮಾನದ ತುಂಬ ಪಸರಿಸಿತ್ತು. ಅಲ್ಲಲ್ಲಿ ಒಂದೆರಡು ಜನ ಹೊತ್ತಿಸಿದ ಓದುವ ದೀಪಗಳ ಬೆಳಕು : ನಾಗಪ್ಪ ಅರಿವಿಲ್ಲದೇನೇ ಆದರೂ ಯಾವುದೇ ಬಗೆಯ ಸುಳ್ಳು ಭಾವನೆಗಳಿಗೆ ಒಳಗಾಗದೇನೇ ಥ್ರೀಟೀಯ ಕೈಮೇಲೆ ಕೈಯಿಟ್ಟು ಕೂತ : ಶಬ್ದಗಳಿಗೆ ಮಾಡಲಾಗದ್ದು ಆ ಮೂಕ ಸ್ಪರ್ಶ ಮಾಡುತ್ತಿತ್ತು. ಮನುಷ್ಯ ಸಂಬಂಧಗಳ ಕ್ಷಣಭಂಗುರತೆಯನ್ನು ಕುರಿತು ಉಂಟಾದ ಸುಖದ ಸೆಲೆಯೊಡೆದಿತ್ತು.

ವಿಮಾನ ಮುಂಬಯಿಯ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಒಳಗಿನ ದೀಪಗಳೆಲ್ಲ ತಿರುಗಿ ಬೆಳಗಿ ನಿಂತವು. ತಾನೀಗ ತನ್ನ ಡ್ಯೂಟಿಯ ಮೇಲೆ ಹೋಗಬೇಕು ಎನ್ನುವುದನ್ನು ಸೂಚಿಸುತ್ತ, “Don’t worry, every thing will be all right_I will pray for you,” ಎಂದ ಥ್ರೀಟೀ ಸೀಟನ್ನು ಬಿಟ್ಟು ಎದ್ದಳು. “Good-bye my, transient friend,” ಎಂದು ಇವನು ಮೆಲುದನಿಯಲ್ಲಿ ಅಂದಾಗ, ಅವನು ಯಾಕೆ ಹಾಗೆ ಅಂದನೆಂಬುದನ್ನು ಅರಿತವಳ ಹಾಗೆ ಅರ್ಥಪೂರ್ಣವಾಗಿ ನಕ್ಕಳು. ಥ್ರೀಟೀ ಹೊರಟು ಹೋಗುತ್ತಲೇ, ಅವಳ ಕೈಯನ್ನು ಹಿಡಿದು ಕೂತಲ್ಲೇ ಒಳಗೊಳಗೇ ನಿಶ್ಚಿತವಾದದ್ದೇನೋ ತನ್ನಷ್ಟಕ್ಕೇ ಆಚರಣೆಗೆ ಇಳಿಯತೊಡಗಿತು ಎನ್ನುವ ರೀತಿ_ ಬ್ರೀಫ್‌ಕೇಸ್ ತೆರೆದು ರೆಡ್ಡಿ ಕೊಟ್ಟ ಪತ್ರವನ್ನು ಕೈಗೆ ತೆಗೆದುಕೊಂಡವನೇ ಭರಭರನೆ ಹರಿದು ಚೂರುಚೂರು ಮಾಡಿ ಮುಂದಿನ ಸೀಟಿನ ಹಿಂಬದಿಯ ದೊಡ್ಡ ಕಿಸೆಯಲ್ಲಿ ತುರುಕಿಬಿಟ್ಟ. ಸತ್ತು ಹೋಗಿ ಒಂದೂ ಮಕ್ಕಳಿರಾ. ನನಗೂ ನಿಮಗೂ ಯಾವ ಸಂಬಂಧವೂ ಇಲ್ಲ’ ಈಗ….

ಹೀಗೆ ಪತ್ರವನ್ನು ಹರಿದೊಗೆಯುವುದರಿಂದಲೇ ಸಂಬಂಧ ಕಡಿಯುತ್ತಿದ್ದರೆ ಪತ್ರವನ್ನು ಓದಿದಮೇಲೇ ಹರಿದೊಗೆಯಬಹುದಿತ್ತಲ್ಲ. ಹಾಗೆ ಓದುವ ಮೊದಲೇ ಹರಿದದ್ದರ ಹಿಂದಿನ ಪ್ರೇರಣೆ ಆ ಪತ್ರ ತೋರಿಸಬಹುದಾಗಿದ್ದ ಸತ್ಯಸ್ಥಿತಿಯನ್ನು ಇದಿರಿಸುವಲ್ಲಿ ತನಗನ್ನಿಸುತ್ತಿದ್ದ ಭಯವಾಗಿರಬಹುದಲ್ಲವೇ ? ಎಂದು ಅದೇ ಹುಟ್ಟುತ್ತಿದ್ದ ಅನ್ನಿಸಿಕೆ ಹೊಸ ಅಸ್ವಸ್ಥತೆಗೆ ಕಾರಣವಾಗಹತ್ತಿತು. ಅದೇ ಹೊತ್ತಿಗೆ ಅವನು ಬಹಳ ಮೆಚ್ಚಿಕೊಂಡ ಥ್ರೀಟೀಯ ದನಿ ಮ್ಯಾಕ್ ಮೇಲೆ ಬಂದಿತು : ವಿಮಾನ ಮುಂಬಯಿಯ ಏರ‍್ಪೋರ್ಟಿನಲ್ಲಿ ಇಳಿಯಹತ್ತಿತು. ಲಕ್ಷಗಟ್ಟಲೆ ದೀಪಗಳು ಹಸಿರು ನೀಲಿ ಬಣ್ಣಗಳ ಬೆಳಕನ್ನು ಬೀರುತ್ತ ಕಣ್ಣು ಮಿಟುಕಿಸುವ ರೀತಿ ಮುಂಬಯಿಯ ಕತ್ತಲೆಗೆ ವಿಚಿತ್ರ ಮೆರಗನ್ನು ತಂದಿದ್ದವು. ನಡುವೆಯೆ ಚಂಗನೆ ಎದ್ದು ನಿಂತ ಟ್ರಾಂಬೇ ರಿಪೈನರಿಗಳ_ ಆಕಾಶದಲ್ಲಿ ಬೆಂಕಿ ಉಗುಳುವ_ಬೃಹದಾಕಾರದ ಚಿಮಣಿಗಳು, ದೂರದಲ್ಲಿ ಒಳಗಿನ ನಿಯಾನ್ ಲೈಟ್ಸ್‌ಗಳ ಬೆಳಕಿನ ವೈಭವವನ್ನು ಹೊರಗಿನ ಕತ್ತಲೆಗೆ ಮೆರೆಯಿಸುತ್ತ, ಬಾಯಿಮುಚ್ಚಿ, ಕೈಕಟ್ಟಿ ನಿಂತಂತೆ ತೋರುವ ಏರ‍್ಪೋರ್ಟಿನಮುಖ್ಯ ಕಟ್ಟಡ : ನೆತ್ತಿಯ ಮೇಲೆ ತಿರುಗುವ ಶೋಧನ_ದೀಪದ ಕಣ್ಣು ಕುಕ್ಕುವ ಬೆಳಕು ಕತ್ತಲೆಯನ್ನು ಕ್ಷಣಕ್ಕೊಮ್ಮೆ ಸೀಳುತ್ತಿತ್ತು. ವಿಮಾನ ನೆಲಕ್ಕೆ ತೀರ ಹತ್ತಿರವಾಗುತ್ತಿದ್ದ ಹಾಗೆ ರನ್‌ವೇದ ಗುಂಟ ಹಚ್ಚಿದ ಸಾಲುದೀಪಗಳು ಹಾವಿನಂತೆ ಹರಿದ ಆದರೆ ಬಳಸನ್ನು ತೋರಿಸಿಕೊಟ್ಟವು. ನಾಗಪ್ಪನ ಮನಸ್ಸೂ ಮೆಲ್ಲನೆ ಮುಂಬಯಿಯ ವಾಸ್ತವತೆಗೆ ಇಳಿಯಹತ್ತಿತು….ವಿಮಾನದಿಂದ ಇಳಿದು ನೆಲದ ಮೇಲೆ ಕಾಲಿರಿಸಿದ್ದೇ ತಡ, ಹೊರಗಿನ ಸುಖದಾಯಕ ತಂಪಿನಲ್ಲಿ ಕೂಡ ಬೆವರೊಡೆಯುವಂತೆ ಕ್ಷಣದ ಮಟ್ಟಿಗೆ ನಡುಗಿದ : ಕೈಗೆ ಕೊಟ್ಟ ಪತ್ರವನ್ನು ಓದುವ ಮೊದಲೇ ಹರಿದೊಗೆದದ್ದು ಹೇಡಿತನದ ತಪ್ಪಾಯಿತೇನೋ ಎಂಬ ಅನ್ನಿಸಿಕೆ ಈ ಮೊದಲಿನ ಸುತ್ತುಸುತ್ತಾದ ವಿಚಾರವನ್ನು ಸೀಳಿ ಮೇಲಕ್ಕೆ ಬರಹತ್ತಿತ್ತು. undefined
– ಅಧ್ಯಾಯ ಇಪ್ಪತ್ತೈದು –

ಖೇಮರಾಜಭವನದ ೫೧ನೇ ನಂಬರಿನ ಖೋಲಿಯನ್ನು ಹೋಗುತ್ತಲೇ ತೀರ ಬೇರೆಯೇ ಒಂದು ಜಗತ್ತನ್ನು ಸೇರಿದ ಅನುಭವ. ಪ್ಲೇನಿನ ಮೇಲೆ ಕೊಟ್ಟ ‘ಸ್ನ್ಯಾಕ್ಸ್’ ಹೊಟ್ಟೆ ತುಂಬುವಂತಹವಲ್ಲವಾಗಿದ್ದರೂ ಹಸಿವೆಯನ್ನು ಕಳೆಯಲು ಸಾಕಾಗುವಷ್ಟಿದ್ದವು. ಊಟ ಮಾಡುವ ವಿಚಾರವಿರಲಿಲ್ಲ. ಸೂಟ್‌ಕೇಸ್ ಕೋಣೆಯಲ್ಲಿ ಇಟ್ಟು ಕೆಳಗಿನ ಭೈಯಾನ ದುಖಾನಿನಲ್ಲಿ ಒಂದು ಗ್ಲಾಸು ಮಲಾಯಿ ತೇಲುವ ಬಿಸಿಬಿಸಿ ಹಾಲನ್ನು ಕುಡಿದು ಬಂದರಾಯಿತು ಎಂದುಕೊಂಡು ಹೊರಟ. ನಿಚ್ಚಣಿಕೆಯ ಮೆಟ್ಟಿಲುಗಳನ್ನು ಇಳಿಯುವಾಗ, ತನ್ನ ಒಂಟಿತನದ ತೀವ್ರವಾದ ಅರಿವಿನೊಂದಿಗೇ ಕಳೆದ ಎಂಟು ದಿನಗಳಿಂದ ಅನುಭವಿಸುತ್ತ ಬಂದಿದ್ದರ_ಹಾಸ್ಯಾಸ್ಪದ ಎನ್ನುವಷ್ಟರ ಮಟ್ಟಿಗಿನ_ಅಸಂಬದ್ಧತೆಯ ಅರಿವೂ ಬಂದು ಒಂದು ವಿಚಿತ್ರ ಮೂಡಿಗೆ ಒಳಗಾದ : ಎಷ್ಟೇ ಕ್ಷಣಿಕವಾಗಿರಲೊಲ್ಲದೇಕೆ ಡಾಯನಾ, ಥ್ರೀಟೀಯರ ಸಹವಾಸದಲ್ಲಿದ್ದಾಗ ತನ್ನ ಸೃಜನಶೀಲತೆಯಲ್ಲಿ ಮೊಳೆತೆ ವಿಶ್ವಾಸ ಈಗ ಇದ್ದಕ್ಕಿದ್ದಂತೆ ಒಸರಿಹೋಗಿ ಒಂದು ಬಗೆಯ ಅಸಹಾಯಕತೆಯ ಭಾವನೆ ತಾನೇ ತಾನಾಗಿ ತಲೆಯೆತ್ತಿತು. ನೂರಾರು ಜನರಿಂದ ಗಜಬಜಿಸುವ ಚಾಳಿನಲ್ಲಿ ಯಾರೊಬ್ಬರೊಡನೆ ಜೀವಂತ ಸಂಬಂಧ ಹುಟ್ಟಿಕೊಂಡಿರಲಿಲ್ಲ. ಈ ವಿಶಾಲ ಜನಸಮುದ್ರದಲ್ಲಿ ಪ್ರತಿಯೊಬ್ಬನೂ ತನ್ನಷ್ಟಕ್ಕೇ ಒಂದು ನಡುಗಡ್ಡೆಯಾಗಿದ್ದಾನೆ….

ನಡುವೆಯೇ ಮೊಳೆತ ಒಂದು ವಿಚಾರದಲ್ಲಿ ಪುಲಕಿತನಾದ ; ಕೈ ಗಡಿಯಾರ ನೋಡಿಕೊಂಡ. ಇನ್ನೂ ಹತ್ತೂವರೆ ಗಂಟೆಯಷ್ಟೇ. ಮೇರಿಗೆ ಫೋನ್ ಮಾಡಿದರೆ ಹೇಗೆ ?….ಇಷ್ಟು ರಾತ್ರಿಯ ಹೊತ್ತಿಗೆ ಹುಡುಗಿಯೊಬ್ಬಳಿಗೆ ಫೋನ್ ಮಾಡುವದೆಂದರೆ….ತಪ್ಪು ತಿಳಿದಾರೇ ?….ಯಾರ ಮನೆಯಲ್ಲಿರುತ್ತಾಳೆ ಎಂಬುದೇ ಗೊತ್ತಿಲ್ಲ. ಬಂದ್ರಾ ಖಾರಗಳತ್ತ ಇರಬಹುದೆಂದು ಊಹಿಸಿದ್ದು ಕೂಡ ಅವಳು ಕೊಟ್ಟ ಟೆಲಿಫೋನ್ ನಂಬರಿನ ಮೂಲಕ….ಈಗ ಬೇಡ. ಬೆಳಿಗ್ಗೆ ಏಳರ ಸುಮಾರಿಗೆ ಮಾಡಿದರಾಯಿತು. ಆಫೀಸಿಗೆ ಹೊರಡುವ ಮೊದಲು ಸಿಗಬಹುದು. ಭೈಯಾನಲ್ಲಿ ಹಾಲು ಕುಡಿದು ಬಂದು, ಡ್ರೆಸ್ಸು ಬದಲಿಸಿ ಹಾಸಿಗೆಯಲ್ಲಿ ಅಡ್ಡವಾದದ್ದೇ ರೆಡ್ಡಿ ಕೊಟ್ಟ ಪತ್ರದ ನೆನಪು ಕಾಡಹತ್ತಿತು : ಥತ್ತಿದರ ! ಈ ಶನಿಯು ನಿದ್ದೆ ಮಾಡಲು ಬಿಡುತ್ತದೆಯೋ ಇಲ್ಲವೋ : ಹಾಸಿಗೆಯಿಂದ ಎದ್ದವನೇ ಹಿಂದುಮುಂದಿನ ವಿಚಾರ ಮಾಡುವ ಮೊದಲೇ ಬಾಟಲಿಯಿಂದ ಎರಡು ಬಾರ್ಬಿಚ್ಯುರೇಟ್ ಗುಳಿಗೆಗಳನ್ನು ಹೊರತೆಗೆದು ನುಂಗಿ ನೀರು ಕುಡಿದ….

ಬಾರ್ಬಿಚ್ಯುರೇಟರ್ ಗುಳಿಗೆಗಳು ತರಿಸಿದ ನಿದ್ದೆಯಿಂದ ಎಚ್ಚರವಾಗುವ ಹೊತ್ತಿಗೆ ಬಿಸಿಲು ಚಲೋ ಕಾದಿತ್ತು. ಗಡಿಯಾರ ನೋಡಿದಾಗ ೮-೩೦. Oh !hell ಎಂದು ತನ್ನ ಎಚ್ಚರಗೇಡಿತನವನ್ನು ಶಪಿಸಿಕೊಳ್ಳುತ್ತ, ಹಾಸಿಗೆಯಲ್ಲಿ ಎದ್ದು ಕೂತ : ಮೇರಿ ಇಷ್ಟು ಹೊತ್ತಿಗೆ ಹೊರಟು ಹೋಗಿರಬೇಕು. ಈಗ ಮತ್ತೆ ಫೋನ್ ಮಾಡುವುದು ರಾತ್ರೆ ಎಂಟು ಗಂಟೆಯ ನಂತರವೇ. ಬೆಳಿಗ್ಗೇ ಫೋನ್ ಮಾಡಿ ರಾತ್ರಿಯ ಊಟಕ್ಕೆ ಅವಳನ್ನು ಕರೆಯುವ ವಿಚಾರವಿತ್ತು. ಆಫೀಸಿಗೆ ಫೋನ್ ಮಾಡಿದರೆ ಹೇಗೆ ?….ಮೇರಿಗೆ ಸೇರಲಿಕ್ಕಿಲ್ಲ….

ಕದ ತಟ್ಟಿದ ಸದ್ದು ಕೇಳಿಸಿ ಹಾಸಿಗೆಯಿಂದ ಇಳಿದ. ಗುಳಿಗೆಗಳ ಅಮಲು ಇನ್ನೂ ಪೂರ್ತಿಯಾಗಿ ಕಳೆದಿರಲಿಲ್ಲವಾದ್ದರಿಂದ ನಡೆಯುವಾಗ ಹೆಜ್ಜೆ ತಪ್ಪುತ್ತಿದ್ದ ಅನ್ನಿಸಿಕೆ : ಕದ ತೆರೆದಾಗ ಕಣ್ಣು ಮುಂದೆ ನಂಬಲಾಗದ ಆಕೃತಿ_ಖಂಬಾಟಾ ! “ಹೆಲ್ಲೋ ಹೆಲ್ಲೋ ನೋಶೀರ್, ನೀನು ! ಬಾ ಬಾ ಬಾ. What a surprise early in the morning ! ಬಾ ಕೂತುಕೋ. ಇದೀಗ ಮೋರೆ ತೊಳೆದುಕೊಂಡ್ದು ಬರುತ್ತೇನೆ.” ಎಂದು ಖಂಬಾಟಾಗೆ ಕುರ್ಚಿಯೊಂದನ್ನು ಕೊಟ್ಟು ತಾನು ಮುಖಮಾರ್ಜನೆಗಾಗಿ ಮೋರಿಗೆ ನಡೆದ. ಒದ್ದೆ ಮೋರೆಯನ್ನು ಟವೆಲ್ಲಿನಿಂದ ಒರೆಸಿಕೊಳ್ಳುತ್ತ ಹೊರಗೆ ಬಂದಾಗ, ಖಂಬಾಟಾ ಕಪಾಟುಗಳಲ್ಲಿಯ ಪುಸ್ತಕಗಳನ್ನು ನೋಡುವುದರಲ್ಲಿ ಗರ್ಕನಾಗಿದ್ದ. ಆತನ ಮೋರೆಯಲ್ಲಿ, ಹಿಂದೆಂದೂ ನೋಡಿ ಗೊತ್ತಿರದ_ಅವನ ಅರಮುಳ್ಳು ಮೋರೆಗೆ ಶೋಭಿಸದ_ ಒಂದು ಬಗೆಯ ದರ್ಪ ಹಾಗೂ ಅದರೊಡನೆ ಸೇರಿಕೊಂಡ ಇದೆಂತಹ ದರಿದ್ರ ಜಾಗಕ್ಕೆ ಬಂದಿದ್ದೇನಪ್ಪ ಎಂಬಂತಹ_ತಾತ್ಸಾರ ಮೂಡಿದ್ದವು : ನಾಗಪ್ಪನಲ್ಲಿ ಕೀಟಲೆ ಮಾಡುವ ಹುಕ್ಕಿ ಕೂಡಲೇ ಚುರುಕುಗೊಂಡಿತು : Don”t tell me you are seeing books for the first time in your life…. ನೀನು ಅವುಗಳನ್ನು ನೋಡುತ್ತಿದ್ದ ರೀತಿಗೆ ಹಾಗೆನಿಸಿತು ನೋಡು… ನಿನಗೆ ದಕ್ಕುವ ವಿಷಯವಲ್ಲವದು ನೋಶೀರ್…”ಎಂದ. ಇಲ್ಲಿ ಬರುವ ಮೊದಲೇ ಈ ಭೇಟಿಯ ತಾಲೀಮು ಮಾಡಿ ಬಂದಂತಿದ್ದ ಖಂಬಾಟಾ ಒಮ್ಮೆಲೇ ಸಿಟ್ಟಿಗೆದ್ದು_`Call me Mr. khambata. Don;t forget you are yet under suspension orders.” ಎಂದ ಇದನ್ನು ಕೇಳಿದ್ದೇ ತಡ, ನಾಗಪ್ಪ ಒಮ್ಮೆಲೇ ಬಿದ್ದುಬಿದ್ದು ನಗಹತ್ತಿದ ರೀತಿಗೆ ಖಂಬಾಟಾ ಮನೆಯಲ್ಲಿ ತಾಲೀಮು ಮಾಡಿ ಬಂದ ದರ್ಪ ಸಡಿಲಗೊಳ್ಳಹತ್ತಿತು. ನಾಗಪ್ಪ ನಗುವುದನ್ನು ನಿಲ್ಲಿಸಿದಮೇಲೆ Thank you ಮಿಸ್ಟರ ಖಂಬಾಟಾ. ನೀನು ನನ್ನನ್ನು ಸಸ್ಪೆಂಡ್ ಮಾಡಿದ್ದೀ ಎಂಬುದು ಮರೆತೇಹೋಗಿತ್ತು ನೋಡು. ನೆನಪುಮಾಡಿಕೊಟ್ಟದ್ದು ಒಳ್ಳೆಯದೇ ಆಯಿತು : ಈಗಲೇ ಹೇಳಿರುತ್ತೇನೆ : ನಿನ್ನನ್ನು ಕೋರ್ಟಿಗೆಳೆಯುವವನಿದ್ದೇನೆ…. I will sue you for damages…. ನನ್ನ ವಕೀಲರೇ ನಿನಗೆ ನೋಟೀಸಿನ ಮುಖಾಂತರ ತಿಳಿಸುತ್ತಾರೆ. ಕಾಳಗಿ ಮಾಡಬೇಡ. ಇಷ್ಟೇ. ೬೦,೦೦೦ ರೂಪಾಯಿ ಸಿದ್ಧಮಾಡಿ ಇಡು. ನೀನು ತಪ್ಪು ಕಾರಣ ಕೊಟ್ಟು ಸಸ್ಪೆಂಡ್ ಮಾಡಿ ನನ್ನ ಮನಸ್ಸಿಗೆ ಉಂಟು ಮಾಡಿದ ನೋವಿಗೆ, ಮಾನಹಾನಿಗೆ ನೀನು ತೆರಬೇಕಾಗುವ ದಂಡ ; ನಿನ್ನ ವಕೀಲರೇ ಎಲ್ಲ ತಿಳಿಹೇಳುತ್ತಾರೆ ಆಮೇಲೆ. ಈ ಮೊತ್ತವೇನು ನಿನಗೆ ದೊಡ್ಡದಲ್ಲ ಬಿಡು. ಹೈದರಾಬಾದಿನಲ್ಲಿ ಫಿರೋಜ್ ಹಾಗೂ ನಿನ್ನಂಥಹ ಹಸ್ತಕರು ಕೂಡಿ ಮಾಡಿದ ಕರಾಮತಿಗಳ ಗಳಿಕೆ ಇದರ ಹತ್ತುಪಟ್ಟಾದರೂ ಆದೀತು. ಅಲ್ಲವೇ ?” ಎಂದಾಗ ಖಂಬಾಟಾ ಕೂತಲ್ಲೇ ತೆಳುವಾಗಿ ಬೆವರಹತ್ತಿದ. ನಾಗಪ್ಪನನ್ನು ತಡೆಯುವಂತೆ ಏನಾದರೂ ಮಾತನಾಡೋಣವೆಂದರೆ ತತತ ಪಪಪ ಆಗುವ ಭಯದಿಂದ ಕೆಲಹೊತ್ತು ಬಾಯಿಮುಚ್ಚಿ ಕುರ್ಚಿಯ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದು ಕುಳಿತ. ಆಮೇಲೆ :“ಪ್ಲೀಸ್ ನಾಗ್,”ಎಂದು ಆರಂಭಿಸಿದನಷ್ಟೆ. ನಾಗಪ್ಪ ಅವನನ್ನು ತಡೆದು : “ “ Call me Mr. Nagnath”eMda. Ok. Ok. Mr. Nagnath. The matter is serious. ನಾಳೆಯೇ ತನಿಖೆ ಶುರುವಾಗಲಿದೆ. ಹೈದರಾಬಾದಿನಿಂದ ಇನ್ನಿಬ್ಬರು ಡೈರೆಕ್ಟರರೂ ಬಂದಿದ್ದಾರೆ. ಈ ತನಿಖೆಯ ಸಲುವಾಗಿಯೇ,” ಎಂದು ಖಂಬಾಟಾ ತಿಳಿಸಿದಾಗ, “ಹೌದೇ ? I shall be delighted to meet them and expose the whole of Phiroz’s gang to them.Do you know their names ?” ಎಂದು ಕೇಳಿದ, ನಾಗಪ್ಪ. ಖಂಬಾಟಾ ಕೂತಲ್ಲೇ ದಡಬಡಿಸಿದ : “ಇಲ್ಲ ಇಲ್ಲ. ನಾನು ಅವರನ್ನು ಕಂಡೇ ಇಲ್ಲ. ತಾಜಮಹಲ್ ಹೊಟೆಲ್ಲಿನಲ್ಲಿ ಉಳಿದುಕೊಂಡಿದ್ದಾರೆ ಎಂದು ಫಿರೋಜನಿಂದಲೇ ತಿಳಿಯಿತು, ಅಷ್ಟೇ.”

“ಸುಳ್ಳು ಹೇಳುತ್ತೀಯಾ ಮಿಸ್ಟರ್ ಖಂಬಾಟಾ ? ತನಿಖೆಯ ವಿಷಯ ಮೊತ್ತಮೊದಲು ತಿಳಿಸಿದ್ದೇ ನೀನು. ನಿನಗೇ ಈ ವಿವರಗಳು ಗೊತ್ತಿರದಿದ್ದರೆ ಇನ್ನಾರಿಗೆ ಗೊತ್ತಿರಬೇಕು ? ಚಿಂತೆ ಮಾಡಬೇಡ. ಫಿರೋಜನಿಗೆ ನೀನೇ ಹೇಳು: ತನಿಖೆ ನಡೆಸುವವರ ಹೆಸರು ಗೊತ್ತಾಗದ ಹೊರತು ಅವರು ಕೇಳುವ ಯಾವ ಪ್ರಶ್ನೆಗೂ ಉತ್ತರ ಕೊಡಲಾರೆನೆಂದು. ತನಿಖೆ ಯಾತರ ಬಗ್ಗೆ ಇದೆ ಎಂಬುದಾದರೂ ನಿನಗೆ ಗೊತ್ತಿರಬೇಕು ಅಲ್ಲವೆ ? ಯಾಕೆಂದರೆ ನೀನು ಈ ಕಂಪನಿಯ ಎಡ್ಮಿನಿಸ್ಟ್ರೇಶನ್ ಮ್ಯಾನೇಜರ್ ಅಂತೆ….ಹಾಗೆಂದರೇನೋ ನೋಶೀರ್….ಅಲ್ಲ, ಮಿಸ್ಟರ್ ಖಂಬಾಟಾ ?….”

ಖಂಬಾಟಾನಿಗೆ ನಾಗಪ್ಪ ಹಿಂದೆಂದೂ ಹೀಗೆ ಮಾತನಾಡಿದ್ದು ನೆನಪಿಲ್ಲ. ಚಕಿತನಾದ : ಈ ಏಳೇ ದಿನಗಳಲ್ಲಿ ಇಷ್ಟೊಂದು ಬದಲಿಸಿಹೋಗುವಂತಹ ಪವಾಡ ಏನು ನಡೆದಿರಬಹುದು ? ಕೆಲಸದಿಂದ ದೂರ ಉಳಿದದ್ದೇ ಇದಕ್ಕೆಲ್ಲ ಮೂಲವಾಗಿರಬಹುದೆ ? ಥಕ್ಕಾಗಿ ನಾಗಪ್ಪನ ಆಳ ಎತ್ತರಗಳನ್ನು ಅಳೆಯುವವನಂತೆ ನೋಡುತ್ತ ಕುಳಿತ : ಯಾವಾಗಲೂ ನಮ್ಮನ್ನು ಗಾಢವಾಗಿ ತೊಡಗಿಸಿಕೊಂಡ ಕೆಲಸ ಹುಟ್ಟಿಸುವ ಆಸೆ ಆಮಿಷಗಳಿಂದ ದೂರವಾಗಿದ್ದಾಗ ಹುಟ್ಟುವ ಒಂದು ಬಗೆಯ ತಾತ್ವಿಕ ನಿರ್ಲಿಪ್ತತೆ ತನ್ನಲ್ಲಿಯ ಬದಲಿಗೆ ಕಾರಣವಾಗಿರಬಹುದೆಂಬುದನ್ನು ತಿಳಿಯುವಷ್ಟು ಚುರುಕು ಉಳ್ಲವನಾಗಿ ಕಾಣಲಿಲ್ಲ ಖಂಬಾಟಾ. ಅವನನ್ನು ಕೆಣಕುವ ಹುಕ್ಕಿ ಬಂದು ನಾಗಪ್ಪ ಕೇಳಿದ : “ಯಾಕೆ ? ನಾನು ಇಷ್ಟೊಂದು ಹೇಗೆ ಬದಲಿಸಿಹೋದೆ ಎಂದು ಆಶ್ಚರ್ಯ ಅಲ್ಲವೆ ? ಈ ಬದಲಿನ ಸ್ವರೂಪ ತನಿಖೆಯ ಹೊತ್ತಿಗೆ ಸರಿಯಾಗಿ ಗೊತ್ತಾಗುತ್ತದೆ ಮಿಸ್ಟರ್ ಖಂಬಾಟಾ. ನೀವು ಮಾಡಿದ ಲಫಡಾಗಳನ್ನೆಲ್ಲ ಬಯಲಿಗೆಳೆಯುವಾಗ ನೋಡುವಿಯಂತೆ_ನೀನು ಮತ್ತು ಫಿರೋಜ್ ನಿಮ್ಮ ಅಹಮಿಕೆಯಿಂದ ಮೈಮೇಲೆ ಹಾಕಿಕೊಂಡ ಪೇಚಿನ ನಿಜವಾದ ಸ್ವರೂಪವನ್ನು.”

ಖಂಬಾಟಾನ ಮೋರೆ ಬಣ್ಣ ಕಳೆದುಕೊಳ್ಳಹತ್ತಿತು. ಇನ್ನೂ ಹೆಚ್ಚು ಹೊತ್ತು ಇಲ್ಲಿ ಕುಳಿತರೆ ತಾನು ಹೇಳಲು ಬಂದದ್ದಾದರೂ ಏನೆಂಬುದು ಕೂಡ ಮರೆತೇಹೋದೀತು ಎಂಬ ಭಯವಾಗಿ :
“ನೋಡು ನಾಗನಾಥ್…”
“ಮಿಸ್ಟರ್ ನಾಗನಾಥ್.”
“ಓಕೇ….ಮಿಸ್ಟರ್ ನಾಗನಾಥ್, ನಾನು ಹೇಳಲು ಬಂದದ್ದಿಷ್ಟು : ನಾಳೆ ೧೧ಗಂಟೆಗೆ ಸರಿಯಾಗಿ ತಾಜಮಹಲ್ ಹೊಟೆಲ್ಲಿನ ರೂಮ್ ನಂಬರು ೭೧೭ ರಲ್ಲಿ ತನಿಖೆಯ ಆಯೋಗದ ಇದಿರು ಹಾಜರಾಗಬೇಕು. ನಾನು ಖುದ್ದು ರಿಸೆಪ್ಶನ್ ಕೌಂಟರಿನ ಹತ್ತಿರ ಹತ್ತಕ್ಕೆ ಹತ್ತು ಮಿನಿಟು ಇರುವಾಗ ಬಂದು ನಿನ್ನ ದಾರಿ ಕಾಯುತ್ತೇನೆ… ?”
“ಈ ತನಿಖೆಯ ಬಗ್ಗೆ ಪತ್ರವನ್ನೇನಾದರೂ ತಂದಿದ್ದೀಯಾ ?”
“ಕಂಪನಿಯ ಎಡ್ಮಿನಿಸ್ಟ್ರೇಶನ್ ಮೇನೇಜರ್ ಖುದ್ದಾಗಿ ಬಂದದ್ದು ಸಾಲದೆ ?”
“ಸಾಲದು ಮಿಸ್ಟರ್ ಖಂಬಾಟಾ, ಸಾಲದು. ನನ್ನ ವಕೀಲರು ನನಗೆ ಹಾಗೇ ತಿಳಿಸಿದ್ದಾರೆ. ವಕೀಲರ ಮಾತು ಬಿಡು. ಇದೊಂದು ತತ್ವದ ಪ್ರಶ್ನೆ. ಬರಿಯೆ ಒಬ್ಬ ಮಿಸ್ಟರ್ ಖಂಬಾಟಾನ ಬಾಯಿಮಾತನ್ನು ನಂಬಿ ನಾನು ಈ ತನಿಖೆಯ ಆಯೋಗದ ಮುಂದೆ ಹಾಜರ್ ಆಗಲಾರೆ. ಇದನ್ನು ನೀನು ಆಒಆ ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ತಾಜಮಹಲ್ ಹೊಟೆಲ್ಲಿಗೆ ಹೋಗಲು ಕಾರೂ ಕಳಿಸಬೇಕು. ಕಾರು ಕಳಿಸದೇ ಇದ್ದಲ್ಲಿ ನಾನು ಟ್ಯಾಕ್ಸಿಯಿಂದ ಬರುತ್ತೇನೆಂದು ತಿಳಿಯಬೇಡ.”
ನಾಗಪ್ಪನ ದನಿಯಲ್ಲಿ ಪ್ರಕಟವಾದ ದೃಢನಿಶ್ಚಯವನ್ನು ಗಮನಿಸಿದ ಖಂಬಾಟಾ ತಬ್ಬಿಬ್ಬಾದ. ಹೈದರಾಬಾದಿಗೆ ಫೋನ್ ಮಾಡಿದಾಗಿನ ಇವನ ವರ್ತನೆಯ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ನಿಶ್ಚಯಿಸಿ ಬಂದ ಖಂಬಾಟಾಗೆ ಕೂಡಲೇ ಮಾತನಾಡುವದೇ ಸಾಧ್ಯವಾಗಲಿಲ್ಲ. ಆದರೆ ಸಹಜವಾಗಿ ಸೋಲನ್ನು ಒಪ್ಪಲು ಸಿದ್ಧವಾಗದವನ ಹಾಗೆ :
“ನೋಡು ನಾಗನಾಥ್…”
“ನೋಡು ಮಿಸ್ಟರ್ ಖಂಬಾಟಾ, ನಿನಗೆ ಹತ್ತು ಸರತಿ ಹೇಳಿದ್ದೇನೆ ಮಿಸ್ಟರ್ ಎಂದು ಕರೆಯಲು…”
“ಓಕೇ… ನಾನು…”
“ಬರೇ ಓಕೇ ಸಾಲದು….”
ಖಂಬಾಟಾ ಹತಾಶನಾದ : “ಓಕೇ ಮಿಸ್ಟರ್ ನಾಗನಾಥ್, ತನಿಖೆಯ ಆಯೋಗದ ಮುಂದೆ ಬಂದಾಗ ಗೊತ್ತಾದೀತು ಸನ್ನಿವೇಶ ಎಷ್ಟೊಂದು ಗಂಭೀರವಾಗಿದೆಯೆನ್ನುವುದು…”
“ಬೆದರಿಕೆ ಹಾಕುತ್ತೀಯೇನಪ್ಪಾ, ಮಿಸ್ಟರ್ ಖಂಬಾಟಾ. ‘ಗಂಭೀರ !’ _ ಅದು ನಿನ್ನಂತಹನ ಬಾಯಲ್ಲಿ ಶೋಭಿಸುವ ಶಬ್ದವಲ್ಲ, ಬಿಡು. ಯಾವುದಾದರೂ ಸರ್ಕಸ್ಸಿನಲ್ಲಿ ಕೋಡಂಗಿಯ ಪಾತ್ರವಾಗಿ ಶೋಭಿಸುತ್ತಿದ್ದಿರಿ ನೀವು_ನೀನು ಹಾಗೂ ಥಿouಡಿ goಜ-ಜಿಚಿಣheಡಿ ಮಿಸ್ಟರ್ ಬಂದೂಕವಾಲಾ… ಆದ್ದರಿಂದ ನಿನಗೆ ಹೇಳಬೇಕಾದದ್ದನ್ನು ಸಹಜ ಭಾಷೆಯಲ್ಲೇ ಹೇಳಿಬಿಡು, ನನಗೆ ಅರ್ಥವಾಗುತ್ತದೆ. ನಿನ್ನ ಬಾಯಲ್ಲಿ ಶೋಭಿಸದ ಧಮಕಿಯ ಮಾತು ಬೇಡ. ನಾನು ಕೇಳಿದ ಪತ್ರವನ್ನು ಕಳಿಸಿಕೊಡುತ್ತೀಯಲ್ಲ ? ಕಾರನ್ನೂ ?”
“ಇದು ಶಕ್ಯವೆಂದು ತೋರುವುದಿಲ್ಲ. ಸ್ವತಃ ನಾನೇ ಬಂದು ….”
“ನಿನ್ನನ್ನು ನಂಬುವದಿಲ್ಲ. ನಿನ್ನ ಬಗ್ಗೆ ಆಯೋಗದ ಇದಿರು ನಾನು ಹೇಳಲಿದ್ದುದನ್ನು ಇಲ್ಲೇ ಹೇಳುವಂತೆ ಎಷ್ಟೊಂದು ಚಿತಾಯಿಸಿದರೂ ನಾನು ಹೇಳಲಾರೆ. ವ್ಯರ್ಥ ವೇಳೆಯನ್ನು ಹಾಳುಮಾಡುವುದು ಬೇಡ. ಚೆನ್ನಾಗಿ ನೆನಪಿಡು. ಯಾಕೆಂದರೆ ನಿನ್ನ ಮರೆವಿನ ಪ್ರಕೃತಿ ಇಡೀ ಕಂಪನಿಯಲ್ಲೇ ಪ್ರಖ್ಯಾತವಾದದ್ದು….ತನಿಖೆಗೆ ನಾನು ತಾಜಮಹಲಿನಲ್ಲಿ ಇಂತಹ ಕೋಣೆಯಲ್ಲಿ, ಇಂಥ ದಿನ, ಇಷ್ಟು ಗಂಟೆಗೆ, ಇಂತಿಂತಹರ ಮುಂದೆ ಹಾಜರ್ ಆಗಬೇಕೆಂದು ತಿಳಿಸುವ ಪತ್ರ, ಅಲ್ಲಿಗೆ ಹೋಗಲು ಕಾರು ಇವೆರಡೂ ಬಂದ ಹೊರತು ನಾನು ತನಿಖೆಯ ಅಯೋಗದ ಇದಿರು ಹಾಜರಾಗುವುದು ಶ್ಕ್ಯವೇ ಇಲ್ಲ….”
“ನಮ್ಮ ಯೋಜನೆ ನನ್ನ ಹಿತದ ಸಲುವಾಗಿಯೇ…. ತನಿಖೆಯ ವಿಷಯವನ್ನು ಗುಟ್ಟಾಗಿ ಇಡುವುದು ಅದರ ಉದ್ದೇಶ….. ಕಂಪನಿಯ ತುಂಬ,,,,”
“ಓಹೋಹೋ… ಇಷ್ಟೆಲ್ಲ ಸುಳ್ಳು ಆಡಂಬರ ಬೇಡ… ತನಿಖೆಯ ಗುಟ್ಟಿನ ಜವಾಬ್ದಾರಿ ನನಗೆ ಬಿಡು. ಇನ್ನೊಂದು ಮಾತು : ಒಂದು ವೇಳೆ ನೀನು ನಾನು ಕೇಳಿದ ಪತ್ರ ಹಾಗೂ ಕಾರನ್ನು ಕಳಿಸದೇ ಇದ್ದರೆ ಆ ಕಾರಣಕ್ಕಾಗಿಯೇ ನಾನು ಆಯೋಗದ ಮುಂದೆ ಹಾಜರಾಗಿಲ್ಲ ಎಂದು ಹೇಳುತ್ತೇನೆಂದು ತಿಳಿಯಬೇಡ. ಖಂಬಾಟಾ….ಅಲ್ಲ ಮಿಸ್ಟರ್ ಖಂಬಾಟಾ ಇಲ್ಲಿ ಬಂದಿರಲೇ ಇಲ್ಲ. ನನಗೆ ತನಿಖೆಯ ಸುದ್ದಿ ಮುಟ್ಟಲೇ ಇಲ್ಲ…”
“Oh, no I You are not very serious about this…”
“ I am very serious…. ಪತ್ರವನ್ನು ಕಳಿಸಿಯೂ ಅದರ ಮಜಕೂರು ನಾನು ತಿಳಿಸದ ಹಾಗೆ ಇಲ್ಲದಿದ್ದಲ್ಲಿ ಅಥವಾ ಪತ್ರ ಸರಿಯಾಗಿದ್ದೂ ಕಾರು ಕಳಿಸದೇ ಇದ್ದಲ್ಲಿ ನಾನು ಆಯೋಗದ ಮುಂದೆ ಬರದೇಇರುವುದರ ಕಾರಣ ಮಾತ್ರ ನಿನ್ನನ್ನು ನೇರವಾಗಿ ಒಳಗೊಳ್ಳುತ್ತದೆ : ಮಿಸ್ಟರ್ ಖಂಬಾಟಾ ಬಂದಾಗ ಇದನ್ನೆಲ್ಲ ಒಪ್ಪಿಕೊಂಡಿದ್ದನೆಂದು….”
‘ಇದು ಶುದ್ಧ blackmail,” ಖಂಬಾಟಾ ತಾಳ್ಮೆಗೆಡುವ ಸ್ಥಿತಿಗೆ ಬರಹತ್ತಿದ್ದ.
“ಸಿಟ್ಟಾಗಬೇಡ….ಅದೂ ನಿನಗೆ ಶೋಭಿಸುವಂತಹದಲ್ಲ…. ‘ಬ್ಲಾಕ್‌ಮೇಲ್’ನಲ್ಲಿ ಶುದ್ಧ ಅಶುದ್ಧ ಎಂದು ಎರಡು ಜಾತಿ ಇವೆ ಎಂದು ನನಗೆ ಗೊತ್ತಿರಲಿಲ್ಲ.ನೀವು ನಡೆಸುವ ಈ ತನಿಖೆಯ ತಮಾಷೆ ಯಾವ ಜಾತಿಯ ಬ್ಲ್ಯಾಕ್‌ಮೇಲ್ ?…ಫಿರೋಜನಿಗೆ ಒಂದು ಮಾತನ್ನು ತಪ್ಪದೇ ತಿಳಿಸು_  the whole thing will boomerang on him and his tribe. ರಾಮಕೃಷ್ಣನಿಗೂ ಒಂದು ಕಿವಿಮಾತು_ಭೆಟ್ಟಿಯಾದರೆ ಹೇಳು : ಈ ತನಿಖೆಯಲ್ಲಿ ಅವನ ಹೈದ್ರಾಬಾದೀ ನೀರನ್ನು ಇಳಿಸುವ ಪಣ ತೊಟ್ಟಿದ್ದೇನೆ ಎಂದು : ಹೈದರಾಬಾದಿನಲ್ಲಿ ನಡೆಯಲಿದ್ದ ತನಿಖೆಯನ್ನು ಏಕ್‌ದಮ್ ಮುಂಬಯಿಗೆ ಯಾಕೆ ವರ್ಗಾಯಿಸಿದರು ಎನ್ನುವುದನ್ನು ತಿಳಿಯದಷ್ಟು ಕುಕ್ಕೂಬಾಳನಲ್ಲ ನಾನು. ಬಹುಶಃ ನಿನಗೇ ಗೊತ್ತಿರಲಿಕ್ಕಿಲ್ಲ ಈ ಸ್ಥಳಾಂತರದ ಕಾರಣ….ಓಕೇ ಮಿಸ್ಟರ್ ಖಂಬಾಟಾ. ನನಗೀಗ ನಾಳೆಯ ತನಿಖೆಯ ಬಗ್ಗೆ ವಿಚಾರಮಾಡಬೇಕಾಗಿದೆ…. ಅವಶ್ಯಬಿದ್ದರೆ ವಕೀಲರನ್ನೂ ಕಾಣಬೇಕಾಗಿದೆ. ನಿನಗೂ ಆಫೀಸಿಗೆ ಹೋಗುವ ಅವಸರವಿರಬೇಕು…. ಯಾವುದರ ಬಗೆಗೂ ಅವಸರ ಪಡುವ ಜಾತಿಯಲ್ಲ ಬಿಡು ನಿನ್ನದು. ಆದರೂ….”

ಖಂಬಾಟಾ ಇನ್ನೂ ಕುರ್ಚಿಯಲ್ಲಿ ಕೂತೇ ಇದ್ದ. ನಾಗಪ್ಪ ಅವನನ್ನು ಕೂಡಲೇ ಅಲ್ಲಿಂದ ಹೊತ್ತುಹಾಕುವ ಉದ್ದೇಶವನ್ನು ನಿರ್ಧಾಕ್ಷಿಣ್ಯವಾಗಿ ಪ್ರಕಟಿಸುತ್ತ ಕೈ ಮುಂದೆ ಚಾಚಿದ. ಈ ಅನಿರೀಕ್ಷಿತ ಕ್ರಿಯಯಿಂದ ದಡಬಡಿಸಿ ಕುರ್ಚಿಯಿಂದ ಎದ್ದುನಿಂತ ಖಂಬಾಟಾ ನಿರುಪಾಯನಾಗಿಯೇ ನಾಗಪ್ಪ ಚಾಚಿದ ಕೈಯನ್ನು ಕುಲುಕಿದ :

“ಗುಡ್‌ಬಾಯ್ ಮಿಸ್ಟರ್ ಖಂಬಾಟಾ. ಬೆಳಿಗ್ಗೆ ಎದ್ದದ್ದೇ ನಿನ್ನ ಮುಖ ದರ್ಶನವಾದದ್ದು ಬಹಳ ಬಹಳ ಸಂತೋಷದ ಸಂಗತಿ. ತನಿಖೆಯ ಆಯೋಗದ ಮಂದಿಯ ಮುಸುಡಿಗಳನ್ನೂ ನೋಡಲು ತುಂಬ ಉತ್ಸುಕನಾಗಿದ್ದೇನೆ….ಪತ್ರ ಮತ್ತು ಕಾರಿನ ಬಗ್ಗೆ ಹೇಳಿದ್ದನ್ನು ಮಾತ್ರ ಮರೆಯಬೇಡ….”ಎನ್ನುತ್ತ ಅವನನ್ನು ಬಾಗಿಲವರೆಗೆ ಕಳಿಸಿ ಅವನು ಹೊರಗೆ ಕಾಲಿಟ್ಟ ಕೂಡಲೇ ಕದಗಳನ್ನು ಮುಚ್ಚಿದ ರಭಸ ಬಯಸಿದ್ದಕ್ಕಿಂತ ದೊಡ್ಡದಾದಾಗ ತನ್ನಷ್ಟಕ್ಕೇ ಸುಖವಾಗಿ ನಕ್ಕ. ಒಳಗೆಲ್ಲೋ ಇಷ್ಟು ವರ್ಷ ಉಸಿರುಗಟ್ಟಿ ಬಿದ್ದ ತನ್ನ ಪ್ರಬುದ್ಧತೆ ಈಗ ಒಮ್ಮೆಗೇ ಮುಚ್ಚಿಕೊಂಡ ಬಾಗಿಲುಗಳನ್ನು ತೆರೆದಂಥ ಅನುಭವ. ಅದರ ಹಿಂದೆಯೇ, ತಾನು ಈವರೆಗೂ ಅನುಭವಿಸಿರದ ಪ್ರಚಂಡ ಧೈರ್ಯ ಸ್ಥಾಯಿಯಾಗಲು ಹತ್ತಿದೆ ಎನ್ನುವಂಥ ಅನ್ನಿಸಿಕೆಯಿಂದಲೂ ಸುಖವೆನಿಸಿತು : ನಿನ್ನೆ, ಆ ರೆಡ್ಡಿ ಕೊಟ್ಟ ಪತ್ರವನ್ನು ಹರಿದೊಗೆಯಬಾರದಿತ್ತೇನೋ. ತನಿಖೆಯ ವೇಳೆಗೆ ಉಪಯೋಗಕ್ಕೆ ಬೀಳುತ್ತಿತ್ತೇನೋ ಎಂದು ಅನ್ನಿಸಿದರೂ ಆ ಅನ್ನಿಸಿಕೆಯಲ್ಲೀಗ ತನ್ನ ಕೃತ್ಯದ ಬಗೆಗೆ ಖೇದವಿರಲಿಲ್ಲ : ಅವರಿವರು ಕೊಟ್ಟ ವರದಿ ತನಗೆ ಬೇಡ. ಇಷ್ಟು ವರ್ಷ ನಿಷ್ಕಾರಣವಾಗಿ ತನ್ನೊಡನೆ ಹಗೆಕಾಯುತ್ತ ಬಂದ ಫಿರೋಜನ ಕ್ರೌರ್ಯದ ಅರ್ಥ ತಿಳಿಯಬೇಕಾಗಿದೆ. ಅದಕ್ಕೆ ಖುದ್ದು ತನ್ನ ಅನುಭವಕ್ಕೆ ಬಂದ ಸಂಗತಿಗಳೇ ಸಾಕು….

ತನಿಖೆಯ ಆಯೋಗದವರನ್ನು ಕಾಣಲು ತಾನು ನಿಜಕ್ಕೂ ತುಂಬ ಉತ್ಸುಕನಾಗಿದ್ದೇನೆ ಎಂಬಂತಹ ಭಾವನೆಯಿಂದ ಬಹಳ ಖುಶಿಪಟ್ಟ. ಆ ಖುಶಿಯಲ್ಲಿರುವಾಗಲೇ _ ಹೌದು, ಸಂಜೆ ಮೇರಿಗೆ ಫೋನ್ ಮಾಡಬೇಕು. ಹುಡುಗಿಯ ಸಿಹಿಯಾದ ದನಿ ಕೇಳುವುದರಿಂದಲೇ ಸುಖವೆನ್ನಿಸೀತು : ಡಾಯನಾ, ಥ್ರೀಟೀಯರ ಭೇಟಿಗಳ ಬಗ್ಗೆ, ಹೈದರಾಬಾದಿನಲ್ಲಿ, ಇದೀಗ ಈ ಕೋಣೆಯಲ್ಲಿ ನಡೆದದ್ದರ ವಿಚಾರಗಳನ್ನು ಕೊಡಬೇಕು_ಮೆಚ್ಚಿಕೊಂಡಾಳು ಹುಡುಗಿ, ಎಂದುಕೊಂಡ. ತನಗೆ ಅರಿವಿಲ್ಲದೇನೇ ತಾನು ಮೇರಿಯನ್ನು ಪ್ರೀತಿಸುತ್ತಿದ್ದೆ ಎನ್ನುವುದನ್ನು ಈಗ ತನ್ನಷ್ಟಕ್ಕೇ ಸ್ಪಷ್ಟವಾಗಿ ಒಪ್ಪಿಕೊಂಡಾಗ ಹುಟ್ಟಿದ ಭಾವನೆಯಿಂದ ಪ್ರಸನ್ನನಾಗಿ ಕಿಡಕಿಗೆ ಬಂದು, ಹತ್ತು ಗಂಟೆಯ ಬಿಸಿಲಲ್ಲಿ ಬೆಚ್ಚಗೆ ಮೈ ಕಾಯಿಸುತ್ತ ನಿಂತ ತನ್ನ ಪ್ರೀತಿಯ ಅಶ್ವಥ್ಥವನ್ನ ನೋಡುತ್ತ ಮೈಮರೆತ. undefined
– ಭಾಗ : ನಾಲ್ಕು –
– ಅಧ್ಯಾಯ ಇಪ್ಪತ್ತಾರು –

ಇಡೀ ದಿನ ಅತ್ಯಂತ ಉತ್ಸುಕತೆಯಿಂದ. ಇದಿರು ನೋಡಿದ ಎಂಟು ಗಂಟೆಯಾದದ್ದೇ ತಡ. ಕೆಳಗೆ ಹೋಗಿ ಇರಾಣೀ ಅಂಗಡಿಯಿಂದ ಮೇರಿಗೆ ಫೋನ್ ಮಾಡಲೆಂದು ಅತ್ತ ಕಡೆಗೆ ಹೆಜ್ಜೆ ಇಡುತ್ತಿರುವಾಗ ಹೃದಯ ಬಡಿದುಕೊಳ್ಳಹತ್ತಿತು. ಕಿವಿಗಳೆರಡೂ ಬೆಚ್ಚಗಾಗಹತ್ತಿದವು. ತನಗೆ ಅವಳ ಬಗ್ಗೆ ಅನ್ನಿಸುತ್ತಿದ್ದ ಮೃದುಭಾವನೆಯನ್ನು ವ್ಯಕ್ತಪಡಿಸುವಾಗ ಬರೇ ಮೇರಿ ಎಂದರೆ ಸಾಕೆ ? ಅಥವಾ….ಆಚಿಡಿಟiಟಿg ಇಲ್ಲವೇ sತಿeeಣheಚಿಡಿಣ ಎಂದು ಸಂಬೋಧಿಸಬೇಕೆ ?….ಗೊಂದಲಿಸಿದ. ಇರಾಣೀ ಅಂಗಡಿಯಲ್ಲಿಯ ಫೋನ್ ಕೆಟ್ಟಿತ್ತು. ಇನ್ನೊಂದು ಫೋನು ಆರನೇ ಗಲ್ಲಿಯಲ್ಲಿಯ ತುದಿಯಲ್ಲಿತ್ತು. ಮೇರಿಗೆ ಮೊದಲ ಬಾರಿ ಫೋನ್ ಮಾಡಿದಾಗ ಅಲ್ಲಿಂದಲೇ ಮಾಡಿದ್ದು….ಫೋನ್ ಕೆಟ್ಟದ್ದರಿಂದ ಯಾವುದೇ ರೀತಿಯ ನಿರಾಶಾಭಾವಕ್ಕೆ ಒಳಗಾಗದೇ ನಡೆಯುತ್ತ, ಕಮ್ಯುನಿಸ್ಟ್ ಪಕ್ಷದ ಆಫೀಸಿನ ಹತ್ತಿರದ ಫೋನ್ ಬೂಥಿಗೆ ಬಂದ. ಕಿಸೆಯೊಳಗಿಂದ ನಾಣ್ಯಗಳನ್ನು ಹೊರತೆಗೆಯುವಾಗ : ಫೋನ್ ಎತ್ತಿಕೊಂಡವಳು ಮೇರಿ ಅಲ್ಲದೇ ಇನ್ನು ಯಾರಾದರೂ ಆದರೆ ? ಎಂಬ ವಿಚಾರ ಹೊಳೆದಾಗ ಗೊಂದಲಿಸಲಿಲ್ಲ. ರಿಸೀವರ್ ಎತ್ತಿದಾಗ ಡಾಯಲ್‌ಟೋನ್ ಸರಿಯಾಗಿ ಕೇಳಿಸುತ್ತಿತ್ತು. ಫೋನ್ ಕೆಟ್ಟಿಲ್ಲ ಎಂಬುದು ತಿಳಿದಾಗ ಧೈರ್ಯ ಬಂದಿತು. ಟೆಲಿಫೋನ್ ಯಂತ್ರದಲ್ಲಿ ನಾಣ್ಯಗಳನ್ನು ಹಾಕುವ ತೂತಿನ ಹತ್ತಿರ ನಾಣ್ಯಗಳನ್ನಿಟ್ಟು ನಂಬರ್ ಡಾಯಲ್ ಮಾಡಿದ. ಆ ತುದಿಯಿಂದ ಕೇಳಿಸಿದ ‘ಹೆಲ್ಲೋ’_ ಹೆಣ್ಣುದನಿಯಾಗಿತ್ತು. ಲಗುಬಗೆಯಿಂದ ಹತ್ತು ಪೈಸೆಯ ಮೂರು ನಾಣ್ಯಗಳನ್ನು ತೂತಿನಲ್ಲಿ ಹಾಕಿ_ “ಊeಟಟo, is ಣhಚಿಣ ಒeಡಿಥಿ ?” ಎಂದು ಕೇಳಿದಾಗ ಬಂದ ಉತ್ತರದಿಂದ ನಿರಾಶೆಯಾಯಿತು : “ಮೇರೀ ಮನೆಯಲ್ಲಿಲ್ಲ. ಒಂದು ಪಾರ್ಟಿಗೆ ಹೋಗಿದ್ದಾಳೆ.”
“Is that Diana ?”
“ No, I am her youngar sister. ಮಾತನಾಡುತ್ತಿದ್ದವರು ಯಾರೆಂದು ತಿಳಿಯಬಹುದೇ, ಸರ್ ?”
ದನಿ, ಪ್ರಶ್ನೆ ಕೇಳಿದ ರೀತಿ ತುಂಬ ಮೆಚ್ಚಿಕೆಯಾದವು. ನಾಗಪ್ಪ ತನ್ನ ಹೆಸರನ್ನು ಹೇಳಿದಾಗ, ಅವನ ಪರಿಚಯ ಇದ್ದವಳ ಹಾಗೆ,
“Good evening, Mr. Nagnath, ಮೇರಿ ಹಾಗೂ ಡಾಯನಾ_ಇಬ್ಬರೂ ಒಂದು ಪಾರ್ಟಿಗೆ ಹೋಗಿದ್ದಾರೆ. ತಿರುಗಿ ಬರಲು ತುಂಬ ರಾತ್ರಿಯಾಗಬಹುದು. ನೀವು ಹೈದರಾಬಾದಿನಿಂದ ಯಾವಾಗ ಬಂದಿರಿ ? ಡಾಯನಾ ಮೊನ್ನೆ ನಿಮ್ಮ ಬಗ್ಗೆ ತುಂಬ ಮಾತನಾಡಿದಳು.”
“All good things, I hope. May I know your sweet name ?”
“My name is Zarin, but it is not sweet.”
“ You are sweet_you naughty one…. ಮೇರಿಗೆ ಹೇಳು ನಾನು ಫೋನ್ ಮಾಡಿದ್ದೆನೆಂದು…. ಪಾರ್ಟಿ ಎಲ್ಲಿದೆಯೆಂದು ಗೊತ್ತೆ ?”
“ತಾಜ್‌ಮಹಲ್ ಹೊಟೆಲ್ಲಿನಲ್ಲೆಂದು ತೋರುತ್ತದೆ” ಎಂದಾಗ ಎದೆ ಒಂದು ಬಡಿತವನ್ನು ಮರೆತ ಭಾಸ : ಫಿರೋಜ್ ಕೊಡುತ್ತಿರಬಹುದೇ ಎಂಬ ಸಂಶಯ ತಲೆಯಲ್ಲಿ ತೂಗುತ್ತಿರುವ ಹೊತ್ತಿಗೆ ಝರೀನ್ ಎಂದಳು : “ಮೇರಿಯ ಆಫೀಸಿನ ಗೆಳೆಯರಾರೋ ಕೊಡುತ್ತಿರಬೇಕು_ಪಾರ್ಟಿಯನ್ನು. ಬರುವಾಗ ಜತೆಗೆ ಯಾರಾದರೂ ಇರಲಿ ಎಂದು ಡಾಯನಾಳನ್ನೂ ಕರೆದುಕೊಂಡು ಹೋಗಿದ್ದಾಳೆ….” ಎಂದಾಗ ಕೈಕಾಲು ಸೋತುಬರುತ್ತಿರುವ ಅನುಭವ ಝರೀನ್‌ಗೆ ಗುಡ್‌ಬಾಯ್ ಅಂದಾಗಿನ ದನಿಯ ಪರಿಚಯ ಅವಳಿಗೆ ಸಿಕ್ಕಿರಲಾರದು….ಮುಂದಿನದೆಲ್ಲ ಕನಸಿನ ಲೋಕದಲ್ಲಿ ನಡೆದದ್ದೆಂಬಂತೆ : ‘ಷೇರ್-ಏ-ಪಂಜಾಬ್’ಗೆ ಹೋದದ್ದು ನೆನಪಿದೆ : ಆದರೆ ಏನು ಉಂಡೆನೆಂಬುದು ನೆನಪಿಲ್ಲ. ಖೇಮರಾಜಭವನವನ್ನು ಸೇರಿದ್ದು ನೆನಪಿದೆ : ಬಾಗಿಲಲ್ಲೇ ಭೆಟ್ಟಿಯಾದ ಅರ್ಜುನ್‌ರಾವರೊಡನೆ ಏನು ಮಾತನಾಡಿದೆನೆಂಬುದು ನೆನಪಿಲ್ಲ. ಹಾಸಿಗೆ ಸೇರುವ ಮೊದಲು ಬಾರ್ಬಿಚ್ಯುರೇಟರ್ ಗುಳಿಗೆಗಳನ್ನು ಸೇವಿಸಿದ್ದು ನೆನಪಿದೆ : ಎಷ್ಟು ಎಂಬುದು ನೆನಪಿಲ್ಲ. ಬಾರ್ಬಿಚ್ಯುರೇಟ್ ಗುಳಿಗೆಗಳ ಡೋಜು ಬಯಸಿದ್ದಕ್ಕಿಂತ ದೊಡ್ಡದಾಗಿತ್ತು ಎನ್ನುವುದು ಗೊತ್ತಾದದ್ದು ಬೆಳಿಗ್ಗೆ ಹಾಸಿಗೆಯಿಂದ ಏಳುವ ಪ್ರಯತ್ನ ಮಾಡಿದಾಗ, ಹೊರಗೆ ಹೊತ್ತು ಚಲೋ ಏರಿರಬೇಕು : ಕಣ್ಣುಬಿಚ್ಚಿ ನೋಡಲು ಆಗುತ್ತಿರಲಿಲ್ಲವಾದರೂ ಮೈಗೆ ಬಿಸಿ ತಾಕುತ್ತಿತ್ತು. ಬಾರ್ಬಿಚ್ಯುರೇಟರ್ ಗುಳಿಗೆಗಳನ್ನು ನುಂಗಬೇಕಾಗಿ ಬಂದ ಸನ್ನಿವೇಶ ಕೂಡ ನೆನಪಾಗುತ್ತಿಲ್ಲ. ಕೆಲಹೊತ್ತು ಹಾಗೆ ಬಿದ್ದೇ ಉಳಿದ. ಆಮೇಲೆ, ಮೈ ಸ್ವಲ್ಪ ಸಡಿಲಗೊಂಡು ಕಣ್ಣು ತೆರೆಯುವದು ಸಾಧ್ಯವಾದಾಗ ಕೈಗಡಿಯಾರ ನೋಡಿಕೊಂಡರೆ_ಮದ್ಯಾಹ್ನದ ಒಂದು ಗಂಟೆ ! ನಂಬದಾದ. ಕಣ್ಣು ಇನ್ನೊಮ್ಮೆ ತಿಕ್ಕಿ ನೋಡಿದ. ಗಡಿಯಾರ ನಿಂತು ಹೋಗಿರಬಹುದೆ ? ಕಿವಿ ಹಚ್ಚಿ ನೋಡಿದ. ಪರಿಸರದ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡು, ಹೀಗೆ ಮಲಗಿದ್ದರ ಪರಿಣಾಮದ ಅರಿವು ದೊಡ್ಡ ಆಘಾತದ ಬಲದಿಂದ ಮೂಡಿದಾಗ ಧಡಕ್ಕನೆ ಹಾಸಿಗೆಯಿಂದ ಎದ್ದ ರಭಸಕ್ಕೆ ಜೋಲಿ ತಪ್ಪಿ ಮುಗ್ಗರಿಸಿ ಬಿದ್ದು ತಲೆ ಮೋರಿಯ ಚಿಕ್ಕ ಗೋಡೆಗೆ ಅಪ್ಪಳಿಸಬೇಕು : ಪುಣ್ಯವಶಾತ್ ಕೈ ಮುಂದೆ ಚಾಚಿದ್ದರಿಂದ ಎಡ ಅಂಗೈ ಗೋಡೆಗೆ ಊರಿ ಅದನ್ನು ತಪ್ಪಿಸಿತು. ಮುಗ್ಗರಿಕೆಯ ಆಘಾತವನ್ನು ತಡೆಯುವಾಗ ಆದ ನೋವಿನಿಂದ ಮಾತ್ರ ನರಳುವಂತಾಗಿ ನಿದ್ದೆ ತಿಳಿದು ಎಚ್ಚರವೂ ಬಂದಿತ್ತು.

ಅವಸರ ಅವಸರವಾಗಿ ಹಲ್ಲು ತಿಕ್ಕಿ, ಮೋರೆ ತೊಳೆದು, ಇಡೀ ಗ್ಲಾಸು ತುಂಬ ಮಣ್ಣಿನ ಹೂಜೆಯೊಳಗಿನ ತಂಪು ನೀರನ್ನು ಕುಡಿದು, ಪ್ಯಾಂಟು, ಷರ್ಟ್ ಹಾಕಿಕೊಂಡು ಚಪ್ಪಲಿ ಮೆಟ್ಟಿದವನೇ ಸೀದ ಅರ್ಜುನರಾವ್‌ರ ಮನೆಗೆ ನಡೆದ. ಅರ್ಜುನರಾವ್ ಮದಾಹ್ನದ ಊಟಕ್ಕೆ ಮನೆಗೆ ಬರುತ್ತಿದ್ದದ್ದು ಕ್ವಚಿತ್ತಾಗಿ, ಇನ್ನೂ ಬಂದಿರಲಿಲ್ಲ. ಕೆದರಿದ ಕೂದಲು, ಕ್ಷೌರ ಮಾಡಿಕೊಂಡಿರದ ಕಾರಣ ಸಣ್ಣಗೆ ಕೂದಲು ಚಿಗುರಿ ಕಪ್ಪುಗಟ್ಟಿದ ಮೋರೆ, ಭಯಗ್ರಸ್ತ ಕಣ್ಣುಗಳು : ಕದ ತೆರೆದು ಹೊರಗೆ ಬಂದ ಅರ್ಜುನರಾವರ ಮುದಿತಾಯಿ ಇವನನ್ನು ನೋಡಿ_“ಅರೆ ! ಇದೇಕೆ ಹೀಗಾಗಿದ್ದೀ ? ಮೈಯಲ್ಲಿ ಹುಷಾರಿಲ್ಲವೆ ? ಬಾ ಬಾ, ಒಳಗೆ ಬಾ. ” ಎಂದಾಗ ಇವನು ಇನ್ನಷ್ಟು ಗಾಬರಿಯಾದ : “ಇಲ್ಲಜ್ಜೀ, ೯ರ ಸುಮಾರಿಗೆ ಅಫೀಸಿನ ಜನ ನನ್ನನ್ನು ಭೆಟ್ಟಿಯಾಗಲು ಬರುವವರಿದ್ದರು.ನಿನ್ನೆ ಇಡೀ ರಾತ್ರಿ ಬರೆಯುತ್ತ ಕೂತದ್ದರಿಂದ ಬೆಳಗಿನ ಜಾವಕ್ಕೆ ಗಾಢನಿದ್ದೆ ಹತ್ತಿಬಿಟ್ಟಿತ್ತು. ಅವರು ಬಂದು ಕದ ತಟ್ಟಿ ಹೋದರೋ ಏನೋ ಎಂದು…ಮಗ್ಗುಲುಮನೆಯವರನ್ನು ಸ್ವಲ್ಪ ಕೇಳಿ ನೋಡುತ್ತೀರಾ ?” ಇವನು ಮಗ್ಗುಲುಮನೆಯ ಹೆಂಗಸಿನೊಡನೆ ಮಾತನಾಡುವದಿಲ್ಲ ಎಂಬುದು ಲಕ್ಷ್ಯಕ್ಕೆ ಬಂದು ಒಳಗೊಳಗೇ ನಗು ಬಂದರೂ, ಇವನ ಗಾಬರಿ ತುಂಬಿದ ಮೋರೆ ನೋಡಿ ಅದನ್ನು ಹತ್ತಿಕ್ಕಿ, ಒಳಗಿನ ಕೋಣೆಯ ಬಾಗಿಲಲ್ಲಿ ನಿಂತು ಇದನ್ನೆಲ್ಲ ಆಲಿಸುತ್ತಿದ್ದ ಸೊಸೆಯನ್ನು ‘ಲಕ್ಷ್ಮೀ’ ಎಂದು ಹೆಸರು ಹಿಡಿದು ಕರೆದದ್ದೇ ತಡ, ಅವಳು, ತನ್ನನ್ನು ಕರೆದದ್ದರ ಅರ್ಥವಾಯಿತೆನ್ನುವಂತೆ ಹೊರಗೆ ನಡೆದು ಲಗುಬಗೆಯಿಂದ ನಾಗಪ್ಪನ ಕೋಣೆಯ ಕಡೆಗೆ ಹೆಜ್ಜೆ ಇಟ್ಟಳು. ಮಗ್ಗುಲು ಮನೆಯ ಹೆಂಗಸು ಕೊಡುವ ಉತ್ತರವನ್ನು ಖುದ್ದಾಗಿ ಕೇಳುವ ಕಾತರದಿಂದ ಅವಳನ್ನು ಹಿಂಬಾಲಿಸಿದ. ಹೆಂಗಸು ಇವನೊಡನೆ ಹಿಂದೆ ನಡೆದ ಪ್ರಸಂಗವನ್ನು ಪೂರ್ತಿಯಾಗಿ ಮರೆತವಳ ಹಾಗೆ_“ಇಲ್ಲ, ಯಾರೂ ಬಂದಿರಲಿಲ್ಲ. ನಾನು ಬೆಳಗ್ಗಿನಿಂದಲೂ ಇಲ್ಲೇ ಇದ್ದೇನೆ.”ಎಂದು ಆಶ್ವಾಸನವಿತ್ತಳು. ಇನ್ನೂ ಪೂರ್ಣ ಕಳೆದಿರದ ಬಾರ್ಬಿಚ್ಯುರೇಟ್ ಗುಳಿಗೆಗಳ ಅಮಲಿನಿಂದ ತುಂಬ ಭಾವುಕವಾದ ಮನಸ್ಸಿಗೆ ಈ ಮಾತುಗಳು ಎಷ್ಟೊಂದು ಸುಖ ಕೊಟ್ಟವೆಂದರೆ ಕೈ ಮುಗಿದು ಥೆಂಕ್ಸ್ ಎನ್ನುವಾಗ ಕೊರಳು ಬಿಗಿದುಕೊಂಡಿತು.

ಇನ್ನೂ ಹೆಚ್ಚು ಹೊತ್ತು ಅಲ್ಲಿ ನಿಂತರೆ ಕಣ್ಣುಗಳಲ್ಲಿ ನೀರು ಕಲೆಯ ಹತ್ತಿದ್ದನ್ನು ಅವರು ಕಂಡಾರು ಎಂಬ ಭಯವಾಗಿ ಕೂಡಲೇ ಅಲ್ಲಿಂದ ಕಾಲು ಕಿತ್ತು ಕೋಣೆ ಸೇರಿ ಕದ ಮುಚ್ಚಿಕೊಂಡ. ಕಿಡಕಿಯ ಬಳಿಯ ಆರಾಮಕುರ್ಚಿಯೊಂದರಲ್ಲಿ ಕುಕ್ಕರಿಸಿದ. ಅಮ್ಮ ಕಣ್ಣು ಮುಂದೆ ನಿಂತಂತಾಗಿ, ಸಣ್ಣ ಮಗುವಿನಂತೆ ಅತ್ತುಬಿಟ್ಟ : ಈ ಸರಿತಿ ನೆನಪಿನಲ್ಲಿ ಹುಟ್ಟಿಬಂದದ್ದು ಹಿಂದೆಂದೂ ಮೂಡಿರದ ದೃಶ್ಯ. ಆದರೆ ಎಲ್ಲವೂ ಮಸಕುಮಸಕಾದಂತೆ, ಅನೇಕ ಚಿತ್ರಗಳು ಏಕಕಾಲಕ್ಕೆ ಒಂದರಮೇಲೊಂದು ಏರಿ ಕೂತ ರೀತಿ, ಗಜಿಬಿಜಿ : ಮೂರು ಸಂಜೆಯ ಹೊತ್ತಿಗೆ ಅಮ್ಮ ಹಿಂದಿನ ಹಿತ್ತಲಲ್ಲಿಯ ಕೋಳೀಗಿರಿಯಣ್ಣನ ಮನೆಗೆ ಹೋದದ್ದೂ ; ಹಿಂತಿರುಗಿ ಬರುವಾಗ ಹಿತ್ತಲ ಪಾಗಾರ ಹತ್ತಿ ಇಳಿಯುವಾಗ ಮುಗ್ಗರಿಸಿ ಬೀಳುವಂತಾದದ್ದು ; ಮೋರೆಯ ಮೇಲೆ ನೋವು. ಯಾರೂ ಕಂಡಿಲ್ಲ ತಾನೇ ? ಎನ್ನುವಂತಹ ಭಯ. ತನಗಾಗ ಆರು ವರ್ಷದ ವಯಸ್ಸಿರಬೇಕು. ಅಮ್ಮ ಆ ಹೊತ್ತಿಗೆ ಶೂದ್ರರ ಕೇರಿಗೆ ಹೋದದ್ದು ಗಿರಿಯಣ್ಣನ ಹೆಂಡತಿಯಿಂದ ಅಕ್ಕಿಯನ್ನು ಬೇಡಿ ತರುವ ಉದ್ದೇಶದಿಂದ ಇರಬೇಕು. ತಮ್ಮ ಜಾತಿಯವರಿಗಿಂತ ಹೆಚ್ಚಾಗಿ ಗಿರಿಯಣ್ಣನ ಹೆಂಡತಿಯಿಂದ ಅಡಚಣೆಯ ವೇಳಿಗೆ ಸಹಾಯ ಪಡೆಯುತ್ತಿದ್ದಳು. ಆದರೆ ಎಲ್ಲ ವ್ಯವಹಾರ ಕದ್ದು ಮುಚ್ಚಿ ಹೀಗೆ ಕತ್ತಲೆ ಕವಿಯುವ ಹೊತ್ತಿಗೆ ! ಮರುಗಳಿಗೆ ಅಪ್ಪನ ನೋವು ತುಂಬಿದ ಮೋರೆ….ಬಾವಿಯಿಂದ ನೀರು ಸೇದುವಾಗ ಅಮ್ಮನ ಜೊತೆ ಗುಜುಗುಜು ಮಾತನಾಡುತ್ತಿದ್ದುದರ ಚಿತ್ರ ಕಣ್ಣಮುಂದೆ : ಅಪ್ಪ ಅಂಗಡಿಯಿಂದ ಓಡೋಡಿ ಬಂದಂತೆ ಬಂದಿದ್ದ. ಅಮ್ಮ ಬಾವಿಯ ಬಳಿ ಇದ್ದದ್ದನ್ನು ಕಂಡು ಅವಳನ್ನು ಅಲ್ಲೇ ಸಂಧಿಸಿದ್ದ. ಇಬ್ಬರ ಮೋರೆಯ ಮೇಲೂ ಆಮೇಲೆ ಕಂಡ ಕಳವಳ ತಾನು ಈವರೆಗೂ ಕಂಡಿರದ ಅಣ್ಣನನ್ನು ಕುರಿತದ್ದಾಗಿತ್ತು ಎಂಬ ಅನ್ನಿಸಿಕೆ : ಆಗ ಮಾತಿನಲ್ಲಿ ಒಡೆದಿರದ ನಿಗೂಢತೆಯನ್ನು ಇನ್ನೂ ಹೊಟ್ಟೆಯೊಳಗೇ ಇಟ್ಟುಕೊಂಡ ಚಿತ್ರಗಳು ಕಣ್ಣಮುಂದೆ ನಿಂತಂತಾಗಿ ಹುಟ್ಟುತ್ತಿದ್ದ ಭಾವನೆಗಳು ಈಗಲೂ ಮಾತಿನ ತೆಕ್ಕೆಗೆ ಒಳಗಾಗುತ್ತಿರಲಿಲ್ಲ.

ಹೊಟ್ಟೆ ಅತೀವ ಹಸಿದಿತ್ತು. ಹೊಟೆಲ್ಲಿಗೆ ಹೋಗೋಣವೆಂದರೆ ದಾಡಿ ಮಾಡಿಕೊಳ್ಳಬೇಕು ; ಸ್ನಾನವಾಗಬೇಕು, ಸ್ನಾನ ಊಟಗಳ ನೆನಪಿನೊಂದಿಗೇ ಮೂಡಿತ್ತು ಅರಿವು : ಕೊನೆಗೂ ಖಂಬಾಟಾ ತಾನು ಕೇಳಿದ ಪತ್ರ ಹಾಗೂ ಕಾರು ಕಳಿಸಲಿಲ್ಲ. ತನ್ನ ಮಾತನ್ನು ಆತ ಸೀರಿಯಸ್ಸಾಗಿ ತೆಗೆದುಕೊಂಡಿರಲಿಕ್ಕೇ ಇಲ್ಲ. ಅಥವಾ….ಕದ ಬಡೆದ ಸದ್ದು ಕೇಳಿಸಿ ಕದ ತೆರೆದ : ಮಗ್ಗುಲುಮನೆಯ ಯಜಮಾನ ! ಪೈಜಾಮಾ, ಉದ್ದ ತೋಳುಗಳಿದ್ದ ಕಾಲರ್ ಇಲ್ಲದ ಬಿಳಿಯ ಅಂಗಿ ; ತಲೆಗೆ ಯಾವಾಗಲೂ ತಲೆಗಿಂತ ಸ್ದಣ್ಣದಾದ ಕರಿಯ ಟೊಪ್ಪಿಗೆ_ಈಗಷ್ಟೇ ತೆಗೆದಿಟ್ಟುಬಂದಿರಬೇಕು : ಹಣೆಯ ಮೇಲೆ ಬಿಗಿಯಾದ ಟೊಪ್ಪಿಗೆ ಮೂಡಿಸಿದ ಗೆರೆ ! ಪೆದ್ದನಂತೆ ಕೈಮುಗಿದು ಹಲ್ಲು ತೋರಿಸಿ ನಕ್ಕ. ನಾಗಪ್ಪ ಹೈದರಾಬಾದಿಗೆ ಹೋದಮೇಲೆ ಇಲ್ಲಿ ನಿಲ್ಲಲು ಬಂದ ಜೋಡಿ ಇದು. ಕಳೆದ ಏಳೆಂಟು ತಿಂಗಳಲ್ಲಿ ಈತನನ್ನು ಆಗೀಗ ನೋಡಿದ್ದೇನೇ ಹೊರತು ಮಾತನಾಡಿಸಿರಲಿಲ್ಲ. ಹೆಂಡತಿ ಒಮ್ಮೆ ಮಾತನಾಡಿಸಿದಾಗ ಸಿಟ್ಟಿನಿಂದ ಉತ್ತರ ಕೊಟ್ಟಿದ್ದ.
“ನಾನು ಮಗ್ಗುಲು ಮನೆಯ ಧೋಂಡೋಬಾ ಶಿಂಫೀ. ನಿಮಗೆ ಮೈಯಲ್ಲಿ ಹುಷಾರಿಲ್ಲವಂತೆ, ನಿಮ್ಮ ಊಟವಾಗಿರಲಿಕ್ಕಿಲ್ಲ ; ನಮ್ಮಲ್ಲೇ ಮಾಡಬಹುದಿತ್ತು….”
ನಾಅಪ್ಪ ತನ್ನ ಕಿವಿಗಳನ್ನು ತಾನೇ ನಂಬದಾದ. ಆಶ್ಚರ್ಯಚ್ಕಿತನಾಗಿ ನೋಡುತ್ತ ನಿಂತ.
“ಎಲ್ಲ ತಯಾರಾಗಿದೆ. ಇವಳೇ ನಿಮ್ಮನ್ನು ಊಟಕ್ಕೆ ಕರೆಯುವಂತೆ ಸೂಚಿಸಿದಳು. ಬಂದರೆ ನಾನ ಜತೆಗೇ….”

*****

Add Comment

Required fields are marked *. Your email address will not be published.