ಶಾಮಣ್ಣ – ೨

೧೦೧
ಯಶಸ್ವಿಯಾದ ಮಗಳನ್ನು ಯಾವ ಭಾವನೆಗಳಿಂದ ಅಭಿನಂದಿಸುವುದು! ಇಷ್ಟೊಂದು ಜಾಣ ಮಗಳು ತಾನು ಪ್ರೀತಿಸಿದವನನ್ನು ಕೈಹಿಡಿದರೆ ಅದಕ್ಕಿಂತ ಮಿಗಿಲಾದ ಸಂತೋಷ ಯಾವುದು!. ಆ ದೇವರೇ ಮದ್ಯಸ್ಥಿಕೆ ವಹಿಸಿ ಈಕೆ ಮತ್ತು ಆತನ ನಡುವೆ ಇರುವ ಅಂತರದ ಅಗಾಧತೆಯನ್ನು ಕಡಿಮೆ ಮಾಡಬಾರದೇಕೆ? ಹೀಗೆ ಯೋಚಿಸುತ್ತ ಹನಿಗೂಡಿದ ರುಕ್ಕಮ್ಮನ ಕಣ್ಣುಗಳಾದರೂ ಎಂಥವು? ಆ ಕಣ್ಣುಗಳ ಬೆಳಕಿನಲ್ಲಿ ರುದ್ರನಾಯಕ ದೇವಿಯ ಉಪಾಸನೆ ಮಾಡುತ್ತಿದ್ದ. ಆ ಕಣ್ಣುಗಳ ಬೆಳಕಿನಲ್ಲಿ ಸ್ನಾನಮಾಡಿ ರುದ್ರ ನಾಯಕ ಕುಜಗ್ರಹದ ಶಕ್ತಿಯನ್ನು ಆವಾಹಿಸಿಕೊಳ್ಳುತ್ತಿದ್ದ.
ರುಕ್ಕೂ ಸದಾ ನಿನ್ನ ಕಣ್ಣುಗಳು ಹೀಗೇ ಮಿನುಗುತ್ತಿರಬೇಕೆಂದು ಗದ್ಗದಿತನಾಗಿದ್ದ. ಅಂಥ ಕಣ್ಣುಗಳಲ್ನೀರು ತುಂಬುವುದೆಂದರೇನು?
ಅಂಥ ಕಣ್ಣುಗಳಿಂದ ಒಂದು ಹನಿ ನೆಲಕ್ಕುರುಳಿದರೆಲ್ಲಿ ಸಚರಾಚರಗಳು ದುಃಖದ ಕಡಲಲ್ಲಿ ಮುಳುಗುವುವೋ ಎಂದು ಹೆದರಿದ ಅನಸೂಯ ಸೆರಗಿನ ಚುಂಗನ್ನು ತಾಯಿಯ ಕಣ್ಣುಗಳಿಗೆ ಅಂಟಿಸಿದಳು.
“ಯಾಕಮ್ಮಾ ಕಣ್ಣಲ್ಲಿ ನೀರು ತಂದ್ಕೊಂಡಿ? ನೀನು ಬೇಡಾಂದ್ರೆ ನಾನ್ ಹೋಗದಿಲ್ಲ ಬಿಡು” ಕೈಯಲ್ಲಿದ್ದ ಚೀಟಿಯನ್ನು ಹರಿದು ಚೂರು ಚೂರು ಮಾಡಲೆಂದು ಮಡಿಚಿದಳು. ಆಕೆ ಹರಿಯದಿದ್ದಾಗ ತೊಲೆ ಸಂದಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಿದ್ದ ಮೂಷಕಕಕ್ಕೆ ನಿಆಸೆಯಾಯಿತು.
ಶಾಮು ಆಕೆಗೆ ಬರೆಯುತ್ತಿದ್ದ ಎಷ್ಟೋ ಪ್ರೇಮಪತ್ರಗಳು ಉಪಾಯದಿಂದ ಅಪಹರಿಸಿ ಒಯ್ದು ತನ್ನ ಪ್ರಿಯತಮೆಗೆ ಒಪ್ಪಿಸಿ ಸಂತೋಷಪಡುವ ಪರಿಪಾಟ ಇಟ್ಟುಕೊಂಡಿತ್ತು. ಪ್ರತಿಯೊಂದು ಪ್ರೇಮಪತ್ರವನ್ನು ಮೊದಲದಿನ ಓದಿದ ನಂತರ ಅದನ್ನು ತನ್ನ ಸುಂದರ ವಕ್ಷಸ್ಥಳದಲ್ಲಿ ಭದ್ರಪಡಿಸುತ್ತಿದ್ದಳು ಅನಸೂಯ. ಆಕೆಯ ಬೆವರಿನಿಂದ ತೊಯ್ದು ಅದರಲ್ಲಿನ ಅಕ್ಷರಗಳ ಮೌಲ್ಯ ಹೆಚ್ಚುತ್ತಿತ್ತು. ಜೊತೆಗೆ ರುಚಿಯೂ ಕೂಡ.
ಇಲಿಯ ನಿರೀಕ್ಷೆಯಂತೆ ಚೀಟಿಯನ್ನು ಬ್ಲೌಜಿನೊಳಗೆ ಇರಿಸದೆ ಮುಷ್ಟಿಯಲ್ಲಿ ಭದ್ರಪಡಿಸಿದಳು.
“ನಾನ್ಯಾಕೆ ಕಣ್ಣಲ್ಲಿ ನೀರ‍್ತಂದ್ಕೊಳ್ಲೇ ಮಗಳೇ ನಿಮ್ಮಪ್ಪ ಇಷ್ಟೊತ್ಗೆ ವಾಪಸು ಬಂದಿದ್ರೆ ನಾನು ಇಷ್ಟೊಂದು ಚಿಂತೆ ಮಾಡಬೇಕಾಗಿರ‍್ಲಿಲ್ಲ ಕಣಮ್ಮಾ… ನಿನ್ನ ಚಿನ್ನದಂಥ ಮನಸ್ಸನ್ನು ಅರ್ಥ ಮಾಡ್ಕೊಂಡು ಮದ್ವೆ ಆಗೋಕೂ ಶಾಮಾ ಶಾಸ್ತ್ರಿ ಪುಣ್ಯ ಮಾಡಿರ‍್ಬೇಕು” ಒಂದು ನಿಟ್ಟುಸಿರು ಬಿಟ್ಟು ಮಗಳ ಮುಡಿ ನೇವರಿಸಿ ಮುಂದುವರೆದು ಹೇಳಿದಳು.
“ನೀನು ಹೋಗು… ಅವನ ಜೊತೆ ಮಾತಾಡಿ ನಿರ್ಧಾರ ಮಾಡ್ಕೊಂಡು ಬಾ… ತಾಯೀನ ತುಂಬ ಹಚ್ಕೊಂಡಿರೋ ಅವನ್ ಮನಸ್ಸಿಗೆ ನೋವಾಗುವಂತೆ ಮಾತಾಡಿ ಬಿಡಬೇಡ… ಹಣೆಯಲ್ಲಿ ಬರೆದಂತಾಗ್ತದೆ’
ಆ ಕ್ಷಣ ಹೊರಡುವ ಉತ್ಸಾಹ ಕೂಡಲೆ ಪ್ರಕಟಿಸಲಿಲ್ಲ. ನಿಟ್ಟುಸಿರು, ಬೇಸರಗಳಿಂದ ಅಲಂಕೃತಗೊಂಡಿರುವ ಮುಖಕ್ಕೆ ಏನು ಹಚ್ಚಿಕೊಂಡರೆ ಏನು? ಕನ್ನಡಿ ಎದುರು ನಿಂತು ಮುಷ್ಠಿ ತೆರೆದಳು. ಪತ್ರ ಬೆವರಿನಿಂದ ಸಂಪೂರ್ಣ ನೆನೆದಿತ್ತು. ಅದರಲ್ಲಿನ ಯಾವೊಂದು ಅಕ್ಷರವೂ ಅರ್ಥವಾಗಿರುವ ಸ್ಥಿತಿಯಲ್ಲಿರಲಿಲ್ಲ. ಒಂಚೂರು ಅನ್ನದ ಉಂಡೆಯಂತಿದ್ದ ಅದನ್ನು ನಗಂದಿ ಮೇಲಿಡುತ್ತಲೆ ಮೂಷಕಕ್ಕೆ ಹೋದ ಜೀವ ಮರಳಿ ಬಂದಿತು.
———————–

೧೦೨
“ಒಬ್ಬರ ಪ್ರೇಮಪತ್ರಾನ ಇನ್ನೊಬ್ರು ಓದಬಾರದೆಂಬ ಸಾಮಾನ್ಯ ತಿಳುವಳಿಕೆಯೂ ಈ ಇಲಿಗಳಿಗೆ ಇಲ್ಲವಾಯಿತಲ್ಲಾ” ಎಂಬರ್ಥ ಬರುವಂತೆ ಸಂದೂಕದ ಮರೆಯಲ್ಲಿದ್ದ ಬೆಕ್ಕು ಮ್ಯಾಂವ್ ಗುಟ್ಟಿ ಎಚ್ಚರಿಸಿತು.
“ಇನ್ನೊಬ್ರು ಓದಿದಾಗ್ಲೇ ಪ್ರೇಮ ಪತ್ರಗಳಿಗೆ ಹೆಚ್ಚಿನ ಬೆಲೆ ಬರೋದೂಂತ ಮಾರ್ಜಾಲ ಜಾತಿಗೆ ಅರ್ಥವಾಗುವುದಾದರೂ ಹೇಗೆ!. ನಮ್ಮ ಪರಮ ಶತ್ರುವಾದ ಮಾರ್ಜಾಲ ಕುಲಕ್ಕೆ ಧಿಕ್ಕಾರ ಅವುಗಳ ಬುದ್ಧಿವಾದಕ್ಕೆ ಧಿಕ್ಕಾರ” ಎಂದು ಚೀಂವ್ ಚೀಂವ್ ಭಾಷೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತ ಮೂಷಕ ಪ್ರೇಮ ಪತ್ರದಕಡೆ ಕಳ್ಳ ಹೆಜ್ಜೆ ಇಡತೊಡಗಿತು.
ಆದರೆ ಜಂತಿಯ ಸಂದಿಯಲ್ಲಿದ್ದ ಅದರ ಪ್ರಿಯತಮೆಗೋ ಭಯ ಅಂದರೆ ಭಯ, ನೋಟದ ಗುರಿಯ ಗಾಳ ಎಸೆದು ಕೂತಿರುವ ಮಾರ್ಜಾಲಕ್ಕೋ ಸಿಟ್ಟು, ತನ್ನ ಅಪ್ಪಣೆ ಮೀರಿ ಮೂಷಕ ಪ್ರೇಮಪತ್ರ ಲಪಟಾಯಿಸುವುದೆಂದರೇನು!…
“ಅಕ್ಕಾ ತಕ್ಕೊಳ್ಳೀ… ನಿನ್ ಪ್ರೇಮ ಪತ್ರಾನ ಆ ದರಿದ್ರ ಇಲಿ ಲಪಟಾಯಿಸುತ್ತಾ ಇದೆ. ಪ್ರೇಮದ ಗುಟ್ಟನ್ನು ಇಲಿಗಳು ಕಾಪಾಡೊಲ್ಲ ಕಣಮ್ಮಾ” ಎಂದು ತನ್ನ ಭಾಷೆಯಲ್ಲಿ ಹೆಲನ್ ಪರಿಪರಿಯಾಗಿ ಹೇಳಿತು. (ತೀಸ್ರಿಮಂಜಿಲ್‍ನಲ್ಲಿ ನರ್ತಕಿ ಹೆಲನ್ ಅಮೋಘ ಅಭಿನಯಕ್ಕೆ ಮನಸೋತು ಶಾಮು ಅದಕ್ಕೆ ಆ ಹೆಸರು ಇಟ್ಟಿದ್ದನು.)
ಎದೆ ತುಂಬ ಮುಡಿ ಹರಡಿಕೊಂಡಿದ್ದ ಅನಸೂಯ ಬೇರೆ ಸಂದರ್ಭದಲ್ಲಾಗಿದ್ದರೆ ಹೆಲೆನ್ನಳ ಭಾಷೆಯನ್ನು ಶತಾಯ ಗತಾಯ ಅರ್ಥಮಾಡಿಕೊಳ್ಳುತ್ತಿದ್ದಳು.
“ಹೆಲನ್ ಹಸ್ಕೊಂಡು ಅರಚ್ತಿದೆ. ಅಮ್ಮಾ ಅದ್ಕೆ ಅನ್ನ ಹಾಲು ಕಲೆಸಿಡೇ” ಬಾಚಿಕೊಳ್ಳುತ್ತ ಆಕೆ ಕೂಗಿದ್ದು ಕೇಳಿಸಿಕೊಂಡು ಬೆಕ್ಕಿಗೋ ಪ್ರಾಣಸಂಕಟ ಇಲಿಗೋ ಚಿನ್ನಾಟ.
ಆ ದರಿದ್ರ ಶಾಮಾಶಾಸ್ತ್ರಿಯ ಸಹವಾಸದಿಂದಾಗಿ ಅಪ್ಪಟ ವೆಜಿಟೇರಿಯನ್ನಾಗಿರುವ ಈ ಲಲನಾಮಣಿ ಗಂಡಸಾದ ತನಗೆ ಹೆಲನ್ ಎಂಬ ಹೆಸರಿಟ್ಟು ತಪ್ಪು ಮಾಡಿರೋದಲ್ದೆ ತನ್ನ ಭಾಷೆ ಅರ್ಥಮಾಡಿಕೊಳ್ಳಲಾಗದೆ ಪ್ರೇಮವನ್ನು ಜಗಜ್ಜಾಹಿರು ಮಾಡುತ್ತಿರುವಳಲ್ಲಾ ಎಂದು ಹೆಲನ್ ಮಮ್ಮಲನೆ ಮರುಗಿತು.
“ಲವ್ ಅಂದರೇನೆಂದು ಗೊತ್ತಿಲ್ಲದ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭನಿಗೆ ವಾಹನವಾಗಿರುವ ನಿಮಗೆ ಪ್ರೇಮಪತ್ರ ಲಪಟಾಯಿಸುವ ಹಕ್ಕು ಯಾವ ಬೋಳಿಮಗ ಕೊಟ್ಟ… ಒಳ್ಳೆ ಮಾತಿಂದ ಹೇಳ್ತಿದೀನಿ… ಚೀಟಿ ಬಳಿಗೆ ಬರಬೇಡ… ಹುಷಾರ್” ಹೆಲೆನ್ ಬೆದೆಗೆ ಬಂದಾಗ ಉಪಯೋಗಿಸುವ ಭಾಷೆ ಬಳಸಿ ಎಚ್ಚರಿಕೆ ನೀಡಿತು. ಅದರ ರೂಕ್ಷ ಸ್ವರಕ್ಕೆ ಬೇಸತ್ತು ಅನಸೂಯ ಬಾಚಣಿಕೆಯನ್ನು ಅದರತ್ತ ಎಸೆದಳು. ಅದನ್ನೇ ಪಾಶುಪತಾಶ್ತ್ರವೆಂದು ಭಾವಿಸಿ ಹೆಲೆನ್ ಹಿಡಿಹಿಡಿ ಶಾಪ ಹಾಕುತ್ತ ಅಲ್ಲಿಂದ ಓಡಿತು.
ಅದು ಓಡಿದ್ದು ನೋಡಿ ಮೂಷಕಕ್ಕೆ ಖುಷಿಯೋ ಖುಷಿ. ತನ್ನ ಪ್ರಿಯತಮೆಯ ಕಡೆಗೆ ನೋಡಿ ಕಣ್ಣು ಮಿಟುಕಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕನಂತೆ ಭಲೆ ಠೀವಿಯಿಂದ ಹೆಜ್ಜೆ ಹಾಕುತ್ತ ಪ್ರೇಮಪತ್ರ ಸಮೀಪಿಸಿತು. ತನ್ನ ಮೂತಿಯನ್ನು ಇಷ್ಟಗಲ ತೆರೆದು ಅದನ್ನು ಕಚ್ಚಿಕೊಂಡು ರೋಮಾಂಚನಗೊಂಡಿತು. ಎಂಥ ರೋಚಕ ಅನುಭವ ಪ್ರೇಮಪತ್ರ ಮುಟ್ಟುವುದೆಂದರೆ!. ಬರಿ ನೆನೆದರೇನುಂಟು ಪ್ರೇಮಪತ್ರದ ರುಚಿಯ… ಜೋಹನ್ಸ್‍ಬರ್ಗ್ನಲ್ಲಿ ಅಧಿಕಾರ ವಹಿಸಿಕೊಳ್ಳುವ ತನ್ನ ಗಂಡನ ಕಡೆ ವಿನ್ನಿಮಂಡೇಲಾ ನೋಡುತ್ತಿದ್ದಳಲ್ಲ… ಹಾಗೆ… ಅಂಥ ನೋಟ ಬೀರುತ್ತಿದ್ದ
—————–

೧೦೩
ಪತ್ನಿಯ ಕಡೆ ಗಂಭೀರವಾದ ಹೆಜ್ಜೆ ಹಾಕತೋಡಗಿತು.
“ಸ್ವಾಗತಂಽಽ ಸುಸ್ವಾಗತಂಽಽ ದೊರಾ” ಅದರ ಪ್ರಿಯತಮೆ ಮಾಲಕೌಂಸ್ ಆಲಾಪನೆ ಮಾಡಿತು. ಜಂತಿಯ ಸಂದಿಯಿಂದ ಹಿಡಿಬಯಲನ್ನೇ ಸ್ಯಾಂಕಿ ಕೆರೆಯ) ಡಾ. ಜೀವರಾಜ್ ಆಳ್ವರ ಮನೆ ಎದುಗಿರುವ) ಪಾರ್ಕ್ ಎಂದೇ ಭಾವಿಸಿ ಅವೆರಡು ಭಲೆ ರೊಮಾಂಟಿಚ್ ಮೂಡಿನಲ್ಲಿ ಎದುರುಬದುರು ಕೂತುಕೊಂಡವು. ಪ್ರಿಯಕರ ತನ್ನ ಪ್ರಿಯತಮೆಯ ಎದುರಿಗೆ ಪ್ರೇಮಪತ್ರ ಹರಡಿತು. ಕೋಮಲಕಾಯದ ಹೆಣ್ಣು ಇಲಿ ಲವ್ ಲೆಟರಿನೊಳಗೆ ಬಗ್ಗಿ ಬಗ್ಗಿ ನೋಡಿತು. ಬೆವರಿಗೆ ಅಳಿಸಿಹೋಗಿದ್ದ ಅಕ್ಷರಗಳನ್ನು ನೋಡಿ ಮನನೊಂದಿತು. ನಿಲುಗನ್ನಡಿ ಎದುರು ಮ್ಲಾನವದನಳಾಗಿ ಕೂತಿದ್ದ ತರುಣಿ ಕಡೆ ನೋಡಿ ’ಅಯ್ಯೋ ಪಾಪ’ ಎಂದಿತು.
“ಪ್ರಿಯತಮೆ ತನ್ನ ಪ್ರಿಯತಮನ ಪತ್ರ ಬಂದ ನಂತರವೂ ಆಕೆ ಇಷ್ಟು ಮಂಕಾಗಿರುವಳಲ್ಲ… ಅಯ್ಯೋ ಪಾಪ” ಹೆಣ್ಣು ಸ್ತ್ರೀಸಹಜ ಮನೋಭಾವದಿಂದ ಖೇದ ವ್ಯಕ್ತಪಡಿಸಿತು.
“ಹೆಣ್ಣಿನ ಮನೋವೇದನೆಗೆ ಹೆಣ್ಣಾದ ನಿನಗೆ ಅರ್ಥವಾಗದಿದ್ದರೆ ಹೇಗೆ ಚಿನ್ನಾ… ಆ ಶಾಮಾಶಾಸ್ತ್ರಿ ಪ್ರೇಮವೆಂಬ ತುಪ್ಪವನ್ನು ಈ ಹುಡುಗಿಯ ನೀಳ ನಾಸಿಕದ ಮೇಲೆ ಹಚ್ಚಿ ಮಾಡಿರುವ ದೊಡ್ಡ ತಪ್ಪು ಕಣೆ. ಮೊದಲೇ ಅವನು ಹುಟ್ಟಿರುವುದ ಸಂಸ್ಕೃತ ಭೂಯಿಷ್ಠ ವಂಶದಲ್ಲಿ… ಸಂಸ್ಕೃತ ತಾಂಡವವಾಡುವ ಸ್ಥಳದಲ್ಲಿ ಪ್ರೇಮ ಸಾಯುಜ್ಯ ಜಾಗವಿರುವುದಿಲ್ಲ. ನೆನ್ನೆ ಕೋಡುಬಳೆ ವಾಸನೆ ಹಿಡಿದು ಶಾಸ್ತ್ರಿಗಳ ಮನೆಗೆ ಹೋಗಿದ್ದೆ.”
“ಓಹೋ ಕೋಡುಬಳೆ ತರ‍್ತೀನೆಂದು ಹೋಗಿದ್ದೆಯಲ್ಲ… ಕೋಡುಬಳೆ ಸಂಗತಿ ಹಾಳಾಗಲಿ… ಅಲ್ಲಿ ಏನೇನು ಮಾತುಕಥೆ ನಡೀತು ಎಂಬುದರ ಬಗ್ಗೆ ಹೇಳು. ಕೇಳಲು ಉತ್ಸುಕಳಾಗಿದ್ದೇನೆ” ಹೆಣ್ಣಿಲಿ ತನ್ನ ನಿರಾಭರಣದ ಕರ್ಣವನ್ನು ತನ್ನ ಪ್ರಿಯತಮನ ಬಾಯಿ ಬಳಿ ಇಟ್ಟಿತು.
“ಅದನ್ನೆಲ್ಲ ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ಬಂಗಾರ… ಉತ್ತಮ ನಕ್ಷತ್ರದಲ್ಲಿ ಋತುಮತಿಯಾದ ಕನ್ಯಾನ್ವೇಷಣೆಗೆ ಆ ವೃದ್ಧ ಶಾಸ್ತ್ರಿಗಳು ಯಾವುದೋ ಊರಿಗೆ ಹೋಗಿದ್ದರು. ಅರೆ ಬೆತ್ತಳಾಗಿದ್ದ ತಾಯಿ ಅಲುಮೇಲಮ್ಮಳ ತೊಡೆಮೇಲೆ ಶಾಮಾಶಾಸ್ತ್ರಿ ತಲೆ ಇಟ್ಟು ಮಲಗಿದ್ದ. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿದು ತೊಡೆಯಸೀಳಿನಲ್ಲಿ ಇಂಗಿಹೋಗುತ್ತಿತ್ತು. “ಆ ಶೂದ್ರ ಹುಡುಗಿಯನ್ನು ಮದುವೆಯಾಗುವುದಾದರೆ ಮೊದಲು ನನಗೆ ವಿಷ ಕೊಡು” ಎಂದು ಆ ಮಹಿಳೆ ಖಡಾಖಂಡಿತವಾಗಿ ಕಣ್ಣೀರು ತೆಗೆದು ಮಾತಾಡುತ್ತಿದ್ದಳು. “ಅಮ್ಮಾ ಈ ಪ್ರಪಂಚದಲ್ಲಿ ತಾಯಿಯಾದ ನಿನಗಿಂತ ಬೆಲೆಬಾಳುವ ಹೆಣ್ಣು ಯಾರೂ ಇಲ್ಲ” ಎಂದು ಹೇಳುತ್ತಿದ್ದ. “ಮತ್ತೇಕೆ ಕಣ್ಣೀರು ತೆಗೆಯುತ್ತಿರುವಿ” ಎಂದು ತಾಯಿ ಪ್ರಶ್ನಿಸಿದಳು. “ಇಷ್ಟು ವರ್ಷಗಳ ಕಾಲ ನನ್ನನ್ನು ಪ್ರೀತಿಸಿದವಳನ್ನು, ನನಗೆ ಸೃಜನಾತ್ಮಕವಾಗಿ ದೇಹ ಮತ್ತು ಮನಸ್ಸು ಎರಡನ್ನು ಹಂಚಿಕೊಂಡವಳನ್ನು ಮರೆಯುವ ಕಷ್ಟ ನಿನಗೆ ಅರ್ಥವಾಗುವುದಿಲ್ಲ ತಾಯಿ” ಎಂದವನು ಗದ್ಗದಿತನಾಗಿ ಚಿನ್ನಾ”ಗಿ ಎಂದನು.
“ಅಂದರೆ ಅವನು ತಾನು ಮದುವೆಯಾಗುವುದಿಲ್ಲ ಎಂದು ಹೇಳಲಿಕ್ಕಾಗಿಯೇ ಅನಸೂಯಳಿಗೆ ಚೀಟಿ ಕಳಿಸಿದ್ದಾನೆಂದಾಯಿತು.”
“ಹೌದು. ಖಂಡಿತ ಅದಕ್ಕೇನೆ.”
“ಹಾಗಿದ್ದರೆ ಆಕೆಯನ್ನು ಅಲ್ಲಿಗೆ ಹೋಗದಂತೆ ತಡೆಯಬೇಕಲ್ಲ.”
“ತಡೆಯೋದಾದ್ರೂ ಯಾಕೆ ಚಿನ್ನಾಽಽ ಆಕೆಗೀಗಾಗ್ಲೇ ಎಲ್ಲಾ ಅರ್ಥವಾಗಿದೆ. ಆಕೆ ನೀಚ
—————-

೧೦೪
ಕುಲದಲ್ಲಿ ಹುಟ್ಟಿರಬಹುದು. ಆದರೆ ಆಕೆ ಉಚ್ಚಕುಲ ಸಂಜಾತನಾದ ಶ್ಜಾಮಾಶಾಸ್ತ್ರಿಗಿಂತಲೂ ಬುದ್ಧಿವಂತೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಬಲ್ಲ ಮನೋದಾರ್ಡ್ಯ ಆಕೆಗುಂಟು.”
“ಮುಂದೇನಾಗಬಹುದು?”
“ಮಾತೆಂಬ ಚಿಮಣಿಯನ್ನು ಅಡ್ಡಗೋಡೆ ಮೇಲಿರಿಸುವುದಷ್ಟೆ ಶಾಮಾಶಾಸ್ತ್ರಿಗೆ ಗೊತ್ತು. ಮುಟ್ಟು ನಿಲ್ಲುವವರೆಗೆ ಕಾಯಬೇಕೆಂದು ಅವನು ಹೇಳಬಹುದು, ಅಥವಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇರಿ ಆಧ್ಯಾತ್ಮ ಕಲಿತು ಕಾಮವೇ ಮೊದಲಾದ ಮನೋವಾಂಛೆಗಳನ್ನು ನಿಗ್ರಹಿಸಿಕೊಂಡು ಮೋಕ್ಷ ಪಡೆ ಎಂದು ಸಲಹೆ ಮಾಡಬಹುದು.”
“ಅಲ್ಲಾ ಎಷ್ಟೊಂದು ಸ್ವಾರ್ಥಿಗಳೇ ಗಂಡಸರು. ನನಗ್ಯಾಕೋ ನಿನ್ ಬಗ್ಗೆ ಅನುಮಾನ ಡಾರ್ಲಿಂಗ್ಽಽ ಅವರಿಬ್ಬರ ಬಗ್ಗೆ ನೀನಿಷ್ಟೊಂದು ಆಸಕ್ತಿ ವಹಿಸಿರುವೆ ಅಂತ” ಹೆಣ್ಣಿಲಿ ಕುಡಿಗಣ್ಣಿಂದ ನೋಡಿತು.
ಪ್ರಿಯ ಸಖಿ ಮಾತು ಕೇಳಿ ಗಂಡಿಲಿ ತಿಕ ಬಡಕೊಂದು ನಗಾಡಿತು.
“ಈಸ್ತ್ರೀ ಜಾತಿಯೇ ಇಷ್ಟು ನೋಡು. ಆದ್ರೆ ಅನಸೂಯ ಮಾತ್ರ ಅಪವಾದ!”
“ಆಕೆ ಪರ ವಕಾಲತ್ತು ವಹಿಸ್ತಿರೋದು ಯಾಕೇಂತ!?”
“ಆಕೆ ಸ್ತ್ರೀ ಜಾತಿಗೇ ಒಂದು ಮುಕುಟಪ್ರಾಯವೆಂದು ಹೇಳಬಹುದು. ರೂಪದಲ್ಲೂ ಅಷ್ಟೇ ಗುಣದಲ್ಲೂ ಅಷ್ಟೇ. ಆಕೆ ಶಾಮಾಶಾಸ್ತ್ರಿಗೆ ಬೆಂಬಲವಾಗಿ ನಿಲ್ಲದಿದ್ದಲ್ಲಿ ಬಾಡಿ ಬಿಲ್ಡರ್ ಜಲಜಾಕ್ಷಿ ಕೈಯಲ್ಲಿ ಆ ಶಾಸ್ತ್ರಿ ಏನಾಗ್ತಿದ್ದನೋ ಏನೋ! ಜಲಜಾಕ್ಷಿ ರೇಪ್ ಮಾಡಲು ಪ್ರಯತ್ನಿಸಿದ್ದು; ಮೊಲೆ ಮುಟ್ಟು ಎಂದು ಶತ್ತಾಯಿಸಿದ್ದು; ಹುಸಿ ಬೆದರಿಕೆ ಹಾಕಿ ಪ್ರೇಮದ ಬಗ್ಗೆ ವಿಲಕ್ಷಣವಾದ ಒತ್ತಡ ತಂದದ್ದು ಎಲ್ಲ ಅನಸೂಯಳಿಗೆ ಗೊತ್ತಿಲ್ಲದಿಲ್ಲ. ಆಕೆ ಎಂದಾದ್ರೂ ಈ ಬಗ್ಗೆ ಮುಖ ಸಿಡರಿಸಿಕೊಂಡದ್ದುಂಟಾ?!” ಸಹಜವಾಗಿ ಗಂಡಿಲಿ ಹೇಳಿತು.
ಆದರೆ ಹೆಣ್ಣಿಲಿ ಒಂದೊಂದು ಮಾತಿಗೆ ಸಾವಿರ ಸಾವಿರ ಅರ್ಥ ಕಲ್ಪಿಸಿಕೊಂಡು ತನ್ನ ಪ್ರಿಯಕರನೂ ಆಕೆಯನ್ನು ಒಳಗೊಳಗೇ ಲವ್ ಮಾಡುತ್ತಿರಬಹುದೇ ಎಂಬ ಸಂದೇಹ ಕಾಡಿತು. ಮೂಷಕ ಸಹಜ ವಿಧ್ವಂಸಕ ಸ್ವಭಾವದಿಂದ ತಿಂಡಿ ತಿನಿಸುಗಳಿರೋ ಕಡೆ; ಉಗ್ರಾಣದ ಕಡೆ ಸುಳಿಯಬೇಕಾದ ತನ್ನ ಕಾಂತ ಹಗಲಿರುಳು ಅನಸೂಯಾಳ ಡ್ರಾಯಿಂಗ್ ರೂಂ; ಬೆಡ್ ರೂಂಗಳಲ್ಲಿ ಬಿಡಾರ ಹೂಡುತ್ತಿದ್ದುದು ನೆನಪಿಗೆ ತಂದುಕೊಂಡಿತು. ಆ ಕ್ಷಣ ಕಣ್ಣುಗಳು ಹನಿಗೂಡಿದವು. ಬಿಕ್ಕಿ ಬಿಕ್ಕಿ ಅಳತೊಡಗಿತು.
ಅಯ್ಯೋ ತನ್ನ ಕಾಂತೆಯ ಕಣ್ಣಲ್ಲಿ ನೀರೆ! ಗಂಡಿಲಿ ಗಾಬರಿಗೊಂಡಿತು. ಮೂಷಕ ಭಾಷೆಯಲ್ಲಿ ಪರಿಪರಿಯಾಗಿ ರಮಿಸಲು ಪ್ರಯತ್ನಿಸಿತು. ತಾನು ಗುಟ್ಟಾಗಿ ಅನಸೂಯಳನ್ನು ಪ್ರೀತಿಸುತ್ತಿರುವುದು; ಕದ್ದು ಮುಚ್ಚಿ ಆಕೆಯ ಕುಪ್ಪಸದ ಕಂಕುಳ ಭಾಗವನ್ನು; ಬ್ರಾದ ತುದಿಯನ್ನು; ಲಂಗದ ಆಯಕಟಿನ ಭಾಗವನ್ನು ಕಚ್ಚಿ ಕಚ್ಚಿ ಕಿಂಡಿ ಮಾಡಿರುವುದಾಗಲೀ; ಎಷ್ಟೋ ರಾತ್ರಿ ಆಕೆಯ ಹಾಸಿಗೆ ಏರಿ ಆಕೆ ಹೊದ್ದಿರುವ ಹೂವಿನ ಹಚ್ಚಡದೊಳಗೆ ಸುಳಿದಾಡಿ ಕಚಗುಳಿ ಇಡುತ್ತಿದ್ದುದಾಗಲೀ; ಶಾಸ್ತ್ರಿಮೇಲಿನ ಹೊಟ್ಟೆಕಿಚ್ಚಿನಿಂದ ಅವನು ಬರೆಯುತ್ತಿದ್ದ ಪ್ರೇಮ ಪತ್ರಗಳನ್ನು ಅಪಹರಿಸಿ ವಿರೂಪಗೊಳಿಸುತ್ತಿರುವುದಾಗಲೀ; ಇದಕ್ಕಿಂದ್ದಂತೆ ಆಕೆ ಎದುರಿಗೆ ದುತ್ತನೆ ಪ್ರತ್ಯಕ್ಷವಾಗಿ ಕಣ್ಣು ಮಿಟುಕಿಸಿ ರತಿಕ್ರೀಡೆಗೆ ಆಮಂತಿಸುತ್ತಿದ್ದುದಾಗಲೀ; ಈ ಎಲ್ಲ ಹೃದಯ ವಿಹಂಗಮ ಚೇಷ್ಟೆಗಳನ್ನು
——————–

೧೦೫
ತನ್ನ ಪ್ರಾಣವಲ್ಲಭೆ ಸೂಕ್ಷ್ಮವಾಗಿ ಗಮನಿಸಿರಬಹುದೆಂಬ ಅನುಮಾನ ಮೂಡಿತು.
ಈಗಿನಿಂದಲೇ ಈಕೆಯ ದುಃಖವನ್ನು ಶಮನಗೋಳಿಸದಿದ್ದಲ್ಲಿ ತಮ್ಮ ಮಾನಸ ಸರೋವರದಂಥಹ ಸುಖಸಂಸಾರ ಉರಗಪತಾಕನು ಹೊಕ್ಕ ವೈಶಂಪಾಯನ ಸರೋವರವಾಗುವುದರಲ್ಲಿ ಸಂದೇಹವಿಲ್ಲವೆಂದೂಹಿಸಿತು.
“ಇಲ್ಲ ಕಣೇ ನೀನು ಹುಲು ಮಾನವರಂತೆ ಅಪಾರ್ಥ ಕಲ್ಪಿಸಿಕೊಂಡಿದ್ದೀಯಾ; ನಿನ್ನಾಣೆಯಾಗೂ, ನಮ್ಮ ಕುಲದೇವತೆಯಾದ ವಿನಾಯಕನ ಆಣೆಯಾಗೂ ನಾನು ನಿನ್ನ ಹೊರತು ಇನ್ನೊಂದು ಹೆಣ್ಣನ್ನು ಪ್ರೀತಿಸಿಲ್ಲ! ಕನಸು ಮನಸಲೂ ನಿನೆ ನಿನ್ನಾಣೆ ಶಾಮಾ ಶಾಸ್ತ್ರಿ ಮನೆಯಾಗಲಿ; ಅನಸೂಯಳ ಮನೆಯಾಗಲೀ ನನಗೆ ಬೇರೆ ಅಲ್ಲವೇ ಅಲ್ಲ. ನಗರದ ಪ್ರಸಿದ್ಧ ವಣಿಕರಾಗಿದ್ದ ಕುಪ್ಪಂ ವೆಂಕಟರಮಣ ಶ್ರೇಷ್ಟಿಗಳ ಬಗ್ಗೆ ನಿನಗೆ ಹಿಂದೊಮ್ಮೆ ವಿವರವಾಗಿ ಹೇಳಿದ್ದೆ. ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದಿ. ಘಂಟಾ ಶಾಮಾಶಾಸ್ತ್ರಿಗಳು ನಿಧನರಾದಾಗ ಕಾಶಿಗೆ ಹೋಗಿಬರುವ ವೆಚ್ಚ ಧರಿಸುವುದಾಗಿ ಹೇಳಿ ಹಣ ತರಲೆಂದು ಮನೆ ತಲುಪಿದ ಅವರನ್ನು ಅವರ ಹೆಂಡತಿ ಮಕ್ಕಳು ಉಗ್ರಾಣದ ಕೋಣೆಯಲ್ಲಿ ಬಂಧಿಸಿಟ್ಟಿದ್ದು; ತಮ್ಮ ಪೂರ್ವಿಕನಂತಿದ್ದ ಶ್ರೇಷ್ಠಿಯನ್ನು; ನಮ್ಮ ಪೂರ್ವಿಕರೆಲ್ಲ ಸೇರಿಕೊಂಡು ಬಗೆ ಬಗೆ ಹಿಂಸಿಸಿದ ಬಗ್ಗೆ ಹೇಳಿದ್ದೆ. ಹಾಗೆ ಅವತ್ತು ಆಕ್ರಮಣ ನಡೆಸಿದ ಗುಂಪಿನಲ್ಲಿ ನನ್ನ ಗಿರಿಗಿರಿ ಮುತ್ತಾತನಿದ್ದ, ಶವ ಸಂಸ್ಕಾರಕ್ಕೆ ಸಹಾಯಹಸ್ತ ಚಾಚಿದವನ ಮರ್ಮಾಂಗದ ತುದಿ ಕಚ್ಚಿದ್ದರ ಬಗ್ಗೆ ಪಶ್ಚಾತ್ತಾಪಪಟ್ಟಿದ್ದ. ವೇದಾಂತಿ ಪರಮೇಶ್ವರ ಶಾಸ್ತ್ರಿಗಳ ಸೇವೆ ಮಾಡಿ ಪಾಪದಿಂದ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿ ನಮ್ಮ ಗಿರಿಗಿರಿ ಮುತ್ತಾತ ತನ್ನ ಯಾವತ್ತೂ ಬಂಧು ಬಳಗದೊಂದಿಗೆ ಅಗ್ರಹಾರದ ಶಾಸ್ತ್ರಿಗಳ ಮನೆಗೆ ರಾತ್ರೋರಾತ್ರಿ ಸೇರಿಕೊಂಡುಬಿಟ್ಟ. ಬಾತ್ರೂಮಿನಲ್ಲಿ; ಅಡುಗೆಮನೆಯಲ್ಲಿ; ಉಗ್ರಾಣದ ಮನೆಯಲ್ಲಿ; ಶಯನ ಗೃಹದಲ್ಲಿ ಹೀಗೆ ಎಲ್ಲಿ ನೋಡಿದರೂ ನಮ್ಮ ಪೂರ್ವಿಕರೇ ಪೂರ್ವಿಕರು. ಚಿಂವ್ ಚಿಂವ್ ಗುಟ್ಟುತ್ತ ಬಗೆಬಗೆಯಾದ ಸೇವೆ ಮಾಡಿದ್ದೇ ಮಾಡಿದ್ದು. ಶಾಸ್ತ್ರಿಗಳು ಅರ್ಚನೆ ಮಾಡುವ ಕಡೆ; ವೈದಿಕ ಮಾಡುವ ಕಡೇಲೆಲ್ಲಾ ಹೋಗಿ ಮಂತ್ರೋಚ್ಚಾರಣೆಗೆ ಸರಿಯಾದ ಹಿನ್ನೆಲೆ ಸಂಗೀತ ಒದಗಿಸಿದ್ದೇ ಒದಗಿಸಿದ್ದು. ಆದರೆ ನಮ್ಮ ಸೇವಾಕೈಂಕರ್ಯ ಶಾಸ್ತ್ರಿಗಳಿಗೆ ಅರ್ಥವಾಗಬೇಕಲ್ಲ? ಶಾಸ್ತ್ರಿಗಳು ತಮ್ಮ ಧರ್ಮಪತ್ನಿಯವರೊಡನೆ ಸಮಾಲೋಚಿಸಿ ನಮ್ಮ ಪರಮ ಶತ್ರುವಾದ ಮಾರ್ಜಾಲದ ಮರಿಯನ್ನು ಸಾಕಿಬಿಟ್ಟರು. ಅದಕ್ಕೆ ಹಾಲು ಹೈನದ ವ್ಯವಸ್ಥೆಗೆಂದು ದಿವಾನ್ ಗೋಪಾಲಯ್ಯ ಶಾಸ್ತ್ರಿಗಳಿಗೆ ಗೋದಾನ ಮಾಡಿ ಪುಣ್ಯ ಕಟ್ಟಿಕೊಂಡರು. ದಾನವಾಗಿ ಬಂದ ಹಸುವಾಗಿದ್ದರೂ ಹೇಗಿತ್ತು ಅಂತಿಯಾ? ಪ್ರಾಥಮಿಕ ಶಾಲಾ ಬಾಲಕ ಅದರ ಮೈ ಎಲುಬುಗಳನ್ನು ಸುಲಭವಾಗಿ ಎಣಿಸಿಬಿಡುವಂತಿತ್ತು ಅದರ ಫಿಸಿಕ್ಕು. ಸರಕಾರಿ ಪಾಠಶಾಲೆಯ ವಿಜ್ಞಾನ ಶಿಕ್ಷಕರು ಅನಾಟಮಿ ಪಾಠ ಮಾಡುವಾಗೆಲ್ಲ ತಮ್ಮ ತರಗತಿಯ ಮಕ್ಕಳನ್ನು ಶಾಸ್ತ್ರಿಗಳ ಮನೆಗೆ ಕರೆದುಕೊಂಡು ಬಂದು: ಇದು ಇಂಥ ಎಲುಬು: ಅದು ಅಂಥ ಎಲುಬು ಎಂದು ಪರಿಚಯ ಮಾಡಿಸಿಕೊಂಡು ಹೋಗುತ್ತಿದ್ದರು, ಪರಿಚಿಯಕೊಂಡ ಹಿಂಸೆಗೆ ಹಸು ನೆಲಕಚ್ಚಿಬಿಟ್ಟಿತೆಂದರೆ ಮುಗಿಯಿತು, ಅದನ್ನು ಮೇಲೆಬ್ಬಿಸಲು ಶಾಸ್ತ್ರೀ ದಂಪತಿಗಳು ತಿಣುಕಿ ಟಿಣುಕಿ ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನದ ಫಲವಾಗಿ ಹಸು ಎದ್ದು ನಿಂತುಕೊಂಡು ಮರು ಗಳಿಗೆಯಲ್ಲಿಯೇ ಆ ಆದಿದಂಪತಿಗಳು ಉಸ್ಸಪ್ಪೋ ಅಂತ ನೆಲಕಚ್ಚಿ ಬಿಡುತ್ತಿದ್ದರು. ಎಷ್ಟೋ ಮೇವು ಹಾಕಿ ಉಪಚಾರ
——————–

೧೦೬
ಮಾಡಿದರೂ ಅಷ್ಟೆ. ಮದ್ರಾಸ್‍ನ ರೋಗ ಪೀಡಿತ ಕಣ್ಣುಗಳಿಗೆ ಎರಡೆರಡು ಹಾಲುದುರಿಸುತ್ತಿದುದು ಬಿಟ್ಟರೆ ಮೂರನೆ ಹನಿ ಉದುರಿಸುತ್ತಿರಲಿಲ್ಲ. ಆ ಕೃಪಣ ಬಡಕಲು ಹಸು ಕೇವಲ ಪೂಜೆಗೇಂತ ಹಸು ಯಾಕಾದರೂ ಇರಬೇಕು, ದಾನ ಕೊಟ್ಟ ದಿವಾನರ ಮನೆಗೇ ಅದನ್ನು ಸಾಗಿಸಲು ಪ್ರಯತ್ನಿಸಿದ್ದುಂಟು. ಆದರೆ ಅದನ್ನು ಮರಳಿ ಪಡೆಯಲು ದಿವಾನರೇನು ದಡ್ಡರೇ! “’ಬೇಡ ಸ್ವಾಮಿ ಗೋ ಸಾವಿನ ಸುತಕದಿಂದ ನಮ್ಮ ಆಳಿ ಬಾಳುವ ಮನೆ ಹಾಳಾದೀತು. ಅದರ ಮರಣ ಅಗ್ರಹಾರದಲ್ಲೇ ಸಂಭವಿಸಲೆಂದೇ ತಮಗೆ ದಾನರೂಪದಲ್ಲಿ ಕೊಟ್ಟಿರುವುದು. ವೇದೋತ್ತಮ ಪಂಡಿತರಿರುವ ಅಗ್ರಹಾರದಲ್ಲಿ ಯಾವ ಸಾವು ಸಂಭವಿಸಿದರೂ ಸೂತಕವಾಗಲಾರದು’ ಎಂದು ಬಿಲ್‍ಕುಲ್ ನಿರಾಕರಿಸಿ ದಾನದ ಮರ್ಮ ತೋರಿಸಿಕೊಟ್ಟರು. ಅದರಿಂದ ಶಾಸ್ತ್ರಿದಂಪತಿಗಳು ನಿರಾಶರಾಗಲಿಲ್ಲ. ಗೋಮಾತೆಯನ್ನು ದೂರ ದೂರದಲ್ಲಿ ಬಿಟ್ಟು ಬರಲು ಪ್ರಯತ್ನಿಸಿದರು. ಎಲ್ಲೇ ಬಿಡಲಿ ಗೋಮಾತೆ ಮಾತ್ರ ಹಾಜರಾಗಿ ಬಿಟ್ಟು ’ಅಂಬಾಽಽಽ’ ಎಂದು ಕರುಳು ಕತ್ತರಿಸುವಂತೆ ಕೂಗುತ್ತಿತ್ತು. ಮತ್ತೆ ಅದನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಅದು ಪುನಃ ಗರ್ಭ ಧರಿಸಿದರೆ ಅದರ ಮೈಮಾಟ ಸುಧಾರಿಸಬಹುದೆಂದು ಸಮರ್ಥ ಗೂಳಿಗಳ ಬಳಿಗೆ; ದಷ್ಟಪುಷ್ಟಹೋರಿಗಳ ಬಳಿಗೆ ಅದನ್ನು ಕರೆದೊಯ್ದು ರತಿಕ್ರೀಡೆಗೆ ಸಹಕರಿಸು ಎಂದು ತಿಳಿಹೇಳಿ ದೂರ ನಿಲ್ಲುತ್ತಿದ್ದರು. ಅಲ್ಲದೆ ಹೋರಿ/ಗೂಳಿಗಳ ಬಳಿಗೆ ಹೋಗಿ ತಮ್ಮ ಹಸು ದೈಹಿಕವಾಗಿ ದುರ್ಬಲಳು ಕಣಪ್ಪಾ, ನಿನ್ನ ಭಾರ ಹೊರುವಷ್ಟು ಸಾಮರ್ಥ್ಯ ಇವಳಿಗಿಲ್ಲ, ಪೂರ್ತಿ ಭಾರ ಬಿಡದಂತೆ ರತಿಕಾರ್ಯ ಜರುಗಿಸಿ ಗರ್ಭದಾನ ಮಾಡಿ ಪುಣ್ಯ ಕಟ್ಟಿಕೋ’ ಂದು ಪರಿಪರಿಯಿಂದಲಿ ಬೇಡಿಕೊಳ್ಳದಿರುತ್ತಿರಲಿಲ್ಲ. ಅದಕ್ಕೆ ಅಂಗೀಕಾರ ಮುದ್ರೆ ಒತ್ತುವಂತೆ ಬ್ರುಸ್ ಬ್ರುಸ್ ಎಂದು ಮೂಗಿನಿಂದಲೂ ಬಾಯಿಂದಲೂ ಅವು ಸವಂಡು ಹೊರಡಿಸುತ್ತಿದ್ದವು. ಆದರೆ ಶಾಸ್ತ್ರಿಗಳು ಗೋಮಾತೆಗೆ ಸಂತಾನಭಾಗ್ಯವಿಲ್ಲವೆಂದು ನಿಟ್ಟುಸಿರಿಡುತ್ತಿದ್ದರೇ ಹೊರತು ಆ ಬಡಪಾಯಿ ಚತುಷ್ಪಾದಿ ಮೇಲೆ ಕೋಪಿಸಿಕೊಳ್ಳುತ್ತಿರಲಿಲ್ಲ. ಆದರೆ, ಆ ಶಾಸ್ತ್ರಕೋವಿದರ ಕ್ಷಮಾದಾನದಿಂದ ಗೋಮಾತೆ ನಿಜಕ್ಕೂ ದುಃಖಕ್ಕೀಡಾಗುತ್ತಿದ್ದಳು. ತನ್ನನ್ನು ಯಾರಾದರೂ ಅಪಹರಿಸಿಕೊಂಡೊಯ್ದು ಕಗ್ಗೊಲೆ ಮಾಡಬಾರದೆ ಎಂದು ಪ್ರತಿಕ್ಷಣ ಚಿಂತಿಸುತ್ತಿದ್ದಳು. ಒಂದು ದಿನ ಆಕೆಯೇ ಸ್ವ ಇಚ್ಛೆಯಿಂದ ಕಟುಕರ ಮನೆ ಬಾಗಿಲು ತಟ್ಟಿದಳು. ಕಟುಕರ ದಯಾನಂದನನ್ನು ತನ್ನನ್ನು ದಯವಿಟ್ಟು ಕಡಿದು ತುಂಡರಿಸಿ ಪುಣ್ಯ ಕಟ್ಟಿಕೊಳ್ಳುವಂತೆ ಪ್ರಾರ್ಥಿಸಿದಳು. ಅವನು ಆಕೆಯ ಕೋರಿಕೆಯನ್ನು ಮನ್ನಿಸಿದ.
ಗೋಮಾತೆಯ ಅವಸಾನ ಈ ಬಗೆಯದಾದರೆ ಕಾಂಬೋಜಿರಾಗದ ಲಕ್ಷ್ಮಿಕಾಂತರಾಯ ದೇಣಿಗೆ ರೂಪದಲ್ಲಿ ನೀಡಿದ ಮಾರ್ಜಾಲ ಕಥೆಯೇ ಇನ್ನೊಂದು ರೀತಿಯದಾಗಿತ್ತು. ಅದು ಜನ್ಮ ತಳೆದಿದ್ದು ಪುಳಿಯೋಗರೆಯವರ ಮನೆಯಲ್ಲಿ; ಸೇರಿಕೊಂಡಿರುವುದು ತಿಳಿಸಾರಿನವರ ಮನೆಯಲ್ಲಿ. ಹುಟ್ಟಿದ ಮತ್ತು ಸೇರಿಕೊಂಡ ಕೆಲ ದಿನಗಳಲ್ಲಿ ಆ ಮಾರ್ಜಾಲ ತನ್ನ ಬೇಟೆಗುಣವನ್ನು ಸಂಪೂರ್ಣ ಬಿಟ್ಟುಬಿಟ್ಟಿತ್ತು. ಆ ಸನಾತನೀಯ ವಾತಾವರನವೂ ಅದಕ್ಕೆ ಕಾರಣ. ನಮ್ಮ ಪೂರ್ವಿಕರಿಗಂತೂ ಉಲ್ಲಾಸವೇ ಉಲ್ಲಾಸ. ಒಂದು ದಿನ ಸೊಂಪಾಗಿ ನಿದ್ದೆ ಹೋಗಿದ್ದ ಆ ಮಾರ್ಜಾಲದ ಕೊರಳಿಗೆ ನಮ್ಮ ಪೂರ್ವಿಕರು ಘಂಟೆ ಕಟ್ಟಿ ಲೋಕಾರೂಡಿ ಮಾತನ್ನು ಸುಳ್ಳುಮಾಡಿಬಿಟ್ಟರು. ನಮ್ಮ ಪೂರ್ವಿಕರು
———————-

೧೦೭
ನೀಡುತ್ತಿದ್ದ ಕಿರುಕುಳ ಉಪಟಳ ತಾಳಲಾರದೆ ಮಾರ್ಜಾಲ ತಿರುಪತಿಗೋ, ರಾಮೇಶ್ವರಕ್ಕೋ ಹೋಯಿತು.
ಹೀಗಾಗಿ ನಮ್ಮ ಪೂರ್ವಿಕರು ಎರಡು ಮೂರು ತಲೆಮಾರುಗಳವರೆಗೆ ಶಾಸ್ತ್ರಿಗಳ ಗೃಹಕೃತ್ಯದ ಸೇವೆಯನ್ನು ನಿರ್ವಿರಾಮವಾಗಿ ಮಾಡಿ ಸಾಯುಜ್ಯ ಹೊಂದಿದರು. ಅವರ ಶ್ರೇಷ್ಟ ವಂಶದವನಾದ ನಾನು ಶಾಮಾ ಶಾಸ್ತ್ರಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳದಿದ್ದರಾದೀತೇನು? ವೇದಾಗಮ ಅಲಂಕಾರ ಗ್ರಂಥಗಳ ಮೇಲೆಲ್ಲ ಹಿಕ್ಕಿ ಉದುರಿಸುವ ಸೇವೆ ಮಾಡುತ್ತ; ನಾನೂ ಪರಮೇಶ್ವರ ಶಾಸ್ತ್ರಿಗಳಂತೆ ಮಹಾಪಂಡಿತನಾಗಬೇಕೆಂಬ ಸತ್‍ಸಂಕಲ್ಪದಿಂದ ತಾಳೆಗರಿ ಕಟ್ಟುಗಳನ್ನು; ವೇದಾಗಮ ಶಾಸ್ತ್ರ ಗ್ರಂಥಗಳ ಶ್ಲೋಕ ಭಾಗಗಳನ್ನು ಸಾಧ್ಯವಾದಷ್ಟು ತಿಂದುಂಡು ಸುಖವಾಗಿದ್ದೆ. ಈ ಸಂದರ್ಭದಲ್ಲಿಯೇ ಶಾಮಾ ಶಾಸ್ತ್ರಿ ಮನಸ್ಸನ್ನು ಗೆದ್ದ ಸುಂದರಿಯನ್ನು ನೋಡುವ ಆತಂಕದಿಂದ ಹ್ರಾಂ ಹ್ರೀಂ ಹ್ರೂಂ ರುದ್ರನಾಯಕನ ಮನೆಯನ್ನು ಪ್ರವೇಶಿಸಿದ್ದು. ಅನಸೂಯಳಾನ್ನು ನೋಡಿದ್ದು, ಬೆಕ್ಕಸ ಬೆರಗಾಗಿದ್ದು. ಪರವಾ ಇಲ್ಲ, ಶ್ರೀಕೃಷ್ಣನ ಕೊಳಲನ್ನು ಹೋಲುವ ಜುಟ್ಟಿನ; ಆ ಜುಟ್ಟಿನ ಮೂಲಕ ಅನೇಕ ರಾಗಗಳನ್ನು ಹೊರಡಿಸಿ ಶಾಮಾ ಶಾಸ್ತ್ರಿ ತನಗೆ ಅನುರೂಪಳಾದ ಕನ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆಂದು ಹೆಮ್ಮೆ ಪಟ್ಟಿದ್ದು. ಆ ಸಂದರ್ಭದಲ್ಲಿಯೇ ಶಾಮಲ ಸುಂದರಿಯಾದ ನೀನು ಕಿಲಕಿಲಗುಟ್ಟುತ್ತ ಎದುರಾಗಿದ್ದು. ಬಿನ್ನಾಣ, ವೈಯಾರದಿಂದ ನನ್ನ ಮನ ಸೂರೆಗೊಂಡಿದ್ದು, ನಾನು ಆ ಕ್ಷಣದಿಂದ ನಿನ್ನನ್ನು ತ್ರಿಕರಣಪೂರ್ವಕವಾಗಿ ಪ್ರೀತಿಸತೊಡಗಿದ್ದು. ನಿನ್ನ ಇಚ್ಛೆಯಂತೆಯೇ ನಾನು ನಿನ್ನ ಮನೆಯೊಳಗೆ ಠಿಕಾಣಿ ಹೂಡಿದ್ದು… ಇಂಥ ಅದ್ಭುತ ಪ್ರೇಮಿಯಾದ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತ ದುಃಖಿಸುತ್ತಿರುವೆಯಲ್ಲ!… ಇದು ನ್ಯಾಯವೇನೆ ಬಂಗಾರ’ ಎಂದು ನಿರರ್ಗಳವಾಗಿ ಮಾತಾಡಿ ಉದ್ವಿಗ್ನಗೊಂಡಿತು ಗಂಡಿಲಿ.
ತನ್ನ ಪ್ರಿಯತಮನ ವಾಗ್ ವೈಖರಿಗೆ ಹೆಣ್ಣಿಲಿಯ ಮನದೊಳಗಿನ ಸಮಸ್ತ ಅನುಮಾನವು ವೈಶಾಖದ ಸೂರ್ಯನಿಗೆ ಹಿಡಿದ ಮಂಜುಗಡ್ಡೆಯಂತೆ ಕರಗಿಹೋಯಿತು.
’ಅನುಮಾನವೂ ಪ್ರೀತಿಯ ಒಂದು ಭಾಗವೆಂದು ತಿಳಿಯಲೈ ಕಾಂತಾ ಅತಿಗುಣವಂತ.” ಎಂದು ಹೆಣ್ಣಿಲಿ ತನ್ನ ಪ್ರಿಯಕರನನ್ನು ಉತ್ಕಟವಾಗಿ ಚುಂಬಿಸಿತು.
ಆ ಅಪರೂಪದ ಚುಂಬನದಿಂದ ಗಂಡಿಲಿಗೆ ಆನೆ ಬಲ ಸಂದಿತು.
“ನಮ್ಮೆಲ್ಲರ ಪ್ರೀತಿಯ ಕನ್ಯಾಮಣಿಯನ್ನು ಶಾಮಾಶಾಸ್ತ್ರಿ ವರಿಸುವಂತಾಗಲು ನಾವು ನಮ್ಮ ಕುಲದೇವತೆಯಾದ ಗಣನಾಯಕನನ್ನು ಸ್ತುತಿಸೋಣ” ಎಂದು ಚರ್ಚೆಗೆ ಶ್ರೀಕಾರ ಹಾಕಿತು ಗಂಡಿಲಿ.
ಪಾರ್ವತಿ ಪುತ್ರನೇ ಸಿದ್ಧಿ ವಿನಾಯಕ
ಕೊಡು ಸುದ್ಭುದ್ಧಿಯನು ಶಾಮಾಶಾಸ್ತ್ರಿಗೆ ಕೊನೆಯ ತನಕ
ಅವರಿಬ್ಬರನು ದೂರ ಮಾಡದಿರು ಆನೆ ಮುಖದವನೆ
ಅಲುಮೇಲಮ್ಮ ಬರದಿರಲಿ ಇವರ ಪ್ರೀತಿಗೆ ಅಡ್ಡ
ಹಾಕಲಿ ಅವರವರ ಮನೆ ಮುಂದೆ ಹಂದರ ಬಹು ದೊಡ್ಡ
ಹಾಕಲಿ ಅಕ್ಷತೆ ಹಿರಿಕಿರಿಯರೆಲ್ಲರು
ಉಂಡುಂಡು ಡೇಗಲು ಹಾಲು ಕೀರು
ಮೂಶಕ ದಂಪತಿಗಳು ತಮ್ಮ ಬಾಲಗಣೇಶನನ್ನು ಸ್ತುತಿಸಿ ಹಾಡುತ್ತಿರಲು ಶಾಸ್ತ್ರಿಗಳ ಮನೆ ಹಿತ್ತಲ
———————

೧೦೮
ಕಡೆಯಿಂದ ಯಾವುದೋ ಒಂದು ಸಂದೇಶ ಹೊತ್ತು ತಂದಿದ್ದ ಬಣ್ಣಬಣ್ಣದ ರೆಕ್ಕೆಯ ಪತಂಗವೊಂದು ಆ ಡ್ರಾಯಿಂಗ್ ರೂಮನ್ನು ಒಂದು ಕಡೆಯಿಂದ ಸರ್ವೆ ಮಾಡಿ ಅನಸೂಯಳ ಮುಡಿಮೇಲೆ ರತ್ನಾಭರಣೋಪಾದಿಯಲ್ಲಿ ಅಲಂಕೃತವಾಗಿ ಕೂತುಕೊಂಡಿತು.

* * * * * *

ರೂಪು ತೇರಾ ಮಸ್ತಾನ ಪ್ಯಾರ್ ಮೇರಾ ದಿವಾನ ಎಂದು ರಿಕಾಟು ಸೊಸೂಟಿ ಬಯಲಿಂದ ಕೇಳಿ ಬರುತ್ತಿತ್ತು. ನಡುನಡುವೆ ಹಲೋ ಹಲೋ ಮೈಕ್ ಟೆಸ್ಟಿಂಗ್ ಒನ್ಟೂತ್ರೀ ಎಂದು ಪೋಣಿಸುತ್ತಿದ್ದುದು ಸಿನಿಮಾ ಹಾಡಿಗಿಂತ ಬೊಂಬಾಟಾಗಿತ್ತು.
ಮಾಳಿಗೆ ಮೇಲೆ ನಿಂತವರಿಗೆಲ್ಲ ಅದು ಸಲೀಸಾಗಿ ಕಾಣುತ್ತಿತ್ತು. ಆ ಧೂಳು, ಆ ಜನ, ಸದರಿ ಗ್ರಾಮಕ್ಕೆ ಹೊಸದು. ಎಲ್ಲಿ ಭಾಷಣ ಮಾಡುವುದೋ? ಅಲ್ಲಿ ಇಂದಿರಾ ಗಾಂಧಿಯನ್ನು ಬಯ್ಯುವರೆಂದೇ ಜನ ಸ್ವಾಭಾವಿಕವಾಗಿ ಅರ್ಥಮಾಡಿಕೊಂಡು ಬಿಡುತ್ತಿದ್ದರು.
ಆಕೆ ಅಂಥಾಕಿಯಲ್ಲ… ಆಕಿ ಹಡಕೊಂಡಿರೋದೈತಲ್ಲ… ಅದೇ ಹಂಗ ಮಾಡಿಸಾಕ್ಕತ್ತೈತಿ ಕೆಲವರು. ಹುಟ್ಟಿರೋದು ಸೆಗಣಿ ತಿನ್ನಂತತಿ, ತಾಯಿಯಾದಾಕಿ ತಿಂದ ಬಿಡೋದೇನು! ಅಂತಕೆಲವರು. ತಾಯಿ ಮಗ ಇಬ್ರೂ ಸೇರ‍್ಕೊಂಡು ಮಾಡಬಾರ್ದೆಲ್ಲ ಮಾಡ್ಯಾರಂತೆ… ಸಾವಿರಾರು ಮನೆ ಕೆಡವಿಸ್ಯಾರಂತೆ… ಲಕ್ಷಾಂತರ ಮಂದಿ ಮುದಕ ನರ ಕುಯ್ದರಂತೆ… ಇಡೀ ದೇಸದ ಮೂಗಿಗೆ ಮೂಗುದಾರ ಪೋಣಿಸಿ ತಮಗಿಷ್ಟ ಬಂದಂಗ ಕುಣಿಸಾಗಹತ್ಯಾರಂತೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ತನ್ನ ವಿರುದ್ಧವಾಗಲಿ ತನ್ ಮಗನ ವಿರುದ್ಧಾಗ್ಲಿ ಮಾತಾಡಿದ್ದವರನ್ನು ಪೋಲಿಸರು ಹಿಡಕೊಂಡುಹೋಗ್ತಾರಂತೆ… ಕನಸಿನಾಗ ಮಾತಾಡಿದ್ರೂ ಬಿಡೋದಿಲ್ಲವಂತೆ… ಎಬ ಸುದ್ದಿಯನ್ನು ರುಕ್ಕಮ್ಮ ಲೆಟ್ರಿನ್ನಿಗೆ ಹೋದಾಗ ಕೇಳಿಸಿಕೊಂಡದ್ದು ಆಕೆಯ ಗಾಬರಿಗೆ ಕಾರಣವಾಗಿತ್ತು. ಅದನ್ನೆಲ್ಲ ನೆನಪಿಸಿಕೊಂಡು ಮನಸ್ಸಿನಲ್ಲಿ ಇಂದರಾ ಗಾಂಧಿಗೆ ಕೋರೆ ಹಲ್ಲು ಕೆದರು ಜಡೆ; ಗುಳಾಪು ಕಣ್ಣು; ಸೀಳು ನಾಲಿಗೆ ಇತ್ಯಾದಿ ಮೇಕಪ್ಪು ಮಾಡುತ್ತ ರುಕ್ಕಮ್ಮ ಪಡಸಾಲೆಯ ಕಂಭಕ್ಕಾತು ಕೂತು ನಿಟ್ಟುಸಿರುಬಿಟ್ಟಳು.
“ಮಗಳೇ ಅನಸೂಯ” ಎಂದು ಕೂಗಿದಳು.
“ಹ್ಹಾಂ!” ಅನಸೂಯಾ ಸೆರಗನ್ನು ಹಲ್ಲಲ್ಲಿ ಕಚ್ಚಿ ಹಿಡಿದು ಬ್ರಾಗಾಗಿ ಹುಡುಕಾಟ ನಡೆಸಿದ್ದಳು.
“ಅಂಥ ಕಡೆ ನೀ ಹೋಗ್ಲೇಬೇಕೇನವ್ವಾ?”
“ಹೂನವ್ವಾ! ಎರಡಲೊಂದು ಪೈಸಲ್ ಮಾಡ್ಕೊಂಡು ಬರೋಕೆ ಹೋಗ್ಲೇಬೇಕು” ಭಗೀರಥ ಪ್ರಯತ್ನದಿಂದ ನಗಂದಿ ಗುಂಟ ನೇತಾಡುತ್ತಿದ್ದ ಬ್ರಾ ಪತ್ತೆ ಹಚ್ಚಿ ಬಿಟ್ಟಳು. ಅದರ ಆಯಕಟ್ಟಾದಭಾಗವನ್ನು ಕಡಿದು ತೂತು ಮಾಡಿದ್ದ ಗಂಡಿಲಿಯನ್ನು ಶಪಿಸಿದಳು. ಅಯ್ಯೋ ನನ್ನ ಗಂಡನನ್ನು ಬೈತಿದಾಳಲ್ಲ… ನಮ್ಮನ್ನು ಉಂಡು ನಮ್ಮ ಬಟ್ಟೆ ತೊಟ್ಟು ಅವಿವಾಹಿತೆ ಕೈಲಿ ನನ್ನ ಗಂಡ ಬಯ್ಯಿಸಿಕೊಳ್ಳುವಂತಾಯಿತಲ್ಲ… ಅಯ್ಯೋ ಸಿವನೇ ನನ್ನ ಗಂಡನನ್ನು ಬಯ್ದು ಪಾಪ ಕಟ್ಟಿಕೊಳ್ತೀರೋ ನೀನು ಯಾರನ್ನು ಹುಡುಕಿಕೊಂಡು ಹೋಗುತ್ತಿರುವೆಯೋ ಅವನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿ ನಿರಾಸೆಗೊಳಿಸಲಿ’ ಎಂದು ಒಂದು ಹಿಡಿ ಶಾಪ ಕೊಟ್ಟಿತು. ಶಾಪ ಕೊಡುವಾಗ ಅದು ಒದ್ದಾಡಿದ ಕಾರಣಕ್ಕೆ ಜಂತಿ ಸಂದಿಯಿಂದ ಗುಲಗಂಜಿ ಗಾತ್ರದಷ್ಟು ಮಣ್ಣು ಆಕೆಯ ಮುಡಿ ಮೇಲುದುರಿ ಅಲ್ಲಿದ್ದ ಪತಂಗಕ್ಕೆ ತೊಂದರೆ ಕೊಟ್ಟಿತು. ಎಲಾ ಕ್ಷುದ್ರ ಮೂಷಕವೇ ಅಂತ ಪತಂಗ ತೆರೆಯಲೆತ್ನಿಸಿದ ಮೂರನೆ ಕಣ್ಣಿಗೂ ಮಣ್ಣು ಬಿತ್ತು. ಅದು ಲಂಗದ ಮೇಲೆ ಕೂತು
——————–

೧೦೯
ಕಣ್ಣುಜ್ಜಿಕೊಳ್ಳುತ್ತಿರುವಾಗ ಅನಸೂಯಾ ಬೇಕು ಬೇಕೋ; ಬೇಡಬೇಡವೋ ಎಂಬಂತೆ ಉಡುವುದನ್ನೆಲ್ಲ ಉಟ್ಟು, ತೊಡುವುದನ್ನೆಲ್ಲ ತೊಟ್ಟು; ಬಡಿಯುವುದನ್ನೆಲ್ಲ ಬಡಿದುಕೊಂಡು ರೆಡಿಯಾಗಿ ಹುತ್ತದೊಳಗಿಂದ ವಾಲ್ಮೀಕಿ ಮಹರ್ಷಿ ಹೊರಬರುವಂತೆ; ಮಜ್ಜಿಗೆ ಆಳದಿಂದ ಬೆಣ್ಣೆ ತೇಲಿದಂತೆ ಕೋಣೆಯಿಂದ ಹೊರಗಡೆ ಬಂದಳು
“ಏನವ್ವಾ ಹೀಗ್ಯಾಕ ಕೂತುಕೊಂಡಿದ್ದೀ?” ಮೇವಾಡದ ರಾಜನಂತೆ ಯುದ್ಧಕ್ಕೆ ಹೊರಟಿರುವ ತನ್ನನ್ನು ನಗುಮುಖದಿಂದ ಬೀಳ್ಕೊಡುವುದು ಬಿಟ್ಟು ರುದ್ರನಾಯಕನ ವೀರವನಿತೆ ಮ್ಲಾನವದನಳಾಗಿ ಕುಳಿತಿರುವುದರೆಂದರೇನು? ಅನಸೂಯ ತಾಯಿ ಕಡೆ ನೋಡಿದಳು.
“ನಿನ್ನ ಗಂಡು ಮಗನಂತೆ ಬೆಳೆಸಿದ್ದೀವಿ ಮಗಳೇ. ನೀನು ಓದಿಕೊಂಡಿರೋಕೆ, ನಿನ್ಗೆ ಬುದ್ಧಿಹೇಳೋ ಶಕ್ತಿ ಆ ದೇವ್ರು ನನಗೆ ಕೊಟ್ಟಿಲ್ಲ… ಆ ಬ್ರಾಂಬ್ರು ಹುಡುಗನತ್ತ ನಿಷ್ಠುರವಾಗಿ ಕೇಳಿ ಬಂದುಬಿಡು… ಆದ್ರೆ ಹತ್ತು ಆಗದಿದ್ರೆ ಇಪ್ಪತ್ತು” ಆಕೆ ಇಷ್ಟೊಂದು ವೀರಾವೇಶದಿಂದ ಮಾತಾಡಿದ್ದು ಅದೇ ಮೊದಲು.
“ಹೌದವ್ವಾ ಕಡ್ಡಿ ಮುರುದಾಂಗ ಮಾತಾಡಿ ಬರ‍್ತೀನಿ… ನನ್ ಹಣೇಲಿ ಯಾರು ಗಂಡ ಅಂತ ಐತೋ ಅವನಿಂದ ನನ್ ಕುತ್ತಿಗೀಗೆ ತಾಳೀ ಬೀಳೋದಂತೂ ಗ್ಯಾರಂಟಿ. ಅದನ್ಯಾರು ತಪ್ಪಿಸೋಕಾಗಲ್ಲ…”
“ನಮ್ಮಂಥ ಕಪ್ಪುಜನ ಎಷ್ಟು ಅಂಗಲಾಚಿದರೂ ಬ್ರಾಂಬ್ರು ಮನ್ಸು ಕರಗೋದಿಲ್ಲಾಂತ ನಿಮ್ಮಪ್ಪ ಹೇಳಿದ್ರು. ಕಾಡೋದು ಬ್ಯಾಡ, ಬೇಡೋದು ಬ್ಯಾಡ… ಹ್ಹೂಂ ಅಂದ್ರೂ ಸರೆ; ಹೂಂ ಅನದಿದ್ರೂ ಸರೆ”
“ಹೌದವ್ವಾ… ನಾನೂ ಹಂಗೇ ಅಂದ್ಕೊಂಡಿರೋದು ನನ್ಗೂ ಅನುಮಾನ. ಆದ್ರೂ ಹೋಗ್ತಿದೀನಿ. ನೀನು ಯಾವುದ್ಕೂ ಧೈರ್ಯವಾಗಿರು.”
“ನಾನೂ ಅಷ್ಟು ದೂರ ಬರಲೇನವ್ವಾ… ಅಲ್ಲಿ ಪೋಲಿಸರು ಬಾಳ ಮಂದಿ ಇರ‍್ತಾರಂತೆ” ಎಷ್ಟದರೂ ತಾಯಿ ದುಗುಡ ಪ್ರಕಟಿಸಿದಳು.
“ನಮ್ಮ ಶಾಮೂನೇ ಏನು ಮಾಡೋದಿಲ್ಲ. ಅಂದ ಮ್ಯಾಲ ಪೋಲಿಸರೇನು ಮಾಡ್ಯಾರು ಬಿಡೆವ್ವ… ಅವ್ರೂ ನಮ್ಮಂಗೆ ಮನುಷ್ಯರು. ನೀನು ಚಿಂತೆ ಮಾಡದೆ ಮನೇಲಿರು. ನಾನು ಸರ್ರಂತ ಹೋಗಿ ಬರ್ರಂತ ಬರ‍್ತೀನಿ.”
ಅನಸೂಯಾ ತಾಯಿಯ ತಲೆ ನೇವರಿಸಿ, ಪಾದಗಳಿಗೆ ಮಾಮೂಲು ಚಪ್ಪಲಿ ಧರಿಸಿಕೊಂಡು ಮಂತ್ರಿಸಿದ್ದ ತೆಂಗಿನಕಾಯಿ ಕೆಳಗಿನಿಂದ ಹಾಯ್ದು ವಿಕ್ಟೋರಿಯಾ ಮುಖಗಳಿದ್ದ ನಾಣ್ಯಗಳನ್ನು ಅಂಗುಲಂಗುಲಕ್ಕೊಂದೊಂದರಂತೆ ಜಡೆದಿದ್ದ ಹೊಸ್ತಿಲು ದಾಟಿದಳು.
ಇದನ್ನೆಲ್ಲ ನೋಡಿ ಒಣ ನಿಷ್ಟುರ ಕಟ್ಟಿಕೊಳ್ಳುವುದು ಯಾಕೇಂತ ಮುಳುಗುವ ಅವಸರದಲ್ಲಿದ್ದ ಸೂರ್ಯ ತನ್ನ ಕಿರಣಗಳನ್ನು ಉಪಸಂಹರಿಸಿಕೊಳ್ಳತೊಡಗಿದ್ದ. ಜನರ ಪದಾಘಾತದಿಂದಾಗಿ ಎದ್ದಿದ್ದ ಧೂಳು ಬಹುಪಾಲು ಕಿರಣಗಳನ್ನು ಮಂಕುಗೊಳಿಸಿತ್ತು. ಹೀಗಾಗಿ ಸಂಜೆ ಸಮಯ ಹೋಗಲು, ಬರಲು ಒಂಥರಾ ಮಜವಾಗಿತ್ತು. ಮನುಷ್ಯ ಮನುಷ್ಯನ ನಡುವೆ ಒಂದು ರೀತಿ ತೆರೆ ಎಳೆದಂತಿತ್ತು. ಆದ್ದರಿಂದ ಇವರು ಇಂಥವರೇ ಎಂದು ಎಂಟು ಫೂಟು ದೂರದಿಂದಲೂ ಗುರುತಿಸುವುದು ಸಾಧ್ಯವಿರಲಿಲ್ಲ.
ಕಾದಂಬರಿಯೊಳಗೆ ಕಥೆಯೇ ನಡೆಯುತ್ತಿರುವಂತೆ; ವಾಕ್ಯದೊಳಗಿನ
———————————————————-

೧೧೦
ವ್ಯಾಕರಣವೇ ನಡೆಯುತ್ತಿರುವಂತೆ ಅನಸೂಯಾ ಹೆಜ್ಜೆಗೊಮ್ಮೊಮ್ಮೆ ಚೀಟಿಯ ಸಾರಾಂಶ ನೆನಪು ಮಾಡಿಕೊಳ್ಳುತ್ತ ನಡೆಯತೊಡಗಿದ್ದಳು. ಅವನು ತನ್ನ ತಲೆಯೊಳಗಿನ ಕವಿತೆಗಳನ್ನು ಒಂದೊಂದಾಗಿ ತೆಗೆದು ಖಾಲಿಮಾಡಿರುವನೆನೆಸಿತು. ಅವನು ತನ್ನ ತಲೆಯೊಳಗಿನ ಛಂದಸ್ಸು, ಅಲಂಕಾರ ಬೆಟ್ಟಿಯಾದಾಗರೊಂದೊಂದರಂತೆ ಲಪಟಾಯಿಸಿ ಬಿಟ್ಟಿರುವನೆನ್ನಿಸಿತು. ಈಗ ತನ್ನಲ್ಲಿ ಉಳಿದಿರುವುದು ಅರ್ಥವಿಲ್ಲದ ಅಕ್ಷರಗಳು ಮಾತ್ರ. ವಾಕ್ಯದ ಸುತ್ರ ಕಳೆದುಕೊಂಡ ಶಬ್ದಗಳು ಮಾತ್ರ, ಪ್ರತಿಯೊಂದು ಶಬ್ದಗಳು ಖಚಿತ ಆಕಾರ ಪಡೆಯದೆ ಗುರುತ್ವಾಕರ್ಷಣೆ ಯಿಲ್ಲದ ಉಪಗ್ರಹದ ಮೇಲೆ ತೇಲಾಡುತ್ತಿರುವ ಘನವಸ್ತುಗಳು ಮಾತ್ರ.
ನೆನಪುಗಳನ್ನು ಒಂದರ ಹಿಂದೆ ಒಂದರಂತೆ ನೆನಪು ಮಾಡಿಕೊಳ್ಳುತ್ತ ಸೊಸೂಟಿಯ ಬಯಲು ಅಷ್ಟು ದೂರ ಇದೆ ಅನ್ನುವಷ್ಟಲ್ಲಿ ನಿಂತುಕೊಂಡಳು. ಆಕೆಯ ಚಂಚಲ ನೇತ್ರಗಳು ಗಾಳಿಗಿಟ್ಟ ಸೊಡರ ಕುಡಿಯಂತೆ ಸುತ್ತ ಹೊಯ್ದಾಡಿದವು. ಮೈತುಂಬ ಧೂಳು ಮೆತ್ತಿಕೊಂಡು ಕಾದಕಾವಲಿ ಮೇಲಿನ ಕೋಳಿಮರಿಗಳಂತೆ ಚಡಪಡಿಸುತ್ತಿರುವ ಸಾವಿರಾರು ಜನ ನಿಂತಲ್ಲಿ ನಿಲ್ಲುತ್ತಿಲ್ಲ. ಕೂತಲ್ಲಿ ಕೂಡುತ್ತಿಲ್ಲ. ಸಾಧಾರಣ ವೇದಿಕೆ ಮೇಲೆ ಬಲಿಪಶುವಿನಂತಿದ್ದ ಮೈಕು. ಪ್ರಧಾನ ಮಂತ್ರಿ ಕುರ್ಚಿಯೊಂದಿಗೇ ಅಲಹಾಬಾದಿನ ಆನಂದಭವನದಲ್ಲಿ ಹುಟ್ಟಿರುವಂಥ ಇಂದಿರಾಗಾಂಧಿ ಬಗ್ಗೆ ಏನೇನೋ ಹೇಳಲಿರುವ ಜಾರ್ಜ್ ಫರ್ನಾಂಡಿಸ್, ಕಿಶನ್ ಪತ್ನಾಯಕ ಈಗ ಬಂದಾರು? ಆಗ ಬಂದಾರು? ಎಂದು ಕಾಯುತ್ತಿರುವ ಮಂದಿ ನಡುವೆ ಗೊಬ್ಬರದಂಗಡಿಯ ಜಲಜಾಕ್ಷಿ ದುತ್ತನೆ ಕಾಣಿಸಿಕೊಂಡಳು. ಬಿಳಿ ಸೀರೆ; ಹಸಿರು ಕುಪ್ಪಸ ತೊಟ್ಟು; ಎಡ ಸ್ತನದ ಮೇಲೆ ಪಾರಿಜಾತದ ಹೂವಿನಂತ ಬ್ಯಾಡ್ಜು ಸಿಕ್ಕಿಸಿಕೊಂಡಿದ್ದ ಆಕೆಗೆ ಕಣ್ಣಿಗೆ ಬೀಳಬಾರದೆಂದು ಅನಸೂಯ ಪ್ರಯತ್ನಿಸಿದ್ದು ವಿಫಲವಾಯಿತು. ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರದಂತೆ ಆಕೆ ಒಮ್ಮೆ ಎಡಗೈಯನ್ನೂ, ಇನ್ನೊಮ್ಮೆ ಬಲಗೈಯನ್ನೂ ಅಭಯ ನೀಡುತ್ತಿರುವ ರೀತಿಯಲ್ಲಿ ಮೇಲಕ್ಕೆತ್ತಿ ಅಲುಗಾಡಿಸುತ್ತ, ಪುರುಷ ಪ್ರೇಮಿಗಿಂತ ತಾನೇನು ಕಡಿಮೆ ಇಲ್ಲವೆಂಬಂತೆ ಬಂದು ಎದುರಿಗೆ ನಿಂತುಕೊಂಡೇಬಿಟ್ಟಳು.
“ಅನಸೂಯಾ! ಬಾ ಬಂದು ಕೂತ್ಕೋ… ರಾಜಕೀಯ ಅರ್ಥ ಮಾಡ್ಕೊಂಡ್ರೆ ಎಲ್ಲಾ ಪುಳಿಚಾರು ಅರ್ಥವಾಗ್ತದೆ” ಎಂದು ಕೂಡ್ರಲು ಸೋಡಾ ಸಿದ್ದಲಿಂಗಪ್ಪನ ಬಾಡಿಗೆಯ ಮೂರುಕಾಲಿನ ಕುರ್ಚಿ ತೋರಿಸಿದಳು.
“ಬೇಡ ಬಿಡೆ… ಅದಿರ‍್ಲಿ… ಏನಿದು ನಿನ್ನವತಾರ?” ಜಡ ಒನಕೆಯ ಗೊಂಬೆಯಂಥ ಮನಸ್ಸಿನ ಅನಸೂಯ ಕೇಳಿದಳು.
“ಒಲಂಪಿಕ್ಸ್‍ನಲ್ಲಿ ಹಂಡ್ರೆಡ್ ಮೀಟರ್ಸ್ ಹರ್ಡಲ್ಸ್‍ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ತೊಗುಳ್ಳಿಕ್ಕಾಗಿಲ್ಲ. ರಾಜಕೀಯ ರಂಗದಲ್ಲಾದ್ರು ಧುಮುಕಿ ಕನಿಷ್ಟ ಲೊಕಲ್ ಮಟ್ಟದಲ್ಲಾದ್ರು ಮಿಂಚಬೇಕೆಂದು ನಿರ್ಧಾರ ಮಾಡ್ದೆ ಅನಸೂಯಾ; ಇಂದಿರಗಾಂಧಿ ವಿರುದ್ಧದ ನವನಿರ್ಮಾಣ ಚಳುವಳಿಗೆ ಒಳ್ಳೆ ಫ್ಯೂಚರಿದೆ, ಏನಾದ್ರು ಮಾತಾಡಿ ಕೆಲ ದಿನದ ಮಟ್ಟಿಗಾದ್ರು ಜೈಲಿಗೆ ಹೋಗಿ ಬಂದುಬಿಟ್ರೆ ಪೊಲಿಟಿಕಲ್ ಐಡೆಂಡಿಟಿ ಸಿಗೋದಂತೂ ಗ್ಯಾರಂಟಿ… ಮುಂದೊಂದಿನ ನಾನು ಮಿನಿಷ್ರಾದ್ರೂ ಆಶ್ಚರ್ಯಪಡಬೇಕಿಲ್ಲ. ಇವತ್ತಿನ ಪಾಲಿಟಿಕ್ಸಿಗೆ ನನ್ನಂಥ ಸದೃಡ ಮಹಿಳೆಯರ ಅಗತ್ಯ ತುಂಬಾ ಇದೆ. ಅದು ಅಲ್ಲದೆ ನನ್ನಂಥ ಬಾಡಿ ಬಿಲ್ಡರ‍್ಸು ಭಾಗವಹಿಸಿದಾಗ ಮಾತ್ರ ಯಾವುದೇ ಚಳುವಳಿಗೆ ಅರ್ಥ ಬರೋದು… ಒಂದು ದುರ್ದೈವದ ಸಂಗತಿ ಎಂದರೆ ಇಂದಿರಾಗಂಧಿಯಂಥ
—————————————

೧೧೧
ಉಕ್ಕಿನ ಮಹಿಳೆ ವಿರುದ್ಧ ನನ್ನಂಥ ಮಹಿಳೆಯರು ಹೋರಾಡಬೇಕಾಗಿ ಬಂದಿರೋದು… ಈಗ ನೀನೇನು ಮಾಡ್ತಿದೀಯಾ? ಪ್ರೇಮ ಪ್ರೀತಿ ಅಂತ ತಲೆಕೆಡಿಸಿಕೊಂಡು ಆ ಅರೆಹುಚ್ಚ ಶಾಮಾ ಶಾಸ್ತ್ರಿಯ ಹಿಂದೆ ಇನ್ನೂ ತಿರುಗಿತ್ತಿದೀಯಾ ಹೇಗೆ? ನಿನ್ನ ಮದುವೆ ಆಗೋ ಧೈರ್ಯ ಆ ಪುಳಿಯೋಗರೆಗಿಲ್ಲ. ಅಂಥೋರೆಲ್ಲ ಮುಷ್ಠಿ ಮೈಥುನ ಮಾಡಿಕೊಳ್ಲಿಕ್ಕಷ್ಟೆ ಲಾಯಕ್. ಆ ಪ್ರಾಕ್ರುತ ಜಾನುವಾರು ಮತ್ತು ನೀನೂ ನನ್ನಂಗೆ ಪಾಲಿಟಿಕ್ಸ್‍ಗೆ ಇಳ್ದುಬಿಡು. ಪಾಲಿಟಿಕ್ಸ್‍ಗೆ ನಿನ್ನಂಥ ಬ್ಯಾಕ್ವರ್ಡ್ ಕ್ಲಾಸ್ ಬ್ರಿಲಿಯಂಟ್ ಹುಡುಗೀರ ಅಗತ್ಯ ತುಂಬ ಇದೆ” ಭಾಷಣದ ತಾಲೀಮು ಮಾಡುತ್ತಿರುವಂತೆ ಜಲಜಾಕ್ಷಿ ಪಟಪಟಾಂತ ಮಾತಾಡಿದಳು.
ಅದನ್ನೆಲ್ಲಾ ಕೇಳಿ ಅನಸೂಯಾಗೆ ಆಶ್ಚರ್ಯವೋ ಅಶ್ಚರ್ಯ. ಎಷ್ಟೊಂದು ಚೆನ್ನಾಗಿ ಮಾತಾಡುವುದನ್ನು ಕಲಿತಿರುವಳಲ್ಲ ನನ್ನ ಗೆಳತಿ! ಕೆಳಗೂ ಮೇಲೂ ನೋಡಿದಳು.
“ನಾನು ಪಾಲಿಟಿಕ್ಸಿಗಿಳಿದು ಸಮಾಜ ಉದ್ಧಾರ ಮಾಡೋದು ಒತ್ತಟ್ಟಿಗಿರ‍್ಲಿ… ಇದ್ನ್ನೆಲ್ಲ ನಿನ ತಲೆಗೆ ತುಂಬ್ದೋರು ಯಾರೂಂತ?” ಎಂದು ಕೇಳಲು
ಬಾಡಿಬಿಲ್ಡರು ಕೆಮ್ಮಿ ಗಂಟಲು ಸರಿಪಡಿಸಿಕೊಂಡು, ಒಂದಿನ ತಮ್ಮ ಮನೆಗೆ ಕಾಫಿ ಪುಡಿ ಬಣ್ಣದ ಮಸಾಲೆ ಮಾಯಣ್ಣ ತನ್ನ ಮೂರಡಿ ಕಾಯವನ್ನು ಆರಡಿ ಮಾಡಿಕೊಂಡು ಬಂದದ್ದು, ಉಪ್ಪಿಟ್ಟು ತಿಂದ ಕೈಯನ್ನು ತೊಳೆದುಕೊಳ್ಳಲೆಂದು ಹಿತ್ತಲಿಗೆ ಹೋಗಿದ್ದಾಗ ಡಂಬಲ್ಸು; ಬುಲ್‍ವರ್ಕರ್ ಮುಂತಾದ ವ್ಯಾಯಾಮದ ಪರಿಕರಗಳನ್ನು ನೋಡಿದ್ದೂ; ಈ ಹುಡುಗಿ ಇಷ್ಟೆಲ್ಲಾ ಮಾಡ್ತಾಳ ಎಂದು ಆಶ್ಚರ್ಯಪಟ್ಟಿದ್ದು; ಆ ನಂತರ ’ಅಲ್ಲೋ ಗುರುಬಸ್ವಾ… ನಿನ್ ಕೈಲಂತೂ ಪಾಲಿಟಿಕ್ಸಿಗೆ ಬರೋದಾಗ್ಲಿಲ್ಲ, ನಿನ್ ಮಗಳನ್ಯಾಕ ಪಾಲಿಟಿಕ್ಸಿಗೆ ಇಳಿಸಬಾರ್ದು! ಇಂಥ ಪರ್ಸನಾಲಿಟಿ ಇರೋರಿದ್ರೇನೆ ಇಂದಿರಾ ವಿರೋದಿ ಚಳುವಳಿಗೆ ಶಕ್ತಿ ಬರೋದು, ನಾನು ಕಾಂಗ್ರೆಸ್ನೋನು ಅಂತ ಅನುಮಾನ ಪಡಬೇಡ, ಲೈಸನ್ಸೂ ಹಾಳೂ ಮೂಳೂ ಬೇಳೆ ಬೆಂದ ಕೂಡ್ಲೆ ಪ್ರಧಾನಿಯ ಸರ್ವಾಧಿಕಾರಿ ಮನೋಭಾವ ಪ್ರತಿಭಟಿಸಿ ನಾನೂ ಪಕ್ಷಾಂತರ ಮಾಡಿಬಿಡ್ತಿನಿ” ಎಂದು ಹೇಷಾರವ ಮಾಡಿದ್ದು; ಎರಡು ಸಾರಿ ಎಮ್ಮೆಲ್ಲೆಯಾಗಿ ಸಾಕಷ್ಟು ಆಸ್ತಿ ಮಾಡ್ಕೊಂಡಿರೋ ಮಾಯಣ್ಣನಿಗೆ ಮಗಳನ್ನು ಕಟ್ಟಿಬಿಡುವುದೆಂದು ಗುರುಬಸಪ್ಪಾ ದಂಪತಿಗಳು ಸಮಾಲೋಚಿಸಿ, ಒಪ್ಪಿಗೆ ಕೊಟ್ಟಿದ್ದೂ ಎಲ್ಲವನ್ನೂ ಕೂಲಂಕುಷವಾಗಿ ವಿವರಿಸಿದಳು ಜಲಜಾಕ್ಷಿ.
ಅದನ್ನೆಲ್ಲ ಕೇಳಿ ಅನಸೂಯ ದಿಗ್ಭ್ರಮೆಗೊಂಡಳು.
ಬೆಸ್ಟ್ ಆಫ್ ಲಕ್ ಎಂದು ಹೇಳಬೇಕೆನ್ನುವಷ್ಟರಲ್ಲಿ ಬುರ್ರ್ ಅಂತ ಕಪ್ಪು ಕಾರೊಂದು ಬಂದು ನಿಂತಿದ್ದು, ಅದರಿಂದ ಆವಿರ್ಭವಿಸುತ್ತಿರುವ ರೀತಿಯಲ್ಲಿ ನೆಸ್ ಕೆಫೆ ಬಣ್ಣದ ಕುಳ್ಳು ವ್ಯಕ್ತಿ ಭಲೆ ಸ್ಟೈಲಿನಿಂದ ನಡೆದು ಬಂದದ್ದು… ಹಾಯ್ ಎಂದು ಕೂಗಿದ್ದು ಎಲ್ಲಾ ಸರಿಹೋಯ್ತು.
“ಹಲೋ ಮಯೂ ಡಾರ್ಲಿಂಗ್ ಇಷ್ಟೊತ್ತು ಎಲ್ಲಿ ಹೋಗಿದ್ದೆ? ಒನ್‍ಮಿನಿಟ್ ಬಾ ಇಲ್ಲಿ” ಎಂದಳು. ಆತ ತನ್ನ ಕೈಯ ಸಮಸ್ತ ಬೆರಳುಗಳಿಗಿದ್ದ ಉಂಗುರಗಳನ್ನು ಝಳಪಿಸುತ್ತ ಹತ್ತಿರ ಬಂದ.
“ಅನಸೂಯಾ! ನಾನ್ ಹೇಳ್ತಿದ್ನಲ್ಲ! ಇವ್ರೆ ನನ್ನ ಉಡ್ಬೀ… ಸಿಂಗಟ್ಲೂರ್ ಕ್ಷೇತ್ರದಿಂದ ಎರಡು ಸಾರಿ ಎಮ್ಮೆಲ್ಲೆಯಾಗಿ ಎಲೆಕ್ಟಾಗಿದಾರೆ” ಎಂದು ಜಲಜಾಕ್ಷಿ ಹತ್ತಿರ ನಿಂತು ಪರಿಚಯಿಸಿದಳು.
“ಹಲೋ! ತುಂಬ ಸಂತೋಷವಾಯ್ತು. ನಿಮ್ಮನ್ನು ನೋಡಿ” ಕೈಮುಗಿದಳು. ಅಕ್ಕಿರೊಟ್ಟಿ ಮೇಲೆ ಹುಚ್ಚೆಳ್ಳು ಚಟ್ನಿ ನೆನಪಿಸಿಕೊಂಡಳು.
ಆ ಇಬ್ಬರು ಭವಿಷ್ಯತ್ ಕಾಲದ ದಂಪತಿಗಳು ಅಷ್ಟುದೂರ ಸರಿದು (ಅವರ ಉಸಿರು ಇವರಿಗೆ
————————

೧೧೨
ಬಡಿಸಿ ಇವರ ಉಸಿರು ಅವರಿಗೆ ಬಡಿಸಿ) ರಾಜಕೀಯ ಪರಿಭಾಷೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟುಸ್ಸಾ ಪುಸ್ಸಾ ಮಾತಾಡಿಕೊಂಡರು. ಮಸಾಲೆ ಮಾಯಣ್ಣನೆಂಬ ಆಗಸದಲ್ಲಿ ಫಳಫಳ ಹೊಳೆಯುವ ಬೆಳ್ಳಿಚುಕ್ಕಿಯಂಥ ಜಲಜಾಕ್ಷಿ ತನ್ನ ಜೀವನದ ಗೆಳತಿಯ ಬಳಿಗೆ ಓಡಿಬಂದಳು.
“ಜಾರ್ಜ್ ಫರ್ನಾಂಡಿಸ್ಸಿಗೆ ಗಾರ್ಲೆಂಡಾಕೋದ್ಕೆ ನನ್ನೇ ಆಯ್ಕೆ ಮಾಡಿದ್ದಾರೆ ಕಣೆ. ಕಣ್ತುಂಬ ನೋಡ್ವಂತಿ, ಆ ಶಾಮು ಇದ್ರೆ ಜೊತೆಗೆ ಕರೆದೊಯ್ಯಬೌದಿತ್ತು. ನೀನು ಬರ‍್ತೀ ಏನು? ಕಾರ‍್ನಲ್ಲಿ ಹೋಗೋಣ.’ ಚಟಪಟ ನುಡಿದಳು.
“ಇಲ್ಲ… ನನಗದೆಲ್ಲ ಆಗೋದಿಲ್ಲ… ನೀನು ಹೋಗಿ ಬಾ… ಬೆಸ್ಟ್ ಆಫ್ ಲಕ್”ಎಂದಳು ಅನಸೂಯ.
“ಆಗ್ಲಿ ನಿನ್ನಿಷ್ಟ. ಇಂದಿರಾಗಾಂಧಿ ವಿರೋಧಿ ಕವಿತೆ ಬರೆಯೋದ್ಕೆ ಆ ನಿನ್ನ ಶಾಮುಗೆಮ್ ಹೇಳು; ಇದ್ಕೆಲ್ಲ ಸಾಹಿತ್ಯದ ಅಗತ್ಯ ತುಂಬ ಇದೆ… ಬರ‍್ತೀನಿ” ಜಲಜಾಕ್ಷಿ ಬುಡುಬುಡು ಓಡಿ ಕಾರೊಳಗೆ ಮುಖ ಯಾರಿಗು ಕಾಣಬಾರದೂಂತ ಮರೆಮಾಚಿ ಸ್ಟೇರಿಂಗ್ ಮುಂದೆ ಕೂತಿದ್ದ ತನ್ನ ವುಡ್‍ಬೀ ಪಕ್ಕ ಕೂತುಕೊಂಡಳು. ಕಾರು ಬುರ್ರಂತ ಓಡಿಹೋಯಿತು.
ಒಂದು ಕ್ಷಣ ಭಯಂಕರ ಸುಂಟರಗಾಳಿಯಲ್ಲಿ ಸಿಕ್ಕು ಬಿಡುಗಡೆಗೊಂಡ ಅನಿರ್ವಚನೀಯ ಅನುಭವವಾಯಿತು ಅನಸೂಯಳಿಗೆ.
ಜನ ಎಷ್ಟು ವೇಗವಾಗಿ ಬದಲಾಗುತ್ತಿರುವರಲ್ಲ ಎಂದೆನಿಸಿತು. ರಾಜಕೀಯ ರಂಗವೆಂಬ ಅಖಾಡದೊಳಗೆ ಧೈರ್ಯವಾಗಿ ನುಗ್ಗಿರುವ ತನ್ನ ಗೆಳತಿ ಬಗ್ಗೆ ಹೆಮ್ಮೆ ತಾಳಿದಳು.
ಎಲ್ಲಿ ಹೋದನೀ ಶಾಮ ಎಂದು ಸುತ್ತ ಕಣ್ಣಾಡಿಸಿದ ಆಕೆಗೇನು ಗೊತ್ತು – ಶಾಮಾಶಾಸ್ತ್ರಿ ರಸ್ತೆ ಪಕ್ಕ ಅರಳಿ ಮರದ ದೊಡ್ಡೆ ಬಂಡೆಹಿಂದೆ ಜಲಜಾಕ್ಷಿಗೆ ಹೆದರಿ ಅವಿತುಕೊಂಡಿದ್ದುದು. ತಾನು ಕಣ್ಣಿಗೆ ಬಿದ್ದರೆಲ್ಲಿ ಬಾಡಿಬಿಲ್ಡರ್ ಅಪ್ಪಚ್ಚಿ ಮಾಡಿಬಿಡುವಳೋ ಎಂದು ಅವನು ಪ್ರತಿವಿದ್ಯಮಾನದವನ್ನು ಭಯದಿಮ್ದ ಇಣುಕಿ ನೋಡತೊಡಗಿದ್ದ. ಕಾರು ಅತ್ತ ಹೋದ ಕೂಡಲೆ ಇತ್ತ ಅವನು ಧೈರ್ಯವಾಗಿ ಅನಸೂಯಳಿಗೆ ಕಾಣಿಸಿಕೊಳ್ಳಬೇಕೆಂದು ನೆಲಕ್ಕೆ ಬಲವಾಗಿ ಅಂಟಿಕೊಂಡಿದ್ದ ಕಾಲನ್ನು ಕಿತ್ತೀಚೆ ಇಡಬೇಕೆಂದು ಪ್ರಯತ್ನಿಸಿದ. ಸರ್ಪಾಸ್ತ್ರ ಹೇಗೆ ಕರ್ಣನ ಬತ್ತಳಿಕೆ ಸೇರಿಕೊಂಡು ಬಿಟ್ಟಿತ್ತೋ ಹಾಗೆ ಕೆಂಪನೆಯ ವೃಶ್ಚಿಕವೊಂದು ಕುಡುತಿನಿ ಮಗ್ಗಿಯಿಂದ ಒಂಟಿಕಣ್ಣು ರಾಮನ ಬಂಡಿ ಈರಿ ಬಂದು ಅಲ್ಲಿ ಕಾಂಡದ ಮೇಲೆ ಕೂಂತುಬಿಟ್ಟಿತ್ತು. ಏನೋ ಆಪ್ಯಾಯಮಾನವಾದ ವಾಸನೆ ಶಾಮನ ಪುಷ್ಠಭಾಗದಿಂದ ಮೂಗಿಗೆ ಬಡಿದು ಅದು ಕೊಂಡು ನಿಗರಿಸಿ ಅಲರ್ಟಾಗಿ ಬಿಟ್ಟಿತ್ತು. ಆ ವಾಸನೆ ಯಾವುದಪ್ಪಾ ಎಂದರೆ; ತನ್ನ ತಾಯಿಯ ಮೈಲಿಗೆಯಾಗಿದ್ದ ಒಳ ಉಡುಪುಗಳೊಂದಿಗಿದ್ದ ಡ್ರಾಯರನ್ನು ಉಟ್ಟುಕೊಂಡಿಡು ಬಂದಿದ್ದುದು. ಅದರ ವಾಸನೆ ಹೆಂಗೆಂಗೆ ಬರುವುದೋ ಆ ಕೆಂಜೇಳು ಹಂಗಂಗೆ ಆಡತೊಡಗಿತು. ಅಲ್ಲಿಂದ ಬಹಿರಂಗವಾಗಿ ಕಾಣಿಸಿಕೊಳ್ಳಲು ಭೂಗತ ಹೋರಾಟಗಾರನಂತೆ ಅವನು ಕಾಂಡಕ್ಕೆ ಹೊಕ್ಕಳು ಭಾಗವನ್ನು ಅಂಟಿಸಿದ. ತಾನೆಲ್ಲಿ ಸತ್ತುಹೋಗಿಬಿಡುವೆನೋ ಎಂಬ ಪ್ರಾಣ ಭಯದಿಂದ ಅದು ಅವನ ಶಿಶ್ನದ ತುದಿಯನ್ನು ಕುಟುಕ್ಕನೆ ಕುಟಿಕಿಬಿಟ್ಟಿತು. ಆ ಕೂಡಲೆ ತನ್ನ ತೊಡೆ ಸಂದಿಯ ಆಯಕಟ್ಟಾದ ಭಾಗಕ್ಕೆ ಯಾರೋ ಸುಡುಸುಡುವ ಕೆಂಡದುಂಡೆಗಳನ್ನು ಎಸೆದು ಬಿಟ್ಟಂತೆ ಅನುಭವವಾಯಿತು. ಭೀಮಸೇನಂ ಗದಾಘಾತದೋಳೂರು ಭಗಮಂ ಮಾಡಿದೊಡನೆ ಅಭಿಮಾನಧನಂ ಚೀರಿಕೊಂಡಂತೆ ಶಾಮ
—————————-

೧೧೩
’ಮಾತೋಶ್ರೀ ಪಾಹಿಮಾಂ’ ಎಂದು ಗಟ್ಟಿಯಾಗಿ ಚೀರಿಕೊಂಡುಬಿಟ್ಟನು. ಅದು ಅಲ್ಲೆಲ್ಲ ಪ್ರತಿಧ್ವನಿಸಿತು. ಆ ರೌರವಕ್ಕೆ ಹೆದರಿ ಪಕ್ಷಿಗಳೆಲ್ಲ ಮರದಿಂದ ಪುರ್ರನೆ ಆಗಸಕ್ಕೆ ಹಾರಿದವು. ಯವುದೋ ಅಶರೀರವಾಣಿ ಕೇಳಿಸಿಕೊಂಡಂತೆ ಜನ ಕಂಗಾಲಾಗಿ ಜನ ಸುತ್ತಮುತ್ತ ನೋಡಿದರು.
ಅರಳೀ ಮರವೇ ಮಾತಾಡಿತೆಂದು ಅಪಾರ್ಥ ಮಾಡಿಕೊಂಡು ಆ ರಾಜಕೀಯ ಕಾರ್ಯಕರ್ತರು ಅಪ್ಪಿಕೊಳ್ಳಲೆಂದು ಮರದ ಕಡೆ ಉರವಣಿಸಿದರು. ಕೆಲವರು ಬೊಡ್ಡೆಗೆ ಕಿವಿಯಾನಿಸಿ ಸಂಸ್ಕೃತ ಭಾಷೆಯನ್ನು ಕೇಳುವ ಪ್ರಯತ್ನ ನಡೆಸಿದರು. ಕೆಲವರು ಮರಕ್ಕೆ ದೆವ್ವ ಬಡಕೊಂದೈತಿ ಎಂದು ಕಾಲಿಗೆ ಬುದ್ಧಿ ಹೇಳಿದರು. “ಪಾಪ! ದೇವ್ರಂಥಾಕಿ ನಮ್ ಇಂದ್ರಾ ಗಾಂಧೀನ ಬಯ್ದ್ರೆ, ಮರ ಮಾತಾಡದಂಗಿರ‍್ತದೇನು?” ಎಂದು ದೂರ ನಿಂತು ಚುಟ್ಟ ಸೇದತೊಡಗಿದರು.
ಆದ್ರೆ ನಮ್ಮ ಕಥಾನಾಯಕ ಶಾಮಾಶಾಸ್ತ್ರಿ ಅವರೆಲ್ಲ ತನ್ನನ್ನು ಒದೆಯಲಿಕ್ಕೇ ಬಂದರೆಂದೇ ಭಾವಿಸಿ ತೊಡೆ ಸಂದಿಯ ಅಗ್ಗಿಷ್ಟಿಕೆಯನ್ನು ಮೌನವಾಗಿ ಸಹಿಸಿಕೊಂಡನು. ಬಟ್ಟೆಯಿಂದ ದಾರ ಹೊರಬರುವಂತೆ ಹೊರಬಂದನು. ಅದೇ ಹೊತ್ತಿಗೆ ಶಾಮೂ ಎಂಬ ಧ್ವನಿ ಕೇಳಿಸಿ ಆ ಕಡೆ ತಿರುಗಿದನು. ಅನಸೂಯ ಕಂಡಳು. ಅಗ್ನಿ ಪ್ರವೇಶ ಮಾಡಿ ವೀರ ಸ್ವರ್ಗ ಸೇರಲುತ್ಸುಕದ ಸತಿಯಂತೆ ಗೋಚರಿಸಿದಳು. ಅನೂಽಽ ಎಂದು ಬಳಿಸಾರ್ದನು. ಆಕೆ ಕಿಮಕ್ಕೆನ್ನದಿರುವುದು ಕಂಡ ಆತನಿಗೆ ಆಶ್ಚರ್ಯ ಮತ್ತು ದುಃಖವಾಯಿತು. ಅವನು ತೊಡೆ ನಡುವೆ ಯಾಕೆ ತನ್ನೆರಡೂ ಕೈಗಳನ್ನಿರಿಸಿಕೊಂಡಿರುವನೆನ್ನುವುದೇ ಆಕೆ ಕಿಮಖ್ ಎನ್ನದಿರುವುದಕ್ಕೆ ಕಾರಣ.
ಆಕೆ ಶಾಮಾಽಽ ಎಂದಳು. ಅನೂ ಅಂದ. ಯಾಕೆ? ಏನಾಯ್ತು ಅಂದಳು ಚೇಳು ಕುಟುಕ್ತೂ ಅಂದ. ಎಲ್ಲಿ ಕುಟುಕ್ತೂ ಅಂದಳು. ಏನೋ ಒಂದು ನೆವ ಹುಡುಕಿಕೊಂಡಿರುವನೆಂದೇ ಆಕೆಗೆ ಅನುಮಾನ. ಕುಟಿಕಿರುವ ಜಾಗದ ಬಗ್ಗೆ ಅವನು ಏನು ಹೇಳಿಯಾನು! ಅವನ ಕಣ್ಣಲ್ಲಿದ್ದ ನೀರನ್ನು ಆಕೆ ಗಮನಿಸಲಿಲ್ಲ.
ಅವರಿಬ್ಬರು ಹಾಗೆ ನಡಕೋತ ಬಯಲ ಕೊನೆಗೆ ಹೋದರು. ಆ ಜಾಗ ಪ್ರಾಯಶಃ ನಿರ್ಮಾನುಷವಾಗಿತ್ತು. ಅಲ್ಲೊಂದು ಹಾಳುಗುಡಿ ಇತ್ತು. ದುರ್ಗದ ಪಾಲೇಗಾರ ಮೂರನೆ ಮುದ್ದು ಮದಕರಿ ನಾಯಕ ಗುಡೇಕೋಟೆಯ ವಿಜಯಶಾಲಿಯಾದ ನೆನಪಿಗೆ ಕಟ್ಟಿಸಿದ್ದಂತೆ. ಗುಡೆಕೋಟೆ ಮತ್ತು ದುರ್ಗದವರ ನಡುವೆ ಘೋರ ಯುದ್ಧ ನಡೆದು ಹತ್ತಾರು ಮಂದಿ ಸತ್ತು; ನೂರಾರು ಮಂದಿ ಕೈಕಾಲು ಕಳೆದುಕೊಂಡಿದ್ದು ಅದೇ ಬಯಲಿನಲ್ಲಂತೆ. ನಾಯಕ ತಾನು ಕಟ್ಟಿಸಿದ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಹೆಣ್ಣು ದೇವರಿಗೋ; ಗಂಡು ದೇವರಿಗೋ ಒಂದೂ ತಿಳಿಯದು. ರಜಸ್ವಲೆಯಾದವರಿಂದ ಹಿಡಿದು ಮುಟ್ಟುನಿಲ್ಲುವವರೆಗೆ ಸ್ತ್ರೀಯರೂ; ಗಡ್ಡ ಮೂಡಿದಂದಿನಿಂದ ಹಿಡಿದು ಗುದ್ದಿನ ಹಾದಿ ಹಿಡಿಯುವವರೆಗೆ ಗಂಡಸರೂ ಏಕಪ್ರಕಾರವಾಗಿ ನೂರಾರು ವರ್ಷಗಳಿಂದ ಖಾದ್ಯ ತೈಲ ಎರೆದೂ ಎರೆದೂ ಆ ಶಿಲ್ಪ ಬೋಡಾಗಿ ಬಿಟ್ಟಿರುವುದು. ಅಲ್ಲಿ ದೀಪ ಮುಡಿಸಲು ಆಳುವ ಸರಕಾರದಿಂದ ಪ್ರತಿ ತಿಂಗಳು ರುಷುವತ್ತು ಪಡೆಯುತ್ತಿರುವ ಅಧಿಕೃತ ಪೂಜಾರಿ ದಾಸರಿ ತಿಮ್ಮಪ್ಪ ಯುಕ್ತ ವಯಸ್ಸಿನಲ್ಲಿ ಹೆಂಡತಿ ಕಳೆಕೊಂಡ ಲಾಗಾಯ್ತು ಸಮಾನ್ಯವಾಗಿ ಅಲ್ಲಿಯೇ ಮಲಗಿಕೊಂಡಿರುತ್ತಿದ್ದ. ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಟೆಂಪ್ಟೇಷನ್ ಹೆಚ್ಚಾದಾಗ ಚಲವಾದಿ ರಂಗಮ್ಮ ಎಂಬ ಅರವತ್ತು ವರ್ಷದ ಅಪ್ಸರೆ ಬಳಿಗೆ ಹೋಗಿ ಅವತ್ತಿನವರೆಗಿನ ದುಡಿಮೇನೆಲ್ಲ ಸುರಿದು ಏದುಸಿರು ಬಿಡುತ್ತ ಸಿನೆಮಾ ಟಾಕೀಸಿನ ಬಳಿಗೆ ಬಂದು ಅರ್ಧ ಚಾ ಉದ್ರಿ ಕುಡಿದು, ಎರಡು ಬೀಡಿ ಬಿಟ್ಟಿ ಸೇದಿ ಗುಡಿ ಕಡೆ ಸಾಷ್ಟಾಂಗ ಹಾಕುತ್ತಾ ಬರುತ್ತಿದ್ದ.
————————-

೧೧೪
ಅವರ ಪುಣ್ಯಕ್ಕೆ ಅವನು ಅಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ.
“ಶಾಮೂ… ಅದೇನು ಮನಸ್ನಲೈತೋ ಹೇಳಿಬಿಡು” ಅನಸೂಯ ಮೊಟ್ಟಮೂದಲ ಬಾರಿಗೆ ಗದ್ಗದಿತಳಾಗಿದ್ದಳು. ಎಷ್ಟು ತಡೆದರೂ ಕಣ್ಣುಗಳು ಒದ್ದೆಯಾದವು. “ಮೂಗಿಗೆ ತುಪ್ಪ ಹಚ್ಚೋ ಮಾತು ಮಾತ್ರ ಆಡಬೇಡ” ಎಂದು ಕಡ್ಡಿ ಮುರಿದಂತೆ ನುಡಿದಳು.
ಈ ಭಾರತೀಯ ತರುಣಿ ಹೀಗೆ ನುಡಿಯುತ್ತಿರುವಳಲ್ಲ! ಗಂಟಲಲ್ಲಿರುವ ಬಿಸಿ ತುಪ್ಪವನ್ನು ನುಂಗುವುದು ಹೇಗೆ! ಉಗುಳುವುದು ಹೇಗೆ! ಶಾಮುಗೆ ಪಜೀತಿಗಿಟ್ಟುಕೊಂಡಿತು. ತನ್ನ ಇಷ್ಟದೇವತೆಗಳಾದ ಪಿತಾಮಹಾಶ್ರೀ; ಮಾತಾಶ್ರೀ ಒಟ್ಟಿಗೆ ಚಿಕ್ಕ ಮೆದುಳಿನಲ್ಲಿ ಪ್ರತ್ಯಕ್ಷರಾಗಿ “ಎಲೈ ವಂಶ ಜ್ಯೋತಿಯೆಽಽ ಯಾವುದೇ ಕಾರಣಕ್ಕೂ ನನಗೆ ಆತ್ಮಹತ್ಯೆಗೆ ಕಾರನವಾಗುವಂಥ ಮಾತುಗಳನ್ನು ಆಡಬೇಡ. ಕೆಲವು ಕಠಿಣ ಸಂಸ್ಕೃತ ಶಬ್ದಗಳಿಂದ ಕರ್ಣ ಕಠೋರವಾದ ವಾಕ್ಯ ಮಾಡಿ ನಾಲಿಗೆ ತುದಿಯಿಂದ ಚಿಮ್ಮಿ ಬಿಡು. ಇದರಿಂದ ಲೋಕ ಕಲ್ಯಾಣವಾಗುತ್ತದೆ” ಎಂದು ಅಪ್ಪಣೆ ಕೊಡಿಸಿದರು.
ಹಾಗೆ ಮಾಡುವುದರಲ್ಲಿ ನಾನು ನಿಸ್ಸೀಮನೇ. ಆದರೆ ತೊಡೆ ಸಂದಿಯ ಉರಿ ಮಾತಾಡದಂತೆ ಮಾಡಿರುವುದಲ್ಲ!
“ಅನಸೂಯಾ… ಚೇಳಿನಿಂದ ಕಟಿಕಿಸ್ಕೊಂಡಿರೋದೆ ಸಾಕಾಗಿದೆ. ಸ್ವಲ್ಪ ಶಮನವಾದ ಮೇಲೆ ಯಾವುದಾದರೊಂದು ಹೇಳುವುದೇನು! ಅಲ್ಲಿವರೆಗೆ ತಾಳ್ಮೆಯಿಂದಿರಲಾರೆಯಾ!” ನಾಟಕದ ಪಾತ್ರಧಾರಿಯಂತೆ ತಡೆದು ತಡೆದು ನುಡಿದ.
“ನನಗಾಗಿರೋ ನೋವು ಕಡಿಮೆ ಆಗಬೇಕೂಂದ್ರೆ ನೀನು ಹೇಳ್ಲೇಬೇಕು… ಇನ್ನೊಂದು ಗಳಿಗೆ ಕಾಯ್ಲಿಕ್ಕೂ ನಾನು ಸಿದ್ಧಳಿಲ್ಲ” ಅನಸೂಯಳಿಗೆ ಅನುವುಮಾಡಿಕೊಡಲೆಂದು ಗಾಳಿ ದೂರಹೋಗಿ ನಿಶ್ಶಬ್ದ ಆವರಿಸಿತು.
ಶಾಮುಗೆ ದಿಕ್ಕುಗಳು ಅದುಲುಬದಲುಗೊಂಡವೆಂದೆನಿಸಿತು. ತೊಡೆ ಸಂದಿಯಲ್ಲಿ ಮರಣಾಂತಿಕ ವೇದನೆಯನ್ನುಂಟುಮಾಡುತ್ತಿರುವ ನೋವು; ಎದೆಯ ತ್ರಾಸಿನೆರಡೂ ಪಗಡಿಗಳಲ್ಲಿ ತಾಯಿ ಮತ್ತು ಅನಸೂಯಾ; ತಾಯಿ ಇರುವ ಪಗಡೆ ನೆಲಕ್ಕೆ ತಾಕಿರುವುದೆಂದು ಹೇಗೆ ಹೇಳುವುದು? ಏನಾದರೂ ಹೆಚ್ಚುಕಡಿಮೆಯಾದರೆ ತಾಯಿ ಶಾಪಕೊಡದಿರುತ್ತಾಳೆಯೆ? ತಾತ ಕೂಡಲೆ ಆತ್ಮಹತ್ಯೆ ಮಾಡಿಕೊಂಡು ಬ್ರಹ್ಮ ಪಿಶಾಚಿಯಾಗಿ ಹೋದಲ್ಲಿ ಬಂದಲ್ಲಿ ಕಾಡದಿರುತ್ತಾನೆಯೇ? ಒಂದೊಂದು ನಿಟ್ಟುಸಿರು ಬಿಡುತ್ತ ಒಂದು ಕ್ಷಣ ಆಗಸದ ಕಡೆಗೂ ಮತ್ತೊಂದು ಕ್ಷಣ ನೆಲದ ಕಡೆಗೂ ನೋಡುತ್ತ ನಿಂತಿದ್ದ ಅವನು ಅಪ್ಪಿತಪ್ಪಿ ಅನಸೂಯಳ ಕಡೆಗೆ ನೋಡುವ ಧೈರ್ಯ ಮಾಡಲಿಲ್ಲ. ಅದಕ್ಕೆಲ್ಲ ಪ್ರಾಯಶ್ಚಿತ್ತಾರ್ಥವಾಗಿ ಚೇಳು ಕುಟುಕಿರುವುದು ಬೇರೆ? ಆದರೂ ಧೈರ್ಯ ಆವಹಿಸಿಕೊಂದು ಆಕೆಯ ಕಡೆಗೆ ತಿರುಗಿದ.
“ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿರೋ ನನ್ನ ಸಮಸ್ಯೆ ನಿನ್ಗೆ ಅರ್ಥ ಆಗಿರಬೌದೆಂದು ತಿಳ್ಕೊಂಡಿದೀನಿ. ನನಗ್ಯಾಕೋ ಹೆಜ್ಜೆ ಹೆಜ್ಜೆಗೆ ಮನುಸ್ಮೃತಿ ಗರುಡ ಪುರಾಣಗಳನ್ನೆಲ್ಲ ಎದುರಾಕಿಸಿಕೊಂಡೇನು. ಆದ್ರೆ ನನ್ತಾಯೀನ ಮಾತ್ರ ಎದುರಾಕ್ಕೊಳ್ಳೋ ಧೈರ್ಯನ ಆ ದೇವರು ನನಗೆ ಕೊಟ್ಟಿಲ್ಲ… ಏನು ಮಾಡೋದು? ನೀನೇ ಒಂದು ಪರಿಹಾರಾನ ಸೂಚಿಸಲಾರೆಯೇನು?” ತನ್ನ ಮುತ್ತಾತನ ಗಿರಿಮುತ್ತಾತರ ತಪೋಬಲದಿಂದಲೇ ಅವನಿಗೆ ಇಷ್ಟು ನಿರರ್ಗಳವಾಗಿ ಮಾತಾಡಲು
———————

೧೧೫
ಸಾಧ್ಯವಾಯಿತು. ಮರ್ಮಸ್ಥಾನ ಎಲ್ಲಿ ಉದುರಿಬಿಡುವುದೋ ಎಂಬ ಭಯದಿಂದ ಒಂದು ಕೈಯನ್ನು ಮಾತ್ರ ತೆಗೆದು ಮುಖದ ಬೆವರೊರಸಿಕೊಂಡ. ಬೆಳಗಿನಿಂದ ಭಾವಗೀತೆಯೊಂದನ್ನು ಬರೆಯುವ ಪ್ರಯತ್ನದಲ್ಲಿದ್ದಾಗ ಪೆನ್ನು ಕಾರಿಕೊಂಡ ಮಸಿಯನ್ನು ಸಮಯ ಸ್ಪೂರ್ತಿಯಿಂದ ಲುಂಗಿಯ ತುದಿಗೆ ಒರಸಿಕೊಂಡಿದ್ದ. ಅದರ ಇಂಕು ಮುಖದ ಹಲವು ಕಡೆ ಹತ್ತಿ ಬಿಟ್ಟಿತು.
“ಹುಚ್ಚಪ್ಪ ಇಷ್ಟು ಹೇಳೋಕ್ಯಾಕೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿ, ನೀನು ನನ್ನ ಮದ್ವೆ ಆಗದಿದ್ರೆ ಪ್ರಪಂಚ ಪ್ರಳಯ ಆಗೋದಿಲ್ಲ. ನಾನೂ ಭಗ್ನಪ್ರೇಮಿಯಂತೆ ಆತ್ಮಹತ್ಯೆ ಮಾಡ್ಕೊಳ್ಳೋದಿಲ್ಲ. ಅಥವಾ ನಿನ್ನ ನೆನಪಿನಲ್ಲಿ ಚಿರವಿರಹಿಯಾಗಿ ಕಾಲ ಕಳೆಯೋದಿಲ್ಲ. ಒಂದು ಮಾತು ಕೇಳೋಣ ಅಂತ ಬಂದೆ ಅಷ್ಟೆ” ಕಟ್ಟೆಯಿಂದ ಕೆಳಗಿಳಿದು ಚಪ್ಪಲಿಗಳಿಗೆ ಪಾದ ಪೋಣಿಸಿದಳು. ನನ್ನ ನಿರಾಸೆ ಅಂತ ಭಾವಿಸಿ ಬದುಕಿನ ಬಗ್ಗೆ ಉತ್ಸಾಹ ಕಳ್ಕೋಬೇಡ. ಇರೋವಷ್ಟು ಕಾಲ ಸ್ವಂತ ವ್ಯಕ್ತಿದಿಂದ ಬದುಕೋದನ್ನು ಕಲ್ತುಕೋ ಬರ್ತೀನಿ ತುಂಬ ಹೋತ್ತಾಯ್ತು” ಎಂದು ಹೊರಡಲುವಾದಳು.
“ಅನೂ ನಿಂತ್ಕೋ” ಶತಪದಿಯಂತೆ ನಡೆಯುತ್ತ ಬಂದ ಶಾಮು.
“ಮತ್ತೇನಿದೆ?” ಹಿಂತಿರುಗದೆ ಕೇಳಿದಳು.
“ಹೀಗೆ ಮಾಡಿದ್ರೆ ಹೇಗೆ?” ಉಗುಳು ನುಂಗಿದ.
“ಕೇಳೋದೇನಿದ್ರು ನೇರವಾಗಿ ಕೇಳೂಂತ ಎಷ್ಟು ಸಾರಿ ಹೇಳೋದು?”
“ನಾನು ಮದ್ವೆ ಆಗೋವರ‍್ಗೂ… ”
“ಹ್ಹಾಂ”
“ನಾನು ಮದ್ವೆಯಾದ್ಮೇಲೆ ಇಬ್ರೂಒಟ್ಟಿಗೆ…” ಮುಂದಿನ ಮಾತು ಹೇಳುವ ಮೊದಲೆ ಅನಸೂಯ ಕೆರಳಿದಳು. ಆಕೆಯ ಕಣ್ಣುಗಳು ಬೆಂಕಿಯ ಎರಡು ನಮೂನೆಗಳಂತೆ ಪ್ರಜ್ವಲಿಸಿದವು.
“ಇದೇ ಮಾತ್ನ ಬೇರೆ ಯಾರಾದ್ರು ಹೇಳಿದ್ರೆ ಕಪಾಳಕ್ಕೆರಡು ಬಿಡ್ತಿದ್ದೆ ಆಷ್ಟೆ… ಹುಷಾರ್… ಬರ್ತೀನಿ” ಅನಸೂಯ ದುರ್ದಾನ ತೆಗೆದುಕೊಂಡವಳಂತೆ ಹೊರಟುಹೋದಳು.
ಶಾಮಾಶಾಸ್ತ್ರಿ ಆಕಾಶ ತಲೆ ಮೇಲೆ ಹೊತ್ತುಕೊಂಡವನಂತೆ ಬಹಳ ಹೊತ್ತಿನವರೆಗೆ ಅಲ್ಲಿಯೇ ಕುಸಿದು ಕೂತಿದ್ದ. ಜಾರ್ಜ್ ಫರ್ನಾಂಡಿಸ್ ಮಾಡುತ್ತಿದ್ದ ಭಾಷಣ ಅಲೆಅಲೆಯಾಗಿ ಕೇಳಿಬರುತ್ತಿತ್ತು. ಆ ಭಾಷಣ ಕೇಳಿಸಿಕೊಳ್ಳುತ್ತ ಬರುವ ಚುನಾವಣೆಯಲ್ಲಿ ಇಂದಿರಾಗಾಂಧಿ ಪರ ಮತ ಚಲಾಯಿಸುವುದೋ? ವಿರುದ್ಧ ಚಲಾಯಿಸುವುದೋ? ಎಂದು ಯೋಚಿಸುತ್ತ ಬರುತ್ತಿದ್ದ ದಾಸರಿ ತಿಮ್ಮಪ್ಪ ತೀರ ಹತ್ತಿರ ಬಂದು ನೋಡಿದಾಗಲೇ ಗೊತ್ತಾದದ್ದು. ಚಲವಾದಿ ರಂಗಮ್ಮನೆದುರು ತಾನು ಅಸಹಾಯಕತೆಯಿಂದ ಕೂತಿದ್ದಂತೆಯೇ ಯಾರೋ ಕೂತಿರುವರೆಂಬುದು.
“ಯಾರದೂ” ಕಣ್ಣುಜ್ಜಿಕೋಳ್ಳುತ್ತ ಕೇಳಿದ.

* * * *

’ಮಾತೋಶ್ರೀ ಪಾಹಿಮಾಂ’
ತುಪ್ಪದ ದೀಪದ ಮಂಗಳಮಯ ಬೆಳಕಿನಲ್ಲಿ ಸ್ವಲ್ಪ ಹೊತ್ತಿನ ಹಿಂದೆ ವಿರಹೇನ ವಿಕಲ ಹೃದಯದ ಅಲಮೇಲಮ್ಮ ಮಲಗಿದ್ದಳು. ಎದೆಯ ವಕ್ಷಸ್ಥಳದ ಮೇಲೆ ಕೃಷ್ಣ ಯಜುರ್ವೇದದ ಮೈತ್ರಾಯಿಣಿ ಶಾಖೆಗೆ ಸೇರಿದ ಗ್ರಂಥವನ್ನು ತೆಗೆದಿಟ್ಟುಕೊಂಡಿದ್ದಳು. ಅತ್ತೈವ ಚ ಪಶುಂ ಹಿಂಸ್ಯಾನ್ನಾನ್ಯಥೇತ್ಯಬ್ರವೀನ್ಮನುಃ ಎಂಬ ವಾಕ್ಯವನ್ನು ಬಾಯಿಪಾಠ ಮಾಡುತ್ತಲೇ ಮಂಪರು ಹತ್ತಿತ್ತು.
——————————-

೧೧೬
ವ್ಯಾಸಪೀಠಕ್ಕೆ ತಲೆ ಕೊಟ್ಟಿದ್ದರಿಂದ ಅಪರೂಪದ ನಿದ್ದೆ ಒಲಿದಿತ್ತು. ಸಿಂದಾಮಣಿ ಕೋಮಟಿಗರ ಮನೆಯಲ್ಲಿ ಗರುಡ ಪುರಾಣ ಪ್ರವಚನಾರ್ಥವಾಗಿ ಪರಮೇಶ್ವರ ಶಾಸ್ತ್ರಿಗಳು ಕೆಲಹೊತ್ತಿನ ಹಿಂದೆ ವಿಶೇಷ ಸಂಧ್ಯಾವಂದನೆ ಮುಗಿಸಿ ಹೋಗಿದ್ದರು. ಮನುಸ್ಮೃತಿಯ ಐದನೇ ಅಧ್ಯಾಯದಲ್ಲಿ ಗುರ್ತಿಗೆ ನವಿಲು ಗರಿ ಇಟ್ಟಂತೆ ಪ್ರೀತಿಯ ಬೆಕ್ಕು ನಗಂದಿ ಮೇಲೆ ಹಿಂಗಾಲು ಮುಂಗಾಲುಗಳನ್ನುದ್ದವಾಗಿ ಚಾಚಿ ನಿದ್ದೆ ಹೋಗಿತ್ತು. ಹೀಗಾಗಿ ಯಾವ ಅಡೆ ತಡೆ ಇಲ್ಲದೆ ನಿದ್ದೆ ಒಲಿದಿತ್ತು.
’ಮಾತೋಶ್ರೀ ಪಾಹಿಮಾಂಽಽಽ’
ಸೂರ್ಯಪುತ್ರನಾದ ವೈವಸ್ವತ ಮನು ತನ್ನ ತಪಸ್ಸಿಗೆ ಆಯ್ದುಕೊಂಡ ಬದರಿಕಾಶ್ರಮದ ಪಕ್ಕದಲ್ಲಿ ಚಾರಿಣಿ ಜುಳುಜುಳು ಹರಿದಂತೆ ಮನಸ್ಸಿನ ಘನಘೋರ ಮೂತಿಯಿಂದ ಯಾರೋ ಕೂಗಿದಂತೆ ಭಾಸವಾಯಿತು.
ಯಾರದಿರಬಹುದೀ ಧ್ವನಿ?
ತನಗಿನ್ನೊಂದು ಹುಟ್ಟಬಹುದಿದ್ದ ಮಗುವಿನ ದ್ವನಿ ಇದಾಗಿರಬಹುದೇ? ಹರೆಯದಲ್ಲಿ ಗಂಡನನ್ನು ಕಳೆದುಕೊಂಡಿರುವ ಮಾತ್ರಕ್ಕೆ ತನಗೆ ಮಾನವ ರೂಪ ಕೊಡಲಿಲ್ಲವೆಂದು ಅದು ರೋದಿಸುತ್ತಿರಬಹುದೇ?
ಮಾತೋಶ್ರೀ ಪಾಹಿಮಾಂ
ವ್ಯಾಧನ ಬಾಣದಿಂದ ಗಾಯಗೊಂಡ ಕ್ರೌಂಚ ಪಕ್ಷಿಯ ಆರ್ತರವದಂತೆ ಕೇಳಿ ಬರುತ್ತಿರುವ ಧ್ವನಿ ಯಾರದಿರಬಹುದು? ಪ್ರಶ್ನಿಯ ಗರ್ಭದಲ್ಲಿ ಶ್ರೀಮನ್ನಾರಾಯಣ ಮಿಸುಕಾಡಿದಂತೆ ಸುಪ್ತಾವಸ್ಥೆಯಿಂದ ಜಾಗೃತಾವಸ್ಥೆಗೆ ಬರುವ ಕಂಪನಕ್ಕೆ ಸಿಕ್ಕು ಮಗ್ಗುಲು ಬದಲಾಯಿಸಿದಳು ವ್ಯಾಸಪೀಠ ಕೀರ್‌ಕು, ಕೀರ್‌ಕು ಎಂದು ಸದ್ದು ಮಾಡಿತು. ಎದೆ ಮೇಲಿದ್ದ ಪ್ರಾಚೀನ ಗ್ರಂಥ ಪಕ್ಕಕ್ಕುರುಳಿ ಸ್ತನಕ್ಕೊತ್ತಿತು.
ಮಾತೋಶ್ರೀ ಪಾಹಿಮಾಂ…
ಪುಷ್ಪದ ಮೇಲೆ ಪತಂಗದ ಕಾಲುಗಳು ಗಾಯಮಾಡಿದಂತೆ; ಎಸಳು ಮುಲುಕಿದಂತೆ… ತಾಯಿ ಅಲುಮೇಲಮ್ಮ ಓಹ್ ಇದು ತೀರ ಪರಿಚಿತ ಧ್ವನಿ ಎಂದು ಗುರುತಿಸಿದಳು. ಇದು ಖಂಡಿತ ತನ್ನ ಕರುಳ ಕುಡಿಯದೆಂಬುದರಲ್ಲಿ ಸಂದೇಹವಿಲ್ಲ.
ಒಮ್ಮೆಗೆ ಸಾವಿರಾರು ನೆನಪುಗಳು ನುಗ್ಗಿಬಂದವು.
ತನ್ನ ಮಗ ಅದ್ಯಾರದೋ ಭಾಷಣ ಕೇಳಲೆಂದು ಹೋಗಿರುವುದು ನೆನಪಾಯಿತು. ಆ ಜನಜಂಗುಳಿ ನಡುವೆ ನಸು ಕೋಮಲ ಕಾಯದ ತನ್ನ ಮಗ ಏನಾದನೋ?
ಬಡಿದೆಬ್ಬಿಸಿದಂತೆ ಎದ್ದು ಕೂತಳು. ಮುಖದ ಮೇಲಿಂದ ಸುರಿದ ಬೆವರು ಪಕ್ಕದ ಅಣೆಕಟ್ಟಿನಲ್ಲಿ ನೆಲೆ ನಿಂತಿತು. ದೀರ್ಘವಾಗಿ ಉಸಿರಾಡತೊಡಗಿದಳು. ಅಕೆಯ ದುಗುಡಕ್ಕೆ ಬೆಂಬಲಾರ್ಥವಾಗಿ ಇಡೀ ಮನೆಗೆ ಮನೆಯೇ ಉಸಿರಾಡತೊಡಗಿತು. ಸಾವಿರಾರು ಮಂದಿ ಅದೃಶ್ಯ ರೀತಿಯಲ್ಲಿ ಮನೆಯ ಅಂಗುಲಂಗುಲದಲ್ಲಿ ಅಡಗಿ ಕೂತಿರುವಂತೆ ಭಾಸವಾಯಿತು. ಅದಕ್ಕೆ ಹಲೋ ಹಲೋ ಎನ್ನುತ್ತಿರುವ ರೀತಿಯಲ್ಲಿ ಹೃದಯ ಲಬ್‍ಡಬ್ ಅಂತ ಜೋರಾಗಿ ಬಡಿದುಕೊಳ್ಳತೊಡಗಿತು.
ಮಗೂ ಶಾಮೂ… ಶಾಮೂ… ಎಲ್ಲಿದ್ದೀಯಪ್ಪಾ?… ಏನಾಗಿದೆಯೋ?… ತಂದೆ ನಿನಗೆ… ನೀನು ಕ್ಷೇಮವಾಗಿರುವಿ ತಾನೆ…? ಮಾಡಿನ ಕಡೆ ಮುಖ ಮಾಡಿ ಜೋರಾಗಿ ಕೂಗಿದಳು… ಅದು ಅಲೆ ಅಲೆಯಾಗಿ ಹರಡಲು…
—————————

೧೧೭
ದಾಸರಿ ತಿಮ್ಮಪ್ಪನಿಂದ ಬಿಡಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದ ಶಾಮನಿಗೆ ತಾಯಿಯ ಆತಂಕದ ಕರೆ ಕೇಳಿಸಿದಂತಾಯಿತು. ’ಬಿಡೋ ಬಿಡೋ’ ಎಂದು ಎಷ್ಟು ಹೇಳಿದರೂ ದಾಸರಿ ಬಿಡಲೊಲ್ಲನು.
“ನನ್ನಾಸೆ ಪೂರೈಸದಿದ್ರೆ ಅದೆಂಗ ಬಿಟ್ಟೇನು!… ಏನೂ ಆಗಕ್ಕಿಲ್ಲ… ನೀನೊಂದೆ ನಾನ್ಹೋಳಂದೆ ಕೇಳು…” ಎಂದು ಕೆವುಕೊಂಡು ಬಿದ್ದಿದ್ದ ದಾಸರಿ ಜೋಲು ಎದೆಗೆ ತನ್ನೆರಡು ಕಾಲುಗಳನ್ನು ಕೊಟ್ಟು ಝಾಡಿಸಿ ತಳ್ಳಲು ಅವನು ಅಷ್ಟು ದೂರ ಬಿದ್ದು ಗೋವಿಂದಾ ಎಂದನು.
ಏಕಬಾಕ ಲುಂಗಿ ಸರಿಪಡಿಸಿಕೊಂಡು ನಿಟಾರನೆ ನಿಂತನು. ತೊಡೆ ಸಂದಿನಲ್ಲಿ ಮತ್ತೊಮ್ಮೆ ದಗ್ ಅಂತು. ಒಂದು ಹೆಜ್ಜೆ ಮುಂದಿಡಕ್ಕಾಗಲೊಲ್ಲದು. ಇನ್ನೊಂದು ಕ್ಷಣ ಹಾಗೇ ನಿಂತುಬಿಟ್ಟಲ್ಲಿ ದಾಸರಿ ಪುನರ್ ಚೇತಿಸಿಕೊಂಡು ತನ್ನ ಪಾಕ್ಷಿಕದ ವಿಶೇಷಾಂಕವನ್ನು ಪೂರ್ಣಗೊಳಿಸದೆ ಬಿಡನು. ದೇಹದ ಸಮಸ್ತ ಜಂಘಾಬಲವನ್ನು ಕಾಲುಗಳಿಗೆ ತಂದುಕೊಂಡನು. ಸೂರ್ಯ ಶ್ವೇತಸ್ವ ಮಂತ್ರಸ್ಯ ಎಂದು ಶಕ್ತಿ ಸಂಚಯಿಸಿಕೊಂಡನು. ಶ್ರೀ ಪರಮೇಶ್ವರ ಪಿತ್ಯರ್ಥ ಎಂದೆನ್ನುವಷ್ಟರಲ್ಲಿ ದಾಸರಿ ತಿಮ್ಮ ಫಿನಿಕ್ಸ್ ಪಕ್ಷಿಯಂತೆ, ಯಗ್ನಕುಂಡದಲ್ಲಿ ಅಗ್ನಿ ಪ್ರಜ್ವಲಿಸಿದಂತೆ, ತ್ರಿವಿಕ್ರಮನಂತೆ ಎದ್ದು ನಿಂತು ’ಏಯ್ ಬ್ರಾಂಬ್ರ ಹುಡ್ಗಾ… ನನ್ಗೆ ನಿರಾಸೆ ಮಾಡಿ ಹ್ವಾದಿ ಅಂದ್ರೆ ನಿಂಗೆ ಒಳ್ಳೇದಾಗಕ್ಕಿಲ್ಲ ನೋಡು… ನಿಂತ್ಗ… ಒಂದೈದು ಮಿನಿಟ್ನಾಗ ಮುಗ್ಸಿ ಜ್ವಾಪಾನವಾಗಿ ಮನಿ ಮುಟ್ಟುಸ್ತೀನಿ’ ಎಂದು ತುಂಬ ದೈನ್ಯದಿಂದ ಬೇಡಿಕೊಳ್ಳುತ್ತ ಒಂದೊಂದು ಹೆಜ್ಜೆ ಇಡುತ್ತ ಮುಂದೆ ಬರತೊಡಗಿದನು. ಆ ಮಸುಕು ಬೆಳಕಿನಲ್ಲಿ ಆ ನಗ್ನಾಕೃತಿ ಘನ ಭೀಕರವಾಗಿದ್ದಿತು. ಅವನು ಇನ್ನೇನು ಹಿಡಿದೇ ಬಿಟ್ಟನೆನ್ನುವಷ್ಟರಲ್ಲಿ ಶಾಮನಿಗೆ ಅದೇನು ಸಕುತಿ ಬಂತೇನೋ ಕಿರ್ಧಬಲ ಓಡತೊಡಗಿದನು. ಓಡಲಾಗದಿದ್ದರೂ ದಾಸರಿ ಸುಮ್ಮನಿರುವನೇನು! ತನ್ನಾಜ್ಞೆಗಾಗಿ ಮೌನ ವ್ರತದಲ್ಲಿದ್ದ ನಾರಾನಿಗೆ ’ಛೂ’ ಎಂದನು. ಒಡನೆಯೇ ಅದು ಬೌ ಬೌ ಎಂದು ಅಪ್ಪಟ ಕನ್ನಡದಲ್ಲಿ ಬೊಗಳುತ್ತ ಹಿಂಬಾಲತ್ತಿತು. ಮುಂದೆ ಮುಂದೆ ಓಡುತ್ತಿರುವ ಅವನು, ಹಿಂದೆ ಹಿಂದೆ ಓಡುತ್ತಿರುವ ನಾರಾಣಿ, ಆ ಓಣಿ ದಾಟಿ ಈ ಓಣಿಗೆ ಬಂದಾಗ ಜಗದ್ರಕ್ಷಕ ಪಿಸಿ ತ್ರೀನಟ್ಟೂ ಒಂದು ವಾರದಿಂದ ಯಾರನ್ನೂ ಹೊಡೆದಿಲ್ಲವಲ್ಲ ಎಂದು ಕುದಿಯುತ್ತಿದ್ದನು ಅದು ಅಲ್ಲದೆ ಅವನು ಚಿಕ್ಕಂದಿನಿಂದ ನಾಯಿ ಹೊಡ್ದೂ ಹೊಡ್ದೂ ಸಾಕಷ್ಟು ಹೆಸರು ಸಂಪಾದಿಸಿದ್ದನು. ’ನೀನು ಪೋಲೀಸ್ ನೌಕರಿ ಸೇರಿದ್ದರೆ ಸರಿಹೋಗೋದು” ಎಂದು ಮನೆಯಲ್ಲಿ ತಂದೆತಾಯಿ ಶಾಲೆಯಲ್ಲಿ ಮಾಸ್ತರುಗಳು ಜೀವ ತಿನ್ನುತ್ತಿದ್ದರು. ಹೀಗಾಗಿ ಆತ ಪೋಲಿಸ್ ನೌಕರಿ ಸೇರೋದಕ್ಕೂ ಮೊದಲೆ ತನ್ನ ಹೆಸರಿನ ಉತ್ತರಾರ್ಧದಲ್ಲಿ ಪೋಲಿಸ್ ಎಂಬ ಪದದ ’ಕ್ಳಿಮ್ಮು’ಗೆ ಫೆವಿಕಾಲ್ ಲೇಪಿಸಿ ಅಂಟಿಸಿಕೊಂಡು ಬಿಟ್ಟಿದ್ದನು. ಅಂಥಾತ ಸಾರ್ವಜನಿಕರಿಗೆ ತೊಂದರೆ ಕೊಡುವ ನರಾಣಿಯನ್ನು ಸುಮ್ಮನೆ ಬಿಡುತ್ತಾನೇನು? ಜೋರಾಗಿ ಸೀಟಿ ಊದತೊಡಗಿದನು. ಪ್ರಧಾನಿ ವಿರೋಧಿ ಅಂತ ತಮ್ಮನ್ನು ಹೀಡಿದಾನು ಅಂತ ಜನ ಕ್ಳಿಮ್ಮುನಲ್ಲಿ ಬಾಲ ಇಟ್ಟುಕೊಂಡು ಪಿತುಗಲಾರಂಭಿಸಿದರು. ಇದೇ ಒಂಥರಾ ಮಜಾ ಅನ್ನಿಸಿತು ಪೀಸಿಗೆ. ಮತ್ತಷ್ಟು ಜೋರಾಗಿ ಊದುತ್ತ ಓಡೋಡಿ ಕೈಲಿದ್ದ ಲಾಠಿ ಕೋಲನ್ನು ಅಶ್ವತ್ಥಾಮ ’ಉತ್ತರ ಗರ್ಭಕ್ಕೆ ಪ್ರಳಯ’ ಎಂದು ಅಭಿಮಂತ್ರಿಸಿ ದರ್ಭೆಯನ್ನು ಪ್ರಯೋಗಿಸಿದಂತೆ ಪ್ರಯೊಗಿಸಲು ಅದು ಸೀದ ಹೋಗಿ ನಾರಾಣಿಯ ಹಿಂಗಾಲುಗಾಲಿಗೆ ಬಿದ್ದಿತು. ನಾರಾಣಿ ತೊಂಕ ಕಳೆದುಕೊಂಡು ಮುಗಿಲ ಕಡೆ ಮುಖಮಾಡಿ ಏಕಕಾಲಕ್ಕೆ ಸಮಸ್ತ ಶ್ಲೋಕಗಳನ್ನು ಲೋಕ
—————————-

೧೧೮
ವಿದ್ರಾವಕವಾಗಿ ಬೊಗಳತೊಡಗಿತು. ನಂತರ ಅವನು ಅದನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಿ ಕಣ್ಣಿನ ಮೂಲಕ ಪಾಪ ಕಟ್ಟಿಕೊಳ್ಳಬಾರದೆಂದು ಶಾಮಾ ಶಾಸ್ತ್ರಿ ಓಡಿ ಮುಖ್ಯ ರಸ್ತೆ ತಲುಪಿದನು.
ಅವನ ಆ ಅವಸ್ಥೆ ನೋಡಿ ನಗಬಹುದಾಗಿದ್ದವರೆಲ್ಲರೂ ಇಂದಿರಾ ವಿರೋಧಿ ಭಾಷಣ ಕೇಳಲು ಹೋಗಿದ್ದರು. ಅದು ಅವನ ಪುಣ್ಯ… ಓಂ ಕೇಶವಾಯ ಸ್ವಾಹ ಒಂದು ಆಚಮನ ಮಂತ್ರಗಳನ್ನು ಮನಸ್ಸಿನಲ್ಲಿ ಪಠಿಸುತ್ತ ಮನೆ ಕಡೆ ಹೆಜ್ಜೆ ಹಾಕಿದನು. ಪ್ರತಿ ಹೆಜ್ಜೆ ಇಡುವಾಗಲೂ ಅವನ ನಾಲಿಗೆ ಅಮ್ಮಾ… ಅಮ್ಮಾ ಎಂದು ನುಡಿಯುತ್ತಿದ್ದಿತು.
ಇತ್ತ ಕಡೆ ಅಲುಮೆಲಮ್ಮನ ಕರುಳು ಅಡಿಗಡಿಗೆ ಕಿತ್ತು ಬಾಯಿಗೆ ಬರತೊಡಗಿತ್ತು. ಆಕೆಯ ಹೃದಯ ಕವಾಟಗಳು ಶಾಮೂ ಶಾಮೂ ಎಂದು ಬಡಿದುಕೊಳ್ಳತೊಡಗಿದ್ದವು. ಬೋರಲು ಬಿದ್ದಿದ್ದ ವ್ಯಾಸಪೀಠಕ್ಕಿಂತ ಮಗನ ನೆನಪು ಹೆಚ್ಚಿನದು. ಮನು ಸ್ಮೃತಿಗಿಂತ ಮಾತೃತ್ವ ಹೆಚ್ಚಿನದು. ಆದ್ದರಿಂದ ಆಕೆ ಅವ್ಯಾವುದನ್ನೂ ಸರಿಪಡಿಸುವ ಗೋಜಿಗೆ ಹೋಗಲಿಲ್ಲ.
“ಯಾಕೆ ಇಷ್ಟೊಂದು ಗಾಬರಿಯಾಗಿರಿವಿ? ಏನಾಯ್ತು ಹೇಳಬಾರ್ದೇ ತಾಯೀ?” ಎಂದು ಬೆಕ್ಕು ನಗಂದಿ ಮೇಲಿಂದ ಜಿಗಿದು ಮ್ಯಾವ್ಗುಟ್ಟುತ್ತ ಆಕೆಯ ಕಾಲು ಸಂದಿಯಲ್ಲಿ ನುಸಿಯತೊಡಗಿತ್ತು. ಅದನ್ನು ಅಪಶಕುನವೆಂದು ಆಕೆ ಅದನ್ನು ಕಾಲಿನಿಂದ ಝಾಡಿಸಿ ತಳ್ಳಿದಳು. ಏನಾದ್ರು ಹೆಲ್ಪು ಮಾಡೋಣಾಂತ ಬಂದ್ರೆ ಇದ್ಯಾಕೆ ಹಿಂಗ್ ಮಾಡ್ತಾಳೆ ಒಟ್ಟಿನಲ್ಲಿ ನನಗೆ ಬುದ್ಧಿ ಇಲ್ಲವಷ್ಟೆ ಎಂದು ಬೆಕ್ಕು ಮುಖ ಕಮಲ ಸಿಂಡರಿಸಿಕೊಂಡು ಈ ಮನೆಗೂ ತನ್ನ ಋಣ ಸಂಬಂಧ ತೀರಿತೆಂಬಂತೆ ಮನೆ ಬಿಟ್ಟು ಹೊರಟುಹೋಯಿತು. ದುರ್ಯೋಧನಾಸ್ಥಾನದಲ್ಲಿ ಧನುವ ಬಿಸುಟು ತೊತ್ತಿನ ಮಗ ವಿದುರ ಹೊರಟು ಹೋದನಲ್ಲ ಹಾಗೆ. ಸಂಪ್ರದಾಯಸ್ಥರ ಮನೆಯಲ್ಲಿ ಬೆಕ್ಕು ಕ್ಷೇಮದಿಂದಿರುವುದಿಲ್ಲ ಕೂಡ. ಹಾಗೆಯೇ ಸಮ್ಪ್ರದಾಯಸ್ಥರಾದರೂ ಅಷ್ಟೆಯೇ.
“ಎಲ್ಲಿ ಹೋದನು? ಏನಾದನು?” ಅಲಮೇಲಮ್ಮ ತನ್ನ ಮಾವ ಮನೇಲಿ ಇಲ್ಲದಿರುವುದರಿಂದ ಮತ್ತಷ್ಟು ಬೇಸರಗೊಂಡಳು. ಪರಮೇಶ್ವರ ಶಾಸ್ತ್ರಿಗಳು ಬೆಳಗ್ಗೇನೇ ತಮ್ಮ ನಿವಾಸದ ತೊಲೆ ಜಂತಿಗೆಲ್ಲ ಕೇಳಿಸುವಂತೆ “ರಾಜಖಿಯ ಭಾಷಣ ಕೇಳೋಕೆ ಹೋಗೋದು ವೇದ ಪ್ರಾಮಾಣ್ಯವಲ್ಲ… ಹೋಗಿ ನಾನು ಕಾಲು ಊನ ಮಾಡಿಕೊಂಡಿದ್ದು ಸಾಕು. ಈ ದುರವಸ್ಥೆ ಮತ್ತಾರಿಗೂ ಬಾರದಿರಲಿ” ಎಂದು ಸೂಚ್ಯವಾಗಿ ಶಾಮುವನ್ನುದ್ದೇಶಿಸಿ ಹೇಳಿದ್ದರು. ಶಾಮು ತಿಳುವಳಿಕಸ್ಥ, ವಿದ್ಯಾವಂತ, ಸುಮ್ಮನಿದ್ದಾನು. ಆದರೆ ಅವನ ಮೈಯೊಳಗೆ ಹರೀತಿರೋ ಬಿಸಿ ರಕ್ತ ಸುಮ್ಮನಿರಬೇಕಲ್ಲ!… ಮೊದಮೊದಲು ಹೋಗುವುದಿಲ್ಲವೆಂದು ತನ್ನ ತೊಡೆ ಮೇಲೆ ಮಲಗಿಕೊಂಡಿದ್ದ. ಆತಂಕಗೊಂಡಿರುವಂತಿದ್ದ. ಕೆಲ ಸಮಯದ ನಂತರ ದಿಡೀರನೆ ಎದು “ಅಮ್ಮಾ ನನಗೇಕೋ ಜಾರ್ಜ್ ಫರ್ನಾಂಡಿಸರ‍್ನ ನೋಡೊ ಆಸೆಯಾಗಿದೆ! ಹೋಗಿ ಬರ‍್ತೀನಿ” ಅಂದ. ಅದಕ್ಕೆ ತಾನು, “ಅದೆಂಥ ಹೆಸರೋ; ನಾಲಿಗೇನೇ ಹೊರಳುವಲ್ದೂ! ಅವರೂ ನಮ್ಮಂತೆ ಬ್ರಾಹ್ಮಣ್ರಾ!” ಎಂದು ಪ್ರಶ್ನೆ ಹಾಕಿದ್ದಳು. ತಾಯಿಯ ಸಂತೋಷಕ್ಕಿಂತ ದೊಡ್ಡದೊಂದಿದೆ! ಲುಂಗಿಯನ್ನೇ ಸುತ್ತಿಕೊಳ್ಳುತ್ತ ಹ್ಹೂಂ ಅಂದಿದ್ದ. ಹೆಸ್ರಿನ ಕೊನೆಗೆ ಶರ್ಮನೋ ರಾವ್ ಅಂತ್ಲೋ ಇಟ್ಕೋಬಹುದಿತ್ತಲ್ಲ” ಎಂದು ತಾನು ಮುಗ್ದತೆಯಿಂದ ಕೇಳಿದ್ದಳು. ಅದಕ್ಕೆ ನಿರುತ್ತರವಾಗಿ ಶಾಮು ಗೋಧೂಳೀ ಸಮಯದಲ್ಲಿ ಹೋಗಿದ್ದ. ಅಷ್ಟರೊಳಗೆ ಇಷ್ಟೊಂದು ಹಳಹಳಿಕೆ.
——————

೧೧೯
ಅಲುಮೇಲಮ್ಮ ಓಣಿಯ ನಂಬಿಕಸ್ಥರನ್ನು ಕರೆದು ಹಿಂಗಿಂಗೇಂತ ಹೇಳಿ ಕಳಿಸಬೇಕೆಂದು ತಲೆಬಾಗಿಲಿಗೆ ಬಂದಳು. ಇನ್ನೇನು ಆಕೆ ಒಂದು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ತುಳಸೀ ಕಟ್ಟೆಯ ಹಿಂದೆ ಮಾನವಾಕೃತಿ ಕಾಣಿಸಿಕೊಂಡು ಅದು ಮರುಕ್ಷಣದಲ್ಲಿಯೇ ಅಪ್ಪಿಕೊಂಡುಬಿಟ್ಟಳು.
“ಶ್ಯಾಮಾ!!” ಒಮ್ಮೆಗೆ ಜಿಗಿದು ಮಗನನ್ನು ಬಲವಾಗಿ ಅಪ್ಪಿಕೊಂಡುಬಿಟ್ಟಳು.
ಬದುಕಿನ ಸುರಕ್ಷಿತ ವಲಯ ತಲುಪಿದ ಉದ್ವೇಗದ ಸೆಳವಿಗೆ ಸಿಲುಕಿ ಅವನು “ಅಮ್ಮಾ” ಎಂದ ಯುದ್ಧದಿಂದ ಮರಳಿ ಬಂದವನಂತೆ.
“ಅಯ್ಯೋ… ಶಿವಶಿವಾ… ನಾರಾಯಣ… ನನ್ನ ಶಾಮು ಯಾಕೆ ಹಿಂಗೆ ನಡೀತಾ ಇದ್ದಾನೆ. ತಾತನವ್ರ ಮಾತು ಕೇಳಿ ಮನೆಲಿದ್ದಿದ್ರೆ…” ತಾಯಿ ಮಗನನ್ನು ಎತ್ತಿ ಕೊಂಡೊಯ್ಯುತ್ತಿರುವಳೆಂಬಂತೆ ಒಳಗಡೆ ಕರೆದುಕೊಂಡು ಹೋದಳು.
“ಏನಾಯ್ತೂಂತ ಹೇಳಬಾರ್ದೇನೋ?” ಮುಖದಲ್ಲಿ ಮುಖ ಇಟ್ಟು ಕೇಳಿದಳು.
“ಏನಂತ ಹೇಳ್ಲಿ ಅಮ್ಮಾ!” ಎಷ್ಟು ಚಂದ ಅಮ್ಮಾ ಎಂದು ನುಡಿಯುತ್ತಿರುವುದಲ್ಲ ತನ್ನ ಕಂದ. ಯಾಕೆ ಮುಖ ತಗ್ಗಿಸಿಬಿಡ್ತಿದೆ. ಏನಾದರೂ ಗ್ರಹ ಪೀಡೆಗಳು ಕಾಟವೋ? ಯಾರಾದರೂ ಲಲನಾಮಣಿಯರು ಕಣ್ಣುಬಿಟ್ಟಿರಬಹುದೋ? ಹೇಳುವುದೇನಿದೆ? ಕೇಳುವುದೇನಿದೆ? ಮಾಡೋದ ಮಾಡಿದರಾಯ್ತು.
ಅಲುಮೇಲಮ್ಮ ವಿಳಂಬ ಮಾಡಲಿಲ್ಲ. ತಾಮ್ರದ ಬೋಗುಣಿಯಲ್ಲಿ ಪಂಚತೈಲ ಸುರಿದುಕೊಂಡು ಬಂದು ಅದರಲ್ಲಿ ಅವನ ಪ್ರತಿಬಿಂಬ ನೋಡಿಸಿದಳು. ಮೆನಸಿನಕಾಯಿ, ಉಪ್ಪು ಪೊರಕೆಯೇ ಮೊದಲಾದ ವಸ್ತುಗಳಿಂದ ನೀವಳಿಸಿ ಲಟಿಗೆ ತೆಗೆದಳು. ಅವನು ಹ್ಹಾ ಅನ್ನಲಿಲ್ಲ. ಉಸಿರು ಬಿಡಲಿಲ್ಲ. ಕಂಚಿಯಿಂದ ತಂದಿದ್ದ ಲೋಭಾನ ಹಾಕಿದಳು. ಇಷ್ಟೆಲ್ಲ ಮಾಡಿದ ಮೇಲೆ ಅವನ ಮುಖ ತಿಳಿಗೊಂಡಂತೆ ಕಂಡಿತು.
ಅವನ ಮುಖವನ್ನು ತನ್ನೆರಡು ಬೊಗಸೆಯಲ್ಲಿ ಹಿಡಿದುಕೊಂಡು, ಮೂಗಿಗೆ ಮೂಗು ತಾಕಿಸಿ (ಥೇಟ್ ಅವರಪ್ಪನದೇ ಮೂಗು, ಮೂಗಿನಲ್ಲಿ ಅವಿತುಕುಳಿತಿರುವರೋ ಹೇಗೆ? ಸ್ಪರ್ಶದ ಮಾತ್ರದಿಂದಲೇ ಯಾಕೆ ರೋಮಾಂಚನವಾಗಬೇಕು?) “ಮಗೂ ಏನಾಯ್ತೂ ಅಂತ ಈಗ್ಲಾದ್ರೂ ಬಾಯ್ಬಿಟ್ಟು ಹೇಳೋ? ಇಲ್ಲಾಂದ್ರೆ ಎದೆ ಒಡೆದ್ಹೊಗ್ತದೆ!” ಎಂದು ಅಂಗಲಾಚಿದಳು.
ತಾಯಿಯ ಪ್ರೀತಿಗೆ ಸಮನಾದುದುಂಟೇನು ಲೋಕದಲಿ.
ರಂಗೋಲಿಗಿಂತ ಮಿಗಿಲಾದುದುಂಟಯ್ಯಾ ಈ ಜಗದ ಬಾಗಿಲಲಿ.
ಇದ್ದಕ್ಕಿದ್ದಂತೆ ಶಾಮನ ಎದೆಯಲ್ಲಿ ಮೂಡಿದ ಪದ್ಯ ಮಿದುಳಿಗೆ ಫೋನ್ ಮಾಡಿತು. ಮಿದುಳು ’ಬರೆದು ಎಸೆದುಬಿಡು’ ಎಂದು ಆಜ್ಞೆ ವಿದಿಸಿತು. ಕೈಗೆ ನಿಲುಕುವಂತೆ ಪೆನ್ನು ಪುಸ್ತಕ ಇಲ್ವಲ್ಲ! ಸಿಡುಕಿದನು.
ತಾಯಿ ಹೇಳೋ ಅಂದಳು. ಮಗ ಹೊಳೆದ ಪದ್ಯ ಹೇಳಿದ. ಅದಲ್ವೋ ನೀನು ಸೊಟ್ ಸೊಟ್ಟ ನಡೀತಿರೋದು. ಹೊಲದಲ್ಲಿ ದುಡ್ಯೋ ಶೂದ್ರರ ಥರ ಅಸ್ತವ್ಯಸ್ತವಾಗಿರೋದ್ಯಾಕೋ… ಹೇಳೋ!” ಕೊರಳಪಟ್ಟಿ ಹಿಡಿದು ಜಗ್ಗಿದಳು.
“ಅಮ್ಮಾ…” ಉಗುಳು ನುಂಗಿದ.
“ಏನಪ್ಪಾ”
“ಹೇಗೆ ಹೇಳ್ಲಮ್ಮಾ!”
—————————-

೧೨೦
“ಹೇಳೋ ಮಗ್ನೇ ಮಗುವಿನ್ತರ ಹಠಮಾಡ್ಬೇಡಪ್ಪಾ!”
“ನನ್ಗೆ ನಾಚ್ಕೆಯಾಗ್ತದೆ!”
“ಈ ತಾಯಿಹತ್ರ ಅದೆಂಥದೋ ನಾಚ್ಕೆ!”
“ಮತ್ತೆ… ಮತ್ತೆ!!!”
“ಹೇಳೋ ಕಂದಾ!”
“ನನಗೆ ಚೇಳು ಕುಟುಕ್ತಮ್ಮಾ” ಗಂಟಲ ಅಣೆಕಟ್ಟು ಢಮಾರನೆ ಸ್ಪೋಟಿಸಿಬಿಟ್ಟಿತು. ಹೋ ಎಂದು ಅಳತೊಡಗಿದ. ಚೇಳು ಕುಟುಕಿದ್ದು ಕಾಲು ಭಾಗವಾಗಿದ್ದರೆ, ಅನಸೂಯ ಮುಖಕ್ಕೆ ರಾಚಿದಂತೆ ಮಾತಾಡಿದ್ದೂ; ದಾಸರಿ ತಿಮ್ಮ ರೇಪ್ ಮಾಡಲು ಪ್ರಯತ್ನಿಸಿದ್ದೂ; ನಂತರ ಅವನು ನಾಯಿ ’ಛೂ’ ಬಿಟ್ತಿದ್ದೂ ಇದೆಲ್ಲ ಒಂದರ ಮೇಲೆಂದು ಸೇರಿಕೊಂಡು ದುಃಖವನ್ನು ನೂರ‍್ಮಡಿಗೊಳಿಸಿಬಿಟ್ಟಿತು. ಪ್ರಪಂಚದ ಸಮಸ್ತ ದುರಂತ ಕಾವ್ಯ ನಾಟಕವೇ ಮೊದಲಾದ ಸಾಹಿತ್ಯ ಗಂಥಗಳಲ್ಲಿ ಅಭಿವ್ಯಕ್ತಗೊಂಡಿರುವ ದುಃಖವನ್ನು ಮೈತುಂಬ ಪಂಚೇದ್ರಿಯಗಳ ತುಂಬ ತುಂಬಿಕೊಂಡುಬಿಟ್ಟನು. ಗಂಟಲಿ ಮರು ನುಡಿಯಲರಿಯದೆ ಮತ್ತೆ ಕಟ್ಟಿ ಬಿಟ್ಟಿತು. ಮೂಗಿನ ಎರಡು ಹೊಳ್ಳೆಗಳಿಂದ ಹಾಲು ಜೇನಿನ ಹಳ್ಳ ಹರಿಯತೊಡಗಿತು. ಕಣ್ಣುಗಳೆರಡು ನಯಾಗರ ಜೋಗದ ಪಾತ್ರಗಳನ್ನು ಅಭಿನಯಿಸತೊಡಗಿದವು.
ತಾಯಿಯ ವಕ್ಷದ ಮೇಲೆ ತನ್ನ ಮುಖಾರವಂದವನ್ನಿರಿಸಿ ’ಅಮ್ಮಾ’ ಎಂದು ಮತ್ತೆ ಮತ್ತೆ ಬಿಕ್ಕಿದ. ಕಣ್ಣೀರು ವಕ್ಷದ ಕಣಿವೆಗುಂಟ ಅಗ್ನಿ ದಿವ್ಯದಂತೆ ಹರಿಯಿತು.
ತನ್ನ ಪ್ರಾಣಪದಕಕ್ಕೆ ಚೇಳು ಕುಟುಕುವುದೆಂದರೇನು! ಋತುಮತಿಯಾದಾಗ ಮೈಲಿಗೆ ಲಂಗದ ಮೇಲೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದ ಐದಾರು ಚೇಳುಗಳನ್ನು ನೋಡಿದ ಮಾತ್ರಕ್ಕೆ ಏಳರ ಜ್ವರ ಏಳು ದಿನಗಳ ಪರ್ಯಂತರ ಕಾಡಿದ್ದವು. ಚೇಳು ಕುಟುಕಿದವರ ಸಂದರ್ಶನ ಮಾಡಿ ಹೌಹಾರಿದ್ದಳು ಎಷ್ಟೋ ಸಲ.
“ಶಿವ! ಶಿವಾ!” ಕಣ್ಣು ಮುಚ್ಚಿಕೊಂಡಳು ತಾಯಿ
“ನನ ಕಂದಾ ಏನು ಹೇಳ್ತಿರುವೆಯೋ?” ಏನು ಮಾಡುವುದೀಗ? ಮಾವನವರಿದ್ದಿದ್ರೆ ಮಂತ್ರಿಸುತ್ತಿದ್ದರು… ”
ಕಂದ ಚೇಳು ಕುಟಿಕಿಸಿಕೊಂಡ ಸಂಕಟದಲ್ಲಿ ಇಷ್ಟು ದೂರ ನಡೆದು ಬಂದಿರುವನಲ್ಲ ಎಷ್ಟೊಂದು ತಾಕತ್ತಿರುವುದಿವನ ಮೈಯೊಳಗೆ! ಎಷ್ಟಾದರೂ ಇವನು ಸರ್ವಶಾಸ್ತ್ರಪಾರಂಗತನಾದ ಗಂಡಸಲ್ಲವೆ?
ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಹಾಗೇ ಜೋಪಾನವಾಗಿ ನಡೆಸಿಕೊಂಡು ಶಯನಗೃಹಕ್ಕೆ ನಡೆಸಿಕೊಂಡು ಹೋದಳು. ಮುಲುಕುತ್ತ, ನರಳುತ್ತ; ಅಡಿಗಡಿಗೆ ಅಮ್ಮಾ ಅಮ್ಮಾ ಅನ್ನುತ್ತ ನಡೆದನಾ ಗಂಡುಗಲಿ ಕುಮಾರ ರಾಮನು.
ಅರ್ಜುನನ ಹಸ್ತಲಾಘವದ ಶರಪಂಜರದ ಮೇಲೆ ಕುರುಪಿತಾಮಹ ಪವಡಿಸೋಪಾದಿಯಲ್ಲಿ ಶಾಮು ಮಲಗಿಕೊಂಡನು.
“ಕಂದಾ… ಚೇಳು ಕುಟಿಕಿದ ಜಾಗವನ್ನಾದರೂ ತೋರ‍್ಸೋ?” ದುಃಖಿತಳಾಗಿ ಕೇಳಿದಳು ವಾತ್ಸಲ್ಯ ಮೂರ್ತಿ.
ಇಂಥದೊಂದು ಪ್ರಶ್ನೆ ತಾಯಿಯ ಬಾಯಿಂದ ಉದುರುತ್ತಲೆ ಶಾಮು ಹೌಹಾರಿದ.
——————–

೧೨೧
“ಹೋಗಮ್ಮ… ಎಲ್ಲೋ ಒಂದ್ಕಡೆ ಕುಟುಕ್ತು” ದುಃಖದ ವಲ್ಮೀಕದೊಡಲಿಂದ ನಾಚಿಕೆ ಒಡಮೂಡಿತು.
“ಹಾಗಂದ್ರೆ ಹೆಂಗಪ್ಪಾ” ಕಂದನ ದೇಹದ ಪ್ರತಿಯೊಂದು ಭಾಗವನ್ನು ಪರಾಮರ್ಶಿಸುತ್ತಾ ಕೇಳಿದಳು ತಾಯಿ.” “ನೀನು ಹೇಳದಿದ್ರೆ ಇಗೋ ನೋಡು ಮತ್ತೆ!”
“ಅಮ್ಮಾ ನನ್ಗೆ ನಾಚ್ಕೆ ಆಗ್ತದೆ” ವಧುವಿನಂತೆ ನಾಚುತ್ತಿರುವ ಮಗ.
ತಾಯಿಯಾದ ನನ್ನ ಬಳಿ ಅದೆಂಥದದೋ ನಾಚ್ಕೆ!”
“ಕುಟುಕಿರೋ ಜಾಗ!”
“ಜಾಗ!”
“ನಿನಗೆ ತೋರಿಸುವಂಥದಲ್ಲ!”
“ಅಂದ್ರೆ”
“ಥೂ! ಹೋಗಮ್ಮಾ!”
“ಛೀ ಹುಚ್ಚಪ್ಪ… ನಾನು ನೋಡ ಬಾರದಂಥ ಜಾಗ ಯಾವುದೋ ಇದೆ ನಿನ್ನ ದೇಹದಲ್ಲಿ?”
“ಇದೆ ಅದನ್ಕಟ್ಕೊಂಡೇನೀಗ?”
“ನಾನು ನಿನ್ನ ತಾಯಿ. ನನ್ನ ಏಕ ಮಾತ್ರ ಪುತ್ರ ನೀನು, ನಿನ್ನ ದೇಹ ನನ್ನ ಹಕ್ಕು.”
“ಅಮ್ಮಾ ದಯವಿಟ್ಟು… ಸ್ವಲ್ಪ ಹೊತ್ತು ಆಚೆ ಹೋಗ್ತೀಯಾ?”
“ಇಂಥ ಸಂಕಟದ ಸಮಯದಲ್ಲಿ ನಿನ್ನೊಬ್ನೆ ಬಿಟ್ಟು ಅದ್ಹೇಗೆ ಹೋಗ್ಲೋ?”
ಶಾಮನಿಗೆ ಫಜೀತಿಗಿಟ್ಟುಕೊಂಡಿತು. ಹೇಗೆ ಹೇಳೋದು! ಹೇಳಲಾಗದೆ ಹೇಗೆ ಇರೋದು? ಪಂಚವಿಂಶತಿ ನಾಚಿಕೆಯ ತ್ರಯೋದಶಿ ಹೊಂಡದಲ್ಲಿ ಲಿಬಿಲಿಬಿ ಒದ್ದಾಡತೊಡಗಿದ. ಯಾಕಾದರೂ ಮನೆಗೆ ಮರಳಿದೆನೋ? ನೋವು ಶಮನವಾಗುವವರೆಗೆ ಅಲ್ಲೆಲ್ಲೊ ಒಂದುಕಡೆ ಬಿದ್ದಿರಬಹುದಿತ್ತು.
ಹೇಳಪ್ಪಾ… ಹೆತ್ತಕರುಳು ಚೂರುಚೂರಾಗ್ತಿದೆ” ಅಲುಮೇಲಮ್ಮ ಚಂಡಿಹಿಡಿದವಳಂತೆ ಕೇಳಿದಳು.
“ನನ್ಗೆ ನಾಚಿಕೆ ಆಗ್ತದಮ್ಮಾಽಽ” ಗೋಗರಿದ.
“ನಾನು ಬದುಕಿರೋವರ‍್ಗೂ ನನ್ನೆದುರಿಗೆ ನಾಚ್ಕೆ ಪಡಬೇಡ… ನಾನು ನಿನ್ನ ತಾಯಿ. ತಾಯಿ ಎದುರು ಅದೆಂಥದೋ ನಾಚಿಕೆ.”
“ನಾನೀಗ ಮಗು ಅಲ್ಲ… ಬೆಳ್ದು ದೊಡ್ಡವನಾಗಿದ್ದೀನಿ.”
“ನಾನು ಸತ್ತ ಮೇಲೆ ಮೇಲೆಯೇ ನೀನು ದೊಡ್ಡವನಾಗೋದು.”
“ನೀನು ಸಾಯೋ ಮಾತಾಡಬೇಡಮ್ಮಾ ನನ್ಗೆ ದುಃಖವಾಗ್ತದೆ.”
“ಹಾಗಾದ್ರೆ ಹೇಳು ಮತ್ತೆ… ಇಲ್ಲಿ ಕುಟುಕ್ತಾ… ಇಲ್ಲಿ ಕುಟುಕ್ತಾ” ಅಲುಮೇಲಮ್ಮ ಮಗನ ದೇಹದ ಬಹುಪಾಲು ಭಾಗವನ್ನು ಮುಟ್ಟಿ ಮುಟ್ಟಿ ಕೇಳಿದಳು.
“ಅಲ್ಲೆಲ್ಲೂ ಅಲ್ಲ.”
“ಹಾಗಿದ್ರೆ ಎಲ್ಲಿ?”
“ಹೇಳೋಕೆ ನನ್ ಮನ್ಸು ಒಪ್ಪುತ್ತಿಲ್ಲ.”
“ಹೆತ್ತ ತಾಯಿಗಿಂತ ನಿನ್ಗೆ ನಿನ್ ಮನಸೇ ಹೆಚ್ಚಾಯ್ತೇನೋ?”
——————–

೧೨೨
“ತಾತ ಬಂದ ಮೇಲೆ ಹೇಳ್ತೀನಿ”
“ನಿನಗೆ ಜನ್ಮ ಕೊಟ್ಟಿರೋದು ತಾತನಲ್ಲ.
“ಹೌದಮ್ಮಾ ನೀನೆ ನನ್ನ ಜನ್ಮದಾತೆ”
“ಹಾಗಿದ್ರೆ ನಿಸ್ಸಂಕೋಚವಾಗಿ ಹೇಳು ಮತ್ತೆ!”
ತತ್ಸರ್ವಂ ಶ್ರೀವಾಸುದೇವಾರ್ಪಣಮಸ್ತು… ಶಾಮು ಸರ್ವಸ್ವವನ್ನೂ ತನ್ನಿಷ್ಟ ದೈವಕ್ಕರ್ಪಿಸಿಬಿಟ್ಟ. ಯಾಕೆ ಹಠ ಮಾಡುತ್ತಿರುವಳೀ ತಾಯಿ; ತಂದೆ ಬದುಕಿದ್ದರೆ ತಾನೀ ಪರಿಯಾಗಿ ಮಾತೃತ್ವದ ಸಂಕೋಲೆಗೆ ಸಿಲುಕುವ ಸಂಧಿಗ್ದಕ್ಕೆ ಬಲಿಯಾಗುತ್ತಿರಲಿಲ್ಲ.
ಮಾತೃತ್ವ ಪಿತೃ ರೂಪಾಯಾ | ಪಿತೃತ್ವ ರೂಪಾಯ ಮಾತೃವೇ
ಮಾತೃತ್ವಸ್ಯ ಹೃದಯ್ಂ ಪಿತೃಃ | ಪಿತೃಶ್ಚ ಹೃದಯಂ ಮಾತೃಃ
ಎಂದು ಗೊಣಗಿಕೊಂಡ. ಪಾಲಕ ಮತ್ತು ಪೋಷಕ ಶಕ್ತಿಗಳ ತ್ರಿವೇಣಿ ಸಂಗಮದಂತಿರುವ ತನ್ನ ತಾಯಿ ಈ ಪರಿ ಮಾತೃತ್ವದ ಪಾರಾಕಾಷ್ಠೆ ತಲುಪಬಹುದೆಂದು ಗೊತ್ತಿದ್ದರೆ ತಾನು ಆ ಕಡೆ ಹೋಗುತ್ತಲೇ ಇರಲಿಲ್ಲ.
“…” ಶಾಮು ಹೇಳಲೆಂದು ಬಾಯಿ ಏನೋ ತೆರೆದ. ಶಬ್ದ ಹೊರಡಲಿಲ್ಲ. ಮುಚ್ಚಿದ.
“ಹೇಳೋ” ಅಲುಮೇಲಮ್ಮನ ಕಂಠ ಬಿಗಿಯಿತು. “ನೀನು ಹೇಳ್ಲಿಲ್ಲಾಂದ್ರೆ ನನ್ನಾಣೆ ನೋಡು.”
“ಆಣೆ!” ಬರಸಿಡಿಲಿನಂತೆ ಎರಗಿತು. ಶಿವಶಿವಾ, ಕಿವಿ ಮುಚ್ಚಿಕೊಂಡ.
ಚಿಕ್ಕಪುಟ್ಟ ಸಂಗತಿಗಳಿಗೆಲ್ಲ ಆಣೆ ಪ್ರಮಾಣ ಮಾಡುವ ತಾಯಿ ಈ ಪ್ರಪಂಚದಲ್ಲಿ ತನಗೊಂದೆ ಇರುವಳೋ ಮತ್ತಾರಿಗಾದರೂ ಇರುವಳೋ?
ಮಾತೃಸನ್ನಿಧಿಯ ಒಂದೊಂದು ಗಳಿಗೆಯೂ ಎಷ್ಟೊಂದು ಆತಂಕಕಾರಿಯಾಗಿರುವುದಲ್ಲ!
ಹೋಗಿ ಹೋಗಿ ಆ ಚೇಳು ತನ್ನನ್ನೇ ಕುಟುಕುವುದೇನು? ಹೋಗಿ ಹೋಗಿ ಅತ್ಯತಿಷ್ಟದ್ದಶಾಂಗುಲಂಗೇ ಕುಟುಕಬೇಕೇನು? ಒಟ್ಟಿನಲ್ಲಿ ನನ್ನ ಕರ್ಮ! ಪ್ರಭಾತಸಮಯ ಪ್ರಭಾಂ ಸಮಯದಲ್ಲಿ ಸೂರ್ಯನಿಗೆ ಅಶ್ರುತರ್ಪಣ ಮಾಡುತ್ತಿದ್ದ ಹಜಾಮರ ವೆಂಕೋಬಿಯ ಹೆಂಡತಿ ಇಠೋಬಿಯನ್ನು ನೋಡಿದ್ದು; ಸದರಿ ದಿನ ಏನಾದರೂ ಸಂಭವಿಸಬಹುದೆಂದು ಆ ಕ್ಷಣವೇ ಅಂದುಕೊಂಡು ಶೌಚ ಕಾರ್ಯಕ್ಕೆ ಹೋಗಿದ್ದ. ಅಬ್ಬಬ್ಬಾ ಅಂದರೆ ಅನಸೂಯಾ ತನ್ನ ಕಪಾಳಕ್ಕೆ ಎರಡು ಬಿಡಬಹುದು! ಇಲ್ಲವೆ ಇತ್ತೀಚಿಗೆ ರಾಜಕೀಯ ಸೇರಿರುವ ಬಾಡಿ ಬಿಲ್ದರ್ ತನ್ನನ್ನಟ್ಟಿಸಿಕೊಂಡು ಬರಬಹುದೆಂದುಕೊಳ್ಳುತ್ತ ಪಾತರ್ವಿಧಿಗಳನ್ನು ಮುಗಿಸಿದ್ದ. ಸೂರ್ಯಾಸ್ತದ ನಂತರ ಕಂಟಕದ ಸರಮಾಲೆಯೇ ಆರಂಭವಾಗಿರುವುದು ದುರದೃಷ್ಟಕರ ಸಂಗತಿ.
ತಾಯಿ ಮುಖ ಬಳ್ಳಾರಿ ಬಿಸಲಿಗೆ ತತ್ತರಿಸಿದ ಎಳೆಲತೆಯಂತಾಗಿರುವುದನ್ನು ಕಂಡ. ಮಮ್ಮಲನೆ ಮರುಗಿದ. ಹೇಳಿದರೆ ಅಶ್ಲೀಲದ ಪಾಪ ಸಂಚಯಕ್ಕೆ ತಾನುಒಳ್ಳೆಯ ಚೀಲ… ಹೇಳಿಯೇ ಬಿಡಬೇಕೆಂದು ನಿರ್ಧರಿಸಿದ. ಸ್ವಧಾ ಸಮರ್ಪಯಾಮಿ… ತನಗೆ ತಾನು ತರ್ಪಣಕೊಟ್ಟುಕೊಂಡು ಬಾಯನ್ನು ಮೆಲ್ಲಗೆ ತೆರೆದ.
“ಅಮ್ಮಾಽಽ… ಆಣೆಇಟ್ಟು ನನ್ನನ್ನು ಧರ್ಮಸಂಕಟಕ್ಕೆಸಿಲುಕಿಸಿದ ನನ್ನಪ್ರೀತಿಯ ತಾಯೇ… ಇದೋ ಇಲ್ಲಿ ಚೇ…ಳು… ” ಎಂದು ಆ ಚಂದ್ರೋಪರಾಗ ಪರ್ವಣಿ ಪುಣ್ಯಕಾಲದಲ್ಲಿ ಶಾಮನು
—————–

೧೨೩
ಕೈಯಿಂದ ಸಂಜ್ಞೆ ಮಾಡಿ ತೋರಿಸಿಬಿಟ್ಟನು.
ಸಕಲಗತನುಗತಂ ಶಂಕರಂ ಅಂತ ತನ್ನೆರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡುಬಿಟ್ಟ.
ಪ್ರೌಡೋಽಹಂ ಯೌವನಸ್ಥೋ ವಿಷಯ ವಿಷಧರೈಃ ಅಂತ ನಾಚಿ ಕೆಂಪಗಾಗಿದ್ದ ಮುಖವನ್ನು ಬೆಳಕಿನಿಂದ ಮರೆಮಾಚಿದ.
ಅದನ್ನು ಕೇಳಿದ ತಾಯಿ ಗುರುತ್ವಾಕರ್ಷಣೆ ಕಳೆದುಕೊಂಡಂತಾದಳು. ಅರ್ಧ ನಿಮೀಲಿತ ನೋಟದಿಂದ ಆ ಭಾಗ ನೋಡಿದಳು. ಆ ಭಾಗದ ಬಗ್ಗೆ ಆಕೆಗೆ ಸಿಟ್ಟು, ದುಃಖ, ಸಂತೋಷ ಒಟ್ಟೊಟ್ಟಿಗೆ ಬಂದವು.
“ಸಿಟ್ಟು!… ತನ್ನನ್ನು ತನ್ನ ಮಗನಿಂದ ದೂರ ಮಾಡುತ್ತಿರುವ ಕಂಕಲಾಡಿತನದ ಜಾಗವದು. ದಿನೇ ದಿನೇ ಮಗ ಆ ಕಡೆ ಧ್ಯಾನಸ್ಥನಾಗುತ್ತಿರುವನು, ತನ್ನಿಂದ ದ್ವಿದಳ ಧಾನ್ಯದಂತೆ ಬೇರ್ಪಡುತ್ತಿರುವನು. ಎಲ್ಲಾ ವಿಷಯಾಸಕ್ತಿಗಳ ಕೇಂದ್ರದಂತಿರುವ ಆ ಜಾಗವನ್ನು ತಾನಿದುವರೆಗೆ ನೋಡಿಯೇ ಇಲ್ಲ. ಮಾತೃತ್ವದ ಪರಮಾಧಿಕಾರದ ಮೇಲೆ ಧಾಳಿ ಮಾಡುವ ಆ ಸ್ವಯಂ ಚಾಲಿತ ಶಕ್ತಿಗೆ ದಿಕ್ಕಾರ!
’ದುಃಖ’ ಎಂಥ ಹುಚ್ಚಪ್ಪನಿದ್ದಾನೆ ತನ್ನ ಪ್ರೀತಿಯ ಮಗ! ಅದನ್ನೂ ತನ್ನಿಂದ ಮರೆಮಾಚುವಷ್ಟು ಸ್ವಾರ್ಥಿಯಾಗಿರುವನಲ್ಲ! ಅದವನಿಗೆ ಗುಣ, ತಾನು ಗೌಣ ಯಾಕೆ ಹೀಗಾಗ್ತಿದೆ! ತನನೆ ತನ್ನ ಮಗನ ತ್ರಿಕಾಲ ಸತ್ಯಗಳ ಮೇಲೆ, ದೈಹಿಕ ವಿಘಟನೆಗಳ ಮೂಲ ಸೆಲೆಯ ಬಗ್ಗೆ ತಾಯಿಯಾದ ತನಗೆ ಅಧಿಕಾರವಿಲ್ಲವೇನು?
’ಸಂತೋಷ’ ಅರೆ! ಮೊನ್ನೆ ಮೊನ್ನೆ ತಾನು ಎತ್ತಿ ಆಡಿಸಿ; ಮೊಲೆಯೂಡಿಸಿ; ಶೌಚವೇ ಮೊದಲಾದ ಸಹಜ ಕ್ರಿಯೆಗಳನ್ನು ಮಾಡಿಸಿ; ಸಂಬಂದ ವಾಚಕ ಪದ ವಿಶೇಷಣಗಳನ್ನು ಕಲಿಸಿ ಮಾತೃ ಮುಗ್ಧತೆಯ ಋಷ್ಯ ಶೃಂಗ ತುದಿಯ ಮೇಲೆ ನಿಂತಿದ್ದ ತನಗೆ ಅವನಿಷ್ಟೊಂದು ಬೆಳೆದು ದೊಡ್ಡವನಾಗಿರುವುದರಿಂದಲ್ಲವೇ ಈ ನಾಚಿಕೆ ಬಿಗುಮಾನಗಳಿತ್ಯಾದಿ! ತಾನು ಗಮನಿಸದಂಥ; ತನ್ನ ಮಾತ್ರುತ್ವದ ಅರಿವಿಗೆ ಬಾರದಿರುವಂಥ ಬೆಳವಣಿಗೆ ಅವನ ದೇಹದಲ್ಲಿ ಇರುವುದಾದರೂ ಯಾವುದು? ಅದರ ಪೂರ್ವೋತ್ತರ ಅಗತ್ಯಗಳನ್ನು ಪೂರೈಸುವ ಅಧಿಕಾರ ತನಗಿನ್ನಷ್ಟು ಬೇಗನೆ ದೊರಕುತ್ತಿರುವುದಲ್ಲವೆ!
ಎಷ್ಟೊಂದು ನಾಚಿಕೊಡಿರುವನಲ್ಲ ತನ್ನ ಮಗ, ತಾಯಿಯ ಸಾನ್ನಿಧ್ಯದಲ್ಲೂ ನಾಚಿಕೆ ಏನು?
“ಮಗೂ… ಮುಖವನ್ಯಾಕೆ ಹಾಗೆ ಮುಚ್ಕೊಂಡಿದ್ದೀಯೋ ಹುಚ್ಚಪ್ಪಾ… ಕೈ ತೆಗೆ… ನಿನ್ ಮುಖದ ಹೊಸ ಭಾವನೆಯನ್ನು ನೋಡೋ ಆಸೆಯಾಗಿದೆ…” ಅಲುಮೇಲಮ್ಮ ಬಲವಂತದಿಂದ ಮುಖದ ಮೇಲಿದ್ದ ಕೈಗಳನ್ನು ತೆಗೆದಳು.
ಅವನಲ್ಲಿ ಒಂದೆರಡು ಕ್ಷಣ ಹಿಂದಿದ್ದ ಗೊಂದಲವಿರಲಿಲ್ಲ. ಮಾತೃತ್ವದ ಗರಿಷ್ಠತೆಗೆ ಅರ್ಪಿಸಿಕೊಂಡಿದ್ದ ಅವನು ಅವನತಮುಖನಾದ…
ತಾಯಿ ತನ್ನ ಕೈಗಳನ್ನು ಮೇಲಿರಿಸಿದಳು…
ಮೆಲ್ಲಗೆ ನಿಧಾನವಾಗಿ ಕೆಳಗೆ ಸರಿಸಿದಳು.
ಸೃಷ್ಟಿ ಕಲೆಗೆ ಪ್ರಧಾನ ಸ್ವಯಂಚಾಲಿತ ಕೇಂದ್ರಕ್ಕೆ ಕುಟುಕಿರುವ ಚೇಳೇ ನಿನಗೆ ಧಿಕ್ಕಾರ!… ಏನೇನೋ ಗೊಣಗುತ್ತ ಕಣ್ಣು ಮುಚ್ಚಿದಳು ಅವನು ನಿರಾಕರಿಸಿದರೂ ಕೇಳದೆ ಕೈಗಳನ್ನು ಮತ್ತಷ್ಟು ಕೆಳಗೆ ಸರಿಸಿದಳು.
————————-

೧೨೪
ಆ ದರಿದ್ರದ ಹುಡುಗಿ ಅನಸೂಯಳ ಸ್ಪರ್ಶ ಮೈಲಿಗೆಯ ಕಲ್ಪನೆ ಪ್ರಾಯಶ್ಚಿತ್ತವಾಗಿಯೇ ಚೇಳು ಕುಟುಕಿರಬಹುದೆಂದು ಆ ತಾಯಿ ಗೊಣಗುತ್ತಿರಲು…

* * * *

ಬೆಂಗಳೂರಿನಲ್ಲಿದ್ದ ರಾಘೂ ಮಾಮನಿಗೆ ಪತ್ರಬರೆಯೋದಕ್ಕೂ ಮೂರು ದಿನ ಮೊಡಲು ಅನಸೂಯಾ ಮಾತಿನಿಂದ ಸಂಬಂಧ ಹರಕೊಂಡು ಬರೋದೇನೋ ಬಂದುಬಿಟ್ಟಳು. ಅದರ ಸಮಾಧಾನ ಎಂಬುದು ಪುರ್ರನೆ ಹಾರಿ ಹೋಗ ಬಿಡಬೇಕೇ ಹಾಳಾದ್ದು! ಬರ‍್ದು ಬಿಡೇ ಕಾಲ ಹಿಂಗೇ ಇರೋದಿಲ್ಲ. ಯಾವ ಘಳಿಗೇಲಿ ಏನಾಗ್ತದೋ ಬಲ್ಲೋರ‍್ಯಾರು? ನಾವು ಹೇಳಿ ಕೇಳಿ ಹೆಣ್ಣು ಮೂಳಗಳು, ಮೂಆಗೋ ಕಡೆ ಆರಾಗಿ ಬಿಟ್ರೆ ಕನ್ನೀರವ್ವನ ಬಾವೀನೆ ಗತಿ. ಅದೂ ಅಲ್ದೆ ನಿಮ್ಮಪ್ಪನಿಂದ ಪತ್ರ ಇಲ್ಲ ಸುದ್ದಿ ಇಲ್ಲ… ಅವರೆಲ್ಲಿದ್ದಾರೋ? ಏನು ಮಾಡ್ತಿದಾರೋ? ಹಿಡಿದ ಕೆಲಸ ಮುಗಿಸ್ಕೊಂಡೇ ಬರುವ ಜಾಯಿಮಾನದವರು. ಹೆಂಡ್ತಿ ಮಕ್ಳು ಗ್ಯಾನ ಬ್ಯಾಡ್ವೇ? ಅವರ‍್ಯಾವಾಗಾದ್ರೂ ಬರ್ಲಿ… ನಿನ್ ತಲೆ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ನಾನು ನನ್ ದಾರಿ ನೋಡ್ಕೋತೀನಿ ನನ್ನ ಮಾತು ನೀನು ಕೇಳಿದ್ರೆ ತಾನೆ, ಆ ಬಾಂಬ್ರು ಹುಡುಗನ ಚಿಂತೆ ಹಚ್ಚಿಕೊಂಡು ದಿನ ನೂಕಬೇಡಾಂತ ಎಷ್ಟು ಹೇಳಿದೆ. ನೀನು ಕೇಳಿದ್ಯಾ? ಅಗಿದ್ದು ಆಗಿಹೋಯ್ತು. ಈಗಲಾದ್ರು ಪತ್ರ ಬರೆಯೋದು ಬ್ಯಾಡವೇನು ಎಂದು ರುಕ್ಕಮ್ಮ ಮಗಿ ಮಳೆ ಅಂಟಿಕೊಂಡಂತೆ ಒಂದೇ ಸಮನೆ ಎರಡು ದಿನಮಾನ ಅಂಟಿಕೊಂಡು ಬಿಟ್ಟಿದ್ದಳು. ಆಕೆಯ ಮಾತುಗಳಿಗೆಲ್ಲ ಅನಸೂಯ ತಲೆಕೆಡಿಸಿಕೊಳ್ಳಲಿಲ್ಲ.
“ಏನವ್ವಾ ಹಿಂಗಾಡ್ತಿಯಲ್ಲ… ಈಗ ನಿನ್ಗೆ ಕಡಿಮೆ ಅಗಿರೋದಾದ್ರು ಏನು? ನಿಮ್ಗೆ ಮಗ ಅಂದ್ರು ನಾನೆ ಮಗ್ಳು ಅಂದ್ರೂ ನಾನೇ. ನನ್ನನ್ಯಾರ‍್ಗೋ ಮದ್ವೆ ಮಾಡ್ಕೊಟ್ಟು ನೀನೇನು ಮಾಡಬೇಕೆಂಡಿರುವಿ? ಇಷ್ಟೊಂದು ಓಡ್ಕೊಂಡಿದ್ದೀನಿ. ಪ್ರಪಂಚಾನು ಅರ್ಥ ಮಾಡ್ಕೊಡದೀನಿ. ನಮ್ ಸಂಸಾರಾನೂ ಅರ್ಥ ಮಾಡ್ಕೊಡದೀನಿ… ಅಪ್ಪ ಅನ್ನಿಸ್ಕೊಂಡೋನು ಹೇಳ್ದೆ ಕೇಳ್ದೆ ಮನೆಬಿಟ್ಟು ಹೋಗಿದ್ದಾನೆ… ಅಪ್ಪ ಬಂದೇ ಬರ‍್ತಾನೆ… ಬರ‍್ಲಿ ಬಂದ ಮೇಲೆ ಆತನೇ ನಿಂತು ಮದ್ವೆ ಮಾಡ್ತಾನೆ…” ಎಂದು ಶಾಮನ ಪತ್ರಗಳನ್ನು ಅಡುಗೆ ಮನೆಯ ಯಜ್ಞ ಕುಂಡಕ್ಕೆ ’ಸಮರ್ಪಯಾಮಿ’ ಮಾಡುತ್ತಾ ಹೇಳಿದಳು.
“ಅಲ್ಲಿವರ‍್ಗೂ?” ಸ್ವಾತಿ ಸ್ಟೋರಿಗೆ ಕೊಡಬೇಕಿದ್ದ ವಯರ್ ಬುಟ್ಟಿಗಳ ಪೈಕಿ ಇಪ್ಪತ್ತನೆಯದು ಮತ್ತು ಕೊನೆಯದು ಹೆಣೆಯುತ್ತ ಪ್ರಶ್ನಾತ್ಮಕ ಚಿನ್ಹೆ ಇಟ್ಟಳು ರುಕ್ಕಮ್ಮ.
“ನನ್ಯಾವುದಾದರೊಂದು ನೌಕರಿ ನೋಡ್ಕೋತೀನಿ” ಎಂದು ಕೊನೆ ಪತ್ರವನ್ನು ಬೆಂಕಿಗೆಸೆದು ನಿಟ್ಟುಸಿರುಬಿಟ್ಟಳು ಅನಸೂಯಾ. ವರಲಕ್ಶ್ಮಿ ಫೈನಾನ್ಸ್ ಕಾರ್ಪೊರೇಷನ್ನಿನ ವೆಂಕಟರಾಮು ಬರೊ ತಿಂಗಳು ಒಂದರಿಂದ ಬಂದು ಹಾಜರಾಗಬಹುದೆಂದು ಹೇಳಿದ್ದ”
“ನೀನು ನೌಕರಿ ಸೇರುವುದು ಬ್ಯಾಡ. ನೀನು ದುಡಿದು ತಂದಿದ್ನ ನಾನು ತಿಂದು ಬದ್ಕೋದೂ ಬ್ಯಾಡ. ನಿನ್ ಮದ್ವೆ ಮಾಡಿ ಮುಗಿಸಿ ನಾನು ನನ್ನ ತವರ್ಮನೆಗೆ ಹೋಗ್ತೀನಿ” ಎಂದು ಕಡ್ಡಿ ಮುರಿದಂತೆ ಹೇಳಿದ್ದಳು. ತವರೂರಿಗೆ ಬರೋದಾದ್ರೆ ಎಂಟೆಕರೆ ಹೊಲ ಮಾಡಿಸಿ ಕೊಡುವುದಾಗಿ ಚಿಕ್ಕಪ್ಪ ಕಳೆದ ತಿಂಗಳು ಬಂದಿದ್ದಾದ ಹೇಳಿ ಹೊಗಿದ್ದ.
“ಹಾಗಾದ್ರೆ ಅಪ್ಪ ಬರೋವರ‍್ಗೂ ಕಾಯೋದು ಬ್ಯಾಡಾಂತಿ ಏನು?” ಒಂದು ಕೈಲಿ ಪತ್ರ ಮತ್ತೊಂದು ಕೈಲಿ ಪೆನ್ನು ಹಿಡಿದು ಕೇಳಿದಳು.
————————

೧೨೫
“ಅವು ಅಷ್ಟು ಬೇಗ ಬರಬೌದೆಂದ್ಕೊಂಡಿಲ್ಲ. ಬರೋದು ವರ್ಷಗಟ್ಲೆ ಆಗ್ತದಂತ ಹೇಳೇ ಹೋಗ್ಯಾರ… ನಿನ್ ಮದ್ವೆ ಮಾಡಿ ಮುಗಿಸಿದ್ರೆ ಅವ್ರೂ ಸಂತೋಷ ಪಡ್ತಾರೆ.”
ತಾಯಿ ಮಗಳಿಬ್ಬರೂ ಒಂದೇ ಸಲಕ್ಕೆ ನಿಟ್ಟುಸಿರುಬಿಟ್ಟರು.
ಅನಸೂಯಾ ತಾಯಿ ಹೆಸರಿನಲ್ಲಿಯೇ ರಾಘುಗೆ ಪತ್ರ ಬರೆದು ಮುಗಿಸಿದಳು. ಅದನ್ನು ದಬ್ಬಿಗೆ ಹಾಕುವಾಗ ಶಾಮುಗೆ ಚೇಳು ಕುಟುಕಿದ್ದು ಮರುಕಳಿಸಿತು. ಅದು ತನಗಾದರೂ ಕುಟುಕಬಾರದಾಗಿತ್ತ ಅಂದುಕೊಂಡಳು. ಕವಿ ಹೃದಯದ ಅವನಿಗೆ ಚೇಳು ಹೊಸ ಅನುಭವ ನೀಡಿರಬಹುದು. ಬರೀ ಇರುವೆಯಿಂದ ಕಚ್ಚಿಸಿಕೊಳ್ಳುತ್ತಾ ಕೂತಿದ್ದರೆ ಕವಿತೆ ಅರ್ಥವಾಗುವುದಾದರೂ ಹೇಗೆ? ಅವನು ಇರುವೆಯಿಂದಲೂ ಕಚ್ಚಿಸಿಕೊಂಡಿರಲಿಕ್ಕಿಲ್ಲ… ಜಲಜಾಕ್ಷಿ ನೀಡಿರುವಂಥ ಅನುಭವವನ್ನು ತನ್ನಿಂದ ನೀಡಲಾಗಲಿಲ್ಲ… ಆಕೆಯ ಜಾಯಮಾನ ಆಕೆಯದು; ತನ್ನ ಜಾಯಮಾನ ತನ್ನದು…
ಶತಪದಿಯಂತೆ ನಡೆಯುತ್ತಿದ್ದ ಶಾಮು ಮತ್ತೆ ಮತ್ತೆ ನೆನಪಾದ. ಅವನ ತಾಯಿ ತನ್ನ ಮಗನನ್ನು ಎತ್ತಿಕೊಂಡೇ ಓಡಾಡುತ್ತಿರಬಹುದು ಮನೆತುಂಬ. ವೃಶ್ಚಿಕ ಕುಟುಕಿದ್ದರಿಂದ ದೊಡ್ಡದೊಂದು ಕಂಟಕವೇ ಪರಿಹಾರವಾಗಿದೆ ಎಂದು ಶಾಸ್ತ್ರಿಗಾಳು ಭಾಗಿಸಿ ಗುಣಿಸಿ ಅಭಿಪ್ರಾಯಪಟ್ಟಿರಬಹುದು. ಆದರೆ ಶಾಮು ಎಂಬ ಆದಿಮಾನವನಿಗೆ ಅದಾವುದೂ ಅರ್ಥವಾಗಲಿಕ್ಕಿಲ್ಲ. ಅಲುಮೇಲಮ್ಮ ಮತ್ತು ಶಾಸ್ತ್ರಿಗಳ ಅಭಿಪ್ರಯಗಳ ಉಡಾವಣೆಯ ಸ್ತಳ ಮಾತ್ರ ಅವನು. ಡೋಲಾಯ ಮನಸ್ಸಿನ ಅವನನ್ನು ತಿದ್ದು ತಿಳುವಳಿಕೆ ತನಗೆ ಮಾತ್ರ ಇತ್ತು. ಕೈ ಹಿಡಿಯುವ ಯಾವ ವಧುವೂ ಅವನನ್ನು ತಿದ್ದುವುದು ಸಾಧ್ಯವಿಲ್ಲ… ಹೀಗೆ ಏನೇನೋ ಯೋಚಿಸುತ್ತ ಬೀದಿಯ ಕೊನೆಯಲ್ಲಿ… ಆರು ಬೆರಳು ವಂಶದ ಶೆಟ್ಟಿ ಅಂಗಡಿಯ ಕಂಭಕಿದ್ದ ಅಂಚೆ ಡಬ್ಬಿಯಲ್ಲಿ ಪತ್ರ ಹಾಕಿ ಬರುವಾಗ ಕೆಲವು ಪಡ್ಡೆಗಳು ತನ್ನ ಕಡೆಗೇ ಪಿಳಿಪಿಳಿ ನೋಡುತ್ತಿರುವುದನ್ನು ಗಮನಿಸಿದಳು.
ಒಂದಿಷ್ಟು ತರಕಾರಿ ಕೊಂಡುಕೊಂಡು ಹೋದರಾಯಿತುಅಂತ ಎಡರಳ್ಳಿ ಸಣ್ಣೀರವ್ವನ ಬಳಿಗೆ ಹೋಗುತ್ತಿರುವಾಗ ಶಾಮು ತನ್ನ ತಾತನ ಜೊತೆ ಎಲ್ಲಿಗೋ ಹೊರಟಿರುವುದು ಕಂಡಿತು. ಅವರಿಬ್ಬರು ವಿಶೇಷ ಉಡುಪಿನಲ್ಲಿದ್ದರು. ಬಹುಶಃ ಯಾವುದಾದರೂ ವೈದಿಕಕ್ಕೊ, ಶ್ರಾದ್ಧಕ್ಕೋ ಹೊರಟಂತಿತ್ತು. ವೈದಿಕದ ಉಡುಪಿನಲ್ಲಿ ಶಾಮು ಶ್ರೀಕೃಷ್ನ ದೇವರಾಯನ ಅಪ್ಪಾಜಿ ತಿಮ್ಮರಸನಂತೆ ಕಾಣುತ್ತಿದ್ದ. ನೋವು ಕಡಿಮೆಯಾದಂತಿಲ್ಲ. ಕಾಲು ಸ್ವಲ್ಪ ಕಿಸಿದು ಹಾಕುತ್ತಿರುವನು.
ಅನಸೂಯಳನ್ನು ನೋಡಿದ ಕೂಡಲೆ ಮುಂಗುಸಿ ಕಂಡ ಹಾವಿನಂತೆ ತನ್ನ ತಾತನ ನೆರಳಿನಲ್ಲಿ ಅವಿತುಕೊಂಡನು.
ಅವನ ಆ ಅವಸ್ಥೆ ನೋಡಿ ಅನಸೂಯಾಳಿಗೆ ನಗು ಬಂತು.
ಆಕೆ ಕಾಯಿಪಲ್ಯೆ ಖರೀದಿಸಿದ ಸಣ್ಣಿರವ್ವನೂ ಹನ್ನೊಂದಕ್ಕೆ ಮದುವೆಯಾಗಿ ಹನ್ನೆರಡಕ್ಕೆ ಮೈನೆರತು ಹದಿನಾಲ್ಕನೇ ವಯಸ್ಸಿಗೊಂದು, ಹದಿನೈದನೇ ವಯಸ್ಸಿಗೊಂದರಂತೆ ಮಡಿಲು ತುಂಬಿಕೊಂಡು ಹದಿನಾರಕ್ಕೆ ರಂಡೆ ಪದವಿ ಪಡೆದಂಥಾಕೆಯೇ. ಸುಮಾರು ಐವತ್ತು ವರ್ಷ ಆಕೆಗೆ. ಅನಸೂಯಳ ಮೇಲೆ ಪ್ರೀತಿ. ಒಳ್ಳೇದು ಕೆಟ್ಟದ್ದು ವಿಚಾರಿಸಿ ವಿಚಾರಿಸದೆ ಎಂದೂ ಕಳಿಸಿದಾಕೆಯಲ್ಲ.
ಆಗಲೂ ಸಹ ವೀರವನಿತೆಯಂತೆ ಮಾತಾಡಿಸಿದಳು.
ಇಂಥವರಿಂದಲೇ ಜೀವನೋತ್ಸಾಹ ಪಡೆಯುವುದರಲ್ಲಿರುವ ದೈನ್ಯತೆಯನ್ನು ಅರ್ಥ
—————————–

೧೨೬
ಮಾಡಿಕೊಳ್ಳುತ್ತ ಅನಸೂಯ ಮನೆಗೆ ಮರಳಿದಳು.
“ಬಾ ತಾಯೀ… ಬಾರಮ್ಮಾ… ಕಾಯಿಪಲ್ಯೆ ತರಾಕ ಹೋಗಿದ್ದೇನಮ್ಮಾ; ಏನು ಕಾಲ ಬಂದೈತೇನೋ? ಏನು ತಗೊಂಡ್ರು ದುಬಾರಿ, ಕೊಳ್ಳಂಗಿಲ್ಲ ಬಿಡಂಗಿಲ್ಲ… ಹೇಗೋ ಒಂದ್ರೀತಿ ಬದುಕಬೇಕಲ್ಲ… ಉಪಾಸಯಿರ‍್ಲಿಕ್ಕಾಗ್ತದೇನು? ನಾನು ನೋಡಮ್ಮಾ ಬೀಡಿ, ಚಾ, ಕಾಫಿ ಎಲ್ಲ ಬಿಟ್‍ಬಿಟ್ಟೀನಿ. ಮನೇಲಿ ಯಾರಾದ್ರು ಬಂದ್ರೆ ಅವ್ರಿಗೆ ಮಾತ್ರ ಚಾ ಮಾಡ್ತೀನಿ ಅಷ್ಟೆ. ಹಾಸ್ಗೆ ಇದ್ದಷ್ಟು ಕಾಲು ಚಾಚಬೇಕು ನೋಡು. ಕಾಲ ಧರ್ಮ” ಮನೆ ಮುಂದುಗಡೆ ವರಾಂಡದಲ್ಲಿ ಹಾಕಿದ್ದ ಕುರ್ಚಿ ಮೇಲೆ ಕೂತು ತಲೆಬಾಗಿಲ ಮೇಲೆ ಕಣ್ಣು ಕೋರೈಸುತ್ತಿದ್ದ ಬಳ್ಳಾರಿ ಕನಕದುರ್ಗಾ, ಹುಲಿಗೆಮ್ಮ, ಸವದತ್ತಿ ಎಲ್ಲಮ್ಮ, ಮೈಸೂರಿನ ಚಾಮುಂಡಿ ಇವೇ ಮೊದಲಾದ ಎದ್ದು ಬರುತ್ತಾರೆನ್ನುವಂತಿದ್ದ ಶಕ್ತಿ ದೇವತೆಗಳ ಫೋಟೋಗಳ ಕಡೆಗೊಮ್ಮೆ, ಆತಂಕವನ್ನು ಮುಖದಲ್ಲಿ ಪ್ರಕಟಿಸುತ್ತಿದ್ದ ರುಕ್ಕಮ್ಮನ ಕಡೆಗೊಮ್ಮೆ ನೋಡುತ್ತ ಮಾತುಮಾತಿಗೊಮ್ಮೆ ನಿಟ್ಟುಸಿರು ಬಿಡುತ್ತ ತನ್ನ ಪಾಡಿಗೆ ತಾನು ಪ್ರಪಂಚವನ್ನೇ ತಲೆಮೇಲೆ ಹೊತ್ತುಕೊಂಡವನಂತೆ ಮಾತಾಡುತ್ತಿದ್ದ ಕಸೆಟ್ಟಿ ಚಂದ್ರಪ್ಪನ ಕಡೆಗೊಮ್ಮೆ ತೀಕ್ಷಣವಾಗಿ ನೋಡುತ್ತ ಮನೆ ಒಳಗಡೆ ಹೋದಳು ಅನಸೂಯಾ.
ಗಂಡ ರುದ್ರನಯಕನಿಂದ ಪತ್ರ ಬಂತೇ ಎನ್ನುವುದರ ಬಗ್ಗೆ; ಮಗಳು ಅನಸುಯಳ ಮದುವೆ ಬಗ್ಗೆ; ಒಂಟಿ ಹೆಂಗಸು ಹೇಗೆ ಜೀವನ ಸಾಗಿಸುವಿ ಎಂಬುದರ ಬಗ್ಗೆ; ಪುರುಷ ಪ್ರಧಾನ ಸಮಾಜದಲ್ಲಿ ಕಾಲ ಸೂಕ್ಷ್ಮವಾಗಿದೆ ಎನ್ನುವುದರ ಬಗ್ಗೆ; ತಾನು ದಿನಪತ್ರಿಗೆಗಳಲ್ಲಿ ಓದಿರುವ ಅಹಿತಕರ ಘಟನೆಗಳ ಬಗ್ಗೆ; ಬದಲಾಗುತ್ತಿರುವ ಹೊಸ ರಾಜಕೀಯ ವಾತಾವರಣದ ಬಗ್ಗೆ; ಋತುಮಾನಗಳು ಅದುಲುಬದಲಾಗಿರುವ ಬಗ್ಗೆ; ಋತುಮಾನಗಳು ಹೊತ್ತು ಗೊತ್ತಿಲ್ಲದೆ ಒಂದೇ ಸಮನೆ ಬೀಸುತ್ತಿರುವಬಗ್ಗೆ; ಹೊಸದಾಗಿ ರಾಜಕೀಯ ಪ್ರವೇಶ ಮಾಡಿ ಖಾದಿ ಸೀರೆ ಉಟ್ಟುಕೊಂಡು ಮಿಂಚುತ್ತಿರುವ ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಜಲಜಾಕ್ಷಿ ಬಗ್ಗೆ; ದೇಶವನ್ನೇ ಗಡಗಡ ನಡುಗಿಸುತ್ತಿರುವ ಇಂದಿರಾಗಾಂಧಿ ಬಗ್ಗೆ ಚಂದ್ರಪ್ಪ ತನ್ನ ಪಾಡಿಗೆ ತಾನು ಮಾತಾಡುತ್ತಿದ್ದುದು; ಪ್ರತಿಯೊಂದು ಮಾತಿಗೆ ಅನ್ಯಮನಸ್ಕಳಾಗಿ ತಾಯಿ ರುಕ್ಕಮ್ಮ ಹೂಂಗುಟ್ಟುತ್ತಿದ್ದುದೆಲ್ಲವನ್ನು ಕೇಳಿಸಿಕೊಳ್ಳುತ್ತ ಅಡುಗೆಮನೆಯೊಳಗೆ ಅಡುಗೆ ಮಾಡತೊಡಗಿದ್ದಳು ಅನಸೂಯ.
ತಮ್ಮ ಮನೆಯ ಮಾಲಿಕಿನ್‍ರವರ ಜೀವ ತಿನ್ನುತ್ತಿರುವ ಈ ಖಳನಿಗೆ ತಕ್ಕ ಶಾಸ್ತಿ ಮಾಡಬೇಕೆಂಬ ಉದ್ದೇಶದಿಂದ ಮೂಷಕ ದಂಪತಿಗಳು ಕಿರ್‌ಕಿರ್ ಸದ್ದು ಮಾಡುತ್ತ ಅವನ ನೆತ್ತಿ ಮೇಲಿದ್ದ ಜಂತಿ ಮೇಲೆ ಕೂತು ಆ ಚಕ್ರಬಡ್ಡಿ ಚಂಡಾಲ ಕಿಂಕರನ ಕಡೆ ತೀಕ್ಷ್ಣವಾಗಿ ನೋಡಿದವು. ಅವನು ಆಕಳಿಕೆ ಬಂದು ಮುಖ ಎತ್ತಿ ಬಾಯಿ ತೆರೆದೊಡನೆ ಅವು ತಮ್ಮ ಎಂಟು ಕಾಲುಗಳಿಂದ ಪುತಪುತನೆ ನುಸಿಮಣ್ಣನ್ನುದುರಿಸಿದವು. ಅದು ಸೀದ ಅವನ ಕಣ್ಣು, ಬಾಯಿಗೆ ಬಿತ್ತು. ಅವನು ಕಂಗಾಲಾಗಿ ಕಣ್ಣುಜ್ಜಿಕೊಳ್ಳುತ್ತ ಕೊಕ್‍ಕೊಕ್ ಕೆಮ್ಮುತ್ತ ಇಲಿಗಳನ್ನು ಶಪಿಸುತ್ತ ಎದ್ದು ನಿಂತನು.
“ತಂಗೀ… ರುಕ್ಕಮ್ಮಾ ನಿನ್ ಕಷ್ಟ ನೋಡಿ ಒತ್ತಾಯ ಮಾಡೋಕೆ ಮನ್ಸು ಒಪ್ತಿಲ್ಲಮ್ಮಾ ಬಾಡಿಗೆ ಬಾಕಿ ಹಾಳೂಮೂಳೂ ವಸೂಲುಮಾಡ್ಕೊಂಡ್ ಹೋದ್ರೇನೇ ಸೊಸಿ ಕೂಳು ಹಾಕೋದಮ್ಮಾ. ಬಂಗಾರ‍್ದಂತ ಮಗ್ನಿಗೆ ಅಂಥೋಳ್ನ ತಂದಿರೋದು ನನ್ ಕರ್ಮ ಈಗ ಹೋಗಿ ಏನೋ ಒಂದು ಹೇಳಿ ಸರಿ ಮಾಡ್ತೀನಿ. ಮುಂದಿನ್ತಿಂಗ್ಳು ನನ್ಗೊಂದು ದಾರಿ ತೋರ‍್ಸಿಬಿಡಮ್ಮಾ ಇನ್ನೂ ನಾನು ಚಪ್ರದಳ್ಳೀಗೆ ನಡ್ಕೋತ ಹೋಗಿ ಕುದಿರೆ ಕಾಲಿನ ಕಾಳಿಂಗಾಚಾರಿಯ ಕಾಲು ಹಿಡಕೋಳ್ಳೋದೈತಿ…” ಎಂದು ಕಸೆಟ್ಟಿ ಚಂದ್ರಪ್ಪ ಸಂಸಾರವೆಂಬ ಗೂಲಿ
————————-

೧೨೭
ಗುಡ್ಡವನ್ನು ಬೆನ್ನ ಮೇಲಿಟ್ಟುಕೊಂಡಿರುವವನಂತೆ ಭಾರವಾದ ಹೆಜ್ಜೆ ಹಾಕುತ್ತ ಹೋದ ಕೂಡಲೆ ತಾಯಿ ರುಕ್ಕಮ್ಮ ನಿಡಿದಾದ ಉಸಿರು ಬಿಟ್ಟಿದ್ದು ಹಿತ್ತಲಲ್ಲಿ ರಾಶಿರಾಶಿ ಪಾತ್ರೆಗಳನ್ನು ಹಾಕಿಕೊಂಡು ಕೂತಿದ್ದ ಅನಸೂಯಳಿಗೆ ಕೇಳಿಸಿತು.
ರಾತ್ರಿ ತಾಯಿ ಮಕ್ಕಳಿಬ್ಬರೂ ನಿದ್ದೆ ಬಾರದೆ ತುಂಬ ಹೊತ್ತಿನವರೆಗೆ ಒದ್ದಾಡಿದರು. ಪರಸ್ಪರ ಹೇಳಿಕೊಳ್ಳುವಷ್ಟು ಸಾವಿರಾರು ಸಂಗತಿಗಳು ಅವರಿಬ್ಬರ ಹೃದಯಗಳಲ್ಲಿ ಕತಕತನೆ ಕುದಿಯುತ್ತಿದ್ದವು. ಹೇಳಿಕೊಲ್ಲುವುದಕ್ಕಿಂತ ಮೌನವೇ ಹೆಚ್ಚು ಸೂಕ್ತವೆಂದುಕೊಂಡರು. ಮಾತಾಡಿಕೊಂಡಲ್ಲಿ ಲಘು ಜಗಳವಾಗುವ ಸಾಧ್ಯತೆ ಇತ್ತು. ತಾಯಿಗೆ ಬೆನ್ನು ಮಾಡಿ ಮಗಳು ಬಲಗಡೆ ಕಿಟಕಿ ಕಡೆ ಮುಖ ಮಾಡಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದುದಕ್ಕೆ ಕಾರಣ ಇಲ್ಲದಿಲ್ಲ.
ಆ ಕಿಟಕಿಗೆ ಕೆಲವು ಫೂಟುಗಳ ದೂರದಲ್ಲಿಯೇ ಶಾಸ್ತ್ರಿಗಳ ಮನೆ ಇರುವುದಷ್ಟೆ. ಆ ಕಡೆಯಿಂದ ಹೌದೋ ಅಲ್ಲವೋ ಅನ್ನುವಂತೆ ಶಾಸ್ತ್ರಿಗಳ ಮನೆ ಕಡೆಯಿಂದ ಮಾತಾಡುತ್ತಿರುವ ಧ್ವನಿಯನ್ನು ಕರಾರುವಾಕ್ಕಾಗಿ ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲಿ ಮಾತಾಡುತ್ತಿರುವವರು ಯಾರು? ಅವರೇನು ಮಾತಾಡುತ್ತಿರಬಹುದು? ಯಾವುದರ ಬಗ್ಗೆ ಮಾತಾಡುತ್ತಿರಬಹುದು? ಎಂಬಂಥ ಕೆಲವು ಸಂದೇಹಗಳೇ ಆಕೆಯನ್ನು ನಿದ್ದೆ ಮಾಡಲು ಬಿಡಲಿಲ್ಲ.
ಎಲೈ ಸಂದೇಹಗಳೇ… ಇತ್ತ ಕಡೆ ಗಮನ ಕೊಡಿ. ಇದು ರುದ್ರನಾಯಕನ ಮಗಳು ಅನಸುಯಾ ಎಂಬ ಕನ್ಯಾಮಣಿ ಮಾಡುತ್ತಿರುವ ಪ್ರಾಚಾರ, ನೀವ್ಯಾಕೆ ಹೀಗೆ ಹೊತ್ತು ಗೊತ್ತಿಲ್ಲದೆ ಬಂದು ಪೀಡಿಸುತ್ತಿರುವಿರಿ. ಮಾಡಲಿಕ್ಕೆ ಬೇರೆ ಕೆಲಸವಿಲ್ಲವೇನು ನಿಮಗೆ? ಕೆಲವು ತಾಸುಗಳ ಹಿಂದೆಯಷ್ಟೇ ನಮ್ಮ ನಾಯಕಿ ಶಾಮನೆಂಬ ಲಂಗೋಟಿಯ ಪ್ರತಿಯೊಂದು ಅವಶೇಷಗಳನ್ನು ಅಗ್ನಿಗೆ ತರ್ಪಣ ಕೊಟ್ಟಾಕ್ಷಣವೇ ಕುಂ. ವೀರಭದ್ರಪ್ಪನೆಂಬ ಲಿಪಿಕಾರ ಬರೆಯುತ್ತಿರುವ “ಶಾಮಣ್ಣ” ಎಂಬ ಕಾದಂಬರಿಯ ಒಂದು ಪ್ರಮುಖ ಭಾಗ ಮುಗಿದಂತೆಯೇ ಲೆಕ್ಕ… ಆದ್ದರಿಂದ ನೀವು ಸಮಯ ಪ್ರಜ್ಞೆ ಇಲ್ಲದೆ ಟೊಂಗುಟುಸುಕು ಅಂತ ಏನೆಲ್ಲ ನೆನಪು ಮಾಡಿ ನಮ್ಮ ಕಥಾ ನಾಯಕಿಗೆ ತೊಂದರೆ ಕೊಡೋದ್ಯಾಕೆ?… ನಿಮ್ಮಿಂದಾಗಿಯೇ ಈಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ಹೊಟ್ಟೆ ತುಂಬ ಊಟ ಮಾಡುತ್ತಿಲ್ಲ. ತನ್ನ ಬಗ್ಗೆಯೇ ತನಗೆ ಖಬರಿಲ್ಲ… ಈ ಯುಕ್ತ ವಯಸ್ಸಿನಲ್ಲಿ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಮಾಡುತ್ತಿದ್ದರೇನೆ ಮೈಕೈ ತುಂಬಿಕೊಂಡು ಚೆನ್ನಾಗಿರ್ತಾರೆ, ಇಲ್ಲಾಂದ್ರೆ ಇಲ್ಲ… ದಯವಿಟ್ಟು ನೀವೆಲ್ಲ ಹೀಗೆ ತೊಂದರೆ ಕೊಡದೆ ಆಕೆ ಪಾಡಿಗೆ ಆಕೆಯನ್ನು ಬಿಟ್ಟುಬಿಡಿ…
ತನ್ನನ್ನು ಹಿತವಾಗಿ ನೇವರಿಸುತ್ತಿದ್ದ ಕೈಯನ್ನು ಮೃದವಾಗಿ ನೆಕ್ಕುತ್ತ ಬೆಕ್ಕು ಒಳಗೊಳಗೇ ಗೊರಗೊರ ಸದ್ದು ಮಾಡುತ್ತ ಸಂದೇಹಗಳಿಗೆ ವಿನಂತಿಸಿಕೊಂಡಿತು. “ಎಲೈ ಮಾರ್ಜಾಲವೇ ಆಕೆ ಅಲ್ಲೇ ಸ್ವಲ್ಪ ಸ್ಪರ್ಶಿಸಿದಾಕ್ಷಣ ಹಿಂದು ಮುಂದೆ ನೋಡದೆ ಆಕೆ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವೆಯಲ್ಲ!… ಆಕೆ ಸ್ವಲ್ಪ ಮುಟ್ಟಿದ್ರೇನೆ ನೀನು ರೋಮಾಂಚನ ಪಡುತ್ತಿರಬೇಕಾದರೆ ಮುಟ್ಟುತ್ತ ಮುಟ್ಟಿಸಿಕೊಳ್ಳುತ್ತಲೇ ಬೆಳವಣಿಗೆಯ ಒಂದು ಹಂತ ತಲುಪಿರುವ ಆ ಶಾಮನ ಸ್ಥಿತಿ ಹೇಗಿರಬೇಡ? ಈ ನಿನ್ನ ಕಥಾ ನಾಯಕಿಯ ಪರಿಸ್ಥಿತಿ ಹೇಗಿರಬೇಡ! ಸ್ತ್ರೀಯ ಸಮಸ್ತ ರೂಪ ವೈವಿಧ್ಯತೆಯನ್ನು ಶಾಮು ತನ್ನ ತಾಯಿಯಲ್ಲಿ
———————–

೧೨೮
ಕಂಡುಕೊಳ್ಳುತ್ತಿರುವುದರಿಂದಾಗಿಯೇ ಸಂದರ್ಭ ಬಿಗಡಾಯಿಸಿರುವುದು. ಅವನು ಪರಿಸ್ಥಿತಿಯ ಕೂಸು ಮಾತ್ರ. ಅವನೂ ಈಗ ತಮ್ಮ ಮನೆಯಲ್ಲಿ ಗಾಢ ನಿದ್ದೆ ಮಾಡುತ್ತಿಲ್ಲ… ಅವನೂ ತನ್ನ ಕಣ್ಣುಗಳನ್ನು ಪಿಳಿಪಿಳಿ ತೆರೆದು ಈ ಕಡೆ ನೋಡುತ್ತಿದ್ದಾನೆ. ಅಡಿಗಡಿಗೆ ನಿಟ್ಟುಸಿರು ಬಿಡ್ತಿದಾನೆ. ಒಂದು ನಿಮಿಷದಲ್ಲಿ ಐದು ಸಾರಿ ಮಗ್ಗಲು ಬದಲಾಯಿತ್ತಿದ್ದಾನೆ. ಪರಿಸ್ಥಿತಿ ಬಿಗಡಾಯಿಸಲು ಅವನು ಇಷ್ಟಪಡೊ ವ್ಯಕ್ತಿಯಲ್ಲ. ಯೋಚಿಸುವುದಷ್ಟೇ ಗೊತ್ತವಗೆ, ನಿರ್ಣಯ ತಗೋಳಿಕ್ಕರಿಯನು. ಅವತ್ತು ಏನೋ ಹೆಳಲಿದ್ದ. ಮೊದಲಿಗೆ ರಾಜಕಾರಣಿ ವೇಷ ಧರಿಸಿದ್ದ ಜಲಜಾಕ್ಷಿ ಕಂಡು ಧೃತಿಯನ್ನು ಮುಕ್ಕಾಲು ಭಾಗ ಕೆಡೆಸಿದರೆ ಚೇಳು ಕುಟುಕುವುದರ ಮೂಲಕ ಧೃತಿಯ ಕಾಲು ಭಾಗವನ್ನೂ ಕೆಡೆಸಿಬಿಟ್ಟಿತು. ತಾಯಿಯ ಬಳಿಯಂತೂ ಅವನು ಯಾಕಾದ್ರೂ ಚೇಳು ಕಡಿಸಿಕೊಂಡು ಬಿಟ್ಟೆನೋ ಎಂದುಕೊಂದುಬಿಟ್ಟ. ಇಷ್ಟದರೂ ಅವನು ಎಚ್ಚರಗೊಂಡಿದ್ದಾನೆ. ದೂರ ಸಂವೇದಿ ಉಪಗ್ರಹದಂಥ ತನ್ನ ಮನಸ್ಸು ಈ ಕಡೆ ಉಡಾಯಿಸಿದ್ದಾನೆ. ಅಲ್ಲದೆ ಆಪ್ತ ಮಂತ್ರಾಲೋಚನಾ ಗೃಹದ ಕಡೆಗೆ ಪಂಚೇದ್ರಿಯಗಳನ್ನು ಅಟ್ಟಿರುವ ಶಾಮು ತುಂಬ ಒಳ್ಳೆಯವನು ಕಣಪ್ಪಾ ಮಾರ್ಜಾಲವೇ?” ಎಂದು ಸಂದೇಹಗಳು ಪಟಪಟ ನುಡಿಯೋದನ್ನು ನುಡಿದು ತಮ್ಮ ಕೆಲಸಕ್ಕೆ ತಾವು ಹೊರಟು ಹೋದವು.
ಅದೆಲ್ಲವನ್ನು ಕೇಳಿಸಿಕೊಂಡು ಮಾರ್ಜಾಲ ಚಿಂತೆಗೀಡಾಯಿತು. ಮುಂಗಾಲುಗಳಿಂದ ಮುಖ ಕೆರೆದುಕೊಂಡಿತು. ನಾಲಿಗೆಯಿಂದ ಮುಂಗಾಲುಗಲನ್ನು ನೇವರಿಸಿಕೊಂದಿತು. ನಂತರ ತನ್ನ ಮೂತಿಯನ್ನು ಅನಸೂಯಳ ಬಿಸಿಬಿಸಿ ಮುಖಕ್ಕೆ ಹತ್ತಿರ ಒಯ್ದು ಮೂಸಿತು. ಆಕೆಯ ಫಳಫಳ ಹೊಳೆವ ಕಣ್ಣುಗಳನ್ನು ನೋಡಿತು.
“ಮಲಿಕ್ಕಳ್ಳೇ ನಮ್ಮವ್ವ… ಹಿಂಗ್ಯಾಕೆ ಚಿಂತೆ ಮಾಡಲಾಕತ್ತಿ… ಬಂಗಾರದ ಗೊಂಬೆಯಂತಿರೋ ನೀನೆಲ್ಲಿ; ಅರಗಿನ ಗೊಂಬೆಯಂಗಿರೋ ಅವನೆಲ್ಲಿ… ಸಂಸ್ಕೃತಕಲ್ತುಕೊಂಡಿರೋರು ರೌಡಿಗಳಷ್ಟು ಅಪಾಯಕಾರಿಯಲ್ಲ… ಸುಮ್ನೆ ನಿದ್ದೆ ಮಾಡು, ಆಗ್ಲೆ ಶಾನೆ ಹೊಟ್ಟಾಗೈತೆ” ಎಂದು ಅರ್ಥ ಬರುವಂತೆ ಮಾರ್ಜಾಲ ಮ್ಯಾಂಗುಟ್ಟಿತು. ಅದರ ಅಂತರಂಗವನ್ನು ಅರ್ಥಮಾಡಿಕೊಂಡವಳಂತೆ ಅನಸೂಯ ಅದನ್ನು ಸ್ತನಗಳಿಗೆ ಅಪ್ಪಿಗೊಂಡಳು. ಮಾರ್ಜಾಲಕ್ಕೆ ’ಭೋ’ ಖುಷಿಯಾಯಿತು. ಅದು ಅದರ ಪ್ರಾಚೀನ ಆಸೆಯಾಗಿತ್ತು ಕೂಡ.
ಆಕೆಯ ಹೃದಯ ಭಾಗಕ್ಕಂಟಿಸಿದ್ದ ತನ್ನ ಮೈಯಿಂದ ಅದೇನನ್ನು ಹೀರಿಕೊಂಡಿತೋ ಏನೋ ಅದನ್ನು ತಾನು ಹೇಗೆ ಅರ್ಥಮಾಡಿಕೊಂಡಿತೋ ಏನೋ…
“ನೀನೇನೂ ಚಿಂತೆ ಮಾಡಬೇಡ… ಇಷ್ಟೊತ್ತಿನಾಗ ಆ ಶಾಸ್ತ್ರಿಗಳ ಮನ್ಯಾಗ ಏನು ಗುಸುಗುಸು ನಡೆಯಲಾಕತ್ತೈತಿ, ನೋಡ್ಕೊಂಡು ಬರ‍್ತೀನಿ” ಎಂದು ಮುಂತಾಗಿ ಮ್ಯಾವ್ ಗುಟ್ಟಿ ‘ಬಿಡೇ ಬಿಡೇ’ ಎಂದು ಬಿಡಿಸಿಕೊಂಡು ‘ಡಣ್’ ಅಂತ ಸೀದ ಕಿಟಿಕಿಗೆ ‘ಹೈಜಂಪ್’ ಮಾಡಿಬಿಟ್ಟಿತು. ಅಲ್ಲಿಂದ ಶಾಸ್ತ್ರಿಗಳ ಬೃಂದಾವನದ ಕಡೆ ಒಂದು ವಿಹಂಗಮ ನೋಟ ಬೀರಿತು. ಚರಾಚರಕ್ಕೆ ಕೇಳಿಸುವಂತೆ ಅದು ಮ್ಯಾವ್‍ಗುಟ್ಟಿದ್ದಕ್ಕೆ ಕಾರಣ ಇಲ್ಲದಿಲ್ಲ. ಅದು ಹೇಳಿ ಕೇಳಿ ಗಂಡು. ಸಸ್ಯಾಹಾರಿ ಎಂಬ ಶೀತವಲಯವನ್ನೂ; ಮಾಂಸಾಹಾರಿ ಎಂಬ ಉಷ್ಣವಲಯವನ್ನೂ ಒಟ್ಟಿಗೆ ನಿಭಾಯಿಸುತ್ತಲೇ ಸಮಶೀತೋಷ್ಣ ಜಾಯಮಾನವನ್ನು ಮೈಗುಡಿಸಿಕೊಂಡಿರುವ ಅದು ಆ ಕೇರಿಗೆ ಮೈಗೂಡಿಸಿಕೊಂಡಿರುವ ಜೋಕುಮಾರ ಸ್ವಾಮಿ. ಅದರ ಸ್ಟೈಲಿಗೆ ಮರುಳಾಗಿ ಕೋಮಟಿಗರ ಮನೆಗಳಿಂದ ಬರುವವೆಷ್ಟೋ ಬಡಾವಣೆ ಏರಿಯಾಗಳಿಂದ ಬರುವವೆಷ್ಟೋ. ಆಫೀಸರ್ಸ್ ಚಾಯ್ಸ್‍ಗಳು ಬರುವವೆಷ್ಟೋ.
——————————–

೧೨೯
ಒಂದೊಂದಾಗಿ ಬಂದವುಗಳನ್ನು ಹೇಗೋ ಸರಿ ಮಾಡಿ ಕಳಿಸುತ್ತಿದ್ದುಂಟು. ಆದರೆ ಎಲ್ಲಾ ಕಡೆಯವು ಒಟ್ಟಿಗೆ ಸೇರಿಬಿಟ್ಟರೇನು ಸಾಧ್ಯ?… ಅವೆಲ್ಲಿ ಕೇವಲ ಹೆಣ್ಣುಗಳಲ್ಲ… ಇತಿಹಾಸ ಪುಟ ಸೇರಿರುವ ವೀರ ವನಿತೆಯರೆಲ್ಲ ಬೆಕ್ಕಿನ ರೂಪ ತಳೆದಿರುವಂತೆ ಭಾಸವಾಗುವುವು. ಸಾಮೂಹಿಕವಾಗಿ ರೇಪ್ ಮಾಡಲರಿಯದಂಥ ಹೇಳಿಕೇಳಿ ಚತುಷ್ಪಾದಿಗಳವು. ಪುರುಷ ರತ್ನವಶ ಪಡೆಸಿಕೊಳ್ಳಲು ಪರಸ್ಪರ ಕಚ್ಚಾಡದೆ ವಿಧಿ ಇಲ್ಲ. ಮ್ಯಾವ್ ಎನ್ನುವುದು ಮ್ರಾಂಬ್ವುಽಽ ಎಂದು ಆಗುತ್ತಿತ್ತು. ಅದರ ಮೇಲಿದು; ಇದರ ಮೇಲದು; ಇವುಗಳ ಮೇಲೆ ಅವು; ಅವುಗಳ ಮೇಲಿವು; ಗಬಕ್ಕನೆ ಬಿದ್ದು; ಸಮಸ್ತ ಯುದ್ಧಗಳ; ಪ್ರಾಣಿಗಳ ಶಬ್ದಗಳ ಗೊಂಡಾರಣ್ಯವನ್ನು ಸೃಷ್ಟಿಸಿ ಇಡೀ ಓಣಿಗೆ ಕೇಳರಿಯದ ತಲೆನೋವನ್ನುಂಟು ಮಾಡಿ ಬಿಡುತ್ತಿದ್ದವು. ಕೇರಿಯ ಅಥಿರಥ ಮಹಾರಥರನ್ನೂ ಅವು ಕೇರು ಮಾಡುತ್ತಿರಲಿಲ್ಲ.
ಇದ್ರಂಗೆ ಮನುಷ್ಯೋರೂ ಲವ್ ಮಾಡಿಬಿಟ್ಟಿದ್ರೆ ಈ ಪ್ರಪಂಚೇನಾಗ್ತಿತ್ತು ಅಂತಲೋ!
ಲವ್ ಮಾಡೋದ್ನ ಬೆಕ್ಕುಗಳಿಂದ ನೋಡಿ ಕಲ್ತುಕೋಬೇಕು ಅಂತಲೋ
ಜನ ಮಾತಾಡುತ್ತಿದ್ದುದನ್ನು ಛಾವಣಿ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದ ಮಾರ್ಜಾಲ ಮಾತ್ರ ಯಾವ ತ್ರಿಲೋಕ ಸುಂದರಿಗೂ ಮರುಳಾಗುತ್ತಿರಲಿಲ್ಲ. ಅದು ಆಗಲೇ ಗುಟ್ಟಾಗಿ ಶಾಸ್ತ್ರಿಗಳ ಮನೆಯಲ್ಲಿ ಯಾವತ್ತೂ ಇರುವ ಕಾಮೋಷಿಯನ್ನು ಪ್ರೀತಿಸಿರುವುದು. ಅವೆರಡನ್ನೂ ಯಾರೊಬ್ಬರೂ ತಂದು ಸಾಕಿಕೊಂಡಿರಲಿಲ್ಲ. ಮಾರ್ಜಾಲದ ವೃತ್ತಾಂತವೇ ಹೃದಯ ವಿದ್ರಾವಕವಾದುದಾಗಿದೆ. ಅದರ ಅಜ್ಜಿ ಮಾಜಿ ಸಾರಿಗೆ ಸಚಿವ ರೇಣುಕಯ್ಯನವರ ಮನೆಯಾಕೆ. ಅಂದರೆ ಅವರು ಹಾಲಿ ಇದ್ದಾಗ ರಾಜ್ಯಪಾಲ ಗೋವಿಂದರಾಜರೇ ಬಹು ಪ್ರೀತಿಯಿಂದ ತಮ್ಮಿಬ್ಬಿರ ವಿಸ್ವಾಸದ ನೆನಪಿಗಾಗಿ ಒಂದು ಕೇಸರಿ ವರ್ಣದ ಹೆಣ್ಣು ಮರಿ ಕೊಟ್ಟಿದ್ದರು. ರಾಜ್ಯಪಾಲರು ಕೊಟ್ಟಿರುವುದೆಂದಮೇಲೆ ಸಚಿವ ರೇಣುಕಯ್ಯನವರು ಹೇಗೆ ಬಿಟ್ಟಾರು? ಅವರಿವರ ಮನೆಗೆ ಹೋಗುವುದೊಂದೇ ಅಲ್ಲದೆ ಕ್ಯಾಬಿನೆಟ್ ದರ್ಜೆಯ ಆಪ್ತಾಲೋಚನೆಗೂ ವಿಧಾನಸೌಧಕ್ಕೂ ಅದನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಸಹಾಯಕ ಸಚಿವೆ ಮಾಲತಿಯವರಂತೂ “ಎಷ್ಟೊಂದು ಮುದ್ದಾಗಿದೆ ಕಣ್ರಿ” ಎಂದು ಅದಕ್ಕೆ ಮುದ್ದು ಕೊಟ್ಟಿದ್ದೇ ಕೊಟ್ಟಿದ್ದು. ಆಗ ಸಚಿವ ರೇಣುಕಯ್ಯ ಆಕೆಯ ಮೊಲೆಯನ್ನು ಮಿಂಚಿನ ವೇಗದಲ್ಲಿ ಸವರಿ ಕೃತಾರ್ಥರಾಗಿಬಿಡುತ್ತಿದ್ದರು. ಮಹಿಳೆ ಮತ್ತು ಮಕ್ಕಳ ಸಂಕ್ಷೇಮಾಭಿವೃದ್ಧಿಯ ರಾಜ್ಯ ಸಚಿವೆ ಬಲ್ಲಾಳ್‍ರವರಂತೂ ಅಧಿವೇಶನ ಮುಗಿಯುವವರೆಗೆ ರೇಣುಕಯ್ಯನವರ ಪಕ್ಕದಲ್ಲೇ ಕೂತಿದ್ದು “ರ್ರೀ… ಇದ್ನ ನಮ್ಗೆ ಕೊಟ್ ಬಿಡ್ರಿ” ಎಂದು ಕೇಳಿಯೇಬಿಟ್ಟಿದ್ದರು.
“ಅಲ್ರೀ ಕಾವೇರಿ, ಹೆಂಗ್ರಿ ಕೊಡ್ಲಿ… ಸಾಕ್ಷಾತ್ ರಾಜ್ಯಪಾಲ್ರೇ ತಮ್ಮ ಕೈಯಿಂದ ಕೊಟ್ಟಿರೋದು ಕಣ್ರಿ… ಅಪರೂಪದ ಪ್ರೆಸೆಂಟೇಷನ್ನಿದು, ಅದೂ ಅಲ್ದೆ ನಮ್ದು ಮೈನಾರಿಟಿ ಗೌರ್ಮೆಂಟು ಕ್ಲಿಷ್ಟ ಸಮಯದಲ್ಲಿ ನಮ್ಮನ್ನ ಕಾಪಾಡೋ ಶಕ್ತಿ ಇದಕ್ಕೆ ಮಾತ್ರ ಇರೋದು” ಎಂದು ಕೂಲಿಂಗ್ ಚಾಳೀಸೊಳಗಿಂದ ಕಣ್ಣು ಮಿಟುಕಿಸಿದ್ದ ಬೋಳು ಮುಖದ ರೇಣುಕಯ್ಯ.
ಸಾರಿಗೆ ಕುರಿತ ಚರ್ಚೆ ಸಮಯದಲ್ಲಂತೂ ಆ ಮುದ್ದು ಮುಖದ ಬೆಕ್ಕಿನ ಮರಿ ಒಳ್ಳೆ ಪಾರ್ಲಿಮೆಂಟೇರಿಯನ್ ಥರ ಪ್ರಮುಖ ಪಾತ್ರ ವಹಿಸಿತು. ‘ಸ್ವರ್ಗಾದಪಿ ಗರೀಯಸಿ’ ಎಂಬ ವಿರೋಧಿ ಪಕ್ಷದ ನಾಯಕ ‘ಹಿಂದೂ ಸುರತ್ರಾಣ’ ಸಾರಿಗೆ ಇಲಾಖೇಲಿ ಕೋಟ್ಯಾಂತರ್ರುಪಾಐ ಅವ್ಯವಹಾರ ಆಗಿದೆ. ಅದರ ದೊಡ್ಡ ರಖಮುನ್ನು ಸಾರಿಗೆ ಸಚಿವರು ಜೇಬಿಗಿಳಿಸಿದ್ದಾರೆ ಎಂದು
——————–

೧೩೦
ಪ್ರಮುಖ ವಾರಪತ್ರಿಕೆ ಅಂಕಿ ಅಂಶಗಳ ಸಹಿತ ಪ್ರಕಟಿಸಿದೆ. ಕೂಡಲೆ ಸಚಿವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಒಂದು ಆಯೋಗ ರಚಿಸಬೇಕು, ಅದಕ್ಕೆ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಬೇಕು’ ಎಂದು ಗರ್ಜಿಸಿದಾಗ ಬೆಕ್ಕು ಮೈಕ್ರೋಫೋನ್ ಫಿಯರಿಲ್ಲದೆ ಮ್ಯಾಂವ್… ಮ್ಯಾಂವ್ ಎಂದು ಇಡೀ ಅಧಿವೇಶನವನ್ನು ನಗೆಗಡಲಿಗೆ ನೂಕಿತ್ತು.
ಬಡವರ ಬೆನ್ನೆಲುಬು ಪಕ್ಷದ ಏಕಮೇವ ಸದಸ್ಯ ಬೊಚ್ಚಣ್ಣನವರು ಮುಖ್ಯಮಂತ್ರಿಗಳ ಎಂಟನೇ ಮಗಳು ಸುಂದರಿಯರ ಮದುವೆಗೆ ಸಾರಿಗೆ ಸಂಸ್ಥೆಯ ನೂರು ಬಸ್ಸು ಓಡಿಸಿರುವ ಬಗ್ಗೆ ಸಂಬಂದಪಟ್ಟ ಸಚಿವರು ಕೂಡಲೆ ಹೇಳಿಕೆ ನೀಡಬೇಕೆಂದು ಹೇಳಿದಾಗಳೂ ಬೆಕ್ಕು ನಿರ್ಭಿಡೆಯಿಂದ ಮ್ಯಾಂವ್‍ಗುಟ್ಟಿತು. ಹೀಗೆ ಅದು ಪ್ರತಿಯೊಂದು ಪ್ರಶ್ನೆಗೂ ಮ್ಯಾಂವ್ ಉತ್ತರ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಸಮಾಜವಾದಿ (ಮ್ಯಾಕ್‍ಡೌಲ್) ಪಕ್ಷದ ಪಟೇಲರು “ಎಂಥ ವಿಚಿತ್ರವಾಗಿದೆಯಲ್ಲ, ಸಾರಿಗೆ ಸಚಿವರು ಮ್ಯಾವ್ ಮ್ಯಾವ್ ಎನ್ನುತ್ತಲೆ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಅಭಿನಂದನಾ ಗೊತ್ತುವಳಿ ಮಂಡಿಸಬೇಕೆ”ಂದಾಗ ಎಲ್ಲ ಸದಸ್ಯರು ಪಕ್ಷಭೇದ ಮರೆತು ನಗಾಡಿದರು.
ಇದು ಹೇಗೋ ರಾಜ್ಯಪಾಲರಿಗೆ ಸುದ್ದಿ ಮುಟ್ಟಿತು. ಅವರು ಸಚಿವ ರೇಣುಕಯ್ಯನವರನ್ನು ಖಾಸಗಿಯಾಗಿ ಚಹಕ್ಕೆ ಬರಮಾಡಿಕೊಂಡರು. ‘ವಿಧಾನಸಭೆಗೆ ಬರೀ ಬೆಕ್ಕುಗಳನ್ನೇ ಚುನಾಯಿಸಿಬಿಟ್ಟರೆ ಹೇಗೆ ಎಂದು ಚರ್ಚಿಸಿದರು. ತಗೊಂಡಿಷ್ಟು ದಿನಗಳಾದ್ವು… ಇನ್ನು ಇದ್ಕೆ ನಾಮಕರಣ ಮಾಡಿಲ್ಲಾಂದ್ರೆ ಹೇಗ್ರಿ?” ಎಂದು ಶ್ರೀಮತಿ ಗೋವಿಂದರಾಜರು ಪ್ರಶ್ನಿಸಿದರು. ಇದೊಂದು ಅತ್ಯುತ್ತಮ ಸಲಹೆ ಎಂದೂ ಒಂದು ಒಳ್ಳೆ ಮೂಹೂರ್ತ ನೋಡಿ ‘ನಾಮಕರಣ ಮಹೋತ್ಸವ’ ನಡೆಸುವುದಾಗಿ ಅರಿಕೆ ಮಾಡಿಕೊಂಡು ರೇಣುಕಯ್ಯ ವಾಪಸಾದರು.
ನಾಮಕರಣ ಮಹೋತ್ಸವದ ಆಮಂತ್ರಣ ಪತ್ರಿಕೆಗಳು ದೇಶದ ಪ್ರಮುಖ ಜನನಾಯಕರಿಗೆಲ್ಲ ಹೋದವು. ಇಂದಿರಾಗಾಂಧಿಯವರು ತಮ್ಮ ಆಪ್ತರಲ್ಲೊಬ್ಬರಾದ ಕಾಂತಿಲಾಲ್ ಬೊರ್ಕಾರವರನ್ನು ಕಳಿಸಿಕೊಟ್ಟರೆಂದಮೇಲೆ ಕೇಳುವುದೇನಿದೆ? ನಾಮಕರಣ ಮಹೋತ್ಸವದ ನೆಪದಲ್ಲಿ ರಾಜಕೀಯ ವಿದ್ಯಮಾನ ಚರ್ಚಿಸುವ ಸಲುವಾಗಿ ಆಡಳಿತ ಪಕ್ಷದ ಬಹುತೇಕ ಹಿರಿ ಕಿರಿಯ ಮುಖಂಡರು ಲಿಂಗಬೇಧ ಮರೆತು ಹಾಜರಾದರು. ಎಲ್ಲಾ ವಿರೋಧಪಕ್ಷಗಳು ಅದನ್ನು ಬಹಿಷ್ಕರಿಸಿ ಕರತಾಳ ಆಚರಿಸಿದವು.
ಬೆಳ್ಳಿಯ ತೊಟ್ಟಿಲಲ್ಲಿ ಕಟ್ಟಿ ಮಲಗಿಸಿದ್ದ ಬೆಕ್ಕು ಹುಲುನರರ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ತೆಪ್ಪಗಿತ್ತು. ಅತಿಥಿ ಅಭಾಗತರು ತಾವು ತಂದಿದ್ದ ಪ್ರೆಸೆಂಟೇಷನ್ನುಗಳನ್ನು ತೊಟ್ಟಿಲಲ್ಲಿ ಪೇರಿಸತೊಡಗಿದರು. ಆ ದುಬಾರಿ ಸಾಮಾನುಗಳಡಿ ಸಿಲುಕಿ ತಾನು ಅಪ್ಪಚ್ಚಿಯಾಗಿ ಬಿಡುವನೆಂದೂಹಿಸಿ ಬೆಕ್ಕು ಕಿಟರನೆ ಕಿರುಚಿಕೊಳ್ಳತೊಡಗಿತು. ಖ್ಯಾತ ಸಿನಿಮಾ ನಟ ಅನುನಾಸಿಕ್‍ರವರ ಸಂಗೀತ ರಸಮಯ ಕಾರ್ಯಕ್ರಮ ಇದ್ದುದರಿಂದ ಅದರ ಅರಣ್ಯ ರೋಧನ ಯಾರಿಗೂ ಕೇಳಿಸಲಿಲ್ಲ. ನಂತರ ಅದು ಕಾಣಿಕೆಗಳೆಂಬ ಚಕ್ರವ್ಯೂಹವನ್ನು ಬೇಧಿಸಿಕೊಂಡು ಚಂಗನೆ ಈಚೆ ನೆಗೆದು ಮೀಸೆ ತಿರುವಿ ಎಲ್ಲರ ಗಮನ ಸೆಳೆಯಿತು. ಈ ಪ್ರಕಾರವಾಗಿ ಇಡೀ ರಾಷ್ಟ್ರನಾಯಕರ ಗಮನ ಸೆಳೆದ ಆ ಬೆಕ್ಕಿಗೆ ಸಂಬಂದಪಟ್ಟ ಸಮಸ್ಯೆ ಎದುರಾದದ್ದು ಯಾವಾಗಪ್ಪ ಎಂದರೆ ನಾಮಕರಣ ಮಾಡುವಾಗ, ಅದಕ್ಕೆ ನಾಮಕರಣ ಮಾಡಲು ನಿಯುಕ್ತರಾಗಿದ ರಾಜೇಂದ್ರಾಚಾರ್‌ರವರು ಸಾಮಾನ್ಯರೇನು? ಅವರ ವಂಶದವರು ಏಕಕಾಲಕ್ಕೆ ತಾಂಜಾವೂರು
————————–

೧೩೧
ಮತ್ತು ಪೆನುಗೊಂಡೆಯ ರಾಜರುಗಳ ಆಸ್ಥಾನ ಪುರೋಹಿತರಾಗಿದ್ದಂಥವರು. ವರದರಾಘವೇಂದ್ರಚಾರ್ಯರು ನಗರದಲ್ಲಿ ಖೋಡೆಯವರ ಕಾಯಂ ಪುರೋಹಿತ್ಯ ಮಾಡುತ್ತಿರುವರು. ಬೆಕ್ಕಿಗೆ ಹೆಸರು ಸೂಚಿಸಲು ಸಚಿವ ರೇಣುಕಯ್ಯನವರಿಗೆ ವಿನಂತಿಸಿಕೊಂಡರು. ಕಾಂತಿಲಾಲ್ ಬೋರ್ಕರವರು ಪ್ರಣಬ್ ಕುಮಾರ್ ಅಂದರೆ, ಒರಿಸ್ಸಾದ ಸತ್ಪತಿಯವರು ಜಗನ್ನಾಥ್ ಎಂದರು. ಬಿಹಾರದವರು ಮಿಶ್ರಾ ಎಂದರೆ ಮಹಾರಾಷ್ರದವರು ಚವ್ಹಾಣ ಎಂದರು. ಕರ್ನಾಟಕದವರು ಇಮ್ಮಡಿ ಪುಲಕೇಶಿ ಎಂದರೆ ತಮಿಳ್ನಾಡಿನ ಚೆಂಗಪ್ಪನ್ ಕಲೈಕುಡಚ್ಚಿ ಮಗ್ಗಳ್ ತಿಲಕಂ ಅಂತ ಏನೇನೋ ಹೇಳಿದರು. ಅವೆಲ್ಲ ಕೇಳುತ್ತ ಪುರೋಹಿತರು ಚಿನ್ನದ ಹಗ್ಗಕ್ಕೆ ಕಟ್ಟಿದ್ದ ಬೆಕ್ಕಿನ ಲಿಂಗ ಪರಿಶೀಲಿಸಲೋಸುಗ ಅದರ ಬಾಲವನ್ನು ಎತ್ತುವ ಪ್ರಯತ್ನ ಮಾಡಿದರು. ಅದು ಅಷ್ಟು ಸುಲಭವಾಗಿ ತನ್ನ ಲಿಂಗವನ್ನು ತೋರಿಸುವುದೆಂದರೇನು? ಮುಖ ಸಿಂಡರಿಸಿಕೊಂಡು ಪುರೋಹಿತರ ಕೈಯನ್ನು ಪರಚಿ ಗಾಯಗೊಳಿಸಿತು. ಅವರು ‘ಶ್ರೀರಾಮಾ’ ಎಂದು ನರಳಿದರು. ಅದರ ಲಿಂಗ ಪತ್ತೆ ಹಚ್ಚಲು ಫೀಲ್ಡ್ ಮಾರ್ಷಲ್ ಸನ್ಯಾಲ್‍ರವರನ್ನು ಕೇಳಿಕೊಂಡರು. ಅವರು ಎಷ್ಟಿದ್ದರೂ ದ್ವಿತೀಯ ಜಾಗತಿಕ ಭಾಗವಹಿಸಿದ್ದಂಥವರು. ಅವರು ತಮ್ಮ ಸಾಹಸ ಮನೋಗುಣವನ್ನು ಕ್ರೋಡೀಕರಿಸಿ ಅದರ ಬಾಲವನ್ನೆತ್ತಿ ನೋಡಿ “ಫೀಮೇಲ್” ಎಂದು ಉದ್ಗರಿಸಿದರು. ಆ ನಂತರ ಎಲ್ಲರೂ ತಲಾ ಒಂದೊಂದು ಹೇಳಿದ್ದು ಸಿನಿಮಾ ನಟಿಯರ ಹೆಸರುಗಳನ್ನು, ದೆಹಲಿ ಕಡೆಯ ಸಂಪರ್ಕ ಇಟ್ಟಿಕೋಳ್ಳುವ ಇರಾದೆಯಿಂದ ‘ಝಾನ್ಸಿ ಕಿ ರಾಣಿ’ ಎಂಬ ಹೆಸರನ್ನು ರೇಣುಕಯ್ಯ ಸೂಚಿಸಲು ಎಲ್ಲರೂ ‘ಓಕೇ’ ಮಾಡಿದರು.
‘ಝಾನ್ಸಿ ಕಿ ರಾಣಿ’ಯ ಕಥೆ ದುರಂತಮಯವಾಗಿದ್ದು ರಾಜ್ಯಪಾಲ ಗೋವಿಂದೇರಾಜರು ಮೇಘಾಲಯದ ರಾಜ್ಯಪಾಲರಾಗಿ ವರ್ಗವಾದಮೇಲೆಯೇ! ರಾಣಿಯ ಬದುಕು ಮತ್ತಷ್ಟು ಯಾತನಾಮಯವಾದದ್ದು ರೇಣುಕಯ್ಯ ಸಚಿವ ಸ್ಥಾನ ಕಳೆದುಕೊಂಡ ನಂತರ, ನಂತರ ಅದು ಬೀದಿ ಪಾಲಾದದ್ದು ಮಾಜೀ ಸಚಿವರ ಫ್ಯಾಮಿಲಿ ಅಫೈರ‍್ಸ್‍ಗಳು ಹೆಚ್ಚಾದ ನಂತರ. ಅದು ಎಲ್ಲೋ ಹೋಯಿತು. ಯಾರೋ ಸಾಕಿದರು. ಯಾರೋ ಹೊರ ತಳ್ಳಿದರು. ಹೀಗೆ ಮುಂದೊಂದಿನ ವಾಸಿಯಾಗದ ಚರ್ಮ ರೋಗಕ್ಕೆ ತುತ್ತಾದ ಝಾನ್ಸಿ ಕಿ ರಾಣಿಯನ್ನು ಅದರ ಐದಾರುಮಂದಿ ಮಕ್ಕಳೇ ಸೇರಲಿಲ್ಲ. ಮುನಿಸಿಪಾಲಿಟಿಯವರ ಕೊಚ್ಚೆ ಗುಂಡಿಯಲ್ಲಿ ಸತ್ತ ಝಾನ್ಸಿ ಕಿ ರಾಣಿಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಈ ಮಾರ್ಜಾಲವೂ ಒಂದು.
ಇದರ ಕಥೆ ಹೀಗಿದ್ದರೆ ಶಾಸ್ತ್ರಿಗಳ ಮನೆಯ ಕಾಮೋಷಿಯ ಜೀವನ ವೃತ್ತಂತ ವಂಶಾವಳಿ ಇನ್ನೊಂದು ರೀತಿಯದ್ದು. ಇದರ ವಂಶಜರು ಅಂಥ ಹೇಳಿಕೊಳ್ಳುವಂಥ ಹಿನ್ನೆಲೆಯಿಂದ ಬಂದವರಲ್ಲ. ಆಂಧ್ರ ಪ್ರದೇಶದ ತೆಲಂಗಾಣ ಬೊಮ್ಮಿರೆಡ್ಡಿಪಲ್ಲೆಯ ರೈತಕೂಲಿ ಸಂಘದ ಅಧ್ಯಕ್ಷ ತಿರುಪಾಲಯ್ಯ ಸಾಕಿಕೊಂಡಿದ್ದ ‘ಮುಕ್ತಿ’ ಬಗ್ಗೆ ಕೆಲವು ವಿವರಗಳು ಸಿಕ್ಕುತ್ತವೆ. ಅದೂ ತಿರುಪಾಲಯ್ಯ ಬರೆದಿರುವ ‘ಗುಡಿಸೆಲು ಕಾಗಡಾಲು’ ಎಂಬ ಮಹಾಕಾವ್ಯದಲ್ಲಿ ಹೋರಾಟಗಾರ ಕವಿ ತಿರುಪಾಲಯ್ಯ ‘ಪೋರಾಟಾಲು ವರ್ಧಿಲ್ಲಾಲಿ’ ಎಂಬ ನಿನಾದದೊಂದಿಗೆ ಎನ್‍ಕೌಂಟರ್‌ನಲ್ಲಿ ಅಸು ನೀಗಿದಾಗ ಮುಕ್ತಿಯನ್ನು ಶ್ರೀ ಕಾಕುಳಂ ಎಸ್ಪಿ ಜಗಪತಿಬಾಬು ಸಾಕಿಕೊಂಡ. ಜಗಪತಿಬಾಬು ಬೆಳಗ್ಗೆ ಜಾಗಿಂಗ್ ನಕ್ಸಲೈಟ್ಸು ಗುಂಡಿಟ್ಟು ಕೊಂದರು. ನಂತರ ಅದನ್ನು ಚಪ್ರಾಸಿ ಚಂಚಯ್ಯ ಸಾಕಿದ… ಹೀಗೆ ಅದರ ಕಥೆ ಕೂಡ ದುರಂತವಾಗಿ ಬೆಳೆಯುತ್ತದೆ. ಕಾಮೋಷಿಯ ತಾಯಿ ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪ್ರಸವಿಸಿದಳೋ?
———————

೧೩೨
ಸಂಶೋಧನೆ ಮಾಡದ ಹೊರತು ತಿಳಿಯದು. ಹೆತ್ತಾಕೆಯ ಮುಖವನ್ನು ಸರ‍್ಯಾಗಿ ನೋಡಿರದ ಕಾಮೋಷಿಯಲ್ಲಿ ಮಾರ್ಜಾಲ ಯಾವ ಆರ್ಷಣೆ ಕಂಡುಕೊಂಡಿತೋ ದಯಾಮಯನಾದ ಭಗವಂತನಿಗೇ ಗೊತ್ತು? ಅಂತೂ ದೇವರು ಜೊತೆಗೂಡಿಸಿದ. ಅವೆರಡೂ ಒಂದಾದವು. ಅನ್ಯೋನ್ಯದಿಂದಿರುವುವು. ಗಂಡಾದ ತಾನು ನಾನ್‍ವೆಜೆಟೇರಿಯನ್ನು; ಹೆಂಗಸಾದ ನೀನು ವೆಜೆಟೇರಿಯನ್ನೂ ಅಂಥ ಮಾರ್ಜಾಲವೇ ತೀರ್ಮಾನಿಸಿ ಏಕಪಕ್ಷೀಯವಾಗಿ ಇಲಾಖೆ ಹಂಚಿಕೆ ಮಾಡಿದ್ದು ವಿಚಾರಿಸಬೇಕಾದ ಸಂಗತಿ. ಇಬ್ಬರೂ ತಂತಮ್ಮ ಇಲಾಖೆ ನೋಡಿಕೊಂಡು ಸುಖವಾಗಿದ್ದಾರೆ. ದಿನಕ್ಕೆರಡು ಮೂರು ಬಾರಿಯಾದರೂ ಸಂಧಿಸಿ ಕಷ್ಟಸುಖ ಹಂಚಿಕೊಳ್ಳುವರೆಂಬುದೇ ಸಮಾಧಾನಕರ ಸಂಗತಿ.
ಮನೆಯ ಆತಂಕದ ಪರಿಸ್ಥಿತಿಯಿಂದಾಗಿ ಮಾರ್ಜಾಲ ಬೆಳಗಿನಿಂದ ಮನೆಬಿಟ್ಟು ಹೊರಗಡೆ ಬಂದೇ ಇಲ್ಲ. ಮನೆಯ ಯಜಮಾನರಾದವರು ಸಂತೋಷದಿಂದ ಇದ್ದರೆ ತಾನೆ ಚಿನ್ನಾಟ ರೊಮಾನ್ಸು ಎಲ್ಲ. ಕಾಮೋಷಿದೂ ಶಾಸ್ತ್ರಿಗಳ ಮನೆಯಲ್ಲಿ ಅದೇ ಕಥೆ.
ಕಿಟಕಿಯಲ್ಲಿಂದ ಹೊರನುಸುಳಿ ಮಾರ್ಜಾಲ ಮ್ಯಾವ್ (ಹಲೋ ಡಾರ್ಲಿಂಗ್) ಗುಟ್ಟಿತು. ಪತ್ತೆ ಇಲ್ಲ ಪ್ರಿಯತಮೆ? ಇಲ್ಲಿ ಹಾಳಾಗಿ ಹೋದಳಿವಳು? ಲಾಂಗ್ ಜಂಪಿಗೆ; ಹೈಜಂಪಿಗೆ ಹೆಸರಾದ ಅದು ಬೃಂದಾವನ ಕಟ್ಟೆ ಮೇಲೆ ನಿಂತು ಮತ್ತೊಮ್ಮೆ ಮ್ಯಾವ್ ಅಂತು. ಕೋಡುಬಳೆ ಪ್ರೀತಿಗಾಗಿ ಪುತ್ತಿ ಬಳಿ ಇಲಿಗಾಗಿ ಹೊಂಚಿ ಕೂತಿದ್ದ ಕಾಮೋಷಿ ತನ್ನ ಪ್ರಿಯತಮನ ಕರೆ ಕೇಳಿಸಿ ರೋಮಾಂಚನಗೊಂಡಿತು. ಹೊರ ಬಂದು ತನ್ನ ಬಾಲವನ್ನು ಅದರ ‘ಕ್ಳಿಮ್ಮು’ಗೆ ಬಡಿಸಿತು.
ಸಲ್ಪ ಹೊತ್ತು ಅವೆರಡು ಸ್ಪರ್ಶಿಸಿ ಮುದ್ದಿಸಿ ಉಭಯ ಕುಶಲೋಪರಿ ನಡೆಸಿದವು. ನಂತರವೇ ಶಾಮು ಮತ್ತು ಅನಸೂಯರ ಟಾಪಿಕ್ ಬಂದದ್ದು. ಮನುಷ್ಯರು ಹೀಗ್ಯಾಕಾಗ್ತಾರೆ ಎಂಬುದಕ್ಕೆ ಉತ್ತರವಿಲ್ಲ.
“ಶಾಸ್ತ್ರಿಗಳು ಇಅಮ್ಮ ಸೊಸೆ ಅಲುಮೇಲಮ್ಮನಿಗೆ ಏನೋ ಗುಟ್ಟಾಗಿ ಹೇಳ್ತಿರುವಂತಿದೆಯಲ್ಲ” ಎಂದು ಮಾರ್ಜಾಲ ಪ್ರಿಯತಮೆಯನ್ನು ಕೇಳಿತು.
ಅದು ಅವರ ಪರ್ಸನಲ್ಲು ಅಂತ ಕಾಮೋಷಿ, ಮತ್ತೆ ಒತ್ತಾಯಿಸಿದಾಗ ಅದು ನೀನೇ ನೋಡ್ಕೋ ಹೋಗು ಅಂತು.
ಮಾರ್ಜಾಲ ಕಾಮೋಷಿಯೊಂದಿಗೆ ಒಳಗಡೆ ಹೋಯಿತು. ಕಿಟಕಿಯ ಸಂದಿಯಲ್ಲಿ ನೋಡಿತು.
ಶಾಸ್ತ್ರಿಗಳ ಸೊಸೆ ಎದುರಿಗೆ ಜಾತಕ ಕುಂಡಲಿಗಳನ್ನು ಹರಡಿಕೊಂಡು ಕೂತಿದ್ದರು. ಗುಣಿಸಿ; ಭಾಗಿಸಿ ರಾಹುಕೇತು, ಮಂಗಳ, ಪುನರ್ವಸು ಅಂತ ಏನೇನೋ ಹೇಳುತ್ತಿದ್ದರು. ಕಣ್ಣಲ್ಲಿ ನಿದ್ದೆ ತುಂಬಿಕೊಂದಿದ್ದ ಅಲುಮೇಲಮ್ಮ ಹೂಗುಟ್ಟುತ್ತಿದ್ದಳು.
ನಂತರ ಪ್ರಸನ್ನ ವದನರಾಗಿ ಶಾಸ್ತ್ರಿಗಳು ದಢೀರನೆ ಎದ್ದು ನಿಂತರು.
ಕೈಮುಗಿದು –
ಕಣ್ಣು ಮುಚ್ಚಿ –
– ಆ ಬ್ರಹ್ಮಲೋಕಾದಾಶೇಷಾತ್ ಆಲೋಕಾಲೋಕ ಪರ್ವತಾತ್| ಯೇ ವಸಂತಿ ದ್ವಿಜಾ ದೇವಾಃ ತೇಭ್ಯೋ ನಿತ್ಯ ನಮೋ ನಮಃ| ಓಂ ಶಾಂತಿ ಶಾಂತಿ ಶಾಂತಿ| ಸರ್ವಾರಿಷ್ಠ ಶಾಂತಿರಸ್ತುಹೂಃ
ಎಂದು ಹೇಳಿ ಕಣ್ಣು ತೆರದು ಇಡಿಯಾಗಿ ಸೊಸೆಯನ್ನು ನೋಡಿದರು.
“ತಾಯಿ ಅಲುಮೇಲಮ್ಮಾ… ಬರೋ ಸೋಮವಾರ ಇಡೀ ದಿನ ಗುರು ವೃಶ್ಚಿಕ
———————

೧೩೩
ರಾಶಿಯಲ್ಲಿರುತ್ತಾನಮ್ಮಾ, ನಮ್ಮ ಮಗೂನ ಕುಂಡಲಿಗೆ ಯೊಗ್ಯವಾದ ಸ್ವಾತಿ ನಕ್ಷತ್ರ ಅಂದು ಸಾಯಂಕಾಲದವರೆಗೂ ಇರ‍್ತದೆ. ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಹೊಸಪೇಟೆಗೆ ಪ್ರಾಯಾಣ ಬೆಳೆಸಿ ಹುಡುಗಿ ನೋಡ್ಕೊಂಡು ಬಂದರಾಯ್ತು. ಶಾಮುಗೆ ಹೇಳು. “ಓಂ ಗಾಯತ್ರೀ” ಎಂದು ಪಂಚಾಂಗದ ಗಂಟುಕಟ್ಟಿ ನಗಂದಿ ಮೇಲೆ ಸರಿಸಿದರು.
ಮಾರ್ಜಾಲ ‘ಶುಭಸ್ಯ ಶೀಘ್ರಂ’ ಎಂದು ಹೇಳಿ ನಿಟ್ಟುಸಿರುಬಿಟ್ಟಿತು.

* * * * *

ಇಡೀ ಆ ಪುಟ್ಟ ನಗರವನ್ನು ಅವತ್ತು ಯಾಕೋ ಒಂದು ನಮೂನೆಯ ಅಲೌಕಿಕ ರೀತಿಯ ವಾತಾವರಣ ಆವರಿಸಿಬಿಟ್ಟಿತ್ತು. ಸ್ವಾಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದೊಂದು ಗುಟುಕು ಆರ‍್ಸಿ ಸೇವಿಸುತ್ತ ಇಸ್ಪೀಟು ಆಡುತ್ತಿದ್ದೆಂದರೆ ಲೆಕ್ಕ ಹಾಕುವುದು; ಮನೆಯೊಳಗೆ ತೆರೆದಿದ್ದ ತಂಬಿಟ್ಟಿನ ಡಬ್ಬಿ ಕಡೆ ಇಣುಕಿ ಹಾಕದೆ ಮೂಷಕ ದಂಪತಿಗಳು ಪರಸ್ಪರ ರೊಮಾನ್ಸಿಗಿಳಿದಿರುವುದನ್ನು ನೋಡುತ್ತ ಮಾರ್ಜಾಲ ಮಲಗಿತ್ತೆಂದರೆ ಲೆಕ್ಕ ಹಾಕುವುದು; ವ್ಯಾಪರಸ್ಥರು ಉದ್ರಿ ಪಡೆದವರ ಕಡೆ ಮಂದಸ್ಮಿತ ನೋಟ ಬೀರುತ್ತಿದ್ದರೆಂದರೆ ಲೆಕ್ಕ ಹಾಕುವುದು; ಹೀಗೆ ಎಲ್ಲಿ ನೊಡಿದರೂ ಅರಿಷಡ್ವರ್ಗಗಳನ್ನು ಮೀರಿ ನಿಂತು ಪಲ್ಲವಿಸುತ್ತಿರುವವರೇ ಎಲ್ಲ ಕಡೆ. ಅದೂ ಅಲ್ಲದೆ ವಾತಾವರನವು ಎಲ್ಲ ಕಡೆ ಉಲ್ಲಸಿತವಾಗಿತ್ತು. ಪಾಯ್ಖಾನೆ ಕಡೆಯಿಂದ ಬೀಸುತ್ತಿದ್ದ ಗಾಳಿಯಲ್ಲೂ ಸೇವಿಸಲು ಯೋಗ್ಯವಾದ ಪರಿಮಳ ಇರುವುದು ಆಗಸದಲ್ಲಿ ಸೂರ್ಯನ ಕಡೆ ಯಾರು ಎಷ್ಟೊತ್ತು ಬೇಕಾದರೂ ಬಿಡುಗಣ್ಣಿನಿಂದ ದಿಟ್ಟಿಸಬಹುದಾಗಿತ್ತು. ಹೀಗಾಗಿ ಬೇಸಿಗೆ ಕಾಲದ ಹಗಲು ಬೆಳದಿಂಗಳೆಂಬ ಭ್ರಮೆ ಹುಟ್ಟಿಸುವಂತಿತ್ತು.
ಇದೆಲ್ಲ ನೋಡಿ ಸೂಕ್ಷ್ಮ ಮನಸ್ತತ್ವದ ಕದನ ಕುತೋಹಲಿಗಳಿಗೆ ಪರಮಾಶ್ಚರ್ಯವೋ ಪರಮಾಶ್ಚರ್ಯ. ಅವರಲ್ಲಿ ಕೆಲವರು ಪರಿಶೋಧಿಸಿ ಕಾರಣ ಕಂಡುಕೊಳ್ಳದಿರುತ್ತಾರೆಯೇ? ಬ್ರಾಹ್ಮೀ ಮಹೂರ್ತದಲ್ಲಿ ಚುಮು ಚುಮು ನಸುಕಿನಲ್ಲಿ ವೇದಾಗಮ ಪುರಾಣಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವಂಥ ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗ ಶಾಮಾಶಾಸ್ತ್ರಿಯೊಂದಿಗೆ ಬಸ್ ನಿಲ್ದಾಣದಲ್ಲಿ ತಂಗಾಳಿಗೆ ಮೈಯೊಡ್ಡಿ ನಿಂತಿದ್ದನ್ನು ಕೆಲವರು ನೋಡಿದ್ದುಂಟು. ಆದರೆ ಅವರು ಮಹಾದೇವಿ ಹತ್ತಿ ಮೂಡಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು; ತಿಪ್ಪೇರುದ್ರನನ್ನು ಹತ್ತಿ ಪಡವಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು! ಅವರು ಊರು ಬಿಟ್ಟಿರುವುದರಿಂದಾಗಿ ಇರುವೆ ಎಂಬತ್ನಾಲ್ಕು ಜೀವಿಗಳೆಲ್ಲ ನಿರ್ಭಯದಿಂದ ಕಾಲಕ್ಷೇಪ ಮಾಡತ್ತಿರಬಹುದೆ ಎಂಬ ಸಂದೇಹ ಮೂಡುವುದು ಸಹಜ. ಯಾಕಂದರೆ ಅವರ ಹಾಜರಿಯಲ್ಲಿ ಗ್ರಾಮ ಒಂಥರಾ ಇದ್ದರೆ; ಅವರ ಗೈರುಹಾಜರಿಯಲ್ಲಿ ಗ್ರಾಮ ಇನ್ನೊಂಥರಾ ಇರುವುದು. ‘ಅವರಿಲ್ಲದ್ಕೆ ಮನೆ ಒಂಥರಾ ಇದೆ’ ಎಂದು ಅಲುಮೇಲಮ್ಮ ಅಂದುಕೊಂಡರೆ ಅದೊಂದು ರೀತಿ; ಅವ್ರಿಲ್ಲದ್ಕೆ ಓಣೀಗೆ ಕಳೆ ಇಲ್ಲ ಅಂತ ಓಣಿಯವರೂ ಅಂದ್ರೆ ಓಕೆ ಮಾಡಬಹುದು. ಆದರೆ ಇಡಿ ಗ್ರಾಮಕ್ಕೆ ಗ್ರಾಮವೇ ಅಂದುಕೊಂಡರೇನು ಮಾಡುವುದು? ದುಃಖದ ಜಾಗದಾಗ ಸಂತೋಷ ಇರೋದು! ಸಂತೋಷದ ಜಾಗದಾಗ ದುಃಖದ ಇರೋದು ಇಂಥ ವೈಪರೀತ್ಯಗಳಿಗೆಲ್ಲ ಏನನ್ನುವುದು? ಹೀಗಾಗಿ ಶಾಸ್ತ್ರಿಗಳ ಗೈರುಹಾಜರಿಯಲ್ಲಿ ಸದರೀ ಗ್ರಾಮವನ್ನು ಹೇಗೆ ಅರ್ಥಮಾಡಿಕೊಳ್ಳುವುದೋ! ಒಟ್ಟಿನಲ್ಲಿ ಸದರಿ ಗ್ರಾಮದ ಜೀವಜಗತ್ತು, ಸಸ್ಯ ಜಗತ್ತು ಮತ್ತು
————————-

೧೩೪
ಮನುಷ್ಯ ಜಗತ್ತುಗಳ ಮನೋಭೂಮಿಕೆಯಲ್ಲಾಗಿರುವ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು ಮಾತ್ರ ಅಂಗೈ ಅಷ್ಟೇ ಸತ್ಯ.
ಇಡೀ ಗ್ರಾಮದ ಚರಿತ್ರೆಯಲ್ಲಿ ಕಂಡರಿಯದ ಕೇಳರಿಯದ ಘಟನೆಯೊಂದು ಜರುಗಲಿರುವುದರ ಮುನ್ಸೂಚನೆಯಾಗಿ ರೈಲೊಂದು ವಾಯುವೇಗದಲ್ಲಿ ಬಂದು ಸದರೀ ನಿಲ್ದಾಣದಲ್ಲಿ ನಿಂತುಕೊಂಡಿತು. ಅದು ಬಂದದ್ದಾಗಲಿ ಹತ್ತೋರು ಹತ್ತಿದ್ದಾಗಲೀ; ಇಳಿಯೋರು ಇಳಿದಿದ್ದಾಗಲೀ ಅದೇನು ಹೊಸ ಸಂಗತಿಯಲ್ಲ. ಹೊಚ್ಚ ಹೊಸ ಸಂಗತಿ ಯಾವುದಪ್ಪಾ ಅಂದರೆ D252 ನೇ ರಿಸರ್ವ್‍ಡ್ ಕಂಪಾರ್ಟ್‍ಮೆಂಟಿನಿಂದ ಐದೂ ಮುಕ್ಕಾಲಡಿ ಎತ್ತರ ಫೇರ್ ಕಲ್ಲರಿನ ಗುಂಗುರುಗೂದಲಿನ, ಕಣ್ಣಿಂಗೆ ಕೂಲಿಂಗ್ ಗಿಲಾಸ್ ಧರಿಸಿದ ವ್ಯಕ್ತಿಯೊಬ್ಬ ಇಳಿದಿದ್ದು; ಅವನು ಭಲೆ ಸ್ಟೈಲಿನಿಂದ ಯಾವತ್ತೂ ಲಗೇಜನ್ನು ಕೂಲಿಯೊಬ್ಬನ ಮೇಲಿರಿಸಿಕೊಂಡು ನಿಲ್ದಾಣದಿಂದ ಹೊರಬಂದದ್ದು; ಪೋರ್ಟಿಕೋದಲ್ಲಿ ಇಡೀ ಗ್ರಾಮವನ್ನು ಆಪೋಶನ್ ತೆಗೆದುಕೊಳ್ಳುವವನಂತೆ ಸಿಂಹಾವಲೋಕನ ಮಾಡಿದ್ದು; ಎಡಗೈ ತೋರುಬೆರಳಿನಿಂದ ಕೂಲಿಂಗ್ ಗಿಲಾಸನ್ನು ಹಿಂದಕ್ಕೆ ಸರಿಸಿ ಸರಿಪಡಿಸಿಕೊಂಡದ್ದು; ಜನರು ತನ್ನನ್ನು ಗಮನಿಸುತ್ತಿರುವರೆಂದು ಭಾವಿಸಿದ್ದು ಮತ್ತು ಗ್ರಾಮದ ಸಮಸ್ತ ಲವಲವಿಕೆಯನ್ನು ತನ್ನಲ್ಲಿ ಮೇಳಯಿಸಿಕೊಂಡು ನಡೆಯತೊಡಗಿದ್ದು.
ಆತ ಇಟ್ಟ ಹತ್ತು ಹೆಜ್ಜೆಗೆ ಜನರು ಮಂಕಾದರು. ಇನ್ನೊಂದಿಪ್ಪತ್ತು ಹೆಜ್ಜೆಗೆ ಕಟ್ಟಡಗಳು ಮಂಕಾದವು. ಇನ್ನೊಂದೈವತ್ತು ಹೆಜ್ಜೆಗೆ ತರುಲತೆಗಳು ಮಂಕಾದವು. ಇನ್ನೊಂದು ನೂರು ಹೆಜ್ಜೆಗೆ ಆಗಸದ ಸೂರ್ಯ ನಿಗಿನಿಗಿ ಉರಿಯತೊಡಗಿದ. ಇನ್ನೊಂದಿನ್ನೂರು ಹೆಜ್ಜೆಗೆ ಸ್ವಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಯಾರೋ ಅತಿರಿಕ್ತವಾಗಿ ರಾಜನನ್ನು ಸೇರಿಸಿದರೆಂಬ ಕಾರಣಕ್ಕೆ ವಿರೋದ ಪಕ್ಷದವರು ವಿರೋದ ಪಕ್ಷದವರಾದರು- ಆಡಳಿತ ಪಕ್ಷದವರು ಆಡಳಿತ ಪಕ್ಷದವರಾಗಿ ಮೀಸೆ ಮೇಲೆ ಕೈಇಟ್ಟುಕೊಂಡರು…
ಅಲಲಲಾ ಅನ್ನುವಷ್ಟರಲ್ಲಿ ಹರಕು ಜೀನ್ಸು ಚಡ್ಡಿ; ಮುರುಕು ಟೀ ಶರಟು ಧರಿಸಿದ್ದ ಸಿಂಬಳ ಗೊಣ್ಣಿಯ ಎರಡೂ ಮುಕ್ಕಾಲಡಿಯ ಕೆದರು ಕಿರಾಪಿನ ಹುಡುಗನೊಬ್ಬ ಕಿರ್ಧಬಲ ಓಡಲಾರಂಭಿಸಿದವನು ನಿರ್ದಿಷ್ಟ ಮನೆ ಮುಟ್ಟುವುದರೊಳಗಾಗಿ ಮೂರಡಿಯಷ್ಟೆತ್ತರದವನಾಗಿ ಟಪ್ ಟಪ್ ಎನೆ ಮುಚ್ಚಿದ್ದ ಬಾಗಿಲು ತಟ್ಟಿದ, ತಟ್ಟಿದ ಶಬ್ದಕ್ಕಿಂತ ಅವನು ಆಡುತ್ತಿದ್ದ ಉಸಿರು ಅಡಿಗೆಮನೆಯೊಳಗೆ ಕೇಳಿಸಿ ಕೆದರುಗೂದಲನ್ನು ತುರುಬಾಕಾದರದಲ್ಲಿ ಕಟ್ಟಿಕೊಳ್ಳುತ್ತ ‘ವೆನ್ನೆಲ್ಲೋ ಅಡಪಿಲ್ಲ’ ಲಗುಬಗೆಯಿಂದ ಬಂದು ಬಾಗಿಲು ತೆರೆದು ಆ ಹುಡುಗನನ್ನು ನೋಡಿ ವಿಸ್ಮಿತಳಾಗಿ ‘ಏನು’ ಎಂದು ಕೇಳಿದಳು. ಆಕೆಗೆ ಸಹಾಯಕವಾಗಿ ಮಾರ್ಜಾಲ ವಾಟೀಜ್ ಮ್ಯಾಟರ್ ಅಂತ ಮ್ಯಾಂವ್‍ಗುಟ್ಟುತ್ತ ಬಂತು. ತಾಯಿ ಯಾರೇ ಅದು ಅಂತ ಬಂದು ಇನ್ನೊಂದು ಮಗ್ಗುಲು ನಿಂತಳು ಬಾಲ ಮುಕುಂದ ನಾಲಿಗೆಯಿಂದ ಸಿಂಬಳ ಆಪೋಶನ ತೆಗೆದುಕೊಂಡು ಬಾಯಿ ಮುಚ್ಚುವ ಮೊದಲೇ ಇಷ್ಟಿದ್ದ ಅವರು ಅಷ್ಟೊಂದು ಯೋಚಿಸಿದರು.
“ಏನೋ?” ಎಂದು ಕೇಳಿದಳು. ಆಡಪಿಲ್ಲ.
“ಒಕ ಮುದ್ದಿಸ್ತೆ ಚೆಪ್ತಾನು” ಅಂದ ಬಾಲ ಮುಕುಂದ.
“ಥೂ ನಿನ್ನ!” ಎಂದು ನಿರಾಕರಿಸಿದಳು.
“ತರುವಾತ ಮುದ್ದಿಪ್ಪಿಚ್ಚುಕುಂಟಾನು…” ಬಾಲ ಮುಕುಂದ ಜಾರಿದ್ದ ಚಡ್ಡಿ ಮೇಲೆಳದು ಬಲ್ಲಮರಿ ಗೌರವ ಕಾಪಾಡಿಕೊಂಡ ಹೇಳಿದ “ಮೀ ಇಂಟಿಕೆವರೋ ಒಕರು ವಸ್ತೂ
——————————

೧೩೫
ಉನ್ನಾರು… ಬಾಗ ಚೂಸುಕೋವಲೆನು ಪೋಗೊಟ್ಟುಕೊಂಟೆ ಮಳ್ಳಿ ದೊರಕರು ಜಾಗ್ರತ” ಎಂದು ಚಿರಂಜೀವಿಯಂತೆ ಡೈಲಾಗು ಹೊಡೆದು ತಾನೇ ಒಂದು ‘ಸೂಪರ್ ಡಿಲಕ್ಸು’ ಬಸ್ಸು ಎಂಬಂತೆ ಬುರ್ರ್… ಬುರ್ರ್… ಪೊಂಯ್ ಪೊಂಯ್ ಸದ್ದು ಮಾಡುತ್ತ ಅಂತರ್ಧಾನವಾದನು…
ಯಾರೂ ಏನ್ಕಥೆ? ಕೇಳಬೇಕೆಂದರೆ ಅವನು ‘ಲಾ ಪತಾ’
ತಾಯಿ ಮಗಳು ಪರಸ್ಪರ ಮುಖ ನೋಡಿಕೊಂಡರು. ನನ್ ಮುಖಾನೂ ಸ್ವಲ್ಪ ನೋಡ್ರೆ ಭೇ… ಮಾರ್ಜಾಲ ಅರಚಿತು.
ಯಾರು ಬರುತ್ತಿರಬಹುದು. ತೀರ್ಥರೂನೇನಾದರೂ ಬರುತ್ತಿರಬಹುದೇ? ಆತ ಬರೊದೇನಿದ್ದರೂ ಮಧ್ಯರಾತ್ರಿಯಲ್ಲಿಯೇ! ಕಾಣೆಯಾಗುವುದೂ ಮಧ್ಯರಾತ್ರಿಯಲ್ಲಿಯೇ… ಮಾಟ ಮಂತ್ರಕ್ಕೆಲ್ಲ ತಿಲಾಂಜಲಿಯನ್ನಿತ್ತು ಮಟ ಮಟ ಮಧ್ಯಾನ್ನ ಬರುತ್ತಿರುವನೇನೋ ಪ್ರಾಣ ಬೇಕಾದರೂ ಬಿಟ್ಟಾನು! ವಾಮಾಚಾರವನ್ನು ಮಾತ್ರ ಬಿಡುವ ಪೈಕಿಯಲ್ಲ.
ಮತ್ತಾರಿರಬಹುದು? ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಮಾರ್ಜಾಲ ಮ್ಯಾವ್ ಗುಟ್ಟಿ ಕಾಳಜಿ ವ್ಯಕ್ತಪಡಿಸಿತು. ಕಾಗೆ ಕಾಕಾ ಅಂತೌ. ಹಲ್ಲಿ ಲೊಚಗುಟ್ತಿತು. ಇಲಿಗಳು ಪರಸ್ಪರ ಅಡ್ಡಾಡಿ ಸದ್ದು ಮಾಡಿದವು. ಹಿತ್ತಲಲ್ಲಿದ್ದ ಮಲ್ಲಿಗೆ ಬಳ್ಳಿ ಪುತುಪುತು ಹೂವುಗಳನ್ನುದುರಿಸಿತು.
ಶಕುನಗಳಿಗನುಕೂಲಕರವಾಗಿ ವ್ಯಕ್ತಿಯೊಬ್ಬ ಕಾಣಿಸಿಕೊಂಡ. ಅವನೊಂದಿಗೆ ಲಗೇಜಿನೊಂದಿಗೆ ಕೂಲಿ ಬಂದ. ತಾಯಿ ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ಅವನು ಆಕೆ ಕಡೆಗೊಮ್ಮೆ ಆಕೆಯ ಮಗಳ ಕಡೆಗೊಮ್ಮೆ ಆಪ್ಯಾಯಮಾನದಿಂದ ನೋಡಿದ.
“ಅಕ್ಕಾ… ನಾನು ರಘು… ನಿನ್ನ ತಮ್ಮ! ಅವನು ಅಷ್ಟು ಹೇಳಿ ಲೈನು ಕ್ಲಿಯರ್ ಮಾಡದಿದ್ದರೆ ಹೇಗೆ?
ಅರ್ಧ ನೋಟದಿಂದ ಅವನನ್ನು ಕಣ್ಣಿನಲ್ಲಿ ತುಂಬಿಕೊಂಡು ಅನಸೂಯಾ ಹಿತ್ತಲ ಕಡೆ ಓಡಿ ಮಲ್ಲಿಗೆ ಬಳ್ಳಿ ಅರಳಿಸಿದ್ದ ಹೂಗಳನ್ನು ನೋಡುತ್ತ ನಿಂತಳು. ಎಷ್ಟೇ ಓದಿಕೊಂಡಿದ್ದರೂ; ಎಷ್ಟೇ ಫೆಮಿನಿಸ್ಟು ಐಡಿಯಾಲಜಿ ತುಂಬಿಕೊಂಡಿದ್ದರೂ ಪ್ರಕಟವಾಗುವ ನಾಚಿಕೆಯನ್ನು ಮಾತ್ರ ಯಾವುದೇ ಹೆಣ್ಣಿಗೆ ತಡೆಯಲಾಗುವುದಿಲ್ಲ!
ಎಷ್ಟು ದಿನಗಳ ನಂತರ ತಾನು ತನ್ನ ತಮ್ಮನನ್ನು ನೋಡುತ್ತಿರುವುದು? ಆವಾಗ ಇಷ್ತಿದ್ದ? ಬಾಯಲ್ಲಿ ಬೆರಳಿಟ್ಟರೆ ಕಡಿಯಲಿಕ್ಕೆ ಬರುತ್ತಿರಲಿಲ್ಲ. ಈಗೆಂಗಾಗಿ ಬಿಟ್ಟಿರುವನಲ್ಲ ತನ್ನ ಮುದ್ದು ತಮ್ಮ! ಆಕೆಯ ಮುಖದ ತುಂಬ ವಾತ್ಸಲ್ಯದ ತೊರೆ ಜುಳುಜುಳು ಹರಿಯತೊಡಗಿತು.
“ರಘೂ! ರಘುರಾಮ!! ಉದ್ಗರಿಸಿದಳು.
ಕಾಲಿಗೆ ನೀರು ಕೊಟ್ಟಳು. ಅವನು ಕಾಲು ತೊಳೆದುಕೊಂಡು ಒಳಗಡೆ ಬಂದ. ಅಕ್ಕ ತೋರಿಸಿದ ಕುರ್ಚಿ ಮೇಲೆ ತಮ್ಮ ಕುಳಿತುಕೊಂಡ. ಒಂದು ನೋಟದಿಂದ ಮನೆ ವಾತಾವರಣ ಅರ್ಥ ಮಾಡಿಕೊಂಡ. ಅನಸೂಯ ಒಳಗಡೆ ಕಾಫಿ ಮಾಡಿದಳು.
“ಅನಸೂಯಾ… ಕಾಫಿ ತಗೊಂಡ್ಬಾರೆ… ಯಾಕೆ ನಾಚ್ಕೋತಿ… ಬಂದಿರೋದು ಬೇರೆ ಯಾರೂ ಅಲ್ಲ. ನಿನ್ನ ಸೋದರ ಮಾವ…” ಸಾಂದರ್ಭಿಕವಾಗಿ ರುಕ್ಕಮ್ಮ ಸಂಕ್ಷಿಪ್ತ ರೀತಿಯಲ್ಲಿ ಪರಿಚಯ ಭಾಷಣ ಮಾಡಿದಳು.
ಅನಸೂಯ ಕೈಯಲ್ಲಿ ಕಾಫಿ ಗ್ಲಾಸುಗಳಿದ್ದ ಟ್ರೇ ಹಿಡಿದುಕೊಂಡು ಹೊರಬಂದಳು. ದುಷ್ಯಂತನನ್ನು ಗಾಂಧರ್ವ ವಿವಾಹವಾಗುವಾಗ ಶಾಕುಂತಳ ತಲೆತಗ್ಗಿಸಿದ್ದಳಲ್ಲ ಹಾಗೆ.
————————–

೧೩೬
ಬೆಳದಿಂಗಳಂತಿದ್ದ ಅಕ್ಕನ ಮಗಳ ಮುಖ ನೋಡುತ್ತ ರಘು ಕಾಫಿ ಕಪ್ಪು ತೆಗೆದುಕೊಂಡ .
“ನಮ್ ಅನಸೂಯಾ ಏನಕ್ಕಾ? ಎಷ್ಟೊಂದು ಬೆಳೆದು ದೊಡ್ಡವಳಾಗಿದ್ದಾಳಲ್ಲಕ್ಕಾ ನಾನು ಯಾರೋ ಅಂದ್ಕೊಂಡಿದ್ದೆ ಗುರ‍್ತೇ ಸಿಗ್ಲಿಲ್ಲ!” ನಗರದ ನುಡಿಗಟ್ಟಿನಲ್ಲಿ ಮಾತಾಡಿದ.
ಆಕೆಯ ಮುಖದ ಬಿಗುವು ಸಡಲಿತು.
ಕಾಫಿ ಕುಡಿದಿದ್ದಾಯಿತು. ಸ್ನಾನ, ಊಟದ ಏರ್ಪಾಡು ಮಾಡಲು ಅನಸೂಯ ಒಳಗಡೆ ಹೋದಳು. ಅಕ್ಕ ತಮ್ಮನ ನಡುವೆ ಮೌನ ಆವರಿಸಿತು. ತಮ್ಮೀರ್ವರಲ್ಲಿ ಮೊದಲು ಯಾರು ಮಾತು ಪ್ರಾರಂಭಿಸುವುದು?
ತವರು ಮನೆಯ ಅಭದ್ರ ಬದುಕು, ಮೊಮ್ಮಕ್ಕಳನ್ನು ಕಾಣುವ ಮೊದಲೆ ತೀರಿಕೊಂಡ ತಂದೆತಾಯಿ; ಇನ್ನೊಬ್ಬ ತಮ್ಮನನ್ನು ತಾನು ತಂದಿಟ್ಟುಕೊಂಡಿದ್ದು; ಅವನು ಶಾಲೆಗೆ ಹೋಗದೆ ಕದ್ದು ತಿರುಗುತ್ತಿದ್ದುದು. ಗಂಡ ಏನು ಸಿಕ್ಕರೆ ಅದರಿಂದಲೆ ಹೊಡೆಯುತ್ತಿದ್ದುದು, ಅವನು ಹೇಳದೆ ಕೇಳದೆ ಓಡಿಹೋದದ್ದು. ಎಲ್ಲವು ಒಂದೆ ಏಟಿಗೆ ನೆನಪಾಗುವುದು.
ರಘು ಮೀಸೆ ಮೂಡುವ ಮೊದಲೊಮ್ಮೆ ಬಂದಿದ್ದ. ಮೀಸೆ ಮೂಡಿದ ಮೇಲೊಮ್ಮೆ ಬಂದಿದ್ದ. ಹೀಗೆ ಬಂದು ಹಾಗೆ ಹೊರಟುಹೋಗಿದ್ದ. ಹೀಗಾಗಿ ಅವನ ನೆನಪು ಸರಿಯಾಗಿ ಯಾರಿಗೂ ಇಲ್ಲ. ‘ಅಕ್ಕಾ ನಾನು ನಿನ್ನ ತಮ್ಮ’ ಎಂದು ಹೇಳದಿದ್ದಲ್ಲಿ ಖುದ್ದ ರುಕ್ಕಮ್ಮನೇ ತಾನುಂಡಬಿಟ್ಟ ಮೊಲೆಯನ್ನುಂಡವನನ್ನು ಗುರುತಿಸುತ್ತಿರಲೇ ಇರಲಿಲ್ಲ.
ಅಕ್ಕ ತಮ್ಮ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಿಬ್ಬರಿಗೂ ಪರಸ್ಪರ ತೋಡಿಕೊಳ್ಳುವುದೇನೋ ಸಾಕಷ್ಟಿತ್ತು. ಒಡ್ಡಿನ ಒಂದು ಕಲ್ಲು ಕಿತ್ತರೆ ಯಾವ ಪ್ರಕಾರವಾಗಿ ಕೆರೆ ಕಿತ್ತುಕೊಂಡು ನುಗ್ಗುವುದೋ ಹಾಗೆಯೇ ಮನದ ದುಗುಡ ಎಂಬುದು ಕೂಡ. ಯಾರಾದರೊಬ್ಬರು ಸೋ ಎಂದರೆ ತಾನೆ ಉಳಿದುದೆಲ್ಲ. ಉದ್ವಿಗ್ನತೆಯಿಂದಾಗಿ ಸಾವಿರದೆಂಟು ಮಾತುಗಳ ಪೈಕಿ ಯಾವ ಮಾತನ್ನು ಹೇಗೆ ಪ್ರಾರಂಭಿಸಬೇಕೆಂದು ಆ ಕ್ಷಣ ಅವರಿಗೆ ಹೊಳೆಯಲಿಲ್ಲ.
“ಭಾವ ಎಲ್ಲಿ ಕಾಣಿಲ್ಲಲ್ಲ!” ಎಂದು ರಘು ಕೇಳಬೇಕೆನ್ನುವಷ್ಟರಲ್ಲಿ ಅಕ್ಕನೇ ಮುಂದೆ ಬಿದ್ದು ‘ಪತ್ರ ಮುಟ್ತಾ’ ಎಂದು ಕೇಳಿಬಿಡಬೇಕೆ!
“ಯಾವ ಪತ್ರ?” ಆಶ್ಚರ್ಯ ವ್ಯಕ್ತಪಡಿಸಿದ. ಒಂದು ಕ್ಷಣದಲ್ಲಿ ಪರಿಸ್ತಿತಿ ಅರ್ಥೈಸಿಕೊಂಡು “ಓಹೋ! ಅದು ಬಂತೂ ಬಂತೂ” ಅಂದ.
ವ್ಯವಹಾರದ ನಿಮಿತ್ತ ಆತ ಕಾರ್ಗಲ್ಲಿಗೆ ಕಳೆದ ಎರಡು ತಿಂಗಳ ಹಿಂದೆಯೇ ಬಂದಿದ್ದ. ಅಲ್ಲಿನ ಹೆಜ್ಜತ್ತಾಡಿ ಶ್ರೀಕೃಷ್ಣಭಟ್ಟರ ಭೂಮಿಯನ್ನು ಅವರಿಗೇ ಕೊಡಸುವ ನಿಮಿತ್ತ ಸೆಂಟರಲ್ ಕಮಿಟಿ ಕನ್ವೀನಿಯರ್ ಅಕ್ಬರ್ ರಘುವನ್ನು ನೇಮಿಸಿದ್ದ. ಮುಂದಿನ ವರ್ಷದ ಜನರಲ್ ಬಾಡಿ ಮೀಟಿಂಗಿನಲ್ಲಿ ರಘುವನ್ನೇ ಕಮಿಟಿ ಕನ್ವೀನಿಯರನ್ನಾಗಿ ನೇಮಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅವನು ಯಾವುದೇ ಸಮಸ್ಯೆಯನ್ನು ಬಿಗಡಾಯಿಸದ ಹಾಗೆ ನೋಡಿಕೊಳ್ಳುತ್ತಾನೆ. ಯಾರನ್ನೂ ದ್ವೇಷಿಸಲಾರ. ಯಾರಿಂದಲೂ ದ್ವೇಷಿಸಿಕೊಳ್ಳರಿಯ. ಏನೇ ಪರಪಾಟು, ಲೋಪ ದೋಷಗಳು ವ್ಯವಸ್ಥೆಯಲ್ಲಿ ಮಾತ್ರ ಇರಲು ಸಾಧ್ಯ.
The ideas of the society are the ideas of the ruling party ಎಂದು ಮಾರ್ಕ್ಸ್ ಹೇಳಿರುವುದರ ಬಗೆಗೂ ಯೋಚಿಸುತ್ತಿರುವ ರಘು ಎಂದೂ ಉಗರಿನಿಂದ ಆಗುವ ಕೆಲಸಕ್ಕೆ ಕೊಡಲಿಯನ್ನು ಉಪಯೊಗಿಸುವುದಿಲ್ಲ. ಅಥವಾ ಕೊಡಲಿಯಿಂದಾಗುವ ಕೆಲಸಕ್ಕೂ ಅವನು ಉಗುರನ್ನೇ ಉಪಯೋಗಿಸುತ್ತಾನೆ. ಅದೇ ಅವನ ಜಾಣ್ತನ. ಇದರಿಂದಾಗಿ ಪಾರ್ಟಿಯ ಬಹುತೇಕ
—————————

೧೩೭
ಸದಸ್ಯರಿಗೆ ರಘುನ ಮೇಲೆ ಪ್ರೀತಿ.
ಕಾರ್ಗಲ್ಲಿನಿಂದ ಸೀದ ಬೆಂಗಳೂರಿಗೆ ಬರಬೇಡವೆಂದು ಅಕ್ಬರ್ ಹೇಳಿದ್ದ. ಅದು ಅಲ್ಲದೆ ಒಡಹುಟ್ಟಿದ ಅಕ್ಕನನ್ನು ನೋಡಬೇಕೆನಿಸಿತು. ಅನಸೂಯಳ ನೆನಪು ಇತ್ತೀಚೆಗೆ ಆವರಿಸಿತ್ತು. ಅವಳ ಅಭಿಪ್ರಾಯ ತಿಳಿದುಕೊಂಡ ನಂತರವೇ ತನ್ನ ಮದುವೆ ಬಗ್ಗೆ ಯೋಚಿಸಬೇಕೆಂದು ನಿರ್ಧರಿಸಿದ್ದ. ಇವಕ್ಕೆಲ್ಲ ಕಳಸವಿಟ್ಟಂತೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಎಲ್ಲೋ ಭಾವ ರುದ್ರನಾಯಕನನ್ನು ನೋಡಿದಂತೆ ನೆನಪು. ಆತ ತುಂಬ ದೂರ ಹೋಗುವ ರೈಲಲ್ಲಿ ಕೂತಿದ್ದ ಮತ್ತೊಮ್ಮೆ ನೋಡಬೇಕೆನ್ನುವಷ್ಟರಲ್ಲಿ ಜಿ.ಟಿ ಬಂದು ಅಡ್ಡನಿಂತು ಬಿಟ್ಟಿತ್ತು. ಈ ಕಡೆಯಿಂದ ಹೋಗಿ ಆ ಕಡೆಗೆ ಬರಬೇನ್ನುವಷ್ಟರಲ್ಲಿ ಆ ಟ್ರೇನ್ ಹೋಗಿಬಿಟ್ಟಿತ್ತು. ತಾನು ನೋಡಿದ್ದು ರುದ್ರನಾಯಕ ಹೌದೋ ಅಲ್ಲವೋ ಅದು ಬೇರೆ ಪ್ರಶ್ನೆ. ನೀಳಗಡ್ಡಬಿಟ್ಟು ಕಾವಿ ನಿಲುವಂಗಿ ಧರಿಸಿದ್ದ ಆತ ತನ್ನ ಭಾವ ಆಗಿರಲಿಕ್ಕಿಲ್ಲಬಹುದು ಎಂದು ಮರು ಕ್ಷಣ ಸಮಾಧಾನ ತಂದುಕೊಂಡ ನೋಡಿರದಿದ್ದರೂ ಅಕ್ಬರ್‌ಗೆ ಪರಿಚಯ ಇಲ್ಲದಿರಲಿಲ್ಲ. ಸಾಂಧರ್ಭಿಕವಾಗಿ ತನ್ನ ಪರಮಪೂಜ್ಯ ಮಾವನವರಬಗ್ಗೆ ಅಷ್ಟಾದಶ ವರ್ಣನೆ ಮಾಡಿ ಹೇಳಿದ್ದ. ಚಿಕನ್ ಕಬಾಬ್‍ಗೆ ಬಳಸುವ ಎಲ್ಲಾ ಮಸಾಲೆ ಬೆರೆಸಿ ಕಮಿಟಿ ಸದಸ್ಯರ ಹೃದಯಗಳಲ್ಲಿ ರುದ್ರ ನಾಯಕನ ಭವ್ಯ ರೂಪವನ್ನು ಕಡೆದು ನಿಲ್ಲಿಸಿಬಿಟ್ಟಿದ್ದ. ಎಡಪಂಥೀಯ ವಿಚಾರಧಾರೆ ಅನುಷ್ಟನಕ್ಕೆ ಇಂಥವರ ಅಗತ್ಯ ತುಂಬ ಇರುವುದೆಂದೂ; ವಾಮಾಚಾರ ಎಂಬ ಪದದ ಪೂರ್ವಾಧವೇ ಎಡಪಂಥಕ್ಕೆ ಪುಷ್ಟಿಕೊಡುವುದೆಂದು ಇಡೀ ಕಮಿಟಿ ಅಭಿಪ್ರಾಯ ಪಟ್ಟಿತ್ತು. ರುದ್ರನಾಯಕನಂಥವರೊಬ್ಬರು ಇದ್ದುಬಿಟ್ಟರೆ ಮಾವೋ, ಲೆನಿನ್‍ರವರು ಕನಸಿಸಿದ ಸರ್ವೇ ಜನೋ ಸುಖಿನೋ ಭವಂತು ಸಮಾಜವನ್ನು ಪ್ರತಿಷ್ಟಾಪಿಸಿಬಿಡಬಹುದೆಂದು ಕಾಮ್ರೇಡ್ ಅಕ್ಬರ್ ಹೇಳಿದ್ದ.
ಕಾರ್ಗಲ್ಲಿನಲ್ಲಿ ಹೋಗಿ ಕೋಗಿಲೆ ಮನೆಯ ಗಣಪತಿಯಿಂದ ಶ್ರೀಕೃಷ್ಣ ಭಟ್ಟರಿಗಾಗಿರುವ ತೊಂದರೆ ನಿವಾರಿಸಿ ಬರುವಾಗ್ಗೆ ಹೇಗಾದರೂ ಮಾಡಿ ರುದ್ರನಾಯಕನನ್ನು ಪುಸಲಾಯಿಸಿ ಕರೆತಂದು ಕಮಿಟಿ ಎದುರು ಹಾಜರುಪಡಿಸಬೆಕೆಂದು ಅಕ್ಬರು ರಘುವನ್ನು ಬೀಳ್ಕೊಟ್ಟಿದ್ದ.
ಸ್ವಲ್ಪ ಡೌಲಿಗೆ ಹೃದಯ ಕರಗಿ ಬಿಡುವ ರುದ್ರನಾಯಕ ಮನೆಯಲ್ಲಿ ಕಂಡುಬರದಿದ್ದುದರಿಂದ ರಘು ತನಗಾದ ಬೇಸರವನ್ನು ತೋರಗೊಡಲಿಲ್ಲ. ಅಲ್ಲದೆ ಅಕ್ಕ ಬರೆದಿರಬಹುದಾದ ಪತ್ರವೂ ತನಗೆ ತಲುಪಿಲ್ಲ. ತನ್ನ ವಿಳಾಸಗಳೋ ದಿನಕ್ಕೊಂದರಂತೆ ಬದಲಾಗುತ್ತಿರುತ್ತವೆ. ಆಕೆ ಬರೆದ ಪತ್ರ ಯಾರ ವಿಳಸಕ್ಕೆ ಹೋಗಿರುವುದೇನೋ? ತಾನು ವಿಳಾಸ ರಹಿತನೆಂದು ತಿಳಿದರೆ ಅಕ್ಕ ಬೇಸರ ಮಾಡಿಕೊಳ್ಳುತ್ತಾಳೆ!
“ಹ್ಹಾ ಹ್ಹಾ! ಬಂತು; ಬಂತಕ್ಕ” ಎಂದ. ವ್ಯವಸ್ಥೆ ಬದಲಾಯಿಸುವವರು ಸಾಂದರ್ಭಿಕವಾಗಿ ಸುಳ್ಳುಹೇಳದಿದ್ದರಾಗುವುದೇ?
ಸುಳ್ಳುಹೇಳುತ್ತಿರುವನೋ? ಹೇಗೆ? ರುಕ್ಕಮ್ಮ ತಮ್ಮನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ರಘುಗೆ ಅಕ್ಕನ ಮುಖ ನೇರವಾಗಿ ನೋಡುವ ಧೈರ್ಯವಿರಲಿಲ್ಲ. ತಪೋಭಂಗಿಯಲ್ಲಿ ಕೂತಿರುವ ಭಾವನ ಫೋಟೋ ಕಡೆ ನೋಡಿದ.
“ಆಮೇಲೆ ನಿಧಾನವಾಗಿ ಎಲ್ಲ ಮಾತಾಡಿದ್ರಾಯ್ತು. ಮೊದ್ಲು ಸ್ನಾನ ಮಾಡಿ ಊಟ ಮಾಡು ನಡೆ” ರುಕ್ಕಮ್ಮ್ ನಿಟ್ಟುಸಿರು ಬಿಟ್ಟಳು.
ರಘುರಾಮ ಎದ್ದು ಸ್ನಾನ ಮುಗಿಸಿದ. ಎಷ್ಟೊ ದಿನಗಳ ನಂತರ ಒಳ್ಳೆಯ ಸ್ನಾನ ಮಾಡಿದ
———————–

೧೩೮
ಅನುಭವವಾಯಿತು. ತಾಯಿಯ ಕಟ್ಟಾಜ್ಞೆಯಂತೆ ಅನಸುಯ ಊಟ ಬಡಿಸಿದಳು. ಎಷ್ಟೊ ದಿನಗಳ ಬಳಿಕ ಒಳ್ಳೆಯ ಊಟ ಮಾಡಿದ ಅನುಭವವಾಯಿತು.
ಬಡಿಸುತ್ತಿದ್ದ ಅನಸೂಯಳನ್ನು ಮಾತಾಡಿಸಿದರೆ ಚೆನ್ನಾಗಿತ್ತೂಂತ ಕೈತೊಳೆದುಕೊಳ್ಳುತಿರುವಾಗ ಅಂದುಕೊಂಡ. ಆಕೆ ತನ್ನ ಮುಖದಿಂದ, ಮಾತಾಡಲಿಕ್ಕೆ ಅನುಕೂಲವಾದ ವಾತಾವರಣ ನಿರ್ಮಿಸುತ್ತಿಲ್ಲ. ಎಷ್ಟೇಇದ್ದರೂ ಆಕೆ ಪದವೀಧರೆ ನಡುವಳಿಕೆಗಳ ಸೂಕ್ತ ಬಲ್ಲವಳು.
ತಾಯಿ ಬಣ್ಣದ ತಗಡಿನ ತುತ್ತೂರಿ ಕಂಠಪಾಟ ಮಾಡುತ್ತಿರುವಾಗ ಹುಟ್ಟುತ್ತಲೇ ಕಿಟಾರನೆ ಕಿರುಚಿಕೊಂಡಂಥವಳು.
ಅಡುಗೆ ಮನೆಯ ಬಾಗಿಲು ದಾಟುವಾಗ ಡರ್ರನೆ ಡೇಗಿದ. “ಸರ‍್ಯಾಗಿ ನೀಡಿದೇ ಇಲ್ವೇ ಮಾತಾಡ್ತಾ ನೀಡಬೇಕಾಗಿತ್ತು. ನನ್ತಮ್ಮ ಏನಂಕೊಂಡನೋ ಏನೋ” ಎಂದು ಗೊಣಗಿಡುತ್ತ ಅಕ್ಕ ಪಾತ್ರೆ ಪಡಗ ಮಾಡುತ್ತಿರುವ ಸದ್ದು ಕೇಳಿಸಿತು.
ಏನನ್ನೋ ಧೇನಿಸುತ್ತ ಹಾಗೆ ಒಂದು ಜೊಂಪು ನಿದ್ದೆ ಮಾಡಿದ. ಅವನು ಎಚ್ಚರಾಗುವ ಮೊದಲೆ ಅಕ್ಕ ಮಗಳು ಊಟ ಮುಗಿಸಿದ್ದರು. ಬಾಗಿಲಲ್ಲಿ ಇಣುಕಿ ಓಡುತ್ತಿರುವ ಮಕ್ಕಳು, ತಂತಮ್ಮ ಮನೆಗಳಿಂದಲೇ ಇಣುಕುತ್ತಿರುವ ದೊಡ್ಡವರು, ಚಿಕ್ಕವರು, ಅಕ್ಕ ಗದರಿಕೊಳ್ಳುತ್ತಿರುವುದು ಕೇಳಿಸಿಕೊಳ್ಳುತ್ತ ಹಾಗೆ ಅರೆ ಎಚ್ಚರದಲ್ಲಿ ಮಲಗಿಕೊಂಡಿದ್ದ.
ಏನೋ ಹಾಳಾದೋವೇನು? ಎಂದಾದ್ರೂ ಮಂದೀನ ನೋಡಿದ್ದಾರೋ ಇಲ್ಲೋ? ಗೂಬೆಗಳಂಗೆ ಯಾಕಾಡ್ತಿದ್ದಾವಂತೀನಿ ನಮ್ಮನ್ಯಾಗೇನು ಗೊಂಬೆ ಕುಣಿಯಾಕತ್ಯಾವೇನು? ರುಕ್ಕಮ್ಮ ಈ ಪ್ರಕಾರವಾಗಿ ಗೊಣಗಿಕೊಳ್ಳುತ್ತಿರುವಾಗಲೇ ಬಸವನ ಬಾವಿ ಮನೆಯ ಭವಾನಿ ಗಂಗವ್ವ ಕೈಲಿದ್ದ ಚುಟ್ಟಾ ಸೇದುತ್ತ ಹೊಗೆ ಎದೆಗೂಡಿಗಡರಿ ಕೊಕ್ ಕೊಕ್ ಕೆಮ್ಮುತ್ತ ಗತಕಾಲದಲ್ಲಿ ಗಂಡ ಊನ ಮಾಡಿದ್ದ ಬಲಗಾಲನ್ನು ಎಳೆದು ಹಾಕುತ್ತ, ಬಡಗೇರ ಮಾನಪ್ಪಾಚಾರಿ ಕೊಡಿಸಿದ್ದ ಬೆಂಡೊಲೆಗಳನ್ನು ಬಿಸಿಲಿಗೆ ಥಳಥಳಿಪುಸುತ್ತ “ಏನ್ಮಾಡೀಯಭೇ ರುಕ್ಕಮ್ಮ” ಎಂದು ಗುಬ್ಬಿ ಬೆದರಿ ಹಾರಿ ಹೋಗುವಂತೆ ಕೂಗುತ್ತ ಒಳಪ್ರವೇಶಿದಳು. ಗಂಡ ಬದುಕಿದ್ದಾಗೆಂದೂ ಆಕೆ ದ್ವನಿ ಎತ್ತರಿಸಿ ಮಾತಾಡಿದಾಕೆಯಲ್ಲ, ಮುಖ ಎತ್ತಿ ಇನ್ನೊಬ್ಬರನ್ನು ನೋಡಿದಾಕೆಯಲ್ಲ. ಸೂಳೇರ ಸಹವಾಸ ಮಾಡೀ ಮಾಡೀ ಗುಣವಾಗದ ಖಾಯಿಲೆಗಳನ್ನು ತೊಂಕದ ಕೆಳಗೆಲ್ಲ ಹೊತ್ತಿಸಿಕೊಂಡು ತಿಂಗಳ ದಿನಮಾನ ನರಳೀ ನರಳೀ ಕೊನೆ ಉಸುರು ಬಿಡುವಾಗ ಗಂಗೀ ನನ್ ಕೈಹಿಡ್ದ ನಿಂಗೆ ಸುಖಕೊಡ್ಲಿಲ್ಲ ಸಾಲ ಸೂಲ ಮಾಡಿ ನಿಂಗೇನು ಉಳುಸ್ದೆ ಸಾಯ್ತಿದ್ದೀನಿ… ಮುಂದೆ ನೀನೆಂಗ ಬದುಕ್ತೀಯೋ… ಅದು ನಿಂಗೆ ಬಿಟ್ಟಿದ್ದು… ಮತ್ತೆ ಮ…
” ಎಂದು ಏನೋ ಹೇಳಲು ಪ್ರಯತ್ನಿಸಿ ಮನೆಯಲ್ಲಿ ತನ್ನ ಶವ ಸಂಸ್ಕಾರಕ್ಕೂ ದಮ್ಮಡಿ ಬಿಡದೆ ಖಾಲಿ ಮಾಡಿ ಪ್ರಾಣ ಬಿಟ್ಟಿದ್ದ. ಬಡಗೇರ ಮಾನಪ್ಪ ಆ ಮೂರು ವರ್ಷಗಳ ಕಾಲ ಆಶ್ರಯ ಕೊಡದಿದ್ದಲ್ಲಿ ಈ ಭವಾನಿ ಗಂಗವ್ವ ಎಂದೋ ಕೊಲ್ಲಾಪುರ ಮಹಾಲಕ್ಷ್ಮಿ ಪಾದ ಸೇರಿಬಿಟ್ಟಿರುತ್ತಿದ್ದಳು. ಚುಟ್ಟ ಸೇದುವುದರ ಮುಲಕ ಪುರುಷ ಪ್ರಧಾನ ಸಮಾಜದಲ್ಲಿ ಒಂದು ಭದ್ರ ಬುನಾದಿ ಹಾಕಿಕೊಂದಿದ್ದ ಗಂಗವ್ವ ಓಣಿ ಜನ ಸದಾ ಸಂತೋಷವಾಗಿರಬೇಂದು ಬಯಸುವಾಕಿ. ಇಂಥ ಆಕಿ ಯಾರ ಮನೆಗೆ ಬೇಕಾದರೂ ಧೈರ್ಯವಾಗಿ ಹೋಗುತ್ತಿದ್ದಳು. ಕಷ್ಟಸುಖ ವಿಚಾರಿಸಿ ಬರುತ್ತಿದ್ದಳು. ದಿವಂಗತ ಮಾನಪ್ಪಾಚಾರಿಯ ಮಮ್ಮಗಳ ಮದುವೆಯ ಉಸ್ತುವಾರಿಗೆಂದು ಕಳೆದೆರಡು ತಿಂಗಳಿಂದ ಊರು ಬಿಟ್ಟಿದ್ದ ಆಕೆ ಕಳೆದ ವಾರವಷ್ಟೆ ಮರಳಿದ್ದಳು.
“ಗಂಗವ್ವತ್ತೆ… ಬಾ… ಕುಂತ್ಗ… ಊಟ ಆಯ್ತೇನು! ನನ್ನ್ತಮ್ಮ ಬಂದಾನತ್ತೆ…” ರುಕ್ಕಮ್ಮ
————————————–

೧೩೯
ಕೂಡ್ರಲು ಚಾಪೆ ಹಾಕಿದಳು. ನಮಲಲು ಎಲೆ ಅಡಿಕೆ ಚೀಲ ಸರಿಸಿದಳು.
“ಆ‍ಹ್… ನನ್ನ ಹಾಟಗಳ್ಳ… ಬಂದಾನೇನು? ಯಾವಾಗ ಬಂದ? ಏನ್ಕಥೆ? ನಾನು ಮಡಿಯುಡಿಯಿಂದ ನೀರು ತರುವಾಗ ಎಷ್ಟೊಂದು ಗೋಳೊಯ್ಕೊಳ್ತಿದ್ದನೆ? ಎಲ್ಲಿದ್ದಾನೆ ತೋರ‍್ಸು ಮತ್ತೆ” ಎಂದು ಕೂತು ರುಮಿರುಮಿ ಸುತ್ತ ನೋಡುತ್ತ ಗೋಟಡಿಕೆಯನ್ನು ಕಟುಮ್ಮನೆ ಕಡಿದಳು.
ವಿಶ್ವಕರ್ಮಿಣಿಯಾದ ಗಂಗವ್ವ ಮಾನಪ್ಪಾಚಾರಿ ತೀರೋವರೆಗೂ ಮಹಾ ಕಠೋರ ಸಂಪ್ರದಾಯಸ್ಥೆಯಾಗಿದ್ದಳು. ಪೂಜೆ ಪುನಸ್ಕಾರ ಮುಗಿಸಿ ಉಂಡು ಬರೋವರೆಗೂ ಆಕೆ ಹತ್ತಿರ ಯಾರೂ ಸುಳಿದಾಡುವಂತಿರಲಿಲ್ಲ. ಆಗಿನ್ನೂ ರಘುರಾಮ ‘ನಾನು ಪಂಜರದ ಹಕ್ಕಿ ನನಗಾರು ಗತಿ’ ಎಂದು ಓದಿಕೊಳ್ಳುತ್ತಿದ್ದ ವಯಸ್ಸಿನವನು. ಯಾರಾದರೂ ಮಡಿ ಆಚಾರ ಅಂತ ನಿಗರಾಡುತ್ತಿದ್ದರೆಂದರೆ ಹೋಗಿ ಅವರ ಆಚಾರ ಕುಲಗೆಡಸಿದ ನಂತರವೇ ತಟ್ಟೆಗೆ ಕೈಹಚ್ಚುತ್ತಿದ್ದನು. ಅವನ ಟೈಮುಪಾಸಿಗೆ ಗಂಗವ್ವ ತಕ್ಕ ಗಿರಾಕಿಯಾಗಿದ್ದಳು. ಆಕೆ ಮಡಿಯಿಂದ ನೀರು ತರುವಾಗ ಮಿಂಚಿನಿಂದ ಪ್ರತ್ಯಕ್ಷವಾಗಿ ಆಕೆಯ ತುಂಬಿದ ಕೊಡವನ್ನು ಮುಟ್ಟಿ ಓಡಿಬಿಡುತ್ತಿದ್ದನು. ಆಗ ಗಂಗವ್ವ ಎಲೋ ನನ್ ಹಾಟುಗಳ್ಳನೇ ಎನ್ನದೆ ಬಾಯಿ ಮುಚ್ಚುತ್ತಿರಲಿಲ್ಲ.
“ಅದೇನು, ಅನ್ಕೊಂಡೀಯೋ? ಅದನ್ನು ಮಾಡ್ವಂತೀ ಮೊದ್ಲು ಎಲೆ ಅಡಕೆ ಹಾಕ್ಕೊಂಡು ಆರಾಮು ತಗೋ” ಎಂದು ವಿಶೇಷ ಕಳೆಯಿಂದ ನುದಿದಳು!
ಅವರಿಬ್ಬರು ಪರಸ್ಪರ ಅದೂ ಇದೂ ಮಾತಾಡಿಕೊಳ್ಳತೊಡಗಿದರು. ತನ್ನ ಗಂಡನ ಸಮಾಚಾರದ ಬಗ್ಗೆ ಮುದುಕಿ ಅದೆಲ್ಲಿ ಪ್ರಸ್ತಾಪಿಸಿ ಬಿಡುವುದೋ ಎಂಬ ಆತಂಕದ ಬಗ್ಗೆ ರುಕ್ಕಮ್ಮ ಪ್ರತಿ ಮಾತನ್ನು ಜಾಗ್ರತೆಯಿಂದ ಮಾತಾಡುತ್ತಿದ್ದಳು. ಆದರೆ ಗಂಗವ್ವ ಯಥಾ ರೀತಿಯದು.
“ಅಲ್ಲೇ ನನ್ ಸೊಸೀಯೇ! ನಿನ ಗಂಡ ಹೆಂಡ್ತಿ ಮಗಳ್ನ ಬಿಟ್ಟು ಹೇಳ್ದೆ ಕೇಳ್ದೆ ಹೋಗಿ ಭಾಳ ದಿನ ಆಯ್ತಂತಲ್ಲೇ? ಅವ ಹೊಟ್ಟೆಗೇನು ತಿಂತಿದ್ದ ಅಂತೀನಿ… ಇಂಥ ಸುಮಾರು ದೂರಾಗ ಹರೇವಿರೋ ನಿನ್ನೂ; ಕೈಗೆ ಬಂದಿರೋ ಅನಸೂಯಾನ್ನೂ ಬಿಟ್ಟು ತಿಂಗಳಗಟ್ಟಳೆ ಹೋಗೋದೆಂದ್ರೇನು? ಅವನೊದೆ ಬರ್ಲಿ… ಕಿರಾಪು ಹಿಡ್ದು ಕೇಳ್ಳಿಲ್ಲಾ… ನಾನು ನೀಲ್ಗುಂದದ ನಾಗಪ್ಪಾಚಾರಿ ಮಗಳೇ ಅಲ್ಲ” ಬಾಯಲ್ಲಿ ಕವಳ ಒತ್ತರಿಸಿ ತುಂಬಿಕೊಳ್ಳದಿದ್ದಲ್ಲಿ ಆಕೆ ಇನ್ನೂ ನಾಲ್ಕು ಮಾತು ಹೆಚ್ಚಿಗೆ ಮಾತಾಡುವಾಕಿ. ಕವಳ ಉಗುಳಿ ಬಂದು ಮತ್ತೆ ಮಾತಾಡಲೆಂದು ಆಕೆ ತೆರೆದ ಬಾಯಿಯ ಮೇಲೆ ಕೂಡಲೆ ರುಕ್ಕಮ್ಮ ಕೈ ಇಟ್ಟಳು. ಸಮುದ್ರ ಮಂಥನ ಕಾಲದಲ್ಲಿ ಹುಟ್ಟಿದ ವಿಷವನ್ನು ಗಂಡನ ಕೊರಳ ಮೇಲೆ ಪಾರ್ವತಿ ಕೈ ಇಟ್ಟು ತಡೆದಳಲ್ಲ ಹಾಗೆ.
“ಮೆಲ್ಲಗೆ ಮಾತಾಡತ್ತೆ… ನಿನ್ ಮೊಮ್ಮಗ ಮಲಕ್ಕಂಡಿದಾನೆ ಅವ್ನು ಕೇಳಿಸ್ಕೊಂಡ್ರೆ ಏನಂದ್ಕೊಂಡಾನು?” ಎಂದು ರುಕ್ಕಮ್ಮ ಪಿಸುಗುಟ್ಟಿದಳು.
“ಆಹ್; ಹೌದು, ಹಂಗಾದ್ರೆ ಅಲ್ಲಿ ಮಲಕ್ಕೊಂಡಿರೋನು ರಘುನೇನು?… ನನ್ ನಾಲ್ಗೆ ಬಿದ್ದು ಹೋಗ್ಲಿ… ಎಂಥಾ ಮಾತಾಡಿಬಿಟ್ನೆಲ್ಲ…” ತನ್ನ ಪಾಡಿಗೆ ತಾನು ಗೊಣಗಿಕೊಂಡು ಮುಂದುವರಿದು ಹೇಳಿದಳು.
“ಅವನೇ ರಘುರಾಮನೇನು? ಎಷ್ಟುದ್ದ ಎಷ್ಟಗಲ ಬೆಳೆದಿದ್ದಾನಲ್ಲ… ಈಗಿನ ಕಾಲದ ಹುಡುಗ್ರು ಇವತ್ತಿದ್ದಂಗ ನಾಳಿರೋಲ್ಲ, ನಾಳಿದ್ದಂಗ ನಾಡಿದ್ದಿರಲ್ಲ… ಆ ದೇವ್ರೆ ಇಲ್ಲಿಗೆ ಕಳಿಸಿ ಕೊಟ್ಟಾನೆ… ಅನಸೂಯಾಗೀವ್ನು ಹೇಳಿ ಮಾಡಿಸಿದ ಜೋಡಿ ನೋಡು… ಮದ್ವಿ ವಿಷ್ಯ ಮಾತಾಡಿಬಿಡು… ಕೈಗೆ ಬಂದಿರೋ ಮಕ್ಕಳ್ನ ಭಾಳ ದಿನ ಮನೇಲಿಟ್ಕೋಬಾರ್ದು…” ಎಂದು ಒಂದು ಮಾತನ್ನು ಹೆಚ್ಚಿಗೆ ಪ್ರಯೋಗಿಸಿತು.
——————

೧೪೦
ಅಡುಗೆ ಮನೆಯಲ್ಲಿ ಮೊಣಕಾಲ ಚಿಪ್ಪಿನೊಳಗೆ ಮುಖ ಹುದುಗಿಸಿಕೊಂಡುಕೂತಿದ್ದ ಅನಸೂಯ ಅ ಅದನ್ನು ಕೇಳಿಸಿಕೊಂಡು ನಿಟ್ಟುಸಿರುಬಿಟ್ಟಳು.
ಅದಕ್ಕೆ ಪೂರಕವಾಗಿ ರುಕ್ಕಮ್ಮ ಕೂಡ ನಿಡುಸುಯ್ದಳು.
“ಆಕೀಗೆ ಗಂಡನ್ನ ದೇವ್ರು ಎಲ್ಲಿಟ್ಟಿದ್ದಾನೋ? ಹೇಗೆ ಹೇಳೋದತ್ತೆ.. ಅದ್ರ ಬ್ಯಾರೆ.. ”
“ಎಂಥ ಮಾತಾಡ್ತೀಯೆ ನಮ್ಮವ್ವ… ಅಂಗೈಲಿ ತುಪ್ಪ ಇಟ್ಕೊಂಡು ಬೆಣ್ಣೆಗೆ ತಿರುಗಾಡ್ತಾರೇನೇ? ಒಡಹುಟ್ಟಿದ ತಮ್ಮ ಕಡೇಲಲ್ಲ..”
“ಅದೂ ಅಲ್ದೆ ಅವ್ರೂ..”
“ಯಾರು?”
“ನಿನ್ ಮಗ!” ಮುಂದಿನ ಮಾತು ಗಂಟಲಲ್ಲಿ ಇರುಕಿಕೊಂದಿತು. ಬಹಳ ತ್ರಾಸಿನಿಂದ ಮಾತಾಡಿದಳು. “ಮನೆ ಯಜಮಾನ್ರು ಮನೇಲಿಲ್ಲಾಂದ್ರೆ ಹೆಂಗತ್ತೆ ಮಗ್ಳು ಮದ್ವೆ ಮಾತಾಡೊದು? ನಾಕು ಮಂದಿಯಾದ್ರೂ ಏನಂದ್ಕೊಂಡಾರು? ಯವತ್ತೊ ಕನ್ನೀರವ್ವನ ಭಾವಿ ನೋಡ್ಕೊಂತಿದ್ದೆ. ಮಗಳಿರೋದ್ರಿಂದ ಸುಮ್ಕಿದ್ದೀನಿ… ” ಗಂಟಲ ಕಟ್ಟೆಯೊಡೆಯಿತು. ಗಂಗವ್ವನ ಹೆಗಲ ಮೇಲೆ ಮುಖ ಇಟ್ಟು ಗದ್ಗದಿಸಿ ಅಳತೊಡಗಿದಳು.
“ಛೀ ಹುಚ್ಚಿ ಸುಮ್ಕಿರು… ಮನಿ ಮನೆ ಯಜಮಾನಿಯಾಗಿ ಹಿಂಗ ಅಳ್ತಾರೇನು? ಆ ಹುಡ್ಗಿಯಾದ್ರು ಏನಂದ್ಕೊಂಡಾತು.. ” ಎಂದು ಸಮಾಧಾನಪಡಿಸಿದಳು. ತನ್ನ ಸೆರಗಿನಿಂದ ಆಕೆಯ ಮೂಗು ಕನ್ನು ಒರೆಸಿ “ರುದ್ರ ನಾಯ್ಕಂದು ಎಲ್ಲಾ ಗೊತ್ತಿರೋದೇ. ಅಂಥೊರಿಗ್ರ್ ಬದುಕ್ರೋ ಮಂದಿಗಿಂತ ಸತ್ತು ದೆವ್ವ ಆಗಿರೋರೆ ಮುಖ್ಯ. ಯಾವ್ಯಾವ ದೆವ್ವ ಹುಡುಕ್ಕೊಂಡು ಯಾವ್ಯಾವ ಸುಡುಗಾಡೀಲಿ ಅಲೀತಿದ್ದಾನೇನೋ.. ಅವತ್ತು ಯಾವತ್ತು ಬರ್ತಾನೇನೋ? ಅವನು ಬರೋಕೆ ವರ್ಷಗಳೇ ಆಗಬೌದು? ಅವನಿಗಾಗಿ ಕಾಯ್ತ ಮಗ್ಳ ಬದುಕು ಹಾಳು ಮಾಡಬೇಡ.. ಮಾಡೋದ್ನೆಲ್ಲ ಮಾಡಿ ಮುಗಿಸಿಬಿಡು… ಆಮೇಲೆ ಬೇಕಾದ್ರೆ ಅವ್ನು ಬಂದು ನಿನ್ಗೊಂದು ನಾಲ್ಕೇಟು ಹೊಡೀಲಿ. ಕುತ್ಗಿ ಹಿಚುಕಿ ಹಾಳು ಭಾವೀಗಾಕ್ಲಿ… ಯಾರು ತಡೆಯೋರು? ಗಂಡನ್ನ ಕಳೆಕೊಂಡಿರೋ ನನ್ನ ಬಾಳ್ವೇನೇ ತಗೋ… ಊರುಗೆದ್ರಿದ್ರೆ ನಾನು ಬದುಕೋಕಾಗ್ತಿತ್ತೇನು? ಮಂದಿ ಬೇಷಿದ್ರೂ ಸೇರೊಲ್ಲ, ಕೆಟ್ರೂ ಸೇರೊಲ್ಲ… ನಾವು ಧೈರ್ಯದಿಂದ ಬದುಕಬೇಕಷ್ಟೆ? ಪಟಪಟ ಮಾತಾಡಿಬಿಟ್ಟಿತು. ಯಾರು ಕೇಳಿಸಿಕೊಂಡರೆ ತನಗೇನೆಂಬಂತೆ ಮಲಗಿರುವಂತ ನಾಟಕವಾಡುತ್ತಿರುವ ರಘು ಎಂಬ ಮಹಾಶಯ ಕೂಡ ಕೇಳಿಸಿಕೊಂಡು ತನ್ನಕ್ಕನ ಬಾಳುವೆಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ‘ವಾಲ್ಯೂಂ’ ಹೆಚ್ಚು ಮಾಡಿತ್ತು.
ಬರ‍್ಲೇನೆ ರುಕ್ಮಿಣಿ… ಎದ್ಕೂಡ್ಲೆ ನಿನ್ತಮ್ಮನ್ನ ಒಂದು ಮಾತು ಕೇಳಿಬಿಡು… ಬಂಗಾರಂಥ ಹುಡುಗಿ. ಕೈ ಹಿಡಿಯೋಕೆ ಪುಣ್ಯ ಮಾಡಿರ್ಬೇಕು. ಕೇಳೋ ಧೈರ್ಯ ನಿನಗಿರದಿದ್ರೆ ನನ್ ಕರೀ… ಬಂದು ಚಣ್ಣ ಹಿಡ್ದು ಬುದ್ದಿ ಹೇಳ್ತೀನಿ… ಮದ್ವೆ ಹೆಂಗ ಮಾಡೋದಂತ ಹೆದರ್ಬೇಡ. ನಾನಿನ್ನು ಬದುಕಿದ್ದೀನಿ… ನನ್ಗೇನು ಮಕ್ಳಿಲ್ಲ ಮರಿಯಿಲ್ಲ… ತಿಳೀತಾ?…? ಎಂದು ಗಂಗವ್ವ ಸರ್ರಂತ ಒಂದು ದಮ್ಮು ಎಳೆಯುತ್ತ ಎದ್ದಳು. ಮೂಗು ಬಾಯಿಯಿಂದ ಹೊಗೆ ಬಿಡುತ್ತ ನ್ಯಾರೋಗೇಜಿನ ಹಾದಿಗುಂಟ ಉಗಿಗುಂಟ ಹೋಗುತ್ತಿರುವುದೇನೋ ಎಂಬಂತೆ ತಮ್ಮ ಮನೆ ಕಡೆ ಹಂಗೊಂದು ಹೆಜ್ಜೆ ಹಿಂಗೊಂದು ಹೆಜ್ಜೆ ಹಾಕುತ್ತ ಹತ್ತು ಹೆಜ್ಜೆಗೊಮ್ಮೆ ಕೆಮ್ಮುವುದರ ಮೂಲಕ ಸಮಸ್ತ ಓಣಿಗೆ ತನ್ನ ಅಸ್ತಿತ್ವವನ್ನು ಜಗಜ್ಜಾಹೀರುಪಡಿಸುತ್ತ… ಊರು ಹೋಗೆನ್ನುವ ಸುಡುಗಾಡು ಬಾ ಎನ್ನುವಷ್ಟು
—————————-

೧೪೧
ವಯಸ್ಸಿನ ಆಣೆಬಡ್ಡಿ ಭವಾನಿ ಗಂಗವ್ವ ಹೋದಳು.
ಆಕೆ ಬಂದು ಹೋದದ್ದರಿಂದ ರುಕ್ಕಮ್ಮನ ಹೃದಯದ ಭಾರ ಅರ್ಧಕ್ಕರ್ಧ ಕದಿಮೆಯಾಯಿತು. ತಮ್ಮ ನಿದ್ರಾಭಿನಯದ ನಡುವೆಯೂ ತಮ್ಮ ಮಾತುಗಳನ್ನು ಕೇಳಿಸಿಕೊಂಡಿರುವನೆಂದು ಆಕೆಗೆ ಗೊತ್ತು. ಒಂದೇ ಮಾತಿಗೆ ಅವನು ಅನಸೂಯಳ ಕೈಹಿಡಿದು ಕರೆದೊಯ್ದು ಸುಖವಾಗಿಟ್ಟುಕೊಂಡರೆ ತನಗದೇ ಸಾಕು! ಪ್ರಶ್ನಾತ್ಮಕವಾಗಿ ಒಳಗೆ ಕೂತಿದ್ದ ಮಗಳ ಕಡೆಗೊಮ್ಮೆ… ಬೆನ್ನು ಮಾಡಿ ಮಲಗಿದ್ದ ತಮ್ಮನ ಕಡೆಗೊಮ್ಮೆ ನೋಡಿದಳು.
ಅನಸೂಯ ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ರುಕ್ಕಮ್ಮ ಮೆಲ್ಲಗೆ ಹೆಜ್ಜೆ ಇಡುತ್ತ ಹೋಗಿ ‘ಏನೇ’ ಎಂದಳು.
“ಅವ್ವಾ… ನಾನಷ್ಟೊಂದು ಭಾರವಾಗಿದ್ದೀನಾ… ನಿನ್ಗೆ?” ಅನಸೂಯ ತಾಯಿ ಹೆಗಲ ಮೇಲೆ ಮುಖ ಇಟ್ಟು ಬಿಕ್ಕಿದಳು.
“ಅದೆಂಥ ಮಾತಾಡ್ತೀಯಾ ತಾಯಿ… ಇದೇ ಪ್ರಶ್ನೇನ ನಾನ್ಯಾರ್ರಿಗೆ ಕೇಳ್ಲಿ ಹೇಳು ಮತ್ತೆ” ರುಕ್ಕಮ್ಮ ಸಂತೈಸಿದಳು. ರಘು ಒಪ್ಪಿದರೆ ತನ್ನ ಅಭ್ಯಂತರವಿಲ್ಲವೆಂದು ಈ ಮೊದಲೇ ಹೇಳಿದ್ದಿರಿಂದ ಮತ್ತೆ ಆ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ.
ಪೂರ್ಣ ಎಚ್ಚರ ಇದ್ದರೂ ಮಲಗಿದ್ದ ರಘು ಎಲ್ಲ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದ. ತನ್ನ ಅಕ್ಕ ಇಷ್ಟೊಂದು ಸಂಕಟವನ್ನು ಒಡಲಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿರುವುದು ತಿಳಿದು ಖೇದಗೊಂಡ. ಮತ್ತೆ ಮನೆ ಬಿಟ್ಟು ಹೋಗಿರುವ ಭಾವನ ಬಗ್ಗೆ ಸಿಟ್ಟು ಬಂತು. ರೈಲಿನಲ್ಲಿ ಕೂತಿದ್ದ ವ್ಯಕ್ತಿ ಭಾವನೇ ಎಂದುಕೊಂಡ. ಅದು ಉತ್ತರ ಭಾರತದ ಕಡೆ ಹೊರಟಿದ್ದ ರೈಲು. ಆತ ಕಾಶಿ ಕಡೆ ಹೋಗಿರಬಹುದೋ? ಹಿಮಾಲಯದ ಕಡೆ ಹೋಗಿರಬಹುದೋ? ಆತನ ಸಾವು ನೋವು ಸಂಭವಿಸಿರಲಿಕ್ಕಿಲ್ಲ. ಆತ ಪ್ರಚಂಡ ಆತ್ಮವಿಶ್ವಾಸದ ವ್ಯಕ್ತಿ. ಮುಂದೆಂದಾರರೊಂದು ದಿನ ಮರಳಿಬರದಿರಲಾರ. ಎಂದು ಬರುವನೋ! ಆತ ಬಂದರೆ ತನ್ನ ಮಗಳನ್ನು ತನಗೆ ಮದುವೆ ಮಾಡಿಕೊಡಲಿಕ್ಕಿಲ್ಲ. ತನ್ನ ಅಕ್ಕನ ಮಗಳನ್ನು ಮದುವೆಯಾಗುವುದು ತನ್ನ ಜನ್ಮಸಿದ್ಧ ಹಕ್ಕು. ಅಕ್ಕಗೆ ಸಂತೋಷವಾಗುವುದಾದರೆ ತಾನೇನೋ ಮದುವೆಯಾಗಲು ಸಿದ್ಧ… ಆದರೆ ಅನಸೂಯಾ ಒಪ್ಪಬೇಕಲ್ಲ! ಎಷ್ಟಿದ್ದರೂ ಅವಳು ವಿದ್ಯಾವಂತೆ. ತನ್ನಂಥ ಅರೆಬರೆ ವಿದ್ಯಾವಂತನನ್ನು ಇಷ್ಟಪಡುವಳೋ? ಇಲ್ಲವೋ? ತಾನು ಪದವೀಧರನಾಗಿರದಿರಬಹುದು. ತನಗಿರುವಷ್ಟು ಪ್ರಪಂಚ ಜ್ಞಾನ ಅವಳಿಗಿರಲಿಕ್ಕಿಲ್ಲ. ತಾನು ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲೆ… ಎರಡು ಮೂರು ಭಾಷೆಗಳಲ್ಲಿ ಸಮರ್ಥವಾಗಿ ಬರೆಯಲೂ ಬಲ್ಲೆ… ಗಂಟೆಗಟ್ಲೆ ನಿರರ್ಗಳವಾಗಿ ಭಾಷಣ ಮಾಡಬಲ್ಲೆ… ಮೂರು ಆರು ಮಾಡುವ ಆರು ಮೂರು ಮಾಡುವ ಚಾಕಚಕ್ಯತೆ ತನಗಿದೆ! ತಾನೆಂದೋ ಮದುವೆಯಾಗಿಬಿಡಬಹುದಾಗಿತ್ತು. ಆರ್ಗನೈಜಿಂಗ್ ಸೆಕ್ರೆಟರಿ ಅಂಜಲಿನಂಬೂದರಿ, ನಗರದ ಪ್ರಾಪರಟೀ ಡೀಲರ್ ಅಗರ್‌ವಾಲನ ಮಗಳು ನಿಧಿ, ವರಲಕ್ಷ್ಮಿವೆಂಕಟಂ ಸೀತಾರಾವ್ ಹೀಗೆ ಕೆಲವು ಪ್ರತಿಷ್ಟಿತ ತರುಣಿಯರು ತನಗಾಗಿ ಕಾಯುತ್ತಿದ್ದಾರೆ. ಅಕ್ಕನ ಮಗಳು ‘ನೋ’ ಎಂದಾಗ ಮಾತ್ರ ನಿಮ್ಮೊಬ್ಬರನ್ನು ಮದುವೆಯಾಗುವುದಾಗಿ ತಾನು ಹೇಳಿರುವುದುಂಟು.
ಗಾಡ ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವವನಂತೆ ರಘು ಮೆಲ್ಲಗೆ ಎದ್ದು ಕೂತ. ಗಟ್ಟಿಯಾಗಿ ಒಮ್ಮೆ ಆಕಳಿಸಿ ತಾನು ಎಚ್ಚರ ಗೊಂಡಿದ್ದನ್ನು ಪ್ರಕಟಿಸಿದ. ಅಕ್ಕ ಸೂಚಿಸಿದಂತೆ ಮುಖ
———————

೧೪೨
ತೊಳೆದು ಕೊಂಡು ಚಹ ಕುಡಿದ. ಅಯ್ಯೋ ಮರೆತಿದ್ದೆ ಅಂತ ಸೂಟ್‍ಕೇಸ್ ತೆರೆದ ಅನಸೂಯಳಿಗೆ ಎರಡೆರಡು ಸೀರೆ ತಂದಿದ್ದ ಹಾಗೆಯೇ ತನ್ನ ಭಾವನಿಗೆ ಪಾಲಿಸ್ಟರ್ ಪಂಚೆ, ಶರ್ಟಿಗೆ ರೇಷ್ಮೆ ಬಟ್ಟೆ ತಂದಿದ್ದ. ಇವೆಲ್ಲ ಯಾಕೆ ತಂದೆ ಅಂತ ಅಕ್ಕ ರಾಗ ತೆಗೆಯುತ್ತ ಸ್ವೀಕರಿಸಿದಳು. ಅನಸುಯಾ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ತನಗೊಂಚೂರು ಕೆಲಸ ಇದೆ ಅಂತ ರುಕ್ಕಮ್ಮ ಮನೆಯಿಂದ ಹೊರಗೆ ಹೋದಳು. ಮಗಳು ತಮ್ಮ ಪರಸ್ಪರ ಒಂದಿಷ್ಟು ಮಾತಾಡಿಕೊಳ್ಳಲಿ ಎಂಬ ಉದ್ದೇಶದಿಂದ.
ಈಗ ಇಡೀ ಮನೆಯಲ್ಲಿ ಉಳಿದಿರುವುದು ತಾವಿಬ್ಬರೇ! ತನ್ನ ತಾಯಿ ತನ್ನನ್ನು ಎಂಥ ಸಂದಿಗ್ಧತೆಗೆ ಸಿಲುಕಿಸದಳಲ್ಲ. ಅನಸೂಯಾ ನಾಚಿಕೆ ಮತ್ತು ಭಯದಿಂದ ಕಂಪಿಸುತ್ತಾ ಒಂದು ಮೂಲೆಯಲ್ಲಿ ನಿಂತುಕೊಂಡಳು. ಆಕೆಯ ಹೃದಯಬಡಿತ ಅಲ್ಲೆಲ್ಲ ವ್ಯಾಪಿಸಿತ್ತು. ಆಕೆಯ ಕಣ್ಣುಗಳು ಭೂವಿಜ್ಞಾನಿಯಂತೆ ನೆಲ ನೋಡುತ್ತಿದ್ದವು. ತನ್ನೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ಸಂಭಂದವಿರದ ವ್ಯಕ್ತಿ ಜೊತೆ ಹೇಗೆ ಮಾತಾಡುವುದು? ರಘು ತಾಯಿಯ ತಮ್ಮನಾಗಿರಬಹುದು! ತನ್ನ ಒಬ್ಬೇ ಒಬ್ಬ ಸೋದರ ಮಾವನಾಗಿರಬಹುದು! ಆದರೆ ಶಾಮನ ಬಳಿ ಮಾತಾಡಿದಷ್ಟು ಸಲೀಸಾಗಿ ಮಾತಾಡಲಾದೀತೇನು?
ಆಕೆಯ ಮೌನ ಸಮ್ಮತಿಯ ಲಕ್ಷಣವಲ್ಲ. ಸೋದರ ಮಾವನಾದ ತನ್ನನ್ನು ಆಕೆಯ ಮೊದಲುಯಾಕೆ ಮಾತಾಡಿಸಬಾರದು? ಸ್ವಲ್ಪ ಹೊತ್ತು ಕಾದು ಬಟ್ಟೆ ಬದಲಿಸಿದ. ಅವನಿನ್ನೇನು ಹೊರಗಡೆ ಹೊರಟೇಹೋಗುವನೆಂದು ಭಾವಿಸಿ ಮಾರ್ಜಾಲ ನಗಂದಿಯಿಂದ ಸೀದ ಕೆಳಗೆ ಧುಮಕಿತು. ಆ ದರಿದ್ರ ಶಾಮುನ ಬಗ್ಗೆ ಯೋಚಿಸೋದು ಬಿಟ್ಟು ರಘುನ ಮಾತಾಡಿಸೇ… ಏನಾದ್ರು ತಿಳ್ಕೊಂದು ಅವನು ಹೊರಟು ಹೋದಾನು. ಧೈರ್ಯದಿಂದ ಮಾತಾಡ್ಸು… ವಿದ್ಯಾವಂತರೂ ಹೆದರುವುದೇನು ” ಎಂಬರ್ಥ ಬರುವಂತೆ ಅದು ಮ್ಯಾವ್ ಅನ್ನುತ್ತಾ ಮಾಲಿಕಿನ್ ಕಾಲಿಗೆ ಮೈ ಹೊಸೆಯತೊಡಗಿತು.
“ನಾಚಿಕೆಯ ಪಾರಮಾರ್ಥಿಕತೆ ಹೆಣ್ಣಾಗಿದ್ರೆ ಗೊತ್ತಾಗ್ತಿತ್ತು. ಶಾಮುನ ಮರ‍್ತು ಬಿಡು ಅಂತ ಎಷ್ಟು ಸುಲಭವಾಗಿ ಹೇಳ್ತಿದ್ದೀಯಲ್ಲಾ… ಪ್ರೇಮದ ಬಗ್ಗೆ ವ್ಯಾಖ್ಯಾನ ಮಾಡುವುದು ಸಮಯ ಸಾಧಕ ಮಾರ್ಜಾಲಕ್ಕೆ ಹೇಗೆ ಸಾಧ್ಯ? ಅದು ಎಷ್ಟಿದ್ದರೂ ಹಚ್ಚಗಿದ್ದಲ್ಲು ಉಂಡು ಬೆಚ್ಚಗಿದ್ದಲ್ಲಿ ಮಲಗೋ ಜಾಯಮಾನದ್ದು. ಇನ್ನೂ ಅವನು ಬಂದು ಒಂದು ದಿನ ಕೂಡ ಕಳೆದಿಲ್ಲ. ಸಮೀಪದಿಂದ ಮಾತ್ರ ಸಾಮರಸ್ಯ ಸಾಮರಸ್ಯದಿಂದ ಮಾತ್ರ ಪರಸ್ಪರ ಹೃದಯ ಬಿಚ್ಚಿಕೊಳ್ಳೋದು ಸಾಧ್ಯ… ಅಲ್ವೇ ಡಾರ್ಲಿಂಗ್” ಹೆಣ್ಣು ಇಲಿ ತನ್ನ ಜೀವನ ಸಂಗಾತಿಗೆ ಹೇಳಿತು. ಮೂಷಕ ಹೌದೌದಂತ ತಲೆ ಅಲ್ಲಾಡಿತು.
ಇಲಿಗಳು ಮಾತಾಡಿಕೊಂಡಿದ್ದನ್ನು ಅರ್ಥಮಾಡಿಕೊಂಡವನಂತೆ ರಘು ಕುರ್ಚಿ ಮೇಲೆ ಕೂತು ಕಾಲಿಗೆ ಶೂಸ್ ಧರಿಸಿದ.
ಇವಳೆಂಥ ಹುಡುಗಿಯಪ್ಪಾ! ಇನ್ನೂ ತಲೆ ತಗ್ಗಿಸೇ ಇದ್ದಾಳೆ… ಬಿ.ಎ. ಓದಿಕೊಂಡಿರೋರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದರೆ ಹೇಗೆ?
“ಅನಸೂಯಾ… ನಾನು ಹೊರಗಡೆ ಹೋಗಿ ಬರ‍್ಲಾ” ಬಾಗಿಲ ಬಳಿ ಹೋಗಿ ತಿರುಗಿ ನೋಡಿದ. ಅಕಸ್ಮಾತ್ ತನ್ನ ಕಡೆನೋಡಿ ಮತ್ತೆ ತಲೆ ತಗ್ಗಿಸಿದಳು.
“ರಘೂ… ಬಾ ಕೂತ್ಕೋ… ಅವ್ವ ಬಂದ ಮೇಲೆ ಹೋಗ್ವಂತಿ” ಕೊನೆಗೂ ಧೈರ್ಯ
———————

೧೪೩
ತಂದುಕೊಂಡು ಮಾತಾಡಿಸಿಯೇ ಬಿಟ್ಟಳು.
ರಘುಗೆ ಹುರುಪು ಬಂದಿತು. ಮತ್ತೆ ಷೂ ಕಳಚಿ ಆಕೆ ಹತ್ತಿರವಿದ್ದ ಸೋಫಾದ ಮೇಲೆ ಕುಳಿತುಕೊಂಡ. ನೆಲ ಬಗೆಯುತ್ತಿರುವ ಕಣ್ಣುಗಳ ಮುಖ ನೋಡಿದ. ಅವಳ ಒದ್ದಾಟ ಅರ್ಥವಾಯಿತು. ನಗು ಬಂತು. ಇದ್ದಕ್ಕಿದ್ದಂತೆ ನಗತೊಡಗಿದ…
“ಯಾಕೆ ನಗ್ತಿ?” ಆಕೆ ಗಾಬರಿಯಾದಳು.
“ನಗದೆ ಏನು ಮಾಡ್ಲಿ” ನಗೆಯನ್ನು ಮೀಸೆ ಕೆಳಗೆ ಬಚ್ಚಿಡುತ್ತ ಹೇಳಿದ, “ಅಲ್ಲ, ಎಂಥ ಹುಡುಗಿ ನೀನು ನಾವಿಬ್ರೂ ಮಾತಾಡಿಕೊಳ್ಲಿ ಅಂಥಾನೆ ಅಕ್ಕ ಹೊರಗಡೆ ಹೋಗಿದ್ದು. ಇದು ನಿನ್ಗೂ ಗೊತ್ತು. ಆದ್ರೂ ಏನೂ ಮಾತಾಡ್ದೆ ಸುಮ್ನೆ ನಿಂತಿದ್ದೀಯಲ್ಲ… ಇದ್ಕೆ ಏನು ಹೇಳೋದು?” ಆಕೆಯನ್ನು ನಿಟ್ಟಿಸಿದ. ಕಣ್ಣುಗಳು ಕವಿಗಳಾದವು. ಅವನ ಮನಸ್ಸಿನ ಪುಟಗಳಲ್ಲಿ ಮಹಾಕಾವ್ಯಕ್ಕೆ ಶ್ರೀಕಾರ ಹಾಕಿದವು.
“ಏನಂತ ಮಾತಾಡೋದು! ಮಾತಾಡ್ಲಿಕ್ಕೆ ಇರೊದಾದ್ರೂ ಏನು?” ಆಕೆ ಸೂಚ್ಯವಾಗಿ ನುಡಿದಳು. ಹಾಗೆಯೇ ನಲವತ್ತೈದು ಡಿಗ್ರಿ ಕೋನದಿಂದ ನುಡಿದಳು. ನಿಕಾನ್ ಕೆಮೆರಾ ಕ್ಲಿಕ್ ಎಂದಂತೆ. ರೂಪದಲ್ಲಿ ಮಾತುಗಾರಿಕೆಯಲ್ಲಿ ರಘುನೇ ಶಾಮುನಿಗಿಂತ ಎಷ್ಟೋ ವಾಸಿ. ಎಷ್ಟಿದ್ದರೂ ಪಟ್ಟಣದಲ್ಲಿ ವಾಸಿಸುತ್ತಿರುವವನು, ಅಲ್ಲಿ ಏನು ಮಾಡ್ಕೊಂಡಿದಾನೋ?
“ಅನಸೂಯಾ…” ಅಂದ.
“ಹ್ಹಾಂ!” ಅಂದಳು
“ಮುದುಕಿ ಜೊತೆ ಮಾತಾಡಿದ್ದೆಲ್ಲ ಕೇಳಿಸಿಕೊಂಡೆ!” ಎಂದ.
“ಹ್ಹಾಂ!” ಆಕೆ ದಿಗ್ಭ್ರಮೆ ವ್ಯಕ್ತಪಡಿಸಿದಳು. ದುಃಖದ ಕಟ್ಟೆ ಒಡೆಯಿತು. ಕಣ್ಣುಗಳಿಂದ ನೀರು ಹರಿಯತೊಡಗಿತು. “ರಘೂ” ಎಂದುದ್ಗರಿಸಿ.
“ಹಾಗಾದ್ರೆ ನೀನು ನನ್ನ ಮದ್ವೆ ಆಗ್ತೀಯಾ?
“ಆಗ್ತೀನಿ.”
“ನಿಮ್ಮಕ್ಕನ ಮೇಲಿರೋಪ್ರೀತಿಗಾಗಿಮದ್ವೆ ಆಗ್ತೀಯಾ… ಅಥವಾ… ”
“ಏನು ಮಾತಾಡ್ತೀಯ… ನಿನ್ನೇ ಮದ್ವೆ ಆಗಬೇಕೂಂತ ಯಾವತ್ತೋ ನಿರ್ಧರಿಸಿದ್ದೆ…”
“ಆದ್ರೆ… ನಿನ್ನತ್ರ ಒಂದು ವಿಷಯ ಮುಚ್ಚಿಡೋಕೆ ನಾನು ಸಿದ್ಧಳಿಲ್ಲ. ”
“ಮುಚ್ಚಿಡೊ ಅಂಥ ವಿಷಯ ಇರೊದಾದ್ರೂ ಏನು?.
“…….. ” ಉಗುಳು ನುಂಗಿ ಗಂಟಲು ಸರಿಪಡಿಸಿಕೊಂಡಳು.
“ಎಂಥ ಹುಚ್ಚಿ ಇದ್ದಾಳಿವ್ಳು… ಯಾವ್ದು ಹೇಳಬೇಕು. ಯಾವ್ದು ಹೇಳಬಾರ್ದು ಎಂಬ ಪರಿ ಜ್ಞಾನ ಇರೋದಾದ್ರೂ ಬೇಡ್ವೆ… ನಾನ್ಸೆನ್ಸ್… ಓದ್ಕೊಂಡಿದ್ದಾಳಂತೆ ಓದ್ಕೊಂಡಿದ್ದಾಳೆ. ಕಲ್ತಿರೋದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು ನೋಡು” ಜಂತಿ ಸಂದಿಯಲ್ಲಿ ಗಂಡಿಲಿ ಖೇದ ವ್ಯಕ್ತ ಪಡಿಸಿತು.
ಅದ್ಯಾಕೆ ನಿಂಗೆ ಹೊಟ್ಟೆ ಕಿಚ್ಚು ಅಂತೀನಿ” ಹೆಣ್ಣಿಲಿ ಬೇಸರದಿಂದ ನುಡಿಯಿತು. “ಪ್ರಪಂಚವೆಲ್ಲ ನಿನ್ನ ಹಾಗೆ ಇರ‍್ತದಂತ ತಿಳ್ಕೊಂಡಿ ಏನು! ಈಗಿವ್ಳು ಬಾಯಿ ಮುಚ್ಕೊಂಡಿದ್ರೆ ಜನ ಬಾಯಿ ಮುಚ್ಕೊಂಡಿರ‍್ತಾರೇನು?”
“ಯಾಕೆ ಚಿನ್ನಾ! ನನ್ನೂ ಪ್ರಪಂಚದ ಗಂಡಸರೊಂದಿಗೆ ಹೋಲಿಸ್ತೀಯಾ! ಪ್ರಪಂಚ ಕಟ್ಕೊಂಡು
———————

೧೪೪
ಏಗೋದ್ಯಾಕೆ? ಇದ್ರು ಆಡ್ಕೊಳ್ತಾರೆ, ಇಲ್ದಿದ್ರೂ ಆಡ್ಕೊಳ್ತಾರೆ! ಜನರನ್ನು ಮೆಚ್ಚಿಸೋಕಾಗಿ ಬದುಕಲಿಕ್ಕಾಗ್ತದೇನು?”
ಇದು ಮೊದ್ಲೇ ಮೇಲ್ ಡಾಮಿನೇಷನ್ ಸೊಸೈಟಿ ಕಣಪ್ಪಾ… ಇಡೀ ಸಾಮಾಜ ತನ್ನೆಲ್ಲ ಕಣ್ಣುಗಳ್ನ ಸದಾ ಹೆಣ್ಣೀನ ಕಡೀಗೆ ಗುರಿ ಇಟ್ಕೊಂಡು ಕೂತಿರ‍್ತದೆ… ಒಂಚೂರು ಅನುಮಾನ ಬಂದ್ರೂನೂವೆ ಸಾವಿರಾರು ಬಾಯಿಗಳು ಪಟಪಟಾಂತ ಮಾತಾಡೋಕೆ ಶುರುಮಾಡಿಬಿಡ್ತವೆ.
“ನಿನ್ನ ಮಾತೂ ಸರೆ ಬಿಡು… ನಿನ್ನಷ್ಟು ನಾನು ಜಾಣ ಇರಲಿಕ್ಕಿಲ್ಲ. ಇದನ್ನೆಲ್ಲ ಕೇಳಿ ರಘುರಾಮನೆಂಭೋನು ಈ ನಮ್ಮ ಹುಡುಗೀನ ಮದ್ವೆ ಆಗದಿದ್ರೆ ಎಂಬ ಭಯ ನನ್ನದು.”
“ಆದ್ರೆ ಆದಿತ್ಯವಾರ ಆಗದಿದ್ರೆ ಸೋಮವಾರ. ಆಗದಿದ್ರೆ ಆಗಲಿಲ್ಲ. ನಮ್ಮ ಅನಸೂಯ ಏನು ಅವಿದ್ಯಾವಂತೆಯಲ್ಲ . ಸಾಕಷ್ಟು ಓದ್ಕೊಂಡಿದ್ದಾಳೆ. ಕಾಲೇಜಿಗೇನೆ ಫಸ್ಟ್‍ಕ್ಲಾಸ್ ಮಾರ್ಕ್ಸ್ ತಗೊಂಡು ಪಾಸಾಗಿದ್ದಾಳೆ… ಯಾವುದಾದ್ರು ನೌಕರಿ ಸಿಕ್ಕೇ ಸಿಗ್ತದೆ… ಗಂಡಸಿನಂತೆ ಜೀವನ ನಡೆಸ್ತಾಳೆ…”
“ಆದ್ರೆ ಅವಿವಾಹಿತೆಯಾಗಿ…”
“ಹೌದು, ಅದ್ರಲ್ಲೇನು ತಪ್ಪಿದೆ? ಮದುವೆ ಮಾದ್ಕೊಳ್ಳದೇನೆ ಎಷ್ಟು ಜನ ಮಹಿಳೆಯರು ಧೈರ್ಯದಿಂದ ಜೀವನ ಮಾಡ್ತಿಲ್ಲ? ಅವರೆಲ್ಲರಂತೆಯೇ ಅನಸೂಯ”
“ನೀನು ಏನೇ ಹೇಳು ಬಂಗಾರ… ಒಂಟಿಯಾಗಿ ಹೆಣ್ಣು ಈ ಸಮಾಜದಲ್ಲಿ ಜೀವಿಸೋದು ಕಷ್ಟ. ಹೆಣ್ಣಿಗೊಂದು ಗಂಡು ಬೇಕೇ ಬೇಕು.”
“ಅದೆಲ್ಲ ನಿನ್ನಂಥ ಗಂಡಸರು ಸಹಸ್ರ ಸಹಸ್ರ ವರ್ಷಗಳಿಂದ ಹುಟ್ಟು ಹಾಕಿ ಬೆಳೆಸಿಕೊಂಡು ಬಂದಿರೋ ಬೆದರುಗೊಂಬೆ” ಗಂಡನ ತರ್ಕಕ್ಕೆ ಹೆಣ್ಣಿಲಿ ರೋಸಿತು. “ಅನಸೂಯಾಳ ಬದುಕಿನಲ್ಲಿ ಅಂಥ ಸಂದರ್ಭ ಬರ‍್ಲಿಕ್ಕಿಲ್ಲ ಎಂಬುದೇ ನನ್ನ ಭಾವನೆ. ”
“ಹಾಗಾದ್ರೆ ಸೋದರ ಮಾವನೇ ಅನಸೂಯಾಳನ್ನು ಮದುವೆಯಾಗ್ತಾನಂತೀಯಾ?”
“ಹೌದು ಖಂಡಿತ ಆಗ್ತಾನೆ.”
“ಎಲ್ಲಾ ತಿಳಿದ ನಂತರವೂ… ”
“ಹೌದು ಎಲ್ಲಾ ತಿಳಿದ ನಂತರವೂ!”
“ನೀನು ಏನೇ ಹೇಳು… ಮುಂದೆ ಪರಸ್ಪರ ದೈಹಿಕ ಆಕರ್ಷಣೆ ಕಡಿಮೆಯಾದ ಮೇಲೆ ಪರಸ್ಪರ ಅನುಮಾನಗಳು ತಲೆದೋರದೆ ಇರಲಿಕ್ಕಿಲ್ಲ.”
“ಎಲ್ಲ ಅನುಮಾನಗಳು ಎಲ್ರಿಗೂ ಬರೋದಿಲ್ಲ… ರಘೂನ ಮನಸ್ಸು ದೊಡ್ಡದು ಅಂಥ ಅನುಮಾನಕ್ಕೆ ಆಸ್ಪದ ಕೊಡದೆ ಅನಸೂಯಾಳನ್ನು ಸರ‍್ಯಾಗೆ ನೋಡ್ಕೊಳ್ತಾನೆ.”
“ಶಾಮಾಶಾಸ್ತ್ರೀಗೂ, ರಘೂಗೂ ಫರಕಿದೆ.”
“ಹೌದು! ಇಲ್ಲವೆಂದೋರ‍್ಯಾರು? ಎರಡು ದಿಕ್ಕುಗಳ ನಡುವೆ ಇರೋ ಅಷ್ಟು ವ್ಯತ್ಯಾಸವಿದೆ!”
“ಶಾಮೂನ ಮನಸ್ನಲ್ಲಿಟ್ಕೊಂಡು ರಘೂನ ಹೆಂಡತಿಯಾಗಿ ಬದುಕಬೇಕಲ್ಲ ನಮ್ಮ ಅನಸೂಯಾ.”
“ಸೂರ್ಯೋದಯಕ್ಕೆ ಪಾರ್ವಭಾವಿಯಾಗಿ ಕತ್ತಲೆ ಹೇಗೆ ಹಂತಹಂತವಾಗಿ ಕಡಿಮೆಯಾಗುವುದೋ ಹಾಗೇನೆ ರಘುನ ಸಾಮೀಪ್ಯದಿಂದ ಅನಸೂಯಾ ತ್ರಿಕರಣ ಪುರ್ವಕವಾಗಿ ದಾಂಪತ್ಯ ಜೀವನ ಸಾಗಿಸುತಾಳೆ… ನೋಡ್ತಿರು.”
“ಆಕೆಯ ಗಂಡನ ಮನೆಗೆ ನಾವಿಬ್ರೂ ಹೇಗಾದ್ರು ಮಾಡಿ ಹೊರಟುಹೋಗೋಣ.”
——————-

೧೪೫
“ಹೌದೌದು. ಒಳ್ಳೆಯ ಐಡಿಯಾ.”
“ಹೇಗೆ ಅಷ್ಟು ದೂರ ಪ್ರಾಯಾಣ ಮಾಡೋದು.?”
“ಹೊಸದಾಗಿ ಮದುವೆಯಾದವರೆಂದಮೇಲೆ ತಿಂಡಿ ಡಬ್ಬಿಗಳು; ಹಾಸಿಗೆ ಸುರುಳಿ ಹೀಗೆ ಏನಾದರೊಂದು ಸಾಮಾನು ಇದ್ದೇ ಇರ‍್ತವೆ. ಅವುಗಳಲ್ಲಿ ಹೇಗೋ ಜಾಗ ದೊರಕಿಸಿಕೊಂಡು ನಾವಿಬ್ರು ಹೋದರಾಯಿತು.”
“ಹೌದು! ನೀನು ಹೇಳೋದೇನೋ ಸರಿ; ಅಲ್ಲೂ ಇಲ್ಲಿದ್ದಂತೆ ಯಾವುದಾದ್ರು ಬೆಕ್ಕು ಸಾಕ್ಕೊಂಡಿದ್ರೆ ಏನಪ್ಪ ಮಾಡೋದು?”
’ನಗರದ ಮಂದಿ ನಾಯಿ ಮೇಲೆ ತೋರಿಸಿದಷ್ಟು ಪ್ರೀತಿಯನ್ನು ಬೆಕ್ಕುಗಳ ಮೇಲೆ ತೋರಿಸೋದಿಲ್ಲ. ಬೆಕ್ಕು ಅವರಿಗೆ ಪೆಟ್ ಅನಿಮಲ್ಲಲ್ಲ. ಜೊತೆಗೆ ನಾನಿರ‍್ತೀನಲ್ಲ! ನೀನ್ಯಾಕೆ ಹೆದರ‍್ತಿ.”
“ಅದು ಸರಿ… ನೀನೋ ಮಹಾ ರಸಿಕ. ಮಾಸ್ಟರ್ ಇನ್ ಎರಾಟಿಕ್ ಆರ್ಟ್ಸ್; ನೀನೇನಾದ್ರು ಪಟ್ಟಣದ ಹುಡ್ಗೀರ‍್ಗೆ ಲೈನ್ ಹೊಡೆಯೋಕೆ ಶುರುಮಾಡಿದ್ರೆ ನಾನೇನು ಮಾಡ್ಲಿ?”
“ಈ ಹೆಂಗಸರಂದ್ರೆ ಇಷ್ಟೆ ನೋಡು. ಏನಾದರೊಂದು ಕ್ಯಾತೆ ತೆಗೀತಾನೆ ಇರ್ತಾರೆ, ನಾವಿಬ್ರೂ ಗಾಂಧರ್ವ ವಿವಾಹವಾಗಿ ಇಷ್ಟು ದಿನಗಳಾದ್ವು. ಯಾವತ್ತಾದ್ರು ಕಚ್ಚೆ ಹರಕ ಬುದ್ಧಿ ತೋರ‍್ಸಿದಿನೇನು?” ಹೆಂಡತಿ ಕಡೆ ಬೆನ್ನು ಮಾಡಿ ಮುಖ ಸಿಂಡರಿಸಿಕೊಂಡಿತು ಗಂಡಿಲಿ.
“ಲೋಕಾರೂಢಿ ಮಾತಾಡಿರ‍್ಯಾಕೆ ಸಿಟ್ಟು ಮಾಡ್ಕೊಂತಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡವರಂತೆ… ಎಲ್ಲಿ… ನನ್ ಜಾಣ… ಮುಖ ತಿರಿಗಿಸು… ಕಿಸ್ ಕೊಡ್ತೀನಿ ಮತ್ತೆ” ಹೆಣ್ಣಿಲಿ ಗಂಡಿಲಿಯನ್ನು ಪರಿಪರಿಯಾಗಿ ರಮಿಸತೊಡಗಿತು.

* * * *

ಅನಸೂಯಳ ಕೈಹಿಡಿಯುವ ರಘುರಾಮ ಎಂಬ ತರುಣ ಬೆಂಗಳೂರಿನಿಂದ
ಬಂದಿರುವನೆಂಬ ಸತ್ಯಸಂಗತಿ ಓಣಿ ತುಂಬಿ; ಊರು ತುಂಬಿ ಅಕ್ಕಪಕ್ಕದೂರುಗಳ ಕಡೆಗೂ
ಜಿನಗತೊಡಗಿತು. ಯಾಕೆಂದರೆ ಅನಸೂಯಾ ಗುರುತಿಸಲ್ಪಡುತ್ತಿದ್ದುದೇ ವಾಮಾಚಾರ
ರುದ್ರನಾಯಕನ ಮಗಳು ಎಂದೊಂದು ಬಗೆಯದ್ದಾಗಿದ್ದರೆ; ಗ್ರಾಮದ ಮತ್ತೊಂದು ಮಹಾನ್
ವೈದಿಕ ಕುಳವಾದ ಪರಮೇಶ್ವರ ಶಾಸ್ತಿಗಳ ಮೊಮ್ಮಗ ಶಾಮಾಶಾಸ್ತ್ರಿ ತಲೆಗೆ ಏನೇನೋ
ತಿಕ್ಕಿ ಮೊನ್ನೆ ಮೊನ್ನೆವರೆಗೆ ತನ್ನ ವ್ಯಾನಿಟಿ ಬ್ಯಾಗಿನೊಳಗಿಟ್ಟುಕೊಂಡಿದ್ದಳು ಎಂಬುದಿನ್ನೊಂದು
ರೀತಿಯದ್ದು. ಅನಸೂಯ ಇರದಿದ್ದರೆಲ್ಲಿ ಶಾಮು ಕಾಲೇಜು ಮುಗಿಸುತ್ತಿದ್ದ. ಅನಸೂಯ
ಇರದಿದ್ದಲ್ಲಿ ಗೊಬ್ಬರದಂಗಡಿ ಜಲಜಾಕ್ಷಿ ಕೈಲಿ ಆ ಪುಳಿಯೋಗರೆ ಅಪ್ಪಚ್ಚಿಯಾಗಿ ಅಶ್ವತ್ಥ್
ಕಟ್ಟೆಯ ಮೇಲೆ ಪದ್ಮಾಸನ ಹಾಕಿಕೊಂಡಿರುತ್ತಿತ್ತು. ಅದೂ ಅಲ್ಲದೆ ಅದಕ್ಕೆ ಸಂಸ್ಕೃತ ಬಿಟ್ಟರೆ
ಬೇರೆ ಇನ್ನೇನು ಬರುತ್ತಿತ್ತು? ಅನಸೂಯಾಳೇ ಅವನನ್ನು ಸಾರ್ವಜನಿಕವಾದ ಮನುಷ್ಯನನ್ನಾಗಿ
ಮಾಡಿದಾಕಿ. ಆಕೆ ಶಾಮು ಇಬ್ಬರೂ ಸತಿಪತಿಗಳಾಗಿ ಬಿಟ್ಟಿದ್ದಲ್ಲಿ ಅದರ ಮಜವೇ
ಬೇರಿರುತ್ತಿತ್ತು. ಅವಮಾನ ತಾಳಲಾರದೆ ಶಾಸ್ತ್ರಿಗಳು ತಾವೂ; ತಮ್ಮ ಸೊಸೆಯೂ ಏಕಕಾಲಕ್ಕೆ
ದತ್ತೂರಿ ಕಷಾಯ ಕುಡಿದು ಅತ್ತ ಕೈಲಾಸಕ್ಕೆ ಹೋಗದೆ ಇತ್ತ ವೈಕುಂಟಕ್ಕೂ ಹೋಗದೆ ಅತಂತ್ರ
ಸ್ಥಿತಿಯಲ್ಲಿ ಪ್ರೇತ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು. ಇದನ್ನೇ ಗ್ರಾಮದ ಬಹುಪಾಲು
ವಖ್ತಾರರು ಯೋಚಿಸಿದ್ದುದು. ಅವರೆಲ್ಲ ಆ ಎರಡು ಧ್ರುವಗಳ ನಡುವಿನ ಒಡನಾಟಕ್ಕೆ
ತಕ್ಕದಾದ ರಂಗಸಜ್ಜಿಕೆ ನಿರ್ಮಿಸಿ ತಾವು ಪ್ರೇಕ್ಷಕರಾಗಿ ನೈಪಥ್ಯದಲ್ಲಿ
ಉಳಿದುಬಿಟ್ಟಿದ್ದರು.
———————

೧೪೬
ಕೆಲವರು ಹಲವಾರು ರೀತಿಯಲ್ಲಿ ಇದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ
ವ್ಯಾಖ್ಯಾನಿಸುವುದುಂಟು. ಸದಾ ತನ್ನ ಸೆರಗಿಗೆ ಜೋತು ಬಿಳುವಮಗ ಅದೆಲ್ಲಿ ತಪ್ಫೋಗುವನೋ
ಎಂದು ಅಲುಮೇಲಮ್ಮನೇ ಏನೋ ಒಂದು ಕರಾಮತ್ತು ಮಾಡಿ ಜೋಡಿ ಅಗಲಿಸಿದ್ದಾಳೆ ಎಂಬುದು ಒಂದು
ತಂಡದ ತರ್ಕವಾದರೆ ಇನ್ನೊಂದು ತಂಡ ಯೋಚಿಸಿದ್ದೇ ಬೇರೆ, ಅನಸೂಯಳಂಥ ಅಪ್ಸರೆ
ದ್ರಾಬೆಯಂಥ ಶಾಮಾಶಾಸ್ತ್ರಿಯನ್ನು ಪ್ರೀತಿಸುವುದುಂಟೇನು! ಒಂದೇ ಓಣಿಯವರು, ಒಂದೇ
ಕಾಲೇಜಿನಲ್ಲಿ ಓದಿಕೊಂಡೋರು… ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರು
ಲಿಂಗಭೇದವಿಲ್ಲದೆ ಜೊತೆಜೊತೆಯಾಗಿ ಅಡ್ಡಾಡಿದಾಕ್ಷಣ ಅವರಿಬ್ಬರಲ್ಲಿ ಲೈಂಗಿಕ
ಸಂಭಂದ ಕಲ್ಪಿಸಿಕೊಳ್ಳೋದು, ಅವರಿಬ್ಬರು ಪರಸ್ಪರ ಮದುವೆ ಆಗ್ತಾರೆ ಎಂದು ಊಹಿಸಿಕೊಳ್ಳೋದೇ
ಮೂರ್ಖತನವೆಂಬುದು ಹಲವರ ತರ್ಕ. ಇನ್ನು ಕೆಲವರು ಜಾರ್ಜ್ ಫರ್ನಾಂಡಿಸ್ ಬಂದ ಸಂಜೆ
ಶಾಮಾಶಾಸ್ತ್ರಿ ಆಕೆ ಮೇಲೆ ರೇಪ್ ಮಾಡಲು ಹೋದನೆಂದೂ; ಆಕೆ ತನ್ನ ಮೊಣಕಾಲಿಂದ ಅವನ
ಮರ್ಮಾಂಗದ ಮೇಲೆ ಪ್ರಹಾರ ಮಾಡಿದಳೆಂದೂ; ವಂಶಾಭಿವೃದ್ದಿ ಆಗುವುದೋ ಇಲ್ಲವೋ ಎಂದು
ಅಲುಮೇಲಮ್ಮ ಕಂಗಾಲಾಳೆಂದೂ; ವೈದ್ಯ ಮಾರ್ತಾಂಡ ಕುರುಬರ ಸೋಮಣ್ಣ ರಾತ್ರೋರಾತ್ರಿ ಲೇಹ್ಯ
ಲೇಪಿಸಿ ಇಲಾಜು ಮಾಡಿದನೆಂದೂ ಆಡಿಕೊಂಡರು. ಇಂಥ ವಾದವನ್ನು ಪುಷ್ಟೀಕರಿಸುವ ಅಥವಾ
ಅಲ್ಲಗಳೆಯುವ ರೀತಿಯಲ್ಲಿ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ಹೊಸಪೇಟೆಗೆ
ಕನ್ಯಾನ್ವೇಷಣೆಗೆ ಕರೆದುಕೊಂಡು ಹೋಗದಿದ್ದರ ಬಗ್ಗೆ ಮಾತಾಡಿಕೊಂಡರು. ಇವರೆಲ್ಲರಿಗಿಂತ
ಬಾಯಿ ಜೋರು ಮಾಡಿ ಶಾಸ್ತ್ರಿಗಳೇ ತಮ್ಮ ಮೊಮ್ಮಗ ಶಾಮನಿಗೆ ಹೊಸಪೇಟೆಯ ವೇದಾಂತ
ರಾಜಗೋಪಾಲಾಚಾರ್ಯರ ಮೊಮ್ಮಗಳು ವರಲಕ್ಷ್ಮಿಯನ್ನು ಗೊತ್ತು ಮಾಡಿರುವುದಾಗಿ ಸುದ್ದಿ
ಮಾಡಿದರು. ಈಶ್ವರ ದೇವರ ಎದುರು ಬಸವಣ್ಣನಂತೆ, ಚಾದಂಗಡಿ ಎದುರು ಬೀಡಿ
ಅಂಗಡಿಯಂತೆ ಅವರು ಸದಾ ಬೆನ್ನ ಹಿಂದೆ ಕಟ್ಟಿಕೊಂಡು ಗ್ರಾಮದ ಪ್ರತಿಷ್ಟಿತರ ಮನೆಗಳಿಗೆ
ಒಂದಲ್ಲಾ ಒಂದು ನೆವ ಹೂಡುಕಿಕೊಂಡು ಅಲೆದಿದ್ದೇ ಅಲೆದದ್ದು. ತಮ್ಮ ಮೊಮ್ಮಗನ ಮದುವೆ
ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ತಮ್ಮ ಬಗ್ಗೆ ಇರುವ ಒಂದು ನಂಬುಗೆಯನ್ನು
ಮೂಲೋತ್ಪಾಟನೆ ಮಾಡಲಿರುವುದನ್ನು ಸೂಚ್ಯವಾಗಿ ವಿಶದಪಡಿಸುವುದೇ ಅವರ ಓಡಾಟದ
ಪ್ರಮುಖ ಕಾರಣವಾಗಿತ್ತು. ರುದ್ರನಾಯಕನ ಮಗಳಿಗೂ ತಮ್ಮ ಮೊಮ್ಮಗನಿಗೂ ಯಾವುದೇ
ಸಂಬಂದವಿಲ್ಲವೆಂಬುದನ್ನು ಅವರ ಪ್ರತಿಯೊಂದು ಮಾತೂ ಸಮರ್ಥಿಸುವಂತಿತ್ತು.
ಕಲಿಯುಗದಿಂದಾಗುತ್ತಿರುವ ಉಪಟಳವನ್ನು ಶಾಮು ಸ್ವಜಾತಿ ಸ್ವಗೋತ್ರದಲ್ಲಿ
ಮದುವೆಯಾಗುವುದರ ಮೂಲಕ ತಡೆಯಲಿರುವುದನೆಂಬುದು. ತಾವು ನೋಡಿರುವ ಹುಡುಗಿ
ಸಾಮಾನ್ಯಳೇನು? ಅವಳುದಿಸಿರುವ ವಂಶ ಸಾಮಾನ್ಯವೇನು? ವೇದಾಂತಿ
ರಾಜಗೋಪಾಲಾಚಾರ್ಯರು ಹೊಸಪೇಟೆ ಅಗ್ರಹಾರದಲ್ಲಿ ಈಗಷ್ಟೊಂದು
ಸ್ತಿತಿವಂತರಲ್ಲದಿರಬಹುದು! ಒಂದು ಕಾಲಕ್ಕೆ ಅವರ ವಂಶದವರು ವಿಜಯನಗರದರಸರ
ಬಳಿ ಜ್ಯೋತಿಷ್ಯ ಸಲಹೆದಾರರಾಗಿದ್ದರು. ಆನೆಗೊಂದಿ ಬಳಿ ಇರುವ ಎರಡು ಹಳ್ಳಿಗಳನ್ನು
ಅವರಿಗೆ ಉಂಬಳಿಯಾಗಿ ನೀಡಿದ್ದರೆಂದು ವಿವರಿಸುವ ದತ್ತಿ ಶಾಸನ ತುಂಗಭದ್ರೆಯೊಳಗೆ
ಹೂತುಹೋಗಿರುವುದಂತೆ. ಕಲಿಕಾಲದ ಮಹಿಮೆ. ಆ ಎರಡು ಹಳ್ಳಿಗಳು ಎಲ್ಲಿ ಹೋದವೋ ಏನೋ? ಟಿಪ್ಪು
ಸುಲ್ತಾನನ ಕಾಲದವರೆಗಿದ್ದ ಅವರು ಸಾವಿರಾರು ಎಕರೆ ಜಮೀನನ್ನು ರೆಟ್ಟೆಯಲ್ಲಿ
ಬಲವಿದ್ದ ಶೂದ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡರಂತೆ, ಜ್ಯೋತಿಷ್ಯ
ಪಂಚಾಂಗಗಳನ್ನವಲಂಬಿಸಿಯೇ ಬದುಕಿದ ಹಿರಿಯರು ಕಿಲುಬು ಕಾಸಿಗೆ ಎಂದೂ
———————

೧೪೭
ಕೈಚಾಚಿದವರಲ್ಲವಂತೆ. ಮನೆಯಲ್ಲಿ ಲಕ್ಷ್ಮಿಯ ವಾಸನೆ ನೆಲಸಿರದಿದ್ದರೂ, ವಾಙ್ ಮೇ
ಮನಸಿ ಪ್ರತಿಷ್ಠಿತಾ ಮನೋ ಮೇ ವಾಚೇ ಪ್ರತಿಷ್ಠಿತಾ ಎಂಬ ಐತರೇಯ ಶ್ರುತಿಯಂತೆ
ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದವರಂತೆ, ಮನಸ್ಸನ್ನು ಮಾತಿನೊಳಗಿಟ್ಟುಕೊಂಡು,
ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಅಂತ ಹೇಗೋ ಒಂದು ರೀತಿ ಕಾಲ
ಹಾಕುತ್ತಿದ್ದರಂತೆ. ಶಿವ ಮತ್ತು ವಿಷ್ಣು ಅವರ ಅಶನ ವಸನಕ್ಕೆ ಯಾವುದೇ ರೀತಿಯಲ್ಲಿ
ಕಡಿಮೆಯಾಗದಂತೆ ನೋಡಿಕೊಂಡು ಬಂದಿರುವರಂತೆ, ಅಂಥ ವಂಶಸ್ಥರಾದ ವೇದಾಂತಿ
ರಾಜಗೋಪಾಲಾಚಾರ್ಯರು ಸಾಮಾಜಿಕವಾಗಿ ರಾಜಕೀಯವಾಗಿ ಒಳ್ಳೆಯ
ಪ್ರಭಾವಶಾಲಿಗಳಾಂತೆ. ಅನೇಕ ರಾಜಕಾರಣಿಗಳು ಈಗಲೂ ಅವರನ್ನು ಕೇಳದೆ ಏನೂ ಕೆಲಸ
ಮಾಡುವುದಿಲ್ಲವಂತೆ, ಅವರ ಧರ್ಮ ಪತ್ನಿಯೂ ಐದಾರು ಗಂಡುಮಕ್ಕಳನ್ನು ಹೆತ್ತು ಹೊತ್ತು
ಅಮೃತ ಘಳಿಗೆಯಲ್ಲಿ ಕಣ್ಣು ಮುಚ್ಚಿದಳಂತೆ… ತಮ್ಮ ಪುತ್ರ ಸಂತಾನವನ್ನು ಅದ್ವಿತೀಯ
ಪಂಡಿತರನ್ನಾಗಿ ಮಾಡುವ ಆಸೆಯೇನೋ ಇತ್ತಂತೆ.
ಆದರೆ ಅವು ಕಾಲ ಬದಲಾಗಿದೇಂತ ಇಂಗ್ಲೀಷು ಓದಿಕೊಂಡು ಐದಾರು ನಮೂನೆಯ
ಲಾಭದಾಯಕ ಇಲಾಖೇಲಿ ಕೆಲಸ ಮಾದುತ್ತಿದ್ದವಂತೆ. ಲಾಂಚಮುಟ್ಟುತ್ತಿರಲ್ಲಿಲ್ಲವಂತೆ.
ಕೆಟ್ಟಚಾಳಿಗಳೊಂದೂ ಇರಲಿಲ್ಲವಂತೆ. (ರಾಣಿಪೇಟೆಯ ಅನೇಕರು ಅಂದುಕೊಳ್ಳುತ್ತಿರುವಂತೆ
ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ
ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ ನಗರದ ಅನೇಕರು ಅಂದುಕೊಳ್ಳುತ್ತಿರುವಂತೆ
ಅವರಿಗೆ ನಗರದ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ
ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ನಗರದ ಹಲವರು
ಅಂದುಕೊಳ್ಳುವಂತೆ ಅವರಿಗೆ ನಗರದ ಎಲ್ಲಾ ಮಿಲಿಟರಿ ಹೋಟೆಲುಗಳು ಸಲದು ಬೀಳುತ್ತಿದ್ದವು)
ಅವರು ಮನೆಯಿಂದ ಒಯ್ಯುತ್ತಿದ್ದ ನೀರನ್ನು ಮಾತ್ರ ಕುಡಿಯುತ್ತಿದ್ದರಂತೆ (ನೆಹರೂ ಕಲೋನಿಯ
ನಿವಾಸಿಗಳು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ನಗರದ ಎಲ್ಲಾ ಬಾರ‍್ಗಳಲ್ಲಿ ಫೈಟಿಂಗ್
ಮಾಡುತ್ತಿದ್ದರಂತೆ) ಅವರು ಪರನಾರಿ ಸಹೋದರರಾಗಿದ್ದರಂತೆ. (ಗಾಂಧೀ ನಗರದ
ವಾಸಿಗಳ ಅಭಿಪ್ರಾಯದಂತೆ ಅವರೆಲ್ಲ ಇಡೀ ರಾತ್ರಿ ವೇಶ್ಯಾವಾಟಿಕೆಯಲ್ಲಿ
ಕಳೆಯುತ್ತಿದ್ದರಂತೆ) ಅವರ ಪೈಕಿ ಒಬ್ಬರು ಅಪಘಾತದಲ್ಲಿ ಸತ್ತರೆ; ಇನ್ನೊಬ್ಬರು
ಅರ್ಥವಾಗದ ಕಾಹಿಲೆಯಿಂದ ಸತ್ತರು. ಮತ್ತೊಬ್ಬ ದೇಶಾಂತರ ಹೋದ. ಮಗದೊಬ್ಬ
ಚಿತ್ತಭ್ರಮಣೆಯಾಗಿ ಕೋದಂಡರಾಮ ದೇವಸ್ಥಾನದ ಬಳಿ ದೇಹಿ ಎಂದು ಬಂದವರಿಗೆಲ್ಲ
ವರನೀಡುತ್ತ ಯೋಗಿಯಾಗಿರುವನು. (ಅವರಿಗೆಲ್ಲ ಯುಕ್ತ ವಯಸ್ಸಿನಲ್ಲಿ ಮದುವೆ
ಮಾಡಿಬಿಡಬಹುದಿತ್ತು. ಆದರೆ ಕೊಡೋರ‍್ಯಾರು? ಮಾಡಿಕೊಳ್ಳೋರ‍್ಯಾರು?) ಉಳಿದವನೊಬ್ಬನಿಂದಲೂ
ಅಂತಿಮ ಯಾತ್ರೆ ಮಾಡಿಸಿಕೊಳ್ಳುವ ಪುಣ್ಯ ಆಚಾರ್ಯರ ಹಣೆಯಲ್ಲಿ ಬರೆದಿರಲಿಲ್ಲ. ಅವನೂ
ಎರಡು ವರ್ಶಗಲ ಹಿಂದೆ ವಾತಪಿತ್ತ ಕಫವೇ ಮೊದಲಾದ ರೋಗಗಳ ಜೊತೆಗೆ ದೇಹದ
ಬಲಪಾರ್ಶ್ವ ಏನಕೇನ ಬಿದ್ದು ಹೋಗಲು ಅವನು ನರ ರೋಗ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದು
ಬಿಡಬೇಕೆ? ಒಟ್ಟಿನಲ್ಲಿ ತಮ್ಮ ಪ್ರಾರಬ್ದ! ಸೊಸೆಯನ್ನೂ ಮೊಮ್ಮಗಳನ್ನೂ ಜ್ಯೋತಿಷ್ಯದ
ಸಹಾಯದಿಂದ ಸಾಕಿ ಸಲಹಬೇಕಾಗಿ ಬಂದಿರೋದು! ಮೊಮ್ಮಗಳು ವರಲಕ್ಶ್ಮಿ ಪರಪುರುಶರ
ಕಡೆ ಎಂದೂ ಮುಖ ಎತ್ತಿ ನೋಡಿದಾಕಿಯಲ್ಲ! ಸದಾ ಅವನತ ಮುಖಿ, ಆಚಾರ ವಿಚಾರದಲ್ಲಿ
ತುಂಬ ಕಟ್ಟಿನಿಟ್ಟು, ಪ್ರಾಣ ಬೇಕಾದರೂ ಬಿಟ್ಟಾಳು, ಆದರೆ ಸಂಪ್ರದಾಯವನ್ನು ಮಾತ್ರ
ಬಿಡಲಾರಳು, ಸ್ವಲ್ಪ ಸ್ಥೂಲದೇಹಿ ಇರಬಹುದು, ಆದರೆ ಆಕೆಯ ಮುಖದಲ್ಲಿ ಎಂಥ ತೇಜಸ್ಸೂ
ಏನು ಕಥೆ? ಮೂಗು ಸ್ವಲ್ಪ ಮೊಂಡಿರಬಹುದು. ಆದರೆ ಕಣ್ಣುಗಳಲ್ಲಿ ಎಂಥ ಬೇಳಕು ಏನು
ಕಥೆ? ಮೇಲ್ದವಡೆಯ ಮುಂದಿನೆರಡು ಹಲ್ಲುಗಳು ಕೆಳದುಟಿಗಳ ಮೇಲೆ ಕೂಡ್ರುತ್ತಿರಬಹುದು.
ಆದರೆ ಜಡೆ ಎಷ್ಟುದ್ದಾ
———————–

೧೪೮
ಏನು ಕಥೆ? ಜನಿಸಿರೋದೂ ಸ್ವಾತಿ ನಕ್ಷತ್ರದಲ್ಲಿ,
ರಜಸ್ವಲೆಯಾಗಿರುವುದೂ ಸ್ವಾತಿ ನಕ್ಷತ್ರದಲ್ಲೇ. ಪಂಚಮಹಾ ಪತಿವ್ರತೆಯರಂತೆ ಈಕೆಯೂ
ಪತಿವ್ರತೆಯಾಗುತ್ತಾಳೆಂಬುದರ ಬಗ್ಗೆ ಶಾಸ್ತ್ರಿಗಳು ಹೇಳಿಕೊಂಡಿದ್ದೇ ಹೇಳಿಕೊಂಡಿದ್ದು.
ಎಲ್ಲಕ್ಕಿಂತ ಮುಖ್ಯವಾಗಿ ತಮಗೂ ರಾಜಗೋಪಾಲಾಚಾರ್ಯರಿಗು ನಡುವೆ ಅಂಥ
ವ್ಯತ್ಯಾಸವಿರದಿದ್ದುದು, ತಮ್ಮದು ಪ್ರಸಿದ್ಧ ವಂಶ, ಅವರದ್ದೂ ಪ್ರಸಿದ್ಧ ವಂಶ, ತಮ್ಮ
ಮಗನೂ ದುರ್ಮರಣವನ್ನಪ್ಪಿದ, ಅವರ ಮಕ್ಕಳೂ ಅಕಾಲ ದುರ್ಮರಣಕ್ಕೆ ತುತ್ತಾಗಿರುವರು.
ತಮಗೂ ಒಬ್ಬ ವಿಧವೆ ಸೊಸೆ ಇರುವಳು, ತಮಗೂ ಒಬ್ಬ ಸಚ್ಚಾರಿತ್ರ್ಯದ ಮೊಮ್ಮಗ ಇರುವನು,
ಅವರಿಗೂ ಸುಶೀಲೆಯಾದ ಮೊಮ್ಮಗಳಿರುವಳು. (ಆಕೆ ತಮ್ಮ ಶಾಮನಿಗಿಂತ ಒಂದೆರಡು ವರ್ಷ
ಹಿರಿಯಳಿರಬಹುದು, ಗಂಡನನ್ನು ಸುಪರ್ದಿನಲ್ಲಿಡುವುದಕ್ಕೆ ವಯೋಮಿತಿ
ಹೆಚ್ಚಿದ್ದರಾಗುವುದೇನು!) ಜ್ಯೋತಿಷ್ಯ, ಕರಣ. ಯೋಗ, ತಿಥಿ, ವಾರ, ನಕ್ಷತ್ರಗಳೇ
ಮೊದಲಾದ ಪಂಚಾಗಗಳಲ್ಲಿ ತಾವಿಬ್ಬರೂ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವವರು,
ತಮ್ಮದು ಶಾಸ್ತ್ರಿಗಳ ವಂಶ, ಅವರದು ಆಚಾರ್ಯರ ವಂಶ, ಎಲ್ಲಕ್ಕಿಂತ ಮುಖ್ಯವಾದ
ಸಂಗತಿ ಎಂದರೆ ಆಚಾರ್ಯರು ರಾಜಕಾರಣಿಗಳ ಮೇಲೆ ತಮ್ಮ ಪ್ರಾಭಾವ ಬೀರಿ ಶಾಮನಿಗೆ
ಸರಕಾರಿ ನೌಕರಿ ಸಿಗದಂತೆ ಮಾಡಲೊಪ್ಪಿರುವುದು. ವಿವಾಹ ಪೂರ್ವ ಅಥವಾ
ವಿವಾಹೋತ್ತರವಾಗಿ ಮೊಮ್ಮಗ ಶಾಮ ಪ್ರಸಿದ್ಧ ವೈದಿಕನಾಗಿ ಛಪ್ಪನ್ನಾರು ಹಳ್ಳಿಗಳಲ್ಲಿ
ಹೆಸರುವಾಸಿಯಾದೊಡನೆ ತಾವು ಪರಮಾತ್ಮನ ಪರಮ ಸಾಯುಜ್ಯವನ್ನು ನಿಶ್ಚಿಂತೆಯಿಂದ
ಪಡೆದುಬಿಡುವುದು. ಇದಕ್ಕೆಲ್ಲ ಶುಭಸೂಚಕವಾಗಿ ಮನೆ ಮುಂದಿನ ಕಟ್ಟೆಯೊಳಗಿನ
ತುಳಸಿಗಿಡ ಮೈತುಂಬ ಚಿಗುರು ಮುಡಿದುಕೊಂಡಿರುವುದು, ಕೋಗಿಲೆಯೊಂದು ಶಾಸ್ತ್ರಿಗಳು ಗಾಯತ್ರಿ
ಜಪಿಸುವಾಗ ಮನೆ ಮುಂದಿನ ಕಣಗಿಲೆ ಗಿಡದೊಳಗೆ ಕೂತು ಕುಹೂ ಕುಹೂ ಎಂದು ಕೂಗುತ್ತಿರುವುದು,
ಇದೆಲ್ಲಕ್ಕಿಂತ ಮುಖ್ಯವಾಗಿ ಕಾಮೋಷಿ ಎಂಬ ದರಿದ್ರ ಅಪಶಕುನದ ಬೆಕ್ಕು ಮನೆಯಿಂದ
ಮೊನ್ನೆಯಿಂದಲೇ ತೊಲಗಿರುವುದು. ಮದುವೆಯ ಕಲ್ಪನೆಯಲ್ಲಿ ಗೃಹಕೃತ್ಯಗಳನ್ನು ಹಚ್ಚಿಸಿಕೊಂಡು
ಅಲುಮೇಲಮ್ಮ ಸದಾ ನಿಮಗ್ನಳಾಗಿದ್ದರೆ, ಆಕೆಯ ಸುಪುತ್ರ ರಣಧೀರ ಕಂಠೀರವ
ನೌಕರಿಗಳಿಗೆ ಅರ್ಜಿ ಹಾಕುವ ನೆಪದಲ್ಲಿ ಅನಸೂಯಳ ಕಣ್ಣಿಗೆ ಬೀಳಕೂಡದೆಂದು ನಿರ್ಧರಿಸಿ
ಕೋಣೆಯೊಳಗೆ ಹಗಲೆಲ್ಲ ಅವಿತುಕೊಂಡಿರುವನು. ಇನ್ನೂ ಶಾಸ್ತ್ರಿಗಳು ಮನೆಯಲ್ಲಿ ತುಳಸೀ
ರಾಮಾಯಣ, ತೊರವೆ ರಾಮಾಯಣ ಅಂತ ಮನೇಲಿ ಕೂತುಕೊಂಡರಾಗುತ್ತದೆಯೇ?
ಗ್ರಾಮದ ಬಹುಪಾಲು ಮಂದಿ ಈ ‘ಜನ್ಮ ಜನ್ಮಲ ಅನುಬಂಧಂ’ದ ಬಗ್ಗೆ
ಚರ್ಚಿಸಿಕೊಂಡರಾದರೂ ಇದನ್ನೇ ತಮ್ಮ ಚರ್ಚೆಯ ಮುಖ್ಯ ಭಾಗವನ್ನಗಿ ಸ್ವೀಕರಿಸಲಿಲ್ಲ
ಎಂಬುದು ಉಲ್ಲೇಖಾರ್ಹ ಸಂಗತಿ. ತಾವು ಗುರಿ ಇಟ್ಟವರ ಬದುಕಿನಲ್ಲಿ ಸಂಭವಿಸಬಹುದಾದ
ಅವಘಡಗಳ ಬಗ್ಗೆ ಸದಾ ತಲೆಕೆಡೀಸಿಕೊಳ್ಳುವ ಜನ ಶಾಸ್ತ್ರೋಕ್ತವಾಗಿ ಶಾಮ
ಮದುವೆಯಾಗುವುದರ ಬಗ್ಗೆ ತಾವ್ಯಾಕೆ ತಲೆ ಕೆಡಸಿಕೊಂಡಾರು? ಅವನು ಪ್ರೇಮವೆಂಬ
ಖೆಡ್ಡಾದಲ್ಲಿ ಬಿದ್ದು ಲಿಬಿಲಿಬಿ ಒದ್ದಾಡುವುದು, ಅನಸೂಯಳ ಸವಿನೆನಪಿನಲ್ಲಿ ಮೊಳ‍ಉದ್ದ
ಗಡ್ಡ ಬಿಟ್ಟು, ಮಲಿನ ವಸನಂ ತೊಟ್ಟು, ಕೃಶಾಂಗನಾಗಿ, ನಿಡುಸುಯ್ಲಿಡುತ್ತ,
ಗೃಹಕೃತ್ಯಗಲಂ ಪರಿತ್ಯಾಜ್ಯಂ ಮಾಡಿ ಅನುಭಾವಿಯಂತೆ ಹಗಲಿರುಳುಗಳ ನಡುವೆ ಅರ್ಥ
ಕಳೆದುಕೊಂಡು ಅಡ್ಡಾಡುತ್ತಿದ್ದಾಗ ಮಾತ್ರ ಅವನು ಮಾತಿನ ಆಟಿಕೆಯಾಗುವುದು ಸಾಧ್ಯ. ಕವಿ
ಹೃದಯಿಯಾಗಿರುವ ಅವನ ಹೆಂಡತಿಯಾಗಲಿರುವ ಕಾವ್ಯ ಕನ್ನಿಕೆ ಹೇಗಿರಬಹುದೆಂಬ
ಕುತೂಹಲ ಕೆಲವರಿಗೆ ಮಾತ್ರ ಹುಟ್ಟಿದ್ದು
—————

೧೪೯
ಅದೃಶ್ಯ ರೀತಿಯಲ್ಲಿ ಹೆಂಡತಿಯನ್ನು
ಪಕ್ಕದಲ್ಲಿಟ್ಟುಕೊಂಡು ಹೋಗುತ್ತಿದ್ದ ಬರುತ್ತಿದ್ದ ಶಾಮ ಹಲವರಿಗೆ ಸಿಪಾಯಿಯಂತೆ
ಗೋಚರಿಸಿದ್ದುಂಟು. ಇನ್ನೂ ಪರಿಶೀಲಾತ್ಮಕತೆಯಿಂದ ನೋಡಿದವರಿಗೆ ಅವನು ಹಲವು
ರೂಪಗಳಲ್ಲಿ ಗೋಚರಿಸಬಹುದಾಗಿದ್ದ. ಜನ ಕೂಡ ಅದಕ್ಕೂ ರೆಡಿ ಇದ್ದರು, ಆದರೆ
ಅವರೆಲ್ಲರ ಗಮನವನ್ನು ಹರಣಮಾಡುತ್ತಿರುವ ರೀತಿಯಲ್ಲಿ ಘಟನೆಯೊಂದು ನಡೆಯಿತು.
ಹೆಚ್ಚು ತುಲನಾತ್ಮಕವಾಗಿ ನೋಡಿದವರಿಗೆ ಶಾಮಾಶಾಸ್ತ್ರಿಗಿಂತ ನೂರುಪಟ್ಟು
ಮಿಗಿಲೆಂಬಂತೆ ಗೋಚರಿಸುವ ರಘುರಾಮ ಬಂದಿರೋದು, ಅನಸುಯಾಳನ್ನು ಅವನು
ಮದುವೆಯಾಗಲಿರುವುದು ಇದೆಲ್ಲ ಈ ಎರಡು ಮೂರು ದಿನಗಳಲ್ಲಿ ಹಳೆಯ ವಿಷಯವಾಗಿ
ಬಿಟ್ಟಿತ್ತು. ಅವರಿಬ್ಬರ ಬಗ್ಗೆ ಜನ ಮಾತಾಡೋದನ್ನೇ ಮಾತಾಡಿ ಮುಗಿಸಿಬಿಟ್ಟಿದ್ದರಷ್ಟೆ,
ಆದರೆ ರಘುರಾಮನೆಂಬುವನು ತನ್ನದೇ ಆದ ರೀತಿಯಲ್ಲಿ, ತನಗೆ ತಿಳಿದೋ; ತಿಳಿಯದೆಯೋ
ಜನಸಮೂಹದ ಗಮನವನ್ನು ತನ್ನ ಕಡೆ ಸೆಲೆದುಕೊಂಡಿದ್ದ. ಅವನು ಬೆಂಗಳೂರಿನಲ್ಲಿ
ಏನೆಂಬುದರ ಬಗ್ಗೆ ಜನ ಸಾಕಷ್ಟು ಮಾತಾಡಿಕೊಂಡರು. ಕೆಲವರು ಸಮಯ ಕಲ್ಪಿಸಿಕೊಂಡು
ಅವನನ್ನು ಸಂಧಿಸಿ, ವಿಧಾನಸೌಧ ನೋಡಿದ್ದೀರಾ ಎಂದೋ, ಲಾಲ್‍ಬಾಗೆಂಬುದು ಈ ಊರಷ್ಟು
ಅಗಲ ಐತಂತೆ ಹೌದಾ ಎಂದೋ; ಅಲ್ಲೆಲ್ಲ ಕಾರ್ ಜೀಪುಗಳು ಇರುವೆ ಅಡ್ಡಾಡಿದಂತೆ
ಅಡ್ಡಾಡ್ತವಂತೆ ನಿಜವೇ? ಎಂದೋ ಬಹುವಚನ ಗುಣವಿಷೇಶಣಗಳನ್ನು ಸೇರಿಸಿ ಕುತೋಹಲ
ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಲ್ಲಿ ಹುಡುಗಿಯರು
ಜೀನ್ಸು ಪ್ಯಾಂಟು ತೊಡುತ್ತಿರುವುದರ ಬಗ್ಗೆ; ಮುದುಕಿಯರು ಪಂಜಾಬಿ ಡ್ರೆಸ್ ತೊಡುತ್ತಿರುವುದರ
ಬಗ್ಗೆ; ಗಂಡು ಹೆಣ್ಣು ಸಾರ್ವಜನಿಕ ಪರ್ಸ್ಪರ ಮುದ್ದು ಕೊಡುಕೊಳ್ಳುತ್ತಿರುವುದರ ಬಗ್ಗೆ; ಅಲ್ಲಿ
ಐದು ನಿಮಿಷಕ್ಕೊಂದು ಕೊಲೆ ಆತ್ಮಹತ್ಯೆ ಪ್ರಕರಣಗಳು ಪ್ರೇಮಪ್ರಕರಣಗಳಷ್ಟೇ
ಸಲೀಸಾಗಿ ನಡೆಯುತ್ತಿವೆ ಎಂಬುದರ ಬಗ್ಗೆ; ಸಿನಿಮಾ ಯಾಕ್ಟರುಗಳ ಬಗ್ಗೆ, ಅದರಲ್ಲೂ
ಮುಖ್ಯವಾಗಿ ರಾಜಕುಮಾರ್ ಬಗ್ಗೆ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಡುತ್ತಿದ್ದರು. ರಘುರಾಮ
ಮಾತ್ರ ಯಾವ ಪ್ರಶ್ನೆಗೂ ಬೇಸರಪಟ್ಟುಕೊಳ್ಳದೆ ಮಸಾಲೆ ಬೆರೆಸಿ ಉತ್ತರ ನೀಡಿಅವರನ್ನು
ಸಂತೃಪ್ತಿಗೊಳಿಸಿ ಗ್ರಾಮದಲ್ಲಿ ಪ್ರತಿಷ್ಟೆ ಹೆಚ್ಚಿಸಿಕೊಂಡಿದ್ದ. ಇವೆಲ್ಲಕ್ಕೂ
ಕಳಸಪ್ರಾಯವಾಗಿ ಒಂದು ಘಟನೆ ನಡೆಯಿತು. ನೇರವಾಗಿ ನೋಡುವವರಿಗೆ ಇದೇನು ಗಮನಾರ್ಹ
ಘಟನೆ ಎನಿಸದಿರಬಹುದು.
ಸದರೀ ಗ್ರಮದ ಉಡುಪಿ ಶ್ರೀಕೃಷ್ಣ ಭವನವೆಂಬುದು ಇಪ್ಪತ್ತೆರಡು ನಮೂನೆಯ
ದೋಸೆಗಳಿಗೆ ಫೇಮಸೆಂದು ಬಂದ ಮಾರನೆ ದಿನವೇ ಗೊತ್ತಾಯಿತು. ಅವನು ಮೊದಲೇ ದೋಸೆ ಎಂದರೆ
ಮೂಗು ಕೊಯ್ಯಿಸಿಕೊಳ್ಳುತ್ತಿದ್ದಂಥವನು. ಚಿಕ್ಕಂದಿನಿಂದಲೇ ಉಂಡಾಡಿ ಅಮರಪ್ಪ ತೋರಿಸಿದ
ಮಸಾಲ ದೋಸೆಗೆ ಆಸೆಪಟ್ಟು ಸೂಲಗಿತ್ತಿ ಲಚ್ಚಮ್ಮನ ಮಗಳು ರೇಣುಕಾಗೂ ಓಬಳಾಪುರದ
ಜಗಳಗಂಟಿ ತಿಂದಪ್ಪನ ಮಗ ಬಸವರಾಜುಗೂ ನಡುವೆ ಗೊಪ್ಯಾತಿಗೋಪ್ಯವಾಗಿ ನಡೆಯುತ್ತಿದ್ದ
ಪ್ರಣಯದಾಟವನ್ನು ಪತ್ತೆ ಹಚ್ಚಿ ಏಕಕಾಲಕ್ಕೆ ದೋಸೆ ಮತ್ತು ಮಾವನ ಕೈಲಿ ಅಭೂತಪೂರ್ವ
ಒದೆ ತಿಂದು ಹೆಸರುವಾಸಿಯಾಗಿದ್ದಂಥವನು. ಸಮಾಜ ಬದಲಾವಣೆಯ ಕ್ರಾಂತಿಕಾರಕ
ಕೆಲಸದ ನಡುವೆಯೂ ಯಾವ್ಯಾವ ಹೋತೆಲಲ್ಲಿ ಯವ್ಯಾವ ನಮೂನೆಯ ದೋಸೆ ಮಾಡುವರು ಎಂದು
ಪತ್ತೆ ಹಚ್ಚುವಲ್ಲಿ ನಿಸ್ಸೀಮನಾಗಿರುವನು. ‘ಏನಯ್ಯಾ ನಿನಗೆ ಕ್ರಾಂತಿಗಿಂತ ದೋಸೇನೆ
ಹೆಚ್ಚಾಯ್ತಲ್ಲ’ ಎಂದು ವ್ಯಂಗ ಆಡಿಸಿಕೊಂಡಿರುವನು, ಯಾವನೋ ಅಸಮಾನತೆಯನ್ನು
———————-

೧೫೦
ಹೋಗಲಾಡಿಸುವ ಮೊದಲು ಗರಿಗರಿ ಎನ್ನುವ ಮಸಾಲೆ ದೋಸೆಯನ್ನು ತಿನ್ನಲೇಬೇಕು. ಮಸಾಲೆ
ತಿನ್ನದ ಹೊರತು ಅವನಿಗೆ ಮಾರ್ಕ್ಸ್, ಏಂಗೆಲ್ಸ್, ಕ್ಯಾಸ್ಟ್ರೋ; ಚಿಗುವೇಲಾ ಯಾರೂ ಅರ್ಥವಾಗುವುದೇ
ಇಲ್ಲ. ಹೋಗಲಿ ಪೊಂಗಲ್ ತಿಂದ ಮೇಲಾದರು ಗಾಂಧೀಜಿ ಅರ್ಥವಾಗುವುದು ಬೇಡವೆ? ದೋಸೆ ಮಾಡದ
ಹೋಟೆಲ್‍ಗಳು ಅವನ ದೃಷ್ಟಿಯಲ್ಲಿ ಬಲಪಂಥಕ್ಕೆ ಸೇರಿದವುಗಳು. ಯಾವುದೇ ಹೊಟೆಲ್ಲಿಗೆ
ಹೋದರೂ ಅವನ ಕಣ್ಣು ಕೆಂಪಗೆ ಮಾಡಿಕೊಂಡು ನೋಡುವುದು ತಿಂಡಿ ಹೆಸರುಗಳ ರೇಟಿನ ಬೋರ್ಡನ್ನು.
ದೋಸೆಗೆ ಬೋರ್ಡಿನಲ್ಲಿ ನೀಚಸ್ಥಾನ ದೊರಕಿದ್ದರಂತೂ ಅವನನ್ನು ಸಂತೈಸಲು ಕಾರ್ಮಿಕ
ಖಾತೆಯ ಸಚಿವಾಲಯವೇ ಬರಬೇಕಿತ್ತು. ತಾನು ಕಾರ್ಲ್‍ಮಾರ್ಕ್ಸ್ ದಯದಿಂದ ಏನಾದರೂ
ಮುಖ್ಯಮಂತ್ರಿ ಆದರೆ ಮಾಡುವ ಮೊಟ್ಟಮೊದಲನೆಯ ಕಾರ್ಯವೆಂದರೆ ಶಾಲಾ ಮಕ್ಕಳ
ಮಧ್ಯಾಹ್ನದ ಉಪಹಾರಕ್ಕೆ ಮಸಾಲೆ ದೋಸೆಯನ್ನು ಒದಗಿಸುವುದಾಗಿ ತಮಾಷೆಗೆ
ಹೇಳಿಕೊಳ್ಳುವುದುಂಟು. ಅವರು ಸದರೀ ಗ್ರಾಮಕ್ಕೆ ಬಂದಾಕ್ಷಣ ತನ್ನಕ್ಕ ದೋಸೆ ಮಾಡುವಳೆಂದು
ಬಗೆದಿದ್ದ. ಈ ದೇಶದ ಶೂದ್ರರಿಗೆ ದೋಸೆ ಬಗ್ಗೆ ಕೊಂಚವಾದರೂ ಪರಿಜ್ಞಾನ ಇರುವುದು
ಬೇಡವೇ? ಎಂದು ಮನಸ್ಸಿನಲ್ಲಿ ನಿರಾಸೆಯಿಂದ ಗೊಣಗಿಕೊಂಡಿದ್ದ. ಅನಸೂಯಾಲನ್ನು ತಾನು
ಮದುವೆಯಾಗಲಿರುವುದು ಖಚಿತವಾದ ತಕ್ಷಣ ಅವನು ಆಕೆಗೆ ಹಾಕಿದ ಮೊದಲನೆ ಪ್ರಶ್ನೆ
ಎಂದರೆ ದೋಸೆ ಮಾಡಲು ಬರುವುದೇನು? ಎಂದು. ಮಾಡಲು ಬಂದರೆ ಎಷ್ಟೆಷ್ಟು ಪ್ರಮಾಣದಾಲ್ಲಿ
ಅಕ್ಕಿ; ಉದ್ದಿನಬೇಳೆ ಹಾಕುತ್ತಾರೆ, ರುಬ್ಬಿದ ಹಿಟ್ಟು ಬೆಳಗಿನ ಹೊತ್ತಿಗೆ ಊದಿಕೊಳ್ಳಲು
ಕಾರನವೇನು? ಎಷ್ಟು ನಮೂನೆಯ ದೋದೆಗಳನ್ನು ಮಾಡಲು ಬರುತ್ತದೆ? ಇತ್ಯಾದಿ ಇಂಥ
ಜುಜುಬಿ ಪ್ರಶ್ನೆಗಳಿಂದ ರೋಸಿ ಹೋಗಿ ಅನಸೂಯ”ಕ್ರಾಂತಿಕಾರಕ ಬದಲಾವಣೆ ಬರಬೇಕಿರೋದು
ದೋಸೆಯಲ್ಲೋ! ಸಮಾಜದಲ್ಲೋ” ಎಂದು ಸಿಡಿಮಿಡಿಗೊಂಡಿದ್ದಳು. ದೋಸೆಯ ಮಹತ್ವ ಅರ್ಥವಾಗುವುದು
ಮದುವೆಯಾದ ಮೇಲೆ ಎಂದು ತನಗೆ ತಾನು ಸಮಾಧಾನಪಡಿಸಿಕೊಂಡಿದ್ದ. ಇಂಥ ರಘು ಸದರೀ
ಗ್ರಾಮದ ಹೊಟೆಲುಗಳ ತಿಂಡಿ ಜಾಯಮಾನದ ಬಗ್ಗೆ ಯೋಚಿಸತೊಡಗಿದ್ದು ತುಂಬ ತಡವಾಗಿಯೇ
ಎನ್ನಬೇಕು. ಸದರೀ ಗ್ರಾಮದ ಬಹುತೇಕ ಹೊಟಲುಗಳಲ್ಲೆಲ್ಲ ಬರೀ ಮೊಂಡಾಳು ವಗ್ಗರಣೆ
ಮೆನಸಿನಕಾಯಿ ಪುಗ್ಗಿ ಎಂದರೆ ಹಣೆಹಣೆ ಚಚ್ಚಿಕೊಳ್ಳುವುದೇನು! ಗ್ರಾಮದ ಸರ್ವತೋಮುಖ
ಅಭಿವೃದ್ಧಿ ಕುಂಠಿತವಾಗಿರುವುದು ಸಾರ್ವಜನಿಕವಾಗಿ ದೋಸೆ ಅಪಮೌಲ್ಯಗೊಂಡಿರುವುದು ಎಂದು
ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದು ಮಾಜಿ ಪುರಸಭಾ ಅಧ್ಯಕ್ಷರಾದ ಶಿವಪೂಜೆ
ಕೊಟ್ರಗೌಡರ ಎದುರಿಗೆ, ಗೌಡರು ಎಂದರೆ ಸಾಮಾನ್ಯರಗಿರಲಿಲ್ಲ. ಬೆಂಗಳುರನ್ನು
ಸರಕಾರಿ ಖರ್ಚು ವೆಚ್ಚದಲ್ಲಿ ನೋಡಬೇಕೆಂದೇ ಅವರು ಸ್ಥಳೀಯ ರಾಜಕಾರಣದಲ್ಲಿ ಆಸಕ್ತಿ
ವಹಿಸಿದ್ದು. ಸಾವಿರಾರು ರುಪಾಯಿ ಖರ್ಚು ಮಾಡಿ ಎರಡುಸಾರಿ ಪುರಸಭಾ ಅಧ್ಯಕ್ಷರಾಗಿ
ಆಯ್ಕೆಗೊಂಡರೂ ಆ ಸುವರ್ಣಾವಕಾಶ ಕೂಡಿ ಬಂದಿರಲಿಲ್ಲ. ಒಮ್ಮೆ ಅಂಥ ಅವಕಾಶವೇನೊ
ಬಂಥು, ಆದರೆ ತಮ್ಮ ಕಟ್ಟಾ ಎದುರಾಳಿ ಉಪಾಧ್ಯಕ್ಷ ಸೂರಿಗಾಡು ಇಲ್ಲಸಲ್ಲದ
ಮಾತುಗಳಿಂದ ಎಗರಾಡಿ ಬೆಂಗಳೂರಿಗೆ ಹೋಗಿ ಬಂದು ಬಿಡುವುದೇನು? ಊರಮುಂದಿನ ಹತ್ತೆಕರೆ
ಮಸಾರೆ ಹೋದರೂ ಚಿಂತೆ ಇಲ್ಲ ಈ ಸಾರಿ ಎರಡನೇ ವಾರ್ಡಿಗೆ ನಿಂತುಕೊಂಡು ಬಿಡ್ರಿ ಎಂದು ಅದೇ
ಸೂರಿಗಾಡು ಪುಸಲಾಯಿಸಿದ್ದುಂಟು. ಈ ಸಾರಿ ರಾಜ್ಯದ ಪುರಸಭಾ ಅಧ್ಯಕ್ಷರುಗಳು
ರಾಜಧಾನಿ ಬೆಂಗಳೂರಿಗೆ ಹೋಗಿ ಬರುವ ಖರ್ಚು ಭರಿಸಲು ಸರಕಾರ ಸಿದ್ಧವಿದೆ ಎಂದು
ಸತ್ಯಣ್ಣ ಶೆಟ್ಟಿ ಪಂಪು ಹೊಡೆದಿದ್ದುಂಟು. ಆದರೆ ಪ್ಯಾರಲಿಸಿಸ್ ಸ್ಟ್ರೋಕ್
———————-

೧೫೧
ಹೊಡೆಸಿಕೊಂಡಿರುವ ಗೌಡರು ಎಲೆಕ್ಷನ್‍ಗೆ ನಿಲ್ಲಬೇಕೆಂದಿದ್ದರು. ಹತ್ತೆಕರೆ ಹೊಲ ಮಾಡುವ ಉಪದ್ವಾನ
ನಡೆಸಿದ್ದರು. ಆದರೆ ಮನೆ ಮಂದಿ ಸುಮ್ಮರಿರಬೇಕಲ್ಲ! ಖಡಾಖಂಡಿತವಾಗಿ ತಡೆದು
ಮಂಚದಮೇಲೆ ಕುಕ್ಕರು ಬಡಿದಿದ್ದರು. ಮಂಚದ ಮೇಲೆ ‘ಉಮಹೇ’ ಮಾಡಿಕೊಳ್ಳುತ್ತಿದ್ದ ಗೌಡರಿಗೆ
ಸದಾ ಬೆಂಗಳೂರಿನದೇ ಕನಸು. “ಇಲಾಜಿಗಾದರೂ ಬೆಂಗಳೂರಿಗೆ ಕರೆದುಕೊಂಡು ಹೋಗ್ರೋ” ಎಂದು
ತನ್ನ ಸಂತಾನವಾದ ಪಂಚಪಾಂಡವರನ್ನು ಪೀಡಿಸುತ್ತಿದ್ದುದುಂಟು, ಮುಂದೊಂದು ದಿನ
ಸಾಯಲಿರುವ ವ್ಯಕ್ತಿಗೆ ಬೆಂಗಳೂರು ಕರೆದೊಯ್ದು ಇಲಾಜು ಮಾಡಿಸಲೇನು ಅವರು ದಡ್ಡರೇ?
ರಘುರಾಮ ಎಂಬುವನು ಬೆಂಗಳೂರಿಂದ ಬಂದಿರುವನೆಂದೂ; ಅವನು ತಮ್ಮ ಖಾಸಾದೋಸ್ತು
ರುದ್ರನಾಯಕನ (ರುದ್ರನಾಯಕನಿದ್ದಿದ್ದರೆ ತಾನೀ ಸ್ಥಿತಿಯಲ್ಲಿ ಬಿದ್ದಿರಬೇಕಿತ್ತೇ?)
‘ಸಾಲ’ನೆಂದು ತನ್ನ ರಾಜಕೀಯ ಗುರು ಕುರಕುಂದಿ ಈರಣ್ಣನಿಂದ ತಿಳಿದುಕೊಂಡು ಮನೆಗೆ ಕರೆ
ಕರೆಸಿಕೊಂಡು ಬೆಂಗಳೂರಿನ ವೈವಿಧ್ಯಮಯ ಬದುಕಿನ ಬಗ್ಗೆ (ಮೌಖಿಕವಾಗಿ+ಲಿಖಿತವಾಗಿ)
ವಿಚಾರಿಸಿ ತಮ್ಮ ತಿಳುವಳಿಕೆ ಹೆಚ್ಚಿಸಿಕೊಂಡಿದ್ದರು. ಪ್ರಾಧಾನ ಮಂತ್ರಿಗಳ ಬಳಿ
ದುಭಾಷಿಗಳಿರುವಂತೆ ಸಹಾಯಕವಾಗಿ ಈರಣ್ಣ ಬೇರೆ ಇದ್ದನಲ್ಲ. ಗೌಡರೂ ಎಳೆ
ಬಾಲಕರಂತೆ ರಾಜಕುಮಾರ‍್ನ ನೋಡಿದ್ದೀಯಾ? ಮುಟ್ಟಿದ್ದಿಯಾ? ಮಾತಾಡಿಸಿದ್ದೀಯಾ? ಎಂದು
ಕೇಳಿದರು; ಅದಕ್ಕೆಲ್ಲ ‘ಹ್ಹೂಂ’ ಅಂದು ರಘು ಸದರಿ ಗ್ರಾಮದ ಜನರ ತಿಂಡಿ ಅಭಿರುಚಿ ಬಗ್ಗೆ
ಚರ್ಚೆ ಆರಂಭಿಸಿದ್ದ. ಈ ಹಂತದಲ್ಲಿಯೇ ಗೌಡರು ದೇಶ ವಿದೇಶಗಳಲ್ಲಿ ದೋಸೆಗೆ
ಹೆಸರಾಗಿರುವ ಉಡುಪಿ ಶ್ರೀಕೃಷ್ಣಭವನದ ಸುಳುವು ನೀದಿದ್ದರು. ಉದುಪಿಯ ಶ್ರೀಕೃಷ್ಣನ
ದರ್ಶನಾಕಾಂಕ್ಷಿಯಾಗಿ ಮಠದ ಬೆನ್ನು ಗೋಡೆಯಲ್ಲಿ ಕನಕದಾಸರು ಕನ್ನ ಕೊರೆದಂತೆ
ಗ್ರಾಮದ ಅನೇಕರು ದೋಸೆ ತಿನ್ನುವ ಹೆಬ್ಬಯಕೆಯಿಂದ ಹೋಟೆಲನ್ನು ಅದರ ನವರಂದ್ರಗಳ
ಮೂಲಕ ಪ್ರವೇಶಿಸುತ್ತಿರುವರೆಂದೂ ವಿವರಿಸಿದರು. ಆಗಲೇ ನಮ್ಮ ‘ಯ್ಯಾಂಟಿ ಹೀರೋ’
ರಘುರಾಮ ಉಡುಪಿ ಶ್ರೀ ಕೃಷ್ಣಭವನದ ದೋಸೆಗಳನ್ನು ಒಂದು ಕೈನೋಡಿಕೊಳ್ಳಬೇಕೆಂದು
ಶಪಥ ಮಾಡಿದ್ದು.
ದೋಸೆ ಸೇವನೆಗೆ ಮಾಮೂಲು ರೀತಿಯಲ್ಲಿ ಹೋಗುವುದುಂಟೇನು? ರಘು ಸಫಾರಿ ಡ್ರೆಸ್
ತೊಟ್ಟುಕೊಂದು, ಬಗಲಲ್ಲಿ ಕಾರ್ಲ್‍ಮಾರ್ಕ್ಸ್‍ನ ದಾಸ್ ಕೆಪಿಟಲ್ ಇಟ್ಟುಕೊಂಡು ಕಾಲಿಗೆ ಪಾಯಿಂಟ್
ಷೂಸ್ ಹಾಕ್ಕೊಂಡು ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯಂತೆ ಮನೆ ಬಿಟ್ಟ. ಟಾಪ್ನಿಂದ
ಬಾಟಮ್ಮೊರೆಗೆ ರೆಡ್ಡಂದ್ರೆ ರೆಡ್ಡು. ಭಾಷಣ ಮಾಡೊಕೆ ಹೊರಟಿದ್ದೀಯಾ? ಎಂದು ಕೇಳಿದಳು
ಅನಸೂಯಾ. (ಎಷ್ಟಿದ್ದರೂ ಸೋದರಮಾವನಲ್ಲವೆ! ಅದಕ್ಕೆ ಸಲಿಗೆ) “ಕೇಳೊಕೆ ನೀನೂ
ಬರ‍್ತೀಯೇನು?” ಎಂದು ಅವನು ತಮಾಷೆ ಮಾಡಿದ.
ರಘುರಾಮ ದೋಸೆ ಲಗಾಸಲು ಹೊರಟಿರುವುದು ನೋಡಿದ ಎಂಥಾವರಿಗೂ ಗೊತ್ತಗಿ
ಬಿಡುವಂತಿತ್ತು.
ಅಂಗಳದಲ್ಲಿ ಬಂದ ಕೂಡಲೆ ಓಣಿ ಹೆಂಗಸರೆಲ್ಲ ತಂತಮ್ಮ ಮನೆಯ ಕಿಟಕಿ ಮತ್ತಿತರ
ಕಿಂಡಿಗಳಲ್ಲಿ ನಿಂತು ಪಿಳಿಪಿಳಿ ನೋಡತೊಡಗಿದರು – ಅವರೆಲ್ಲ ಬೆಂಗಳೂರಿನ ವೈಭವವೇ
ಮನುಷ್ಯ ರೂಪ ಧರಿಸಿ ಹೊರಟಿದೆ ಎನ್ನುವಂತೆ, ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ
ಅಂತ ರಾಘವಾಂಕ ಹೇಳಿದ್ದಾನಲ್ಲ ಹಾಗೆ.
ಆಚೆಮನೆ ಸಾವಿತ್ರಿ ರಘುವನ್ನು ತೋರಿಸುವ ನಿಮಿತ್ತ ಅಲಮೇಲಮ್ಮನಿಗೆ ಐದಡಿ
ಏಳಂಗುಲ
————————-

೧೫೨
ದೂರದಲ್ಲಿ ಕಿಟಕಿಯ ಜಾಲರಿಯಲ್ಲಿ ನಿಂತಿದ್ದಳು. ಹಲವಾರು ಹಸುಳೆಗಳ ಎಳೆ
ನಗೆಯೇ ಆ ಯುಕನ ರೂಪ ಪಡೆದಿದೆ ಎಂಬುದಾಗಿ (ಆಗಲೆ ಮುಂದೆರಡು ಹಲ್ಲು ಕಳೆದುಕೊಂದಿದ್ದ)
ಭಾವಿಸಿದ ಅಲುಮೇಲಮ್ಮಗೆ ಸಾವಿತ್ರಿ “ಆಯಪ್ಗೆ ದೋಸೆ ಎಂದ್ರೆ ಪಂಚಪಿರಾಣದಂತೆ” ಎಂದು
ಪಿಸುಗುಟ್ಟಿದಳು.
ಬೆಂಗಳೂರಿನ ಯುವಕ ತಮ್ಮ ಹೋಟಲ್ಲಿಗೆ ದೋಸೆ ತಿನ್ನಲು ಬರಲಿರುವನೆಂದು ಅದ್‍ಹೇಗೋ
ಅಶರೀರವಾಣಿ ಮೂಲಕ ತಿಳಿದುಕೊಂಡು ಮಾಲೀಕರಾದ ತಿಮ್ಮಣ್ಣ ಭಟ್ಟರು ಛಾಯಾ ಸ್ಟುಡಿಯೋದ
ವೆಂಕಟೇಶಿಯನ್ನು ಕೆಮರಾದೊಂದಿಗೆ ರೆಡಿಮಾಡಿ ಇಟ್ಟಿದ್ದರು. ಕೂಲಿಂಗ್ ಗಿಲಾಸ್ ಧರಿಸಿದ್ದ
ರಘು ಹೋಗುತ್ತಲೆ ಬರ್ರಿ ಬರ್ರಿ ಎಂದು ಸ್ವಾಗತಿಸುತ್ತ ದೋಸೆ ತಿನ್ನುವಾಗ ಹೊಡಿಯೋ ಎಂದು
ಕೆಮೆರಾಮನ್ನಿಗೆ ಪಿಸಿಗುಟ್ಟಿದರು. ಮೂರು ಕಾಲು ಕುರ್ಚಿಮೇಲೆ ಫ಼್ಯಾನ್ ಸ್ವಿಚ್ ಹಾಕಿದರು. ಅದು
ವಾತಾಪಿ ಗಣಪ ಜಿಂದಹೇ ಎಂದು ಹಂಸದ್ವನಿ ರಾಗದಲ್ಲಿ ಕುಯ್ಯೋ ಮರ್ರೋ ಎಂದು
ತಿರುಗತೊಡಗಿತು. ಅವರು ಹಿಡಿ ಹಿಡಿ ಶಾಪ ಹಾಕುತ್ತಿದ್ದುದುತಮ್ಮ ದೋಸೆಗೋ ಸದರಿ ಗ್ರಾಮದ
ಕೆಇಬೀಗೋ ಅರ್ಥವಾಗುತ್ತಿರಲಿಲ್ಲ.
ಮಾಣಿ ಇಷ್ಟುದ್ದ ಅಗಲದ ಭೂಪಟದಂತಿದ್ದ ದೋಸೆಯನ್ನು ತಂದಿಟ್ಟ. ಅದು ಗಮ್ಮನೆ
ಪರಿಮಳ ಬೀರಿತು. . ಕೌಶಿಕಮುನಿ ತನ್ನ ಮೇಲೆ ಇಸಿ ಮಾಡಿದ ಬಲಾಕ ಪಕ್ಷಿ ಕಡೆ
ದುರುಗುಟ್ಟಿ ನೋಡಿದಂತೆ ರಘು ಅದರ ಕಡೆ ನೋಡಿದ. ಕೆಮರಾ ಕ್ಲಿಕ್ ಅಂತು. ಅದಕ್ಕೆ ಕೈ
ಹಚ್ಚಿದ. ಕೆಮರಾ ಕ್ಲಿಕ್ ಅಂತು. ಅದನ್ನು ಬಾಯಲ್ಲಿಟ್ಟುಕೊಂಡ. ಕೆಮರಾ ಕ್ಲಿಕ್ ಅಂತು.
ಮಾತಾಡಿದಂತೆ ಮೂರು ಫೋತೋದ ಅಡ್ವಾನ್ಸ್ ಇಸುಕೊಂಡು ವೆಂಕಟೇಶಿ ಸಿಳ್ಳೆ ಹಾಕುತ್ತ ತ್ರೀ
ಹಂಡ್ರಡ್ ಹಾಕಲು ಪ್ರಸಾದನ ಪಾನ್ ಶಾಪಿನ ಬಳಿಗೆ ಹೋಗುತ್ತಲೆ ಭಟ್ಟರು ದೋಸೆಯ ರುಚಿ
ಹಾಗೂ ಹೋಟೆಲ್ ರುಚಿ ಹಾಗೂ ಶುಚಿ ಬಗ್ಗೆ ವಿಚಾರಿಸಿದರು. “ನೀವು ಏನೇ ಹೇಳಿ ಮಾರಾಯ್ರೆ ಆ
ಶಾಮಾಶಾಸ್ತ್ರಿಗೆ ದೋಸೆ ಬಗ್ಗೆ ಆಸಕ್ತಿನೇ ಇಲ್ಲ ನೋಡಿ. ದಿನಕ್ಕೆರ್ಡು ಹೊತ್ತು ಮಂಡಾಳು
ವಗ್ಗರನೆ ಪುಗ್ಗಿ ಇದ್ದುಬಿಟ್ಟರೆ ಮುಗಿಯಿತು ನೋಡಿ” ಎಂದು ಅವನನ್ನು ಪ್ಲೀಜು ಮಾಡಲು
ಶತಪ್ರಯತ್ನ ಮಾಡಿದರು.
ಇಂಥ ದೋಸೆ ತಿಂದು ಬೆಂಗಳೂರಿನವರು ಐವತ್ತು ಪೈಸೆ ಹೆಚ್ಚಿಗೆ ಬಿಲ್ಲು ತೆತ್ತದಿದ್ದರೆ
ಹೇಗೆ? ಮಾಣಿಗೆ ಕಣ್ಣು ಮಿಟುಕಿಸಿದರು. ಅವನು ಅದರಂತೆ ಆ ಪುಟ್ಟ ಕಾಗದದ ಮೇಲೆ
ಮಹಾಕಾವ್ಯ ಬರೆಯುತ್ತಿರುವನೇನೋ ಎಂಬಂತೆ ಸಿಳ್ಳುಹಾಕುತ್ತ ಬಿಲ್ ಬರೆದು ರಘುನ ಕೈಗೆ
ಕೊಡುತ್ತ ಮನಸ್ಸಿನಲ್ಲಿ (ಇಂದು ಸಂಜೆಯಿಂದ ಆರಂಭವಾಗುವ ಭೇದಿ ಮೂರು ದಿನವಾದರೂ
ಕಡಿಮೆಯಾಗುವುದಿಲ್ಲ. ನೋಡ್ತಿರು) ಶುಭ ಕೋರಿದ.
ರಘು ಅದರ ಕಡೆ ನೋದಿದರೆ ತಾನೆ? ನೂರು ರೂಪಾಯಿ ನೋತನ್ನು ಬಿಲ್ಲಿನೊಂದಿಗೆ ಟೇಬಲ್
ಮೇಲೆ ಸರಿಸಿದ. ಭಟ್ಟರು ನೋಟನ್ನು ಬೆಳಕಿನಲ್ಲಿ ಹಿಂದು ಮುಂದು ನೋಡಿ ಖೋಟ ಅಲ್ಲವೆಂದು
ಖಚಿತಪಡಿಸಿಕೊಂಡು ಚಿಲ್ಲರೆ ಕೊಡುವಾಗ ಅಕಸ್ಮಾತ್ ರಘು ಎಡಗೈಗೆ ಕಟ್ಟಿಕೊಂಡಿದ್ದ
ವಾಚಿನ ಕಡೆ ನೋಡಿ ದಾಂತೋತಲೆ ಉಂಗ್ಲಿದಭಾನ ಮಾಡಿದರು.
“ಇದೇನು ಮಾರಾಯ್ರೆ… ಈ ವಾಚು ಹಿಂಗದೇ… ನಂಬರುಗಳು ಅಟಕ್ ಪಿಟಕ್ ಅಂತ
ತಮ್ಮಷ್ಟಕ್ಕೆ ತಾವೆ ಬದಲಾಗ್ತಿದಾವಲ್ಲ… ಎಂಥ ಸೋಜಿಗ ಕಣ್ರಿ ಇದು….” ಎಂದು
ಜೋರಾಗಿ ಉದ್ಗರಿಸಿದೊಡನೆ ಅಷ್ಟೊತ್ತಿಗಾಗಲೇ ಆ ಹೋಟಲಿನ ನವರಂದ್ರಗಳ ತುಂಬ
ಜೀರಾಡುತ್ತಿದ್ದ ಸದರೀ ಗ್ರಾಮದ ಉಂಡಾಡಿ ಗುಂಡರು ‘ಹುರ್ರೇ’ ಎಂದು ಪ್ರತ್ಯಕ್ಷವಾಗಿ
ತಮ್ತಮ್ಮ ಕಣ್ಣುಗಳನ್ನು
———————————-

೧೫೩
ಚಕಚಕ ಅಂತ ಕಿತ್ತು ಆ ವಾಚಿನ ಮೇಲಿಟ್ಟರು . ಎಂಥ ವಾಚದು?
ನಭೂತೊ ನಭವಿಷ್ಯತಿ. ಅವರೆಲ್ಲರ ಮೇಲೆ ಮೀರಿದ ಕುತೋಹಲ ಒಂದು ಕ್ಷನ ರಘುಗೆ
ಅರ್ಥವಾಗಲಿಲ್ಲ. ತಾನು ಕಟ್ಟಿರುವ ಎಲೆಕ್ಟ್ರಾನಿಕ್ ವಾಚು ಅವರೆಲ್ಲರನ್ನೂ ಇಷ್ಟೋಂದು
ಮಂತ್ರಮುಗ್ಧರನ್ನಾಗಿ ಮಾಡಬಹುದೆಂದು ಅವನು ಆ ಹಿಂದಿನ ಕ್ಷಣದವರೆಗೆ
ಯೋಚಿಸಿರಲಿಲ್ಲ. ಅವನು ಹಾಗೆಯೇ ಇನ್ನೊಂದು ಕ್ಷಣ ಮೈಮರೆತುಬಿಟ್ಟಿದ್ದರಲ್ಲಿ ಅವರೆಲ್ಲರು ಆ
ವಾಚಿನೊಂದಿಗೆ ಅವನ ಎಡಗೈಯನ್ನೂ ಅಪಹರಿಸದೆ ಇರುತ್ತಿರಲಿಲ್ಲ. ಅಂತೂ ನಸಿಬ ನೆಟ್ಟಗಿತ್ತು
ಅದರಿಂದ ಹೇಗೋ ತಪ್ಪಿಸಿಕೊಂಡು ಮನೆ ಸೇರಿದ…
ತಮ್ಮನ ಅವಸ್ಥೆ ನೋಡಿ ರುಕ್ಕಮ್ಮ ಗಾಬರಿಯಾದಳು. ಬಾಗಿಲಿಗೆ ಕರ್ಟನ್ ಹಾಕುತ್ತಿದ್ದ
ಅನಸುಯ ತನ್ನ ವುಡ್‍ಬೀಗೆ ಏನಾಯ್ತೂಂತ ಧಾವಿಸಿ ಬಂದಳು. ತಮ್ಮನ ಗತಕಾಲದ
ಬಾಲಲೀಲೆಗಳೆಲ್ಲ ಎಲ್ಲಿ ಪುನರಾವರ್ತನೆಗೊಂಡವೋ ಎಂದು ರುಕ್ಕಮ್ಮ ಭಾವಿಸಿದ್ದು ಸಹಜ.
ಕ್ರಾಂತಿಕಾರಿ ಭಾಷಣ ಮಾಡುವಾಗೆಲ್ಲಿ ತನ್ನ ವುಡ್‍ಬೀಯನ್ನು ಜನ ಅಟ್ಯಾಕ್ ಮಾಡಿಬಿಟ್ಟರೋ
ಎಂದು ಅನಸೂಯಾ ಭಾವಿಸಿದ್ದು ಸಹಜ. ಕಾರ್ಲ್‍ಮಾರ್ಕ್ಸ್‍ನ ಕೆಂಪು ಪಟ್ಟೆಯ ಪುಸ್ತಕವನ್ನು
ಬಗಲಲ್ಲಿಟ್ಟುಕೊಂಡು ಮನೆಬಿಟ್ಟಾಗಲೇ ತಮ್ಮಿಬ್ಬರಿಗೆ ಅನುಮಾನ ಬಂದಿತ್ತು. ಏನಾದರೊಂದು
ಅಹಿತಕರ ಘಟನೆ ಸಂಭವಿಸಬಹುದೆಂದು ಅವರು ಮೊದಲೇ ಊಹಿಸಿದ್ದರು. ಕಾಲ ಮೊದಲಿಗಿಂತ
ತುಂಬ ಸುಮಾರಾಗಿರುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಕಡೆ ನೋಡುವುದೇ ಗುಮಾನಿಯಿಂದ.
ತನ್ನ ವಿರುದ್ಧ ಏನಾದರೊಂದು ಸಂಚು ನಡೆಸುತ್ತಿರಬಹುದೆ ಎಂಬ ಆತಮ್ಕ ಸಾರ್ವರ್ತ್ರಿಕ
ವಾಗಿತ್ತು. ಯಾರಾದರೂ ಹೊಸಬರು ಬಂದರೆಂದರೆ ಅವರು ಬುಡಮೇಲು ಕೃತ್ಯ ನಡೆಸಲಿಕ್ಕೆಂದೇ
ಬಂದಿರಬಹುದೆಂದು ಸುಲಭವಾಗಿ ಊಹಿಸಿಬಿಡುತ್ತಿದ್ದರು. ಗ್ರಾಮದ ವಾತಾವರಣ
ಹೀಗಿರುವಾಗಲೇ ರಘುರಾಮ ಬಂದಿರುವುದು. ಮೊದಮೊದಲು ಎಲ್ಲರು ಅವನನ್ನು ಅನುಮಾನದಿಂದಲೇ
ನೋಡಿದರು. ಒಲ್ಲದ ಮನಸ್ಸಿನಿಂದ ಸ್ವಾಗತಿಸಿದರು. ರುದ್ರ ನಾಯಕನ ಭಾವ
ಮೈದುನನೆಂದು ಗೊತ್ತಾದ ನಂತರವೇ ಎಲ್ಲರೂ ಸಮಾಧಾನದ ಉಸಿರುಬಿಟ್ಟಿದ್ದು. ಮೊದಲೇ
ತಮ್ಮದು ಗಂಡಸರಿಲ್ಲದ ಮನೆ! ಯಾವ ಕ್ಷಣದಲ್ಲಿ ಎಂಬ ಆತಂಕ ಬೇರೆ; ರಘುರಾಮ
ಮನೆ ಬಿಟ್ಟ ಕ್ಷಣದಿಂದ ಆರಂಭವಾಗುವ ಆತಂಕ ಕಡಿಮೆಯಾಗುತ್ತಿದ್ದುದು ಅವನು ಮನೆಗೆ
ಮರಳಿದ ನಂತರವೇ. ತಾಯಿ ಮಗಳಿಬ್ಬರೂ ಸೇರಿ ಎಡಪಂಥೀಯ ವಿಚಾರಧಾರೆಯ ಗರಂ
ಗರಂ ವಾಸನೆ ಬೀರುತ್ತಿದ್ದ ಪುಸ್ತಕಗಳನ್ನೆಲ್ಲ ಒಯ್ದು ಭತ್ತದ ಹೊಟ್ಟಿನ ಅಡಕಲ
ಗಡಿಗೆಯೊಳಗೆ ಬಚ್ಚಿಟ್ಟರು.
ರಘುರಾಮ ಎದೆಗೆ ಸಾಕಷ್ಟು ಗಾಳ ಬೀಸಿಕೊಂಡು; ಎರಡು ತಂಬಿಗೆ ಬಸವನ ಬಾವಿ
ನೀರು ಕುಡಿದು; ತಾನು ಗುಟ್ಟಗಿ ಪ್ರೀತಿಸುತ್ತಿದ್ದ ಪಾರ್ವತಿ, ಗೌರಿಯರನ್ನು (ಇವರಿಬ್ಬರು
ಕಳೆದು ಐದು ವರ್ಷಗಳ ಹಿಂದೆ ಕೈಯಲ್ಲಿ ಬಂದೂಕು ಹಿಡಿಯದ ಹೊರತು ಸಮಾಜವನ್ನು
ಬದಲಿಸುವುದು ಸಾಧ್ಯವಿಲ್ಲವೆಂದು ನಂಬಿ ಫೇಮೋಸ್ ನಕ್ಸಲೈಟು ಚಿರುಕಲ ನರಸಿಂಹುಲು
ಸಂಗಡ ಆಂಧ್ರಮಹಾವಿಷ್ಣುವಿನ ನೆಲವೀಡಾದ ಶ್ರೀಕಾಕುಳಂ ದುರ್ಗಮ ಬೆಟ್ಟಗಳ ಕಡೆ
ಹೋಗಿರುವರು) ನೆನೆಯುತ್ತ ಧೈರ್ಯ ತಂದುಕೊಂಡನು. ತಮ್ಮನ್ನು ಅನುಕ್ರಮವಾಗಿ
ಸಂಭೋಗಿಸದಿದ್ದಲ್ಲಿ ನೀನು ಕ್ರಾಂತಿಕಾರಿ ಚಳುವಳಿಗೆ ನಾಲಾಯಕ್ಕು ಅಂತ ಅವರು ಹೇಳಿದ್ದ
ಮಾತ್ನ್ನು ನೆನಪು ಮಾಡಿಕೊಳ್ಳದಿದ್ದುದು ಅವನ ಪುಣ್ಯ ಹೇಗೇನಾದರೂ ನೆನಪಾಗಿ ಬಿಟ್ಟಿದ್ದಲ್ಲಿ
ಅವನಿಂದ ಬೆವರನ್ನು ನಿಯಂತ್ರಿಸುವುದಾಗುತ್ತಿರಲಿಲ್ಲ.
———————————

೧೫೪
ಈ ಪ್ರಕಾರವಾಗಿ ರಘುರಾಮ ಸಮಾಧಾನದ ಒಂದು ಹಂತ ತಲುಪಿದ ಮೇಲೆ ತನ್ನ
ಬಾಳು ಬೆಳಗುವ ಹುಡುಗಿ ಮಾಡಿಕೊಟ್ಟ ಚಹ ಕುಡಿದು ತಾನು ಭಟ್ಟರ ಹೋಟಲಿಗೆ ಹೋಗಿದ್ದು
ದೋಸೆ ತಿನ್ನುವಾಗ ಭಟ್ಟರು ಫೋಟೊ ತೆಗೆಸಿದ್ದು ಹೇಳುತ್ತಿದ್ದಂತೆಯೇ ಅನಸೂಯ ಫೋಟೊ ತೆಗೆಯಲು
ಆಸ್ಪದ ಕೊಡಬಾರದಿತ್ತೆಂಬ ತಕರಾರೆತ್ತಿದಳು. ದೋಸೆ ತಿನ್ನುವುದೇನೋ ಐತಿಹಾಸಿಕ ಘಟನೆ
ಏನು ಅಲ್ಲ. ಹಾಗೆಯೇ ದೋಸೆ ತಿನ್ನುವುದೇನೋ ಬುಡಮೇಲು ಕೃತ್ಯವೆನಿಸಿಕೊಳ್ಳಲಾರದು. ಆದರೆ
ಫೋಟೊವನ್ನು ತೆಗೆದ ಮತ್ತು ತೆಗೆಯಲು ಪ್ರೇರಣೆ ನೀಡಿದ ವ್ಯಕ್ತಿ ಪೋಲಿಸ್ ಇನ್‍ಫಾರ್ಮರ್ರಾಗಿದ್ರೆ
ಒದಗಲಿರುವ ಸಂಕಟವನ್ನು ತಡೆಯುವ ಬಗೆ ಹೇಗೆ? ಇದು ಸೂಕ್ಮೂಜ್ಞೆಯಾದ ಅನಸೂಯಳ
ಆತಂಕದ ಒಂದು ನಮೂನೆ. ಎಷ್ಟದರೂ ಅವನು ತನಗೆ ಗೃಹಸ್ಥಾಶ್ರಮ
ನೀಡಲಿರುವವನಲ್ಲವೆ?
ರಘು ಅವರ ಅತಂಕಗಳ ಕಾರಣಗಳನ್ನು ಅರ್ಥಮಾಡಿಕೊಂಡು ನಕ್ಕ. ತಾನು
ಕಟ್ಟಿಕೊಂಡಿರು ಎಲೆಕ್ಟ್ರಾನಿಕ್ ವಾಚು ಸೃಷ್ಟಿಸಿದ ಅವಾಂತರದ ಬಗ್ಗೆ ಹೇಳುತ್ತ ನಗಾಡಿದ.
ಅವನು ಬಂದು ಇಷ್ಟು ದಿನವಾದರೂ ತಾವವನ ವಾಚು ನೋಡದಿರುವುದರ ಬಗ್ಗೆ ತಾಯಿ
ಮಗಳಿಬ್ಬರು ತಮಗೆ ತಾವೆ ಆಶ್ಚರ್ಯಪಟ್ಟುಕೊಂಡರು. ರುಕ್ಕಮ್ಮನಿಗಂತೂ ಎಲೆಕ್ಟ್ರಾನಿಕ್ ಎಂಬ
ಪದ ಉಚ್ಚರಿಸಲು ಕಷ್ಟವಾಗಿ ಅಟಕ್ ಪಿಟಕ್ ಎಂದಳು. ಪದವೀಧರೆಯಾದ ಅನಸೂಯ ಆ
ಕ್ಲಿಷ್ಟ ಪದದ ಅರ್ಥ ವಿವರಿಸಿದಳು. ಅವರಿಬ್ಬರು ಅವನ್ ಮುಂಗೈ ಅಲಂಕರಿಸಿದ್ದ ಅದನ್ನು
ಶಾನೆ ಹೊತ್ತು ನೋಡಿದರು. ಅದು ಗಂಡಸಾದ ಅವನ ಮುಂಗೈಯ ಮೇಲಿರುವುದೇ ಕ್ಷೇಮವೆಂದೇ
ಬಗೆದರು.
ಪಂಕ್ಚುಯಾಲಿಟಿಯ ಪರಿಪಾಲಕನಾದ ಅವನು ಆತ್ಮಲಿಂಗೋಪಾದಿಯಲ್ಲಿ ಅದನ್ನು
ಧರಿಸಿಯೇ ಸ್ನಾನ ಊಟ ಇತ್ಯಾದಿ ಮುಗಿಸಿ ಮಲಗಿಕೊಂಡ. ಅವನಿಗೆ ಡಿಸ್ಟರ್ಬ್ ಆಗುವುದೆಂದು
ರುಕ್ಕಮ್ಮ ಮಗಳೊಂದಿಗೆ ಅಡುಗೆ ಮನೆಯಲ್ಲಿ ನಡೆಯಲಿರುವ ಮದುವೆಬಗ್ಗೆ; ಬಾರದಿರುವ
ಮಾಲಿಕನ ಬಗ್ಗೆ; ಆರ್ಥಿಕ ಪರಿಸ್ಥಿತಿಯ ಬಗ್ಗೆ; ಚರಾಸ್ತಿ ಸ್ಥಿರಾಸ್ತಿ ಬಗ್ಗೆ;
ಶಾಮನಿಗೆ ಗೊತ್ತು ಮಾಡಿರುವ ಹೊಸಪೇತೆಯ ಕನ್ಯಾಮಣಿಯ ಬಗ್ಗೆ; ಹೀಗೆ ಹಲವಾರು
ವಿಷಯಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಿದ್ದರು.
ಇತ್ತ ಪಡಸಾಲೆಯಲ್ಲಿ ಹಿರಿಯೂರು ಕಡೆಯ ಚಿತ್ತರದ ಚಾಪೆ ಮೇಲೆ ಸರ್ಪ ಶಯನದ
ಮೇಲೆ ಮಹಾವಿಷ್ಣು ಮಲಗಿರುವ ಶೈಲಿನಲ್ಲಿ ಅರೆ ಎಚ್ಚರ ಅರೆ ನಿದ್ರೆಯಲ್ಲಿ ಮಲಗಿಕೊಂಡಿದ್ದ
ರಘುರಾಮ ವರ್ತಮಾನದ ದುರಂತ ಪರಿಹರಿಸಲು ತಾನು ಬುಡಮೇಲು ಕೃತ್ಯಕ್ಕೆ ತೊಡಗುವುದೋ
ಎಂದು ಯೋಚಿಸುತ್ತಲೇ ಹಾಗೆ ನಿದ್ರೆ ಹೋಗಿದ್ದ. ಹಾಲೀ ಪ್ರಧಾನಿ ಸರ್ವಾಧಿಕಾರಿಣಿ ಥರ
ಮಾಡಿಕೊಂಡಿರುವುದು, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳ ಮೂಲಕ ಕಡ್ಡಿ ಮುರಿದಂತೆ
ದೇಶವನ್ನು ಆಳುತ್ತಿರುವುದು, ಆಕೆಯ ಮುದ್ದು ಮಗ ಸಂಜಯಗಾಂಧಿ ಬಗ್ಗೆ ಒಂದು
ನವರಸಭರಿತ ಕಾದಂಬರಿ ಬರೆಯಬೇಕು. ಅದು ಮೂರು ಮೊಳ ಗಡ್ಡಾ; ಒಂದು ಮಳ ಮೀಸೆಯೊಡನೆ
ಹುಟ್ಟಬೇಕು. ಹುಟ್ಟುತ್ತಲೆ ಭಾರತವನ್ನು ಆಮೂಲಾಗ್ರ ಬದಲಾವಣೆ ಮಾಡಬೇಕೆಂದುಕೊಂಡು
ಎರಡೂ ಕೈಯೊಳಗೆ ಎರಡೂ ನಮೂನೆಯ ಬಂದೂಕುಗಳನ್ನು ಹಿಡಿದುಕೊಂಡು; ಬಾಯಿಯಿಂದ ಇಂಡಿಯನ್
ಪೀನಲ್ ಕೋಡಿನ ಎಲ್ಲಾ ನಮೂನೆಯ ಕಲಮುಗಳನ್ನು ಪಟಪಟಾಂತ ಉಚ್ಚರಿಸುತ್ತ ಗಾಳಿಯಲ್ಲಿ
ಗಾಳಿಗಿಂತ ವೇಗವಾಗಿ ಅಡ್ಡಡಿ ಇಡೀ ಜಂಬೂದ್ವೀಪವನ್ನು ಗಡಗಡ ಅಂತ ನಡುಗಿಸಿಬಿಡಬೇಕು…
ಅದರ ವಿರುದ್ಧ ಹೋರಾಡುವ
———————————————–

೧೫೫
ಹೀರೋ ನಾನಾಗಬೇಕು… ಇದನ್ನು ಕುರಿತು ಕಾದಮ್ಬರಿ
ಬರೆಯಬೇಕೋ? ನಾಟಕ ಬರೆಯಬೇಕೋ? ಕ್ರಾಂತಿಯನ್ನೇ ಉಸಿರು ಮಾಡಿಕೊಂಡಿರುವ ನನಾಗೆ ಒಂದು
ವಾಕ್ಯ ಬರೆಯಲು ಬರುತ್ತಿಲ್ಲವಲ್ಲ… ಏನು ಮಾಡುವುದು.
ಯೋಚಿಸುದ್ದಿಂತೆ ಭಯಾನಕ ಕೂಸೊಂದು ತಾಯಿಯ ಕಿಬ್ಬೊಟ್ಟೆ ಸೀಳಿಕೊಂಡು ಹೊರಬರುವುದು… ಅದರ ಉಗುರುಗಳು ಮಾರಕಾಯುಧಗಳು. “ಎಲೆ ನನ್ ಮಗ್ನೆ ನನ್ ವಿರುದ್ಧಾನೇ
ಕಿರಾಂತಿ ಮಾಡ್ತೀಯಾ ಈಗ ನಿನ್ನ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ” ಎನ್ನುತ್ತ ಅದು ತನ್ನ
ಕಡೆಗೇ ಅಂಬೆಗಾಲಿಟ್ಟು ಬರುತ್ತಿರುವುದು. ಇನ್ನೊಂದು ಕ್ಷಣದಲ್ಲಿ ಆ ಕೂಸು ತನ್ನ ಕಥೆಯನ್ನೇ
ಮುಗಿಸಿ ಬಿಡಲಿದೆ.
ಚಿಟಾರನೆ ಚೀರಬೇಕು.. ಅಕ್ಕ ಮತ್ತು ಅಕ್ಕನ ಮಗಳನ್ನು ಸಹಾಯಕ್ಕೆ ಕರೆಯಬೇಕು..
ಅಷ್ಟರಲ್ಲಿ ಬಾಗಿಲು ತಟ್ಟುತ್ತಿರುವ ಸದ್ದು. ಟಕ್… ಟಕ್… ಅಂತ. ಬಾಗಿಲಾಚೆ
ಎಂಥದೋ ಪಿಸಿಪಿಸಿ ಮಾತುಗಳು; ಕೂಸು ತನ್ನೊಂದಿಗೆ ಯಾರನ್ನೋ ಕರೆದುಕೊಂಡು
ಬಂದಿರುವಂತಿದೆಯಲ್ಲ! ಅಕಸ್ಮಾತ್ ತನ್ನಕ್ಕ ಬಾಗಿಲು ತೆಗೆದುಬಿಟ್ಟರೆ!?…
ಅಷ್ಟರಲ್ಲಿ ರುಕ್ಕಮ್ಮ ನಡೆದಂತೆ… ಸರಕ್ ಪರಕ್ ಅಂತ ಬಾಗಿಲು ತೆರೆದಂತೆ…
ಬಾಗಿಲಾಚೆ ಇರುವವರನ್ನು ನೋಡಿ ಅಕ್ಕ ಕಂಗಾಲಾದಂತೆ ಆಕೆಯ ದ್ವನಿ ಗಡಗಡ
ನಡುಗುತ್ತಿರುವಂತೆ..
“ಏನ್ರಿ ಯಾರು ಬೇಕಿತ್ರೀ?”
ನಿಮ್ಮನೆಗೆ ಬೆಂಗ್ಳೂರಿಂದ ಯಾರೋ ಬಂದಿದಾರಂತಲ್ಲ?”
“ನನ್ ಸದ್ಯ ತಮ್ಮನೆ! ರಘುರಾಮ ಅಂತ.. ಬೆಂಗ್ಳೂರಲ್ಲಿ ದೊಡ್ ಕೆಲಸದಲ್ಲಿದ್ದಾನೆ!”
“ಹ್ಹಾಂ! ಹ್ಹಾಂ! ಅವ್ನೆ ಅವ್ನೆ ಬೇಕು… ಎಲ್ಲಿ ಅವನು?” ಎಂದು ಕೇಳುತ್ತ ಯಾರೋ ಧಡ್
ಭಡ್ ಅಂತ ಒಳಗೆ ಬಂದಂತೆ..
ರಘುರಾಮ ಗೋಡೆಗೆ ಮುಖ ಮಾಡಿ ಮೈತುಂಬ ದುಪ್ಪಟ ಹೊದ್ದು; ಮೊಣಕಾಲುಗಳನ್ನು
ಗದ್ದಕ್ಕೆ ಬಡಿಸಿಕೊಂಡು ತಾನು ಗಾಡ ನಿದ್ರೆಯಲ್ಲಿರುವಂತೆ ನಟಿಸತೊಡಗಿದ.
“ಇಲ್ಲೆ.. ಮಲೊಕ್ಕೊಂಡಿದ್ದಾನೆ.. ಪಾಪ.. ಆಯಾಸ!” ಅವರನ್ನು ಅಲ್ಲಿಂದ
ತೊಲಗಿಸಲು ಪ್ರಯತ್ನಿಸುತ್ತಿರುವ ಅಕ್ಕ.
“ಕೂಡ್ಲೆ ಎಬ್ಬಿಸ್ರಿ… ಹೊತ್ತಲ್ಲದ ಹೊತ್ನಲ್ಲಿ ಮಲಗಿದರೆ ದೇಶ
ಉದ್ಧಾರಾಗೊದಾದ್ರು ಹೇಗೆ?” ಅಬ್ಬಾ! ಇವರಿಗೆ ಎಷ್ಟೊಂದಿದೆಯಲ್ಲ! ದೇಶದ ಬಗ್ಗೆ ಕಾಳಜಿ!
ಅಕ್ಕ ಬಂದಳು. ಕೈಯಿಂದ ಮಿಸುಕಾಡಿಸಿದಳು.
“ತಮ್ಮಾ ರಘು ಎದ್ದೇಳೋ.. ನಿನ್ನ ಹುಡುಕ್ಕೊಂಡು.. ”
ರಘು ಪ್ರತ್ಯುತ್ತರವಾಗಿ ಗೊರಕೆ ಬಾರಿಸ ತೊಡಗಿದ. ಕ್ರಾಂತಿಕಾರಿಗಳಾದವರಿಗೆ
ಗೊರಕೆಯ ಹಲವು ಸ್ವರೂಪಗಳು ಗೊತ್ತಿರಬೇಕು..
“ಏನೋ ಸ್ವಾಮಿ.. ಎಷ್ಟು ಎಬ್ಬಿಸಿದ್ರೂ ಏಳ್ತಿಲ್ಲ.. ತುಂಬ ನಿದ್ದೆ ಬಂದಂತಿದೆ” ತನ್ನ
ಪ್ರಯತ್ನ ವಿಫಲವಾದುದರ ಬಗ್ಗೆ ಅಕ್ಕ.
ಬಂದಿದ್ದವರು, ಓಹ್ ಹಾಗೋ!” ಎಂದರು ‘ಯಾಕೆ ಎದ್ದೇಳಲ್ಲ ನೋಡೇ ಬಿಡ್ತೀವಿ’ ಎಂದರು. ಒಬ್ಬ
ಕೈಲಿದ್ದ ಕೋಲಿನಿಂದ ತಿವಿದ ಇನ್ನೊಬ್ಬ ರಜಸ್ವಲೆಯಾಗಿ ಬಿಸಿಲಿಗೆ ತಲೆ
—————————–

೧೫೬
ಒಣಗಿಸಿಕೊಳ್ಳುತ್ತ ಕೂತಿದ್ದ ಪಾಂಚಾಲಿಯ ಭವತ್ ಕೇಶಪಾಶ ಪ್ರಪಂಚಕ್ಕೆ ದುಶ್ಶಾಸನ ಕೈಹಚ್ಚಿದಂತೆ
ಮೇಡಿನ್ ಸೋಲಾಪೂರ್ ಬೆಡ್‍ಶೀಟಿಗೆ ಕೈಹಚ್ಚಿ ಎಳೆದು ಮೂಲೆಗೆಸೆದು ಮಲಗಿದ್ದ ವ್ಯಕ್ತಿಯನ್ನು
ಅನಾವರಣಗೊಳಿಸಿಬಿಟ್ಟ.
ಅನಂತರವೂ ಮಲಗಿದ್ದ ರಘು ಇನ್ನೊಮ್ಮೆ ಝಾಡಿಸಿ ತಿವಿದ ಮೇಲೆಯೇ ಹ್ಹಾಂ… ಹ್ಹೂಂ… ಅಂತ ಮಗ್ಗುಲು ಬದಲಾಯಿಸಿ; ಕಣ್ಣುಗಲನ್ನು ಉಜ್ಜಿಕೊಂದು ಒಮ್ಮೆ ಗಟ್ಟಿಯಾಗಿ ಆಕಳಿಸಿ
ತೆರೆದು ನೋಡುತ್ತಾನೆ ಎದುರಿಗೆ ಇಬ್ಬರು ಪೋಲಿಸರು ಆಕಾಶಕ್ಕೂ ಭೂಮಿಗೂ ಏಕಾಗಿ
ನಿಂತಿರುವಂತೆ ಗೋಚರಿಸಿದರು.
ಅಂದುಕೊಂಡಿದ್ದಂತೆ ಬಂದೇ ಬಿಟ್ಟಿದ್ದಾರವರು. ಸರಕಾರಿ ವಿರೋಧಿ
ಚಟುವಟಿಕೆಗಳಿಗಾಗಿ ಬಂಧಿಸಲು ಸಂಸಿದ್ಧರಾಗಿ.. ತಮ್ಮ ಗುಂಪಿನ ಭೂಗತ
ಚಟುವಟಿಕೆಗಳನ್ನು ಹೇಗೋ ಪತ್ತೆ ಹಚ್ಚಿದ್ದಾರೆ. ಅಕ್ಬರ್‌ಗೆ ಈಗಾಗಲೆ ಹೈದರಾಬಾದ್ ಗೋಲಿ
ರುಚಿ ತೋರಿಸಿರಬಹುದು. ತನ್ನನ್ನು ಏರೋಪ್ಲೇನ್ ಹತ್ತಿಸಿ ಬಹುದಿನದ ವಿಮಾನ ಪ್ರಯಾಣದ
ಕನಸನ್ನು ಈಡೇರಿಸಲಿಕ್ಕಾಗಿ ಬಂದಿದ್ದಾರೆ. ಎಲಾ ಭಟ್ಟ ಅಂತೂ ಸುಳಿವು ನೀಡಿ
ಬಿಟ್ಟಿರುವೆಯಾ.. ಕಟ ಕಟ ಹಲ್ಲು ಕಡಿದ.
ಧೈರ್ಯಗುಂದಿದರೆ ಕ್ರಾಂತಿಕಾರಿಗಳ ಬೇಳೆ ಬೇಯೋದಿಲ್ಲ. ಯಾವ ಕಾರಣಕ್ಕೂ ಒಳಗಿನ
ಅಳುಕನ್ನು ತೋರಗೊಡಬಾರದು.
“ಓಹ್.. ಹಲೋ ಕಾನ್‍ಸ್ಟೇಬಲ್ಸ್.. ವಾಟ್ ಡು ಯು ವಾಂಟ್?” ಎಂದು ಭಲೇ ಗತ್ತಿನಿಂದ
ಮಾತಾಡುತ್ತ ಎದ್ದು ಕುಳಿತ.
ತಮ್ಮನ ಠಾಕುಠೀಕು ಉತ್ತರದಿಂದ ರುಕ್ಕಮ್ಮ ಹೆಮ್ಮೆಪಟ್ಟರು.
ಆದರೆ ಆ ಫೀಸಿಗಳಿಗೆ ಇಂಗ್ಲೀಷ್ ಅರ್ಥವಾದರೆ ತಾನೆ?
“ನಡೆಯಯ್ಯಾ ಸ್ಟೇಷನ್ಗೆ!” ಎಂದೊಮ್ಮೆಗೆ ರೋಫ್ ಹಾಕಿಬಿಡುವುದೇ?
ರಘು ನಿಜಕ್ಕೂ ದಿಗ್ಭ್ರಾಂತನಾದನು. ತಾನು ಕನಸಿನಲ್ಲಿ ಮತ್ತು ಮನಸಿನಲ್ಲಿ
ಸರಕಾರದ ವಿರುದ್ಧ ಯೋಚಿಸಿದ್ದು ಈ ಅರಕ್ಷಕ ಮಹಾಶಯರಿಗೆ ಹೇಗೋ
ಗೊತ್ತಾಗಿರುವುದೆಂದುಕೊಂಡ. ಸರ್ವಾಧಿಕಾರಿಣಿಯ ಬೇಹುಗಾರಿಕೆ ಬಗ್ಗೆ ಅಚ್ಚರಿಪಟ್ಟ.
“ಯಾಕ್ರೀ? ವೈ? ಎಂದು ವಿಹ್ವಲಗೊಂಡು ಕರ್ಟನ್ ಮರೆಯಲ್ಲಿದ್ದ ತನ್ನ ವುಡ್‍ಬೀ ಕಡೆ
ನೋಡಿದ.
“ವೈಯೂ ಇಲ್ಲ ಪೈಯೂ ಇಲ್ಲ. ಸ್ಟೇಷನ್‍ಗೆ ಬನ್ನಿ. ಎಲ್ಲಾ ತಿಳೀತದೆ!” ಎಂದು ಪೀಸಿ
ಹಿಂದಿನ ದಿನ ಹೊಡೆದುಕೊಂಡಿದ್ದ ಮೀಸೆ ತೀಡಿದ.
“ಯಾಕೆ ಬರ್ಬೇಕ್ರೀ? ಆಮೇಲೆ ಬರ್ತೀನಿ ಹೋಗಿ ನಾನು ನಿದ್ದೆ
ಮಾಡಬೇಕಾಗಿದೆ!” ಇವರೇನು ಸಿಓಡಿ ಕಡೆಯವರಾ? ಸಿಬಿಐ ಕಡೆಯವರಾ? ಎಂದು
ಅನುಮಾನದಿಂದ ಅವರಕಡೆ ನೋಡುತ್ತಾ ನಿರಾಕರಿಸಿದ.
“ಬರ್ಬೇಕಂದ್ರೆ ಬರ್ಬೇಕಷ್ಟೆ” ಎಂದು ಇನ್ನೊಬ್ಬ ಪೀಸಿ ಕಳೆದ ವಾರ ಕಟ್ಟಿಸಿಕೊಂಡಿದ್ದ
ಪಲ್ಗಳ ಸೆಟ್ಟಮ್ ಅನ್ನು ಜಿಹ್ವಾ ಸಂಚಲನದಿಂದ ಸರಿಪಡಿಸಿಕೊಂಡ.
ರುಕ್ಕಮ್ಮ ಕಣ್ಣಲ್ಲಿ ಬಿಸಿಲೇರಿ ವಾಟರನ್ನೇ ತಂದುಕೊಂಡಳು.
“ಅಯ್ಯೋ ದೇವರೆ ಕೈಗೆ ಬಂದ ತುತ್ತನ್ನು ಬಾಯಿಗೆ ಬರುವ ಮೊದಲೇ
ಕಿತ್ತುಕೊಳ್ಳುತ್ತಿರುವಿಯಲ್ಲ? ಇದು ನ್ಯಾಯವೇ?”
———————-

೧೫೭
ಕರ್ಟನ್ನಿನ ಪಾರದರ್ಶಕ ಮರೆಯಲ್ಲಿ ಅನಸೂಯಾ ಸೆರಗನ್ನು ಬಾಯಿತುಂಬ ಇಟ್ಟುಕೊಂಡು
ಬಿಕ್ಕಿ ಬಿಕ್ಕಿ ಉದ್ವಿಗ್ನಗೊಂಡಳು.
ಅದು ಹೇಗೋ ರಘುಗೆ ತಿಳಿಯಿತು. ಕಣ್ಣರಿಯದಿರ್ದೊಡೆ ಕರುಳರಿಯದೇನು!
ಬರೋದಿಲ್ಲಂದ್ರೇನು ಮಾಡ್ತೀರಯ್ಯಾ?” ಎಂದು ನುಡಿಯನ್ನು ಝಾಸಿಬಿಟ್ಟ.
ಅರೆ! ಈ ಹುಲುನರ ಹೀಗೆ ನುಡಿಯುತ್ತಿರುವನಲ್ಲ! ತಾವು ಡ್ರೆಸ್ ಮೇಲಿದ್ದರೂ ಅವರು
ಪರಸ್ಪರ ನೋಡಿಕೊಂಡರು.
“ಏನಪ್ಪಾ? ನಿದ್ದೆ ಮಬ್ಬಿನಲ್ಲಿ ಬಾಯಿಗ್ ಬಂದಂಗ ಮಾತಾಡ್ತೀಯಲ್ಲಾ ನಾವ್ಯಾರು
ಅಂದ್ಕೊಡೀಯಾ?” ಎಂದು ಮೀಸೆ ಪಲುಕಿದ.
“ನೀವು ಪೋಲಿಸರಂತ ಗೊತ್ತಪ್ಪಾ ಹೆದರೋಕೆ ನಾನೇನು ಹಳ್ಳಿ ಗುಗ್ಗು ಅಲ್ಲ”
ಉಗುಳಬಾರದು ನುಂಗಬಾರದು ಸಂಕಟದ ಪರಿಯಾ! ಗತ್ತು ಹಾಕಿದ. ಇದು
ಹೆಂಡತಿಯಾಗುವವಳ ಎದುರುಗಡೆ ತನ್ನ ಪ್ರೆಸ್ಟೀಜಿನ ಪ್ರಶ್ನೆ
“ನೀನು ಹಳ್ಳಿ ಗುಗ್ಗು ಅಲ್ಲ ಅಂತ ನಮ್ಗೂ ಗೊತ್ತು. ಒಳ್ಳೆ ಮಾತಿಂದ ಹೊರಡು” ಎಂದ
ಕ್ಲೋಸ್‍ಅಪ್‍ನವ.
“ಬರೋದಿಲ್ಲ ಹೋಗ್ರಿ!”
“ಬರೋದಿಲ್ಲ ಅಂದ್ರೆ ಹೊತ್ಕೊಂಡು ಹೋಗ್ತೀವಿ.. ಏನಂದ್ಕಂಡೀಯಾ?” ಡೈಯವನೂ ಮೀಸೆ
ತಿರುವಿದ.
ಒಂದು ಕ್ಷಣ ರಘು ಹೌಹಾರಿಬಿಟ್ಟ.
ಪಿಪೀಲಿಕದಾಲಿಗಿರದೇ ಗೋಷ್ಪದದ ಕೀಲಾಲ ವಿಲಯಾಂಬುವಿನವೊಲು ಎಂದು ತೊರವೆ
ರಾಮಾಯನದಲ್ಲಿ ಹೇಳಿರುವಂತೆ ಇರುವೆಯಂಥ ಅವನಿಗೆ ಎಮ್ಮೆಗಂಜಳವೇ
ಜಲಪ್ರಳಯವೆಂಬಂತೆ ಕಂಡಿತು.
ರುಕ್ಕಮ್ಮಗಂತೂ ಕರುಳು ಕಿತ್ತು ಬಾಯಿಗೆ ಬಂದುಬಿಟ್ಟಿತು.
ಮಣ್ಣಿನ ಗೋಡೆ ತೊಳೆಯೋಕ್ಯಾಕೆ ಪ್ರಯತ್ನಿಸುತ್ತಿರುವ ನೀ ತಮ್ಮನು.
“ರಘು ನಾಕು ಹೆಜ್ಜೆ ಹೋಗಿ ಬಂದುಬಿಡು ತಂದೆಯೇ. ಕನ್ನಡಿಗಾಗಿ
ಮೂಗುಕಳಕೊಳ್ಳೋದ್ಯಾಕಪ್ಪ” ಎಂದು ಗಗ್ಗರಿಸಿ ಕನಿಷ್ಟ ಬಿಲ್ಲೆಗಳ ಕಡೆ ತಿರುಗಿ “ನನ್ತಮ್ಮ
ಬಂಗಾರದಂಥವ್ನಪ್ಪಾ.. ಯಾರ ಗೊಡವೆಗೆ ಹೋಗೋನಲ್ಲ.. ನಾಕು ಮಾತಾಡಿ
ಕಳಿಸಿಕೊಡ್ರಿ” ಎಂದು ಕೈ ಮುಗಿದು ಕೇಳಿಕೊಂಡಳು.
ಅವರು ಉತ್ತರ ಕೊಡುವ ಮೊದಲೆ ರಘು “ಇವರೇನು ಹುಲಿಯಲ್ಲ ಸಿಂಹ ಅಲ್ಲ..
ನೀನ್ಯಾಕೆ ಹೆದರ‍್ತಿ.. ಸುಮ್ನಿರಕ್ಕ.. ಸೊಳ್ಳೆಗೆ ಹೆದರಿ ಯಾರಾದ್ರು ಇರೋ ಮನಿ
ಬಿಡ್ತಾರೇನು?” ಎಂದು ಸಡನ್ನ ಎದ್ದು ದೋಸೆ ತಿನ್ನಲಿಕ್ಕೆ ಹೋಗುವಾಗ ಯಾವ ರೀತಿ ಡ್ರೆಸ್
ಮಾಡಿಕೊಂಡಿದ್ದನೋ ಹಾಗೆ ಡ್ರೆಸ್ ಮಾಡಿಕೊಂಡನು.
ತಮ್ಮನ್ನು ಸೊಳ್ಳೆಗೆ ಹೋಲಿಸಿದ ಇವನು ನಿಜವಾಗಿಯೂ ಕ್ರಾಂತಿಕಾರಿಯೇ ಇರಬೇಕೆಂದು
ಕನಿಷ್ಟ ಬಿಲ್ಲೆಗಳು ಸಂದೇಹಿಸಿ-ಪರಸ್ಪರ ಮುಖ ನೋಡಿಕೊಂಡು ಬದ್ಧ ಭ್ರುಕುಟಿಯಾದರು.
ರಾಯರ ಕುದುರೆಯಿಂದ ಕಾಲು ತುಳಿಸಿಕೊಂಡಂಥ ಅನುಭವಕ್ಕೆ ಅವರು ಪಕ್ಕಾಗುತ್ತಿರಲು..
…ಇತ್ತ ಗುದ್ದಿದವನೂ ಅಲ್ಲ ಅತ್ತ ಗುದ್ದಿಸಿಕೊಡದವನೂ ಅಲ್ಲದ ರಘುರಾಮ ನೀರಡಿಸಿ
——————————–

೧೫೮
ಪಾಕಶಾಲೆಯಂ ಪೊಕ್ಕು ಅರ್ಥನಾಗಿ ಪಂಕಜನೇತ್ರೆಯಂ ನೋಡಲು ಆಕೆಯು
ಬರಸೆಳೆದು ಬಿಗಿದಪ್ಪಿ ತನ್ನ ದೇಹದ ಸಮಸ್ತ ಶಕ್ತಿಯನ್ನು ಅವನ ದೇಹದೊಳಗೆ ತುಂಬಿ,
ಕಿವಿಯೊಳಗೆ ಬಾಯಿ ಇಟ್ಟು ‘ಧೈರ್ಯಂ ಸರ್ವತ್ರ ಸಾಧನಂ’ ಎಂದು ಹೇಳಿ ಬೀಳ್ಕೊಡಲು..
ಅವನು ಹೊಚ್ಚ ಹೊಸ ಹುರುಪಿನಿಂದ ಪೋಲಿಸರ ಹಿಂದೆ ನಡೆಯುತ್ತ ಬಾಗಿಲು.. ಅಟುವಾಗ ಅಕ್ಕ ರುಕ್ಕಮ್ಮ, ‘ಜೋಪಾನ ತಮ್ಮಾ, ಸಿಟ್ಟಿನ ಕೈಗೆ ಬುದ್ಧಿ ಕೊಡಬ್ಯಾಡ..
” ನೀನು ಬರೊವರೆಗೆ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೂಡ್ರುವೆನು’ ಎಂದು ಹೇಳಿದ್ದು
ಕೇಳಿಸಿಕೊಂಡನು.
ಎರಡು ನಮೂನೆಯ ಆಭರಣಗಳಂಥ ಪೋಲಿಸರ ನಡುವೆ ಸೀಗೆಯೊಳಗಿನ ಬಾಳೆಯಂತೆ
ಅವನು ನಡೆಯುತ್ತಿದ್ದುದನ್ನು. ಓಣಿಯ ಅಬಾಲ ವೃದ್ಧರೆಲ್ಲರು ‘ಅಯ್ಯೋ ದೇವರೆ ಎಂಥವರಿಗೆ
ಎಂಥ ಕಾಲ ತಂದೆಯಲ್ಲಾ’ ಎಂದು ನೋಡುತ್ತ ಮಮ್ಮಲನೆ ಮರುಗಿದರು.
ಕಿಟಕಿಯ ಜಾಲರಿಯಲ್ಲಿ ನೋಡುತ್ತಿದ್ದ ಅಲುಮೆಲಮ್ಮನೂ ‘ಅಯ್ಯೋ ಪಾಪ ಇದೇನಿದು! ಎಂದು
ದುಃಖಿತಳಾಗಿ ಅವನ ಕ್ಷೇಮ ಕೋರಲು ಕ್ಷೋಣಿಯಸ್ಯ ರಥೋಥಾಂಗಯುಗಳು ಚಂದ್ರಾರ್ಕ
ಬಿಂಬದ್ವಯಂ ಎಂದು ಪರಮಾತ್ಮನನ್ನು ಪ್ರಾರ್ಥಿಸಿದಳು.
ರಾಗಕ್ಕೆ ಮೂಡಲು, ರೋಗಕ್ಕೆ ಪದುವಲು, ಭೋಗಕ್ಕೆ ತೆಂಕಲು, ಯೋಗಕ್ಕೆ ಬಡಗಲು
ಎಂಬಂತೆ ಸರ್ವ ಪಾಪಗಳಿಗೆ ಮುಕ್ತಿ ಧಾಮದಂತೆ ಗ್ರಾಮದ ಹೃದಯ ಭಾಗದಲ್ಲಿ ಎಂದರೆ
ತಮ್ಮ ಮನೆಗೆ ಈಶಾನ್ಯ ಭಾಗದಲ್ಲಿ; ಎಂದರೆ ರಕ್ತಪಿಪಾಸಿಣಿಯಾದ ದುರುಗಮ್ಮನ ಗುಡಿ
ಪಕ್ಕ ಎಂದರೆ ನಕ್ಷತ್ರಾಕಾರದ ವೇದಿಕೆಯ ಮೇಲೆ ಕಳೆದ ನಲವತ್ತು ವರ್ಷಗಳಿಂದ
ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಪೋಲೀಸು ಸ್ಟೇಷನ್ನು ಎಂಬ ನಾಮಾಂಕಿತ
ಕಟ್ಟಡವನ್ನು ತಾನು ನೋಡಿದ್ದು ಚಿಕ್ಕಂದಿನಲ್ಲಿ.
ರಘುರಾಮನ ಬಾಲ್ಯವನ್ನು ಮುದಗೊಳಿಸಿದ್ದಂಥ ಪರಮ ಪವಿತ್ರ ಕಟ್ಟಡ ಅದು.
ಇಂದ್ರನ ವಜ್ರಾಯುಧಕ್ಕೂ ಅದನ್ನು ಜುಮ್ಮೆನಿಸುವುದು ಸಾಧ್ಯವಿರಲಿಲ್ಲ. ತನ್ನ ಕಾನೂನು
ಬಾಹಿರ ಪ್ರಣಯದಾಟಗಳನ್ನು ಅದೆಲ್ಲಿ ಜಗಜ್ಜಾಹಿರು ಮಾಡಿಬಿಡುವನೋ ಎಂದು
ಸ್ತ್ರೀವ್ಯಾಮೋಹಿಯೂ; ಸಕಲ ಗುಪ್ತ ರೋಗಗಳ ಆಶ್ರಯದಾತನೂ ಆಗಿದ್ದ ಅಂದಿನ ಎಸೈ
ಬಿಳಿಗಿರಿರಂಗಯ್ಯಸ್ವಾಮಿ ಬಾಲಕನಿದ್ದ ತನ್ನ ಬೆನ್ನು ದಡವಿ ಬಾಯೊಳಗೆ ಸೊಂಟಿ
ಪೆಪ್ಪರುಮೆಂಟಿಟ್ಟು ನೀನು ಮುಂದೆ ದೊಡ್ಡ ಮನುಷ್ಯನಾಗುವಿ ಎಂದು ಆಶೀರ್ವಾದ ಮಾಡಿದ್ದ.
ಆ ಒಂದಾನೊಂದು ನೆನಪುಗಳನ್ನು ಮೆದುರಂತರಾಳದಿಂದ ಕಿತ್ತು ಮೆಲುಕು ಹಾಕುತ್ತ ತನ್ನ
ಕುರಿತು ರಸ್ತೆಯಲ್ಲಿ ಇಕ್ಕೆಲದಲ್ಲಿ ಸತ್‍ಪ್ರಜೆಗಳು ತಲಾ ಒಂದೊಂದು ಮಾತಾಡುತ್ತಿರುವುದನ್ನು
ಲೆಕ್ಕಿಸದೆ ವೀರಪಾಂಡ್ಯ ಕಟ್ಟಬೊಮ್ಮನನಂತೆ ಧೀರೋದಾತ್ತವಾಗಿ ನಡೆಯುತ್ತ ಠಾಣೆಗೆ
ಹತ್ತಿರ ಬಂದೇ ಬಿಟ್ಟ.
ಕಂದ, ಕೊಂದ, ತಂದ ಎಂಬೀ ಮೂರು ಲಿಂಗಾಕಾರದ ಶಬ್ದಗಳೊಳಗೆ ಅಡಕವಾಗಿರುವ
ರಾಮಾಯಣದಂತೆ ವೇದಿಕೆ ಮೇಲೆ ಘನೀಭೂತಗೊಂಡು ಉಲ್ಲಾಸಮಯತೆಯಿಂದ ನಿಂತಿದ್ದ ಠಾಣೆ
ಕಡೆ ನೋಡಿ ನಿಟ್ಟುಸಿರುಬಿಟ್ಟ.
ಒಂದೊಂದು ಮೆಟ್ಟಲಿಗೂ ಒಂದೊಂದು ಕಥೆ ಇರುವ ಭೋಜರಾಜನ ಸ್ವರ್ಣ ಸಿಂಹಾಸನದಂಥ
ಠಾಣೆಯ ಕಡೆ ಏರೀ ಏರೀ ತಲುಪಿ ಒಳಗೆ ಪ್ರವೇಶಿಸುವ ಮುನ್ನ ಹಿಂತಿರುಗಿ ನೋಡಿದ ಅವನ
ಕಣ್ಣಿಗೆ ದುರುಗಮ್ಮನ ಬೇವಿನ ಮರದ ಕೊಂಬೆ ರೆಂಬೆಗಳ ಮೇಲೆಲ್ಲ ಕದನ ಕುತೋಹಲಿಗಳು
ಗೋಚರಿಸಿದರು.
——————————

೧೫೯
ತಾನು ಬೇತಾಳ ಪಂಚವಿಂಶತಿ ಕಥೆಗಳ ಹಿರಣ್ಯಾಕ್ಷನಂಥ ಎಸೈ ಇರಬಹುದೆಂದು
ಊಹಿಸಿದ್ದಕ್ಕೆ ವಿರುದ್ಧವಾಗಿ ನರಪೇತಲನೂ; ಪ್ರಾಚೀನ ಆಸ್ತಮಾ ರೋಗಿಯೂ ನೀಳಕಾಯನೂ
ಆದಂಥ ವ್ಯಕ್ತಿಯೊಬ್ಬ ಕೊಕ್…. ಒಕ್ ಕೆಮ್ಮು ಬಂದು ಕಫವನ್ನು ಅಗ್ನಿಶಾಮಕ ಬಕೆಟ್ಟಿಗೆ
ಉಗುಳುತ್ತ ಎಸೈ ಕುರ್ಚಿಮೆಲೆ ವಿರಾಜಮಾನನಾಗಿದ್ದ.
“ಹಲೋ ಸಾರ್” ಎಂದು ಕೇಳಿ ಬಂದ ದ್ವನಿ ಕಡೆ ತಲೆಯನ್ನು ಕೂಡಲೆ ಎತ್ತಿದ ತಪ್ಪಿಗೆ
ಕೆಮ್ಮು ಒತ್ತರಿಸಿ ಬಂದುಬಿಟ್ಟು ಕೊಕ್ ಕೊಕ್ ಕೆಮ್ಮಿದ.
ಅವನನ್ನು ನೋಡುತ್ತಲೆ ರಘುಗೆ ತೆಲುಗು ಸಿನೆಮಾ ನಟ ರಮಣಾರೆಡ್ಡಿ ನೆನಪಾದ.
ಗ್ರಾಮಸ್ತರು ಪ್ರೀತಿಯಿಂದ ಟೈಗರ್, ಜೂಡೋ ಮಾಸ್ಟರ್, ಕರಾಟೆ ಕಲಿ ಎಂದು ಬಿರುದುಗಳನ್ನು
ಕೊಟ್ಟಿದ್ದರು.
ಟೈಗರ್ ಬಂದ ಮೇಲೆ ಕಳ್ಳತನಗಳಾಗಿಲ್ಲ.
ಜೂಡೋಮಾಸ್ಟರ್ ಬಂದ ಮೇಲೆ ಗ್ರಾಮಸ್ಥರು ಪರನಾರಿ ಸೋದರರಾಗಿರುವರು.
ಕರಾಟೆ ಕಲಿತು ಬಂದ ಮೇಲೆ ಸಾಲ ಕೊಡುವವರು ತಗೊಳ್ಳುವವರು
ಸತ್ಯಹರಿಶ್ಚಂದ್ರನ ನೆಂಟರಿಷ್ಟರಾಗಿರುವರು.
ರಘು ಆಶ್ಚರ್ಯದಿಂದ ನೋಡಿದ್ದ. ಎಸೈ ಎಂಬ ಸ್ಕೆಲಿಟನ್ನನ್ನು. ಸ್ಕೆಲಿಟನ್ನು
ಪ್ರಶ್ನಾತ್ಮಕವಾಗಿ ನೋಡುತ್ತಿರುವಾಗಲೇ ಎದುರುಗಿದ್ದ ಲಟಗೂ ಪಟಗೂ ಕುರ್ಚಿಮೇಲೆ
ಕೂತುಕೊಂಡ.
ಇನ್‍ವೆಸ್ಟಿಗೇಷನ್ನೋ; ಇಂಟರಾಗೇಷನ್ನೋ ಇನ್ನು ಶುರುಮಾಡುತ್ತಾನೆ. ತಾನು
ಹುತಾತ್ಮನಾಗಿ ಇತಿಹಾಸದ ಪುಟ ಸೇರುತ್ತೇನೆ ಎಂದು ಕಲ್ಪಿಸಿಕೊಂಡ ತನ್ನ ಕಲ್ಪನೆಗೆ ತಾನೆ
ನಕ್ಕ.
“ವಾಟ್ ಡು ಯು ವಾಂಟ್ ಫ್ರಂ ಮೀ” ರಘು ಬಬಲ್‍ಗಮ್ ಬಾಯಲ್ಲಿ ನಮಲುತ್ತ ಹೇಳಿದ.
“ಇಂಗ್ಲಿಷಿನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಳ್ಳುತ್ತಲೆ ಟೈಗರ್” ಎಲವೋ ತ್ರೀನಾಟ್ ಟೂ
ಹಡದೊಲೋರ ಹೋಟಲಿಗ್ಹೋಗಿ, ಓನ್ಲಿ ಒನ್ ಕಾಫಿ ತಗೊಂಡು ಬಾರೋ” ಎಂದು ಘರ್ಜಿಸಿದ.
ಓಹೋ ತಾನೊಬ್ನೇ ಕಾಫಿ ಕುಡ್ದು ಸ್ಟ್ರಾಂಗ್ ಇಂಟರಾಗೇಷನ್ನು ಸ್ಟಾರ್ಟ್ ಮಾಡ್ತಾನೆ
ಎಂದುಕೊಳ್ಳುತ್ತ ರಘು ಬಬ್ಬಲ್‍ಗಮ್ಮನ್ನು ಮರಡೋನ ಫುಟ್ ಬಾಲನ್ನು ಆ ಮೂಲೆಯಿಂದ ಈ ಮೂಲೆಗೆ
ತಿರುವಾಡಿದಂತೆ, ಆ ದವಡೆಯಿಂದ ಈ ದವಡೆಗೆ ಓಡಾಡಿಸಿದ.
“ಯಾಕೆ ಸಾರ್ ಹುಷಾರಿಲ್ವೆ” ಮಾತಿಗೆಳೆಯದಿದ್ದರಾಗುತ್ತದೆಯೆ?
“ಒನ್‍ಟ್ವೆಂಟಿ ಕಿಲೋ ಲಿಫ್ಟ್ ಮಾಡ್ತಿದ್ದೆ ಕಣಪ್ಪಾ.. ಎಂದು ಮುಖವನ್ನು ಒಂದು ಕ್ಷಣ
ಮಾಡಿಕೊಂಡು ಹೇಳಿದರು. “ಅದಿರ‍್ಲಿ.. ನಾನು ಒಂದು ಕೇಳ್ತೀದೀನಿ ನೀನು ಮಾತ್ರ ನಾನು
ನಿನ್ನ ತಮ್ಮ ಅಂತ ತಿಳ್ಕೊಂಡು ನಿಜ ಹೇಳ್ಬೇಕು. ನೋಡು.”
ಆತ ನನಗೆ ತಮ್ಮ! ಆತನ ವಯಸ್ಸೇನು? ನನ್ನ ವಯಸ್ಸೇನು? ಏನು
ಮಾತಾಡುತ್ತಿರುವನಲ್ಲ!
“ನನಗಿನ್ನೂ ಮದುವೇನೇ ಅಗಿಲ್ಲ ಸಾರ್ ಸ್ಟಿಲ್ ಐಯಾಮ್ ಬ್ಯಾಚುಲರ್. ನನಗಿನ್ನೂ ಬಿಲೋ
ಟ್ವೆಂಟಿಫೈವ್.”
“ಹ್ಹಾ! ನೀನಿನ್ನೂ ಬ್ಯಾಚುಲರ್.. ನಿನಗಿನ್ನೂ ಟ್ವೆಂಟಿಫೈವ್. ನನಗಿಂತ ನೀನು
——————————–

೧೬೦
ಯಂಗರ್ರೇನು?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತ ಕರಾಟೆ ಕಲಿ ” ಐ ಮ್ಯಾರೀಡ್ ವೆನ್ ಐ
ವಾಜ್ ಟ್ವೆಲ್ವ್ ಇಯರ್ಸ್ ಓಲ್ಡ್.. ”
“ಇರಬೌದು… ನನ್ಯಾಕೆ ಕರೆಸಿದ್ರಿ ಹೇಳಿ?” ಹೋದ ಕೂಡಲೆ ಕನ್ನಡಿಯಲ್ಲಿ
ನೋಡಿಕೊಳ್ಳಲು ನಿರ್ಧರಿಸುತ್ತ ಹೇಳಿದ.
ಅಷ್ಟರಲ್ಲಿ ಕಾಫಿ ಬಂತು. ಟೈಗರ್ ಬಸಿಯಲ್ಲೊಂದಿಷ್ಟು ಹಾಕಿಕೊಟ್ಟು, ತಾನು ಹ್ಹಾ… ಹ್ಹೂ… ಅನ್ನುತ್ತ ಕುಡಿಯತೊಡಗಿದ.
ಪೀಸಿಗಳೆಲ್ಲ ಮುಖ ಸಿಂಡರಿಸಿಕೊಂಡು ಟೈಗರನ್ನು ಶಪಿಸುತ್ತ ಅಲ್ಲಲ್ಲಿ
ನಿಂತುಕೊಂಡಿದ್ದರು.
ರಘು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಟೈಗರ್ನ ಮೀಸೆ ಮೇಲೆ ಅದುವರೆಗೆ
ವಿರಾಜಮಾನವಾಗಿದ್ದ ನೊಣ ಪುರ್ರನೆ ಹಾರಿ ಬಂದು ಬಸಿಯೊಳಗೆ ಬಿದ್ದು ಆತ್ಮಹತ್ಯೆ
ಮಾಡಿಕೊಂಡು ಕ್ರಾಂತಿಕಾರಿಯ ಸ್ವಾಭಿಮಾನವನ್ನು ಕಾಪಾಡಿತು.
ಟೈಗರ್ ನೊಣವನ್ನು ನೋಡಿ ತನ್ನ ಜಗಳಗಂಟಿ ಹೆಂಡತಿಯನ್ನು ನೆನಪಿಸಿಕೊಂಡು ಹಿಡಿಹಿಡಿ
ಶಾಪ ಹಾಕಿದ. ನಾಲಿಗೆಯಿಂದ ಮೀಸೆಗಂಟಿದ್ದ ಕಾಫಿ ನೆಕ್ಕಿಕೊಂಡ.
ಇದನ್ನೆಲ್ಲ ನೋಡುತ್ತಿದ್ದ ರಘೂಗೆ ಮೈಪರಚಿಕೊಳ್ಳಬೇಕೆನ್ನಿಸಿತು.
“ನನ್ನ್ಯಾಕೆ ಕರೆಸಿದೆ, ಹೇಳಿ ಸ್ವಾಮಿ?” ರಘು ಕಡ್ಡಿ ಮುರಿದಂತೆ ಮಾತಾಡಿದ್ದು ಕಂಡು
ಪೀಸಿಗಳಿಗೆ ಆಶ್ಚರ್ಯ. ಇಂದಿರಾಗಾಂಧಿಯವರ ಸಾಮ್ರಾಜ್ಯದಲ್ಲಿ ಇವನು ಪೋಲೀಸ್ರಿಗೆ
ಹೆದರುತ್ತಿಲ್ಲವೆಂದು.
“ಎಷ್ಟು ವರ್ಷದಿಂದ.. ಅಂದರೆ ಹೌಮೆನಿಯರ್ಸಿಂದ ಬೆಂಗ್ಳೂರು ಸೇರ‍್ಕೊಂಡಿರುವಿ?”
ಟೈಗರ್ ಕೊಕ್ ಕೊಕ್ ಕೆಮ್ಮಿತು.
“ಅದನ್ನು ಕಟ್ಕೊಂಡೇನಾಗೋದೈತಿ?” ರಘು ಎಷ್ಟಿದ್ದರೂ ಕ್ರಾಂತಿಕಾರಿ, ಏಕ್‍ಮಾರ್ ದೋ
ತುಕುಡಾ.
“ನಿನ್ತಮ್ಮನಾಗಿ ನಾನು.. ”
“ಅಲ್ಲ! ಗ್ರಾಂಡ್ ಫಾದರಾಗಿ.. ” ಮಾತನ್ನು ತಿದ್ದಿದ.
“ಏನೋ ಒಂದು… ಆ ವಯಲೆಂಟು ಸಿಟೀಲಿ ಏನು ಕೆಲ್ಸ ಮಾಡ್ತಿದ್ದೀ?”
“ಏನೋ ಒಂದು ಮಾಡ್ತಿದೀನಿ.”
“ಹಂಗಂದ್ರ ಸರಕಾರದ ವಿರುದ್ಧ ಮಸಲತ್ತೂ ಗಿಸಲತ್ತೂ.”
“ಮಸಲತ್ತು ಇಲ್ಲ ಗಿಸಲತ್ತೂ ಇಲ್ಲ. ಇಂದಿರಾಗಾಂಧಿಯವರೇನು ನಮ್ಮ ಸೋದರತ್ತೆ ಏನ್ರಿ
ಅದೆಲ್ಲ ಮಾಡೋಕೆ?”
“ಸೋದರತ್ತೆ ಅಂತೀಯಲ್ಲ.. ನವರಾಷ್ಟ್ರದ ನಿರ್ಮಾಪಕಿ ಅಂತ ಅನಬೇಕಪ್ಪಾ.”
“ಹ್ಹೂ ಆಗ್ಲಿ. ಆಕೆ ನವರಾಷ್ತ್ರದ ನಿರ್ಮಾಪಕಿಯೇ ಆಗಿರ್ಲಿ.. ಆದ್ರೆ ನಾನು
ದುಡೀಬೇಕು ತಿನ್ನಬೇಕು ಅಲ್ವೆ?”
“ಅದು ಸರಿ.”
ಟೈಗರು ಸೊಂಟದ ಮೇಲೊಂದು ಕೈ ಗಲ್ಲದ ಮೇಲೊಂದು ಕೈ ಇಟ್ಟುಕೊಂಡು ಸ್ವಲ್ಪ ಹೊತ್ತು
ಯೋಚಿಸಿದ.
“ಹಾಗಾದ್ರೆ ನೀನು ಬುಡಮೇಲು ಕೃತ್ಯದಲ್ಲಿ ತೊಡಗಿಲ್ಲ. ಅಂತಾಯ್ತು” ಟೈಗರ್
ಲೊಚಗುಟ್ಟಿತು.
——————-

೧೬೧
“ನಾನ್ಯಾಕೆ ತೊಡಗ್ಲಿ ಸ್ವಾಮಿ.. ನಮ್ದೇ ನಮ್ಗೆ ಸಾಕಾಗಿದೆ!”
“ಆದ್ರೆ ನಮ್ಗೆ ಹಂಗನ್ನಿಸ್ತಾ ಇದೆಯಲ್ಲಾ!
“ಏನಾದ್ರೂ ಎವಿಡೆನ್ಸು.”
“ನೀನು ತೊಟ್ಕೊಂಡಿರೋ ಕೆಂಪು ಬಟ್ಟೆನೇ ಸಾಕು.. ನೀನು ಸಂಚುಗಾರ ಅಂತ ಸಾಬೀತು
ಮಾಡೋಕೆ!”
“ಹಂಗಂದ್ರೆ ಈ ದೇಶದ ಓಣಿಓಣಿಗಳಲ್ಲಿರೋ ಸಾಧು ಸಂತ್ರು, ಗುರು ಜಗದ್ಗುರುಗಳೆಲ್ಲರೂ
ತೊಟ್ಟುಕೊಂಡಿರೋದು ಕೆಂಪು ಬಟ್ಟೆಯನ್ನೆ.. ಅವರನ್ನೆಲ್ಲ ಸಂಚುಗಾರರೂಂತ ಆರೋಪದ ಮೇಲೆ
ಅರೆಷ್ಟು ಯಾಕೆ ಮಾಡಬಾರ್ದು ಮೊದ್ಲು!”
“ಭಲೆ ಚಾಲಾಕಿದ್ದಿ ಕಣಪ್ಪಾ.”
“ಈ ದೇಶದಲ್ಲಿರೋ ಅರವತ್ತೆಪ್ಪತ್ತು ಕೋಟಿ ಮಂದಿ ಮೈಯಲ್ಲಿ ಹರಿತಿರೋ ರಕ್ತದ
ಬಣ್ಣಾನು ಕೆಂಪು ಎಂಬೋದನ್ನು ಮರೀಬೇಡಿ.”
“ಶಹಭಾಷ್” ಟೈಗರ್ ಒಂದು ಕ್ಷಣ ದಿಗ್ಭ್ರಮೆಗೊಂಡು ಮುಂದುವರಿದು ಕೇಳಿದ,
“ಇದನ್ನೆಲ್ಲ ನಾವು ಸರಿಮಾಡಿಬಿಡ್ತೀವಿ. ನಮ್ಗೇನು ಇದು ದೊಡ್ ವಿಷಯ ಅಲ್ಲ..
ಎಂಥೆಂಥ ಕೇಸ್ನ ಮುಚ್ಚಿ ಹಾಕಿದ್ದೀವಿ.. ನಿನ್ನ ಕೇಸ್ನೂ ಮುಚ್ಚಿಹಾಕ್ತೀವಿ.. ಆದ್ರೆ..”
“ಆದ್ರೆ?”
“ಸ್ವಲ್ಪ ಕೈ ಬೆಚ್ಚಗೆ ಮಾಡಬೇಕಪ್ಪಾ” ಟೈಗರ್ ಪಿಸುಗುಟ್ಟಿದ.
“ನನ್ನ ಹತ್ರ ಅದೇನು ಇಲ್ಲ”
“ಇದೆ… ಮುಂಗೈಗೆ ಕಟ್ಕೊಂಡಿರೋ ಅಟಕ್ ಪಿಟಕ್ ವಾಚು!”
“ಅಟಕ್ ಅಲ್ಲ ಪಿಟಕ್ಕೂ ಅಲ್ಲ… ಎಲೆಕ್ಟ್ರಾನಿಕ್”
“ಅದ್ನ ಕೊಟ್ ಬಿಟ್ರೆ?”
ಅಷ್ಟರಲ್ಲಿ “ಯಾರ್ರಿ ಅವ್ರು ಎಸೈ.. ಅವರಿಗೆ ಹೇಳೋರು ಕೇಳೋರು ಇಲ್ಲವೇನು?
ಇವ್ರಿಂದಾಗಿ ಊರಿಗೆ ಯಾರೂ ಬರಂಗಿಲ್ಲ… ಹೋಗೋಹಂಗಿಲ್ಲ” ಎಂದು ಸ್ಟೆನ್‍ಗನ್ ಸ್ಪೋಟಿಸುತ್ತ
ಗೊಬ್ಬರದ ಅಂಗಡಿ ಜಲಜಾಕ್ಷಿ ಒಳಗೆ ಬಂದುಬಿಟ್ಟಳು.
ಆಕೆಯನ್ನು ನೋಡುತ್ತಲೆ ಟೈಗರ್ ಲದ್ದಿ ಹಾಕಿದ. ಗಬಕ್ಕನೆ ಎದ್ದು, ‘ಬನ್ನಿ ಮೇಡಂ
ಬನ್ನಿ ಮೇಡಮ್’ ಅಂತ ಎದ್ದು ಸ್ವಾಗತ ಕೋರಿದ.
ರಘು ಕೂಲಿಂಗ್ ಗ್ಲಾಸ್ ಧರಿಸಿದ್ದ ಆ ಶ್ವೇತಾಂಬರಿಯತ್ತ ಆಶ್ಚರ್ಯದಿಂದ ನೋಡಿದ.
“ನಮ್ಮಿಂದ ಏನಾಗಬೇಕು ಮೇಡಂ” ಟೈಗರ್ ಹಲ್ಲು ಗಿಂಜಿದ.
“ನಮ್ಮ ಪೈಕಿ ಒಬ್ಬರನ್ನು ಸ್ಟೇಷನ್ಗೆ ಕರೆಸಿಕೊಂಡಿದ್ದೀರಂತಲ್ಲ?”
“ಇವ್ರೇ! ಅವರು”
“ಓಹ್ ಇವರೇನಾ.. ” ಜಲಜಾಕ್ಷಿ ರಘು ಕೈ ಕುಲುಕಿ “ನೈಸ್ ಟು ಮೀಟ್ ಯು… ನಾನು
ಅನಸೂಯಾ ಕ್ಲಾಸ್ಮೇಟ್ಸ್” ಎಂದಳು.
ನಂಟರ ಟೈಗರ್ ಹ್ಯಾಪು ಮೋರೆ ಹಾಕ್ಕೊಂಡು ಮಾತು ಮಾತಿಗೆ ಸಾರಿಪಾರಿ ಹೇಳಿ
ಅವರಿಬ್ಬರನ್ನು ಬೀಳುಕೊಟ್ಟನು.
ತನ್ನನ್ನು ಸಂಕಟದಿಂದ ಪಾರು ಮಾಡಿದ ಈ ವೀರವನಿತೆ ಯಾರೂಂತ ಆಕೆಯ ಹಿಂದೆಯೇ
————————-

೧೬೨
ಬೆರಗಿನಿಂದಲೇ ನಡೆದ.
ಯಮನ ಕಾಟೇಜು ಪೊಕ್ಕುಳಿದು ಬಂದಾಯ್ತವನ ಪರಿಸ್ಥಿತಿ.
ನೆಮ್ಮದಿಯಿಂದ ಉಸಿರುಬಿಟ್ಟ.
“ಥ್ಯಾಂಕ್ಸ್ ಮೇಡಂ. ನಾನಿನ್ನು ಬರ‍್ತೀನಿ.
“ಬನ್ನಿ ಡ್ರಾಪ್ ಕೊಡ್ತೀನಿ” ಜಲಜಾಕ್ಷಿ ಕಾರಿನ ಬಾಗಿಲು ತೆಗೆದಳು.
“ಮತ್ತೆ ಯಾಕೆ! ನಡಕೊಂಡೇ ಹೋಗ್ತೀನಿ” ಫಾರ್ಮಾಲಿಟೀಸ್ ವಿಷಯದಲ್ಲಿ ರಘು ಯಾವತ್ತೂ
ಒಂದು ಹೆಜ್ಜೆ ಮುಂದು.
“ಅಯ್ಯೋ ಬಾರಪ್ಪಾ… ನಿನ್ ಬಿಡೋ ನೆಪದಲ್ಲಿ ನಾನೂ ಅನೂನ ಮಾತಾಡಿಸಿದಂತಾಗ್ತದೆ”
ಎಂದು ಒತ್ತಾಯಿಸಿದ ಮೇಲೆ ನಿರಾಕರಿಸುವುದಾವುದೇನು?
ಆಕೆಯ ಒತ್ತಾಯದಿಂದ ಆಕೆಯ ಮಗ್ಗುಲು ಅಂದರೆ ಮುಂದುಗಡೆ ಸೀಟಿನಲ್ಲಿ
ವಿರಾಜಮಾನನಾದ.
ದುರುಗಮ್ಮನ ಬೇವಿನ ಮರದ ಮೇಲೆಲ್ಲ ಕೂತಿದ್ದ ಕದನ ಕುತೋಹಲಿಗಳು ‘ಉಘೇ’ ಎನ್ನಲು
ಜಲಜಾಕ್ಷಿ ಎಂಬ ರಾವಣನು ರಘುರಾಮ ಎಂಬ ಸೀತೆಯನ್ನು ಕಾರು ಎಂಬ ಪುಷ್ಪಕ
ವಿಮಾನದಲ್ಲಿ ಅಪಹರಿಸುತ್ತಿರುವ ರೀತಿಯಲ್ಲಿ ಬುರ್ ಎಂದು ಸದ್ದು ಮಾಡುತ್ತ; ನೆಲ ಮುಗಿಲು
ನಡುವೆ ಶೋಭಾಯಮಾನದವಾದ ಧೂಳು ಎಬ್ಬಿಸುತ್ತ, ತಗ್ಗು ದಿನ್ನಿಯೊಳಗೆ ಒಳ್ಳೆಯ ಸ್ಪ್ರಿಂಟರ್
ಥರಕುಪ್ಪಳಿಸುತ್ತ; ಹೆಜ್ಜೆಗೊಮ್ಮೊಮ್ಮೆ ಪುಂಯ್ ಪುಂಯ್ ಪುರ್ರ್ ಪುರ್ರ್ ಎಂದು ಕೇದಾರ ಗೌಳ
ಹಾಡುತ್ತ; ಆನೆ ಹೋದ ಕಡೇಲೆಲ್ಲ ಹಾದಿ ಎಂಬಂತೆ ಹಾದಿ ಇಲ್ಲದ ಕಡೆ ಹಾದಿ ಮಾಡಿಕೊಂಡು
ಓಡತೊಡಗಿತು.
ಓಡೀ ಓಡೀ ದಣಿದು ಶಾಸ್ತ್ರಿಗಳ ಮನೆ ಮುಂದೆ ಡರ್ರಡಸಕ್ಕೆಂದು ಸಿಂಹನಾದಗೈಯುತ್ತ
ಅದು ನಿಂತು ಬಿಟ್ಟೊಡನೆ ಅಲುಮೇಲಮ್ಮ; ಶಾಸ್ತ್ರಿಗಳು ; ಶಾಮು, ಕಾಮೋಷಿ ಮೊದಲಾದ
ಸಸ್ತನಿಗಳು ಹೊಸಪೇಟೆಯಿಂದ ಬೀಗರೇ ಬಂದುಬಿಟ್ಟಿರುವರೆಂದು ಅನ್ಯಥಾ ಭಾವಿಸಿ ಅಂಗಳಕ್ಕೆ
ಓಡಿಬಂದರು.
ಧೂಳಿನೊಳಗೆ ಅನಾವರಣಗೊಂಡು ಕ್ರಮೇಣ ಗೋಚರಿಸಿದ ಜಲಜಾಕ್ಷಿ ಎಂಬ ರಾಹುವನ್ನೂ,
ರಘುರಾಮ ಎಂಬ ಕೇತುವನ್ನೂ ನೋಡಿ ಇದ್ದಕ್ಕಿದ್ದಂತೆ ತಳ ಸಡಲಿದಂತಾಗಿ ಶಾಮು ಎಂಬ
ಚಂದ್ರನು ಕಕ್ಕಸು ಎಂಬ ವಿಂಧ್ಯಾಪರ್ವತದ ಗವಿಯೊಳಗೆ ಪಲಾಯನ ಮಾಡುತ್ತಿದ್ದುದನ್ನು
ಕಂಡು..
“ಎಲೈ ಪುಳಿಯೋಗರೆ.. ಮರ್ಯಾದೆಯಿಂದ ಬರ್ತೀಯೋ ಇಲ್ಲವೋ?” ಎಂದು ಗೊಬ್ಬರದಂಗಡಿಗೆ
ಗೊಬ್ಬರದಂಗಡಿಯೇ ‘ಧಡ್ ಧಡಿಲ್’ ಎಂದು ಗುಡುಗಲು..
ಶಾಮನು ಶೋಕ ಸಂತಪ್ತ ಕವಿತೆಯಂತೆ ಸಹಗಮನ ಮಾಡಲಿರುವ ಸತಿಯಂತೆ
ಭಾರವಾದ ಒಂದೊಂದೆ ಹೆಜ್ಜೆಗಳನ್ನು ಇಡುತ್ತ ಕಾರಿನ ಕಡೆ ನಡೆಯುತ್ತಿರಲು….
“ಸ್ತ್ರೀ ಸ್ವಾತಂತ್ರ್ಯಂ ನ ಅರ್ಹತಿ” ಎಂದು ಶಾಸ್ತ್ರಿಗಳು ಅವನನ್ನು ತಡೆಯಲು
ಯತ್ನಿಸುತ್ತಿರಲು..
“ಅಯ್ಯೋ ದೇವರೇ ನನ್ನ ಮಗನನ್ನು ಕಾಪಾಡು” ಎಂದು ಅಲುಮೇಲಮ್ಮ ದೇವರಿಗೆ ತುಪ್ಪದ
ದೀಪ ಹಚ್ಚಲು ಒಳಗೆ ಓಡಲು
“ಏನೋ, ಸೀನ್‍ಕಾನರಿ.. ಎಷ್ಟು ದಿನಾಂತ ತುಳಸೀ ಕಟ್ಟೆಯೊಳಗೆ
ಬಚ್ಚಿಟ್ಟುಕೊಂಡಿರ್ತೀಯಾ.. ಬಾ.. ಕಾರು ತಳ್ಳು” ಎಂದು ಜಲಜಾಕ್ಷಿ ಸುಗ್ರೀವಾಜ್ಞೆ
ಮಾಡಿದಳು.
———————

೧೬೩
“ಯಾಕಿವರ‍್ನ ಗೋಳಾಡಿಸುತ್ತಿರುವಿರಿ?” ಎಂದು ರಘು ಒಂದು ಕ್ಷಣ ಜಾಣ್ತನದ ಪ್ರಶ್ನೆ
ಹಾಕಿದ.
“ಇವ್ರೂ ನನ್ ಕ್ಲಾಸ್‍ಮೇಟ್ ಕಣ್ರಿ.. ನಾನಿವನನ್ನು ರೇಪ್ ಮಾಡೋಕೆ ಎರಡು ಸಾರಿ
ಪ್ರಯತ್ನಿಸಿದ್ದೀನಿ” ಎಂಸು ಬಲಿಪಶು ಕಡೆ ತಿರುಗಿ “ಹೌದೋ ಅಲ್ಲವೋ” ಎಂದು ಕಣ್ಣು
ಮಿಟುಕಿಸಿದಳು.
ಅದಕ್ಕೆ ಅವನು ವಿಧೇಯ ವಿದ್ಯಾರ್ಥಿಯಂತೆ ತಲೆ ಅಲ್ಲಾಡಿಸಿದನು.
“ಅಭ್ಯಾಸಾನುಸಾರಿಣೀ ವಿದ್ಯಾಬುದ್ಧಿ; ಕರ್ಮಾನುಸಾರಿಣೀ” ಎಂದು ಶಾಸ್ತಿಗಳು ಬಿಟ್ಟು
ಬಿಡಮ್ಮಾ ಆದಿಶಕ್ತಿ ಅವನು ಮದುವೆಯಾಗೋ ಹುಡುಗ”
“ಅದನ್ನು ಪರೀಕ್ಷೆ ಮಾಡಬೇಕೂಂತಲೇ ನಾನು ಪ್ರಯತ್ನಿಸಿದ್ದು ಶಾಸ್ತಿಗಳೇ” ಎಂದು ಆಕೆ
ತುಂಬ ಬೊಲ್ಡಾಗಿ ಉತ್ತರ ಕೊಟ್ಟಳು.
ವಿಧಿ ಲಿಖಿತಂ ಬುದ್ಧಿರನುಸರತಿ ಅಂತ ಹಣೆಹಣೆ ಚಚ್ಚಿಕೊಳ್ಳುತ್ತ ಒಳಗಡೆ ಹೋದರು.
ಶಾಮನ ಸುಪ್ತಾವಸ್ಥೆಯ ಮನಸ್ಸಿನ ನೂರೆಪ್ಪತ್ತರಡನೆಯ ಪುಟದ ಕೊನೇ
ಪ್ಯಾರಾದಲ್ಲಿ ಜಲಜಾಕ್ಷಿಯ ರೂಪದ ಹಾಗೂ ಕಬಂಧ ಬಾಹುವಿನ,
ಧೃತರಾಷ್ಟ್ರಾಲಿಂಗನದ ವರ್ಣನೆ ಇತ್ತು. ಆದ್ದರಿಂದ ಅವನು ಒಲ್ಲದ ಮನಸ್ಸಿನಿಂದ
ಸಲ್ಲದ ಕಾರ್ಯವನ್ನು ಮಾಡಲು ಸಂಸಿದ್ಧನಾದನು.
ರಘು ಜಲಜಾಕ್ಷಿ ಕೂತಿದ್ದ ಕಾರಿನ ಹಿಂಭಾಗವನ್ನು ಎರಡೂ ಕೈಗಳಿಂದ
ಸ್ಪರ್ಶಿಸಿದಾಗ ಅಸದಳ ಆನಂದವಾಯಿತು. ಜಲಜಾಕ್ಷಿಯ ಭಾರೀ ಜಘನಗಳನ್ನು
ತಳ್ಳುತ್ತಿರುವೆನೆಂದು ಅವನು ಭಾವಿಸಿದ. ತಿಣುಕುತ್ತ ತಳ್ಳುತ್ತಲೆ ಅವನ ತಳ ಕ್ಲಾರಿನೇಟ್
ವಾದನ ಮಾಡಿತು. ಅಷ್ಟು ದೂರ ತಳ್ಳಿದ. ಕಾರು ಸ್ಟಾರ್ಟ್ ಆಗುತ್ತಲೆ ‘ಪಾಹಿಮಾಮ್
ಜಗನ್ಮಾತಾ’ ಎಂದು ಉದ್ಗರಿಸುತ್ತ ಮನೆಯೊಳಗೆ ಓಡಿ ತಲೆ ಮರೆಸಿಕೊಂಡನು.
ಪ್ರಾಯೋ ಗಚ್ಚತಿ ಯತ್ರ ದೈವಹತಕಃತತ್ರೈವ ಯಾಂತ್ಯಾಪದಃ ಎಂದು ಭರ್ತೃಹರಿ
ಹೇಳಿರುವುದು ಸುಳ್ಳಾಗದು.
“ಅಡಸಿದಾಪತ್ತಿನಲಿ ಧೈರ್ಯವ ಹಿಡಿವುದೇ ಸುಪ್ರೌಢೀ ಅಂತ ಕೋಳಿವಾಡದ
ನಾರಣಪ್ಪನೋರು ಹೇಳಿರುವುದು ಸುಳ್ಳಲ್ಲವೋ” ಎಂದು ಶಾಸ್ತ್ರಿಗಳು ಮೊಮ್ಮಗನನ್ನು ಎದುರಿಗೆ
ಕೂಡ್ರಿಸಿಕೊಂಡು ಪ್ರಾಪಂಚಿಕ ಜ್ಞಾನದ ಬಗ್ಗೆ ವಿವರಿಸುತ್ತಿರುವಾಗ..
ಅತ್ತ..
“ಈ ರಘು ನಿಜಕ್ಕೂ ಹುಲಿ ಕಣೇ ಅನಸೂಯಾ ಪೋಲೀಸರನ್ನು ಯಾರು ಹೆದರಿಸುವರೋ
ಅಂಥವರು ಹೆಂಡತಿಗೆ ಖಂಡಿತ ಹೆದರಿ ಬಾಳುವು ಮಾಡ್ಕೊಂಡು ಹೋಗ್ತಾರೆ ನೋಡು” ಎಂದು
ಜಲಜಾಕ್ಷಿ ಅಣಿಮುತ್ತುಗಳನ್ನುದುರಿಸಿದಳು. “ಇಂಥವರು ತಮ್ಮ ಪ್ರತಿಭೆಯನ್ನು ಇಂದಿನ
ರಾಜಕಾರಣಕ್ಕೆ ಧಾರೆ ಎರೆಯಬೇಕಿದೆ” ಎಂದು ರಾಜಕಾರಿಣಿಯ ಗತ್ತಿನಲ್ಲಿ ನುಡಿದಳು.
ಬ್ರಹ್ಮನ ಮುಖದಿಂದ ಜನಿಸಿದ ಕಾಮಧೇನುವೇ ಅಟಕ್ ಪಿಟಿಕ್ ವಾಚಿನ ರೂಪದಲ್ಲಿ
ಅಲಂಕರಿಸಿರುವುದೋ ಎಂಬಂತಿದ್ದುದರ ಕಡೆ ಕುಡಿ ನೋಟ ಬೀರಿದಳು. ಇತಿಹಾಸದ ನಾಳಿನ
ಪುಟದಲ್ಲಿ ಭಾರತದ ಭವಿಷ್ಯ ಬರೆಯಲಿರುವ ತಾನು ಯಕಃಚಿತ್ ವಾಚಿಗೆ
ಪರವಶಳಾಗುವುದೆಂದರೇನು? ದಿಕ್ಕುಗಳನ್ನು ಹಡುಕಿಕೊಂಡಲೆಯುವ ತನ್ನ ಎಮ್ಮೆಲ್ಲೆ
ಡಾರ್ಲಿಂಗಿಗೆ ಹೇಳಿದರಾಯಿತು. ಕಂಕುಳದವರೆಗೆ ಕಟ್ಟಿಕೊಳ್ಳುವಷ್ಟು ತಂದುಕೊಡುವನು!
ಆಕೆ ತನ್ನ ಘನವಾದ ವಾಚಿನ ಕಡೆ ನೋಡುತ್ತಿರುವಾಗ ಅನಸೂಯಾ ಕಾಫಿಯೊಂದಿಗೆ
—————–

೧೬೪
ಚುರುಮುರಿ ತಂದುಕೊಟ್ಟಳು. ತನ್ನ ಕಿಲಾಸು ಮೇಟಿಗೆ ಕುರುಕುಲು ತಿಂಡಿ ಎಂದರೆ ತುಂಬ
ಇಷ್ಟವೆಂದು ಆಕೆಗೆ ಗೊತ್ತಿಲ್ಲದಿಲ್ಲ. ಇಲ್ಲವಾದರೆ ಈ ಪಾಟಿ ದೇಹ ಬೆಳೆಸಿಕೊಳ್ಳುವುದು ಹೇಗೆ
ಸಾಧ್ಯ? ಆಕೆ ಕಣ್ಣು ಮಿಟಿಕಿಸುವುದರೊಳಗಾಗಿ ತಿಂದು ಮುಗಿಸಿದಳು. ಕಾಫಿ ಕುಡಿಯುತ್ತ
ಮದುವೆಯ ದಿನದ ಬಗ್ಗೆ ವಿಚಾರಿಸಿದಳು. ಕರವಸ್ತ್ರದಿಂದ ಬಾಯಿ ಒರೆಸಿಕೊಳ್ಳುತ್ತ ಒಳ್ಳೆ
ಕ್ರಾಂತಿಕಾರಿಯನ್ನೇ ಮಾಡ್ಕೊಳ್ತಿದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದಳು. ತನ್ನ ಗೆಳೆತಿಯ
ಕಿವಿಯೊಳಗೆ ಬಾಯಿಇಟ್ಟು ಡರ್ರನೆ ಡೇಗಿ ‘ಏನಾದ್ರು ಒಂಚೂರು ಶಾಂಪಲ್ ನೋಡಿದೇನು? ಎಂದೂ, ಆ
ಶಾಸ್ತ್ರಿಯನ್ನು ಪ್ರೀತಿಸಿ ಮೋಸ ಹೋಗಿದ್ದಿ ಎಂದೂ, ಮದುವೆಗೆ ಮುಂಚೆ ಟೇಸ್ಟ್ ನೋಡೊದನ್ನು
ಮರೆಯಬೇಡವೆಂದೂ; ಅದರಲ್ಲಿ ತಾನು ಎಕ್ಸ್‍ಪರ್ಟ್ ಎಂದೂ; ಇಲ್ಲದಿದ್ದಲ್ಲಿ ತನ್ನಿಂದ ವ್ಹೇಟ್‍ಲಿಫ್ಟ್
ಮಾಡಲಿಕ್ಕಾಗುತ್ತಿರಲಿಲ್ಲವೆಂದೂ ಪಿಸುಗುಟ್ಟಿದಳು.
ಇನ್ನೂ ಹೇಳುತ್ತಿದ್ದಳೇನೋ! ಆದರೆ ಓಣಿಯ ಹುಡುಗರೆಲ್ಲ ಕಾರಿನ ಪಾರದರ್ಶಕದ
ಮೈಯೊಳಕೆ ಇಣುಕಿ ತಂತಮ್ಮ ಮುಖವನ್ನು ನೋಡಿಕೊಳ್ಳತೊಡಗಿದ್ದರು. ಕೆಲವರು ಪುಂಯ್ ಪುಂಯ್
ಅಂತ ಹಾರ್ನ್ ಮಾಡುತ್ತಿದ್ದರೆ ಮತ್ತೆ ಕೆಲವರು ಅದರ ಮೇಲೆ ಸ್ವಯಾರ್ಜಿತ ಜ್ಞಾನವನ್ನು
ಧಾರೆ‍ಎರೆಯತೊಡಗಿದ್ದರು. ಈ ಕಾರಣದಿಂದಾಗಿ ಜಲಜಾಕ್ಷಿ ” ಅನೂ ಬರ್ತೀನಿ ಮುಂದೆ
ಹೇಗೋ ಎಮ್ಮೆಲ್ಲೆಯಾಗಿ ಬೆಂಗ್ಳೂರಲ್ಲಿರ‍್ತೀನಲ್ಲ… ಆಗ ವಿಚಾರಿಸಿಕೊಳ್ತೀನಿ” ಎಂದು
ಬೀಳ್ಕೊಂಡು ಹೊರಟಳು.
ಆಕೆ ಮರೆಯಾಗುವವರೆಗೆ ರಘು ನೋಡಿದ. ಇಂಥಾಕಿ ತಮ್ಮ ಕ್ರಾಂತಿಕಾರಿ
ಚಟುವಟಿಕೆಗಳಲ್ಲಿ ಇದ್ದುಬಿಟ್ಟಿದ್ದರೆ ಚಿಟಿಕೆ ಹೊಡೆವಷ್ಟರಲ್ಲಿ ಸಮಾನತೆಯನ್ನು
ಸಾಧಿಸಿಬಿಡಬಹುದೆಂದುಕೊಂಡ. ಇಂಥಾಕಿಯ ತ್ರಿವರ್ಣದ ಭಾವಚಿತ್ರ ಇಟ್ಟುಕೊಂಡೇ ಅಮೀರರ
ಮತ್ತು ಗರೀಬರ ನಡುವಿನ ಕಂದರ ಅಳಿಸಿಬಿಡಬಹುದೆಂದುಕೊಂಡ ರಘು ಒಂದು ನಿಡಿದಾದ
ಉಸಿರುಬಿಟ್ಟನು.
ಅನಸೂಯ ಏನೋ ಹೇಳಬೇಕೆಂದು ಬಾಯಿ ತೆರೆದಳು. ಬೆಳಗಿನ ತಿಂಡಿಗೆ ಜೊತೆಯಾಗಿ
ಶಾಸ್ತ್ರಿಗಳ ಮನೆಗೆ ಬರಬೇಕೆಂದು ಆರು ಬೊಟ್ಟಿನ ಪದ್ದಕ್ಕ ತುಸು ಹೊತ್ತಿನ ಹಿಂದೆ ಬಂದು
ಹೇಳಿ ಹೋಗಿದ್ದಳು. ಜೊತೆಯಾಗಿ ಅಲ್ಲದಿದ್ದರೂ ರಘು ನನ್ನೊಬ್ಬನ್ನೇ ಕಳಿಸಬಹುದು! ತಿಂಡಿಯಲ್ಲಿ
ಏನಾದರೂ ಹಾಕಿಬಿಟ್ಟರೆ ಎಂದು ಅನುಮಾನ ಕಾಡಿತು. ತಿಂಡಿ ತಿಂದಾದ ಮೇಲೆ ತಟ್ಟೆ ಕಪ್ಪು
ತೊಳೆ ಎಂದು ಹೇಳಿಬಿಟ್ಟರೆ ಎಂಬ ಇನ್ನೊಂದು ಅನುಮಾನವೂ ಕಾಡಿತು. ಹೃದಯದೊಳಗೊಂದೂ
ಬಚ್ಚಿಟ್ಟುಕೊಳ್ಳದೆ ಬಾಯಿಯಿಂದ ರಘು ಒಂದೇ ಸಮನೆ ಪುತುಪುತು ಮಾತಾಡಿಬಿಟ್ಟರೆ ಎಂಬ
ಮತ್ತೊಂದು ಅನುಮಾನವೂ ಕಾಡಿತು. ಶಾಸ್ತ್ರಿಗಳಾಗಲೀ; ಅಲುಮೇಲಮ್ಮನಾಗಲೀ ರಘೂಗೆ
ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಮುರಿದುಬಿಟ್ಟರೆ ಎಂಬ ಮಗದೊಂದು ಅನುಮಾನವೂ ಕಾಡಿತು.
ಹೀಗೆ ಯೋಚಿಸುತ್ತಾ ಯೋಚಿಸುತ್ತಾ ತನ್ನ ಅನುಮಾನಗಳಿಗೆ ತನಗೇ ನಗು ಬಂದು ಅನುಸೂಯ
ಕಿಲಕಿಲ ನಕ್ಕಳು.
ಅಕ್ಕ ತಮ್ಮ ಇಬ್ಬರೂ ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದರು.

* * * * *

ಮರುದಿನ ಬೆಳೆಗ್ಗೆ ಸೂರ್ಯನ ಕಿರಣಗಳು ಸಚರಾಚರಗಳಿಗೆ ಹಲೋ ಹಲೊ ಅನ್ನುತ್ತಿರುವಾಗ ಆರು ಬೊಟ್ಟಿನ ಪದ್ದಕ್ಕ ಬರಬೇಕಂತೇ ಅಂತ ಮತ್ತೆ ಬಂದಳು. ಒಂದು ಪಟ್ಟದ
—————–

೧೬೫
ಹಿಂದೆಯೇ ಕುಡುಕ ಗಂಡನನ್ನು ತ್ಯಜಿಸಿರುವ ಪದ್ದಕ್ಕಗೆ ಮೂಲತಃ ಮಾಂಸಾಹಾರಿಯಾದರೂ ಅಪ್ಪಟ ಸಸ್ಯಾಹಾರಿಗಳ ಮನೆಯಲ್ಲಿ ಕಸಮುಸುರಿ ಮಾಡುವುದೆಂದರೆ ತುಂಬ ಮೋಜು. ಗಂಡಸರನ್ನು ತ್ಯಜಿಸಿದ ಪಾಪ ಪರಿಹಾರರ್ಥವಾಗಿ ಶಾಸ್ತ್ರಿಗಳ ಮನೆಯಲ್ಲಿ ಸೇವೆಗೆ ಸೇರಿಕೊಂಡಿದ್ದಳು. ಒಂದೆರಡು ತಿಂಗಳ ಹಿಂದೆ ಕೈಗೆ ಬಂದಿರುವ ಮಗನನ್ನು ಎಲ್ಲರಿಗೆ ತೋರಿಸಿಕೊಂಡು ಅಡ್ಡಾಡಿದ್ದಳು. ಕಸಮುಸುರಿಯಿಂದ ಕೂಡಿಟ್ಟಿದ್ದ ಗಂಟನ್ನು ಮಗನ ಕೈಗೆ ಕೋಡುತ್ತ ‘ನಿಮ್ಮಪ್ಪನ್ನ ಬೇಷಿ ನೋಡ್ಕಳಪಾ’ ಎಂದು ಕಣ್ತುಂಬಿ ಹೇಳಿ ಬೀಳ್ಕೊಟ್ಟಿದಳು.
“ಅನಸೂಯಮ್ಮನವರೇ.. ನಿಮ್ಮವರನ್ನು ಕರಕೊಂಡು ಬರಬೇಕಂತೆ.. ಅಲುಮೇಲಮ್ಮನವರು ಬಿಟ್ಟು ಬರಬೇಡ ಎಂದು ಹೇಳಿದ್ದಾರೆ!” ಪದ್ದಕ್ಕಗೆ ವ್ಯಾಕರಣ ಶುದ್ಧ ಮಾತಾಡುವುದೆಂದರೆ ಇತ್ತೀಚಿಗೆ ತುಂಬಾ ಖಯಾಲಿ.
ತಮ್ಮ ಮಗಳಾಗಲೀ; ತಮ್ಮನಾಗಲೀ ಅಲ್ಲಿಗೆ ಹೋಗುವುದು ರುಕ್ಕಮ್ಮಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.
ಆದರೆ ದೋಸೆ ವಾಸನೆ ಎಂಬ ಬಲೆಯಲ್ಲಿ ಬಂಧಿತನಾಗಿ ವಿಲಿವಿಲಿ ಒದ್ದಾಡುತ್ತಿದ್ದ ರಘುವನ್ನು ತಡೆಯುವುದು ಒಂದೆ, ಉಕ್ಕಿ ಹರಿಯುವ ನದಿಯನ್ನು ತಡೆಯುವುದು ಒಂದೆ.
“ಪದ್ದಕ್ಕ.. ನಾನಿಲ್ಲಿ ಮಾಡಿಟ್ಟಿರೋ ತಿಂಡಿ ಯಾರು ತಿನ್ನಬೇಕಮ್ಮಾ?.. ಅವಲಕ್ಕಿ ವಗ್ಗರಣೆ ಮಾಡಿ ಕಾಯ್ತಿದೀನಿ” ರುಕ್ಕಮ್ಮ ಬಚ್ಚಲಮನೆಯಿಂದಲೇ ಕೂಗಿದಳು.
ಸುತ್ತೆಲ್ಲ ಗುಡ್‍ಮಾರ್ನಿಂಗ್ ಹೇಳುತ್ತಿರುವ ಮಸಾಲೆ ದೋಸೆ ಪರಿಮಳ ಬೇರೆ, ಮಂತ್ರಮುಗ್ದನಾದ. ಪರವಶನಾದ. ಬ್ರಾಹ್ಮಣ ವಿಧವೆಯರು ರುಚಿಕರವಾದ ದೋಸೆ ತಯಾರಿಸುತ್ತಾರೆಂಬುದು ಅವನು ಕಂಡುಹಿಡಿದ ಸಿದ್ಧಾಂತಗಳಲ್ಲಿ ಒಂದು. ಉದ್ದಿನಬೇಳೆ ಪ್ರಮಾಣ ಕಡಿಮೆ ಇದ್ದರೂ ರುಬ್ಬಿದ ಹಿಟ್ಟು ಉಬ್ಬುವುದು ಅವರ ಮೇಲಿನ ಅಂತಃಕರಣದಿಂದಾಗಿಯೇ ಎಂಬುದು ಅವನು ಕಂಡುಕೊಂಡ ಹಲವು ಸತ್ಯಗಳಲ್ಲಿ ಒಂದು.
ಬರೀ ವಗ್ಗರಣೆ ಮಾಡುವುದರಲ್ಲಿಯೇ ಜೀವ ಸವೆಸಿದ ಅಕ್ಕನ ಕಡೆ ನೋಡಿದ. ಅಕ್ಕನಿಗೆ ದೋಸೆ ಮಾಡುವುದು ಗೊತ್ತಿದ್ದಲ್ಲಿ ಭಾವ ಮಾನವಾತೀತ ಶಕ್ತಿಯನ್ನು ಹಿಂಬಾಲಿಸಿ ಹೋಗುತ್ತಿರಲಿಲ್ಲವೇನೋ?
ಒಳಗಡೆ ಅಕ್ಕ ಕಾದ ಕಡಾಯಿಯಲ್ಲಿ ಎನೇನೋ ಹಾಕಿ ಚುಂಯ್ ಚುಂಯ್ ಅನ್ನಿಸುತ್ತಲೆ ಇರುವಳು. ಸೀರೆಗೆ ಕೈಯೊರಸಿಕೊಳ್ಳುತ್ತ ಆಕೆ ಅಕಸ್ಮಾತ್ ಪಡಸಾಲೆಗೆ ಬಂದಳು.
ಬೆಂಗಳೂರಿನಲ್ಲಿ ವಾಸಿಸುತ್ತಿರುವವನು ಎಂಬ ಅಕ್ಕರೆಯಿಂದ ಪದ್ದಕ್ಕ ರಘೂನ ಕಡೆಗೆ ಕಡೆಗೆ ನೋಡುತ್ತ ನೋಡುತ್ತ ಮುಖವನ್ನು ಸಾಕಷ್ಟು ಕೆಂಪಗೆ ಮಾಡಿಕೊಂಡಿದ್ದಳು. ಸಾಮಾನ್ಯ ಮನುಷ್ಯನನ್ನು ಮಾತಾಡಿಸಿದಂತೆ ಬೆಂಗಳೂರಿನವರನ್ನು ಮಾತಾಡಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಆಕೆ ಒರಳಲ್ಲಿ ಅವಲಕ್ಕಿ ಕುಟ್ಟುವ ಹಾಗೆ ಭಾಷೆಯನ್ನು ಅಲಂಕಾರವೆಂಬ ಒರಳಲ್ಲಿ ನಿಶ್ಶಬ್ದವಾಗಿ ಕುಟ್ಟುವ ತಾಲೀಮು ನಡೆಸಿದ್ದಳು.
ಪದ್ದಕ್ಕ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದುದ್ದನ್ನು ನೋಡಿ ರುಕ್ಕಮ್ಮ ಊಹಿಸಿದ್ದೇ ಬೇರೆ! ಗಂಡಿನ ಆಸರೆಯಿಂದ ವಂಚಿತಗೊಂಡಿರುವ ಹೆಣ್ಣುಗಳೆಂದರೆ ಆಕೆಗೆ ಎಲ್ಲಿಲ್ಲದ ಗುಮಾನಿ. ಒಮ್ಮೊಮ್ಮೆ ತನ್ನನ್ನು ತಾನೇ ಅನುಮಾನಿಸುತ್ತಿದ್ದ ಜಾಯಮಾನದಾಕಿಯೂ ಹೌದು.
“ಏನ್ ಪದ್ದಕ್ಕ? ಇನ್ನೂ ಇಲ್ಲೇ ನಿಂತಿದ್ದೀಯಲ್ಲೆ… ನಾನು ಹೇಳಿದ್ದು ಕಿವಿಗೆ ಬೀಳ್ಲಿಲ್ಲೇನು?”
————————

೧೬೬
ಎಂದು ರುಕ್ಕಮ್ಮ ಕೈಯಲ್ಲಿದ್ದ ಸವುಟು ಝಳಪಿಸಿಬಿಡುವುದೇನು!
ಸೆಂಟಿನ ಗಾಳದಲ್ಲಿ ಸಿಕ್ಕಿಕೊಂಡಿದ್ದ ಪದ್ದಕ್ಕ ಬೆಚ್ಚಿ ಬಿದ್ದಳು.
“ಕಳಿಸ್ರಿ ರುಕ್ಕಮ್ಮನವರೇ.. ಇಲ್ಲಾಂದ್ರೆ ಅಮ್ಮನವರಿಗೆ ಬೇಸರವಾಗುತ್ತೆ” ವಯ್ಯಾರದಿಂದ ಹೇಳಿದಳು.
“ನೀವೆಂಗ ಮಾತಾಡ್ತಿದ್ದೀಯಲ್ಲ ಪದ್ದಕ್ಕ…” ರುಕ್ಕಮ್ಮ ತಮ್ಮನ ಕಡೆ ಕಣ್ಣಿಂದ ಸಂಜ್ಞೆಮಾಡುತ್ತ ” ಅವನೇನು ಚಿಕ್ಕ ಮಗೂನಾ ಎಲ್ಲಿಗೋಗ್ಬಾರ್ದು ಎಲ್ಲಿಗೋಗಬೇಕು ಅಂತ ಹೇಳಿಸಿಕೊಳ್ಳೋಕೆ” ಎಂದು ಒದ್ದೆ ಕೈಯನ್ನು ಸೀರೆಗೆ ಒರೆಸಿಕೊಂಡಳು.
ರಘೂ ಬಿಸಿತುಪ್ಪವನ್ನು ನುಂಗಲಾರ ಉಗುಳಲಾರ.
ಕೊನೆಗೂ ಧೈರ್ಯದಿಂದ –
“ಅಷ್ಟೊಂದು ಕರೀತಿದ್ದಾರಂದ್ರೆ ಹೋಗದಿದ್ರೆ ಹೇಗೆ?” ಎಂದ.
ಅವನೇ ಹೋಗಿಬರುವುದಾಗಿ ಹೇಳಿದ ಮೇಲೆ ತಮಗಿನ್ನೇನು ಕೆಲಸ? ಯಾರ ಮುಖವನ್ನು ನೋಡುವ ಧೈರ್ಯ ಮಾಡದೆ ಭಾವನ ಕಂದು ವರ್ಣದ ಪಂಚೆಯನ್ನು ಮಡೆಚಿ ಲುಂಗಿ ರೀತಿಯಲ್ಲಿ ಉಟ್ಟುಕೊಂಡು ಮೇಲೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ತೊಟ್ಟುಕೊಂಡು ಕನ್ನಡಿಯಲ್ಲಿ ಇಣುಕಿ ತನ್ನ ರೂಪಕ್ಕೆ ತಾನೆ ಬೆರಗಾದ. ಅವನು ಸಾಮಾನ್ಯವಾಗಿ ದೋಸೆ ಸೇವಿಸಬೇಕಾದ ಸಂದರ್ಭದಲ್ಲಿ ಧರಿಸುತ್ತಿದ್ದುದು ಕೆಂಪು ಬಣ್ಣದ ಅಂಗಿಯನ್ನು, ಆದರೆ ತಾನಿಂದು ದೋಸೆ ಲಗಾಯಿಸುತ್ತಿರುವುದು ಸಿದ್ಧಾಂತಿಗಳ ಮನೆಯಲ್ಲಿ. ಆದ್ದರಿಂದ ಸಾತ್ವಿಕವಾಗಿ ಕಾಣುವುದು ಮುಖ್ಯ. ಅದೂ ಅಲ್ಲದೆ ನಖಶಿಖಾಂತ ಸಜ್ಜನಿಕೆ ಪ್ರಕಟಿಸುವುದು ಅನಿವಾರ್ಯವಾಗಿತ್ತು. ಎಲಿಜಬೆತ್ ಟೇಲರ್ ಹಿಂದೆ ರಿಚರ್ಡ್ ಬರ್ಟನ್ ನಡೆದ ರೀತಿಯಲ್ಲಿ ಹತ್ತು ಹೆಜ್ಜೆ ನಡೆಯುವುವಷ್ಟರಲ್ಲಿ ‘ಮಾಮಾ’ ಎಂಬ ಕೋಮಲ ದ್ವನಿ ಕೇಳಿ ಬಂತು. ಗಕ್ಕನೆ ನಿಂತ. ಅನಸೂಯಾ ಬಂದಳು. ವೀರ ಯೋಧನಿಗೆ ಸ್ತ್ರೀರತ್ನ ಶುಭ ಹಾರೈಸದಿದ್ದರಾದೀತೇ? ಅವನ ಹಣೆಗೆ ಶ್ರೀಗಂಧದ ಬೊಟ್ಟಿಟ್ತು, ಮುಂಗೈಗೆ ಅಟಕ್ ಪಿಟಕ್ ವಾಚು ಕಟ್ಟಿದಳು. “ಮಾಮಾಽಽ… ಅವಲಕ್ಕಿ ವಗ್ಗರಣೆಗೆ ಹೊಟ್ಟೇಲಿ ಒಂಚೂರು ಜಾಗ ಖಾಲಿ ಇರ್ಲಿ ಮಹರಾಯ… ” ಎಂದು ಪಿಸುಗುಟ್ಟಿದಳು. ರುಕ್ಕಮ್ಮ ಸಿಡುಕಿ ಪಾಕಶಾಲೆಯಂ ಪೊಕ್ಕಳು. ಆಯ್ತು.. ಆಯ್ತು ಅನ್ನುತ್ತ ರಘು ತಲೆಹೊಸ್ತಿಲು ದಾಟಿದ.
ಕಿರ್ದಬಲ ಓಡಿ ಪದ್ದಕ್ಕ ಮುನ್ಸೂಚನೆ ನೀದಿದ್ದರಿಂದ ಸ್ವಾಗತಿಸಲು ಅಲುಮೇಲಮ್ಮ ಖುದ್ದ ತನ್ನ ಪುತ್ರರತ್ನವನ್ನು ಕಳಿಸಿದಳು. ದೋಸೆಯೂ, ಕ್ರಾಂತಿಕಾರಿಯೂ ಎಂಬ ಕವನವನ್ನು ತಲೆ ತುಂಬಿಟ್ಟುಕೊಂದಿದ್ದ ಶಾಮಾ ಶಾಸ್ತ್ರೀ ತುಳಸಿ ಗಿಡದ ಬಳಿ ಕಾಯುತ್ತ ನಿಂತಿದ್ದ. ತಾನು ಒಳಗೊಳಗೇ ಹೊಟ್ಟೆಕಿಚ್ಚು ಪಡುತ್ತಿರುವ ವ್ಯಕ್ತಿ ಇನ್ನೊಂದು ಕ್ಷಣದಲ್ಲಿ ಬಂದುಬಿಡುವನು! ಹಸ್ತಲಾಘವದ ಮೂಲಕ ತನ್ನ ವ್ಯಕ್ತಿತ್ವವನ್ನು ಅಳತೆ ಮಾಡಿದರೇನು ಮಾಡುವುದು?.. ಹೀಗೆ ಯೋಚಿಸುವಷ್ಟರಲ್ಲಿ ರಘು ಮೂಗರಳಿಸಿಕೊಂಡು ಬಂದೇ ಬಿಡುವುದೇ! ‘ಹಲೋ ಶಾಮಾ ಶಾಸ್ತ್ರಿ’ ಎಂದು ತಾನೇ ಮುಂದುಬಿದ್ದು ಕೈಹಿಡಿದುಬಿಡುವುದೆ! ಕೀಲು ಸಡಿಲುವಂತೆ ಕುಲುಕಿಬಿಡುವುದೆ! “ನಿಮ್ಮ ಪರಿಚಯ ಆಗುತ್ತಿರುವುದರಿಂದ, ತುಂಬ ಸಂತೋಷವಾಗ್ತಿದೆ!” ಎಂದು ಅಸ್ಖಲಿತವಾಗಿ ನುಡಿದುಬಿಡುವುದೆ?
ಎಲ್ಲಿ ತಮ್ಮ ವಂಶೋದ್ಧಾರಕನ ಕೈ ದೇಹದಿಂದ ಬೇರ್ಪಟ್ಟಿತೋ ಎಂದು ಲಗುಬಗೆಯಿಂದ ಧ್ಯಾನಾಸಕ್ತರಾಗಿದ್ದ ಶಾಸ್ತ್ರಿಗಳು ಕೋಣೆಯಿಂದ ಓಡಿಬಂದರು.
‘ಬಾರಪ್ಪಾ ಬಾ’ ಎಂದು ಮೂರು ಮೊಳ ದೂರ ನಿಂತು ಬರಮಾಡಿಕೊಂಡರು.
———————–

೧೬೭
“ನಮಸ್ಕಾರ” ಅಂದ.
ಸಾಮಾಜಿಕ ಬದಲಾವಣೆಯನ್ನು ಬಿಲ್‍ಕುಲ್ ನಿರಾಕರಿಸುವಂಥ ಸನಾತನತೆಯಿಂದಲೇ ಮಾಡಲ್ಪಟ್ಟಂತಿರುವ ದಿವ್ಯ ಮೂರ್ತಿಯನ್ನು ನಖಶಿಖಾಂತ ದಿಟ್ಟಿಸಿದ.
ಶಾಸ್ತ್ರಿಗಳು ದಿಟ್ಟಿಸಿದರು.
ಭ್ರೂ ಮದ್ಯೆ ಸ್ರಕ್ಚಂದನ ತಿಲಕ!
ಮುಖದ ತುಂಬ ದೇದೀಪ್ಯ ಮಂದಹಾಸ!
ಸಾಕ್ಷಾತ್ ಶ್ರೀ ಮನ್ಮಹಾ ವಿಷ್ಣುವೇ ಶೂದ್ರ ರೂಪ ಧರಿಸಿ ತಮ್ಮ ಮುಂದೆ ನಿಂತಿರುವಂತೆ ಒಂದು ಕ್ಷಣ ಭಾಸವಾಯಿತು.
ತಮ್ಮ ಕಲ್ಪನೆಗೆ ತಾವೇ ಪಷ್ಚಾತ್ತಾಪಪಟ್ಟುಕೊಂಡರು.
ತಿಂಡಿಗೆ ಆಮಂತ್ರಿಸಿರುವ ಸೊಸೆಯನ್ನು ಮನದಲ್ಲಿ ಟೀಕಿಸಿದರು.
ಈ ಬಗ್ಗೆ ಸೊಸೆಗೂ ತಮಗೂ ಬ್ರಾಹ್ಮೀ ಮಹೂರ್ತದಲ್ಲಿ ನಡೆದ ಜಟಾಪಟ ಮರುಕಳಿಸಿತು. ದೈಹಿಕವಾಗಿ ದುರ್ಬಲಗೊಂಡಂತಹ ತಮ್ಮಂಥವರು ಕೇವಲ ದೃಷ್ಟಿಯುದ್ಧ ಮಾಡಲಿಕ್ಕೆ ಮತ್ತು ನಿಟ್ತುಸಿರು ಬಿಡಲಿಕ್ಕೆ ಮಾತ್ರ ಅರ್ಹರು.
ಪೌರೋಹಿತ್ಯದ ಸಾತ್ವಿಕ ಪರಿಮಳದೊಂದಿಗೆ ದೋಸೆಯ ಮಾದಕ ಪರಿಮಳವೂ ಬೆರೆತು ವಿಚಿತ್ರವಾದ ವಾಸನೆ ಸೃಷ್ಟಿಸಿದ್ದ ಹಾದಿಯಲ್ಲಿ ಹಿತಮಿತವಾದ ಹೆಜ್ಜೆ ಹಾಕುತ್ತ ನಡೆದು ಅವರು ಸೂಚಿಸಿದ ಜಾಗದಲ್ಲಿ ಕೂಡ್ರಲು ಒಪ್ಪಲಿಲ್ಲ. “ಛೇ, ಛೇ, ಹಿರಿಯರೂ ಪೂಜ್ಯರೂ ಆದ ತಮಗೆ ಸರಿಸಮಾನವಾಗಿ ಕೂತುಕೊಳ್ಳುವುದೇ” ಎಂದು ನೀಚ ಸ್ಥಾನದಲ್ಲಿ ಕೂತುಕೊಂಡ. ಬೆಂಗಳೂರಿನವನಾಗಿದ್ದರೂ ಎಷ್ಟೊಂದು ನಯ ವಿನಯ ಎಂದು ಶಾಸ್ತ್ರಿಗಳು ಮೈ ಸಡಿಲ ಬಿಟ್ಟರು.
‘ಏನು ಮಾಡ್ತಿ, ಏನು ಕಥೆ’ ಎಂದೆಲ್ಲ ಕೇಳಿದರು.
‘ಇಂಥದ್ದು ಮಾಡ್ತೀನಿ, ಇಂಥಾದ್ದು ಕಥೆ’ ಎಂದು ಸವಿವರವಾಗಿ ಹೇಳಿದ.
ಮರು ಕ್ಷಣ ಶಾಸ್ತ್ರಿಗಳ ಕಣ್ಣಲ್ಲಿ ಬೆಂಗಳೂರು ಕಣ್ಣಲ್ಲಿ ಮೈದಾಳಿ ಹಲೋ ಹಲೊ ಎಂದಿತು. ಬೆಂಗಳೂರು ಬಗ್ಗೆ ಏನಾದರೂ ಹೇಳಿಕೊಳ್ಳಬೇಕೆಂಬ ಆಸೆ ಶಾಸ್ತ್ರಿಗಳಿಗೆ ಬಹಳ ದಿನಗಳಿಂದ ಇತ್ತು. ವಿನಮ್ರತೆಯಿಂದ ಕೇಳೋರು ಕಲಿಕಾಲದಲ್ಲಿ ಸಿಗಬೇಕಲ್ಲ.
ಗುರುಹಿರಿಯರಿಯರಿಗೆ ಸಾಕಷ್ಟು ಗೌರವ ಕೊಡುವ ರಘು ತಾವು ಅರಸುತ್ತಿದ್ದ ಅನರ್ಘ್ಯ ರತ್ನವೆಂಬ ಭಾವನೆ ಬಂತು.
ಸನಾತನ ಧರ್ಮದ ಮೇಲೆ ಗುರುಹಿರಿಯರ ಮೇಲೆ ಸಾಕಷ್ಟು ಭಯಭಕ್ತಿ ಇದ್ದುದರಿಂದಲೇ ಮಾಗಡಿ ಕೆಂಪೇಗೌಡರಿಗೆ ಬೆಂಗಳುರು ಪಟ್ಟಣ ಸ್ಥಾಪನೆ ಮಾಡಲು ಸಾಧ್ಯವಾಯಿತೆಂದೋ, ಪೌರೋಹಿತ್ಯದ ಪುಣ್ಯದಿಂದಲೇ ಅದು ಬಿದಿಗೆ ಚಂದ್ರಮನಂತೆ ದಿನಕ್ಕೊಂದು ಚಂದದಲ್ಲಿ ಬೆಳೆದು ಜಂಬೂದ್ವೀಪದಾದ್ಯಂತ ಕೋಟ್ಯಾದೀಶ್ವರರನ್ನು ಸೂಜಿಗಲ್ಲಿನಂತೆ ನಿರಂತರ ಅಕರ್ಷಿಸುತ್ತಿರುವುದೆಂದೂ ಪ್ರವರ ಆರಂಭಿಸಿದರು. ಕೆಲವು ಸುಂದರ ಸ್ಥಳಗಳಿಗೆ ‘ಮ್ಲೇಚ್ಚ’ ಹೆಸರಿಟ್ಟಿರುವುದನ್ನು ಖಂಡಿಸಿದರು. ಲಾಲ್‍ಬಾಗ್ ಎಂಬುದಕ್ಕೆ ಬೃಹದಾರಣ್ಯಕವೆಂಬ ಹೆಸರನ್ನೂ; ಕಬ್ಬನ್ ಪಾರ್ಕ್ ಎಂಬುದಕ್ಕೆ ಬೃಂದಾವನವೆಂಬ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು. ಆದರೆ ಆ ನಗರ ನಿವಾಸಿಗಳಾದ ಸುಶಿಕ್ಷಿತರು ಕೋಟು ಪ್ಯಾಂಟುಗಳೊಳಗೆ ಅವಿತುಕೊಂಡಿರುವ ಸನಾತನಿಗಳೆಂದು ನುಡಿದರು. ಬೀದಿಗೇಳೇಳು ದೇವಾಲಯಗಳನ್ನು ಕಟ್ಟಿಸಿ ಅವಕ್ಕೆ ಪವಿತ್ರ ಬ್ರಾಹ್ಮಣರನ್ನು
——————————–

೧೬೮
ಅರ್ಚಕರನ್ನಾಗಿ ನೇಮಿಸಿ ಧರ್ಮ ರಕ್ಷಿಸಿಕೊಂಡು ಬರುತ್ತಿರುವ ಅಲ್ಲಿನ ಪ್ರತಿಯೊಬ್ಬ ವಿದ್ಯಾವಂತನಿಗೂ ‘ಹಿಂದೂ ಧರ್ಮ ಸುರತ್ರಾಣ’ ಎಂಬ ಬಿರುದು ಕೊಡುವಂತೆ ಎಲ್ಲರೂ ಸರಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು.
“ಶಾಸ್ತ್ರಿಗಳೇ ನಿಮ್ಮವರೇ ಆದ ಮುಖ್ಯಮಂತ್ರಿಗಳಾಗಿರೋದು! ನಿಮ್ಮಂಥವರು ಒಂದು ಮಾತು ಹೇಳಿದರೆ ಅವರು ಕಾರ್ಯಗತ ಮಾಡೇತೀರುವವರು” ಪೂಸಿ ಹೊಡೆಯುವುದರಲ್ಲಿ ರಘು ನಿಷ್ಣಾತ. ಎಷ್ಟಿದ್ದರೂ ಅವನು ಬೆಂಗಳುರಿನ ನಿವಾಸಿಯಲ್ಲವೆ…
“ಹೌದಲ್ಲವಾ.. ಗುಂಡುರಾಯರು ನಮ್ಮವರೇ ಅಲ್ಲವೆ? ಅಬ್ಬಾ.. ಎಂಥ ವ್ಯಕ್ತಿತ್ವ ಅವರದ್ದು! ಎಂಥ ತೇಜಸ್ವಿ ಮುಖ ಅವರದು.. ಅಂಥವರು ಸುಖಾಸೀನರಾಗಿರೋದ್ರಿಂದ್ಲೆ ನಾಡು ಸುಭಿಕ್ಷವಾಗಿರೋದು” ಶಾಸ್ತ್ರಿಗಳು ಒಂದು ಕ್ಷಣ ಗುಂಡೂರಾಯರ ಭರ್ಜರಿ ವ್ಯಕ್ತಿತ್ವದ ಕಲ್ಪನೆಯಿಂದ ಅರ್ಧ ನಿಮಾಲಿತ ನೇತ್ರವದನರಾಗಿ ಸ್ವಲ್ಪ ಮುಂಜರುಗಿ ಪಿಸುಗುಟ್ಟುವ ರೀತಿಯಲ್ಲಿ ಹೇಳಿದರು. “ಅಂದ ಹಾಗೆ ನಮ್ಮಂಥ ಬಡ ಬ್ರಾಹ್ಮಣರಿಗೆ ಏನಾದರೂ ವ್ಯವಸ್ಥೆ ಮಾಡಿದ್ದಾರೋ ಅವರು”
“ಬ್ರಾಹ್ಮಣ ಸಮ್ಮವೇಶ, ಸಮ್ಮೇಳನಗಳಿರುವ ಕಡೇಲೆಲ್ಲ ಹೋಗಿ ‘ಬ್ರಾಹ್ಮಣರೇ ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಭಾಶಣ ಮಾಡ್ತಿದಾರೆ ಸ್ವಾಮಿ!”
“ಆ ಬ್ರಾಹ್ಮಣ ವಿರೋಧಿ ದೇವರಾಜ ಅರಸ ಹೇಗೆ?”
“ಅವರಂತೂ ಅಪ್ಪಟ ಶೂದ್ರರ ಪರ ಬಿಡಿ. ಉಳುವವನೇ ಭೂಮಿಗೆ ಒಡೆಯ ಎಂಬಂಥ ಕಾನೂನು ತಂದಿರೋದು ಅವರೇ ಸ್ವಾಮಿ”
“ಹೌದಲ್ಲ.. ಎಂಥ ಕಲಿಕಾಲ ಬಂಥಪ್ಪ ಅಂತೀನಿ.. ನಮ್ಮ ಬ್ರಾಹ್ಮಣರ ಇನಾಮು ಭೂಮಿಗಳೆಲ್ಲ ಶೂದ್ರರ ಪಾಲು ಮಾಡ್ತಿದ್ದಾರಲ್ಲ ಈ ಶೂದ್ರರು.. ನೀನು ಏನೇ ಹೇಳು ರಘುರಾಮ. ನೀನು ಪುರುಷೋತ್ತಮನಾದ ಶ್ರೀರಾಮನ ಹೆಸರು ಇಟ್ಟುಕೊಂಡಿದ್ದೀಯಂತ ಒಂದು ಮಾತು ಹೇಳಬೇಕೆಂದಿದ್ದೇನೆ.. ಈ ದೇಶದಲ್ಲಿ ಬ್ರಾಹ್ಮಣರಿಗೆ ಅನ್ಯಾಯ ಮಾಡೋ ಶೂದ್ರರಿಗೆ ಖಂಡಿತ ಒಳ್ಳೇದಾಗೋದಿಲ್ಲ ನೋಡ್ತಿರು.. ಬ್ರಾಹ್ಮಣರ ವಿರೋಧ ಕಟ್ಟಿಕೊಂಡ ಎಂಥೆಂಥ ಸಾಮ್ರಾಜ್ಯಗಳು ಮಣ್ಣು ಮುಕ್ಕಿದವು.. ”
ಶಾಸ್ತ್ರಿಗಳು ತಮ್ಮ ದೈಹಿಕ ಸ್ಥಿತಿ ಅಲಕ್ಷಿಸಿ ಇನ್ನೂ ಎನೇನೋ ಹೇಳಲಿದ್ದರು. ಮದುವೆ ಆಗಲಿರುವ ಹುಡುಗನ ತಲೇನೆಲ್ಲ ಎಲ್ಲಿ ತಿಂದು ಬಿಡುವರೋ ಎಂಬ ಆತಂಕದಿಂದ ಅಲುಮೇಲಮ್ಮ ಕಳಿಸಿದ್ದರಿಂದ ಕರೆಯಲೆಂದು ಶಾಮಾಶಾಸ್ತ್ರಿ ಬಂದ.
ವಯೊವೃದ್ಧರೂ, ಜ್ಞಾನವೃದ್ಧರೂ ಆಡಿದ ಮಾತುಗಳನ್ನು ಕೇಳೀ ಕೇಳೀ ರಘು ಎಂಬ ಹುಲು ನರನಿಗೆ ದೋಸೆ ಬಗೆಗಿದ್ದ ಆಸಕ್ತಿ ಕುತೋಹಲ ಎಲ್ಲ ಕರಗಿ ಹೋಗಿತ್ತು. ಸಾಮಾಜಿಕ ಬದಲಾವಣೆಗಿರುವ ಅಡ್ಡಿ ಆತಂಕಗಳ ಒಂದು ಮುಖ ಅರ್ಥವಾಯಿತು.
“ಶಾಸ್ತ್ರಿಗಳೇ, ದೋಸೆ ಬಗ್ಗೆ ತಮ್ಮ ಅಭಿಪ್ರಾಯವೇನು>” ಎಂದು ರಘು ಅಚಾನಕ್ ಕೇಳಿಬಿಟ್ಟ. ಯಾವ ಮುನ್ಸೂಚನೆಯೂ ನೀಡದೆ ಅವನ ನಾಲಿಗೆ ಮಾತಾಡಿಬಿಟ್ಟಿತು. ಶಾಸ್ತ್ರಿಗಳಿಗಿಂತ ಮೊದಲು ಅವನೇ ಕಂಗಾಲಾದನು.
“ದೋಸೆ ಹಿಂದೂ ಧರ್ಮೀಯರ ಸೇವನೆಗೆ ಯೋಗ್ಯವಾದುದಲ್ಲ.. ಎಲ್ಲ ಅನಿಷ್ಟಗಳಿಗೂ ಮಸಾಲ ದೋಸೆಯೇ ಕಾರಣ.. ಎಲ್ಲಾ ನಮೂನೆಯ ದೋಸೆಗಳನ್ನು ಹಿಂದೂ ದೇಶದಿಂದ
—————————–

೧೬೯
ಉಚ್ಛಾಟಿಸಬೇಕು” ಶಾಸ್ತ್ರಿಗಳ ಮೊಗ ಜಮದಗ್ನಿಯ ಮುಖದಂತೆ ಕಂಡಿತು ಒಂದು ಕ್ಷಣ.
ಅದನ್ನು ಕೇಳುತ್ತಲೆ ರಘೂನ ವೃಷಣಗಳು ಚಿಕ್ಕದಾಗಿಬಿಟ್ಟವು.
ಕೇಳಿ ಎಂಥ ಕೆಲಸ ಮಾಡಿಬಿಟ್ಟೆ ಎಂದುಕೊಂಡ.
“ಹಾಗಿದ್ರೆ ತಾವು ದೋಸೆಯನ್ನು.. ”
“ಖಂಡಿತ ಇಲ್ಲ.. ಖಂಡಿತ ಇಲ್ಲ.. ದೋಸೆಯ ವಾಸನೆಯೇ ಹಿಂದೂ ಧರ್ಮದ ಬೆಳವಣಿಗೆಗೆ ಅಪಾಯಕಾರಿ. ಅದಕ್ಕೂ ನಮಗೂ ಎಣ್ಣೆ ಶೀಗೆಕಾಯಿ ಸಂಬಂಧ” ರಘೂನ ಮಾತನ್ನು ಮಾರ್ಗಮಧ್ಯದಲ್ಲಿ ತುಂಡರಿಸುತ್ತ ನುಡಿದರು.
“ತಾಬು ಅಪ್ಪಣೆ ಕೊಡಿಸಿದ್ದು ನೂರಕ್ಕೆ ನೂರರಷ್ಟು ಸತ್ಯ ನೋಡಿ. ಉದ್ದಿನ ಬೇಳೆ ಎಂಬ ದ್ವಿದಳ ಧಾನ್ಯದ ಸಹವಾಸ ಮಾಡಿ ಅಕ್ಕಿ ಕುಲಗೆಟ್ಟು ಹೋಯ್ತು ನೋಡಿ.. ಕೋಟ್ಯಂತರ ಹುಳಗಳನ್ನು ಹಿಟ್ಟಿನ ರೂಪದಲ್ಲಿ ಕಾವಲಿ ಮೇಲೆ ಬೇಯಿಸೋದೆಂದ್ರೇನು! ಅದೂ ತಮ್ಮಂಥ ಬಹುಶ್ರುತರ ಮನೆಯಲ್ಲಿ ಶಾಂತಂ ಪಾಪಂ” ವಿವೇಕ ಚೂಡಾಮಣಿಯಂಥ ರಘು ತನ್ನ ಕೈಗಳಿಂದ ತನ್ನ ಕೆನ್ನೆಯನ್ನು ತಪತಪ ಬಡಿದುಕೊಂಡ.
ಹಾವಿನ ಸುಂದರ ಹೆಡೆಯನ್ನು ಸ್ಪರ್ಶಿಸಿದ ಅನುಭವವಾಯಿತು ಶಾಸ್ತ್ರಿಗಳಿಗೆ.
ಕೂಡಲೆ ಮೊಮ್ಮಗನ ಮುಖದೊಳಗೆ ಮುಖವಿಟ್ಟರು.
“ಕೇಳಿದೆ ಏನೋ.. ರಘು ವಾಲ್ಮೀಕಿ ಮಹರ್ಶಿಯಂತೆ ಮಾತಾಡ್ತಿರೋದನ್ನು.. ದೋಸೆ ಮಾಡಬಾರ್ದೂಂತ ಬಡಕೊಂಡೆವು. ನಮ್ಮ ಮಾತನ್ನು ಕೇಳಿದಿರಾ ನೀವೀರ್ವರು; ನಮ್ಮ ಆಚಾರ ವಿಚಾರ ಪರಂಪರೆಗಳನ್ನೆಲ್ಲ ಗಾಳಿಗೆ ತೂರಿ ದೋಸೆ ಮಾಡಲು ನಿರ್ಧರಿಸಿಬಿಟ್ಟಿರಿ. ದೋಸೆ ತಿನ್ನೋರು ನೀವು, ಮುಂದೆ ಅನುಭವಿಸುವವರು ನೀವು.. ಇಂದೋ ನಾಳೆಯೊ ವೈಕುಂಠ ವಾಸಿಗಳಾಗಲಿರುವ ನಮ್ಮ ಮಾತೆಂದರೆ ಅಷ್ಟು ಅಲಕ್ಷೆ..” ಇಡೀ ಜೀವಮಾನದಲ್ಲಿ ಶಾಸ್ತ್ರಿಗಳು ಅಪರೂಪಕ್ಕೆ ಕೋಪಾರುಣನೇತ್ರರಾಗಿದ್ದರು.
ಅವರ ದ್ವನಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ.. ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕುವುದನ್ನು ಬಿಟ್ಟು ಅಲುಮೇಲಮ್ಮ ಬೆಂಕಿ ಮೇಲೆ ಸುರಿದುಬಿಟ್ಟಳು. ಒಂದೇ ಕ್ಷಣದಲ್ಲಿ ಅದರ ಕರುಕು ವಾಸನೆ ಗೃಹವನ್ನವರಿಸಿ ಬಿಟ್ಟಿತು.
ವಯಸ್ಸದಂತೆಲ್ಲ ಮಾವನವರು ವಿಚಿತ್ರವಾಗಿ ಆಲೋಚಿಸುತ್ತಿರುವರಲ್ಲ.. ಎಂದು ನೊಂದಳು.
“ಹೋಗಪ್ಪಾ.. ಹೋಗು” ಎಂದು ಶಾಸ್ತ್ರಿಗಳು ಮುಂದೇನನ್ನೋ (ಬಹುಶಃ ತಿಂದು ಹಾಳಾಗಿ ಹೋಗು ಎಂದು ಹೇಳುತ್ತಿದ್ದರೇನೋ) ಹೇಳಲಿದ್ದರು.
ಅಷ್ಟರಲ್ಲಿ ಒಂದು ದೊಡ್ಡದು ಎನ್ನಬ್ನಹುದಾದಂತ ಗುಂಪೊಂದು ಕೇಕೆ ಶಿಳ್ಳಿ ಮೊದಲಾದ ನಾದ ನಿನಾದ ಮಾಡುತ್ತ ಬಂದು ಬೃಂದಾವನ ಕಟ್ಟೆಯ ಆಚೆ ಜಮಾಯಿಸಿಬಿಟ್ಟಿತು. ತಾರುಣ್ಯದ ಹೊಸ್ತಿಲ ಆಚೆ ಈಚೆ ಇದ್ದ ಹಲವರು ಶಾಸ್ತ್ರಿಗಳೇ ಶಾಸ್ತ್ರಿಗಳೇ ಎಂದು ಕೂಗುತ್ತಿದ್ದರು. ಒಂದು ಕ್ಷಣ ಏನೋ ಎಂತೋ ಎಂಬೊಂದು ಗಾಬರಿ ಆವರಿಸಿಬಿಟ್ಟಿತು.
ಶಾಮ ತನ್ನ ತಾತನವರ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ; ಶಾಸ್ತ್ರಿಗಳು ತಮ್ಮ ಕರುಳಿನ ಕುಡಿ ಹಿಂದೆ ಅವಿತುಕೊಳ್ಳಲೆತ್ನಿಸುತ್ತಿರುವುದನ್ನೂ ನೋಡಿದ ರಘು ಗುಂಪನ್ನು ವಿಚಾರಿಸುವ ಹೋಣೆ ಹೊತ್ತುಕೊಂಡು “ಏನ್ರಪ್ಪಾ? ಯಾಕ್ರಪ್ಪಾ?” ಎಂದು ಗುಂಪನ್ನು ವಿಚಾರಿಸಿದ.
————————–

೧೭೦
ಮೊನ್ನೆ ಮೊನ್ನೆಯವರೆಗೆ ಸರಕಾರಿ ಆಸುಪತ್ರೆಯ ರೋಗತುಲಿಕಾ ತಲ್ಪದ ಮೇಲೆ ವಾರ ದಿನಮಾನ ಮಲಗಿದ್ದು ಬಂದಿದ್ದ ಸಾಂಬ ಆ ಗುಂಪಿನ ಮುಖಂಡತ್ವ ವಹಿಸಿದ್ದ. ಆ ಸದರಿ ಗುಂಪು ಮಾಡಿದ್ದ ಘನಕಾರ್ಯ ಏನಪ್ಪಾ ಅಂದರೆ?
ಅದನ್ನು ಸವಿವರವಾಗಿ ಹೇಳಬೇಕೆಂದರೆ ದೊಡ್ಡ ಕಥಿಯೇ ಆಗುತ್ತದೆ.
ಶಾಸ್ತ್ರಿಗಲ ಮನೆಯಲ್ಲಿ ಮನೆ ಮಗಳಂತೆ ಕೋಷಿ ಎಂಬ ಬೆಕ್ಕೂ; ಅನಸೂಯಾಳ ಮನೆಯಲ್ಲಿ ಅರ್ಜುನ ಎಂಬ ಮಾರ್ಜಾಲವೂ ಇತ್ತಷ್ಟೆ. ಅವೆರಡೂ ಸಲೀಮ, ಅನಾರ್ಕಲಿಯಂತೆ ಅನ್ಯೋನ್ಯವಾಗಿದ್ದವಷ್ಟೆ. ಅವೆರಡು ಮಾರ್ಜಾಲ ಕುಲಕ್ಕೆ ಸೇರಿದವುಗಳಾಗಿದ್ದರೂ ಮಾನವಕುಲ ಹಿತಚಿಂತನೆಯನ್ನು ಸದಾ ಬಯಸುತ್ತಿದ್ದವಷ್ಟೆ! ಅದರಲ್ಲೂ ಶಾಮ ಮತ್ತು ಅನಸೂಯರ ಸಂಭಂದ ಬೆಸೆಯಲು ಅವೆರಡೂ ನಾನಾ ನಮೂನೆಯ ಹಿಕಮತ್ತುಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗಿಸುತ್ತಿದ್ದವಷ್ಟೆ! ತಮ್ಮ ಗುರಿ ಮಣ್ಣುಗೂಡಿದ ಮೇಲೆ ಪರಸ್ಪರ ಸಂಧಿಸಿ ಮನುಷ್ಯರು ಕೃತಘ್ನರು ಎಂದು ತೀರ್ಮಾನಿಸಿದ್ದವಷ್ಟೆ! ಇಂಥದೊಂದು ಟೆನ್ಷನ್ನಿಂದಾಗಿ ಅದ್ಭುತ ಪ್ರೇಮಿಗಳಾಗಿದ್ದ ಅವಕ್ಕೆ ಕೆಲವು ದಿನಗಳಿಂದ ರತಿ ಕ್ರೀಡೆಯಲ್ಲಿ ಭಾಗವಹಿಸಲಾಗಿರಲಿಲ್ಲವಷ್ಟೆ!
ಈ ಕಾರಣಗಳಿಂದಾಗಿಯೋ ಅಥವಾ ಬೇರಾವ ಕಾರಣದಿಂದಾಗಿಯೋ ಅವೆರಡೂ ಸದಾ ಮಂಕಾಗಿರುತ್ತಿದ್ದವು. ತನ್ನ ಪ್ರಿಯತಮೆಯ ಬಳಿ ಏನೆಲ್ಲ ಹೇಳಿಕೊಳ್ಳುತ್ತಿದ್ದ ಅರ್ಜುನ ಕನಿಷ್ಟ ಅಟಕ್ ಪಿಟಕ್ ವಾಚಿನ ಬಗೆಗೂ ಹೇಳಿಕೊಂಡಿರಲಿಲ್ಲ. ವಾಚನ್ನು ನೋಡಲು ಹೋಗಿ ಅನಸೂಯಳಿಂದ ಒದೆ ತಿಂದಿತ್ತು. ಯಾಕೆ ತನ್ನ ಪ್ರಿಯತಮ ಮಂಕಾಗಿರುವನೆಂದು ಯೋಚಿಸೀ ಯೋಚಿಸೀ ಕೋಷಿ ತಾನೂ ಮಂಕಾಗಿತ್ತು.
ಹೀಗೆ ಮಂಕಾಗಿರುವ ಯಾವ ಪ್ರಾಣಿಗೂ ಅಪಾಯದ ಅರಿವು ಇರುವುದಿಲ್ಲವೆಂಬುದು ಅಂಗೈಯ ಹುಣ್ಣಿನಷ್ಟೆ ಸತ್ಯವೆಂಬುದನ್ನು ಸಾಧಿಸಿ ತೋರಿಸಲಿಕ್ಕಾಗಿಯೋ ಎಂಬಂತೆ ಹರಪನಹಳ್ಳಿ ಕಡೆಯ ಕೊರಚರಟ್ಟಿಯ ಅಲೆಮಾರಿ ತಂಡವೊಂದು ತಂಡೊಪತಂಡವಾಗಿ ಬಂದು ಸದರೀ ಗ್ರಾಮದ ಹೊರವಲಯದಲ್ಲಿ ಚಿಕ್ಕ ಚಿಕ್ಕ ಜೋಪಡಿಗಳನ್ನು ಕಟ್ಟಿಕೊಂಡು ಬೀಡು ಬಿಟ್ಟಿತ್ತು. ವಯಸ್ಕ ಗಂಡಸರು ರಾತ್ರಿ ಹೊತ್ತು ಚಿಕ್ಕಪುಟ್ಟ ಕಳ್ಳತನಕ್ಕೆ ಹೋದರೆ ಹೆಂಗಸರು ಅವರಿವರ ಬಳಿ ಮಲಗಿಕೊಂಡು ನಾಲ್ಕು ಕಾಸು ಸಂಪಾದಿಸುವರು. ಮಾಂಸಪ್ರಿಯರಾದ ಅವರು ಕೋಳಿ ಕುರಿಗಿಂತ ಆಸೆಪಡುತ್ತಿದ್ದುದು ಬೆಕ್ಕು ಮತ್ತು ಇಲಿ ಮಾಂಸಕ್ಕೆ. ಇಂಥ ಆಹಾರ ಮೂಲಗಳನ್ನು ಹುಡುಕಲು ಅವರ ಪೈಕಿ ಅನೇಕರು ಕಂಕುಳಲ್ಲಿ ಚಿಕ್ಕಪುಟ್ಟ ಬಲೆ, ಪಂಜರಗಳನ್ನು ಹುದುಗಿಸಿಕೊಂಡು ಓಣಿ ಓಣಿ ಅಲೆಯುವರು. ಇಲಿಗಳಂತೆ ಸದ್ದು ಮಾಡಿ ಇಲಿಗಳನ್ನು ಆಕರ್ಷಿವುದು, ಅವು ಬಂದೊಡನೆ ಅರೆ ಜೀವ ಮಾಡಿ ಜೋಳಿಗೆಗೆ ಹಾಕಿಕೊಳ್ಳುವುದು, ಬೆಕ್ಕುಗಳಂತೆ ಸದ್ದು ಮಾಡಿ ಬೆಕ್ಕುಗಳನ್ನು ಆಕರ್ಷಿವುದು, ಅವು ಬಂದೊಡನೆ ಗೋಣು ತಿರುವಿ ಸಾಯಿಸಿ ಜೋಳಿಗೆಗೆ ಹಾಕಿಕೊಳ್ಳುವುದು. ತಮ್ಮ ಕ್ಯಾಂಪಿನ ಬಳಿಗೆ ಹೋಗಿ ಅವುಗಳನ್ನು ಬೆಂಕಿಯಲ್ಲಿ ಬೇಯಿಸುವುದು, ಹೆಂಗಸರು ಮೈಮಾರಿ ಗಳಿಸಿದ್ದಂಥ ಹಣದಲ್ಲಿ ಸಾರಾಯಿಯನ್ನೋ; ಹೆಂಡವನ್ನೋ ತರಿಸುವುದು, ಕುಡಿದು ತಿಂದು ಪರಸ್ಪರ ತೆಕ್ಕೆ ಮುರಿಬಿದ್ದು ದಿಕ್ಕುಗಳು ನಡುಗುವಂತೆ ಗಲಾಟೆ ಮಾಡುತ್ತ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುವುದು, ಹಾಗೆ ಉರುಳುರುಳಾಡುತ್ತಲೇ ನಿದ್ದೆ ಹೋಗಿ ಗೊರಕೆ ಹೊಡೆಯಲಾರಂಭಿಸಿಬಿಡುವುದು. ಇದು ಇವರ ದಿನಚರಿ. ಆದರೂ ಇವರ ದಿನಚರಿ ಮಧ್ಯಮ ವರ್ಗದ ಮಂದಿ ಊಹಿಸಿಕೊಳ್ಳುವಷ್ಟು ಸುಲಭವಾಗಿರುವುದಿಲ್ಲ. ಇವರ ಪ್ರತಿಯೊಂದು
————————

೧೭೧
ಚಟುವಟಿಕೆಯನ್ನು ನಿಯಂತ್ರಿಸುವಂಥ ಒಂದು ಪ್ರತಿಭಟನಾತ್ಮಕ ತಂಡ ಗ್ರಾಮದಲ್ಲಿ ಹುಟ್ತಿಕೊಂಡು ಬಿಟ್ತಿರುತ್ತದೆ. ಆ ನಾಗರೀಕರ ತಂಡದ ಸದಸ್ಯರು ಉಂಡಾಡಿ ಗುಂಡರೆಂದು ಹೆಸರು ಪಡೆದಿದ್ದರೂ ಸೀನ್ ಕಾನರಿ; ರೋಗರ್‌ಮೋರ್, ಟಿಮೋಟಿ ಡಲ್ಟನ್‍ರಂಥ ಜೇಮ್ಸ್ ಬಾಂಡರಿಗಿಂತ ಕಡಿಮೆ ಇರುವುದಿಲ್ಲ. ಈ ಜೇಮ್ಸ್‍ಬಾಂಡರು ಸದಾ ತಮ್ಮ ಕಣ್ಣುಗಳನ್ನು ಮೂಷಕ ಮಾರ್ಜಾಲ ಹಂತಕರ ಮೇಲೆ ಕಣ್ಣು ಇಟ್ತಿರುತ್ತದೆ. ಈ ಜೇಮ್ಸ್ ಬಾಂಡರೊಂದೇ ಅಲ್ಲದೇ, ಕಂದಾಯ ಅರಕ್ಷಕರೇ ಮೊದಲಾದ ಮಂದಿಯನ್ನು ಚಾಣಾಕ್ಷತನದಿಂದ ನಿಭಾಯಿಸುತ್ತಲೇ ಅಲೆಮಾರಿ ಮಂದಿ ತಮ್ಮ ಕಾರ್ಯ ಸಾಧಿಸಬೇಕು ಮತ್ತು ಬದುಕಬೇಕು. ಪರಿಸ್ಥಿತಿ ಹೀಗಿರುವಾಗ ಅಲೆಮಾರಿಯ ಒಂದಿಬ್ಬರು ಶಾಸ್ತ್ರಿಗಳಿದ್ದ ಓಣಿಯ ಆಚೆಬದಿ ಚೀವ್ ಚೀವ್ ಎನ್ನುತ್ತಲೋ; ಮ್ಯಾಂವ್ ಮ್ಯಾಂವ್ ಅನ್ನುತ್ತಲೋ ಕಾರ್ಯ ನಿರತರಾದರು. ಐದಾರು ಇಲಿ ಬುಡಕಗಳನ್ನು ಸುಲಭವಾಗಿ ಹಿಡಿದಿದ್ದೂ ಆಯಿತು. ಕಳೆದೆರಡು ದಿನಗಳಿಂದ ಆ ಓಣಿಗೆ ಎರಡು ಕಣ್ಣುಗಳಂತಿದ್ದ ಎರಡು ಬೆಕ್ಕು ಗಳ ನಡುವಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು. ‘ಇವತ್ತು ಹಿಡದೇ ತರಬೇಕಲೆ’ ಎಂದು ನಿರ್ಧರಿಸಿದರು. ಆಯಾ ಮನೆಗಳ ಆಜುಬಾಜುಗಳಲ್ಲಿ ಕೋಶಿಯಂತೆ ಸದ್ದು ಮಾಡಿ ಮಾರ್ಜಾಲ ಹಿಡಿದು ಸಾಯಿಸಿದರು. ಮಾರ್ಜಾಲದ ಥರ ಸದ್ದು ಮಾಡಿ ಕೋಷಿಯನ್ನು ಹಿಡಿದು ಸಾಯಿಸಿದರು. ಆದರೆ ಅವು ಅವರ ಕೈಗೆ ಬೀಳುವ ಮೊದಲು ಸಾಕಷ್ಟು ಪ್ರತಿರೋದ ಒಡ್ಡಿದವು. ಆದರೆ ಅವುಗಲ ಆಟ ನಡೆಯದಿದ್ದರೂ, ಅವು ಮರಣಾಂತಿಕವಾಗಿ ಮಾಡಿದ ಘನ ಘೋರ ಸದ್ದಿಗೆ ಜೇಮ್ಸ್ ಬಾಂಡುಗಳು ಎಚ್ಚತ್ತು ಬಂದು ‘ಬೆಕ್ಕು ತಿಂಭೋ ಸೂಳ್ಯಾ ಮಾಕ್ಳಾ’ ಎಂದು ಮುಗಿಬಿದ್ದು ಸಾಕ್ಷಿ ಸಮೇತ ಅವರನ್ನು ಹಿಡಿದುಬಿಟ್ಟರು. ತಾವು ಹಿಡಿದಂಥ ಎರಡು ಮುದ್ದಾದ ಬೆಕ್ಕುಗಳ ಕಳೇಬರಗಳೊಂದಿಗೆ, ಅಲೆಮಾರಿಗಳಿಬ್ಬರನ್ನು ಕೇಕಕಣ ಎಂದು ಮೆರವಣಿಗೆ ಮಾಡುತ್ತ ಶಾಸ್ತ್ರಿಗಳಮನೆ ಕಡೆ ಬಿಜಯಂಗೈದು ಬಂದಿದ್ದರು. ಅವರೆಲ್ಲರ ಉದ್ದೇಶ ಇದ್ದದ್ದು ಶಾಸ್ತ್ರಿಗಳ ಕೈಯಿಂದ ಪೂಜೆ ಮಾಡಿಸುವುದಲ್ಲದೆ ಹಿಡಿ ಹಿಡಿ ಶಾಪ ಹಾಕಿಸಬೇಕು ಮತ್ತು ಸದರೀ ಕಳೆಬರಗಳಿಗೆ ಇದೇ ಪವಿತ್ರ ವಾತಾವರಣದಲ್ಲಿ ಶಾಸ್ತ್ರೋಕ್ತ ಸಂಸ್ಕಾರ ನಡೆಯಬೇಕು ಎಂಬುದು. ಸತ್ತಿರುವ ಈ ಎರಡು ಬೆಕ್ಕುಗಳ ಜಾಯಮಾನ ಗ್ರಾಮಕ್ಕೇ ಗೊತ್ತಿರುವಂಥಾದ್ದು. ಇವೆರಡು ಅಪ್ಪಿತಪ್ಪಿ ಬೆಕ್ಕಿನ ಜನುಮ ಪಡೆದಿರುವವಷ್ಟೆ. ಇವೆರಡರೊಳಗಿದ್ದದ್ದು ಮಾನವ ಹೃದಯಗಳು; ಲೈಲಾ ಮಜ್ನೂ ಹೃದಯಗಳೆಂದರೂ ಸರಿಯೆ, ಈ ಮನೆಯಿಂದ ಆ ಮನೆಗೆ ಟಣಕ್ಕೆಂದು ಜಿಗಿದು ಮ್ಯಾಂವ್ ಗುಟ್ಟುವುದು. ಮ್ಯಾಂವ್ ಎಂಬ ಶಬ್ದ ಸಾಮಾನ್ಯದ್ದೇನು? ಬಿಲಾವರಿ ಅಸಾವರಿ ರಾಗಳಿಗಿಂತ ಕಡಿಮೆಯಿದ್ದಿರಲಿಲ್ಲ. ಅವೆರಡೂ ಮನೆಯ ಛಾವಣಿ ಏರಿ ಮ್ಯಾಂವ್ ಗುಟ್ಟಲಾರಂಭಿಸಿದರೆ ಸಿಂಗ್ ಬ್ರದರ್ಸ್‍ರವರ ಜುಗಲ್‍ಬಂದಿಗಿಂತ ಮಿಗಿಲಾಗಿರುತ್ತಿತ್ತು. ಇಂಥ ಅಪರೂಪದ ಬೆಕ್ಕುಗಳನ್ನು ಕೊರಚರಟ್ಟಿಯ ನರಮಾಂಸ ಭಕ್ಷಕರು ಕೊಲೆಮಾಡಿ ಬಿಟ್ಟಿರುವುರಲ್ಲಾ?.. ಇವತ್ತು ಈ ಬೆಕ್ಕುಗಳನ್ನು ತಿಂದವರು ನಾಳೆ ಹುಡುಗರುಪ್ಪಡಿಯನ್ನು ಬಿಡುವರೇನು? ನಾಳೆ ಹುಡುಗರುಪ್ಪಡಿಯನ್ನು ತಿನ್ನುವವರು ನಾಡಿದ್ದು ವಯಸ್ಕರನ್ನು ಬಿಡುವರೇನು?..
ನರಪೇತಲ ಸಾಂಬ ಆ ಒಂದು ಕ್ಷಣ ಕುಂತಕನೊಡನೆ ಮಮ್ಮಟ ಮೇಳವಿಸಿದಂತೆ ಅಭೂತಪೂರ್ವವಾಗಿ ಹೊಳೆಯತೊಡಗಿದ.
“ಶಾಸ್ತ್ರಿಗಳೆ.. ಈ ಘೋರ ಅನ್ಯಾಯವನ್ನು ಹೇಗೆ ಸರಿಪಡಿಸುವಿರಿ ಶಾಸ್ತ್ರಿಗಳೇ?”
——————————–

೧೭೨
ಅಸು ನೀಗಿರುವ ಈ ಎರಡು ದುರಂತ ಕಾವ್ಯಗಳಿಗೆ ನಿಮ್ಮ ಮಂತ್ರಶಕ್ತಿಯಿಂದ ಮರುಜನ್ಮ ನೀಡಲಾರಿರೇನು?” ಹೃದಯ ತುಂಬ ವೀಕಾಗಿ ಬಿಟ್ಟಿರುವುದೆಂದೂ ತಿಂಗಳ ದಿನಮಾನ ಗಟ್ಟಿಯಾಗಿ ಆವೇಶದಿಂದ ಮಾತಾಡಬೇಡವೆಂದು ಸರಕಾರಿ ವೈದ್ಯ ರಾಮಪ್ಪ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ಸಾಂಬ ವೀರಾವೇಶದಿಂದಲೂ; ವ್ಯಾಕರಣ ಶುದ್ಧವಾಗಿಯೂ ಏಕ್‍ಧಂ ಮಾತಾಡಿ ಕೊಕ್ ಕೊಕ್.. ಕೆಂ ಕೆಂ ಕೆಮ್ಮುತ್ತ ಎಲ್ಲರ ಕಡೆಗೊಮ್ಮೆ ಸಿಂಹಾವಲೋಕನ ಮಾಡಿದನು. ಗುಂಪಿನಲ್ಲಿದ್ದ ಆಪದ್ಭಾಂದವನೋರ್ವ ಜೋರಾಗಿ ಸೀಟಿ ಹಾಕಿ ಮೆಚ್ಚುಗೆ ಸೂಚಿಸಿದನು.
ರಘೂನ ಹಿಂದೆ ನಿಂತಿದ್ದ ಶಾಮನಿಗೆ ಸಾಂಬ ಕಾವ್ಯ ಗುರುವಿನಂತೆ ಗೋಚರಿಸಲು..
ವ್ಯಾಸಪೀಥವನ್ನು ಎಡಗಾಲಿಂದಿದೊದ್ದು ‘ಶಾಂತಂ ಪಾಪಂ’ ಅಂತ ಬಂದ ಶಾಸ್ತ್ರಿಗಳಿಗೆ ಶಂಕರಾಚಾರ್ಯ ಭಗವತ್ಪಾದರಿಗೆ ಎದುರಾದ ಶ್ವಪಚ ಚಂಡಾಲನಂತೆ ಗೋಚರಿಸಲು..
ಕಾವಲಿ ಮೆಲೆ ದೋಸೆ ಸೀದು ಹೋಗುತ್ತಿರುವುದನ್ನು ಲೆಕ್ಕಿಸದೆ ಎಡಗೈಲಿ ಸವುಟು, ಬಲಗೈಲಿ ಚುಚ್ಚಗ ಧರಿಸಿಕೊಂಡೇ ಬಂದ ಅಲುಮೇಲಮ್ಮನಿಗೆ ಶ್ರೀಕೃಷ್ಣಾವತಾರ ಸಮಾಪ್ತಿಯಾದೊಡನೆ ಉದಿಸಿ ಭೂದೇವಿಯನ್ನು ಶೋಕ ತಪ್ತೆಯನ್ನಾಗಿ ಮಾಡಿದ ಕಲಿಯಂತೆ ಗೋಚರಿಸಲು..
ಕಲಿಯುಗದ ಅಂತ್ಯದಲ್ಲಿ ಸಂಬಲವೆಂಬ ಗ್ರಾಮದ ವಿಷ್ಣುಯಶ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿ ಪರುಶುರಾಮನಿಂದ ವಿದ್ಯಾಭ್ಯಾಸ ಪಡೆದ ಕಲ್ಕಿ ಮಹಾಶಯನಂತೆ ಮುಂಚೂಣಿಯಲ್ಲಿದ್ದ ರಘುರಾಮನೆಂಬ ಕಾಮ್ರೇಡಿಗೆ ಸಾಂಬನು ಕ್ರಾಂತಿಯ ಬೆಳೆ ತೆಗೆಯಲು ಯೋಗ್ಯವಾದ ಫಲವತ್ತಾದ ಹೊಲವೇ ಮೈವೆತ್ತು ನಿಂತಿರುವಂತೆ ಗೋಚರಿಸಲು
“ಅಯ್ಯಯ್ಯೋ ನಿಮ್ಮನೆ ಹಾಳಾಗ ನಿಮ್ ಹೆಂಡ್ರು ರಂಡ್ಯಾಗ.. ಸತ್ತಿರೋ ಬೆಕ್ಕುಗಳ್ನ ಶಾಶ್ತ್ರಿಗಳ ಮನೆ ಬಾಗಿಲಿಗೆ ತಂದಿದ್ದೀರಲ್ಲೋ ನಿಮ್ ಕೈಗೆ ಕರಿನಗ್ರಾವ್ ಕಡಿಯಾ.. ತೊಲಗ್ರೋ ಆಚೆ.. ನಮ್ಮಪ್ನೋರ ಮನಸ್ಸಿಗೆ ನೋವಾದ್ರೆ ಊರಿಗೆ ಒಳ್ಳೇದಾಗೋದಿಲ್ಲ..” ಎಲ್ಲಿದ್ದಳೇನೋ ಪದ್ದಕ್ಕ ಒನಕೆ ಓಬವ್ವನಂತೆ ಸೀರೆ ಎತ್ತಿ ಕಚ್ಚೆ ಬಿಗಿದು ತೋರುತೊಡೆಗಳನ್ನು ಪುಟಿಸುತ್ತಾ ಸಾಂಬನ ಉಸಿರಳತೆಯಲ್ಲಿ ನಿಂತು ಹೇಷಾರವ ಮಾಡಲು ಎಲ್ಲರೂ ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟು ಕೊಂಡರು.
“ಓಹೋ ಪದ್ಮಾವತಿಽಽ ಕಮಲನಯನೇ.. ಶಾಸ್ತ್ರಿಗಳ ಮನೆಯ ಹುಳಿಯ ಪ್ರಭಾವದಿಂದ ಅದ್ಭುತವಾಗಿ ಮಾತಾಡುತ್ತಿರುವೆಯಲ್ಲ.. ನೀನಾಡಿದ ಮಾತುಗಳಿಗೆ ಧಿಕ್ಕಾರವಿರಲಿ. ತೊಲಗಾಚೆ” ಹೀಗೆಂದು ಮಾತಾಡಿದ ಸಾಂಬ ಕೆಲ ವರ್ಷಗಳ ಹಿಂದೆ ಇದೇ ಪದ್ದಕ್ಕನನ್ನು ತೋಪಿನಲ್ಲಿ ಕೆಳಗೆ ಕೆಡವಿಕೊಂಡು ದೊಡ್ಡ ಸುದ್ದಿ ಮಾಡಿದ್ದನು. ತೊಡೆ ಮತ್ತು ಮೊಲೆಗಳ ಮೇಲೆ ನಖಕ್ಷತ ಮಾಡಿ ಆಕೆಯ ಗಂಡನಿಂದಲೂ; ಆಕೆಯ ಕಳ್ಳ ಪ್ರೇಮಿಗಳಿಂದಲೂ ಮೈ ಮೆತ್ತಗಾಗುವಂತೆ ಒದೆಸಿಕೊಂಡಿದ್ದನು. ಗತಕಾಲದ ತಾನು ಮಾಡಿದ ಗುರುತು ಆಕೆಯ ತೊಡೆಯ ಮೇಲೆ ಇರುವುದನ್ನು ಗಮನಿಸಿ ಭಗವಾನ್ ಬಾಹುಬಲಿ ವಿಗ್ರಹದಂತೆ ಮಂದಸ್ಮಿತನಾದನು. ಅವನ ಮೇಲೆ ಘಟ್ಟ ಸೋಪಾನಗಳ ಕೆಳಪಟ್ಟಿಯಲ್ಲಿ ದೇವದಾರು ಆ ಒಂದು ಕ್ಷಣ ಹಲೋ ಹಲೋ ಎಂದು ಮಿಸುಕಾಡಿತು.
“ನಂ ಅನಸೂಯಾಳ ಬೆಕ್ಕು ಕೊಂದೋನು ಯಾವನು ನನ್ನಾಟಗಳ್ಳ.. ಅವನ ಬೇರು ಬಗೆದು ಕೊಡ್ತೀನಿ ತೋರಿಸ್ರಿ ಅವನ್ನ..” ರುಕ್ಕಮ್ಮನ ಏಕಮೇವ ಪ್ರಥಿನಿಧಿಯಾದ ಭವಾನಿ ಗಂಗವ್ವ ಬುಸುಬುಸು ಬೀಡಿ ಎಳೆಯುತ್ತ ಇನ್ನೇನು ಅಲ್ಲಿ ಬರ‍್ತಿದಾಳೆನ್ನುವಷ್ಟರಲ್ಲಿ ಪದ್ದಕ್ಕನಿಗೂ ಸಾಂಬನಿಗೂ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿ ತೆಕ್ಕೆಮುರಿ ಬಿದ್ದು ಕೆಳಗೆ
————————

೧೭೩
ಉರುಳಾಡಲಾರಂಭಿಸಿಬಿಟ್ಟಿದ್ದರು. ಅವರೀರ್ವರ ಜುಗಲ್ ಬಂದಿಯನ್ನು ಪ್ರೋತ್ಸಾಹಿಲೋಸುಗ ತಟ್ಟುತ್ತಿದ್ದ ಚಪ್ಪಾಳೆಗಲೆಷ್ಟೋ, ಹೊಡೆಯುತ್ತಿದ್ದ ಶಿಳ್ಳೆ ಸೀಟಿಗಳೆಷ್ಟೋ?
ಪರಿಶೆ ಪೈಕಿ ಪೈಲ್ವಾನಳಂತಿದ್ದ ಪದ್ದೆಕ್ಕಗೆ ದರ್ಭೆ ಕಡ್ಡಿಯಂತಿದ್ದ ಸಾಂಬ ಯಾವ ಲೆಕ್ಕ? ಸಾಂಬನೂ ಮಾಜಿ ಪೈಲ್ವಾನನೇ. ಕಂಡ ಕಂಡ ಹೆಂಗಸರೆದುರಿಗೆಲ್ಲ ತನ್ನ ದೇಹದ ಮುನ್ನೂರಾರವತ್ತೈದು ಮಾಂಸ ಖಂಡಗಳನ್ನು ಕುಣಿಸೀ.. ಕುಣಿಸೀ ಸೊರಗಿ ಕಡ್ಡಿಯಂತಾಗಿಬಿಟ್ತಿದ್ದಂಥವನು. ಕರಿಣಿಯಂಥ ಪದ್ದಕ್ಕ ಕ್ಷಣಾರ್ಧದಲ್ಲಿ ಚಿತ್ ಮಾಡಿದಳಲ್ಲದೆ; ಮಣ್ಣಿಗೆ ಬೆನ್ನು ಮಾಡಿದ ಅವನೆದೆಯ ಮೇಲೇರಿ ಕೂತು ಮುಖ್ಯವಾಗಿ ತನ್ನ ಮಾಲ್ಕಿನ್ ಅಲಮೇಲಮ್ಮನ ಕಡೆ ನೋಡಿದಳು. ತನಗೆ ಒಂದು ತುತ್ತು ಅನ್ನ ನೀದುವಾಕೆಯನ್ನೂ ಪರೋಕ್ಷವಾಗಿ ಬೆದರಿಸಲು ಈ ಸುವರ್ಣಾವಕಾಶವನ್ನು ಬಳಸಿಕೊಂದಿದ್ದಳು.
ಆಕೆಯ ಗಂಡುಬೀರಿತನಕ್ಕೆ ಪ್ರೇಕ್ಷಕರೆಲ್ಲ ಬೆರಗಾದರು.
“ಒನ್.. ಟೂ.. ತ್ರೀ.. ಫೋರ್..” ಬಾಕ್ಸಿಂಗ್ ರೆಫ್ರೀ ಥರ ಒಬ್ಬ ಲೆಕ್ಕಹಾಕತೊಡಗಿದ.
“ಥೂ ನಿನ್ನ ಮುಖಕ್ಕೆ ಮಂಗಳಾರತಿ ಎತ್ತ.. ಸೀರೆ ಉತ್ಕೊಂಡು ಬಳೆ ಹಾಕ್ಕೊಂಡು ಎಲ್ಲವ್ವನ ಗುಡಿಗೆ ಹೋಗೋ” ಎಂದೊಬ್ಬ ಛೀಮಾರಿ ಹಾಕಿದರೆ,
“ನಿನ್ನ ಬಾಸ್ ಅಂಥ ತಿಳ್ಕೊಂಡಿದ್ದಕ್ಕೆ ನಮ್ಮನ್ನ ನಾವು ಎಕ್ಕಡ್ದೀಲೆ ಹೊಡ್ಕೊಂತೀವಿ” ಎಂದು ಇನ್ನೊಬ್ಬ ಥೂ ಮಾಡಿದನು.
ಈ ಮುಂಡೆ ತನ್ನನ್ನು ಅಪಮೌಲ್ಯಗೊಳಿಸಿಬಿಟ್ಟಳಲ್ಲಾ!.. ಎಂದು ಚಿಂತಿಸುತ್ತ ಸಾಂಬ ಗತಪ್ರಾಣನಾಗುವವನಂತೆ ತುಂಬ ತಿಣುಕಾಡತೊಡಗಿದನು.
ಹಾಗೆ ಅವನು ತನ್ನ ಕಾಲ ಇಕ್ಕಳದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವಾಗ ಮೇಲೆ ಅಮರಿದ್ದ ಪದ್ದಕ್ಕ ಗತಕಾಲದ ದಿನಗಳನ್ನು ಮೆಲುಕು ಹಾಕಿದಳು. ಈ ರಾಸ್ಕಲ್ ತಾನು ತೋಪಿನಲ್ಲಿ ಹೋಗುತ್ತಿರುವಾಗ ಸರಕ್ಕನೆ ಬರಸೆಳೆದದ್ದು.. ಒಂದೇ ಏಟಿಗೆ ಕೆಳಗೆ ಕೆಡವಿಕೊಂಡು ಬಿಟ್ಟಿದ್ದು; ನಿಮಿಷಾರ್ಧದಲ್ಲಿ ವಸ್ತ್ರಗಳನ್ನು ತೊಲಗಿಸಿದ್ದು; ಖಾರಪುಡಿ ಕುಟ್ಟುವ ಮೆಷನ್ನಿನಂತೆ ದಢಡಧನೆ ಇದನ್ನೆಲ್ಲ ತಾನು ಆಗಾಗ್ಗೆ ನೆನಪಿಸಿಕೊಂಡು ಬಿಸಿ ಏರಿದ್ದುಂಟು. ಅತೀವ ಸಂತೋಷ ರೋಮಾಂಚನ ಅನುಭವಿದ್ದುಂಟು. ಇಂಥ ಪುಣ್ಯಾತ್ಮ ಕಾಲಾನುಸಾರ ಬಡಕಲಾಗಿರಬಹುದು. ಇವನು ನೀಡಿದ ಅನುಭವಗಳನ್ನು ಮರೆತು ಕೆಳಗೆ ಕೆಳಗೆ ಕೆಡವಿಕೊಂಡು ಬಿಟ್ಟು ಅವಮಾನ ಮಾಡಿಬಿಟ್ಟಿರುವೆನಲ್ಲಾ! ಸಮಸ್ತ ಜನರೆದುರು ನಗೆಪಾಟಲು ಮಾಡಿರುವೆನಲ್ಲಾ! ತಾವಿಬ್ಬರು ಒಮ್ಮೆ ಕೂಡಿದ್ದೆವೆಂದರೆ ಮುಗಿಯಿತು, ಸುಖ ದುಃಖಗಳೆರಡರಲ್ಲೂ ಕೂಡಿದಂತೆಯೇ ಲೆಕ್ಕ!..
ಹೀಗೆ ಯೋಚಿಸುತ್ತ ವೀರವನಿತೆಯಾದ ಪದ್ದಕ್ಕ ತಾನು ಕೆಳಗೆ ಅಂಗಾತವಾಗಿ ಮೇಲೆ ಸಾಂಬನನ್ನು ಎಳೆದುಕೊಂಡುಬಿಟ್ಟಳು. ಈ ಅಚಾನಕ್ ಘಟನೆಯಿಂದ ದಿಗ್ಭ್ರಾಂತನಾದ ಅವನು ಆಕೆಯ ಕಿವಿಯಲ್ಲಿ ಧನ್ಯವಾದಗಳು ಅಂತ ಹೇಳಿದವನು ಆಮೇಲೆ ಮುಖ ಎತ್ತಿ ” ಈ ಸಾಂಬ ಶಿವನನ್ನು ಏನೆಂದು ತಿಳಿದುಕೊಂಡಿರುವಿರಿ ಎಲೈ ಕಾಂತೆ ಸುಗುಣವಂತೆ” ಎಂದು ಕೇಕೆ ಹಾಕಿದನು.
ಅವನ ಅಭಿಮಾನಿಗಳು ಶೀಟಿ ಹಾಕಿ ಉಘೇ ಅಂದರು.
ಇಂಥದೊಂದು ಚೋದ್ಯಕ್ಕೆ ಅದುವರೆಗೆ ಬೆರಗಾಗಿದ್ದ ಭವಾನಿ ಗಂಗವ್ವ ಸೀರೆಯನ್ನು ತುಸು ಮೇಲೇರಿಸಿದಳು. ಚುಟ್ಟವನ್ನು ತುಟಿಯ ಕೊನೆ ಮಗ್ಗುಲು ಸಿಕಿಸಿಕೊಂದು ಮೂಗು ಬಾಯಿಯಿಂದ ದಾವಾನಲ ಸಮಾನವಾದ ಹೊಗೆ ಬಿಟ್ಟಳು.
“ನಿಮ್ ಬಾಯಿಗೆ ನನ್ನಾಟುಯ್ಯಾ… ನಾಚ್ಕೆ ಹೇಸ್ಗೆ ಐತೊ ಇಲ್ರೋ ನಿಮ್ಗೆ.. ಇದೇನು ಓಣಿ
———————–

೧೭೪
ಅಂದ್ಕೊಂಡೀರೋ ಬಯ್ಲಾಟದ ಠೇಜು ಅಂದ್ಕೊಂಡೀರೋ.. ” ಎನ್ನುತ್ತ ಮುಂದೆ ಮೂರು ಮಾರು ಕುಪ್ಪಳಿಸಿದಳು.
ಸಾಂಬನೆಂಬ ಜಿರಳೆಯನ್ನು ತನ್ನೆರಡೂ ಕೈಗಳಿಂದ ಮುಗಿಲೆತ್ತಿ ಅಲ್ಲೇ ಇದ್ದ ಕಿರುಗಟ್ಟೆಯ ಮೇಲೆ ಕುಕ್ಕರಿಸಲು ಆ ಮಹಾಶಯನು ವ್ಯಾಸಪೀಠವನ್ನಲಂಕರಿಸಿದ ಬಾಸನ ಊರುಭಂಗ ನಾಟಕದ ತಾಳೆಗರಿ ಕಟ್ಟಿನಂತೆ ಹೊಳೆದನು.
“ಎಲೇ ಚಿನಾಲಿ.. ನಿನೇನು ಹೆಣ್ಣೋ.. ಇಲ್ಲಾ ದೆವ್ವವೋ.. ” ಕೆಳಗೆ ಅಂಗಾತ ಬಿದ್ದು ಕಾಳೋರಗದಂತೆ ಬುಸುಗುಟ್ಟಿತಿರ್ಪ ಪದ್ದಕ್ಕನ ಕೊರಳಿಗೆ ಕೈಹಚ್ಚಿ ಹಿಡಿದೆತ್ತಿದಳು. ಆಕೆಯ ಬಿಚ್ಚಿಕೊಂದಿದ್ದ ಕುಪ್ಪಸದ ಗುಂಡಿಗಳನ್ನು ಹಾಕಿದಳು. ತ್ರಿವರ್ಣ ದ್ವಜದಂತೆ ಹಾರಾಡುತ್ತಿದ್ದ ಸೆರಗನ್ನು ಎದೆ ತುಂಬ ಹೊದ್ದಿಸಿದಳು.
“ಅತ್ತೆಮ್ಮಾ.. ಬಿಡು ನನ್ನ.. ಆ ಸಾಂಬನಿಗೆಗೊಂದು ಗತಿ ಕಾಣಿಸುವೆನು” ಎಂದು ಕುಕಿಲ್ದ ಆಕೆಯ ಕೆನ್ನೆಗೆ ಪಟಾರನೆ ಒಂದು ಏಟು ಕೊಟ್ಟಳು.
ಬರಸಿಡಿಲಿನಂತೆರಗಿದ ಏಟಿಗೆ ತತ್ತರಿಸಿದ ಪದ್ದಕ್ಕ ತನ್ನ ವ್ಯಾಕರಣ ಶುದ್ಧವಾದ ಭಾಷೆಯನ್ನು ಆ ಕ್ಷಣವೇ ಕಳೆದುಕೊಂಡು “ಅಯ್ಯಯ್ಯೋ ಯಾರಾದ್ರು ಬಂದು ಬುಡುಸಿಕೊಳ್ರೆಪ್ಪೋ.. ಈ ಮುದಿ ದೆವ್ವ ನನ್ನ ಸಾಯಿಸಲಾಕ ಹತ್ಯಾತ್ರೆಪೋ” ಎಂದು ಲಭೋ ಲಭೋ ಬಾಯಿಬಡಿದುಕೊಳ್ಳತೊಡಗಿದಳು.
“ನನ್ನ ಮುದಿ ದೆವ್ವ ಅಂತೀ ಭೋಸೂಡಿ” ಅಂತ ಗಂಗವ್ವ ಮತ್ತೊಂದು ಕೆನ್ನೆಗೆ ಛಳೀರನೆ ಏಟು ಬಿಟ್ಟಳು.
“ಅಯ್ಯಯ್ಯೋ” ಅರಣ್ಯ ರೋಧನ ಮಾಡಲಾರಂಭಿಸಿದ ಪದ್ದಕ್ಕನನ್ನು ಆಲಂಗಿಸಿಕೊಂದು ಹುಚ್ಚಿ ಅಳಬ್ಯಾಡ ಸುಮ್ಕಿರು.. ಸಣ್ ಹುಡುಗರಂತೆ ಅಳತೀಯಲ್ಲೇ.. ಎಲ್ರ ಎದುರಿಗೆ ಆ ಸಾಂಬನನ್ನು ಮ್ಯಾಲೆಳೆಕೊಂಡೆಯಲ್ಲ ಇದು ಸರಿ ಏನು?” ಎಂದು ಪರಿಪರಿಯಾಗಿ ರಮಿಸುತ್ತ.. ಚೆಂಡಿಹಿಡಿದ ಮಗುವನ್ನು ತಾಯಿ ಸಮಧಾನಪಡಿಸುತ್ತಿರುವ ಹಾಗೆ.. ಕರೆದುಕೊಂಡು ತನ್ನ ಮನೆಯ ಕಡೆಗೆ ಹೋದಳು.
ಹೀರೋಯಿನ್ನೇ ಹೋದ ಮೇಲೆ ಸಿನಿಮಾ ನಡೆಯುವ ಬಗೆಯಾದರೂ ಹೇಗೆ?
ಸರಕಾರೀ ಪುರಾನ ಕಡತದಿಂದ ನುಜ್ಜುಗುಜ್ಜಾದ ಎವಿಡೆನ್ಸು ಹೊರಬರುವಂತೆ ಸಾಂಬನು ಕಿರುಗಟ್ಟೆ ಮೇಲಿಂದೆದ್ದೊಡನೆ ಬಿರುಗಾಳಿಗೆ ಸಿಕ್ಕ ವಯಸ್ಸಾದ ಅಡಿಕೆ ಮರದಂತೆ ವಾಲಾಡತೊಡಗಿದನು. ಎಲ್ಲಿ ತಮ್ಮ ಬಾಸು ಬೋರ್ಗೊಯ್ದು ಬಿಸುಟ ಎಳೆ ಬಳ್ಳಿಯಂತೆ ಭೂದೇವಿ ಮೇಲೊರಗಿ ಬಿಡುವನೋ ಎಂದು ಹೆದರಿದ ಸಿಬಿಐ ಕ್ಯಡರಿನ ಜೇಮ್ಸ್ ಬಾಂಡುಗಳು ತಮ್ಮ ಕೈಲಿದ್ದ ಬೆಕ್ಕುಗಳ ಕಳೆಬರಗಳನ್ನೆಸೆದು ಪೊಡರ್ವ ಸಿಡಿಲಿನ ರವಕೆ ಕೂಡೆಗಳೇಂ ತಡೆಪುವೆ ಎಂಬಂಥ ಒಸರುವ ಮಾತುಗಳನ್ನಾಡುತ್ತ ಓಡೋಡಿ ತಮ್ಮ ಬಾಸ್‍ನನ್ನು ಹಿಡಿದುಕೊಂಡರು. ಅವನು ಅವನಿಗೊರಗಿದರೆಲ್ಲಿ ಭೂಮಿ ಸುಟ್ಟು ರಾಗಿರೊಟ್ಟಿಯಾಗಿ ಬಿಡುವುದೋ ಎಂಬಂತೆ.
ಸಾಂಬ ಎಂಬ ಕರುವಿನ ಮೇಲೆ ಹತ್ತಾರು ಬೊಕ್ಕೆಗಳೆದ್ದಂತೆ ಅಭಿಮಾನಿಗಳು ಅವನನ್ನು ಹಾಗೆ ಅಮರಿಕೊಂಡು ಹಿಂದೆ ಬಂದರೆ ಒದೆಯಬೇಡಿ ಮುಂದೆ ಬಂದರೆ ಹಾಯಬೇಡಿ ಕಂದನಿವ ನಿಮ್ಮವನೆಂದು ಕಾಣಿರಿ ಎಂದು ಬೆಂದ ಹುಣ್ಣುಗಳಂಥ ಜನರ ನಡುವೆ ದಾರಿ ಮಾಡಿಕೊಂಡು ಹಾಗೇ ನಡೆಸಿಕೊಂಡು ನ.. ಡೆ.. ಸಿ.. ಕೊಂ.. ಡು ಮಣ್ಣಿನ ಮನೆಯನ್ನು ದಾಟಿ, ಓಣಿಗಳನ್ನು ದಾಟಿ ಸರಕಾರಿ ಆಸುಪತ್ರೆಯ ಕಡೆ ಹೋಗಲು..
ಮಾರ್ಜಾಲಕ್ಕೆ ತುಸು ಜೀವ ಬಂದು ಮಿಸುಕಾಡಿದಂತಾಯ್ತು..
ಆರೇನು ಮಾಡುವರು ಆರಿಂದೇನಹುದು! ಪೂರ್ವ ಜನ್ಮದ ಕರ್ಮವಿಧಿ ಬೆನ್ನು ಬಿಡದು! ಎಂಬರ್ಥ ಬರುವಂತೆ ಮ್ಯಾಂವ್ ಗುಟ್ಟಿ ತನ್ನ ಬಲಗಾಲನ್ನು ಪ್ರಿಯತಮೆ ಕಾಮೋಷಿಯ ಕಳೆಬರದ ಮೇಲೇರಿ ಒಂದು ಧೀರ್ಘ ಉಸಿರೆಳೆದು ಅದು ಬಿಟ್ಟ ಪ್ರಾಣವು ಕ್ಷಣಕ್ಕೊಂದು ಛಂದದಲ್ಲಿ ಊರ್ಧ್ವಮುಖವಾಗಿ ಚಲಿಸುತ್ತಾ ಚ.. ಲಿ.. ಸು.. ತ್ತಾ ಪರಮಾತ್ಮನ ಪೂರ್ನ ಕುಂಭದ ಜೀವ ಕಳಸದಲ್ಲಿ ಲೀನವಾಗಳು..
ನೆರೆದಿದ್ದ ಜನವು ಅವಧೂತರೋಪಾದಿಯಲ್ಲಿ ನಿಟ್ಟುಸಿರುಬಿಟ್ಟು ಹಗುರಾಗಲು..
ಪರಮೇಶ್ವರ ಶಾಸ್ತ್ರಿಗಳು ಆಪತ್ಕಾಲೇ ನಾಸ್ತಿ ಮರ್ಯಾದಾ ಎಂದು ಗೊಣಗುತ್ತಲಿರುವಾಗಲೇ ಅವರ ಸುಸಂಸ್ಕೃತ ಹೃದಯದ ಬಲ ಹೃತ್ಕವಾಟದ ಮಗ್ಗುಲ ಗುಗ್ಗುಳ ಕಾಂತಿ ಹೀನವಾಗತೊಡಗಿತು. ತಮ್ಮ ಬಾಳ ಸೊಡರದೆಲ್ಲಿ ಸದರಿ ಗ್ರಾಮದ ಪ್ರಜೆಗಳ ಬಿಸಿಯುಸಿರಿಗೆ ನಂದಿ ಬಿಡುವುದೋ ಎಂದು ಹೆದರಿ ಸಾಧ್ವಿ ಅಲುಮೇಲಮ್ಮ ತಮ್ಮ ಸುಪುತ್ರ ಶಾಮನ ಸಹಾಯ ಪಡೆದು ತಮ್ಮ ಮಾವನವರನ್ನು ಹಾಗೇ ಒಳಗಡೆ ನಡೆಸಿಕೊಂಡು ಹೋಗಿ ಹಂಸತೂಲಿಕಾ ತಲ್ಪದ ಮೇಲೆ ಮಲಗಿಸುತ್ತಿರಲು..
ಜನರು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಬೆಣ್ಣೆಯ ಋಣ ತೀರಿಸಿದ ಎಣ್ಣೆಯಂತೆ
ವಸ್ತ್ರದ ಋಣ ತೀರಿಸಿದ ಅನ್ನದಂತೆ
ಹೆಣ್ಣಿನ ಋಣ ತೀರಿಸಿದ ಹೊನ್ನಿನಂತೆ
ಮಣ್ಣಿನ ಋಣ ತೀರಿಸಿದ ಕ್ಷಣದಂತೆ
ಅವರೆಲ್ಲ ಒಬ್ಬೊಬ್ಬರಾಗಿ ಅಲಿಂದ ಕರಗಿ ಹೋಗುತ್ತಿರಲು..
ಅದುವರೆಗೆ ಅದನ್ನೆಲ್ಲ ನೋಡುತ್ತ ನಿಂತಿದ್ದ ರಘೂಗೆ ನಶ್ವರ ಬದುಕು ನೀರಮೇಲಣ ಗುಳ್ಳೆ ಅನ್ನಿಸಿಬಿಟ್ಟಿತು. ಪ್ರಾಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತವರ ಸಂಗಡಿಗರ ಸರ್ವಾಧಿಕಾರಿ ಮನೋಭಾವದ ಜೊತೆಗೆ ವಿರೋಧ ಪಕ್ಷದವರ ಗದ ಮುರುಗಿ ಆಟ ಅಕ್ಬರ್‌ನಂಥವರ ನೇತೃತ್ವದ ಭೂಗತ ಚಟುವಟಿಕೆ ಎಲ್ಲ ಕಣ್ಣಿಗೆ ಕಟ್ಟಿದಂತೆ ನೆನಪಾದವು. ಸಾಮಾಜಿಕ ಬದುಕೇ ಸೀಳಿಹೋಗಿ ದ್ವಿದಳಧಾನ್ಯದೋಪಾದಿಯಲ್ಲಿ ಗತಪ್ರಾಣವಾಗಿ ಬಿದ್ದಿರುವ ರೀತಿಯಲ್ಲಿ; ಮಾನವ ಮನಸ್ಸಿನ ಎರಡು ದೇಹಗಳೇ ಉರುಳಿರುವ ರೀತಿಯಲ್ಲಿ ಬಿದ್ದಿರುವ ಆ ಎರಡು ಕಳೇಬರಗಳನ್ನು ತಿಂದಾದರೂ ತಂತಮ್ಮ ದೇಹದ ಪಂಚಭೂತಗಳನ್ನು ತಣಿಸಿಕೊಳ್ಳಲು ಆಸ್ಪದ ಮಾಡಿಕೊಡಬೇಕೆಂದರೆ ಕೊರಚರಿಬ್ಬರು ಆಗಲೆ ಅಲ್ಲಿಂದ ಪರಾರಿಯಾಗಿಬಿಟ್ಟಿರುವರು.
ಪದವೀಧರನೂ, ಉದಯೋನ್ಮುಖ ಬರಹಗಾರನೂ ಆದ ಶಾಮಾಶಾಸ್ತ್ರಿಯ ಸಹಾಯ ಪಡೆಯುವುದು ಅನಿವಾರ್ಯವಾಯಿತು. ಪದ್ದಕ್ಕಳ ರೌದ್ರಾವತಾರವನ್ನೆ ಕನ್ನಲ್ಲಿ ತುಂಬಿಕೊಂಡು ದಿಗ್ಭ್ರಮಿತಳಾಗಿ ತಾಯಿ ತಾತನವರ ಎಡಪಾರ್ಶ್ವದಲ್ಲಿ ಕೂತಿದ್ದರಿಂದ ಕಾವಲಿಗೆ ಸೀದು ಅಂಟಿಕೊಂಡಿದ್ದ ದೋಸೆಯನ್ನು ಬಿಡಿಸುವುದರಲ್ಲಿ ಮಗ್ನನಾಗಿದ್ದ ಶಾಮಾಶಾಸ್ತ್ರಿ ರಘುರಾಮನ ಒಂದೇ ಕೂಗಿಗೆ ಹೊರಬಂದನು.
ಹೊಸದಾಗಿ ಮದುವೆಯಾದ ಷೋಡಷಿ ಗಂಡನ ಲಘು ಸಂಜ್ಞೆಗೆ ಡವಗುಟ್ಟುವ ಎದೆಯೊಡನೆ ಹೊರಬರುತ್ತಾಳಲ್ಲ ಹಾಗೆ..
———————-

೧೭೬
“ನೀವು ಬೆಳಗಿನ ಉಪಹಾರಕ್ಕಾಗಿ ಬಂದಿರುವಾಗಲೇ ಈ ಅಹಿತಕರ ಘಟನೆ ನಡೆದುಬಿಡಬೇಕೆ!: ಎಂದು ಹೇಳಲಾಗದೆ ಕಂಪಿಸುವ ತುಟಿಗಳೊಡನೆ ಅವನು ಇವನನ್ನು ನೋಡಿದರೆ..
“ಮನುಷ್ಯನ ಜೀವನ ಒಂದು ಚುಂಬನ ಇದ್ದ ಹಾಗೆ.. ಹಂಚಿಕೊಡದಿದ್ದರೆ ಅದರಿಂದ ಏನೂ ಉಪಯೋಗವಿಲ್ಲ.. ನನ್ನಂಥ ಅತಿಥಿ, ನಿನ್ನಂಥ ಮೀನು ಎರಡು ಮೂರು ದಿನಗಳೊಪ್ಪತ್ತಿನಲ್ಲಿ ಕೊಳೆತು ನಾರದೆ ಇರುವುದಿಲ್ಲ” ಎಂದು ಏನೇನೋ ಅರ್ಥಗರ್ಭಿತವಾಗಿ ಹೇಳಲು ಪ್ರಯತ್ನಿಸುತ್ತ ಇವನು ಅವನ ಮುಖವನ್ನು ನೋಡಿದನು.
“ಥೂ! ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ ಸತ್ತಿರೋದು ನಾವಲ್ಲ್ರೋ ನೀವು.. ಹಿಟ್ಟಿನ ಗೂಳಿಯಲ್ಲಿ ಮಾಡಿದ ಬೊಂಬೆಗಳಾದ ನೀವು ನಮ್ಮ ಹಾಗೆ ವಿಲವಿಲನೆ ಒದ್ದಾಡಿ ಸಾಯುವ ದಿನ ದೂರವಿಲ್ಲ” ಎಂದು ಅರ್ಥ ಬರುವಂತೆ ಆ ಎರಡು ಕಳೇಬರಗಳು ಅವರಿಬ್ಬರನ್ನು ಅಣಕಿಸಿದವು.
ಕಳೆದ ವಾರ ಓತಿಕ್ಯಾತ ಸತ್ತಿದ್ದಕ್ಕೂ ದೊಡ್ಡ ರಂಪಾಟ ಮಾಡಿದ್ದ ಅವಿವಾಹಿತೆ ಸಾವಿತ್ರಿ ಹೋಗಬೇಡೆ.. ಸತ್ತಿರೋವ್ನ ಕಂಡ್ರೆ ನಿನ್ನ ಬುದ್ಧಿ ನೆಟ್ಟಗಿರೋಲ್ಲ” ಎಂದು ಹೆತ್ತವರು ಹಾಕಿದ ಲಕ್ಶ್ಮಣ ಗೆರೆಯನ್ನು ಲೆಕ್ಕಿಸದೆ ಓಡಿ ಬಂದವಳೆ “ಅಯ್ಯಯ್ಯೋ ಏನು ಕರ್ಮ ಮಾಡಿದ್ರೋ, ಹೀಗೆ ಸಾಯೋಕೆ ಬದಿಕಿರೋ ಮಟ ಒಬ್ಬರನ್ನೊಬ್ಬ್ರು ಹರಕೊಂಡು ತಿಂದ್ರಿ.. ಒಂದಿನ ನೆಟ್ಟಗೆ ಕುಂತು ಮಾತಾಡ್ಲಿಲ್ಲ ’ ಎಂದೇನೋ ಅಬ್ಬರಿಸತೊಡಗಿದಳು ಆಕೆ ಅವುಚಿಕೊಂಡ ಕಾಮೋಷಿಯನ್ನು ಆಕೆಯನ್ನು ಬಿಡಿಸಿಕೊಳ್ಳುವಷ್ಟರಲ್ಲಿ ಸಾಕುಸಾಕಾಗಿಹೋಯಿತು ಅವರೀರ್ವರಿಗೆ..
ಆಕೆ ಲಭೋ ಲಭೋ ಬಾಯಿ ಬಡಿದುಕೊಳ್ಳುತ್ತಿದ್ದುದನ್ನು ಲೆಕ್ಕಿಸದೆ ಶಾಮ ಕಾಮೊಷಿಯನ್ನು ಕೈಗೆ ತೆಗೆದುಕೊಂಡವನೆ ಅರ್ಥವಾಗದ ನೆನಪುಗಳಿಂದ ಜಜ್ಜಿ ಹೋಗಿ ಕಣ್ಣು ತುಂಬಿಕೊಂಡು ಬಿಟ್ಟನು. ತನ್ನ ಹೃದಯವೇ ಅಂಗೈ ತುಂಬಿಕೊಂಡು ಬಿಟ್ಟಿರುವಂತೆ ಭಾಸವಾಯಿತು. ಮಸಾಲೆದೋಸೆ ಕಾವಲಿಗೆ ಸೀದು ಹೋದಂತೆ ಅವನ ಕಾಲುಗಳು ನೆಲಕ್ಕೆ ಕಿತ್ತಿಡಲಾರದಷ್ಟು ಅಂಟಿಕೊಂಡು ಬಿಟ್ಟವು. ನೆನಪುಗಳಿಗೆ ಅಕ್ಷರ ಮತ್ತು ಶಬ್ದ ರೂಪ ಕೊಟ್ಟರೆಲ್ಲಿ ರಘುವೇ ಮೊದಲಾದ ನರಮಾನವರು ತನ್ನನ್ನು ಅದೆಲ್ಲಿ ರಮಿಸಿ ತಮಗೆ ತಾವೇ ದೊಡ್ಡವರಾಗಿ ಬಿಡುವರೋ ಎಂದು ಅವುಡುಗಚ್ಚಿಕೊಂಡನು. ಅವುಡುಗಚ್ಚಿಕೊಂಡೇ ತನಗೆ ಸ್ವಾಂತನ ಶಿಕ್ಷಣ ನೀಡದೆ ಹೋದ ತಾತನನ್ನು; ತಾಯಿಯನ್ನು ಶಪಿಸಿದನು. ಇನ್ನೊಬ್ಬರಿಗೆ ಸಮಾಧಾನ ಹೇಳುವ ಪಾಠ ಕಲಿಯದ ತಾನು ಯಾವ ಪುರುಷಾರ್ಥಕ್ಕೆ ಬದುಕಿರುವುದೆಂದುಕೊಂಡನು.
ಕೈಯಲ್ಲಿ ಮಾರ್ಜಾಲದ ಕಳೇಬರ ಹಿಡಿದುಕೊಂಡಿದ್ದ ರಘು ಅವನ ಹೆಗಲ ಮೇಲೆ ಕೈ ಇರಿಸಿ ಧೈರ್ಯದಿಂದ ಮುಂದೆ ಹೆಜ್ಜೆ ಇರಿಸುವಂತೆ ಸನ್ನೆ ಮಾಡಿದನು.
ಆ ಸ್ಪರ್ಶದಿಂದಾಗಿ ಶಕ್ತಿ ಸಂಚಲನದಿಂದ ಒಂದೊಂದಾಗಿ ಹೆಜ್ಜೆ ಇಕ್ಕ ತೊಡಗಿದ ಅವನು ಮುಂದೆ ಮುಂದೆ.. ಮಹಾತ್ಮಾಗಾಂಧೀಜಿಯವರ ಶವ ಹೊತ್ತು ಕೊಂಡಿರುವವನಂತೆ.. ರಘುಪತಿ ರಾಘವ ರಾಜಾರಾಂ ಪದ ನೆನಪು ಮಾಡಿಕೊಳ್ಳುತ್ತಿರುವವನಂತೆ.. ಅದರೊಂದಿಗೆ ಸೋಹ್ನಿ ಮಹಿಪಾಲ್; ಹೀರಾ ರಾಂಜಾ; ಲೈಲಾ ಮಜ್ನೂ; ರೋಮಿಯೋ ಜೂಲಿಯಟ್ ಮುಂತಾದ ಅಮರ ಪ್ರೇಮಿಗಳ ಅಮರ ಪೇಮ ಕಥಾನಕಗಳನ್ನು ನೆನಪು ಮಾಡಿಕೊಳ್ಳುತ್ತಿರುವವನಂತೆ ಹಿಂದೆ ಹಿಂದೆ ಹೆಜ್ಜೆ ಇಕ್ಕಲಾರಂಭಿಸಿದ ರಘುರಾಮ..
ಅವರಿಬ್ಬರು ಮಾಳಿಗೆ ಮೇಲೆ ಬೀದಿ ಬದಿ; ಕಿಟಕಿ ಬಾಗಿಲೇ ಮುಂತಾದ ಕಡೆ ಬಾಯಿಗೆ ಬಟ್ಟೆ
—————————

೧೭೭
ಇಟ್ಟುಕೊಂಡು ನಿಂತಿದ್ದ ಮಂದಿಗೆ ಹೇಗೆ ಕಾಣುತ್ತಿದ್ದರಪ್ಪಾ ಅಂದರೆ ಸಂಪೂರ್ಣ ರಾಮಾಯಣವನ್ನು ಹಾಡಿನ ಮೂಟೆಯಲ್ಲಿ ಎದೆಯೊಳಗಿಟ್ಟುಕೊಂಡು ಒಂದು ಕೈಲಿ ಅಜೇಯವಾದ ಧನಸ್ಸು! ಇನ್ನೊಂದು ಕೈಲಿ ತಂಬೂರಿಯನ್ನಿಟ್ಟುಕೊಂಡು ಅಶ್ವಮೇಧದ ಅಂಕಣದ ಕಡೆ ನಡೆಯುತ್ತಿದ್ದ ಪುರಾಣ ಪ್ರಸಿದ್ಧ ಅವಳಿ ಜವಳಿಗಳಾದ ಲವಕುಶರು ನಡೆಯುತ್ತಿದ್ದಾರೇನೋ ಎಂಬಂತೆ.
ಜನ ಬಿಕ್ಕಿಬಿಕ್ಕಿ ನೋಡುತ್ತಿರುವಾಗ ಅವರು ನಡೆಯುತ್ತ ಬಸವನ ಬಾವಿ ತಗ್ಗಿನ ಕಡೆ ನಡೆದಿಳಿದು ಕಣ್ಮರೆಯಾದರು.

* * * * * *

ಅರ್ಥ ಬರುವಂತೆ ಇವನು ಅವನನ್ನು ನೋಡಿದನು.
‘ಪೊನ್ನಂ ರನ್ನಂ ಕೂಡಿದೊಡೆನ್ನೀ ವಾಗ್ವಧುಗೆ ಭೂಷಣಂ ಪೆರತುಂಟೇ’
ಈ ಪ್ರಕಾರವಾಗಿ ತಂತಮ್ಮ ಕೈಗಳಲ್ಲಿ ಮೂಷಕ ವೈರಿಗಳ ಕಳೇಬರವನ್ನು ಕೈದು ಮಾಡಿಕೊಂಡು ಅವರು ಧೀರೋದಾತ್ತವಾದ ಹೆಜ್ಜೆ ಇಕ್ಕುವ ಪರಿಯನ್ನು ಓಣಿಯ ಮಂದಿ ಕಣ್ತುಂಬ ನೋಡಿದರು. ಅವಾವುದಕ್ಕೂ ಬೇಸರಿಸದೆ ಅವರು ದ್ವಿದಳ ಧಾನ್ಯ ಎರಡು ಹೋಳಾದ ಪರಿಯಂತೆ, ಒಂದು ಕಾವ್ಯದ ಅಲಂಕಾರ ಛಂದಸ್ಸುಗಳಂತೆ; ಒಂದು ಆತ್ಮದ ಎರಡು ದೇಹಗಳಂತೆ, ತಮ್ಮ ನಾಲ್ಕೂ ಪಾದಗಳಿಂದ ಭೂಮಿಯನ್ನು ಅಳೆಯುತ್ತಿರುವವರಂತೆ ತಮ್ಮ ಪಾಡಿಗೆ ತಾವು ನಡೆಯುತ್ತಿದ್ದರು.
ಆ ಓಣಿ ದಾಟಿ ಈ ಓಣಿಗೆ ಬಂದರು.
ತಂತಮ್ಮ ಕೈಗಳಲ್ಲಿರ್ದ ಕಳೇಬರಗಳಿಗೆ ತಾವೇ ಮುಖ ಸೊಟ್ಟ ಮಾಡಿಕೊಳ್ಳತೊಡಗಿದರು.
ತಂತಮ್ಮ ದೇಹಗಳನ್ನೇ ಕೈಲಿ ಹಿಡಿದುಕೊಂಡವರಂತೆ ಪ್ರತಿ ಹೆಜ್ಜೆಗೂ ಕಂಪಿಸತೊಡಗಿದರು.
ತಾವರಸುವ ತಿಪ್ಪೆ ದೂರ ಸರಿಯುವಂತೆ ಭಾಸವಾಯಿತವರಿಗೆ.
ಉರಿಯ ಸರಿಗೇರಿದ ಪತಂಗಗಳಂತೆ ಹೆಜ್ಜೆ ತಪ್ಪತೊಡಗಿದರು.
ಕುರುಡರು ಹಿಡಿದುಕೊಂಡ ಕನ್ನಡಿಯಂತೆ
ಮೂರ್ಖರ ಕೈಯಲ್ಲಿನ ದಂಡಿಯ ಕಾವ್ಯಾದರ್ಶ ಗ್ರಂಥದಂತೆ
ಹೋರಾಡಲರಿಯದವನು ತೊಟ್ಟ ಕವಚದಂತೆ..
ಹೆಬ್ಬುಲಿಯ ಕೂಸನು ಬೇಡುವ ಕೊಬ್ಬಿದ ನರಿಗಳಂತೆ..
ಅವನು ಹಿಂದೆ ಇವನು ಮರೆ ಮಾಚುತ್ತ, ಇವನ ಹಿಂದೆ ಅವನು ಮರೆಮಾಚುತ್ತ ಅಸ್ಪಷ್ಟ ಹೆಜ್ಜೆಯನ್ನಿಕ್ಕುತ್ತ ನಡೆಯುತ್ತೊರ್ದ ಅವರನ್ನು ಊರೇ ಹೊರಗೆ ನೂಕಿತೆಂಬಂತೆ ಸಾಕಷ್ಟು ಹೊರಗಡೆ ಬಂದಿರ್ದರು.
ಇವನ ಕಾಲಲ್ಲಿ ಸೊಂಟ ಊನ ಮಾಡಿಕೊಂಡಿದ್ದ ನಾರಾಣಿ ಮಸೀದಿ ಮೇಲೆ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಘ್ರಾಣೇಂದ್ರಿಯ ಚುರುಕುಗೊಂಡು ಆಲೆ ಕುಣಿಯೊಳಗೆ ದುತ್ತನೆ ನೆಗೆದು ಒಂದೇ ಓಟ ಪೂರೈಸಿ ಎದುರಿಗೆ ನಿಂತು ಗುರ್‌ ಗುಟ್ಟಲಾರಂಭಿಸಿತು.
‘ನಾರಾಯಣೊ ಹರಿಃ’ ಅಂತ ಒಂದು ಹೆಜ್ಜೆ ಹಿಂದಿಟ್ಟು ಉರುಳಿ ಬೀಳುವುದರಲ್ಲಿದ್ದ ಶಾಮನನ್ನು ರಘು ಗಟ್ಟಿಯಾಗಿ ಹಿಡಿದುಕೊಂಡ. ಅವನ ಕೈಲಿ ಸೈಂಧವನ ತಲೆಯಂತೆ ಅನಿಶ್ಚಿತ ಸ್ಥಿತಿಯಲ್ಲಿದ್ದ ಕಳೇಬರ ಗಾಳಿಗೊಡ್ಡಿದ್ದ ಸೊಡರಂತೆ ಹೊಯ್ದಾಡಿತು. ಅದು ಕೆಳಗೆ ಬಿದ್ದರೆಲ್ಲಿ ಭೂಮಿ ನಾಶವಾಗುವುದೋ ಎಂಬ ಆತಂಕದಿಂದ ನಾರಾಣಿ ಮತ್ತೊಮ್ಮೆ ಗುರುಗುಟ್ಟಿತು. ಜಿಗಿಯಲು
—————————

೧೭೮
ಮುಂದೆರಡು ಪಾದಗಳನ್ನು ನೆಲಕ್ಕೂರಿ ತನ್ನೆರಡು ಕಂಗಳಿಂದ ಕಾಳ್ಗಿಚ್ಚನ್ನು ಉಗುಳ ತೊಡಗಿತು. ಅರೆ! ಅದು ಇನ್ನೇನು ಬೊಗಳೇಬಿಟ್ಟಿತು! ಅರೆ! ಅದಿನ್ನೇನು ನೆಗೆದೇ ಬಿಟ್ಟಿತು! ಅರೆ! ಅದಿನ್ನೇನು ಕಳೇಬರಗಳ ಸಹಿತ ತಮ್ಮನ್ನೂ ಕಬಳಿಸಿಯೇ ಬಿಟ್ಟಿತು ಎಂದು ಆ ಕೂಡಲೆ ಭಾವಿಸಿದ ಆ ಸತ್ಕುಲ ಪ್ರಸುತರು ತಂತಮ್ಮ ಪ್ರಾಣಗಳನ್ನು ಅಂಗೈಲಿಟ್ಟುಕೊಂಡು ಜಲಧಿಯೊಳುಬ್ಬೆದ್ದ ತೆರಯಲಿ ಮಂದರ ಮುಳುಗುವಂದದಿ ನತದೃಷ್ಟ ಕಳೇಬರಗಳನ್ನು ನೆಲಕ್ಕೀಡಾಡಿ ಝಳದ ಜಾಡಿಗೆ ಹೆದರಿದ ರಾಹುಕೇತುಗಳಂತೆ ಓಡತೊಡಗಿದರೆಂಬಲ್ಲಿಗೆ ಕುಂವೀ ಎಂಬ ಹುಲು ನರ ವಿರಚಿತ ‘ಶಾಮಣ್ಣ’ ಎಂಬ ಮಹಾ ಕಥಾನಕದ ಪ್ರಥಮಾಶ್ವಾಸಂ ಸಮಾಪ್ತಿಯಾದುದು.
‘ಜಯ ಮಂಗಳಂ ನಿತ್ಯ ಶುಭ ಮಂಗಳಂ’

* * * * *

—-
೧೭೯

ದ್ವಿತೀಯಾಶ್ವಾಸಂ
ಕಾಲ ಅನಂತವಾಹಿನಿ. ಅದು ಮುಂದು ಮುಂದಕ್ಕೆ ಪ್ರವಹಿಸುತ್ತಲೇ ಇರುತ್ತದೆ. ಬ್ರಹ್ಮಾಂಡದ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ. ಕಾಲ ಎಲ್ಲ ಒಳ್ಖೆಯದೂ ಕೆಟ್ಟದ್ದೂ ಎಲ್ಲವನ್ನು ಅರಗಿಸಿಕೊಲ್ಲುತ್ತದೆ. ಪ್ರತಿಯೊಂದು ಸಚರಾಚರ ಭೌತ ವಸ್ತುಗಳೊಳಗೆ ಸೂಕ್ತವಾದ ಬದಲಾವಣೆ ಮಾಡುತ್ತ ನಿರಂತರ ಚಲನೆ ಹೊಂದಿರುವ ಕಾಲವನ್ನು ಭೌತವಿಜ್ಞಾನಿಗಳು ಬಿಲ್ಲಿನಿಂದ ಚಿಮ್ಮಿದ ಬಾಣಕ್ಕೆ ಹೋಲಿಸಿರುವುದು ಸರಿಯಾಗಿದೆ. ಕಾಲ ಸ್ತಬ್ದವಾಗುವುದು ಆಯಾ ವ್ಯಕ್ತಿಗಳ ದೇಹದಲ್ಲಿ ಆವತ್ತಿನವರೆಗೆ ಪ್ರಾಣಪಕ್ಷಿ ವಾಸಮಾಡುತ್ತಿದ್ದು ಕೊನೆಗೊಮ್ಮೆ ಅದು ಹೇಳದೆ ಕೇಳದೆ ಪುರ್ರನೆ ಹಾರಿಹೋದೊಡನೆಯೆ, ಆದರೆ ಪ್ರಾಣಕಳೆದುಕೊಂಡ ವ್ಯಕ್ತಿಯ ಬದುಕು ಹಲವರ ಬಾಯಲ್ಲಿ ಒಂದು ಚಲನೆ ಪಡೆಯುತ್ತದೆ. ಅವನು ಹಂಗಿದ್ದ; ಹಿಂಗಿದ್ದ ಅಂತ ಮಾತಾಡಿಕೊಳ್ಳುತ್ತರೆ. ಭಾಷೆಯ ರೂಪ ಅವಧರಿಸಿ ಅವನು ಬದುಕುಳಿಯುತ್ತಾನೆ. ನಂತರ ಸತ್ತವನ ಯೊಗ್ಯತೆಗೆ ತಕ್ಕಂತೆ ಅವನ ಕಥೆಯೂ ಭೂತಕಾಲದ ದಫ್ತರು ಸೇರಿಬಿಡುತ್ತದೆ. ಆದ್ದರಿಂದ ಪ್ರಾಚೀನರು ‘ಕಾಲೋ ಅಶ್ವೋವಹತಿ’ ಎಂದು ಕಾಲವನ್ನು ನಿರಂತರವಾಗಿ ಸಂಚರಿಸುವ ಕುದುರೆಗೆ ಹೋಲಿಸಿದರು. ‘ಸಪ್ತರಶ್ಮೀ’ ಅಂತ ಅದಕ್ಕೆ ಏಳು ಕಿರಣಗಳನ್ನು ಸೃಷ್ಟಿಸಿದರು. ಸಹಸ್ರಾಕ್ಷೋ ಅಂತ ಸಾವಿರ ಕಣ್ಣುಗಳಿವೆ ಎಂದು ಹೇಳಿದರು. ಅಜರೋ ಅಂತ ಅದಕ್ಕೆ ಮುಪ್ಪಿಲ್ಲವೆಂದು ಘೋಷಿಸಿದರು. ಭೂರಿ ಶೀತಾಃ ಅಂತ ಅದರ ವೀರ್ಯಸಮೃದ್ಧಿತನಕ್ಕೆ ಪ್ರಾಮಾಣಪತ್ರ ದಯಪಾಲಿಸಿದರು. ಮತ್ತೂ ಮುಂದುವರೆದು ಕಾಲೇನ ಆಗತೇನ ಇಮಾಃ ಸರ್ವಾ ಪ್ರಜಾ ನಂದತಿ ಎಂದು ಹೇಳುವುದರ ಮೂಲಕ ದ್ವಂದಾತೀತವಾದ ಅನುಭವವನ್ನು ಕಾಲ ನೀಡುತ್ತದೆ ಎಂದು ಸಾರಿದರು. ಅದಕ್ಕೆ ದೈವಸ್ತಾನ ನೀಡಿ ಕಾಲಭೈರವ ಎಂದು ಹೆಸರಿಟ್ಟರು. ಕಾಲಭೈರವ ಉಗ್ರ ಶಾಸಕ. ಅವನಿಗೆ ಶಿಕ್ಷಿಸುವುದೂ ಗೊತ್ತು, ಶಿಕ್ಷಣ ಕೊಡುವುದೂ ಗೊತ್ತು. ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ; ಈಶತ್ವ ವಶಿತ್ವವೆಂಬುವೇ ಮೊದಲಾದವರನ್ನು ತೇದು ಕುಡಿದ ವಂಶದಿಂದ ಬಂದವನಾದ ಶಾಮಾಶಾಸ್ತ್ರಿಯ ಬದುಕನ್ನೂ, ಕಾರ್ಲಮಾರ್ಕ್ಸ್, ಏಂಗೆಲ್ಸ್, ಚೆಗುವೆರಾ ಇವರೇ ಮೊದಲಾದ ಎಡಪಂಥದವರನ್ನು ಅರೆದು ಕುಡಿದು ಅನ್ನನಾಳದಲ್ಲಿ ಪ್ರತಿಷಾಪಿಸಿಕೊಂಡಿರುವ ಕಾಂರೇಡ್ ರಘುರಾಮನ ಬದುಕನ್ನು ಹೇಗೆ ರೂಪಿಸಿದ ಎಂದು ಯೋಚಿಸುವುದು ಈ ಪೂರ್ವಾರ್ಧ ಕಥಾನಕದಲ್ಲಿ ಮುಖ್ಯ.
ಸಂಸ್ಕೃತ ಕಳೇಬರದಮೇಲೆ ಪದ್ಮಾಸನ ಹಾಕಿ ಪ್ರಾಣಾಯಾಮ, ಧ್ಯಾನ ಮಾಡುವ ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ ಎಂಬ ಮೇಡ್ ಇನ್ ಇಂಡಿಯಾ ಅಥವಾ ಸನ್ ಆಫ್ ಇಂಡಿಯಾ ಎಂಬುವನು ಹೊಸಪೇಟೆಯ ಅಗ್ರಹಾರ ನಿವಾಸಿ ವೇದಾಂತಿ ರಾಜಗೋಪಾಲಾಚಾರ್ಯರ ಮೊಮ್ಮಗಳಾದ ವರಲಕ್ಷ್ಮಿ ಎಂಬ ಕನ್ಯಾಮಣಿಯನ್ನು ಶಾಸ್ಥ್ರೋಕ್ತವಾಗಿ ಮದುವೆ ಮಾಡಿಕೊಂಡು ಸುಖವಾಗಿ ಜೀವಿಸುತ್ತಿದ್ದ ಎಂದು ಹೇಳಿದರೆ ಮುಗಿಯುವುದಿಲ್ಲ. ಹಾಗೆಯೇ ಈ ಕಾದಂಬರಿಯ ಇನ್ನೊಂದು ಮುಖವಾದ ಕಾಮ್ರೇಡ್ ರಘುರಾಮನು ತನ್ನ ಸೋದರಮಾವ ರುದ್ರನಾಯಕನ ಏಕಮಾತ್ರ ಪುತ್ರಿ ಅನಸೂಯಾಳನ್ನು ಗಾಂಧರ್ವ ವಿವಾಹವಾಗಿ ಸುಖೀ ಜೀವನ ನಡೆಸುತ್ತಿದ್ದ ಎಂದು ಸರಳವಾಗಿ ಹೇಳಿ ಕಾದಂಬರಿಕಾರನಾದ ನಾನು ನನ್ನ ಆತ್ಮಸಾಕ್ಷಿಗಾಗಲೀ, ಓದುಗರಿಗಾಗಲೀ ಮೋಸ ಮಾಡಲಾರೆ. ಈ ಕಾಲದಲ್ಲಿ ಓದುಗರೇನು ಮುಗ್ಧರೆನ್ನುವಂತಿಲ್ಲ. ನೀವು ಲೇಖಕರಿಗಿಂತ
———————–

೧೮೦
ಜಾಣರಿರುತ್ತೀರಿ. ಲೇಖಕರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು ನಿಮಗೆ ಗೊತ್ತಿರುತ್ತದೆ.ಓದುವ ಪ್ರತಿಯೊಂದು ಸಂಗತಿಯನ್ನು ಬದುಕಿನ ಸಹಜ ಘಟನಾವಳಿಗಳೊಂದಿಗೆ ತಾಳೆಹಾಕಿ ನೋಡುತ್ತೀರಿ. ಸಾಹಿತ್ಯದ ಪ್ರತಿಯೊಂದು ಅಂಗೋಪಾಂಗವನ್ನು ಪರಿಪೂರ್ಣ ಸಮಾಜದ ಮಗ್ಗುಲಿರಿಸಿ ತಾಳೆಹಾಕಿ ನೋಡುತ್ತೀರಿ. ಸರಿ ಇದ್ದರೆ “ಪರವಾ ಇಲ್ಲಪಾ” ಅಂತೀರಿ. ಇಲ್ಲದಿದ್ದರೆ ಡೋಂಗಿ ಗುರುತಿಸಿ ಆ ಲೇಖಕನನ್ನು ಭೂತದ ಕೊಚ್ಚೆಗೆಸೆದು ಬಿಡುತ್ತೀರಿ. ಆದ್ದರಿಂದ ಸಮಾಜದ ಎರಡು ಭಿನ್ನ ಧೃವಗಳಂತಿರುವ ಶಾಮ ಮತ್ತು ರಘುರವರ ವಿವಾಹೋತ್ತರ ಬದುಕನ್ನು ಅತ್ಯಂತ ಸಹಜವಾಗಿ; ಪ್ರಾಮಾಣಿಕವಾಗಿ ಚಿತ್ರಿಸುವ ಅಗತ್ಯ ಮತ್ತು ಜವಾಬ್ದಾರಿ ನನಗಿದೆ. ವಿವಾಹವೆಂಬುದು ಬದುಕಿನ ಒಂದು ಅರ್ಥಪೂರ್ಣ ಆರಂಭ. ಮದುವೆಯಾಗಿ ಎಲ್ಲರೂ ಸುಖವಾಗಿದ್ದರು ಎಂದು ಹುಸಿ ಸುಳ್ಳು ಹೇಳುವ ಧೈರ್ಯ ನನಗಿಲ್ಲ. ಹಾಗೆ ಹೇಳಿಬಿಟ್ಟೆನೆಂದರೆ ಸತ್ತು ಅತ್ತ ವೈಕುಂಠದಲ್ಲೂ ಇಲ್ಲದೆ, ಇತ್ತ ನರಕದಲ್ಲೂ ಇಲ್ಲದೆ ಕೊತ್ತಲೂರಿನ ರಂಗ ಕಲಾವಿದೆಯರ ಓಣಿಯ ಪಾತಾಳ ಗಂಗೆಯ ಹುಣಸೇ ಮರದಲ್ಲಿ ಪ್ರೇತವಾಗಿ ಜೋತುಬಿದ್ದು ತೂಗಾಡುತ್ತಿರುವ ಶಾಮಾಶಾಸ್ತ್ರಿ ಎಂಬ ಬ್ರಹ್ಮ ಪಿಶಾಚಿ ಕಥೆಗಾರನಾದ ನನ್ನನ್ನು ಒಂದು ಕೈ ನೋಡಿಕೊಳ್ಳದೆ ಇರಲಾರದು. ಅದು ಅಲ್ಲದೆ ಅವರ ನನ್ನ ಖಾಸಾ ದೋಸ್ತು. ಅವನು ನನಗಿಂತ ಮೂರುವರೆ ತಿಂಗಳು ದೊಡ್ಡವನು. ಅವನೂ ನಾನೂ ಒಂದೇ ಗ್ರವುಂಡಿನಲ್ಲಿ ಆಡಿ ಬೆಳೆದವರು. ಅವನಂತೆ ನಾನೂ ಒಂದೆರಡು ಕಥೆ ಕವಿತೆ ಬರೆದು ಹಲವು ಹುಡುಗಿಯರ ಹೃದಯ ಗೆಲ್ಲಲು ವಿಫಲನಾದವನು. ವಿರಹದುರಿಯ ಶಮನಕ್ಕಾಗಿ ಕಾವ್ಯ ಕನ್ನಿಕೆಯೆಂಬ ತಿಳಿಗೊಳದಲ್ಲಿ ನಿರ್ನಾಮ ಆದವನು. ಅವನ ಬದುಕಿನ ವಿವಿದ ಅವಸ್ಥೆಗಳನ್ನು ಗಮನಿಸುತ್ತ, ಪ್ರತಿಯೊಂದು ಅವಸ್ಥೆಗೆ ಸಾಹಿತ್ಯದ ಗರಂ ಮಸಾಲೆ ಹಚ್ಚಿ ಕಥೆ ಬರೆದರೆ ಹೇಗೆ? ಕವಿತೆ ಬರೆದರೆ ಹೇಗೆ? ಕಾದಂಬರಿ ಬರೆದರೆ ಹೇಗೆ ಎಂಬ ಗೊಂದಲಕ್ಕೀಡಾದವನು. ಕೊನೆಗೆ ಏನೂ ಬರೆಯಲಾಗದೆ ಬದುಕಿನ ನಲವತ್ತು ಆಷಾಢಗಳನ್ನು ಕಳೆದವನು. ಅವನ ಬದುಕಿನ ಪ್ರತಿಯೊಂದು ಪಂಚಾಯ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾನು ನನ್ನ ಪ್ರೀತಿಯ ಹಾಗು ಅಂಜುಬುರುಕ ಗೆಳೆಯ ಶಾಮಾಶಾಸ್ತ್ರಿಯು ಮದುವೆ ಆದ ನಂತರ ಸುಖವಾಗಿದ್ದ ಎಂದು ಹೇಳಿಬಿಟ್ಟಲ್ಲಿ ಅವನು ಖಂಡಿತ ಕ್ಷಮಿಸುವುದಿಲ್ಲ. ಶೂದ್ರನಾಗಿ ಹುಟ್ಟಿರುವ, ಯಾವ ಸೂಕ್ಷ್ಮ ಸಂವೇದನೆಗಳನ್ನು ರೂಢಿಸಿಕೊಳ್ಳದೆ ಕೇವಲ ಚತುಷ್ಪಾದಿಯಂತೆ ಏನೋ ಒಂದು ನಾಲ್ಕು ಸಾಲು ಕನ್ನಡವನ್ನು ಸಲೀಸಾಗಿ ಬರೆಯಬಲ್ಲ ನಿನ್ನಂತೆ ಎಲ್ಲರೂ ಸುಖವಾಗಿದ್ದಾರೇನು? ಎಂದು ಅವನ ಪ್ರೇತವೇ ಒಂದು ದಿನ ನನ್ನ ಮನೆ ಬಾಗಿಲಿಗೆ ಬಂದು ಟಪ್ ಟಪ್ ಎಂದು ಕದ ತಟ್ಟಿಬಿಡಬಹುದು. ಇನ್ನೊಂದು ತಮಗ ಅರಿಕೆ ಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ ಅವನ ಹೆಂಡತಿ ನನ್ನ ಪಿತಾಶ್ರೀಗೆ ಮನೆ ಮಾರಿ ಎಲ್ಲಿಗೋ ಹೋಗಿ ಒಂದು ಅರ್ಥವಾಗದ ಖಾಯಿಲೆಯಿಂದ ನರಳುತ್ತಿದ್ದಳೆಂಬುದು. ಬ್ರಾಹ್ಮಣರು ವಾಸವಾಗಿದ್ದ ಮತ್ತು ಬ್ರಾಹ್ಮಣ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿರುವೀ ಮನೆಯ ವಾಸ್ತುವಿನ ಬಗ್ಗೆ ತಲೆ ಕೆಡೆಸಿಕೊಂಡು ಹತ್ತಾರು ವಾಸ್ತು ಶಾಸ್ತ್ರಿಗಳು ಮನೆಗಳಿಗಡ್ಡಾಡಿ ಈ ಸದರೀ ಮನೇಲಿರೋ ಯಾರೂ ಉದ್ದಾರವಾಗುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು ಒಂದು ಪುಲ್ಲಿಂಗ ಜಾತಿಯ ಸಂತಾನ ಹೀನ ನಮ್ಮಜ್ಜಿ ಎಲ್ಲ ಪ್ರವರ ವಿವರಿಸಿ “ತಗೋಬ್ಯಾಡಾಂದ್ರೆ ತಗೋಬ್ಯಾಡ”ವೆಂದು ಪಟ್ಟು ಹಿಡಿದು ಕೂತಿದ್ದುಂಟು. ಶೃಂಗೇರಿಗೆ ಹೋಗಿ ಕೇಶ ತೆಗೆಸಿಕೊಂಡು, ನೂಲಿನ ಸೀರೆ ಉಟ್ಟು ಅಂತರ್ಧಾನಗೊಂಡ ಪತಿ ಶಾಮನ ಫೋಟೋದೆದರು ಕೂತು ‘ನನ್ ಬಾಯಿಗೆ ಮಣ್ಣು ಹಾಕಿ ಹೋದೆಯಲ್ಲೋ, ನಿನಗೆ ಕೈಹಿಡಿಯೋಕೆ ನಾನು ಯಾವ ಜನುಮದಲ್ಲಿ ಯಾವ ಪಾಪ ಮಾಡಿದ್ದೆನೋ
—————————-

೧೮೧
ಎಂದು ಬಾಯಿಬಾಯಿ ಬಡಿದುಕೊಳ್ಳುವಾಗ್ಗೆ ಭೂತ ಬಿಡಿಸಲೆಂದು ನಮ್ಮಜ್ಜಿ ಹೋಗಿ ನಿಂತಿದ್ದಳು. ಅದೇ ಹೊತ್ತಿಗೆ ವ್ಯಾಸ ಪೀಠದಲ್ಲಿದ್ದ ಕಿಲುಬು ಹೊತ್ತಿಗೆಯಲ್ಲಿ ಕಳೆದುಕೊಂಡಿದ್ದ ಕಣ್ಣುಗಳನ್ನು ಭೂತಗನ್ನಡಿಗಳ ಸಹಾಯದಿಂದ ಹುಡುಕಾಡುತ್ತಿದ್ದ ಜರ್ಝರಿತ ದೇಹದ ಅಲುಮೇಲಮ್ಮ “ಏನೇ ಬಾಯಿಗೆ ಬಂದಂತೆ ಮಾತಾಡ್ತಿ. ರಾಮ ರಾಮ ಸತ್ತಿರೋ ತನ್ನ ಗಂಡನ್ನ ಬಾಯಿಗೆ ಬಂದಂಗ ಬಯ್ತಿದಾಳಲ್ಲ ದೇವರೇ!” ಎಂದು ದಿಗ್ಗನೆ ಎದ್ದು ಊರುಗೋಲಿನ ಆಸರೆಯಲ್ಲಿ ಪಡಸಾಲೆಗೆ ಬಂದು, ಅಟವಾಳಿಯ ಮುಖ್ಯ ಕಂಭಕ್ಕಾತು ನಿಂತಿದ್ದ ಕೆದರು ತಲೆಯ ನಮ್ಮಜ್ಜಿ ಕಡೆ ಕಣ್ಣುಹಾಯಿಸದೇ (ಅವಿದ್ದರೆ ತಾನೆ) ಜ್ಞಾಪಕ ಬಲದಿಂದ ಸೀದ ಖಾಲಿ ಹಣೆ ಬಡಿದುಕೊಳ್ಳಿತ್ತಿರ್ದ ಸೊಸೆ ಬಳಿಗೆ ಸಾರ್ದುದು ಹೆಂಗಿತ್ತಪ್ಪ ಅಂದರೆ ಹಗಲುಗುರುಡಿ ಗಾಂಧಾರಿ ಕುರುಕ್ಷೇತ್ರದ ರಣರಂಗದಲ್ಲಿ ‘ಸತ್ತ ಮಗಂದಿರ್ ಸತ್ತರ್ ನೀನೆಮಗುಳ್ಳೊಡೆ’ಎಂದು ಕೂಗುತ್ತ ಬಂದಂತಿತ್ತು. ಆಕೆ ಒಂದೊಂದು ಹೆಜ್ಜೆ ಇಡುತ್ತಿದ್ದುದು ಹೇಗಿತ್ತಪ್ಪ ಅಂದರೆ ಜಲಮಹಾನುಭಾವ ನಾಭಿಯೊಳಗುಳಿದ ಕಮಲ ಒದ್ದಾಡುವಂತಿತ್ತು. ತನ್ನ ವೃದ್ದಾಪ್ಯದ ಬದುಕಿನ ದುರ್ಬಲ ಊರುಗೋಲಿನಂತಳಿದುಳಿದಿರುವ ಕೇಶವಿಹೀನೆ ವಿಧವೆ ಸೊಸೆಯನ್ನು ಸ್ವೀಕರಿಸಲಾಗದೆ; ತಿರಸ್ಕರಿಸಲಾಗದೆ, ಗಂಟಲುಗ್ರಾಣದಲ್ಲಿ ಪೇರಿಸಿಟ್ಟ ಹಲವು ಮಾತಿನ ಲಡ್ಡುಗೆಗಳಿಗೆ ದ್ವನಿರೂಪ ಕೊಡಲಾಗದೆ, ಹಾಗೆ ನಡೆಯುತ್ತ ಬಂದು ಕೋಡುಬಳೆಯ ಡಬ್ಬವನ್ನೇ ತನ್ನ ಸೊಸೆ ಎಂದು ಭಾವಿಸಿ “ವೈಕುಂಠವಾಸಿಯಾಗಿರೋ ನನ್ನ ಮಗನನ್ನು ಬೈದು ನರಕಕ್ಕೆ ಹೋಗಬೇಡ ವರಲಕ್ಶ್ಮಿ” ಎಂದು ಪರಿಪರಿಯಾಗಿ ವಿನಂತಿಸಿಕೊಂಡದ್ದುಂಟು. ಸಿಂಬಳ ಕೊರೆದೆಸೆದ ಸವಂಡನಾಗಲಿ ಶಬ್ದವೇದಿ ವಿದ್ಯಾಪಾರಂಗತಳಂತೆ ಅತ್ತೆರಡು ಹೆಜ್ಜೆ ಇರಿಸಿ, ಮಾಡಿಕೊಂಡ ಪತ್ನಿಯಾದ ನೀನು ಸರಿಯಾಗಿದ್ದಲ್ಲಿ ಅವನ್ಯಾಕೆ ಸಾಯ್ತಿದ್ದ’ ಎಂಬೊಂದು ಮಾತು ಆಡುವುದರ ಮೂಲಕ ಪರಮ ಸಾಧ್ವಿಯಾದ ವರಲಕ್ಶ್ಮಿಯ ಹೃದಯವೆಂಬ ದೇಗುಲದಲ್ಲಿ ಬಿರುಗಾಳಿ ಎಬ್ಬಿಸಿದ್ದುಂಟು. ಜಗಳವಾಡುವಾಗೆಲ್ಲ ತುರುಬು ಕಟ್ಟಿಕೊಂಡಿದ್ದರೆ (ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ ದೂರದಲ್ಲಿ ಗಿರಿಯಮೇಲೆ ಇಳಿದಂತೆ ಇರುಳಾಮಾಲೆ) ಒಂದೇಟಿಗೆ ಬಿಚ್ಚಿ ಮುಖದ ಹಿಂದೆ ಪ್ರಭಾವಳಿಯಂತೆ ಇಳಿ ಬಿಟ್ಟುಕೊಂಡು ಭಲೈ ಸಾರಥಿ ನಾನು ದಾರೆಂದರೆ ಎಂದು ಗಡಗಡ ಗುಡುಗುತ್ತಿದ್ದಳು. ಕಪ್ಪುಗುರುಳು ಇಳಿಬಿಟ್ಟಿದ್ದರೆ ಅದರೊಳಗಿದು ಸಿಗಿಸಿ ಇದರೊಳಗದು ಸಿಗಿಸಿ ‘ಬರ್ರಲೆ ಒಂದು ಕೈ ನೋಡ್ಕೋತೀನಿ’ ಎಂದು ಎದುರಾಳಿಗೆ ಸವಾಲ್ ಹಾಕುತ್ತಿದ್ದಳು. ಕಟ್ಟಲೆಂದೋ ಬಿಚ್ಚಲೆಂದೋ ಕೈಗಳನ್ನು ಹಿಂದಕ್ಕೆ ಹಾಕಿದಳು. ಆದರೆ ಅವು ಅಲ್ಲಿದ್ದರೆ ತಾನೆ! ತಾನೆ ಮುಂಡೆಯಾಗಿರುವುದು, ಶೃಂಗೇರಿಯ ಹದಿಹರೆಯದ ಚಿಗುರುಮೀಸೆಯ ಹಜಾಮನ ಅಮೃತಹಸ್ತದಿಂದ ಮಂಡೆ ತೆಗೆದಿರುವುದು ಆ ಕ್ಷಣ ನೆನಪಾಯಿತು. ರೋಮಾಂಚನ, ಕೋಪ ಇವೆರಡೂ ಒಟ್ಟೊಟ್ಟಿಗೆ ಬಂದವು. ದಿಗ್ಗನೆ ಎದ್ದು, “ಯಾರ್ಯಾರ್ನೋ ಬಿಟ್ಟು ಯಾರ ಯಾರ್ನೋ ಕರಕೊಳ್ತಾನಲ್ಲ ಆ ದೇವ್ರು” ಅಂತ ಗೊಣಗಿದಳು. “ನಾನ್ಯಾಕೆ ನರಕಕ್ಕೆ ಹೋಗ್ಲಿ ಅತ್ತೆಮ್ಮ … ಸಾಯ್ಲಿ ಅಂತ ನಾನೇನಾದ್ರು ನನ್ನ ಪತಿ ದೇವ್ರಿಗೆ ವಿಷಕೊಟ್ಟನೇನು? ನನ್ನಂಥ ಪರಮ ಪತಿವ್ರತೆಯಾದ ಹೆಂಡತೀನ ಇಟ್ಟುಕೊಂಡು ಮಾಡಬಾರದ್ದನ್ನ ಮಾಡಿ ಪ್ರತಿ ದಿನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ರಲ್ಲ … ಆ ನಿನ್ ಮಗ್ನೀಗೆ ಬುದ್ಧಿಹೇಳಬೇಕಾಗಿತ್ತು; ಆಗ ನಿಮ್ಮ ನಾಲಿಗೆ ಬಿದ್ದು ಹೋಗಿತ್ತೇನು?” ಎಂದು ಅಶ್ರುಧಾರೆಯಿಂದ ವಕ್ಷಸ್ಥಳಕ್ಕೆ ಅಭಿಷೇಕ ಮಾಡಿದಳು. ಇದಕ್ಕೆ ಏನು ಉತ್ತರ ಕೊಡಬೇಕೆಂದು ವೃದ್ಧೆಗೆ ಆ ಕ್ಷಣ ಹೊಳೆಯಲಿಲ್ಲ. ಆದರೆ ಆಕಾರವಿಲ್ಲದ ಇಟ್ಟಿಗೆಗಳಿಂದಲೇ ಸುಂದರ ಗೋಡೆ
——————————-

೧೮೨
ಕಟ್ಟುವ ನುರಿತ ಬೇಲ್ದಾರನಂತೆ ಮುಖರಹಿತ ಮಾತುಗಳನ್ನೇ ಕುಪ್ಪೆ ಮಾಡಿಕೊಂಡು “ನೀನ್ಯಾವ ಪತಿವ್ರತೆಯೇ … ಒಂದುದಿನವಾದರೂ ಕೈ ಹಿಡಿದ ಗಂಡನ ಯೋಗಕ್ಷೇಮ ವಿಚಾರಿಸಿದ್ದುಂಟಾ…. ಸತ್ತೆಯಾ ಬದುಕಿದಿಯಾ ಎಂದು ಕೇಳಿದ್ದುಂಟಾ … ಇರೋವಷ್ಟು ಕಾಲ ಅವನನ್ನು ಉರಿಸಿಕೊಂಡು ತಿಂದೆಯಲ್ಲೇ …” ಎಂದು ದೃಷ್ಟಾಂತಗಳ ಸರಮಾಲೆಯನ್ನೇ ಪೋಣಿಸಿದಳು. ಅತ್ತೆಯಾಡಿದ ಮಾತುಗಳನ್ನು ಕೇಳಿ ಆ ನಲವತ್ತರಾಸುಪಾಸಿನ ಆಕೆಯ ಹೃದಯದಲ್ಲೆದ್ದ ಚಂಡ ಮಾರುತ ದಾವಾನಲದ ರೂಪ ಪಡೆಯಿತು. “ಅಯ್ಯಯ್ಯೊ … ಈ ಮುದುಕಿ ಬಾಯಿಗೆ ಬಂದಂಗೆ ಮಾತಾಡ್ತಿದೆಯಲ್ಲ್ರಪ್ಪೋ! ನಾನ್ಯಾವ ಕರ್ಮ ಮಾಡಿದ್ದೆನೋ ಇಂಥ ಅತ್ತೆ ಪಡೆಯೋಕೆ! ನಾನ್ಯಾವ ಪಾಪ ಮಾಡಿದ್ದೆನೋ ಈ ಮನೆ ತುಂಬಿಕೊಳ್ಳೋಕೆ! ಈ ಹೊಟ್ಟೇಲಿ ಅವೊಂದೆರಡು ಹುಟ್ಟಿರದಿದ್ದಲ್ಲಿ ಅವತ್ತೇ ತುಂಗಾನದೀಲಿ ಬಿದ್ದು ಆತ್ಮಹತ್ಯೆ ಮಾಡ್ಕೊಳ್ತಿದ್ದೆ … ಇನ್ನೂ ಏನು ಅನುಭವಿಸೋದಿದೆಯೋ ಈ ಅತ್ತೆ ಎಂಬ ರಾಕ್ಷಸಿ ಕೈಯಲ್ಲಿ .. ಓಹ್! ತಿರುಪತಿ ವೆಂಕಟರಮಣನೇ ಈ ಕೂಡಲೆ ನನಗಾದ್ರು ಸಾವು ಕೊಡು, ಇಲ್ಲವಾದಲ್ಲಿ ಈ ಮುದುಕಿನಾದ್ರು ನಿನ್ನ ಪಾದಾರವಿಂದಕ್ಕೆ ಸೇರಿಸ್ಕೋ … ನನ್ನಂಥ ಪರಮ ಭಕ್ತೆಯ ಬದುಕಿನೊಂದಿಗೆ ಚೆಲ್ಲಾಟವಾಡೋದ್ನ ಇನ್ನಾದ್ರೂ ಸಾಕು ಮಾಡೋ ಜಗದ್ರಕ್ಷಕನೇ! ಈಕೆಯಂತೆ ನಾನೇನು ಯೌವನದಲ್ಲಿ ಗಂಡನನ್ನು ಕಳೆದುಕೊಂಡು ಚೆಲ್ಲಾಟವಾಡ್ತಿಲ್ವಲ್ಲ …” ಎಂಬಿವೇ ಮೊದಲಾದ ಮಾತುಗಳು ಮಾವಿನಗುಂಡೆ ಜಲಪಾತದಂತೆ ದುಮ್ಮಿಕ್ಕಿದವು. ಇದನ್ನೆಲ್ಲ ಕೇಳಿಸಿಕೊಂಡು ಮುದುಕಿ ರಾಮಾ …ರಾಮಾ ಅಂತ ಶ್ರವಣೇಂದ್ರಿಯಗಳ ಮೇಲೆ ಕರಕಮಲಗಳನ್ನು ಇರಿಸಿಕೊಂಡಿತು. ಈ ದುಷ್ಟೆಯಾಡಿದ ಮಾತುಗಳನ್ನು ಓಣಿಯಲ್ಲಿ ಯಾರಾದ್ರು ಕೇಳಿಸಿಕೊಂಡರೇನೋ! ಓಯ್ …ಅಂತೂ ನನ್ನ ಕಣ್ಣುಗಳನ್ನು ನುಂಗಿ ನೀರು ಕುಡಿದೆಯಾ ತುಲಸೀ ರಾಮಾಯಣವೇ … ಆಟವಾಳಿಗೆಯಲ್ಲಿ ಯಾರೋ ಅಜ್ಞಾತವ್ಯಕ್ತಿ ನಿಂತಿರುವಂತಿದೆ, ಗುರುತಿಸಲಕ್ಕಾಗುತ್ತಿಲ್ಲವಲ್ಲಾ … ನಾರಾಯಣ … ಹೀಗೆ ಯೋಚಿಸುತ್ತ ಮಂಗಳ ಗೌರಿಯಂತಿದ್ದ ವೃದ್ಧೆ ಚಾಮುಂಡಿಯಂತಾಗಿಬಿಟ್ಟಿತು. ಕೂಡಲೆ ಸೊಸೆಯ ದುರ್ಬಲ ನೂಲಿನಡುಗೆಗೆ ಕೈ ಹಾಕಿ “ಏನು ಮಾತಾಡ್ದೇಯೇ ರಾಜಗೋಪಾಲಾಚಾರಿ ಮೊಮ್ಮಗಳೇ … ನನ್ನ ಏನಂತ ತಿಳ್ಕೊಂಡೀಯಾ? ನಿನ್ನಂತೆ ನಾನೇನಾದ್ರು ಮೊಲೆ ತೊರಿಸ್ಕೊಳ್ತಾ ಅಡ್ಡಾದ್ದುಂಟಾ … ಅದೇನು ಕಂಡು ನನ್ ಪಾತಿವ್ರತ್ಯಕ್ಕೆ ಕಳಂಕ ತರುವಂಥ ಮಾತಾಡ್ದಿ… ಹೇಳಿ ಮುಂದಕ್ಕೆ ಹೋಗು” ಎಂದು ಹಿಡಿದುಕೊಂಡುಬಿಟ್ಟಳು.
ಪರಮಗ್ನೌ ಪುದೀಪ್ತೇತು ಪ್ರಾಣಾನಾಂ ಪರಿವರ್ಜನಂ
ನ ಚಾರಿ ಜನ ಸಂಸರ್ಗೇ ಮುಹೂರ್ತಮಪಿ ಸೇವನಂ … ಎಂದು ಮುಂತಾಗಿ ತಾತಶ್ರೀ ಪದೇ ಪದೇ ಹೇಳುತ್ತಿರ್ದುದು ಸ್ಮರಣೆಗೆ ತಂದುಕೊಂಡ ವರಲಕ್ಷ್ಮಿಯ ಅಂಗೋಪಾಂಗಗಳೆಲ್ಲ ಕಿಡಿಕಿಡಿ ಕಾರತೊಡಗಿದವು. ಗರಿವಳಿದ ಪಾವಿನಂತೆ ಬುಸುಗುಟ್ಟತೊಡಗಿದಳು. ಅಲುಮೇಲಮ್ಮನೆಂಬ ಝಳದ ಝಾಡಿಗೆ ಹೆದರಿ ವರಲಕ್ಷ್ಮಿ ಎಂಬ ಸೂರ್ಯನಳುಕುವನೇನು?
“ಏನ್ರಮ್ಮಾ, ಅತ್ತೆ ಅಂತ ಬೆಲೆ ಕೊಟ್ಟರೆ ನಾಲಿಗೆ ಉದ್ದ ಬಿಡುವಿ ಏನು? ನನ್ನ ಗಂಡನ ಹೊರತಾಗಿ ಬೇರೊಬ್ಬ ಪರಪುರುಷನಿಗೆ ನಾ ನನ್ನ ಮೊಲೆ ತೋರಿಸಿದ್ದೇ ನಿಜವಾದಲ್ಲಿ ಏಗಲೇ ನನ್ನ ತಲೆ ಸಿಡಿದು ಸಾವಿರ ಚೂರಾಗಲೀ … ಅದಾರಿಗೆ ನನ್ನ ಮೊಲೆಗಳನ್ನು ತೋರಿಸಿದೆ … ಹೇಳ್ರಿ, ಹೇಳಿದ ಹೊರತು ಬಿಡೋದಿಲ್ಲ.”
ದೇಹಕ್ಕೆ ತೊಲೆಯೊಡನೆ ಸಂಧಾನವೇನು? ಗಕ್ಕನೆ ತಾನು ವೃದ್ಧೆಯ ವಲ್ಕಲವನ್ನು ಗಟ್ಟಿಯಗಿ
———————-

೧೮೩
ಹಿಡಿದುಕೊಂಡಳು.
ನಮ್ಮಜ್ಜಿ ಹ್ಹಾ ಹ್ಹೂ ಅಂತ ಅನ್ನುವಷ್ಟರಲ್ಲಿ ಆ ಸಿಕ್ಸ್ಟೀ ಪ್ಲಸ್ಸೂ ಮತ್ತು ಫಾರ್ಟೀ ಪ್ಲಸ್ಸೂ ಪರಸ್ಪರ ಹಿಡಿದುಕೊಂಡು ಕೆಳಗಡೆ ಉರುಳಿದರು.
ಕುರುಕುಲಾಕ್ಷ್ಮಾಪಾಲ ಚೂಡಾಮಣಿಯೂ. ಫಣಿರಾಜ ಕೇತನೂ ಪರಸ್ಪರ ಮಲ್ಲಯುದ್ಧಕ್ಕೆ ತೊಡಕಿರುವಂತೆ ಆ ಕ್ಷಣ ಗೋಚರಿಸಿತು.
ತಾನಿನ್ನು ಮಧ್ಯ ಪ್ರವೇಶಿಸಿ ಅತ್ತೆ ಸೊಸೆಯರ ಜಗಳ ಬಿಡಿಸದಿದ್ದಲ್ಲಿ ಆ ವೃದ್ಧ ಅಲುಮೇಲಮ್ಮನವರ ಜರ್ಝರಿತ ದೇಹದಿಂದ ಪ್ರಾಣಪಕ್ಷಿ ಹಾರಿ ಹೋಗುವುದರಲ್ಲಿ ಸಂಶಯವಿಲ್ಲವೆಂದು ನಮ್ಮಜ್ಜಿ ಆ ಕ್ಷಣ ಯೋಚಿಸಿ ಕೂಡಲೆ ಕಚ್ಚೆ ಬಿಗಿಯಿತು. ತನಗೂ ಒಂದು ಗಂಡು ಮಗುವನ್ನು ಆ ದಯಾಮಯನಾದ ಭಗವಂತನು ಅಂದು ದಯಪಾಲಿಸಿದ್ದಲ್ಲಿ ತಾನು ಈ ಹೊತ್ತಿಗೆ ಎಷ್ಟು ಸಾರಿ ಜಗಳವಾಡುತ್ತಿದ್ದೆನೋ? ತನಗೇನಾದರೂ ಸೊಸೆಯಾದವಳು ಹೀಗೆ ಮಾತಾಡಿದ್ದಲ್ಲಿ ಅವಳ ನಾಲಿಗೆಯನ್ನು ಕಿತ್ತು ಎಲೆ‌ಅಡಿಕೆ ಚೀಲದಲ್ಲಿ ಇಟ್ಟುಕೊಂಡು ಬಿಡದೆ ಇರುತ್ತಿರಲಿಲ್ಲವು. ಸಮುದ್ರಕ್ಕೆ ಪಡಿ ಸಮುದ್ರವು, ಸಿಡಿಲ ಪೊಟ್ಟಣದಂಥ ವರಲಕ್ಷ್ಮಿಯ ಧೃತರಾಷ್ಟ್ರಾಲಿಂಗನದಿಂದ ಅಶ್ವತ್ಥಾಲ ಮರದಂಥ ಮುದುಕಿಯನ್ನು ರಕ್ಷಿಸದಿದ್ದಲ್ಲಿ ಆ ಮನೆ ದೇವರಾದ ಹಳೇಕೋಟೆ ವೀರಭದ್ರ ದೇವರು ತನ್ನನ್ನು ಕ್ಷಮಿಸಲಾರನು ಎಂದು ಮುಂತಾಗಿ ಯೋಚಿಸುತ್ತಾ ಜಗದೇಕಮಲ್ಲಿಯಾದ ನಮ್ಮಜ್ಜಿಯು ಕೂಡಲೆ ಸುಂಟರಗಾಳಿಯಂತೆ ಸುಳಿದು ಅಲುಮೇಲಜ್ಜಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ….
ಆಗ ಆ ಮುದುಕಿಯು “ಏಯ್ ಯಾರೆ ಅದು? … ಓಹ್ ನೀನಾ …. ನಿಂಗವ್ವ, ಶೂದ್ರ ಹೆಂಗಸಾದ ನೀನು ಬ್ರಾಹ್ಮಣ ಹೆಂಗಸಾದ ನನ್ನನ್ನು ಮುಟ್ಟುವುದೆಂದರೇನು? ಮುಟ್ಟಿದ್ದೂ ಅಲ್ಲದೆ ಬಿಗಿಯಾಗಿ ಅಪ್ಪಿ ನನ್ನ ಮಡಿಯುಡಿಯನ್ನೆಲ್ಲ ಹಾಳುಮಾಡಿ ಬಿಟ್ಟೆಲ್ಲೇ …” ಎಂದು ಆಕಾಶಕ್ಕೂ ಭೂಮಿಗೂ ಏಕಾಗಿ ಅಬ್ಬರಿಸಲು ….
ನಮ್ಮಜ್ಜಿಗೆ ಸಿಟ್ಟು ಬಂದು “ಯಾವ್ದೇ ಮಡಿ? ಏನೋ ಸೊಸೀ ಕೈಲಿ ಸಾಯ್ತಾಳಂತ ಬುಡುಸಿಕೊಳ್ಳಾಕ್ ಬಂದ್ರೆ ಮಡಿ ಹಾಳಾಯಂತೀಯಲ್ಲೇ” ಎಂದು ಕೊಸರಿ ದೂರ ತಳ್ಳಲು
“ಇದು ನಮ್ ಅತ್ತೆ ಸೊಸೆ ಜಗಳ …. ಇವತ್ತು ಹೊಡೆದಾಡ್ತೀವಿ …. ನಾಳೆ ಒಂದಾಗ್ತೀವಿ … ಅದನ್ಯಾರೆ ನೀನು ಕೇಳೊಕೆ?” ಎಂದು ಅಲುಮೇಲಮ್ಮ ಗುಡುಗಲು ….
ನಮ್ಮಜ್ಜಿಗೆ ದಿಕ್ಕೇ ತೊಚದಂತಾಗಿ … “ಯ್ಯೋನ್ರೇ ವಡದಾಡಿ ಸತ್ತೋಗ್ತಾರಂತ ಬಂದ್ರೆ ನನ್ಬಾಯೀಗೆ ಮಣ್ಣಾಕ್ತೀರಾ…. ಮಾಡ್ಕೆಂಡ ಗಂಡ್ರೂನು ನುಂಗಿ ನೀರ್ಕುಡುದ ಮುಂಡೇರು ನೀವು …”ಎಂದು ತನ್ನ ಅಗ್ಗಿಣೀ ಗೋಳದಂಥ ತನ್ನ ಬಾಯಿ ಪ್ರದರ್ಶಿಸಿತು. ಊರಿನ ಎಲ್ಲ ತರಲೆಗಳನ್ನು ನೋವೇ ಮೊದಲಾದ ತಾಪತ್ರಯಗಳನ್ನು ತನ್ನ ಮೈ ಮೆಲೆಳೆದುಕೊಂಡು ವೀರಾವೇಶ ಪ್ರಕಟಿಸುವುದು ನಮ್ಮಜ್ಜಿ ವ್ಯಕ್ತಿತ್ವದ ಪ್ರಧಾನ ಅಂಗ. ಮಧ್ಯೆ ಪ್ರವೇಶಿಸುವುದರ ಮೂಲಕ ಸಣ್ಣ ಜಗಳವನ್ನು ದೊಡ್ಡದು ಮಾಡುವುದರಲ್ಲಿ; ದೊಡ್ಡ ಜಗಳವನ್ನು ಸಣ್ಣದು ಮಾಡುವುದರಲ್ಲಿ ನಮ್ಮಜ್ಜಿ ವಿಶ್ವವಿಖ್ಯಾತಳು. ಸಮಾಜದ ರಿಪೇರಿ ಮಾಡಲು ಹೋಗಿ ತನಗೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಮಾಜವನ್ನು ಮತ್ತಷ್ಟು ಹದಗೆಡೆಸಿ ತನೊಬ್ಬಳಿದ್ದಾಗ ಮರುಗುತ್ತಿದ್ದುಂಟು. ತನ್ನ ಬಾಯಿಯಿಂದ ಬಿಡುತ್ತಿದ್ದ ಪ್ರತಿಯೊಂದು ವಾಗ್ ಬಾಣವನ್ನು ಸಮರ್ಥಿಸಲು ಏನೆಲ್ಲ ರಂಪಾಟ ಮಾಡುತ್ತಿದ್ದಳು. ಆದರೆ ಈ ಸಂದರ್ಭದಲ್ಲಿ ತನಗರಿವಿಲ್ಲದಂತೆ ಸಿಕ್ಕಿಹಾಕಿಕೊಂಡಳು.
———————-

೧೮೪
“ಏನೀ ಮುದುಕೀ …. ನಾವು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಹೆಂಗಸರೂ ಅಂತ ಎಂಥೆಂಥ ಮಾತಾಡ್ತಿರುವೆಯಲ್ಲ… ನಮ್ಮ ಗಂಡನನ್ನು ನುಂಗಿ ನೀರುಕುಡಿದವರೂಂತ ಅಪವಾದ ಹೊರಿಸುತ್ತಿರುವಿಯಲ್ಲ … ನೀನೂ ನಮ್ಮ ಹಾಗೆ ಯೌವನದಲ್ಲಿ ಗಂಡನನ್ನು ಕಳೆದುಕೊಂಡವಳಲ್ಲವೇನು?” ಸೊಸೆ ಹೇಗೋ ಪತ್ತೆ ಮಾಡಿ ಹೇಳಿದ್ದ ಸಂಗತಿಯನ್ನು ನೆನಪು ಮಾಡಿಕೊಂಡು ಏರು ದನಿಯಲ್ಲಿ ಅಲುಮೇಲಮ್ಮ ನುಡಿದುಬಿಟ್ಟಿತು.ವರಲಕ್ಷ್ಮಿ ತನ್ನತ್ತೆಯವರ ಸಮಯ ಪ್ರಜ್ಞೆಯ ಬಗ್ಗೆ ಮುಖದ ತುಂಬ ಮೆಚ್ಚಿಗೆ ಸೂಚಿಸಿದಳು.
ಆಕೆಯ ಮಾತಿನಿಂದ ನಮ್ಮಜ್ಜಿ ಒಂದು ಕ್ಷಣ ವಿಚಲಿತಗೊಂಡಿತು. ತನ್ನ ಬದುಕಿನ ಪುರಾತನ ಸಂಗತಿಗಳನು ಒಳಗೊಳಗೇ ಸಂಗ್ರಹಿಸಿ ಬಿಟ್ಟಿರುವರಲ್ಲ! ದೀಪ ನುಂಗೋ ಅತ್ತೆಗೆ ದೀವಟಿಗೆ ನುಂಗೋ ಸೊಸೆ ತಕ್ಕುದಾಗಿ ಗಂಟುಬಿದ್ದಿರುವಳಲ್ಲ.
“ನಿಮ್ಮ ಮಾತಿಗೆ ನನ್ ಶಾಟಾನೂ ಜುಮ್ಮೆನ್ನೊದಿಲ್ಲೇ … ದೊಡ್ಡ ಮನುಶ್ಶೋಳಾಗೋದ್ಕೂ ಮೊದ್ಲು ನನ್ನ ಗಂಡ ಗೊಟಕ್ಕೆಂದಿದ್ದೂ ನಿಜ . ನಾನು ಗಂಡಸಿನಂಗ ಎದೆಸೆಟೆಸಿ ಬದುಕಿದ್ದು ಖರೇವು… ಹರೇದಾಗ ಮಿಂಡ್ರೂನ ಮಾಡಿದ್ದೂ ಖರೇವು… ಇಲ್ಲದಿದ್ರೆಲ್ಲಿ ಈಟೊಂದು ಆಸ್ತಿ ಸಂಪಾಸ್ಲಿಕ್ಕಾಗ್ತಿತ್ತು … ನನ್ತಂಗೀ ಮಕ್ಳೂನೇ ನನ್ ಮೆಕ್ಳೂಂತ ತಿಳಕೊಂಡು ಪಾನಲೆ (ಪಾಲನೆ) ಪೋಣಣೆ (ಪೋಷಣೆ) ಮಾಡಲೂಕಾಗ್ತಿತ್ತೂ … ನಿಮ್ಮಂಗೆ ನಾನೂ ಮಂಡೆ ಭೋಳಿಸ್ಕೊಂಡು ಮುಂಡೆಯಾಗಿ ಮೂಲಿ ಕೂಕೊಂಡಿದ್ರೆ ಈಟೆಲ್ಲ ಮಾಡಲಾಕಾಗುತ್ತಿತ್ತೇನು! … ಅಲಲಲಾ … ಯೋಳಾಕ ಬಂದುಬಿಟ್ರು ಹಳೇ ಪುಣಾರಾನ (ಪುರಾಣಾನ) … ಯಿನ್ನೊಂದು ಮಾತು ಯ್ಯೋಳ್ತೀನಿ ನೆಪ್ಪಿಟ್ಕಳ್ರಭೇ … ಭೋಸೂಢೇರಾ … ನೂರೊಂದು ವಾಗ ಬೊಡುಕೊಂಡು ಮೊಣ್ಣೆತ್ತಿನ ಅಮಾಸಿ ದಿನ ಗೊಟಕ್ಕಂದ್ನಲ್ಲಾ ಆ ನಿಮ್ಮಾವ ಪರಮೇಸೂರ ಶಾತಿರಿ … ಆ ಶಾತಿರೀನೂ ನನ್ನತ್ರ ಮಲಕ್ಕೊಂಡು ವ್ಯೋನೋ ಕಿಸಿಲಾರ್ದೆ ಹೋದವನೇ …” ನಜಭಜ ಜಂಜರಂ ಬಗೆಗೊಳ್ಳುತ್ತಿರೆ ಚಂಪಕಮಾಲಾ ಎಂದವರ್ ಎಂದು ಮುಂತಾಗಿ ಆರಂಭಿಸುತ್ತಲೆ ಆ ಮಾದ್ಗೂಕ್ಯ ಗೋತ್ರದ ಅತ್ತೆ ಸೊಸೆಯರೆಂಬ ಸಾಹಸ ಗರ್ವಾಲಂಕೃತರೀರ್ವರು ಒಂದು ಕ್ಷಣ ಮೌನವೆಂಬ ವೈಶಂಪಾಯನ ಸರೋವರಂ ಪೊಕ್ಕು ಮರುಕ್ಷಣ ರಸೆಯಿಂ ಕಾಲಾಗ್ನಿರುದ್ರಂ ಪೊರಮೊಡೆವಂತೆ ಹೊರಬಂದು ಕೋಪಾರುಕ್ತನೇತ್ರರಾಗಿ “ಅಯ್ಯೋ … ಅಯ್ಯೋ… ಅಯ್ಯಯ್ಯೋ … ವೈಕುಂಠ ವಾಸಿಗಳಾಗಿರೋ ನಮ್ಮ ವಂಶದ ಹಿರಿಯರ ಮೇಲೆ ಗುರುತರ ಆಪಾದನೆ ಹೊರಿಸುತ್ತಿರುವುದಲ್ಲಾ ಈ ಮುದುಕಿ … ಕಲಿಕಾಲದಲ್ಲಿ ಪಾಪಿಗಾಳಿಗೆ ದೀರ್ಘಾಯುಷ್ಯವನ್ನು ದಯಪಾಲಿಸಿರುವ ಓ ವೆಂಕಟರಮಣನೇ … ನಿನ್ನ ದಡ್ಡತನವನ್ನು ಎಷ್ಟೆಂದು ವರ್ಣಿಸುವುದು … ಇರಲಿ … ಬಯ್ದವರ ಹೆಸರ ಮಗನಿಡಬೇಕೆಂದು ದಾಸವರೇಣ್ಯರೇ ಹೇಳಿದ್ದಾರೆ … ಈ ಶೂದ್ರ ಮುದುಕಿ ಎದುರು ತತ್ವ ಜ್ಞಾನದ ಕಿನ್ನರಿ ಭಾರಿಸುವುದರಿಂದೇನು ಉಪಯೋಗ?… ” ಎಂದು ಅಲುಮೇಲಮ್ಮನಿಗೆ ಕೆಮ್ಮು ದಮ್ಮು ಒಂದೇಟಿಗೆ ಒತ್ತರಿಸಿ ಬಂದಿತು. ಸೊಸೆ ವರಲಕ್ಶ್ಮಿ ಮಾತಿನ ಸಾರಥ್ಯವನ್ನು ತಾನು ವಹಿಸಿಕೊಂಡಳು. “ಅತ್ತೆಮ್ಮಾ ಇಂಥ ಅನಾಗರೀಕರ ಎದುರು ಮಾತಾಡಿ ನಾಲಿಗೆ ಮೈಲಿಗೆ ಮಾಡಿಕೊಳ್ಳುವುದೇಕೆ?” ಎಂದು ತನ್ನ ವಜ್ರಾಯುಧದಂಥ ಬಾಚಿ ಹಲ್ಲುಗಳನ್ನು ಝಳಪಿಸಿದಳು. “ಅಮ್ಮಾ ತಾಯಿ … ಏನೆಲ್ಲ ಮಾತಾಡಿ ಪುಣ್ಯ ಕಟ್ಟಿಕೊಂಡಿದ್ದು ಸಾಕಮ್ಮಾ … ನಿನ್ನ ಮಾತು ಮಾಡಿರುವ ಮೈಲಿಗೆ ತೊಳೆಯಲು ಸಾಕ್ಷಾತ್ ಶೃಂಗೇರಿ ಜಗದ್ಗುರುಗಳೇ ಬರಬೇಕು … ದಯವಿಟ್ಟು ಇನ್ನು ಹೊರಡಮ್ಮಾ ಹೊರಡು” ಎಂದು ಅಂಜಲೀಬದ್ಧಳಾಗಿ ಕೇಳಿಕೊಂಡಳು.
—————————

೧೮೫
“ಅಲಲಲಾ ತಾಟಗಿತ್ತೀ …. ನಿನ್ಮಡಿ ಆಚಾರಕ್ಕೆ ಬೆಂಕಿ ಬೀಳ್ಲಿ … ಆ ಸತ್ತ ನಿನ್ಗಂಡ ಶಾಮಣ್ಣ ನನ್ ಮೊಮ್ಮಗ ಜತಿಗಾರಾಂತ ಈ ಮಾತ್ನ ಯ್ಯೋಳ್ತಿದ್ದೀನಿ… ಗ್ವಂಡನ್ನ ಕಳಕೊಂಡಿದ್ದಾಯ್ತು … ಸೋಬಾಗ್ಯಾನೆಲ್ಲ ಕಳಕೊಂಡಿದ್ದಾಯ್ತು …ಮಾ ಮರುವಾದಸ್ತರಂಗ ಅದೆಂಗ ಬೊದುಕ್ತೀಯೋ ಬೊದುಕಲೇ ಲವುಡೀ … ನಾನೂ ನೋಡ್ತೀನಿ … ಮಂಡೆ ಬೋಳಿಸ್ಕೊಂಡ ಮಾತ್ರಕ್ಕೆ ನಿನ್ನ ಪತಿವ್ರತೀ ಅಂತಾ‍ರ್‌ಯೋನೇ … ವಳಗಿಂದು ಬೋಳಿಸ್ಕೋಬೇಕು ವಳಗಿಂದು … ವರ್ಷೋಪ್ಪತ್ನಲ್ಲಿ ನೀನು ಹಾದಿಬುಟ್ಟು ನಡೀಲಿಲ್ಲಾಂದ್ರೆ ಮೂಗಿಗೆ ಕವಡೆ ಕಟ್ಕೋತೀನಿ… ” ಎಂದು ನಮ್ಮಜ್ಜಿ ಮಾಡಿದ ಶಪಥಕ್ಕೆ ಕುಲಗಿರಿಗಳ್ ಅಲ್ಲಾಡಿದವು.
“ವಿಧವೆ ವರಲಕ್ಶ್ಮಿ ಹಾದಿ ತಪ್ಪದಂತೆ ನೋಡು ಜಗದ್ರಕ್ಷಕನೇ … ನಿಂಗಮ್ಮಜ್ಜಿ ಮೂಗಿಗೆ ಕವಡೆ ಕಟ್ಟಿಕೊಳ್ಳದಂತೆ ನೋಡಿಕೊಂಡು ಇರುವೆ ಎಂಬತ್ನಾಲ್ಕುಕೋಟಿ ಜೀವರಾಶಿಯ ಪ್ರಾಣ ಕಾಪಾಡು ಭಗವಂತನೇ” ಎಂದು ಕದನ ಕುತೋಹಲಿಗಳಾದ ದೇವಾನ್ ದೇವತೆಗಳು ತ್ರಿಪುರಾಂತಕನನ್ನು ಬೇಡಿಕೊಳ್ಳುತ್ತಿರುವಾಗ ….
ನಮ್ಮಜ್ಜಿಯು ಒಂದೊಂದು ಹೆಜ್ಜೆಗೆ ಭೂಮಿಯನ್ನು ಗಡ್‍ಗಡಾ ನಡಗಿಸುತ್ತ ಅಲ್ಲಿಂದ ವಾಪಸಾದಳು. ಎಂಬಲ್ಲಿಗೆ ಈ ಪ್ರಕರಣ ಈ ಪುರಾಣ ಮುಕ್ತಾಯವಾಗಲಿಲ್ಲವೆಂದು ಹೇಳುವುದಕ್ಕೆ ವೀಕ್ಷಕ ವಿವರಣಾಕಾರನಾದ ನನ್ನ ಮನಸ್ಸಿಗೆ ನೋವಾಗುತ್ತಿದೆ. ಸಹೃದಯ ವಾಚಕರಾದ ನಿಮ್ಮ ಮನಸ್ಸಿಗೂ ನೋವನ್ನುಂಟು ಮಾಡುವುದಕ್ಕೆ ಶತಕೋಟಿ ಕ್ಷಮೆ ಯಾಚಿಸುತ್ತಿರುವೆನು.
ಮುಂದೇನಾಯ್ತು ಅಂತ ನೀವು ಕೇಳ್ತಿದೀರಂತ ತಿಳಕೊಂಡು ನಾನು ಹೇಳ್ತಿದೀನಿ. ದಯವಿಟ್ಟು ಆಲಿಸುವಂಥವರಾಗಿ.
ತುರ್ತು ಪರಿಸ್ಥಿತಿ ಎಂಬುದು ಹಂಗ ಬಂದು ಹಿಂಗ ಹೋದ ಮೇಲೆ ದೇಶದ ಜೀವನ ಶೈಲಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳಾಗಿರುವುದನ್ನು ನಿಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಸಾಕು ನಾಯಿಗಳ ಬೆಲೆಯೂ ಜಾಸ್ತಿಯಾಗಿರುವಂತೆ ನಾಯಿಗೆ ತಿನ್ನಿಸುವ ಬಿಸ್ಕತ್ತುಗಳನ್ನು ವಿದೇಶೀ ವಿನಿಮಯದ ನೆಪದಲ್ಲಿ ಅಮೇರಿಕಾದಿಂದ ತರಿಸಿಕೊಳ್ಳುವುದು ನಿಮಗೆ ಗೊತ್ತಿರಲು ಸಾಕು. ಫ್ಯೂಡಲಿಸಮ್ಮೂ; ಕ್ಯಾಪಿಟಲಿಸಮ್ಮೂ ಇಂಥವೆಲ್ಲ ಸಮಾಜವಾದದ ನೆಪದಲ್ಲಿ ಚೂಚು ಚೂರಾಗಿವೆ; ಪ್ರತಿಯೊಬ್ಬರ ಮನಸ್ಸಿನಲ್ಲಿ ವಾಸಮಾಡಲಾರಂಭಿಸಿವೆ. ಹೊರಗಡೆ ಮುಗ್ಧನಂತೆ ಕಾಣುವ ಮನುಷ್ಯ ಒಳಗಡೆ ಕ್ರೌರ್ಯ ರೂಢಿಸಿಕೊಂಡಿದ್ದಾನೆ. ಮುಗುಳ್ನಗೆಯನ್ನು ಅಸ್ತ್ರದಂತೆ ಬಳಸಿಕೊಂಡಿದ್ದಾನೆ. ನಯವಿನಯದಿಂದ ನಿರಾತಂಕವಾಗಿ ಬೇಟೆಯಾಡುತ್ತಿದ್ದಾನೆ. ಪ್ರತಿಯೊಂದು ಹೆಜ್ಜೆಯನ್ನು ಸುಪಿರಿಯಾರಿಟಿ ಕಾಂಪ್ಲೆಕ್ಸಿನಿಂದ ಇಡುತ್ತಿದ್ದಾನೆ. ಪ್ರತಿಕ್ಷಣ ಕ್ರಯ, ವಿಕ್ರಯದ ಬಗ್ಗೆ ಆಲೋಚಿಸುತ್ತಿದ್ದಾನೆ. ಇಂಥದ್ದೊಂದು ಆಲೋಚನಾಕ್ರಮದ ಒಂದು ಚಿಕ್ಕ ಘಟಕ ನಮ್ಮಪ್ಪ.
ನಮ್ಮಪ್ಪ ಸ್ವಾತಂತ್ರ ಪೂರ್ವದಲ್ಲಿ ಹಗರಿ ಸಾಲಿನಲ್ಲಿ ತಾನು ಮಾಡಿದ ತುಡುಗಿನ ಕಾರಣಕ್ಕೆ ಊರಿಂದೂರಿಗೆ ಅಲೆದೂ ಅಲೆದು ನಿಂಗಮ್ಮಜ್ಜಿಯ ತಂಗಿಯ ದ್ವಿತೀಯ ಪುತ್ರಿಯನ್ನು ಮದುವೆಯಾಗಿ ಒಂದುಕಡೆ ನೆಲೆ ನಿಂತವನು. ಪರಿಸರವನ್ನು ಪಂಚೇಂದ್ರಿಯಗಳ ತುಡುಗಿನಿಂದ ಮೇದು ದಕ್ಕಿಸಿಕೊಂಡವನು. ಭಯದಿಂದ ಹುಸಿ ವಾತಾವರಣವನ್ನು ನಿರ್ಮಿಸಿಕೊಂಡು ಅದರಲ್ಲಿ ಎಲ್ಲರನ್ನೂ ಕೂಡಿಟ್ಟವನು. ತನಗೆ ಹೆದರುತ್ತಿದ್ದವರೇ ತನ್ನನ್ನು ಹೆದರಿಸಲು ಪ್ರಯತ್ನಿಸುತ್ತಾರೆ ಎಂದು ಅರಿವಾದಾಗ ತನ್ನ ಕುಟುಂಬದ ಸಹಸದಸ್ಯರನ್ನು ತನಗಿಷ್ಟ ಬಂದಂತೆ ಕುಣಿಸತೊಡಗಿದಂಥವನು. ಆದರೆ ಇಷ್ಟೆಲ್ಲ ಇರುವ ನಮ್ಮಪ್ಪನಿಗೆ ಅನಾದಿ ಕಾಲದಿಂದ ತಿರುಗಿ ಬಿದ್ದ ಗಂಡುಗಲಿ ಎಂದರೆ ನಮ್ಮ
—————–

೧೮೬
ನಿಂಗಮ್ಮಜ್ಜಿ ಎಂದು ಹೇಳಬೇಕಾಗಿಲ್ಲ. ತಂಗಿಯ ಮಗಳನ್ನು ಕೊಟ್ಟು ಮನ್ತನಕ್ಕೆ ಇಟ್ಟುಕೊಂಡ ಕ್ಷಣದಿಂದ ಅದಕ್ಕು ಆತಗೂ ಎಣ್ಣೆಶೀಗೆಕಾಯಿ ಸಂಭಂಧ. ತಲಾ ಒಂದೊಂದು ತೊಡೆ ತಟ್ಟುವವರೇ; ತಲಾ ಒಂದೊಂದು ವಿಶೇಷಾಲಂಕೃತ ಮಾತುಗಳನ್ನು ಎರಚಾಡುತ್ತಿದ್ದವರೇ , ಪ್ರತೀ ಸೋಲನ್ನು ಗೆಲುವೆಂದು ಭಾವಿಸಿದಂಥವರೇ.
“ಏನೋ ಬ್ರಾಂಬ್ರು … ಗಂಡನ್ನ ಕಳೆದುಕೊಂಡಿರೋ ವಿಧವೆಯರು. ಅವರ ಬದುಕು ನಿಸೂರಾಗುವುದಾದರೆ ತಾನಾ ಮನೆಯನ್ನು ಕೊಂಡುಕೊಳ್ಳುವುದರಲ್ಲಿತಪ್ಪೇನು” ಎಂದೋ?; ಅದ್ಭುತ ಘಟನಾವಳಿಗಳ ಸರಮಾಲೆ ಹೊಂದಿರುವ ಮನೆಗೆ ತಾನು ವಾರಸುದಾರನಾದಲ್ಲಿ ಸಮಾಜದಲ್ಲಿ ತನ್ನ ವರ್ಚಸ್ಸು ಹೆಚ್ಚುತ್ತದೆ ಎಂದೋ; ಜೇಬಿನಲ್ಲಿ ಘಟ್ಟಿ ಐದು ರುಪಾಯಿ‌ಇಲ್ಲದಿದ್ದರೂ ಆ ಭಯಂಕರ ಆತ್ಮ ವಿಶ್ವಾಸಿ ಆ ಮನೆಯನ್ನು ಖರೀದಿಸಲು ಕಂಕಣಬದ್ಧನಾಗಿದ್ದ. ಈ ಬಗ್ಗೆ ನಾನೂನೂವೆ ಒಳಗೊಳಗೆ ಖುಷಿಪಟ್ಟಂಥವನೇ ಆಗಿದ್ದೆ. ಎಷ್ಟಿದ್ದರೂ ಅದು ನನ್ನ ಖಾಸಾ ಗೆಳೆಯನ ಮನೆ ಅಲ್ಲವೆ?
“ಲೋ ತಮ್ಮಾ ಹಾಲಪ್ಪೋ … ಈಗೇನಾತಂಥೀಯಾ? ಆಗಬಾರದ್ದೆಲ್ಲ ಆಗಿ ಹೋತೂ; ಅನ್ನಬಾರದ್ದನ್ನೆಲ್ಲ ಅಂದುಬಿಟ್ರು ಕಣಪ್ಪಾ… ಅವು ಹೆಂಗಸ್ರಲ್ವೇ ಅಲ್ಲ. ಲವುಡೇರು ಗಂಡ್ರಿಲ್ಲ ಈಟುರಿತಾರ… ಇದ್ದಿದ್ದ್ರೆ ಯೇಟುರಿತಿದ್ದ್ರೋ … ನಾನೊಂದ ಮಾತಾಡ್ತೀನಿ … ತಗದುಹಾಕ್ಬಾರ್ದು. ನಿಂಗೆ ತಾಯಂದ್ರು ನಾನೇ … ಅತ್ತೆ ಅಂದ್ರೂ ನಾನೇ … ಆ ಬ್ರಾಂಬ್ರು ಮನಿ ತಂಟೆಗೆ ಹೋಗಬ್ಯಾಡ …” ಎಂದು ನಿಂಗಮ್ಮಜ್ಜಿ ಒಂದೇ ಉಸಿರಿಗೆ ಹೇಳೋದನ್ನೆಲ್ಲ ಹೇಳಿ ಕೋಳೋದನ್ನು ಕೇಳಲಿಕ್ಕಾಗದೆ … ನತದೃಷ್ಟ ಬ್ರಾಹ್ಮಣ ವಿಧವೆಯರನ್ನು ಬಯ್ಯುತ್ತ ಬಯ್ಯುತ್ತ ಒಳಗಡೆ ಬಿರುಗಾಳಿಯಂತೆ ಹೋಗಿ ಬರೀ ಮಾತಿನಿಂದ ಅವರೆಂಥೋರು? ಇವರೆಂಥೋರು? ಎಂದು ಅಷ್ಟಾದಶ ಪುರಾಣ ಒರೆಯತೊಡಗಿತು.
ಮೊದಮೊದಲು ‘ಟೋಪಿ’ ಸೇದುತ್ತಿದ್ದ ನಮ್ಮಪ್ಪ ಇಂದಿರಾಗಾಂಧಿ ಪದಚ್ಯುತಳಾದ ಮೇಲೆ ಎರಡ್ರುಪಾ‌ಐ ಕೇಜಿ ಸಕ್ರೀ ಎಂಬ ಸಂತೊಷದ ಭರದಲ್ಲಿ ‘ಆನೆ’ ಸೇದಲಾರಂಭಿಸಿದ. ಇಂದಿರಾ ಗಾಂಧಿಯ ಕಗ್ಗೊಲೆಯ ನೋವನ್ನು ತಾಳಲಾರದೆ ‘ಚಾರ್ಮಿನಾರ್’ಗೆ ಬಂದ. ರಸಾಯನಿಕ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರತೊಡಗಿದ ಮೇಲೆ ‘ಬರಕ್ಲೀ’ಗೆ ಬಂದ. ರಾಜೀವ್ ಗಾಂಧಿಯನ್ನು ಒಬ್ಬ ಯಕಃಶ್ಚಿತ್ ಮಹಿಳೆ ಕೊಲೆಮಾಡುವುದೆಂದರೇನು ಎಂದು ಯೋಚಿಸುತ್ತ ಯೋಚಿಸುತ್ತಾ ಗಣೇಶನ ಮೊರೆ ಹೊಕ್ಕ. ಇಂಥಪ್ಪ ಛಪ್ಪನ್ನಾರು ಅಸಂತುಷ್ಟ ನೋವುಗಳಿಂದಾಗಿ ಆತನ ಸಣ್ಣ ಕರುಳಲ್ಲಿ ವೃಣ ತೊಂದರೆ ಕೊಡಗಿತು. ಏಕಕಾಲಕ್ಕೆ ಅಲೊಪತಿ ಮತ್ತು ಹೋಮಿಯೋಪತಿ ಬಳಸತೊಡಗಿ ಮತ್ತಷ್ಟು ತೊಂದರೆಗೀಡಾಗಿ ತನ್ನ ವಂಶದ ಭೀಕರ ಹಿರಿಯರನ್ನು ಅವರ ಘನ ಕಾರ್ಯಗಳನ್ನು ಕಂಡ ಕಂಡವರಿಗೆಲ್ಲ ಅಪೂರ್ವ ಲವಲವಿಕೆಯಿಂದಲೂ; ವಿಚಿತ್ರಾವೇಶದಿಂದಲೂ ವಿವರಿಸತೊಡಗಿದ. ಆ ಸಂದರ್ಭದಲ್ಲಿಯೇ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆ ಮಾಯವಾಗಿ, ಆಗಷ್ಟೆ ಎಳ್ಳುನೀರು ಬಿಡಿಸಿಕೊಂಡಿದ್ದ ಬಸಪ್ಪನೆಂಬ ನಮ್ಮ ಸಂಬಂಧಿಕನೋರ್ವ ಸಾಧು ವೇಶದಲ್ಲಿ ಪ್ರತ್ಯಕ್ಷನಾಗಿ ‘ಮಾವಾ, ಈ ದೇಹ ನಶ್ವರ, ಈ ಬದುಕು ನಶ್ವರ ಇದರಿಂದ ಮುಕ್ತಿ ಪಡೆಯಬೇಕಾದರೆ ಕಾವಿ ಉಡು … ಗಾಂಜಾ ಸೇದು’ ಎಂದು ಪುಸಲಾಯಿಸತೊಡಗಿದ್ದು. ಎಂಥೆಂಥೋರ ಯಾವ ಬಣ್ಣದ ಮಾತುಗಳನ್ನು ಎಂದೂ ಕಿವಿ ಮೇಲೆ ಹಾಕಿಕೊಳ್ಳದಂಥ ನಮ್ಮಪ ಆತನ ಥಳುಕಿಲ್ಲದ ಮಾತುಗಳಿಗೆ ಮರುಳಾಗಿಬಿಡುವುದೆ? ಬಸಪ್ಪನನ್ನು
———————-

೧೮೭
ಹಿಂದೊಮ್ಮೆ ನಮ್ಮಪ್ಪ ಹಿಗ್ಗಾಮುಗ್ಗಾ ಒದ್ದೋಡಿಸಿದ್ದುಂಟು. ಕೆಲವು ದಿನಗಳಲ್ಲಿ ನಮ್ಮಪ್ಪನೆಂಬ ಕುರುಕುಲ ವಿಲಯೋತ್ಪಾತಕೇತು ಕಾವಿ ತೊಡುವುದರ ಬಗ್ಗೆ; ಗಾಂಜಾ ಸೇದುವ ಬಗ್ಗೆ ಮುನ್ಸೂಚನೆ ಕೊಡತೊಡಗಿದ.ಈ ಸಂದರ್ಭದಲ್ಲಿಯೇ ನಿಂಗಮ್ಮಜ್ಜಿಯ ಮಾತು ಕೇಳಿಸಿಕೊಂಡಿದ್ದು. ಮೊದಲೇ ಅವರಿಬ್ಬರ ಜಾಯಮಾನ ಪರಸ್ಪರ ವಿರುದ್ಧ. ಆತ ವತಿ ಅಂದರೆ ಆಕೆ ಪ್ರೇತಿ ಅನ್ನುವಂಥವಳು. “ನೋಡಬಾರದ್ಯಾಕೆ … ನಾನು ನಮ್ಮಪ್ಪನ ಮಗನಾಗಿದ್ದಲ್ಲಿ ಆ ಮನೆಯನ್ನು ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ” ಎಂದು ಗಣೇಶನ ಹೊಗೆಯನ್ನು ತನ್ನ ಹೆಂಡತಿ ದೊಡ್ಡಮ್ಮನ ಕಾಲರುಳಿನಂಥ ಮುಖಕ್ಕೆ ಬಿಟ್ಟು ಮೊದಲೆ ಅಸಹಾಯ ಶೂರ ಪರಾಕ್ರಮಿಯೂ; ಬಾಯೊಳಗೆ ತಾಂಬೂಲದುಂಡೆಯೊಡಲಲ್ಲಿ ತರಾವರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಂಥವಳೂ ಆದ ನಿಂಗಮ್ಮಜ್ಜಿ ಆ ಕ್ಷಣ ರುದ್ರಾವತಾರ ತಾಳಿ “ಎಲವೋ ದುರುಳ … ಯಿಂದಿಗೆ ನನ್ನ ನಿನ್ನ ರುಣ ತೀರ್ತು …ನಿನ್ನ ದಾರಿ ನಿನ್ಗೆ … ನನ್ನ ದಾರಿ ನನ್ಗೆ …” ಎಂದು ಹೇಷಾರವ ಮಾಡಿದಳು, ಅಷ್ಟದಿಕ್‍ಪಾಲಕರನ್ನು ದುರುಗುಟ್ಟಿ ನೋಡಿ.
“ಯ್ಯೋನಲೋ ಸಾಕಿ ಸಲವಿದ ನನ್ನ ಮಾತ್ನೇ ಧಿಕ್ಕರಿಸ್ತೀಯಾ … ನಿನ್ ಚಲುವಿಕೆಗೆ ಮಳ್ಳಾಗಿ ಮೊಗಳ್ನಕೊಟ್ಟಿದ್ಕೆ ಸಯಾಗಿಯೇ ಮಾತಾಡ್ತೀ … ನೀನು ಯಾವೂರ ಕಾಗೆ ಎಬ್ಬಿಸಾಕೆ ಹ್ವಾದ್ರೆ ನಂಗೇನು? ನಂಗೆ ನನ್ಮೊಗ್ಳೂ …ಮೊಮ್ಮಕ್ಳೂ ಮುಕ್ಯಾ …” ಎಂದು ಆಕೆ ತನ್ನ ಡೊಂಕು ಕಾಲಿಗೆ ಅಡರಿಕೊಂಡಿದ್ದ ರಾಂಪುರದ ಹದಿನೆಂಟು ಮೊಳದ ಸೀರೆಯನ್ನು ಸ್ವಲ್ಪ ಮೇಲೆತ್ತಿ ಕಟ್ಟಿಕೊಂಡಳು.
ಅದೇ ಹೊತ್ತಿಗೆ ಅಡುಗೆ ಮನೆಯಿಂದ ನಮ್ಮಪ್ಪನ ಧರುಮ ಪತನಿಯೂ; ಮುತ್ತಾನ ಸೂಳೆ ಗಿರಿಜೆಯೂ ಎಲೆ ಅಡಿಕೆ ಹಾಕಿಕೊಳ್ಳುವುದನ್ನು ಬಿಟ್ಟು ಎದ್ದು ಬಂದು ಬಿಟ್ಟರು, ಎರಡು ನಮೂನೆಯ ಸುಂಟರಗಾಳಿಗಳು ಒಂದಾದಂತೆ.
“ಯ್ಯೋನೆ … ಬಾಯಿಗೆ ಬೊಂದಂತೆ ಮಾತಾಡ್ತಿ! … ನಾವೇನಾರ ಆಗಲಿ … ಯಣ್ಣು ಮೂಳಾದ ನಿಂಗ್ಯಾಕೆ ಬೇಕೆ? … ನನ್ನ ಗಂಡನ್ನ ಕಾಗೆ ಎಬ್ಬಿಸಾಕೆ ಹೋತಾನೆಂತೀಯ … ನಿನ್ನ ನಾಲ್ಗೆ ಸೇದಿಹೋಗ! ಎಂದು ನಮ್ಮವ್ವನೂ …
ಅದ್ಯಾವ ಜನುಮದಾಗ ಅದೇನಾಗಿ ವುಟ್ಟಿದ್ದೆಭೇ ಅತ್ತೆ … ಗಂಡಸರಂದ್ರೆ ಭಯ ಇಲ್ಲ ಭೀತಿ ಇಲ್ಲ …” ಎಂದು ನಮ್ಮಪ್ಪನ ಪ್ರಿಯತಮೆಯೂ …
ಆಗ ನಮ್ಮಜ್ಜಿ ಚಕ್ರವ್ಯೂಹದಲ್ಲಿ ಸಿಕ್ಕಿ ನತದೃಷ್ಟ ಅಭಿಮನ್ಯುವಿನಂತಾದಳು.
ಮುಧೋಳದ ಬೇಟೆ ನಾಯಿಗಳಂತೆ ನಿಂತಿರುವ ಅವರ ಪೈಕಿ ಮೊದಲು ಯಾರನ್ನು ಎದುರಿಸುವುದು? ಸಿಂಹ ವಿಷ್ಟರದ ಮೇಲೆ ಕದನ ಕುತೋಹಲಿಯಾಗಿರುವ ಅಳಿಯನಿಗಾದರೂ ಬುದ್ಧಿಬೇಡವೆ?… ತಾನು ಬೆಳಗಾಗೆ ಎದ್ದು ಯಾರ ಮುಖ ನೋಡಿದನೆಂಬುವುದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದೆ … “ನನ್ನ ಅತ್ತೆ ಅಂತೀಯೇನೆ ಬಿಕನಾಸಿ ಮುಂಡೆ … ಇಟಗಂಡ ಸೂಳೆಯಾಗಿದ್ದೇ ಯೀಟು ಮಾತಾಡ್ತೀ … ಯಿನ್ನು ಯೀ ಭಾಡಖಾವು ಕಟ್ಟಿಕೊಂಡಿದ್ರೆ ಯಿನ್ನೇಟು ಮಾತಾಡ್ತಿದ್ದೆಯೇ” ಎಂದು ಮಾತಾಡದಿದ್ದಲ್ಲಿ ನಮ್ಮಪ್ಪನಿಗೆ ಸಿಟ್ಟು ಬರುತ್ತಿರಲಿಲ್ಲ.
ಹಾಯಟೆಕ್ ಧೂಮಕೇತುವಿನಂತೆ ಎದ್ದು ಭದ್ಧ ಭ್ರುಕುಟಿಯಾಗಿ ಮುಖವನ್ನು ಗುಗ್ಗುಳ ಮಾಡಿಕೊಂಡನು. “ಯೇನೆ ಮುದಿ ಕತ್ತೆಯೇ … ಹೆಂಡ್ತಿಗಿಂತ ಹೆಚ್ಚಾಗಿಟ್ಟುಕೊಂಡಿರೋಳ್ನ ಸೂಳೆ ಅಂತಿದ್ದೀಯಲ್ಲ! ನಿನ್ನ ಮ್ಯ್ಯಾಗ ಎಷ್ಟಿದ್ದೀತು ಕೊಬ್ಬು? … ಮೊದ್ಲು ನಿನ ಮೈಯೊಳಗಿನ ಎಲುಬು ಮುರುದೇ ನಾನು ಮನೆ ತಂಟೆಗೋಗೋದು” ಎಂದು ತೋಳೇರಿಸಿದನು.
——————-

೧೮೮
ಅದೆಲ್ಲಿ ತಮ್ಮ ವಂಶದ ಮೋಟುಗೂಟದಂಥ ನಿಂಗವ್ವ ನಿರ್ನಾಮವಾಗಿ ಬಿಡುವಳೊ ಎಂದೂಹಿಸಿ ಆಕೆಯ ತಂಗಿ; ತಂಗಿಯ ಇನ್ನೊಬ್ಬ ಮಗಳು; ಮತ್ತಿನ್ಯಾರ್ಯಾರೋ ಎಲ್ಲಿಂದಲೋ ಬಂದು ಕೋಟೆಯಂತೆ ರಕ್ಷಣೆ ಒದಗಿಸಿದರು. ಹವುದೋ … ಅಲ್ಲವೋ ಎಂಬಂತೆ ಮಾತಾಡುತ್ತ ಆಕೆಯನ್ನು ಜೋಪಾನವಾಗಿ ನಡೆಸಿಕೊಂಡು ಹೋದರು.
ಅಂದು ನಡೆದ ಆ ಜಗಳ ಬಹು ದೊಡ್ಡ ಘಟನೆಗೆ ಸುಶ್ರಾವ್ಯವಾಗಿ ನಾಂದಿ ಹಾಡಿತು. ಇತಿಹಾಸ ಪ್ರಸಿದ್ಧ ದ್ವಿದಳ ಧಾನ್ಯವೊಂದು ಅಂದು ವಿಭಜನೆಗೊಂಡದ್ದು ಮತ್ತೆ ಕೂಡಲೇ ಇಲ್ಲ.
ನಿಂಗಮ್ಮಜ್ಜಿ ತನ್ನ ಸಂಗಡಿಗರೊಂದಿಗೆ ಬೇರೊಂದು ಮನೆ ಮಾಡಿ, ಬೇರೊಂದು ಒಲೆ ಹೂಡಿಬಿಟ್ಟಿತು. ಅದು ಹೂಡಿದ ಒಲೆಯಲ್ಲಿ ಅರಷಡ್ವರ್ಗಗಳು ಧಗಧಗಿಸತೊಡಗಿದವು. ಪ್ರತಿದಿನ ಕಾಲು ಕೆದರಿ ಜಗಳ ತೆಗೆಯ ತೊಡಗಿತು.
ಅಂಥ ಜಗಳದಲ್ಲಿ ಉಲ್ಲೇಖಾರ್ಹವಾದುದೆಂದರೆ ಶಾಸ್ತ್ರಿಗಳ ಮನೆ ಬಗ್ಗೆ ಅದು ಹಬ್ಬಿಸಿದ ರೋಚಕ ಕಥೆಗಳು … ಕರ್ಮ ಕಾಂಡಗಳು … ಒಂದೇ ಎರಡೇ … ಅದರ ಜೊತೆಗೆ ಅಕ್ಕಪಕ್ಕದ ಮನೆಯವರನ್ನೂ ಪೈಪೋಟಿಗಿಳಿಸಿ ಪುಣ್ಯ ಕಟ್ಟಿಕೊಂಡಳು. ಆ ಮನೆಯೊಳಗೆಲ್ಲೋ ಗುಪ್ತ ನಿಧಿ ಎಂದು ಹೇಗೋ ಹಬ್ಬಿದ ಸುದ್ದಿಯನ್ನು ದಡ್ಡತನಕ್ಕೆ ಹೆಸರಾದ ಅಕ್ಕಪಕ್ಕದ ಮನೆಯವರು ನಂಬಿಬಿಟ್ಟರು. ಹಾಲಪ್ಪ ಕೊಡೋ ರಖಮ್ಮಿಗಿಂತ ಎರಡರಷ್ಜ್ಟು, ಮೂರರಷ್ಟು ಕೊಡುವುದಾಗಿ ಹೇಳುತ್ತ ಶಾಸ್ತ್ರಿಗಳ ಸ್ಥಿರ, ಚರ ಸಂಪತ್ತಿನ ಉತ್ತರಾಧಿಕಾರಿಗಳ ಬಗೆಗೆ ದಟ್ಟಂಡಿ ದಾರಂಡಿ ಅಲೆಯತೊಡಗಿದರು.
ಹಾಗೆ ಬಂದವರನ್ನು ನೋಡಿದಾಗಲೆಲ್ಲ ಆ ಸಾಧ್ವಿಮಣಿ ಸೊಸೆ ‘ಅಸಂತುಷ್ಟಾ ದ್ವಿಜಾ ನಷ್ಟಾಃ’ ಎಂದು ಆರ್ಯೋಕ್ತಿಯನ್ನು ನೆನಪು ಮಾಡಿಕೊಳ್ಳುತ್ತಿದ್ದಳು. ಮನೆಯ ಸುತ್ತ ವಾಸಿಸುವ ಅಷ್ಟದಿಗ್ಗಜಗಳೆಲ್ಲ ತಿಳುವಳಿಕೆ ಇಲ್ಲದವರೆಂದು ವರಲಕ್ಷ್ಮಿಗೆ ಗೊತ್ತು. ಪರಪುರುಷರನ್ನು ಮನೆ ಒಳಗಡೆ ಬಿಟ್ಟುಕೋಬೇಡ ಎಂದು ಅತ್ತೆ ಮಂಚದ ಮೇಲಿಂದಲೇ ಕೂಗುತ್ತಿದ್ದರೂ, ಸೊಸೆ ಬಂದಂಥವರನ್ನು ಅಟವಾಳಿಗೆ ವರೆಗೆ ಬಿಟ್ಟುಕೊಳ್ಳುತ್ತಿದ್ದಳು., ‘ಅಜ್ಞಃ ಸುಖಮಾರಾಧ್ಯ’ ಎಂಬ ಪ್ರಾಚೀನರ ಮಾತನ್ನು ನೆನಪು ಮಾಡಿಕೊಳ್ಳುತ್ತಲೇ ಕೋಸುಂಬರಿ ಪಾನಕ ನೀಡಿ ಸತ್ಕರಿಸುತ್ತಿದ್ದಳು. ‘ವೃಕ್ಷ ಮೂಲಾನಿ ದೂರತಃ ಪರಿವರ್ಜಯೇತ್’ ಎಂಬ ಮಾತಿನಂತೆ ದೂರ ನಿಲ್ಲುತ್ತಿದ್ದಳು. ಸಾರಿಗೆ ವಗ್ಗರಣೆ ಹಾಕಿದಂತೆ; ವಗ್ಗರಣೆಯಲ್ಲಿ ಇಂಗು ಹಾಕಿದಂತೆ ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದಳು. ‘ನೋಡೋಣ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಳು. ‘ದೀರ್ಘಾಯುಷ್ಮಾನ್‍ಭವ’ ಎಂದು ಆಶೀರ್ವಾದ ಮಾಡಿ ಸಾಗಹಾಕುತ್ತಿದ್ದಳು. ಮನೆ ಕ್ರಯಕ್ಕೆ ಕೊಂಡು ಆಕೆ ಉಡಿ ತುಂಬ ಹಣ ತುಂಬಲು ಬಂದವರು ಆಕೆ ಭಾಷೆಯನ್ನಾಗಲೀ ಮಾತಿನ ಅರ್ಥವನ್ನಾಗಲೀ ಅರ್ಥಮಾಡಿಕೊಳ್ಳುವಲ್ಲಿ ಸೋತು ಒಂಥರಾ ಮುಖ ಮಾಡಿಕೊಂಡು ಹೋಗುತ್ತಿದ್ದರು.
ಅವರು ಅತ್ತ ಹೋಗುತ್ತಲೆ ಇತ್ತ ಅತ್ತೆ ಸೊಸೆಯರ ನಡುವೆ ಜಟಾಪಟಿ; ಗಂಡಾಗುಂಡಿಯೂ ಯಥಾಲಾಪದೊಂದಿಗೆ ಶುರುವಾಗುತ್ತಿತ್ತು. ಅತ್ತೆ ಅಲುಮೇಲಮ್ಮ ವ್ಯಾಸಪೀಟಕ್ಕೆ ಕೈಕೊಟ್ಟು ಅದು ಮುರಿಯುವಂತೆ ಮೇಲೆದ್ದು ಗರ್ವಾಲಂಕೃತಳಾಗಿ ಬರುತ್ತಿರುವಾಗಲೇ ಸೊಸೆ ವರಲಕ್ಷ್ಮಿ ‘ರಾಮರಾಮಾ, ಯಾವ ಮುಖ ಹೊತ್ತು ಈಶೂದ್ರರ ನಡುವೆ ಬದುಕುವುದೋ ಕೃಷ್ಣ ಕೃಷ್ನಾ’ ಎಂದು ಜಗಳದ ಮಂಜ್ರಾ ಆರಂಭಿಸುತ್ತಿದ್ದಳು.
———————-

೧೮೯
“ಮನೆ ಮಾರೋದು ಬೇಡ … ಮಾಮನವರು ಶ್ರದ್ಧಾಭಕ್ತಿಯಿಂದ ವಿಷ್ಣುಪುರಾಣ ಮನನ ಮಾಡಿಕೊಂಡ ಪವಿತ್ರ ಜಾಗ ಇದು. ಇದನ್ನು ಮಾರಿದವರಿಗೆ ಒಳ್ಳೇದಾಗಲ್ಲ … ಮೊಮ್ಮಕ್ಕಳಾದರೂ ಪಾಪಲೇಶವಿಲ್ಲದೆ ಬದುಕೋದು ಬೇಡವೇ” ಅಲುಮೇಲಮ್ಮ ತನ್ನೆಡಗೈಯನ್ನು ಟೊಂಕಕ್ಕೆ ದತ್ತುಕೊಟ್ಟು ಬಲಗೈಯನ್ನು ಪ್ರತಿಭಾ ಪ್ರಹ್ಲಾದ್ರವರ ದೇಹದಂತೆ ತಿರುಗಿಸುತ್ತ ಹೇಳಲು …
“ಯಾವತ್ತು ಈ ಶೂದ್ರಕೇರಿಲಿರೋ ಮನೇಲಿ ವಸಿಸಲಿಕ್ಕೆ ಹತ್ತಿದ್ರೋ ಅವತ್ತೆ ಫಲ್ಗುಣೀ ನದೀಲಿ ಪಿಂಡ ಪ್ರದಾನ ಮಾಡ್ದಂತಾಯ್ತು ಕಣ್ರತ್ತೆ. ಈ ರಂಡೇಮುಖಾನ ಹೊತ್ತು ಈ ತಾಮಸಾಹಾರಿಗಳ ನಡುವೆ ಹೆಂಗತ್ತೆ ಬದುಕೋದು? ನೀವಂತೂ ಇಂದೋ ನಾಳ್ಯೋ ವೈಕುಂಟಕ್ಕೆ ಪಯಣ ಮಾಡಲಿರೋರು … ಬಾಳಕಾಲ ಬದುಕಿರೋ ನನ್ನ ಗತಿ ಏನು! … ಈ ತಾಮಸಿಗಳು ಹರಿದು ಮುಕ್ಕದೆ ಬಿಟ್ಟಾರೇನು! ಇದ್ಕೊಂದು ಮನಿ ಮಾರದಿದ್ರೆ ಮಕ್ಕಳ ಕೈಯಲ್ಲಿ ಗೋಪಾಳ ಬುಟ್ಟಿ ಕೊಡೋದೆ” ವರಲಕ್ಷ್ಮಮ್ಮ ಮೈಕೇಲ್ ಜಾಕ್ಸನ್‍ನಂತೆ ಇಡೀ ಮೈ ಒನೆಯುತ್ತ ನಾಲಿಗೆಗೆ ಆದಿಶಕ್ತಿ ಸ್ವರೂಪ ಕೊಟ್ಟು ಉತ್ತರ ಕೊಡಲು …
ಇದರಿಂದ ವೃದ್ಧೆ ಕ್ರುದ್ಧೆಯಾಗಿ “ಅದೇನೆ ಹಂಗಾಡ್ತಿದೀಯಾ? … ನನ್ ಮಗ ಶಾಮೂ ನಿನಗಾಗಲೀ ನಿನ್ನ ಮಕ್ಕಳಿಗಾಗಲೀ ಮಾಡಿರುವ ಅನ್ಯಾಯವಾದರೂ ಏನೆ?” ಎಂದು ಕರಾಟೇಕಲಿಯಂತೆ ಬಲಗೈಯ ತುದಿ ಬೆರಳುಗಳಿಂದ ಸೊಸೆಯ ಮುಂದಿನ ಬಾಚಿಹಲ್ಲುಗಳಿಗೆ ತಿವಿದಳು.
ದಂತಪಂಕ್ತಿ ಜುಮ್ಮೆಂದು ಬಿಟ್ಟವು ಆ ಕ್ಷಣ. ಕೋಪವೆಂಬುದು ಕೆಂಪು ರಕ್ತಕಣಗಳಲ್ಲಿ ಪ್ರವಹಿಸಿತು. ತಿವಿದೂ ತಿವಿದೂ ಹಲ್ಲುದುರಿಸಿ ಅಕಾಲ ವೃದ್ಧಾಪ್ಯ ತುರುಕಲು ಅತ್ತೆ ನಿರ್ಧರಿಸಿರುವಳೆಂದು ಬಗೆದು ವರಲಕ್ಷ್ಮಿ-
“ಅದೇನು ಅತ್ತೆ … ಹಂಗ ತಿವೀತೀರಲ್ಲ … ನಿಮ್ಮವೇನು ಕೈಯ್ಯೋ … ನಾಗರಹಾವಿನ ಹೆಡೆಯೋ … ನಿನ್ನ ಮಗ ನಿನಗೂ, ನನ್ನ ಮಕ್ಕಳಿಗೂ ಮಾಡಿರುವ ಅನ್ಯಾಯ ಒಂದೇ ಎರಡೇ … ಅವರು ಬದುಕಿರುವಾಗಲೂ ಸುಖ ಕಾಣ್ಲಿಲ್ಲ … ಸತ್ತ ಮೇಲೂ ಸುಖ ಕಾಣಲಿಲ್ಲ … ಅವರು ಮಾಡಿರೋ ಅನ್ಯಾಯ ಇಡಿ ತಾಲ್ಲೂಕಿಗೆ ಗೊತ್ತು … ಬಿಡಿಸಿ ಹೇಳಿ ನಾನ್ಯಾವ ನರಕಕ್ಕೆ ಹೋಗ್ಲಿ …” ಎಂದು ತಲೆಯ ಮೇಲಿದ್ದ ಸೆರಗನ್ನು ತೊಂಕಕ್ಕೆ ಸಿಕ್ಕಿಸಿಕೊಂಡು ಮುಂದುವರಿದು ಹೇಳಿದಳು-
“ಇದು ನನ್ನ ಗಂಡನ ಆಸ್ತಿ … ನಾನು ಬೇಕಾದ್ದು ಮಾಡ್ತೀನಿ … ಅದನ್ನು ಕೇಳೊಕೆ ನೀವ್ಯಾರು ಅಂತೀನಿ? … ”
ಸೊಸೆಯಾಡಿದ ಈ ಮಾತಿನಿಂದ ಅತ್ತೆಮ್ಮನ ತಾಯ್ತನ ವಿಲಿವಿಲನೆ ಒದ್ದಾಡಿತು. ತಾನು ಬದುಕುತ್ತಿರುವ ಕ್ರಮಕ್ಕೆ ತಾನೇ ಅಸಹ್ಯ ಪಟ್ಟುಕೊಂಡಳು.
“ನನ್ನ ಯಾರು ಅಂತೀಯ್ಹೇನೆ? ಇಂಥ ಮಾತಾಡೋಕೆ ಎಷ್ಟು ಧೈರ್ಯ ಕಣೆ ನಿನಗೆ … ಸತ್ಕುಲಸಂಜಾತೆಯಾಗಿದ್ರೆ ಇಂಥ ಮಾತು ನಿನ್ನ ಬಾಯಿಂದ ಬರುತ್ತಿದ್ದವೇನು!
“ಹ್ಹಾಂ … ನನ್ನ ಕುಲಕ್ಕೇ ಅವಮಾನ ಮಾಡುತ್ತೀರಲ್ಲಾ … ಅಯ್ಯಯ್ಯೋ … ತಾತನವರೇ ನನ್ನನ್ನು ಈ ದರಿದ್ರದವರ ಮನೆ ತುಂಬಿಸಿ ಎಷ್ಟು ಅನ್ಯಾಯ ಮಾಡಿದ್ದೀರಲ್ಕ್ಲಾ …” ಅಂಜಲೀಬದ್ಧಳಾಗಿ ವೈಕುಂಠದ ಕಡೆ ಆರ್ತತೆಯಿಂದ ನೋಡಿದಳು.
“ಎಂಥ ಸೊಸೆ ಗಂಟುಬಿದ್ದಿರುವಳಲ್ಲ ರಾಮ ರಾಮಾ … ನಮ್ಮನ್ನ ದರಿದ್ರದವರು
——————

೧೯೦
ಅಂತೀಯಾ …ನಿನಗೆ ರೌರವ ನರಕ ಪ್ರಾಪ್ತವಾಗಲೀ … ನೀನು ದರಿದ್ರ … ನಿನ್ನ ಅಪ್ಪ ದರಿದ್ರ … ನಿನ್ನ ಒಡಹುಟ್ಟಿದವರು ದರಿದ್ರದವರು…” ಅಲುಮೇಲಮ್ಮ ಲಟಲಟಾಂತ ಲಟ್ಟಿಗೆ ತೆಗೆದಳು.
ವರಲಕ್ಷ್ಮಿಯ ದೇಹವೆಂಬುದು ಧಗಧಗ ಉರಿಯತೊಡಗಿತು. ಕುಪ್ಪಳಿಸಿ ಎಗರಿ ಅತ್ತೆಯ ದುರ್ಬಲ ಸೆರಗು ಹಿಡಿದುಕೊಂಡಳು.
“ಅದೇನು ಕಂಡು ನಮ್ಮ ವಂಶದವರನ್ನ ದರಿದ್ರ ಅಂತೀಯ ಮುದುಕೀ … ನಿನ್ನ ಗಂಡ ಅಂದ್ರೆ ನಮ್ಮ ಮಾವನಂತೆ ಅಮೇಧ್ಯ ತಿಂದು ಭ್ರಷ್ಟರಾದವರುಂಟೇನು? … ಮದ್ಯ ಸೇವಿಸಿ ಕುಲಗೌರವ ಹಾಳುಮಾಡಿದವರುಂಟೇನು?” ತನ್ನ ಹಿಡಿತ ಮತ್ತು ಜಗ್ಗಾಟವನ್ನು ಭದ್ರಪಡಿಸುತ್ತ ಮುಂದುವರಿದು ಹೇಳಿದಳು ” ಆ ಮಾತು ವಾಪಸ್ಸು ತೊಕ್ಕೊಳ್ಳದಿದ್ದರೆ ಬಿಡೋದಿಲ್ಲ”
ಆಕೆಯ ಹಿಡಿತಕ್ಕೆ ವೃದ್ದೆ ಅಲ್ಲಾಡಿ ಹೋದರೂ ವಿಚಲಿತಳಾಗಲಿಲ್ಲ.
“ನಿನ್ನ ಅಣ್ಣ ತಮ್ಮಂದಿರು ಮಾಡಬಾರದ ಪಾಪ ಮಾಡಿ ಅಕಾಲ ಮರಣಕ್ಕೆ ತುತ್ತಾದುದು ನನಗೆ ಗೊತ್ತಿಲ್ಲಾಂಥ ಅಂದುಕೊಂಡಿರುವೆಯೇನೆ? ಇನ್ನು ನಿಮ್ಮ ತಾತನವರ ಬಗೆಗೆ …”ಎಂದಿನ್ನೇನೋ ಹೇಳುವಷ್ಟರಲ್ಲಿ …
“ನಮ್ಮ ತಾತನವರ ಬಗೆಗೇನಾದರೂ ಒಂದು ಮಾತು ಆಡಿದಿರೀ ಅಂದ್ರ ನಿಮ್ಮ ನಾಲಿಗೆಗೆ ಹುಳು ಬೀಳ್ತವೆ… ಎಷ್ಟೊ ಪಾಪಾತ್ಮಗಳಿಗೆ ಮುಕ್ತಿ ದಯಪಾಲಿಸಿದ ಧರ್ಮಾತ್ಮರು ಅವರು … ಅವರೇನು … ನಿಮ್ಮ ಮಾವನವರಂತೆ ಮಲಗಿದಲ್ಲೇ ಮಲ ಮೂತ್ರ ಬಳಿಸಿಕೊಂಡು ವಿಲವಿಲನೆ ಒದ್ದಾಡಿ ಸಾಯಲಿಲ್ವಲ್ಲಾ … ಅವರ ಹಾಗೆ ತಾತನವರೇನು ಪೋಲೀಸರ ಕೂಡ ಒಡೆಸಿಕೊಂಡು ಜಾತಿಭ್ರಷ್ಟರಾಗಿದ್ದಿಲ್ಲಲ್ಲ …” ಎಂದು ತನ್ನ ಬಾಯಲ್ಲಿದ್ದ ಲಾಲಾರಸವನ್ನು ತುಂತುರು ಹನಿಗಳಾಗಿ ಮಾರ್ಪಡಿಸಿ ಅತ್ತೆಯವರ ಮುಖದ ಸುಕ್ಕುಗಳ ಮೇಲೆಲ್ಲ ಅಲಂಕಾರ ಮಾಡಿದಳು.
ವೃದ್ಧೆ ವರಲಕ್ಷ್ಮಿ ಮಾಡಿದ ಒಂದೊಂದು ಮಾತುಗಳಿಂದ ಜರ್ಝರಿತಳಾಗಿಬಿಟ್ಟಳು.
ಇದು ಲಕ್ಷಾಗೇಹಕ್ಕಿದು, ವಿಶಮ ವಿಶಾನ್ನಕ್ಕಿಳಿದು; ನಾಡ ಜೂದಿಗಿಂದು, ಪಂಚಾಲಿ ಪ್ರಪಂಚಕಿದು … ಎಂದು ಮೊದಲಾಗಿ ಭೀಮನು ಗದಾದಂಡದಿಂದ ದುರ್ಯೋಧನನ ಮೈಗೆ ತದಕುತ್ತ ಮೂದಲಿಸಿದನಲ್ಲ ಹಾಗೆ …
ಸೊಸೆ ವಕ್ಷಸ್ಥಳದ ಮೇಲಿದ್ದ ಹಿಡಿತವನ್ನು ಬಿಗಿಗೊಳಿಸಿದರೆ, ಅತ್ತೆಯೂ ಎಗರಿ ಸೊಸೆಯ ಕಿವಿಗಳೆರಡನ್ನು ಎರಡೂ ಕೈಗಳಿಂದ ಕಪಿಮುಷ್ಟಿ ಚುರುಕುಗೊಳಿಸಿದಳು.
“ಅಯ್ಯಯ್ಯೋ … ನಿನ್ನ ಗಂಡ ಕುಡಿದಿರೋವ್ರು ಅನ್ನೊ ಕಾರಣಕ್ಕಾಗಾದರೂ ಬಿಡಬಾರ್ದೇನೇ … ತಾಯಿ ಎದೆ ಹಾಲು ಕುಡಿದೋಳಾಗಿದ್ರೆ ಹೀಗೆ ಹಿಡಿದುಕೊಳ್ತಿದ್ದೆ ಏನೇ? … ಅದ್ಕೆ ನಿನ್ನ ಮೊಲೆಗಳು ಹಾಲಿಲ್ಲದೆ ಗೊಡ್ಡು ಬಿದ್ದಿರೋದು” ಮುದುಕಿ ನಾಲಿಗೆಯಿಂದ ಕುಟುಕಿತು.
ಕೆಣಕಿದಳು ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದ ವೋಲ್.
“ಅಯ್ಯಯ್ಯೋ … ಚಿತೆ ಏರೋ ವಯಸ್ಸಿನಲ್ಲೂ ಹೇಗೆ ಮಾತಾಡ್ತಿದೆಯಲ್ಲಾ ಈ ಮುದಿ ರಾಕ್ಷಸಿ … ನನ್ನ ಹಾಗೆ ಎರಡು ಹಡೆದುಕೊಂಡಿದ್ರೆ ಇನ್ನೆಷ್ಟು ಮಾತಾಡ್ತಿತ್ತೋ … ಹೊಟ್ಟೇಲಿ ಎರಡು ಮಕ್ಕಳನ್ನು ಇಟ್ಟ ಆ ದೇವರು ಆ ದೇವರು ಮೊಲೇಲಿ ಎರಡು ಮಿಳ್ಳೆ ಹಾಲು ಇಡಲಿಲ್ಲವಲ್ಲಾ … ಇದರಲ್ಲಿ ನನ್ನ ತಪ್ಪೇನಿದೆ ಮುದುಕಿ… ನನ್ನ ಕಿವಿಗಳನ್ನು ಒಳ್ಳೆ ಮಾತಿಂದ ಬಿಡ್ತೀಯೋ ಇಲ್ವೋ …”
ನೀನು ಮೊದಲು ಬಿಡು ಅಂತ ಈಕೆ
——————-

೧೯೧
ನೀನು ಮೊದಲು ಬಿಡು ಅಂತ ಆಕೆ …
ಯಾರೂ ಸೋಲಲೊಲ್ಲರು!
ಯಾರೂ ಗೆಲ್ಲಲೊಲ್ಲರು!
ಇಂಥ ವಿಷಮ ಪರಿಸ್ಥಿತಿಯಲ್ಲಿ ದೇವರು ಸಹಾಯ ಮಾಡದೆ ಇನ್ನಾರು ಸಹಾಯ ಮಾಡಲು ಸಾಧ್ಯ!
ಆರನೆ ಇಂದ್ರಿಯಗಳು ಜಾಗೃತಗೊಂಡು ಬೆಲ್ ಹೊಡೆಯುವುದಕ್ಕೂ ಮೊದಲೆ ಶಿವರಾಮಶಾಸ್ತ್ರಿ ತಲೆನೊಯ್ಯುವುದೆಂತಲೂ; ಅಶ್ವಥ್‍ನಾರಾಯಣ ಹೊಟ್ಟೆ ನೋಯುವುದೆಂಥಲೂ ನೆಪ‌ಒಡ್ಡಿ ಸಂಥೆಯೊಳಗೋಂದು ಮನೆಮಾಡಿ ಶಬ್ದಂಕ್ಕಂಜದೆ ಆಕಳಿಸುತ್ತ ಕೂತಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಚನ್ನವೀರಪ್ಪ ಮಾಸ್ತರರ ಪರಮಿಷನ್ ಗಿಟ್ಟಿಸಿಕೊಂಡು ತರಗೆಲೆಗಳೇ ಓಡುತ್ತಿರುವವೋ ಎಂಬಂತೆ ಓಡುತ್ತಬಂದು ಅಮ್ಮಾ; ಅಜ್ಜೀ ಎನ್ನುತ್ತ ಒಳಪ್ರವೇಶಿಸಲು ಅವರಿಬ್ಬರು ತಮ್ಮ ಪಟ್ಟು ಸಡಲಿಸಿ; ಉದಕದಲ್ಲಿ ಅಗ್ನಿ ಬಿಡುಗಡೆಗೊಳ್ಳುವಂತೆ; ಔಷಧದಿಂದ ವ್ಯಾಧಿ ಬಿಡುಗಡೆ ಗೊಳ್ಳುವಂತೆ ಮಂತ್ರ ಪ್ರಯೋಗದಿಂದ ವಿಷ ಬಿಡುಗಡೆಗೊಳ್ಳುವಂತೆ ಅವರಿಂದ ಇವರು, ಇವರಿಂದ ಅವರು ಬಿಡುಗಡೆಗೊಂಡು ರಾಮಾ; ಕೃಷ್ಣಾ ಅಂತ ಭವನ್ನಾಮ ಸ್ಮರಣೆ ಗೈಯುತ್ತ ಪಡಸಾಲೆಯ ಮೂಲೆಗಳನ್ನು ತಲಾ ಒಬ್ಬೊಬ್ಬರು ಆಕ್ರಮಿಸಿಕೊಂಡು ಕೂತುಕೊಳ್ಳಲು ಅದೇ ಪಡಸಾಲೆಯ ಇನ್ನೊಂದು ಮೂಲೆಯಲ್ಲಿ ನಿಘೂಡವಾಗಿ ವಾಸಿಸುತ್ತಿದ್ದ ಶಾಮಾಶಾಸ್ತ್ರಿಯ ಆತ್ಮವು ನಿಟ್ಟುಸಿರು ಬಿಟ್ಟಿತು. ಹಾಂಗೆ ಬಂದು ನೋಡಿಕ್ಕೊಂಡು ಹೀಂಗೆ ಹೋಗಿ ಬಿಡಬೇಕೆಂದು ಯೋಚಿಸಿ ಕೆಲ ಸಮಯದ ಹಿಂದೆ ಬಂದಿತ್ತು. ಬೆಳ್ಳಿ ತೆರೆಯ ಮೇಲಿನ ಘಟನೆಗಳನ್ನು ನೋಡಿ ಆನಂದಿಸಿ; ಉದ್ಗರಿಸಬಹುದಾಗಿತ್ತೇ ವಿನಃ ಚಲನಶೀಲ ಕಥೆಯೊಂದಿಗೆ ತಾದ್ಯಾತ್ಮ ಹೊಂದುವುದು ಸಾಧ್ಯವಿಲ್ಲವೆಂದು ಸತ್ತ ಮರು ಘಳಿಗೆಯೇ ಶಾಮಾಶಾಸ್ತ್ರಿಗೆ ಅರ್ಥವಾಗಿತ್ತು. ದೇಹ ತ್ಯಜಿಸಿದವರಿಗಿರುವ ಒಂದು ಅನುಕೂಲವೆಂದರೆ ಲೀಲಾಜಾಲವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವುದು; ಯಾವುದೇ ರಹದಾರಿಯ ಹಂಗು ಇರುವುದಿಲ್ಲ. ವಿಸರ್ಜನಾಂಗಗಳಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ, ಹೀಗಾಗಿ ಸೂಕ್ಷ್ಮ ಪ್ರವೃತ್ತಿಯ ಶಾಸ್ತ್ರಿ ನಗುತ್ತಿದ್ದ; ಮರುಗುತ್ತಿದ್ದ … ಆದರೆ ಅವನ ಯಾವುದೇ ಸಂವೇದನೆಗೆ ಬದುಕಿರುವ ಯಾರೂ ಭಾಧ್ಯಸ್ಥರಾಗಿರಲಿಲ್ಲ … ಆದರೆ ಆಸ್ತಿಗೆ ಸಂಭಂಧಿಸಿದಂತೆ ಸಂಭಂದ ಕಡಿದುಕೊಳ್ಳುವುದು ಸತ್ತನಂತರವೂ ಅಸಾಧ್ಯವೆಂಬುದಕ್ಕೆ ಅವನೇ ಸಾಕ್ಷಿ; ಯಾವ ಜೀವ ಇರದಿದ್ದರೂ ಪ್ರೇತದಂತೆ ಮನುಷ್ಯರ ಸಂಭಂದಗಳನ್ನು ವಿಘಟಿಸುವ; ಬೆಸೆಯುವ ಚರಾಸ್ತಿ ಎಂಬ ಸವರ್ಣ ಧೀರ್ಘ ಸಂದಿ ಬಗ್ಗೆ ಅವನು ಅಷ್ಟು ತಲೆ ಕೆಡೆಸಿಕೊಂಡುದುದಿಲ್ಲ. ಅವನನ್ನು ಕಾಡತೊಡಗಿದುದು ಸ್ಥಾವರಲಿಂಗೋಪಾದಿಯಲ್ಲಿ ಗ್ರಾಮದ ನಕ್ಷೆಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮನೆ ಎಂಬ ಸ್ಥಿರಾಸ್ತಿ – ‘ಈ ಮನೆಯಲ್ಲಿ ವಾಸಿಸುವುದು ಪೂರ್ಣಾವಧಿ ಬದುಕನು ಬದುಕುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ ಕಣಯ್ಯಾ’ ಎಂದು ಪರಮೇಶ್ವರ ಶಾಸ್ತ್ರಿಗಳು ತಮ್ಮ ಬದುಕಿನ ಎಂಬತ್ನಾಲ್ಕು ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾನವ ಲೋಕವನ್ನು ಉದ್ಧೇಶಿಸಿ ಮಾತನಾಡುತ್ತಾ ಅಪ್ಪಣೆ ಕೊಡಿಸಿದ್ದರು. ಅವರೇ ಇಂಥವರು ನೂರಾರು ವಸಂತಗಳನ್ನು ಕಂಡರೆ ಮನುಕಲವನ್ನು ಕಾಪಾಡುವವರ್ಯಾರು? ಎಂಬ ಲೆಕ್ಕಾಚಾರದಿಂದ ಮೃತ್ಯು ಅವರ ಹೃದಯದ ಬಾಗಿಲು ತಟ್ಟಿತ್ತು. ಅವರ ಮಾತನ್ನು ಸುಳ್ಳು
——————

೧೯೨
ಮಾಡಲೆಂದಲ್ಲವೆ ತಾನು ಅಲ್ಪಾಯುಷಿಪಟ್ಟವನ್ನೇರಿದ್ದು? ಪ್ರತಿ ಕ್ಷಣ ಮೃತ್ಯುವನ್ನು ಆಲಂಗಿಸಿದ್ದು. ಕಾಡಿ ಬೇಡಿ ದಿನಕ್ಕೊಂದು ಚೂರು ಚೂರು ಸಾಯತೊಡಗಿದ್ದು. ಬ್ರಾಹ್ಮಣ್ಯವನ್ನು ತಾನು ಇಷ್ಟೊಂದು ದ್ವೇಶಿಸಬಹುದೆಂದು ಹತ್ತಿರದವರ್ಯಾರೂ ಅಂದುಕೊಂಡಿರಲಿಲ್ಲ. ಇಂಥ ಕಥೆ ಕಾದಂಬರಿಗಳನ್ನು ಓದಬೇಡಾಂತ ನಾರಾಯಣ ಪ್ರಾಗ್ ಜೋತಿಷಿ ಕೈಲಿದ್ದ ಸಂಸ್ಕಾರವನ್ನು ಕಿತ್ತೆಸೆದದ್ದುಂಟು. ‘ಬ್ರಾಹ್ಮಣರು ಬರೆದಿರೋದ್ನ ಓದದಿದ್ರೆ ಹೇಗಯ್ಯಾ’ ಎಂದು ತಾನು ಸಮರ್ಥಿಸುದ್ದುಂಟು. “ಇಂಗ್ಲೀಷ್ ಕಲ್ತ ಕೂಡ್ಲೆ ಬ್ರಾಹ್ಮಣ್ಯ ಬಿಡುತ್ತಾರೆಂಬುದಕ್ಕೆ ಅದ್ನ ಬರೆದವರೇ ಸಾಕ್ಷಿ ಕಣಪ್ಪ. ಕಿರಸ್ತಾನರ ಹುಡುಗೀನ ಮದುವೆಯಾಗಿ ಕಟ್ಟಾ ಸಂಪ್ರದಾಯಸ್ತರ ವಿರೋಧ ಕಟ್ಟಿಕೊಂಡ … ” ಹೀಗೆ ನುಡಿದ ಪ್ರಾಗ್ಜೊತಿಷಿ ಅವರ ದೂರದ ಸಂಬಂಧಿಯಂತೆ ತಮ್ಮವರು ಎಂಬ ಅಭಿಮಾನವಾದರೂ ಇರುವುದು ಬೇಡವೆ? ಇದರಿಂದ ತನಗೆ ಸಿಟ್ತು ಬಂದಿತ್ತು. ‘ಎಂಥ ಮಾತಾಡ್ತಿದೀ ನಾರಾಯಣ? … ಒಬ್ಬ ಲೇಖಕನ ಸಂವೇದನಾ ಶೀಲತೆ ಒಬ್ಬ ಲೇಖಕ ಓಡುಗನಾದ ಮಾತ್ರ ಅರ್ಥವಾಗುತ್ತದೆ ಎಂಬುದಕ್ಕೆ ನಾನೇ ನಿದರ್ಶನ ನೋಡು. ಸಂಸ್ಕಾರ ಓದದೆ ಮಾತಾಡ್ತಿದೀಯಲ್ಲ! ಕಾದಂಬರಿಯಲ್ಲಿರೋ ಕ್ರಾಂತಿಕಾರಿ ನಾರಾಯಣಪ್ಪನ ಹೆಸರಿಟ್ಟುಕೊಂಡು ಹೀಗೆ ಮಾತಾಡೋದು ಯಾವ ನ್ಯಾಯವಪ್ಪಾ … ಕಟ್ಟಾ ಸಂಪ್ರಯಸ್ಥರೂ; ವಿವೇಕಿಗಳೂ ಆದ ಪ್ರಾಣೇಶಾಚಾರ್ಯರು ಶೂದ್ರ ಹೆಂಗಸು ಚಂದ್ರಿಯನ್ನು ಸಂಭೋಗಿಸಿ ಸನಾತನತೆಯ ಲಕ್ಷ್ಮಣ ರೇಖೆ ದಾಟಿದ್ದು ಕ್ರಾಂತಿ ಅಲ್ಲವೇನು?” ಎಂದು ತಾನು ಸ್ದ್ವೋಪಜ್ಞತೆಯನ್ನು ಪ್ರದರ್ಶಿಸುದ್ದುಂಟು. ಅದಕ್ಕೆ ನಾರಾಯಣ ಅದ್ಭುತನಗೆ ನಕ್ಕು ” ಆ ನಿಮ್ಮ ಪ್ರಾಣೇಚಾರ್ಯರಿಗೆ ತಮ್ಮ ಸಂಭೋಗ ತೀಟೆ ತೀರಿಸಿಕೊಳ್ಳಲು ಶೂದ್ರ ಮಹಿಳೆ ಚಂದ್ರಿಕೆಯೇ ಬೇಕಾಯ್ತೇನು?” ಎಂದಾಡಿದ್ದುಂಟು. ಇಂಥ ಮಾತಾಡುತ್ತಿದ್ದ ಪ್ರಾಗ್ಜೋತಿಷಿ ತುಂಬ ಬುದ್ಧಿವಂಥನಿದ್ದ. ಸಮರ್ಥ ವೈದ್ಯ ಶವ ಪ್ರರೀಕ್ಷೆ ಮಾಡುವ ರೀತಿಯಲ್ಲಿ ಒಂದು ಕೃತಿಯನ್ನು ಓದಿ ಅರಗೈಸಿಕೊಳ್ಳುತ್ತಿದ್ದ. ಬಹುತೇಕ ಸಂದರ್ಭದಲ್ಲಿ ಅವನು ತುಸು ಹೆಚ್ಚು ಮಾತಾಡುತ್ತಿದ್ದುದು ತನ್ನೊಂದಿಗೆ ಮಾತ್ರ. ಅವನ ಅಂತರಂಗದಲ್ಲಿರುತ್ತಿದ್ದ ವೈಚಾರಿಕ ಕೊಂಪೆಯನ್ನು ಸಮಯ ಸಂದರ್ಭ ನೋಡಿ ಲೂಟಿ ಮಾಡುತ್ತಿದ್ದುದೆಂದರೆ ತಾನು ಮಾತ್ರ. ಅವನ ವರ್ತನೆ ಕೆಲವೊಮ್ಮೆ ತನಗೆ ಇರುಸುಮುರುಸಾಗುತ್ತಿದ್ದುದುಂಟು. ಎಲಾ? ಇವನು ಎಲ್ಲ ಬಿಟ್ಟು ಬಿಟ್ಟಿದ್ದಾನಲ್ಲವೆಂದು ದಿಗ್ಭ್ರಮೆಗೊಳ್ಳುತ್ತಿದ್ದುದುಂಟು. ಅವನನ್ನು ಹತ್ತಿರವಿಟ್ಟುಕೊಳ್ಳಲಾರದೆ ದೂರವಿಡಲಾರದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿಯೇ ಅವನು ಯಾರನ್ನೋ ರಕ್ಷಿಸಲಿಕ್ಕೆ ಹೋಗಿ ಅವರನ್ನು ಬದುಕಿಸಿ ತಾನು ಸತ್ತಿದ್ದ. ಸಾಯುವ ಒಂದು ಕ್ಷಣ ಹಿಂದೆ ಮೈ ಎಲ್ಲ ಸುಟ್ಟು ಕರಟಿದ್ದರೂ ಅವನು ನಗುನಗುತ್ತ ಮಾತಾಡಿಸಿದ್ದ. ಮತಾವ ಕೃತಿ ಓದಿದೆಯೋ? ಎಂದು ಕೇಳಿದ್ದ. ಕೃತಿಯ ಉದ್ದೇಶಕ್ಕೆ ಓದುಗನನ್ನು ಬಲಿ ತೆಗುದುಕೊಳ್ಳುವ ಲೇಖಕನ ಬಗ್ಗೆ ಎಚ್ಚರದಿಂದಿರಬೇಕೆಂದು ತೊದಲಿದ್ದ. ವೈಯಕ್ತಿಕ ಬದುಕನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕೆ ಕೃತಿಯ ನೆರವು ಪಡೆಯುವುದು ಯಾಕೆ? ಎಂದು ಪ್ರಶ್ನಿಸಿದ್ದ. ನಿನ್ನನ್ನು ನೀನು ಅರ್ಥಮಾಡಿಕೋಽಽ ಸಮಾಜದಲ್ಲಿ ; ಕುಟುಂಬದಲ್ಲಿ ನಿನ್ನ ಪಾತ್ರ ಅರ್ಥಮಾಡಿಕೋ ಎಂದು ಹೇಳುತ್ತ ಅವಧೂತನಂತೆ ಕಣ್ಣು ಮುಚ್ಚಿದ್ದ. ಅವನ ಸಾವು ತನ್ನನ್ನು ಕಾಡಿದ್ದು ನಿಜ, ಅವನ ಮಾತುಗಳನ್ನು ಅರ್ಥಮಾಡಿಕೊಳ್ಳಲಿಕ್ಕಾಗದೆ ತಾನು ಒದ್ದಾಡಿದ್ದು ಸತ್ಯ. ಕುಟುಂಬದಲ್ಲಾಗಲೀ; ಸಮಾಜದಲ್ಲಾಗಲೀ ತನ್ನ ಅಸ್ತಿತ್ವದ ದೌರ್ಬಲ್ಯದ ಬಗ್ಗೆ ಯೋಚಿಸುತ್ತ ಕಂಗಾಲಾಗಿದ್ದು ನಿಜ. ತನ್ನನ್ನು ತಾನು ತನ್ನೊಳಗೆ ಮರೆಮಾಚಿಕೊಳ್ಳುವುದಕ್ಕಾಗದೆ ತಾನು ಕಲಿಬಾರದಿದ್ದನ್ನೆಲ್ಲ ಕಲಿತದ್ದು ನಿಜ, ಘನಘೋರ್ ನರಕ ಯಾತನೆಯ ಸುಳಿಗೆ ಸಿಲುಕಿ ಪ್ರಜ್ಞೆ
——————–

೧೯೩
ಕಳೆದುಕೊಂಡು ಹಳಹಳಿಸುತ್ತ ಮಲಗಿದ್ದ ತಾನು ಸತ್ತದ್ದೇ ತಿಳಿದಿರಲಿಲ್ಲ, ಬಹುದಿನಗಳವರೆಗೆ … ತನ್ನವರೆಂಬುವವರ ಆಳ ಎತ್ತರಗಳನ್ನು ಅಳೆದು ಮೂಕ ವಿಸ್ಮಿತಗೊಳಿಸುವುದಕ್ಕೆ ಸಾದ್ಯವಾದದ್ದು ಪಾಳುಗೋಡೆಯಂಥ ದೇಹವನ್ನು ಸುಟ್ಟು ಸುಡುಗಾಡಿಗೆ ಕಳಿಸಿದ ನಂತರವೇ. ಕೆಟ್ಟದಾಗಿ ಬಾಲ್ಯ ಕಳೆಯುತ್ತಿರುವ ತನ್ನ ಮುದ್ದು ಮಕ್ಕಳ ಮುಖದ ವಿಷಣ್ಣತೆಯನ್ನು ನೋಡಿದಾಗ, ಗತಕಾಲದ ಒಂದೊಂದು ನೆನಪಿನ ಗಾಢ ಆಸರೆಯೊಂದಿಗೆ ಬದುಕುತ್ತಿರುವ ತನ್ನ ವೃದ್ಧ ಮಾತೆಯನ್ನು ನೋಡಿದಾಗ; ಪಾತಿವ್ರತದ ಮುಖವಾಡದೊಳಗೆ ಸದಾ ಅವಿತುಕೊಂಡಿದ್ದು ವಿಲವಿಲನೆ ಒದ್ದಾಡಿದ ಹೆಂಡತಿಯನ್ನು ನೋಡಿದಾಗಲೆಲ್ಲ ದುಃಖ ಧುಮ್ಮಿಕ್ಕಿ ಬರುವುದು. ತುಸು ಸ್ವಾಂತನ ತರುವ ನೆನಪೆಂದರೆ ತಂಬಾಕಿಯ ಉಂಡೆಯನ್ನು ದವಡೆಯೊಳಗೆ ಆತ್ಮಲಿಂಗೋಪಾದಿಯಲ್ಲಿ ಇಟ್ಟುಕೊಂಡು ಭೀಕರ ವಾಸ್ತವದ ಮೇಲೆ ಪದ್ಮಾಸನ ಹಾಕಿಕೊಂಡಿದ್ದು, ತನ್ನನ್ನು ಹೆತ್ತ ಮಗನಿಗಿಂತ ಹೆಚ್ಚಾಗಿ; ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಾಗಿ ಅನುಗಾಲ ನೋಡಿಕೊಂಡ ಅನಸೂಯಾಳದ್ದು. ಅವಳ ಋಣವನ್ನು ಪೆಂಡೆ ಪೆಂಡೆ ಕಟ್ಟಿಕೊಂಡೇ ದೇಹದಿಂದ ನುಣುಚಿಕೊಂಡೆನಲ್ಲ ತಾನು!
“ಶಾಸ್ತ್ರಿ … ಅಳಬ್ಯಾಡೋ ಆ ಯಮ ಎಂಭೋನು ನಿನ್ನ ಪಿರಾಣನ ಅದೆಂಗ ಹೊಯ್ತಾನ ನಾನೊಂದು ಕೈ ನೋಡ್ಕಂತೀನಿ” ಎಂದು ಆಕೆ ತನ್ನ ತೊಡೆ ಮೇಲೆ ತಲೆ ಇರಿಸಿಕೊಂಡು ಮಾತ್ರೆಗಳನ್ನು ನುಂಗಿಸುತ್ತಿದ್ದಳು. ಔಷದವನ್ನು ಕುಡಿಸುತ್ತಿದ್ದಳು. ತನ್ನ ಜೀವಚ್ಛವವನ್ನು ಬಚ್ಚಲಿಗೆ ಎತ್ತೊಯ್ದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಬಟ್ಟೆ ಬರೆ ತೊಡಿಸಿ; ಮಂಚದ ಮೇಲೆ ಮಲಗಿಸಿ ಓದಲು ಪುಸ್ತಕಗಳನ್ನು; ಪತ್ರಿಕೆಗಳನ್ನು ಪಕ್ಕದಲ್ಲಿಡುತ್ತಿದ್ದಳು. ತಾನು ಅಂಥ ಅವಸ್ಥೆಯಲ್ಲಿದ್ದಾಗ ಕುಂ. ವೀರಭದ್ರಪ್ಪನೂ ಬಂದು ನೋಡಿಕೊಂಡು ಹೋಗಿದ್ದುದಿಲ್ಲ; ಎರಡು ಗುಟುಕು ಎಳೆನೀರು ಕುಡಿಸಿದ್ದುದಲ್ಲ. ಶವ ಸಂಸ್ಕಾರದ ಬಗ್ಗೆ ಮಾತಾಡಿದ್ದ. ಪ್ರಪಂಚದ ವಿಭೂತಿ ಪುರುಷರು ಹೇಗೆ ಹೇಗೆ ಸತ್ತರು? ಹೇಗೆ ಹೇಗೆ ಶವ ಸಂಸ್ಕಾರ ಮಾಡಿಸಿಕೊಂಡು ಇತಿಹಾಸದಲ್ಲಿ ಅಜರಾಮರರಾದರು ಎಂದು ವರ್ಣಿಸಿದ್ದ. ನಮ್ಮ ದೇಶದಲ್ಲಿ ಸಹಜ ಮರಣಗಳು ಬೆಲೆ ಕಳೆದುಕೊಂಡಿವೆ ಎಂದೂ ದುರ್ಮರಣಕ್ಕೀಡಾದವರು ತಮ್ಮ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಬರುತ್ತಿರುವರೆಂದೂ; ಸಾಯುವ ಕ್ಷಣದಲ್ಲಿ ಅಲೌಕಿಕವಾದ ಥ್ರಿಲ್ ಅನುಭವಿಸುತ್ತಾರೆ ಮತ್ತು ವಿತರಿಸುತ್ತಾರೆಂದೂ ವಿಚಿತ್ರ ತರ್ಕ ಮಾಡಿದ್ದ. ನಾನು ಬರೆಯಬಹುದಾದ ಕಾದಂಬರಿ, ನೀನು ಸಾಯುವ ಕ್ರಮವನ್ನವಲಂಬಿಸಿರುವುದೆಂದು ಹೇಳಿದ್ದ. ಅವನು ಹಾಗೆ ಮಾತಾಡದಿದ್ದಲ್ಲಿ ತಾನಿನ್ನು ಒಂದಿಷ್ಟು ಕಾಲ ಬದುಕುತ್ತಿದ್ದನೇನೋ! ಅವನಿಂದ ಕಾದಂಬರಿ ಬರೆಯಿಸಿಕೊಳ್ಳಬೇಕೆಂದೇನೋ ತಾನು ಆ ಪರಿ ಸತ್ತಿದ್ದು.
ಆತ್ಮವೂ ನಿಟ್ಟುಸಿರಿಟ್ಟಿತು. ಸುಂಟರ ಗಾಳಿಯನ್ನು ಹುಟ್ಟು ಹಾಕುವಂತಿತ್ತಾ ನಿಟ್ಟುಸಿರು. ಅದಕ್ಕೇ ಇರಬೇಕು ನಾನು ಬರೆಯುತ್ತಿದ್ದ ಶಾಮಣ್ಣ ಕಾದಂಬರಿಯ ಹಸ್ತಪ್ರತಿಯ ಹಾಳೆಗಳು ಇದ್ದಕ್ಕಿದ್ದಂತೆ ಚಲ್ಲಾಪಿಲ್ಲಿಯಾಗುತ್ತಿದ್ದುದು. ಚಲಿಸದ ಫ್ಯಾನನ್ನೋ! ಮುಚ್ಚಿದ ಕಿಟಕಿ; ಬಾಗಿಲುಗಳನ್ನೋ; ಹೆಂಡತಿಯ ಬಿಸಿಯುಸಿರನ್ನೋ ಬಯ್ಯುತ್ತಿದ್ದೆ. ಯಾವ ಚಿಮುಟಿಗೂ ಅವನ ವ್ಯಕ್ತಿತ್ವ ಸಿಕ್ಕದಾಗಿತ್ತು. ಅಕ್ಷರದ ಅಭಯಹಸ್ತಕ್ಕೆ ನಿಲುಕದೆ ದೂರ ಬಹುದೂರ ಸರಿದುಬಿಡುತ್ತಿದ್ದ ಮೃಗಜಲದಂಥ ಅವನ ಸತ್ತ ನಂತರವೇ ಅರ್ಥವಾದದ್ದು. ಜೇಡರ ಬಲೆಯಂಥ ಅವನ ನೆನಪಿನಿಂದ ನಾನು ಬಿಡುಗಡೆಯಾಗಬೇಕಾದರೆ ಅವನ ಕರುಳಿಗೆ ಸಂಬಂಧಿಸಿದ ಎಲ್ಲರೂ ನನ್ನ ಕಣ್ಣ
——————-

೧೯೪
ಪರಿಧಿಯಿಂದ ಬಹು ದೂರ ಹೋಗಿಬಿಡಬೇಕು, ಅಪ್ಪ ಅವರ ಚರಾಸ್ತಿ ಕೊಳ್ಳುವುದರ ಮೂಲಕ ಅವರವರ ದಾರಿ ಹಿಡಿಯಬೇಕು. ಕಣ್ಣಿಗೆ ಕಂಡಿದ್ದೆಲ್ಲ ತನ್ನದಾಗಬೇಕೆಂಬ ಹಠದ ಅಪ್ಪ ನನ್ನ ಆಲೋಚನೆಯ ಚದುರಂಗದಾಟಕ್ಕೆ ದಾಳವಾಗಿದ್ದ. ಆ ಅದ್ಭುತ ದಾಳದ ಚಲನೆಗೆ ನನ್ನ ಶಕ್ತಿಯ ಅಗತ್ಯವಿರಲಿಲ್ಲ. ತನ್ನ ಪಾಡಿಗೆ ತಾನು ನಿರಂತರವಾಗಿ; ನಿರ್ವಿರಾಮವಾಗಿ ಚಲಿಸುವ ದಾಳ ಅದಾಗಿತ್ತು. ರಕ್ತ ಹಂಚಿಕೊಂಡಿರುಚ ನೆಪದಲ್ಲಿ ಅದರೊಂಡಿಗೆ ನಾನೂ ಕದನ ಕುತೋಹಲತನದಿಂದ ನಾನೂ ಚಲಿಸುತ್ತಿದ್ದೆ. ಜಮೀನ್ದಾರಿಕೆ ಗತ್ತು ಠೇಂಕಾರಗಳನ್ನು ಮತ್ತದರ ವರಸೆಗಳನ್ನು ಕಲಿಸುವುದಕ್ಕಾಗಿಯೇ ಅಪ್ಪ ಸದಾ ನನ್ನನ್ನು ತನ್ನ ಹಿಂದಿಟ್ಟುಕೊಂಡಿದ್ದ. ಈಶ್ವರನ ಮುಂದೆ ಬಸವನಂತೆ; ಮಾಕಾಂಬಳಮ್ಮನ ಹಿಂದಿನ ಬನ್ನಿ ಮರದಂತೆ; ಚಹದಂಗಡಿ ಮುಂದಿನ ಬೀಡಿ ಅಂಗಡಿಯಂತೆ ಒಮ್ಮೊಮ್ಮೆ ನನ್ನ ಅಂತರಂಗ ಮಸೀದಿಯಂತೆ ಬಿಕೋ ಎನ್ನುತ್ತಿತ್ತು. ಬಿಕೋತನವನ್ನು ಧ್ಯಾನಮುದ್ರೆಯಿಂದ ಪರಿಗ್ರಹಗೊಳಿಸುತ್ತಿದ್ದೆ.
ಹಗಲೆಲ್ಲ ಹೊಲ ಮೇರೆಗಳಲ್ಲಿ; ತಿಟ್ಟೆ ತಗ್ಗುಗಳಲ್ಲಿ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ತಮ್ತಮ್ಮ ಕೊಟ್ಟಿಗೆಗಳಿಗೆ ಮರಳುವಾಗ ಎಬ್ಬಿಸಿದ ಧೂಳು ಆ ಸಂಜೆಯ ಹೊಂಬೆಳಕಲ್ಲಿ ಕಾವ್ಯಮಯವಾಗಿತ್ತು. ಎದ್ದಿದ್ದ ಅದು ನಿಧಾನವಾಗಿ ನೆಲವನ್ನು ತಬ್ಬಿಕೊಳ್ಳುವ ಕ್ಷಣಾದಲ್ಲಿ ಅಪ್ಪ ಅವರ ಮನೆಗೆ ಹೊರಡುವಾಗ ಸಂಗಡ ನನ್ನನ್ನೂ ಕರೆದೊಯ್ದು – ಅದಕ್ಕೂ ಮೊದಲು ನಿಂಗಮ್ಮಜ್ಜಿ “ಅಲಲಲಾ” ಅಂತು. ಆಗ್ರಾಕ್ಕೆ ಹೋಗಿ ಗೂಬೆ ತಂದಂಗಾಯ್ತಲ್ಲಾ ಅಂತು. ಇದೆಲ್ಲ ನೋಡಾಕೆ ಯಾಕೆ ಬೊದಕಿರಬೇಕಪ್ಪಾ … ಎಂದು ನಿಟ್ಟುಸಿರುಬಿಟ್ಟಿತು. ಇದನ್ನೆಲ್ಲ ಲೆಕ್ಕಿಸದೆ ನಾವು ಅವರ ಮನೆಗೆ ಹೋದೆವು. ಪ್ರಾಚೀನ ಸ್ಮಾರಕದಂತಿದ್ದ ಆ ಮನೆಯನ್ನು ಪ್ರವೇಶಿಸಿದ್ದು ನನ್ನ ಬದುಕಿನ ಅಪರೂಪದ ಕ್ಷಣಗಳಲ್ಲಿ ಒಂದು. ನಾವು ಹೋಗುತ್ತಲೆ ಅಲುಮೇಲಮ್ಮಜ್ಜಿ “ರಾಮ ರಾಮ” ಅಂತ ಮರೆಗೆ ಸರಿದುಕೊಂಡರೆ ವರಲಕ್ಷಮ್ಮ “ಶಿವ ಶಿವ” ಆಂತ ಹೊರಗೆ ಕಾಣಿಸಿಕೊಂಡಳು. ಗೌರವದಿಂದ ಮಾತಾಡಿಸಿ ಕೂಡ್ರಲು ಪೀಠ ಹಾಕಿದಳು. ನಾವು ಕೂತುಕೊಂಡ ನಂತರ ಕಾಫಿ ತಂದುಕೊಟ್ಟಳು. ಹತ್ತಿರ ಬಂದ ಪರಮೇಶ ಅಶ್ವಥ್ ನಾರಾಯಣರ ಮೈದಡವಿದ ಅಪ್ಪ, ಬಾಗಿಲ ಪರದೆಯ ಮರೆಯಲ್ಲಿ ಆಕೆ ತಮ್ಮ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದಳು. ಪುರುಷ ಪ್ರಧಾನ ಸಮಾಜವ್ಯವಸ್ಥೆಯ ವಿರುದ್ಧ ನೊಂದ ಮಹಿಳೆ ನಿರ್ಭಿಡೆಯಿಂದ ಮಾತಾಡುತ್ತಿರುವಂತೆ ಭಾಸವಾಯಿತು. ಸೊಸೆಯಾಡುತ್ತಿದ್ದುದನ್ನೆಲ್ಲ ಮರೆಯಲ್ಲಿ ಅಡಗಿದ್ದ ಮುದುಕಿ ಗುಟ್ಟಾಗಿ ಕೇಳಿಸಿಕೊಳ್ಳುತ್ತಿದ್ದುದು ಅದು ಪ್ರ್ತಿಕ್ರಿಯಿಸಿದಾಗ ಬಯಲಿಗೆ ಬಿತ್ತು.
‘ನಮೋ ಸ್ವ್ತನಂತಾಯ ಸಹಸ್ರ ಮೂರ್ತಯೆ’ ಅಂತ ಒಂದು ನಿಟ್ಟುಸಿರು ಬಿಟ್ಟಿತು. ಸಹಸ್ರ ಪಾದಾಕ್ಷಿ ಶಿರೋರು ಬಾಹುವೇ ಅಂತ ಗಂಟಲು ಸರಿಪಡಿಸಿಕೊಂಡಿತು. ಶ್ರೀ ಸಹಸ್ರ ಕೋಟಿ ಯುಗ ಧಾರಿಣೀ ನಮಃ ಅಂತ ಮಾತು ಆರಂಭಿಸಿ ಬಿಟ್ಟಿತು.
“ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ವೋ ಹಾಲಣ್ಣನವ್ರೇ … ಈ ನರಜನ್ಮದಲ್ಲಿ ಇದನ್ನೆಲ್ಲ ಅನುಭವಿಸೋಕೆ! ನೀವು ನೋಡದೆ ಇರೋದೇನಿದೆ? ಅವರನೂ ಕಳೆದುಕೊಂಡೆ ಇದ್ದೊಬ್ಬ ಮಗನನ್ನೂ ಕಳಕೊಂಡೆ … ಮೊಮ್ಮಕ್ಕಳನ್ನು ಆಡಿಸೋ ಭಾಗ್ಯನೂ ಕಳಕೊಂಡು ಹೇಗಪ್ಪಾ ಬದುಕೋದು”
ಅತ್ತೆಯಾಡಿದ ಮಾತು ಕೇಳಿ ಸೊಸೆ ತನ್ನ ಮುಖದಲ್ಲಿ ಪುಜಾಂ ದ್ರವಿಣಂ ಬ್ರಹ್ಮವರ್ಚಸ್ಸು ಆವಹಿಸಿಕೊಂಡು,
———————–

೧೯೫
“ಹಾಲಣ್ಣಾ, ಮಾವನವರು ಬೇರೆ ಅಲ್ಲ ನೀವು ಬೇರೆ ಅಲ್ಲ ಅಂತ ಒಂದು ಮಾತು ಹೇಳ್ತೀನಿ … ನಾನು ಪಟ್ಟ ಕಷ್ಟದಲ್ಲಿ ಇವರು ತಿಲ ಮಾತ್ರ ಕಷ್ಟಪಟ್ಟಿರುವರೇನು? ದೈನಾತಿ ದೈನ್ಯದಿಂದ ಬದುಕಿದ್ದನ್ನು ನೀವೇ ಕಣ್ಣಾರೆ ನೋಡಿರುವಿರಿ … ಅವರು ಮಾಡಿದ ಕರ್ಮಕ್ಕೆ ನಮ್ಮನ್ನೆಲ್ಲ ಬಲಿ ಮಾಡಿ ಅವರು ಹೊರಟು ಹೋದರು. ಈ ಪುಟಗೋಸಿ ಮನೆ ಇರೋ ನೆಪಕ್ಕೆ ಇಲ್ಲೆ ಇದ್ದುಕೊಂಡು ಅದ್‍ಹೇಗ್ರಿ ಮಕ್ಕಳನ್ನು ಜೋಪಾನ ಮಾಡ್ಲಿ … ನಾನೇನು ಇವರನ್ನು ಕೈಬಿಡ್ತೀನಾ … ಅತ್ತೆ ಅಂದ್ರೂ ಇವರೇ … ತಾಯಿ ಅಂದ್ರೂ ಇವರೇ ಅಲ್ವಾ?”
“ನನ್ನ ತಾಯಿ ಅಂತ ತಿಳಿದುಕೊಂಡವಳಾಗಿದ್ರೆ ಗಂಡ ಸತ್ತ ಒಂದು ವಾರಕ್ಕೆ ಕೋರ್ಟು ಕಛೇರಿ ಅಂಥ ಅಲೆದು ಈ ಮನೇ ಮಠನೆಲ್ಲ ನಿನ್ನ ಹೆಸರಿಗೆ ಮಾಡಿಸ್ಕೊಳ್ಳುತ್ತಿದ್ದೇ ಏನು?”
“ನಾನು ಧೈರ್ಯದಿಂದ ಅಡ್ಡಾಡಿ ಮಾಡಿಸಿಕೊಳ್ಳದಿದ್ದಲ್ಲಿ ಇರೋ ಒಂದು ಮನೆ ಆ ದುಗ್ಗಾಣಿ ಸೂಳೆಯ ಪಾಲಾಗ್ತಿತ್ತು … ನಾನೂ ನನ್ನ ಮಕ್ಕಳೂ ಕೆರೆನೋ ಭಾವೀನೋ ನೋಡಿಕೊಳ್ಳಬೇಕಿತ್ತು” ಎಂದು ವರಲಕ್ಷ್ಮಮ್ಮ ಸೆರಗನ್ನು ಮೈತುಂಬ ಹೊದ್ದು ಎರಡು ಕಣ್ಣುಗಳನ್ನು ಮಾತ್ರ ಪಿಳಿಪಿಳಿ ಬಿಡತೊಡಗಿದಳು.
ಅತ್ತೆ ಸೊಸೆಯರಿಬ್ಬರಾಡಿದ ಮಾತುಗಳನ್ನು ತೂಗಿ ನೋಡಿದೆ. ಸಮರ್ಥನೀಯವಾಗಿದ್ದವು. ಎಲ್ಲ ಆಸರೆಗಳಿಂದ ವಂಚಿತಗೊಳ್ಳುತ್ತ್ತಿರುವ ಅಸಹಾಯಕತೆಯಿಂದ ಅಲುಮೇಲಮ್ಮಜ್ಜಿ ವಿಲವಿಲನೆ ಒದ್ದಾಡುತ್ತಿದ್ದಳು. ಎಲ್ಲ ಸಂಭಂಧಗಳನ್ನು ಕಡಿದುಕೊಂಡು ಕರುಳ ಕುಡಿಗಳೊಂದಿಗೆ ಬದುಕನ್ನು ಜೋಡಿಸುವ ಒತ್ತಡದಿಂದ ವರಲಕ್ಷ್ಮಮ್ಮ ವೈಧವ್ಯ ಪ್ರಾಪ್ತವಾದ ಮರುಕ್ಷಣದಿಂದ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಕಠೋರವಾಗಿ ವರ್ತಿಸುತ್ತಿದ್ದಳು.
ಬೆಣ್ಣೆ ತೂಗುವ ಪ್ರಾಣಿ ಬುದ್ಧಿಯ ಜಾಟಗೆರೆ ಸತ್ಯಪ್ಪನ ಸಹಾಯ ಹಸ್ತ ಯಾಚಿಸಿದ್ದು ಈಕೆ ಮಾಡಿದ ದೊಡ್ಡ ತಪ್ಪು. ಜಿಡ್ಡು ಹಸ್ತದ ಸತ್ಯಪ ಎಂಥವನೆಂಬುದು ಸಮಸ್ತ ಊರಿಗೆಲ್ಲ ಗೊತ್ತಿರುವ ಸಂಗತಿ. ಮಹಾ ದೈವಾಂಶ ಸಂಭೂತನಂತೆ ಸೂರ್ಯೋದಯಕ್ಕೆ ಪೂರ್ವದಿಂದಲೇ ವರ್ತಿಸುವುದಕ್ಕೆ ಶುರು ಮಾಡುವ ಆ ಸಜ್ಜನ ಮೈಬಗ್ಗಿಸಿ ಎಂದೂ ದುಡಿದವನಲ್ಲ. ಈ ಕಡೆಯ ಕಸವನ್ನು ಆ ಕಡೆ ಹಾಕಿದವನಲ್ಲ. ಆದರೂ ಎಲ್ಲರಿಗಿಂತ ಸುಖವಾಗಿರುವ ನರಮಾನ್ನವನೆಂದರೆ ಅವನೊಬ್ಬನೆ.
‘ಆಗಿರೊದಾದರೂ ಏನು? ಸ್ವಲ್ಪ ತಡಿ’ ಅಂತ ಓಣಿಯ ಕೆಲವರು ಆಕೆಯನ್ನು ಅವನ ಬಳಿಗೆ ಹೋಗದಂತೆ ತಡೆಯಲೆತ್ನಿಸಿದರು. ನಿಷ್ಟುರವಾದಿ ವರಲಕ್ಶ್ಮಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ, ಯಾವ ಗಾಳಿಗೂ; ಯಾವ ಚಳಿಗೂ ಹೆದರದೆ ನೀರಿನಲ್ಲಿ ಮುಳುಗಿದವಳಂತೆ ವರ್ತಿಸಿದಳು. ಇವರೂ ಸಹಾಯ ಮಾಡೊಲ್ಲ! ಮಾಡಬೇಕೆಂದೋರನ್ನೂ ಬಿಡೊದಿಲ್ಲ ಎಂದು ಗೊಣಗಿದಳು. ಅವನು ಮಹಾ ಕಚ್ಚೆ ಹರುಕ … ಅದ್ಯೇನೆ ಅವನು ಆ ಹೆಸರಿಟ್ಟುಕೊಂಡಿರೋದು ಎಂದೊಬ್ಬರಾಡಿದ ಮಾತು ಕೇಳಿದ ಮರು ದಿನವೇ ತನ್ನ ದೂರದ ಸಂಭಂದಿ ವೆಂಕಟರಮಣಪ್ಪನೊಂದಿಗೆ ಶೃಂಗೇರಿಗೆ ಹೋಗಿ ಕೇಶವಿಹೀನಳಾಗಿ ಊರಿಗೆ ಮರಳಿದ್ದಳು. ನಿಲುಗನ್ನಡಿ ಮುಂದೆ ಕಾಲು ತಾಸು ನಿಂತುಕೊಂಡು ತನ್ನೀ ರೂಪ ಯಾವ ಗಂಡಸಿನಲ್ಲೂ ಕಾಮವಾಂಛೆಯನ್ನುಂಟು ಮಾಡಲಾರದೆಂಬ ಆತ್ಮವಿಶ್ವಾಸ ತಳೆದಿದ್ದಳು. ಯಾವ್ಯಾವ ಪೌರಾಣಿಕ ಹೆಂಗಸನ್ನು ತಡೆವಿ ಯಾವ್ಯಾವ ಪೌರಾಣಿಕ ಪುರುಷ ಶಾಪಕ್ಕೀಡಾದನು ಎಂಬಿವೇ ಮೊದಲಾದ ಕಥೆಗಳನ್ನು ಬಾಯಿಪಾಠ ಮಾಡಿಕೊಂಡಿದ್ದ ಸತ್ಯಪ್ಪ ಪ್ರಯಾಣ ಮಾಡುವಾಗಲೆಲ್ಲ ನೆನಪು ಮಾಡಿಕೊಳ್ಳುತ್ತ ಮತ್ತು ಪ್ರಸ್ತಾಪಿಸುತ್ತ ಪವಿತ್ರ ವಿಧವೆಯನ್ನು ಕಟ್ಟಿಕೊಂಡು ಈ ಊರಿನಿಂದ ಆ
———————–

೧೯೬
ಊರಿಗೆ; ಆ ಊರಿನಿಂದ ಈ ಊರಿಗೆ ಅಲೆದಾಡಿದ. ಕೆಲವು ಕಡೆ ಒಂದೆರಡು ರಾತ್ರಿ ಆತ ಆಕೆಯೊಡನೆ ಒಂಟಿಯಾಗಿ ಕಳೆದಿರುವುದುಂಟು. ಆದರೆ ಜಖಂ ಮಾಡುದುದಿಲ್ಲ. ಅಕ್ಕಾ; ಅಮ್ಮಾ; ತಾಯಿ; ತಂಗೀ ಎಂದು ಸಂಭೋದಿಸುವವನು ಜಖಂ ಮಾಡುವುವುದಾದರೂ ಹೇಗೆ? ಕಾಮವಾಂಛೆಗೆ ಸಂಬಂಧಿಸಿದಂತೆ ಉತ್ತಮಪುರುಷದಲ್ಲಿ ಹೇಳುವುದಾದರೆ ಮೇಲುಪ್ಪರಿಗೆ ಮನೆಯ ಸತ್ಯಪ್ಪನೆಂಬ ದ್ವಿಪಾದಿಯು ಪರಾಕಾಷ್ಟೆ ತಲುಪಿದಾಗ ಗಾರ್ಧಬಿಣಿ, ಮಹಿಷಿಣಿಯೇ ಮೊದಲಾದ ಚತುಷ್ಪಾದಿಗಳನ್ನು ಬಿಟ್ಟಲ್ಲಿ ಯಾವುದೇ ನಿಷ್ಪ್ರಯೋಜಕ ವಾದ್ಯದಲ್ಲೂ ಅಪರೂಪದ ನಾದ ಹೊರಡಿಸಿ ಸವಿಯಬಲ್ಲ ಮಹಾ ಚತುರ ಸತ್ಯಪ್ಪ ಪ್ರತಿವಾಕ್ಯದಲ್ಲಿ ಗೌರವ ವಿಶೇಷಣಗಳನ್ನು ನಿರಾತಂಕವಾಗಿ ಪ್ರಯೋಗಿಸುತ್ತಿದ್ದುದುದನ್ನು ನೋಡಿ ಜನ ದಿಗ್ಭ್ರಮಿತರಾಗಿದ್ದುಂಟು. ಒಪ್ಪಂದದ ಮೇರೆಗೆ ಒಂದು ಕೈನೋಡಿಕೊಂಡಿರುತ್ತಾನೆಂದು ವಿನಾಕಾರಣ ಆಡಿಕೊಂಡರು. ಆ ಬಗ್ಗೆ ಪ್ರಸ್ತಪಿಸಿದರೆ ಸತ್ಯಪ್ಪನ ಮನಸ್ಸಾಕ್ಷಿ ಖಂಡಿತ ಇಲ್ಲ ಎಂದು ಹೇಳುತ್ತದೆ. ಹೌದು! ಅದು ಹೇಳುವುದು ಸರಿ! ಕೀ|| ಶೇ|| ಪರಮೇಶ್ವರ ಶಾಸ್ತ್ರಿಗಳು ಅವನ ದರಿದ್ರ ನೋಡಲಾರದೆ ಕೇವಲ ನೂರ ಒಂದು ರುಪಾಯಿಗೆ ತೆಂಗಿನಕಾಯಿ ಮಂತ್ರಿಸಿ ಅವನ ಮನೆಯ ತಲೆ ಬಾಗಿಲಿಗೆ ಕಟ್ಟದಿದ್ದಲ್ಲಿ ಅವೆನೆಲ್ಲಿ ಈ ಮಟ್ಟಕ್ಕೆ ತಲುಪುತ್ತಿದ್ದ? ಆ ನೆನಪಿಗೆ ಅವನು ಶಾಸ್ತ್ರಿಗಳ ಭಾವಚಿತ್ರವನ್ನು ಪಡಸಾಲೆಗೆ ನೇತು ಹಾಕಿಕೊಂಡಿರುವನು. ‘ಏನಯ್ಯಾ? … ನಮ್ಮ ಮೊಮ್ಮಕ್ಕಳಾದ ಶಾಮಾಶಾಸ್ತ್ರಿಗಳ ವಿವಾಹ ಮಹೋತ್ಸವಕ್ಕೆ ಕಾಣಿಕೆ ಏನು ಕೊಡುತ್ತೀಯಾ?’ ಎಂದು ಶಾಸ್ತ್ರಿಗಳು ಕೇಳಿದ್ದಕ್ಕೆ ಸಾವಿರದಾ ಒಂದು ಎಂದುಬಿಟ್ಟಿದ್ದನು. ಹಾಗೆಯೇ ತಳಿರು ಚಪ್ಪರದ ಕೆಳಗೆ ಕಾಣಿಕೆ ಒಪ್ಪಿಸಿ ಪರಮಾನ್ನ, ಪುಳಿಯೋಗರೆ ಉಂಡು ಹತ್ತು ಹೆಜ್ಜೆಗೊಮ್ಮೆ ಡೆಗುತ್ತ ಮರಳಿ ಮನೆತುಂಬ ಧನ್ಯತಾಭಾವ ಪಸರಿಸಿದ್ದನು. ಹೀಗಾಗಿ ಸತ್ಯಪ್ಪ ವೈಯಕ್ತಿಕವಾಗಿ ಎಷ್ಟೇ ಬ್ರಷ್ಟನಿದ್ದರೂ ಶಾಸ್ತ್ರಿಗಳ ಕುಟುಂಬದ ಸರ್ವ ಸದಸ್ಯರ ಮೇಲೆ ಎಣೆ ಇಲ್ಲದಷ್ಟು ಗೌರವ ಇಟ್ಟುಕೊಂಡಿದ್ದನು. ‘ನಿಮ್ಮ ಮದುವೆಗೆ ಯಾರೂ ಕೊಡದಷ್ಟು ಕಾಣಿಕೆ ಕೊಟ್ಟಿರೋನು ಕಣಪ್ಪ … ಅದಕ್ಕೆ ಒಂದು ಮಾತ್ನ ಕೇಳ್ತಿದ್ದೀನಿ. ಇದೆಲ್ಲ ನಿಮ್ಮಂಥ ಬ್ರಾಂಬ್ರಿಗೆ ಸರಿಹೋಗಲ್ಲ ಬಿಟ್ ಬಿಡಿ’ ಎಂದು ಜಿಲ್ಲಾ ಮುಖ್ಯ ಸ್ಥಳದ ಮುಖ್ಯ ಬೀದಿಯಲ್ಲಿ ಶಾಮಾಶಾಸ್ತ್ರಿಗೆ ಬುದ್ಧಿ ಹೇಳಿದಂಥವನು ಮತ್ತು ಅವನಿಂದ “ಏನಪ್ಪ ನಿನ್ನ ತಿಪಟೂರುಕಡೆ ಬುದ್ಧಿ ನನ್ನ ಹತ್ರ ತೋರಿಸಬೇಡಪ್ಪ … ನಿನ್ನ ಎಲೆಯೊಳಗೆ ಕತ್ತೆ ಸತ್ತಿರೊದ್ನ ಬಿಟ್ಟು ನನ್ನ ಎಲೇಲಿರೊ ನೊಣದ ಬಗ್ಗೆ ಹೇಳೋಕೆ ಬಂದಿದ್ದೀಯ” ಎಂದು ಮುಂತಾಗಿ ವಾಮಾಚಾರವಾಗಿ ಬಯ್ಯಿಸಿಕೊಂಡವನು. ನನ್ನ ಮುಂದೆ ನನಗಿಂತ ಚಿಕ್ಕವರು ಸಾಯೋದನ್ನು ನೋಡಲಿಕ್ಕಾಗದೆ ಬುದ್ಧಿ ಹೇಳಿದೆ ಎಂದೊಂದು ದಿನ ಪಶ್ಚಾತ್ತಾಪಪಟ್ಟ ತಿಪಟೂರು ಮೂಲದ ಮೇಲುಪ್ಪರಿಗೆ ಮನೆಯ ಸತ್ಯಪ್ಪ ಶವಸಂಸ್ಕಾರಕ್ಕೆಂದು ಓಡಿ ಬಂದಾಗ ಕಣ್ಣ ತುಂಬ ನೀರು ತಂದುಕೊಂಡಿದ್ದನು. ದೈವಾಂಶ ಸಂಭೂತರಾದ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ ಶಾಮಾ ಶಾಸ್ತಿಗಳು ಸತ್ತ ಮೇಲೆ ಶೂದ್ರರಿಗಿಂತ ಅತ್ತತ್ತವಾಗಿ ಶವ ಸಂಸ್ಕಾರ ಮಾಡಿಸಿಕೊಳ್ಳಬೇಕಾಗಿ ಬಂದಿತಲ್ಲ … ಅವರೇನು ಪಾಪ ಮಾಡಿದ್ರು? … ಇದನ್ನೆಲ್ಲ ಅನುಭವಿಸೋಕೆ ನೀನಿನ್ನು ಬದುಕಿದ್ದೀಯಲ್ಲ ತಾಯಿ” ಎಂದು ವರಲಕ್ಶ್ಮಮ್ಮನೆದುರು ಸ್ವಾಂತನ ಹೇಳಿದ್ದನು. “ಅವರು ಸತ್ತು ಲೌಕಿಕ ವ್ಯವಹಾರ ಚುಕ್ತಾ ಮಾಡಿಕೊಂಡ್ರು … ನಮ್ಮದಿನ್ನು ಯಾವತ್ತೋ” ಎಂದು ನಿಟ್ಟುಸಿರುಬಿಟ್ಟ
—————————-

೧೯೭
ಆಕೆಗೆ “ಹೆದರಬೇದ ತಾಯಿ ನೀವು ಗಂಡಸಿನಂತೆ ಬದುಕುವಂತಾಗಬೇಕು. ಇದ್ಕೆ ನನ್ನಿಂದ ಯಾವ ಸಹಾಯವನ್ನದ್ರೂ ಪಡೀಬೌದು” ಎಂದು ಹೇಳಿ ಬಂದಿದ್ದನು. ಇಷ್ಟೊಂದು ಹಿನ್ನೆಲೆ ಇರುವ ಸತ್ಯಪ್ಪ ವರಲಕ್ಶ್ಮಮ್ಮನ ಕಡೆಗೆ ಕೆಟ್ಟ ಕಣ್ಣಿನಿಂದ ನೋಡುವವನಾದರೂ ಹೇಗೆ?
ಈತನ ಪ್ರತ್ನಕ್ಕಿಂತ ಮುಖ್ಯವಾಗಿ ವರಲಕ್ಶ್ಮಮ್ಮ ಬ್ರಾಹ್ಮಣಳಾಗಿದ್ದುದು; ಗಂಡನನ್ನು ಕಳೆದುಕೊಂದ ಕೆಲವೇ ದಿನಗಳಲ್ಲಿ ಕೇಶವಿಹೀನಳಾಗಿ ನಾರುಮಡಿಯುಟ್ಟಿದ್ದುದು ತುಂಬಾ ಸಹಾಯಾಕ್ಕೆ ಬಂದಿತು. ಅದೂ ಅಲ್ಲದೆ ಪ್ರತಿಯೊಂದು ಆಫೀಸು, ಕಛೇರಿಗಳಲ್ಲಿ ಎಲ್ಲಿ ನೋಡಿದರೂ ಬ್ರಾಂಹ್ಮಣ ಸಂಜಾತರೇ ತುಂಬಿಕೊಡಿದ್ದುದು ಹೆಚ್ಚಿನ ಸಹಾಯಕ್ಕೆ ಬಂದಿತು. ಸತ್ಯಪ್ಪನ ಸುಗಂಧಯುಕ್ತ ಮಾತುಗಳು ಬೇರೆ .. ಇದೆಲ್ಲ ಒಳ್ಳೆಯ ಪರಿಣಾಮ ಬೀರದೆ ಇರಲಿಲ್ಲ. ಅಯ್ಯೋ ಪಾಪ ಎನ್ನುವವರೆಷ್ಟೋ? ನಾವು ನಮ್ಮವರಿಗೆ ಸಹಾಯ ಮಾಡದಿದ್ರೆ ಹೇಗ್ರಿ ಎನ್ನುವವರೆಷ್ಟೊ? ಹೀಗಾಗಿ ಕೊಡಲೀಲಿ ಹೋಗೋ ಕೆಲಸ ಉಗರಿಂದಾಯಿತು.
ಅಂದ ಮಾತ್ರಕ್ಕೆ ಸತ್ಯಪ್ಪ ವರಲಕ್ಷ್ಮಮಗಷ್ಟೇ ನಿಷ್ಠನಾಗಿರಲಿಲ್ಲ. “ಹೀಗೆಲ್ಲ ಮಾಡ್ತಾ ಇದ್ದೀನಿ ಅಮ್ಮಾ … ಇದ್ಕೆ ನಿಮ್ಮ ಅಭ್ಯಂತರವಿಲ್ಲವಷ್ಟೆ” ಅಂತ ಮಾತೋಶ್ರೀ ಅಲುಮೇಲಮ್ಮನವರನ್ನು ಸಂಧಿಸಿದ್ದ. ಅವನ ಮುಖದರ್ಶನ ಮಾಡಿಕೊಳ್ಳುತ್ತಲೆ ಆಕೆ ವಯ್ಯವಯ್ಯಂತ ವಾಂತಿ ಮಾಡಿಕೊಂಡು ಬಿಟ್ಟಿದ್ದಳು. ಸೂತಕ ಹೋಗಲಾಡಿಸಲಿಕ್ಕೇನು ಮಾಡುವುದಪ್ಪಾ ಅಮ್ಮಾ … ಎಂದು ಪೇಚಾಡಿದ್ದಳು. ಇದರಿಂದ ತಿಲಮಾತ್ರ ಬೇಸರಕ್ಕೀಡಾಗಲಿಲ ಸತ್ಯಪ್ಪ … ದೊಡ್ಡವರು ಯಾವಾಗ್ಲೂ ಹೀಗೆಯೇ ಎಂದುಕೊಂಡುಬಿಟ್ಟ …
“ನನ್ ಮಾತ್ರ ಅಪಾರ್ಥ ಮಾಡ್ಕೋಬೇಡಿ ಅಮ್ಮಾ … ಹಿರೇ ಶಾಸ್ತ್ರಿಗಳ ಋಣದಲ್ಲಿರೋನು ನಾನು … ತಾಯಿ ಸಮಾನರಾದ ನಿಮ್ಮ ಮನ ನೋಯ್ಸಿ ನಾನ್ಯಾವ ನರಕಕ್ಕೆ ಹೋಗ್ಲಿ … ವರಲಕ್ಷಮ್ಮನವರಿಗೂ ಹಕ್ಕಿರುವಂತೆ ಯಾವತ್ತೂ ಆಸ್ತಿಮೇಲೆ ನಿಮ್ಗೂ ಹಕ್ಕಿದೆ. ಎಷ್ಟಿದ್ರೂ ನೀವು ಶಾಮಣ್ಣನ್ನ ಹೆತ್ತೋರು” ಎಂದು ತೂಕದ ಮಾತುಗಳನ್ನಾಡಿದ.
ಅದರಿಂದ ಅಲುಮೇಲಮ್ಮ ಎಷ್ಟೊ ಕರದಿಬಿಟ್ಟಳು.
“ಅರ್ಥ ಆಯ್ತಪ್ಪಾ… ನೀನು ಹೇಳೋದು ಲೌಕಿಕವಾಗಿ ಸರಿ ಇರಬೌದು … ಕಾಗದ ಪತ್ರಗಳಿಗೆ ಸಹಿ ಹಾಕಿ ನಾನ್ಯಾವ ನರಕಕ್ಕೆ ಹೋಗ್ಲಿ … ಬೇಡ … ಬೇಡ … ಹೆಂಡತಿ ಅಂಬೋಳೆ ಎಲ್ಲಾ ಅನುಭವಿಸ್ಲಿ … ನನಗೆ ನನ್ನ ಮಗನ ಕವಡೆ ಕಾಸುಬೇಡ” ನೊಂದ ಮನಸ್ಸಿನಿಂದ ಬಿಲ್ಕುಲ್ ನುಡಿದಿಬಿಟ್ಟಿದ್ದಳು ಆ ವೃದ್ಧೆ.
ಪ್ರಾರಬ್ಧ ಬಗೆಹರಿಯಿತೆಂದು ಸತ್ಯಪ್ಪ ಮನೆಗೆ ಮರಳಿದವನೆ ತಲೆ ಸ್ನಾನ ಮಾಡಿ ಅಂದು ಶನಿವಾರವಾದ್ದರಿಂದ ಹನುಮಂತ ದೇವರ ಗುಡಿಗೆ ಹೋಗಿ ತುಪ್ಪದ ದೀಪ ಮುಡಿಸಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ ” ನನ್ನದೇನೇ ತಪ್ಪಿದ್ರು ಹೊಟ್ಟೇಲಿ ಹಾಕಿಕೊಂಡು ಕಾಪಾಡು ಪ್ರಾಣದೇವರೇ” ಎಂದು ನಿರುಮ್ಮಳವಾಗಿದ್ದುಬಿಟ್ಟಿದ್ದನು.
ಅತ್ತೆ ಸೊಸೆಯರ ನಡುವೆ ರಾಜಿ ಕುದುರಿಸಲು ಅಪ್ಪ ಹಲವು ರೀತಿಯ ಪ್ರಯತ್ನ ಮಾಡಿದ. ವಿಧವೆಯರು ನಿಟ್ಟುಸಿರು ಬಿಡುವಂತಾಗಬಾರದೆಂಬುದೇ ಆತನ ಧ್ಯೇಯವಾಗಿತ್ತು. “ರಂಡಮುಂಡೇರು ಕಣ್ಣೀರು ಹಾಕಿದ್ರೆ ಈ ದೇಶಕ್ಕೆ ಒಳ್ಳೇದಾಗೋದಿಲ್ಲ” ಅಂತ ಆತ ಮಾತು ಮಾತಿಗೆ ಅಂತಿದ್ದ. ಆದರೆ ನಮ್ಮವರೇ ಆಗಿದ್ದ ಮುವ್ವರು ರಂಡೆಮುಂಡೆಯರಿಗೂ ಆತನಿಗೂ ಆಗುತ್ತಿರಲಿಲ್ಲ. ಅವರ ಹೆಸರು ಎತ್ತಿದರೆ ಮುಂಗುಸಿಯಂತೆ ಸಪರ್ ಸದ್ದು ಮಾಡುತ್ತಿದ್ದುದು ವಿಚಿತ್ರವಾಗಿತ್ತು.
———————–

೧೯೮
ವಂಶ ಸರ್ವನಾಶಣವಾಗಬಾರದೆಂಬ ಸದುದ್ದೇಶದಿಂದನಿಂಗಮ್ಮಜ್ಜಿ ಆ ಮನೆಯನ್ನು ನಮ್ಮ ಅಪ್ಪ ಯಾ ತನ್ನ ಏಕಮಾತ್ರ ಅಳಿಯ (ಅಳಿಯ ಅಂದರೂ ಅವನೆ; ಮಗ ಅಂದರು ಅವನೆ) ಖರೀದಿಸದಂತೆ ರಚಿಸಿದ್ದ ಅನೇಕ ವ್ಯೂಹಗಳನ್ನು ಲೀಲಾಜಾಲವಾಗಿ ಭೇದಿಸಿ ಮುನ್ನಡೆಯುತ್ತಿದ್ದ ಆ ಧೀರ್ಘ ಕಾಯನನ್ನು (ಅಭಿಮನ್ಯು ಕಾಳಗದಲ್ಲಿ ಸೈಂಧವನ ಪಾತ್ರ ಮಾಡಿ ಫೇಮೋಸಾಗಿದ್ದ) ತಡೆಯುವವರಾರು? ಅತ್ತೆ ಸೊಸೆಯರ ನಡುವೆ ರಾಜಿಕುದುರಿಸಲು ಸತ್ಯಪ್ಪನ ನೆರವು ಪಡೆದರೆ ವಾಸಿ ಎಂದು ಸಂಸಾರ ಸಾಗರಕ್ಕೆ ರೋಸಿ ಭೋಧೆ ಸ್ವೀಕರಿಸಲು ಗುರುಸಾಂತಪ್ಪ ಸಲಹೆ ಮಾಡಿದ ಕೋಡಿಹಳ್ಳಿ ದೊಂಬಿ ಖಟ್ಲೆಯಲ್ಲಿ ತನ್ನ ವಿರುದ್ಧ ಸಾಕ್ಷಿ ನುಡಿದಿದ್ದ ಸತ್ಯಪ್ಪನ ಬಳಿಗೆ ಹೋಗುವುದಾದರೂ ಎಂತ್? “ಲೇ ತಿಪಟೂರುಕಡೆಯ ಕೊಳೆತ ತೆಂಗಿನಕಾಯಿಯೇ … ನನ್ ವಿರುದ್ಧ ಸಾಕ್ಷಿ ಹೇಳುವಷ್ಟು ಧೈರ್ಯ ಬಂತು ನಿನಗೆ… ತಿಂಗಳೊಪ್ಪತ್ತಿನಲ್ಲಿನಿನ್ನ ಊರಿನಿಂದ ಓಡಿಸದಿದ್ದರೆ ನಾನು ಶರಣನ್ನ ಮಗ್ನೇ ಅಲ್ಲ” ಎಂದು ಆತ ಶಪಥ ಮಾಡಿದ್ದುದು ನನ್ನ ನೆನಪಿನಲ್ಲಿತ್ತು. ಜಮೀನ್ದಾರಿಕೆ ನಶಿಸಿಹೋಗಿ ಅದರ ಗತ್ತು ಮಾತ್ರ ಉಳಿದುಕೊಂಡಿರುವ ಅಪ್ಪನಿಗೆ ಆ ತಾಕತ್ತು ಇಲ್ಲವೆಂದು ನನಗೆ ಆಗಿನಿಂದಲೇ ಗೊತ್ತು! ನಾನು ಅಂದುಕೊಂಡಿದ್ದಂತೆ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. “ಅವನ ಕರುಮಕ್ಕೆ ಅವನೋಗ್ತಾನೆ ಬುಡು” ಅಂತ ಅಜ್ಜಿಯೇ ಸಮಾಧಾನ ಹೇಳಿತ್ತು. ಈ ಕಾರಣದಿಂದ ಅಪ್ಪ ಒಲ್ಲದ ಮನಸ್ಸಿನಿಂದ ಅನುಕೂಲ ಸಿಂಧು ಸತ್ಯಪ್ಪನ ಬಳಿಗೆ ತಾನಾಗಿಯೇ ಹೋಗುವುದು ಸಾಧ್ಯವಿರಲಿಲ್ಲ. ಅವಧೂತ ಗುಸಾಂತಪ್ಪ (ಗುಪ್ತರೋಗಗಳ ತಂಗುದಾಣವೆಂದು ಹೆಸರಾದ)ನೇ ಗಾಂಜಾ ಕೊಳ್ಳುವ ನೆಪದಲಿ ಮೇಲುಪ್ಪರಿಗೆ ಮನೆ ತಲುಪಿದ. ಎರಡು ಚೀಟಿ ಕೊಂಡು ಸೊಂಟದ ಮೂಲೆಯಲ್ಲಿ ಭದ್ರಪಡಿಸಿಕೊಂಡ. ಭವಬಂಧನದ ಬಗ್ಗೆ ರಾಜಕಾರಣದ ಬಗ್ಗೆ ಮಾತಾಡುತ್ತಡುತ್ತ ಶಾಸ್ತ್ರಿಗಳ ಮನೆ ತಗಾದೆ ತಲುಪಿದ. ನತದೃಷ್ಟೆ ವಿಧವೆಯರ ಬಗೆಗೂ ಮಾತೆದ್ದಿದ. ಮುತ್ತು ಪೋಣಿಸಿದಂತೆ ಖರೀದಿದಾರ ಹಾಲಪ್ಪನ ಬಗೆಗೂ ಸಹ ಏನು ಮಾಡಲೂ ಹಿಂಜರಿಯದ ಹಾಲಪ್ಪನೆಂಬ ಪ್ರವಾಹ ವಿರುದ್ಧ ಈಜುವುದು ದಡ್ಡನಲ್ಲದ ಸತ್ಯಪ್ಪ ಅಪ್ಪನ ಪರೋಪಕಾರೀ ಬುದ್ಧಿಯನ್ನು ಹಾಡಿ ಹೊಗಳಿದ. ಅಂತಹ ಒಬ್ಬ ಪರಾಕ್ರಮಿ ತನಗೆ ಶರಣಾಗಬೇಕೆಂದೇ ಕೊಲ್ಲೂರುಸ್ವಾಮಿಗಳಿಂದ ಮಂತ್ರಿಸಿ ತಂದುಕಟ್ಟಿದ್ದ, ಗಣೇಶನನ್ನು ಹೋಲುವ ಎಕ್ಕೆ ಗಿಡದ ಬೊಡ್ಡೆ ಇದ್ದ ತೊಲೆ ಕಡೆ ಭಕ್ತಿಪೂರ್ವಕವಾಗಿ ನೋಡಿ ಸಮಾಧಾನದ ಉಸಿರು ಬಿಟ್ಟು ಅದಕ್ಕೇನು ತಾತ … ಇದ್ಕೇನು ತಾತ ಅಂತ ನಯಸ್ಸಾಗಿ ಮಾತಾಡಿದ. ಅಜಾತಶತ್ರು ಹಾಲಪ್ಪನ ಮನೆಗೆ ಖುದ್ದು ತಾನೇ ಹೋಗುವುದಾಗಿ ವಚನ ನೀಡಿದ. “ತಪ್ಪಿಸಿಕೊಂಡೀಯಾ” ಅಂದಿದ್ದಕ್ಕೆ “ತಿಪಟೂರು ಕಡ್ಯೋರು ಎಂದು ಕೊಟ್ಟ ಮಾತಿಗೆ ತಪ್ಪೋದಿಲ್ಲ ತಾತಾ” ಎಮ್ದು ಸಮರ್ಥಿಸಿಕೊಂಡ.
ಬೋದಿ ವೃಕ್ಷದಂಥ ಗುರುಸಾಂತಪ್ಪ ನೀಡಿದ ಮಾಹಿತಿ ಆಧಾರದ ಮೇಲೆ ಮುಖ್ಯವಾಗಿ ಹೃದಯ ಬಡಿತ ಹೆಚ್ಚಿಸಿಕೊಂಡ ಈಕೈಕ ವ್ಯಕ್ತಿ ಎಂದರೆ ನಾನೆ. ಪುಸ್ತಕಗಳನ್ನು ಓದುತ್ತ ಲೇಖಕನಾದವನಲ್ಲ ನಾನು. ಮನುಷ್ಯನ ಮೇಲೆ ನಿಗಾ ಇಡುವುದೆಂದರೆ ಮೃಷ್ಟನ್ನ ಭೋಜನ ಮಾಡಿದಂಥ ಅನುಭವ ನೆನಪಾಗುವುದು. ಅಪ್ರತಿಮ ಸಾಹಿತಿಗಳೆಂದರೆ, ಕ್ರಾಂತಿಕಾರಿಗಳೆಂದರೆ ಮನುಷ್ಯರೆ. ಒಬ್ಬ ಓದಿದಂತೆಯೇ ಲೆಕ್ಕ. ಆದರೆ ನನಗೆ ಭಾರತೀಯ ಮನುಷ್ಯನ ಜಾಯಮಾನ. ನನಗಾಗಲೀ; ನನ್ನ
————————

೧೯೯
ಬರಹವಾಗಳಿ ಇದಕ್ಕೆ ಹೊರತಲ್ಲ. ಭಾರತೀಯ ಮನುಷ್ಯನು ಕೆಟ್ಟವನು, ಒಳ್ಳೆಯವನು ಅಂತ ನಾನು ವಿಭಜಿಸಲು ಹೋಗುವುದಿಲ್ಲ. ಇಡೀ ದೇಹವೆಂಭೋ ದೇಹಕ್ಕೆ ಕುಷ್ಟರೋಗ ಹತ್ತಿರುವಾಗ ಒಂಚೂರು ಬೆರಳು ಆರೋಗ್ಯಕರವಾಗಿರಬೇಕೆಂದು ಊಹಿಸುವುದು ಎಷ್ಟು ಅಸಂಜಸ? ಸುಲಭವಾಗಿ ಬದುಕಲಿಕ್ಕೆ ಭಾರತದ ಮನುಷ್ಯ ಒಳದಾರಿ ಕಂಡುಕೊಳ್ಳುವುದರಲ್ಲಿ ಚಾಣಾಕ್ಷ. ಇನ್ನೊಬ್ಬರನ್ನು ಬಲಿ ಕೊಟ್ಟಾದರೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳದೆ ಇರಲಾರ. ಇಂಥವರ ಪೈಕಿ ಮೇಲುಪ್ಪರಿಗೆ ಮನೆಯ ಸತ್ಯಪ್ಪನೂ ಒಬ್ಬ. ಈತನ ಅವಗುಣಗಳನ್ನು ಲೇಖಕನಾಗಿ ನಾನು ತುಂಬ ಇಷ್ಟಪಡುವೆನು. ನಾನೀತನನ್ನು ಮೈ ಎಲ್ಲ ಕಣ್ಣಾಗಿ ಗಮನಿಸುತ್ತ ಬಂದಿರುವೆನು. ಈತನ ಬಗೆಗಿನ ಉಪಕಥೆಗಳನ್ನು ಕೇಳುತ್ತ ಬಂದಿರುವೆನು. ಪ್ರತಿಯೊಂದು ಕಥೆಗೂ ರೋಮಾಂಚನದ ಕಾಣಿಕೆ ನೀಡಿರುವೆನು. ಸದ್ವಿನಿಯದಿಂದಲೇ ಮಾಡಲ್ಪಟ್ಟಂಥ ಸತ್ಯಪ್ಪನ ಬಗ್ಗೆ ಆಲೋಚಿಸುವಾಗ ನನಗೆ ಪಂಚತಂತ್ರದ ಒಂದು ಮಾತು ನೆನಪಿಗೆ ಬರುತ್ತದೆ. ಅದೂ ಮಿತ್ರ ಭೇದಕ್ಕೆ ಸಂಬಂಧಿಸಿದ್ದು.ಅವನು ಹೇಳಿದ್ದಾನೆ ಮುಖಂ ಪದ್ಮದಲಾಕಾರಂ ಅಂದರೆ ಮುಖವು ಪದ್ಮದಳದಂತೆ ಸೊಗಸಾಗಿರುತ್ತದೆ. ವಾಣಿ ಚಂದನ ಶೀತಲಾ ಅಂದರೆ ಮಾತು ಚಂದನದಂತೆ ತಂಪು ನೀಡುತ್ತದೆ. ಹೃದಯಂ ಕರ್ತರೀತುಲ್ಯಂ ಅಂದರೆ ಅವನ ಹೃದಯವು ಕತ್ತರಿಯಂತೆ ಇರುತ್ತದೆ. ಪಂಚತಂತ್ರದ ಕರ್ತೃ ಸತ್ಯಪ್ಪನಂಥವನನ್ನು ನೋಡೇ ಈ ಶ್ಲೋಕ ರಚಿಸಿದ್ದಾನೆಂದು ಹೇಳಬಹುದು. ಸತ್ಯಪ್ಪ ದುಷ್ಟ ಅಂಥ ಗೊತ್ತಿದ್ದರೂ ಅವನ ಸ್ನೇಹವನ್ನು ದೂರ ಮಾಡುವುದು ಎಂಥವರಿಗೂ ಸಾದ್ಯವಿಲ್ಲ. ಅವನ ಬಗ್ಗೆ ಸಾವಿರ ಕೆಟ್ಟ ಮಾತನ್ನಾಡುವವರೆಲ್ಲ ಅವನ ಬಳಿ ಬಾಲಕ್ಕೆ ಬೆಣ್ಣೆ ಹಚ್ಚಿಕೊಂಡು ಕುಂಯ್ ಕುಂಯ್ ರಾಗಾಲಾಪನೆ ಮಾಡುತ್ತ ಬೀಸುತ್ತಲೇ ಇರುತ್ತಾರೆ. ಆದರೆ ನಮ್ಮ ತೀರ್ಥರೂಪ ಮಾತ್ರ ಇದಕ್ಕೆ ಅಪವಾದ. ಅಂದ ಮಾತ್ರಕ್ಕೆ ನಮ್ಮ ತೀರ್ಥರೂಪ ಮಹಾ ಸಜ್ಜನನೆಂದರ್ಥವಲ್ಲ. ಆತ ಹೌದೆಂದರೆ ಹೌದು ಅಲ್ಲ ಅಂದರೆ ಅಲ್ಲ. ಮಾತು ಏಕ್ಮಾರ್ ದೋ ತುಕಡಾ. ನನ್ನ ತಾತ ಮುತ್ತಾತ ಜಮೀನ್ದಾರರಾಗಿದ್ದರು ಅನ್ನೋ ಕಾರಣಕ್ಕೆ ಅದರ ಗತ್ತನ್ನು ಮಾತ್ರ ಉಳಿಸಿಕೊಂಡಿದ್ದ ನನ್ನಪ್ಪ ಅದನ್ನು ತನ್ನ ಪ್ರತಿ ನಡುವಳಿಕೆಯಲ್ಲೂ ಪ್ರಕಟಿಸುತ್ತಿದ್ದ. ಎಲ್ಲರೂ ತನ್ನ ಅಡಿಯಾಳಗಿರಬೇಕೆಂದುಕೊಳ್ಳುತ್ತಿದ್ದ. ಏಷ್ಟೊ ಸಂದರ್ಭದಲ್ಲಿ ಹಾಗಾಗದಿದ್ದಾಗ ಒಳಗೊಳಗೇ ಕೆಟ್ಟದಾಗಿ ನರಳುತ್ತಿದ್ದ. ಹೆಂಡಿರು ಮಕ್ಕಳ ಮೆಲೆ ಕೋಪ ಹರಿಸುತ್ತಿದ್ದ. ಸದೆಯುತ್ತಿದ್ದ. ಹೀಗಾಗಿ ಅವನ ದೇಹದ ಸಣ್ಣ ಕರುಳಿನಲ್ಲಿ ಹೈಡ್ರೋಕ್ಲೋರಿಕ್ ಆ‍ಯ್ಸಿಡ್ ಅಗತ್ಯಕ್ಕಿಂತ ಹೆಚ್ಚಾಗಿ ಸ್ರವಿಸಿ ಅಲ್ಲೊಂದು ಇಲ್ಲೊಂದು ಹುಣ್ಣು ಮಾಡಿತ್ತು. ಅದು ಆತನ ಕೋಪಕ್ಕೆ ಕಳಸಪ್ರಾಯವಾಗಿತ್ತು. ‘ಲೇ ಬಣಜಿಗ ನೀನೆ ನನ್ನ ಮನೆ ಬಾಗ್ಲಿಗೆ ಬರೋಹಂಗ ಮಾಡ್ತೀನಿ’ ಅಂತ ಹಿಂದೆ ಒಮ್ಮೆ ಶಪಥ ಮಾಡಿದ್ದ. ಇಷ್ಟು ಟೈಮಿಗೆ ಸರ್ಯಾಗಿ ಸತ್ಯಪ್ಪ ಬರುವನೆಂದು ಗುರುಸಾಂತಪ್ಪ ವಿನಯಪೂರ್ವಕವಾಗಿ ಹೇಳಿದಾಗ ಸಹಜವಾಗಿ ಅಪ್ಪ ಉಬ್ಬಿ ಹೋದ. ಎದುರಾಳಿಯನು ಮಣಿಸುವದ್ರಲ್ಲಿ ಆತ ತುಂಬ ನಿಷ್ಣಾತನಾಗಿದ್ದ. ದಿಗ್ಭ್ರಮೆ ಎಂಬ ಬಲೆಯಲ್ಲಿ ಕೆಡವಿ ಮೂಕ ಪಶು ಚೇತರಿಕೊಳ್ಳದಂತೆ ಮಾಡಿ ಬಿಡಲು ಆತವೇನು ಮಾರಕಾಸ್ತ್ರಗಳನ್ನು ಉಪಯೋಗಿಸುತ್ತಿರಲಿಲ್ಲ. ಸಂಬೋಧನೆಗೆ ಅಗತ್ಯವಾದ ಧ್ವನಿಗೆ ಸ್ವಲ್ಪ ಗತ್ತು ಸೇರಿಸುತ್ತಿದ್ದ. ಗರಿಗರಿ ರೇಶಿಮೆ ಅಂಗಿ ಪರಮಸುಖ್ ಪಂಚೆಯನ್ನು ತೊಡುತ್ತಿದ್ದ. ನುಣ್ಣಗೆ ಬೋಳಿಸಿದ ಮುಖಕ್ಕೆ ಆಫ್‍ಘಾನ್ ಸ್ನೋ ಪೌಡರ್ ಹಚ್ಚುತ್ತಿದ್ದ. ಗಂಧೆಣ್ಣೆ ಹಚ್ಚಿ ಡಬ್ಬಲ್ ಕ್ರಾಪ್ ಬಾಚುತ್ತಿದ್ದ. ಹತ್ತು ಬೆರಳುಗಳ ಪೈಕಿ ನಾಲ್ಕು ಬೆರಳುಗಳಿಗೆ ಉಂಗುರ ತೊಡುತ್ತಿದ್ದ. ಅಲ್ಲದೆ ಘಮಘಮ ಎಣ್ಣೆಯಲ್ಲಿ ಅದ್ದಿ ಒಂಚೂರು
——————-

೨೦೦
ಅರಳೆಯನ್ನು ಬಲಗಿವಿಯ ಮೂಲೆಯಲ್ಲಿ ಅಡಗಿಸಿಟ್ಟು ಉನ್ನತಾಸನದ ಮೇಲೆ ಹನಿಡ್ಯೂ ಸಿಗರೇಟು ಹಚ್ಚಿ ಭಲೆ ಸ್ಟೈಲಿನಿಂದ ಕೂಡುತ್ತಿದ್ದ. ಶ್ರೀಕೃಷ್ಣ ಪಾಂಡವೀಯಂ ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ಎನ್‍ಟಿ‍ಆ‍ಗೆ ನಮ್ಮಪ್ಪನನ್ನು ತೀರ ಸಹಜವಾಗಿಯೇ ನನ್ನಂಥವರು ಹೋಲಿಸುತ್ತಿದ್ದುದುಂಟು. ಆ ದಿನ ಅಪ್ಪ ಅದೇರೀತಿ ಕೂತುಕೊಂಡ ಕಾಲು ಗಂಟೆಯನಂತರ ಬಿಜಯಂಗೈದ ಮೇಲುಪ್ಪರಿಗೆ ಮನೆ ಸತ್ಯಪ್ಪ ಇದಕೆ ತದ್ವಿರುದ್ಧವಾಗಿದ್ದ. ನಿರ್ಗತಿಕನಂತಿದ್ದ. ವಿಷೇಶ ಗೌರವ ಸೂಚಕವಾಗಿ ಮಾತಾಡುತ್ತ ಬಂದ ಅವನನು ಅಪ್ಪ ನೀಚ ಸ್ಠಾನದಲ್ಲಿ ಕುಳ್ಳರಿಸಿದ. ನನ್ನ ಆಶೀರ್ವಾದದಿಂದಲೇ ನಿನಗೆ ಒಂದು ತುತ್ತು ಕೂಳು ಸಿಗುತ್ತಲಿರುವುದು ಎಂಬ ಧಿಮಾಕಿನಿಂದಲೇ ಅಲ್ಲಡಿಸುತ್ತಿದ್ದ. ತನಗೆ ಶರಣಾದವರಿಗೆ ತುತ್ತು ಪ್ರಸಾದ ಕರುಣಿಸುವುದರಲ್ಲಿ ಅಪ್ಪನ ಒಂದು ಕೈ ಮುಂದು. ಮನೆಯಲ್ಲಿ ಕೂಳು ದುರ್ಬಲವಾಗಿದ್ದರೂ ಪ್ರಸಾದ ಮಾತ್ರ ಅಲಂಕೃತವಾಗಿರುತ್ತಿತ್ತು. ಅದೂ ಅಲ್ಲದೆ ಅಪರೂಪಕ್ಕೆ ಸತ್ಯಪ್ಪ ಬಂದಿದ್ದಾನಂತ ಅವ್ವ ಘಮಘಮ ಪರಿಮಳ ಕಾರುವಂಥ ಉಪ್ಪಿಟ್ಟು ಮಾಡಿದ್ದಳು. ತಿನ್ನೊದು ತಿಂದಾಮೇಲೆ, ಕುಡಿಯೋದು ಕುಡಿದಾದ ಮೇಲೆ ಮಾ‌ಅತು ಶಾಸ್ತ್ರಿಗಳ ಮನೆ ವಿಷಯಕ್ಕೆ ಬಂತು. ಎಂಥಾ ಮನೆ? ಎನ್ಕಥೆ? ಅಂಥ ಹೊಗಳಿದರು. ಹಾಗೆಯೇ‌ಆ ಮನೆಯ ಪೂರ್ವೇತಿಹಾಸ ಕೆದರಿದರು. ನಮ್ಮಪ್ಪನಾಗಲೀ, ಸತ್ಯಪ್ಪನಾಗಲೀ ಸ್ಥಳಿಯರಾಗಿರಲಿಲ್ಲ. ನೂರು ಮೈಲಿ ದು‌ಉರದೂರಗಳಿಂದ ತಲಾ ಒಂದೊಂದು ತುಗುಡು ಮಾಡಿ ಅದರಿಂದ ಬಚಾವಾಗಲು ಸದರೀ ಉರಿಗೆ ಬಂದು ಯಾರದೋ ಆಸ್ತಿ ಮೇಲೆ ವಿಜಯ ಪತಾಕೆ ಹಾರಿಸಿದಂಥವರು. ತುಡುಗಿನ ವಿಷಯದಲ್ಲಿ ನಮ್ಮಪ್ಪ ಒಂದು ಹೆಜ್ಜೆ ಮುಂದು. ಸರ್ಕಲ್ ಇನ್ಸೆಕ್ಟರ್ ಮಗಳನ್ನ ಲವ್ ಮಾಡಿ ಓಡಿ ಬಂದಿರೋ ನಮ್ಮಪ್ಪನ ಬಗ್ಗೆ ಬರೆದರೆ ತ್ರಿಶಂಕು ಸ್ಥಿತೀಲಿರೋ ಶಾಮನ ಆತ್ಮ ವಿಲಿವಿಲಿ ಒದ್ದಾಡುವುದು ಗ್ಯಾರಂಟಿ. ‘ನಿಮ್ಮಪ್ಪನ ಘನ ಕಾರ್ಯಗಳ ಬಗ್ಗೆ ನಾನೊಂದು ಕಾದಂಬರಿ ಬರೀತೀನಿ ನೋಡ್ತಿರು’ ಎಂದು ಆತ ಅಂತಿದ್ದುದು ನೆನಪಾಗುತ್ತದೆ. ಬೇರೆಯವರ ಬಗ್ಗೆ ಅಷ್ಟು ಆಸಕ್ತಿ ಇರದಿದ್ದ ಅವನಿಗೆ ಮೇಲುಪ್ಪರಿಗೆ ಮನೆ ಸತ್ಯಪ್ಪನ ಬಗ್ಗೆ ಅಷ್ಟು ಗೊತ್ತಿಲ್ಲ. ನಾನು ಶೋಧಿಸಿರುವ ಪ್ರಕಾರ ಆತ ತಿಪಟೂರಿನಲ್ಲಿ ತೆಂಗಿನಕಾಯಿ ಸಗಟು ವ್ಯಾಪಾರಿಯಾಗಿದ್ದ. ಆತನ ಇಬ್ಬರುಹೇಂಅತಿಯರೂ ಅನುಮಾನಸ್ಪದವಾಗಿ ಸತ್ತಿದ್ದರು. ಭೈರಪ್ಪನವರ ಸಾಕ್ಷಿ ಕಾದಂಬರಿಯ ನಾಯಕನಂತಿದ್ದ ಆತ ಸದರೀ ಊರಿಂದ ಮೇಲುಪ್ಪರಿಗೆ ಮನೆಯ ಶಾಂತಪ್ಪ ತೆಂಗಿನಕಾಯಿ ಖರೀದಿಗೆ ತಿಪಟೂರಿಗೆ ಹೋದಾಗಲೆಲ್ಲ ಸತ್ಯಪ್ಪನ ಮನೇಲಿ ಉಳಕೊಳ್ತಿದ್ದ. ನ್ಯಾಸ್ತ ಬೆಳೆಸಿದ. ಗ‌ಇ ನ್ಯಾಸ್ತ ಅದು. ಸದರೀ ಊರಿಗೂ ಬರ್ತಿದ್ದ.. ಹೋಗ್ತಿದ್ದ. ಒಂದು ದಿನ ಶಾಂತಪ್ಪ ಅರಗಿಣಿಯಂಥ ಹೆಂಡತಿಯನ್ನೂ; ಲಕ್ಷ ಸುಮಾರು‌ಆಸ್ತಿಯನ್ನು ಬಿ‌ಉಹೇಳದೇ ಕೇಳದೆ ಪರಲೋಕಕ್ಕೆ ಹೊರಟುಹೋದ. ಮಣ್ಣಿಗೆ ಅಂತ ಬಂದ ತಿಪಟೂರಿನ ಸತ್ಯಪ್ಪ ಮೇಲುಪ್ಪರಿಗೆ ಮನೆ ಸತ್ಯಪ್ಪನಾದ. ಆ ಕಡೆಯೂ ತಲೆ ಅಲ್ಲಾಡಿಸುವುದೂ ಈ ಕಡೆಯೂ ತಲೆ ಅಲ್ಲಾಡಿಸುವುದು, ಕಸುಬು ಮಾಡಿಕೊಂಡ. ಅಂದರಿಕಿ ಮಂಚಿವಾಡು ಅನ್ನಿಸಿಕೊಂಡ. ಇಷ್ಟು ಈತನ ಸಂಕ್ಷಿಪ್ತ ಚರಿತ್ರೆಯು.
ಅಪ್ಪನೂ ಸತ್ಯಪ್ಪನೂ ಹೇಳೋದನ್ನೆಲ್ಲ ಹೇಳಿದರು, ಕೇಳೊದನ್ನೆಲ್ಲ ಕೇಳಿದರು. ಹ್ಳುತ್ತ ಕೇಳುತ್ತ ಅದ್ಭುತ ಮಿತ್ರರಾಗಿ ಮಾರ್ಪಾಡು ಹೊಂದಿಬಿಟ್ಟಿದ್ದರು.
“ಹಾಲಪ್ಪಣ್ಣಾ … ಈಗ ನನ್ನ ಮನಸ್ಸಿಗೆ ಹಾಲು ಅನ್ನ ಊಟ ಮಾಡ್ದೊಷ್ಟು ಸಂತೋಷ ಆಯ್ತು
——————

Add Comment

Required fields are marked *. Your email address will not be published.